ರಾಮನಗರ: ಮನೆ ಮಾಲೀಕನೊಬ್ಬ ಮಹಿಳೆ ಸ್ನಾನ ಮಾಡುವಾಗ ವೀಡಿಯೋ ಮಾಡಿದ ಪ್ರಸಂಗವೊಂದು ರಾಮನಗರದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ರಾಮನಗರ (Ramanagar) ಜಿಲ್ಲೆಯ ಕನಕಪುರ ನಗರದಲ್ಲಿ ಸಂತ್ರಸ್ತ ಮಹಿಳೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಇದೀಗ ಮಹಿಳೆ ಸ್ನಾನ ಮಾಡತ್ತಿರುವಾಗ ಕಾಮುಕ ಮಾಲೀಕ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾನೆ. ಅಲ್ಲದೆ ವೀಡಿಯೋವನ್ನು ವಾಟ್ಸಪ್ ಗ್ರೂಪ್‍ಗಳಲ್ಲಿ ಶೇರ್ ಮಾಡಿದ್ದಾನೆ. ಇದನ್ನೂ ಓದಿ: ಯಾದಗಿರಿ ನಗರಸಭೆಯಿಂದ ಆಪರೇಷನ್ ಪುಣ್ಯಕೋಟಿ- ನಿಟ್ಟುಸಿರು ಬಿಟ್ಟ ಸವಾರರು
ಇತ್ತ ಸಾಮಜಿಕ ಜಾಲತಾಣದಲ್ಲಿ ಶೇರ್ ಆದ ವಿಡಿಯೋ ನೋಡಿ ಮಹಿಳೆ ಬೆಚ್ಚಿಬಿದ್ದಿದ್ದಾರೆ. ಅಲ್ಲದೆ ಕಾಮುಕ ಧನರಾಜ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಕನಕಪುರ ಪೊಲೀಸರು, ಈ ಸಂಬಂಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು: ಮನೆ ಮಾಲೀಕ ಲೋನ್ ಮಾಡಿ ಬಾಡಿಗೆದಾರ ಲಾಕ್ ಆದ ಪ್ರಸಂಗವೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಕೋ ಆಪರೇಟಿವ್ ಬ್ಯಾಂಕ್ (Co-Operative Bank) ಸಿಬ್ಬಂದಿಯ ಎಡವಟ್ಟಿನಿಂದ ಈ ಘಟನೆ ನಡೆದಿದೆ. ಬಾಡಿಗೆದಾರ ಮನೆಯೊಳಗೆ ಇರುವುದನ್ನು ಗಮನಿಸದೇ ಬ್ಯಾಂಕ್ ಸಿಬ್ಬಂದಿ ಮನೆ ಸೀಜ್ ಮಾಡಿದ್ದಾರೆ. ಬಳಿಕ ಠಾಣೆಗೆ ದೂರು ನೀಡಿ, ಮಗನನ್ನ ಮನೆಯಿಂದ ಪೋಷಕರು ಹೊರ ಕರೆತಂದಿದ್ದಾರೆ.
ಏನಿಸು ಘಟನೆ..?: ಮನೆ ಮಾಲೀಕನು ತುಮಕೂರಿನ ವೀರಶೈವ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ 2 ಕೋಟಿ ಸಾಲ ಪಡೆದಿದ್ದನು. ಹೀಗಾಗಿ ಸಿಬ್ಬಂದಿ ಕೋರ್ಟ್ ನಿಂದ ಅನುಮತಿ ಪಡೆದು ಬ್ಯಾಂಕ್ ಲೋನ್ ರಿಕವರಿಗೆ ಸಂಜೆ ಕೆಂಗೇರಿ ಉಪನಗರದಲ್ಲಿರುವ ಮೂರಂತಸ್ಥಿನ ಮನೆಗೆ ಬಂದಿದ್ದು, ಮನೆಯನ್ನು ಸೀಜ್ ಮಾಡಿದ್ದಾರೆ. ಆದರೆ ಮನೆ ಸೀಜ್ ಮಾಡುವಾಗ ಬಾಡಿಗೆದಾರ ಮನೆಯಲ್ಲಿಯೇ ಮಲಗಿದ್ದರು. ಇದನ್ನ ಗಮನಿಸದೇ ಸಿಬ್ಬಂದಿ ಮನೆ ಸೀಜ್ ಮಾಡಿದ್ದಾರೆ. ಕೇಸ್ ನ್ನು ವಜಾ ಮಾಡಿದ್ದಾರೆ. ಹಾಗಿದ್ರೂ ಸೀಜ್ ಮಾಡಿದ್ದಾರೆ. ಅಲ್ಲದೆ ಮನೆ ಮಾಲೀಕರ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾರೆಂದು ಬಾಡಿಗೆದಾರ ಪರ ವಕೀಲರು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಮಣಿಪುರ ಹಿಂಸಾಚಾರ ತನಿಖೆಗೆ 53 ಸಿಬಿಐ ಅಧಿಕಾರಿಗಳ ನಿಯೋಜನೆ
ಈ ಸಂಬಂಧ ಬಾಡಿಗೆದಾರರ (Rent) ಸಂಬಂಧಿ ಪ್ರಸನ್ನ ಪ್ರತಿಕ್ರಿಯಿಸಿ, ಮೂರು ತಿಂಗಳ ಹಿಂದೆ ನಮ್ಮ ತಂಗಿ ಲೀಸ್ ಹಾಕಿಕೊಂಡಿದ್ರು. 10 ಲಕ್ಷಕ್ಕೆ ಲೀಸ್ ಹಾಕಿಕೊಂಡಿದ್ರು. ಯಾವುದೇ ಮಾಹಿತಿ ನೀಡದೇ ಮನೆ ಸೀಜ್ ಮಾಡಲಾಗಿದೆ. ವೀರಶೈವ ಕೋ ಆಪರೇಟಿವ್ ಬ್ಯಾಂಕ್ ನಿಂದ ಸೀಜ್ ಮಾಡಲಾಗಿದೆ. ಮನೆಯಲ್ಲಿ ಮಗ ಇದ್ದ, ಇದನ್ನ ಗಮನಿಸದೇ ಮನೆ ಸೀಜ್ ಆಗಿದೆ. ಮಗ ಒಳಗಡೆ ಇದ್ದಾನೆ ಅಂತ ಠಾಣೆಗೆ ಮಾಹಿತಿ ನೀಡಿ ಹೊರ ಕಕೊರ್ಂಡು ಬಂದಿದ್ದಾರೆ ಎಂದರು.
ಬಾಡಿಗೆದಾರ ಪರ ವಕೀಲ ಹೇಮಂತ್ ಮಾತನಾಡಿ, ತುಮಕೂರು ವೀರಶೈವ ಕೋ ಆಪರೇಟಿವ್ ಬ್ಯಾಂಕ್ ನಿಂದ ಸೀಜ್ ಮಾಡಲಾಗಿದೆ. ಮನೆಯಲ್ಲಿರೋ ವಸ್ತುಗಳನ್ನ ಹೊರ ಹಾಕಿದ್ರು. ಕೋರ್ಟ್ ಕಮಿಷನರ್ ದೈಹಿಕ ಹಲ್ಲೆ ನಡೆಸಿದ್ದಾರೆ. ನಮ್ಮ ಸಹೋದ್ಯೋಗಿನ ನಿಂದಿಸಿದ್ದಾರೆ, ನನಗೂ ಹೊಡೆದಿದ್ದಾರೆ. 2021 ಕೋರ್ಟ್ ಆರ್ಡರ್ ಇದೆ. ಡಿಸ್ ಮಿಸ್ ಆಗಿರೋ ಕೋರ್ಟ್ ಆರ್ಡರ್ ತಗೊಂಡು ಬಂದಿದ್ದಾರೆ. ಸಂಜೆ 7 ಗಂಟೆಗೆ ಡೋರ್ ಲಾಕ್ ಮಾಡಿದ್ದಾರೆ. ಒಳಗಡೆ ಯಾರಿದ್ದಾರೆ ಅಂತ ನೋಡದೇ ಸೀಜ್ ಮಾಡಿದ್ದಾರೆ ಎಂದು ಆರೋಪಿಸಿದರು.
ಮನೆ ಮಾಲೀಕನಿಗೆ ಎದೆ ನೋವು: ಮನೆ ಸೀಜ್ ಮಾಡಿ, ಮನೆಯಲ್ಲಿದ್ದ ವಸ್ತುಗಳನ್ನ ಬೀದಿ ಹಾಕಿದ್ದಕ್ಕೆ ಮಾಲೀಕ ಮನನೊಂದಿದ್ದು, ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರು ರಸ್ತೆಯಲ್ಲಿ ಒದ್ದಾಡಿದ್ದಾರೆ. ಅಂಬುಲೆನ್ಸ್ ಸಕಾಲಕ್ಕೆ ಬಾರದಿದ್ದರಿಂದ ಕಾರಿನಲ್ಲಿಯೇ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು.
ಮಂಡ್ಯ: ಬೆಂಗಳೂರು-ಮೈಸೂರು (Bengaluru- Mysuru) ದಶಪಥ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಮನೆ ತೆರವುಗೊಳಿಸಲು ಮುಂದಾದ ಅಧಿಕಾರಿಗೆ ಕಲ್ಲು ತೋರಿಸಿ ಎಚ್ಚರಿಕೆ ನೀಡಿರುವ ಪ್ರಸಂಗವೊಂದು ಮಂಡ್ಯದ ಇಂಡುವಾಳು ಗ್ರಾಮದಲ್ಲಿ ನಡೆದಿದೆ.
ನನ್ನ ಮನೆ ಒಂದಿಂಚು ಜಾಸ್ತಿ ಹೊಡೆದರೂ ಕಲ್ಲಲ್ಲಿ ಹೊಡಿತೀನಿ ಎಂದು ಮಾಲೀಕ ಅವಾಜ್ ಹಾಕಿದ್ದಾರೆ. ನಿಗದಿಯಾದ ಕಟ್ಟಡವನ್ನಷ್ಟೇ ಹೊಡೆಯಬೇಕು. ಒಂದಿಂಚು ಜಾಸ್ತಿ ಕೆಡವಿದರೂ ನಾನು ನಿನಗೆ ಹೊಡೆಯುತ್ತೇನೆ ಎಂದು ಮನೆ ಮಾಲೀಕ ರಾಜೇಗೌಡ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಬ್ರೋ, ನಾನು ನಿಮ್ಮ ಲ್ಯಾಪ್‍ಟಾಪ್ ಕದ್ದಿದ್ದೇನೆ- ಇಮೇಲ್ ಮಾಡಿ ಕ್ಷಮೆ ಕೋರಿದ ಕಳ್ಳ
ಹೆದ್ದಾರಿ ಪ್ರಾಧಿಕಾರವು ದಶಪಥ ರಸ್ತೆ ನಿರ್ಮಾಣಕ್ಕಾಗಿ ಹಲವು ಮನೆಗಳನ್ನು ಸ್ವಾಧೀನ ಪಡಿಸಿಕೊಂಡಿದೆ. ಪರಿಹಾರ ತಾರತಮ್ಯ ಆರೋಪ, ಮನೆ ಕೆಡವಲು ಕೆಲ ಮಾಲೀಕರ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಲೆ ಬಾಳುವ ಜಾಗಕ್ಕೆ ಕಡಿಮೆ ಪರಿಹಾರ ನೀಡಿದ್ದಾರೆಂದು ಕೆಲ ಮಾಲೀಕರು ಆರೋಪಿಸಿದ್ದಾರೆ. ಕೆಲದಿನಗಳ ಹಿಂದೆ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಪ್ರತಿಭಟನೆ ಕೂಡ ನಡೆದಿತ್ತು.
ಇಂದು ಬೆಳ್ಳಂಬೆಳ್ಳಗ್ಗೆ ಮನೆ ತೆರವು ಕಾರ್ಯಾಚರಣೆ ನಡೆಯುತ್ತಿತ್ತು. ಅಧಿಕಾರಿಗಳು ಪೊಲೀಸ್ ರಕ್ಷಣೆಯಲ್ಲಿ ಆಗಮಿಸಿ ಮನೆ ತೆರವುಗೊಳಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಮನೆ ಕೆಡವಲು ಬಿಡಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪೊಲೀಸರು ಗ್ರಾಮಸ್ಥರನ್ನು ಬಂಧಿಸಿ ತೆರವು ಕಾರ್ಯಕ್ಕೆ ಅನುವು ಮಾಡಿಕೊಟ್ಟರು.
Live Tv
[brid partner=56869869 player=32851 video=960834 autoplay=true]
– ನಾವು ಸಾಮಾಜಕ್ಕಾಗಿ ಕೆಲಸ ಮಾಡುತ್ತಿದ್ದೇವೆಂದು ಸೋಂಕಿತೆ ಕಣ್ಣೀರು
– ಸೋಂಕಿತರಿಗೆ ಔಷಧಿ ನೀಡಲು ಮನೆಗೆ ಬೀಡದ ಮಾಲೀಕನ ಪತ್ನಿ
ಪಾಟ್ನಾ: ಬ್ಯಾಂಕ್ ಮಹಿಳಾ ಉದ್ಯೋಗಿಗಳಿಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಇದನ್ನು ತಿಳಿದ ಮನೆಯ ಮಾಲೀಕ ಮನೆ ಖಾಲಿ ಮಾಡುವಂತೆ ಕಿರುಕುಳ ನೀಡಿರುವ ಘಟನೆ ಬಿಹಾರದ ಸಿಯೋಹಾರ್ ಜಿಲ್ಲೆಯ ಭೈರ್ವಿ ನಗರದಲ್ಲಿ ನಡೆದಿದೆ.
ಭೈರ್ವಿ ನರದಲ್ಲಿ ಇರುವ ಬ್ಯಾಂಕ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋಂಕಿತೆಯರು ಒಟ್ಟಿಗೆ ಒಂದೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಅವರು ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿಯಲ್ಲಿ ಇಬ್ಬರಿಗೂ ಕೊರೊನಾ ಇರುವುದು ದೃಢಪಟ್ಟಿದೆ. ಆಗ ಮಹಿಳೆಯರು ಹೋಗಿ ಮನೆ ಮಾಲೀಕ ಶೈಲೇಂದ್ರ ವರ್ಮಾಗೆ ಕೊರೊನಾ ಪಾಸಿಟಿವ್ ಬಂದಿರುವ ವಿಚಾರ ತಿಳಿಸಿದ್ದಾರೆ.
ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಿದಾಗ ಸುಮ್ಮನಿದ್ದ ಮಾಲೀಕ ಮತ್ತು ಆತನ ಪತ್ನಿ, ಮರುದಿನ ಮಹಿಳೆಯರಿಗೆ ಖಾಲಿ ಮಾಡುವಂತೆ ಹೇಳಿದ್ದಾರೆ. ಜೊತೆಗೆ ತಕ್ಷಣ ನೀವು ಮನೆ ಖಾಲಿ ಮಾಡಿ ಎಂದು ಕಿರುಕುಳ ನೀಡಿದ್ದಾರೆ. ಈ ವಿಚಾರದ ಬಗ್ಗೆ ನೋವಿನಿಂದ ಮಾತನಾಡಿರುವ ಸೋಂಕಿತ ಮಹಿಳೆಯೊಬ್ಬರು, ನಾವು ಜನ ಸೇವೆ ಮಾಡಲು ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತೇವೆ. ಸಾಮಾಜಕ್ಕಾಗಿ ಕೆಲಸ ಮಾಡುವ ನಮಗೆ ಈ ರೀತಿಯ ಪರಿಸ್ಥಿತಿಯಲ್ಲಿ ಜನರು ನಮ್ಮ ಬೆಂಬಲಕ್ಕೆ ಬರಬೇಕು. ಅದನ್ನು ಬಿಟ್ಟು ಈ ರೀತಿ ಕಿರುಕುಳ ನೀಡಬಾರದು ಎಂದು ಹೇಳಿದ್ದಾರೆ.
ಮಾಲೀಕನ ವಿರುದ್ಧ ದೂರು ನೀಡಿರುವ ಬ್ಯಾಂಕ್ ಮ್ಯಾನೇಜರ್ ಭಾಸ್ಕರ್ ಜಾ ಮಾತನಾಡಿ, ಕೊರೊನಾ ಪಾಸಿಟಿವ್ ಬಂದ ನಮ್ಮ ಇಬ್ಬರು ಉದ್ಯೋಗಿಗಳಿಗೆ ಅವರು ವಾಸವಿದ್ದ ಮನೆಯ ಮಾಲೀಕ ಶೈಲೇಂದ್ರ ವರ್ಮಾ ಮತ್ತು ಆತನ ಪತ್ನಿ ಮಾನಸಿಕ ಹಿಂಸೆ ನೀಡಿದ್ದಾರೆ. ಮನೆ ಖಾಲಿ ಮಾಡುವಂತೆ ಒತ್ತಡ ಹೇರಿದ್ದಾರೆ. ಜೊತೆಗೆ ನಮ್ಮ ಬ್ಯಾಂಕಿನ ಇತರೆ ಉದ್ಯೋಗಿಗಳು ಅವರಿಗೆ ಔಷಧಿ ಕೊಡಲು ಹೋದರೆ ಅದಕ್ಕೂ ಮಾಲೀಕ ಪತ್ನಿ ಅನುಮತಿ ನೀಡಿಲ್ಲ. ನಮ್ಮ ಉದ್ಯೋಗಿಗಳು ಹಾಲು ಮತ್ತು ನೂಡಲ್ಸ್ ತಿಂದುಕೊಂಡು ಜೀವನ ಮಾಡುತ್ತಿದ್ದಾರೆ ಎಂದಿದ್ದಾರೆ.
ಆದರೆ ಮಹಿಳಾ ಉದ್ಯೋಗಿಗಳು ಮತ್ತು ಬ್ಯಾಂಕ್ ಮ್ಯಾನೇಜರ್ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಮನೆಯ ಮಾಲೀಕ, ನಾನು ಅವರಿಗೆ ಕಿರುಕುಳ ನೀಡಿಲ್ಲ. ಬದಲಿಗೆ ನಿಮ್ಮ ಊರಿಗೆ ಹೋಗಿ ಎಂದು ಮನವಿ ಮಾಡಿಕೊಂಡಿದ್ದೇನೆ. ಇಲ್ಲಿನ ಬೇರೆ ಮನೆಯವರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಈ ರೀತಿ ಹೇಳಿದ್ದೇನೆ ಎಂದು ಹೇಳಿದ್ದಾರೆ.
– ರಸ್ತೆಯಲ್ಲೇ ಪ್ರತಿಭಟನೆಗೆ ಕುಳಿತ ದಂಪತಿ
– ಮಗನಿಗೆ ಸೋಂಕು ಬಂದರೆ ನಮ್ಮ ತಪ್ಪು ಏನು?
ಕೋಲ್ಕತ್ತಾ: ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಸೋಂಕಿತನ ತಂದೆ-ತಾಯಿಯನ್ನು ಮನೆ ಮಾಲೀಕನೋರ್ವ ಬಾಡಿಗೆ ಮನೆ ನೀಡದ ಘಟನೆ ಪಶ್ಚಿಮ ಬಂಗಾಳದ ಹೌರ ಜಿಲ್ಲೆಯಲ್ಲಿ ನಡೆದಿದೆ.
ಹೌರದ ಡೆಮ್ಜೂರ್ ಪ್ರದೇಶದಲ್ಲಿ ವಾಸವಿದ್ದ ಕುಟುಂಬದಲ್ಲಿ ಆತನ ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ವೇಳೆ ಆತನನ್ನು ಕರೆದುಕೊಂಡು ಹೋಗಲು ಮನೆಯ ಬಳಿ ಅಂಬುಲೆನ್ಸ್ ಬಂದಿದೆ. ಈ ವೇಳೆ ಈ ದಂಪತಿಯೂ ಕೂಡ ಮಗ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಹೋಗಿದ್ದಾರೆ. ಆತನ ಮಗನನ್ನು ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆಸ್ಪತ್ರೆಯಿಂದ ವಾಪಸ್ ಮನೆಗೆ ಬಂದ ದಂಪತಿಯನ್ನು ಮನೆಯ ಮಾಲೀಕ ತಡೆದಿದ್ದಾನೆ. ಜೊತೆಗೆ ನೀವು ನಮ್ಮ ಮನೆಯಲ್ಲಿ ಇರಬೇಡಿ, ನಿಮ್ಮನ್ನು ಇರಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾನೆ. ಈ ವಿಚಾರದಲ್ಲಿ ದಂಪತಿಯ ಪರ ನಿಲ್ಲಬೇಕಾದ ಸ್ಥಳೀಯರು ಮತ್ತು ನೆರೆಹೊರೆಯವರು ವೈರಸ್ ನಮಗೂ ಹರಡುತ್ತೆ ಎಂಬ ಭಯದಿಂದ ಮಾಲೀಕನ ಮಾತಿಗೆ ಧನಿಗೂಡಿಸಿದ್ದಾರೆ. ಇದರಿಂದ ದಂಪತಿ ಇನ್ನೂ ಭಯಭೀತರಾಗಿದ್ದಾರೆ.
ಇದಾದ ನಂತರ ದಂಪತಿ ಪೊಲೀಸರ ಮೊರೆ ಹೋಗಿದ್ದಾರೆ. ಆಗ ಸ್ಥಳಕ್ಕೆ ಬಂದ ಪೊಲೀಸರು ಅವರಿಗೇ ಕೊರೊನಾ ಲಕ್ಷಣ ಇಲ್ಲದೇ ಇದ್ದರೂ, ಕೊರೊನಾ ಪರೀಕ್ಷೆ ಮಾಡಿಸುವಂತೆ ಸಲಾಪ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ. ಪರೀಕ್ಷೆ ಮಾಡಿಸಿಕೊಂಡು ಬಂದರೂ ಮಾಲೀಕ ಮನೆಯಲ್ಲಿ ಉಳಿಯಲು ಅನುಮತಿ ಕೊಟ್ಟಿಲ್ಲ. ಇದರಿಂದ ನೊಂದು ದಂಪತಿ ಮುಖ್ಯ ರಸ್ತೆಯಲ್ಲಿ ಕುಳಿತು ವಾಹನ ತಡೆದು ಪ್ರತಿಭಟನೆ ಮಾಡಿದ್ದಾರೆ.
ನಮ್ಮ ಮಗನಿಗೆ ಕೊರೊನಾ ಸೋಂಕು ಬಂದರೆ ಅದರಲ್ಲಿ ನಮ್ಮ ತಪ್ಪು ಏನಿದೆ? ನಮ್ಮ ಮಗನಿಗೆ ಸೋಂಕು ತಗುಲಿದರೆ ಅದೂ ನಮ್ಮ ತಪ್ಪಾ? ಮನೆಯ ಮಾಲೀಕ ಒತ್ತಡ ಹಾಕುತ್ತಿದ್ದಾರೆ. ಜೊತೆಗೆ ನೀವು ಇಲ್ಲಯೇ ಇದ್ದರೆ ಸೋಂಕು ಹರಡುತ್ತದೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ನಾವು ನಡು ರಸ್ತೆಯಲ್ಲಿ ಕುಳಿತಿದ್ದೇವೆ. ನಮಗೆ ಬೇರೆ ಕಡೆ ಹೋಗಲು ಎಲ್ಲೂ ಜಾಗವಿಲ್ಲ ಎಂದು ಸೋಂಕಿತ ತಂದೆ ಬಸುಡೆಬ್ ಚಟರ್ಜಿ ನೋವನ್ನು ಹೊರಹಾಕಿದ್ದಾರೆ.
ಇದಾದ ನಂತರ ಸ್ಥಳಕ್ಕೆ ಪೊಲೀಸ್ ಮತ್ತು ಬಿಡಿಒ ಅಧಿಕಾರಿಗಳು ಬಂದು ದಂಪತಿಯನ್ನು ಮನವೊಲಿಸಿ ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ದಂಪತಿಗಳು ಚೆನ್ನಾಗಿದ್ದಾರೆ. ನಾವು ಅವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿದ್ದೇವೆ. ಅವರನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಬಿಡಿಒ ರಾಜಾ ಭೂಮಿಕ್ ತಿಳಿಸಿದ್ದಾರೆ.
ಧಾರವಾಡ: ಕಳ್ಳರ ಗುಂಪೊಂದು ಮನೆಗೆ ನುಗಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆಗೈದು 150 ಗ್ರಾಂ ಚಿನ್ನ, 40 ಸಾವಿರ ರೂ. ನಗದು ದೋಚಿದ ಘಟನೆ ನಗರದಲ್ಲಿ ನಡೆದಿದೆ.
ತೇಜಸ್ವಿನಗರದ 5 ಕ್ರಾಸ್‍ನಲ್ಲಿರುವ ಅನಿಲ್ ಕುಸುಗಲ್ ಎಂಬವರ ಮನೆಗೆ ನುಗ್ಗಿದ 4 ಜನರ ಕಳ್ಳರ ಗುಂಪು ಕೃತ್ಯ ಎಸಗಿ ಪರಾರಿಯಾಗಿದೆ. ಕಳ್ಳರಿಂದ ಹಲ್ಲೆಗೆ ಒಳಗಾದ ಅನಿಲ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆರೋಪಿಗಳು ಮುಂಜಾನೆ 2 ಗಂಟೆಗೆ ಅನಿಲ್ ಅವರ ಮನೆ ಬಾಗಿಲು ಮುರಿದು ಒಳಗೆ ನುಗ್ಗಿದ್ದಾರೆ. ಬಳಿಕ ಕುಟುಂಬಸ್ಥರ ಮೈಮೇಲಿದ್ದ ಚಿನ್ನದ ಮಾಂಗಲ್ಯ ಸರ ಹಾಗೂ ಅಲ್ಮೇರಾದಲ್ಲಿದ್ದ 40 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ. ಆರೋಪಿಗಳು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ಅನಿಲ್ ಕುಸುಗಲ್ ಹೇಳಿದ್ದಾರೆ.
ಕಳ್ಳರು ರಾಡ್‍ನಿಂದ ತಲೆಗೆ ಹೊಡೆದ ಪರಿಣಾಮ ಅನಿಲ್ ಕುಮಾರ್ ಅವರ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂಬಂಧ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಶಿವಮೊಗ್ಗ: ಸೈಕೋ ವ್ಯಕ್ತಿಯೊಬ್ಬ ಹಳ್ಳಿಯಲ್ಲಿ ಮಹಿಳೆಯರ ಒಳಉಡುಪು ಕದಿಯುತ್ತಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಮಾರಶೆಟ್ಟಿಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಸತೀಶ್ ಎಂಬ ಶಿಕ್ಷಕರ ಮನೆಯಲ್ಲಿ ಬಟ್ಟೆಯನ್ನು ತೊಳೆದು ಒಣಗಿಸುವುದಕ್ಕೆ ಹಾಕಿದ್ದರು. ಆದರೆ ಅಲ್ಲಿಗೆ ಬಂದಂತಹ ಸೈಕೋ ಮಹಿಳೆಯರ ಒಳಉಡುಪನ್ನು ಮಾತ್ರ ಕದಿಯುತ್ತಿದ್ದನು. ಈ ರೀತಿ ಪ್ರತಿದಿನ ಆ ವ್ಯಕ್ತಿ ಮಹಿಳೆಯರ ಒಳುಉಡುಪನ್ನು ಕದಿಯುತ್ತಿದ್ದನು. ಹೀಗಾಗಿ ಮನೆ ಮಾಲೀಕ ಸತೀಶ್ ತಮ್ಮ ಮನೆಗೆ ಸಿಸಿಟಿವಿ ಕ್ಯಾಮೆರಾ ಹಾಕಿಸಿದ್ದರು.
ಸೈಕೋ ವ್ಯಕ್ತಿ ಉಡುಪು ಕದಿಯುತ್ತಿದ್ದ ದೃಶ್ಯ ಇದೀಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಒಳಉಡುಪು ಕದಿಯುತ್ತಿದ್ದ ಸೈಕೋ ಅದೇ ಗ್ರಾಮದ ಮನುಕುಮಾರ್ ಎಂದು ಪತ್ತೆ ಹಚ್ಚಲಾಗಿದೆ.
ಈ ಬಗ್ಗೆ ಗ್ರಾಮಸ್ಥರು ಮನುಕುಮಾರ್ ನನ್ನು ವಿಚಾರಿಸಿದರೆ ನಾನು ಯಾವುದೇ ಒಳ ಉಡುಪು ಕದ್ದಿಲ್ಲ ಎಂದು ವಾದಿಸಿದ್ದಾನೆ. ನಂತರ ಆತನಿಗೆ ಸಿಸಿಟಿವಿ ದೃಶ್ಯಗಳನ್ನು ತೋರಿಸಿದಾಗ ಬೇರೆ ದಾರಿ ಕಾಣದೇ ಅದು ನಾನೇ ಎಂದು ಒಪ್ಪಿಕೊಂಡಿದ್ದಾನೆ.
ಈ ಘಟನೆ ಬಳಿಕ ಸೈಕೋ ಮನುಕುಮಾರ್ ಕುಟುಂಬಸ್ಥರು ಮನೆ ಮಾಲೀಕ ಸತೀಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ತೀವ್ರ ಗಾಯಗೊಂಡಿರುವ ಸತೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೆನ್ನೈ: ಮನೆ ಮಾಲೀಕನೊಬ್ಬನು ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ವೃದ್ಧೆಯೊಬ್ಬರಿಗೆ ಅಜ್ಜಿ ಎಂದು ಕರೆದಿದ್ದಕ್ಕೆ ಅವರು ಬೈದಿದ್ದರು. ತನ್ನ ಮನೆಯಲ್ಲಿದ್ದುಕೊಂಡು ತನಗೇ ಬೈದರಲ್ಲ ಎಂಬ ಸಿಟ್ಟಿಗೆ ಕತ್ತು ಹಿಸುಕಿ ವೃದ್ಧೆಯನ್ನು ಮನೆ ಮಾಲೀಕ ಕೊಲೆ ಮಾಡಿದ್ದಾನೆ.
ಸೆಪ್ಟೆಂಬರ್ 14ರಂದು ಈ ಘಟನೆ ನಡೆದಿದ್ದು, ಆರೋಪಿ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ. ಚೆನ್ನೈನ ಕೊಡುಂಗೈಯ್ಯೂರ್ ನ ನಿವಾಸಿಯಾಗಿದ್ದ ವಿಮಲಾ ಗೋವಿಂದರಾಜ್(68) ಮೃತ ದುರ್ದೈವಿ. ಮನೆ ಮಾಲೀಕ ಸುಧಾಕರ್(35) ಕೊಲೆ ಮಾಡಿದ ಆರೋಪಿ. ಮಹಾನಗರ ಸಾರಿಗೆ ನಿಗಮದಲ್ಲಿ(ಎಂಟಿಸಿ) ತಪಾಸಣಾಧಿಕಾರಿಯಾಗಿದ್ದ ವೃದ್ಧೆಯ ಪತಿ ಗೋವಿಂದರಾಜು ಅವರು ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಸುಧಾಕರ್ ಮನೆಯಲ್ಲಿ ಕೆಲ ವರ್ಷದಿಂದ ವೃದ್ಧೆಯೊಬ್ಬರೆ ಬಾಡಿಗೆಗೆ ಇದ್ದರು. ವೃದ್ಧೆಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ಎಲ್ಲರೂ ಮದುವೆಯಾಗಿ ತಮ್ಮ ಕುಟುಂಬದೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ:ಡೇಟಿಂಗ್ ಆ್ಯಪ್ ಮೂಲಕ ಗೆಳೆಯನ ಹುಡುಕಾಟದಲ್ಲಿದ್ದಾರೆ 83ರ ವೃದ್ಧೆ
ಸೆ. 14ರಂದು ವೃದ್ಧೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಬಳಿಕ ಕುಟುಂಬಸ್ಥರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ವೃದ್ಧೆ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅದರಿಂದಲೇ ಏಕಾಏಕಿ ವೃದ್ಧೆ ಸಾವನ್ನಪ್ಪಿರಬಹುದು ಎಂದು ಕುಟುಂಬಸ್ಥರು ಉಹಿಸಿದ್ದರು. ಆದ್ದರಿಂದ ಪೊಲೀಸರು ಪ್ರಕರಣವನ್ನು ಅಷ್ಟೇನು ಗಂಭಿರವಾಗಿ ತೆಗೆದುಕೊಂಡಿರಲಿಲ್ಲ.
ಆದರೆ ಮರುದಿನ ಮರಣೋತ್ತರ ಪರೀಕ್ಷೆ ವರದಿಯಲ್ಲಿ ವೃದ್ಧೆಯನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂಬುದು ಬೆಳಕಿಗೆ ಬಂತು. ಆಗ ಈ ಬಗ್ಗೆ ತನಿಖೆ ನಡೆಸಲು ಪೊಲೀಸರ ವಿಶೇಷ ತಂಡವನ್ನು ನೇಮಿಸಲಾಯಿತು. ಈ ಸಂಬಂಧ ಪೊಲೀಸರು ವೃದ್ಧೆಯ ಕುಟುಂಬಸ್ಥರು, ನೆರೆಹೊರೆಯ ಮನೆಯವರು ಹಾಗೂ ಆರೋಪಿಯನ್ನು ವಿಚಾರಣೆ ನಡೆಸಿದ ಬಳಿಕ ಸತ್ಯಾಂಶ ಹೊರಬಿದ್ದಿದೆ.
ವೃದ್ಧೆ ತನ್ನ ಸೌಂದರ್ಯದ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದರು. ಹೀಗಾಗಿ ಅವರು ತುಸು ಜೋರಾಗಿಯೇ ಶೃಂಗಾರ, ಅಲಂಕಾರವನ್ನು ಮಾಡಿಕೊಳ್ಳುತ್ತಿದ್ದರು. ವೃದ್ಧೆ ಕೊಲೆಯಾಗುವ ಕೆಲ ದಿನಗಳ ಹಿಂದೆ ಶೃಂಗಾರ ಮಾಡಿಕೊಂಡು ಮನೆ ಬಳಿ ಹೋಗುತ್ತಿದ್ದ ವೇಳೆ ಮನೆ ಮಾಲೀಕ ವೃದ್ಧೆಯನ್ನು ಅಜ್ಜಿ ಎಂದು ಕರೆದಿದ್ದನು. ಅದಕ್ಕೆ ಕೋಪಗೊಂಡ ವೃದ್ಧೆ ಆತನಿಗೆ ಬಾಯಿಗೆ ಬಂದ ಹಾಗೆ ಬೈದಿದ್ದರು ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ತಿಳಿಸಿದರು.
ಇದೇ ಮಾಹಿತಿಯನ್ನು ಇಟ್ಟುಕೊಂಡು ಪೊಲೀಸರು ಸುಧಾಕರ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾನೆ. ವೃದ್ಧೆ ಬೈದಿದ್ದನ್ನು ಮನಸ್ಸಲ್ಲಿಟ್ಟುಕೊಂಡು ವಿಷಕಾರುತ್ತಿದ್ದ ಸುಧಾಕರ್ ಸೆ. 14ರಂದು ಕುಡಿದ ಮತ್ತಿನಲ್ಲಿ ಈ ಕೃತ್ಯ ವೆಸೆಗಿದ್ದಾನೆ. ವೃದ್ಧೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ನವದೆಹಲಿ: ಮನೆ ಮುಂದೆ ವೃದ್ಧರೊಬ್ಬರು ಮೂತ್ರ ಮಾಡಿದ್ದಕ್ಕೆ ಮನೆಮಾಲೀಕ ಅವರಿಗೆ ಕಪಾಳಕ್ಕೆ ಹೊಡೆದಿದ್ದು, ವೃದ್ಧನ ಮಕ್ಕಳು ತಂದೆ ಮೇಲೆ ಹಲ್ಲೆ ಮಾಡಿದಕ್ಕೆ ರೊಚ್ಚಿಗೆದ್ದು ಮಾಲೀಕನನ್ನು ಕೊಲೆ ಮಾಡಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ.
ದಕ್ಷಿಣ ದೆಹಲಿಯ ಗೋವಿಂದ ಪುರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಗೋವಿಂದ ಪುರಿ ನಿವಾಸಿ ಲಿಲು ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಈ ಪ್ರದೇಶದಲ್ಲಿ ವಿದ್ಯುತ್ ಕಟ್ ಮಾಡಲಾಗಿತ್ತು. ಹೀಗಾಗಿ ಲಿಲು ಹಾಗೂ ಪತ್ನಿ ಪಿಂಕಿ ತಮ್ಮ ಮನೆ ಮುಂದೆ ಮಾತನಾಡುತ್ತ ಕುಳಿತ್ತಿದ್ದರು. ಈ ವೇಳೆ ಪಕ್ಕದ ಬೀದಿಯಲ್ಲಿ ವಾಸಿಸುತ್ತಿದ್ದ ವೃದ್ಧರೊಬ್ಬರು ಲಿಲು ಮನೆ ಬಳಿ ಮೂತ್ರ ಮಾಡಿದ್ದಾರೆ. ಅದನ್ನು ನೋಡಿ ಲಿಲು ಕೋಪಗೊಂಡು ಅವರ ಕೆನ್ನೆಗೆ ಹೊಡೆದಿದ್ದಾನೆ. ಈ ವಿಷಯ ತಿಳಿದು ವೃದ್ಧನ ಇಬ್ಬರು ಮಕ್ಕಳು ತಂದೆ ಮೇಲೆ ಹಲ್ಲೆ ಮಾಡಿದ್ದಕ್ಕೆ ಸಿಟ್ಟಿನಿಂದ ಲಿಲು ಬಳಿ ಜಗಳ ಮಾಡಲು ಶುರುಮಾಡಿದರು.
ಹೀಗೇ ಮಾತಿನಲ್ಲಿ ಶುರುವಾದ ಜಗಳ ತಾರಕಕ್ಕೆ ಏರಿ ವೃದ್ಧನ ಇಬ್ಬರು ಮಕ್ಕಳು ರಸ್ತೆ ಬದಿಯಿದ್ದ ಸಿಮೆಂಟ್ ಇಟ್ಟಿಗೆಯಿಂದ ಲಿಲುಗೆ ಹೊಡೆದಿದ್ದಾರೆ. ಆತ ಎಚ್ಚರ ತಪ್ಪುವವರೆಗೂ ಕಲ್ಲಿನಿಂದ ಜಜ್ಜಿದ್ದಾರೆ. ಬಳಿಕ ಲಿಲುವನ್ನು ಆಸ್ಪತ್ರೆಗೆ ಸ್ಥಳೀಯರು ಕರೆದೊಯ್ದರು ಏನೂ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಆತ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಿದ ಬಳಿಕ ಲಿಲು ಹಲವು ಸರಗಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬ ವಿಷಯ ಹೊರಬಿದ್ದಿದೆ.
ಸದ್ಯ ಆರೋಪಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿದ್ದು, ಇಬ್ಬರು ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಮನೆ ಮಾಲೀಕನೋರ್ವ ಅಪ್ರಾಪ್ತೆ ಬಾಲಕಿಯನ್ನು ಮನೆಕೆಲಸಕ್ಕೆ ಇಟ್ಟುಕೊಂಡಿದ್ದು ಮಾತ್ರವಲ್ಲದೇ ಆಕೆಗೆ ಮನಬಂದಂತೆ ಥಳಿಸಿದ ಘಟನೆ ಇಂದು ಬೆಳಕಿಗೆ ಬಂದಿದೆ. ನಗರದ ಜೀವನ್ ಭೀಮಾನಗರದ 5 ನೇ ಕ್ರಾಸ್‍ನಲ್ಲಿರೋ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಮಾತ್ರವಲ್ಲದೇ ಮಾಲೀಕ ದಂಪತಿ ತಮಿಳುನಾಡು ಮೂಲದವರೆಂದು ಹೇಳಲಾಗುತ್ತಿದೆ.
ಕಾರಣವೇನು?: ಮನೆಯ ಫ್ರಿಡ್ಜ್‍ನಲ್ಲಿಟ್ಟಿದ್ದ ತಿಂಡಿ-ತಿನಿಸುಗಳನ್ನು ಕದ್ದು ತಿನ್ನುತ್ತಾಳೆಂದು ಆರೋಪಿಸಿ ಪೈಪ್ ತುಂಡಿನಲ್ಲಿ ಮಾಲೀಕ ಆಕೆಗೆ ಚೆನ್ನಾಗಿ ಥಳಿಸಿದ್ದಾನೆ. ಈ ವೇಳೆ ಬಾಲಕಿ ಥಳಿಸದಂತೆ ಪರಿಪರಿಯಾಗಿ ಬೇಡಿಕೊಂಡ್ರೂ ಮಾಲೀಕ ಆಕೆಯ ಮೇಲೆ ಕಿಂಚಿತ್ತೂ ಕರುಣೆ ತೋರದೆ ತನ್ನ ಕಾಲಿನಲ್ಲಿ ಒದ್ದು, ಥಳಿಸಿ ತನ್ನ ವಿಕೃತ ಮನಸ್ಥಿತಿಯನ್ನು ತೋರಿದ್ದಾನೆ. ಈ ದೃಶ್ಯ ಪಬ್ಲಿಕ್ ಟಿವಿಗೆ ಲಭಿಸಿದೆ.
ಘಟನೆ ಬಗ್ಗೆ ಜೆಬಿ ಪೊಲೀಸರನ್ನ ಮಾತನಾಡಿಸಿದಾಗ ಅವರು ಈ ಬಗ್ಗೆ ಮಾಹಿತಿ ಇಲ್ಲ. ಮಾತ್ರವಲ್ಲದೇ ಯಾರು ದೂರು ನೀಡಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ವಿಡಿಯೋ ನೋಡಿದ ಬಳಿಕವಾದ್ರೂ ಪೊಲೀಸರು ಎಚ್ಚೆತ್ತುಕೊಂಡು ಮನೆ ಮಾಲಿಕನನ್ನು ಹುಡುಕಿ ಕ್ರಮ ಕೈಗೊಳ್ಳಬೇಕಾಗಿದೆ.