Tag: ಮನೆ ಕೆಲಸ

  • ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ಮನೆ ಕೆಲಸಕ್ಕೆ ಸೇರಿ ಕಳ್ಳತನ ಮಾಡ್ತಿದ್ದ ಬಾಂಬೆ ಲೇಡಿಸ್ ಗ್ಯಾಂಗ್ ಅರೆಸ್ಟ್

    ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ಮನೆ ಕೆಲಸಕ್ಕೆ ಸೇರಿ ಕಳ್ಳತನ ಮಾಡ್ತಿದ್ದ ಬಾಂಬೆ ಲೇಡಿಸ್ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಫೇಸ್‌ಬುಕ್ ಗ್ರೂಪ್‌ನಲ್ಲಿ ಪೋಸ್ಟ್ ಹಾಕಿ ಮನೆಗೆಲಸಕ್ಕೆ ಸೇರಿಕೊಂಡು ಕಳ್ಳತನ ಮಾಡುತ್ತಿದ್ದ ಬಾಂಬೆ ಲೇಡಿಸ್ ಗ್ಯಾಂಗ್ ಅನ್ನು ಬೆಂಗಳೂರು ಪೊಲೀಸರು (ಹೆಣ್ಣೂರು ಪೊಲೀಸ್ ಠಾಣಾ) ಮುಂಬೈನಲ್ಲಿ ಬಂಧಿಸಿರುವ ಘಟನೆ ನಡೆದಿದೆ.

    ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದು ಆರೋಪಿಗಳನ್ನು ಪ್ರೀಯಾಂಕ, ಮಹಾದೇವಿ, ವನಿತಾ ಎಂದು ಗುರುತಿಸಲಾಗಿದೆ. ಬಂಧಿತರಿಂದ 250 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಜುಲೈ 21ಕ್ಕೆ ಹಾಜರಾಗಿ – ಸೋನಿಯಾ ಗಾಂಧಿಗೆ ಮತ್ತೆ ED ಸಮನ್ಸ್

    ಚಾಲಕಿ ಮಹಿಳೆಯರು ಬಾಂಬೆಯಲ್ಲೂ ತಮ್ಮ ಕೈಚಳಕ ತೋರಿಸಿ ಬಂಧಿತರಾಗಿದ್ದರು. ಎಲ್ಲಾದರೂ ಮನೆಕೆಲಸದವರಿಂದ ಕಳ್ಳತನ ಆಯ್ತು ಅಂದ್ರೆ, ಮುಂಬೈ ಪೊಲೀಸರು ಮೊದಲು ಈ ಗ್ಯಾಂಗ್ ಸದಸ್ಯರನ್ನು ಹುಡುಕುತ್ತಿದ್ದರು.

    ಮುಂಬೈಯಲ್ಲಿ ಸೆಕ್ಯೂರಿಟಿ ಗಾರ್ಡ್ಗಳಿಗೆ ಕಮೀಷನ್ ಕೊಟ್ಟು ಮನೆಕೆಲಸಕ್ಕೆ ಸೇರುತ್ತಿದ್ದ ಈ ಚಾಲಾಕಿಯರು 36 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ ಬಾಂಬೆಯಿಂದ ಬೆಂಗಳೂರಿಗೆ ಬಂದು ಇಲ್ಲಿಯೂ ತಮ್ಮ ಕೈಚಳಕ ತೋರಿಸಲು ಪ್ರಾರಂಭಿಸಿದ್ದರು. ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಇದನ್ನೂ ಓದಿ: ಅರ್ಜುನ್ ಜನ್ಯ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ಸಿನಿಮಾ ಟೈಟಲ್ : ಸೌತ್ ಸ್ಟಾರ್ಸ್ ರಿಲೀಸ್

    ಕಳ್ಳಿಯರ ಪ್ಲಾನ್ ಹೇಗಿತ್ತು?
    ಫೇಸ್‌ಬುಕ್ ನಲ್ಲಿ ಮನೆಕೆಲಸದ ಜಾಹೀರಾತು ನೀಡುತ್ತಿದ್ದರು. ರೆಫರ್ ಹೌಸ್ ಮೇಡ್ಸ್ ಎಂದು ಗ್ರೂಪ್ ಮಾಡಿಕೊಂಡಿದ್ದರು. ಗ್ರೂಪ್‌ನಲ್ಲಿ ಸಂಪರ್ಕ ಮಾಡಿದವರ ಬಳಿ ಕೆಲಸಕ್ಕೆ ಸೇರುತ್ತಿದ್ದರು. ಬಳಿಕ ತುಂಬಾ ಒಳ್ಳೆಯವರಂತೆ ವಿಶ್ವಾಸ ಗಳಿಸಿ ತಮ್ಮ ಕೈಚಳಕ ತೋರಿಸುತ್ತಿದ್ದರು. ಹಾಗೆಯೇ ಹೆಣ್ಣೂರು ಠಾಣಾ ವ್ಯಾಪ್ತಿಯ ಅರವಿಂದ್ ಎಂಬವರ ಮನೆಯಲ್ಲಿ ಮನೆಯಲ್ಲಿ ಕಳ್ಳತನ ಮಾಡಿ ಮುಂಬೈಗೆ ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಾದಗಿನಿಂದ ಆರೋಪಿಗಳ ಬೆನ್ನು ಬಿದ್ದಿದ್ದ ಪೊಲೀಸರು ಮುಂಬೈಗೆ ತೆರಳಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಕರ್ಮಕ್ಕೆ ನನಗೆ ಶಿಕ್ಷೆ ಆಗಿದೆ – ಗಂಗಾ ಕುಲಕರ್ಣಿ ಡೆತ್‍ನೋಟ್

    ನನ್ನ ಕರ್ಮಕ್ಕೆ ನನಗೆ ಶಿಕ್ಷೆ ಆಗಿದೆ – ಗಂಗಾ ಕುಲಕರ್ಣಿ ಡೆತ್‍ನೋಟ್

    – ಜಡ್ಜ್, ವಕೀಲರಲ್ಲಿ ಮನವಿ

    ಕೊಪ್ಪಳ: ಚಿತ್ರ ಸಾಹಿತಿ ಕೆ ಕಲ್ಯಾಣ್ ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿಸಿ, ಇದೀಗ ಆತ್ಮಹತ್ಯೆ ಮಾಡಿಕೊಂಡ ಗಂಗಾ ಕುಲಕರ್ಣಿ ಡೆತ್ ನೋಟ್ ಪತ್ತೆಯಾಗಿದೆ.

    ಆತ್ಮಹತ್ಯೆಗೂ ಮುನ್ನ ಮರಾಠಿಯಲ್ಲಿ ಡೆತ್‍ನೋಟ್ ಬರೆದಿರುವ ಗಂಗಾ ಕುಲಕರ್ಣಿ, ನ್ಯಾಯಾಧೀಶರು ಹಾಗೂ ವಕೀಲರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ನನ್ನ ಕರ್ಮಕ್ಕೆ ನನಗೆ ಶಿಕ್ಷೆ ಆಗಿದೆ. ನನ್ನ ಮೇಲೆ ಕೇಸ್‍ಗಳಾಗಿವೆ. ನನಗೆ ಇಬ್ಬರು ಮಕ್ಕಳಿದ್ದಾರೆ. ನನ್ನ ಮಕ್ಕಳನ್ನು ನೀವೇ ನೋಡಿಕೊಳ್ಳಿ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸುವ ಮೂಲಕ ಜಡ್ಜ್, ವಕೀಲರಲ್ಲಿ ಗಂಗಾ ಮನವಿ ಮಾಡಿದ್ದಾರೆ.

    ಇಂದು ವಿಷಸೇವಿಸಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ನ್ಯಾಯಾಲಯಕ್ಕೆ ಆಗಮಿಸಿದ್ದ ಗಂಗಾ ಕುಲಕರ್ಣಿ, ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಾಯಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಗ್ರಾಮದಲ್ಲಿ ಕೆಲಸ ಕೊಡಿಸೋದಾಗಿ ಹೇಳಿ ಸಂತೋಷ್ ಕುಲಕರ್ಣಿ ಎಂಬವರಿಂದ ಮೂರು ಲಕ್ಷ ದೋಚಿದ್ದರು. ಈ ಸಂಬಂಧ 2016 ರಲ್ಲಿ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಗಂಗಾ ಕುಲಕರ್ಣಿ ವಿರುದ್ಧ ಕೇಸ್ ದಾಖಲಾಗಿತ್ತು.

    ಅಲ್ಲದೆ ಈ ಹಿಂದೆ ಕಲ್ಯಾಣ್ ಪತ್ನಿ ಅಶ್ವಿನಿಯನ್ನು ಅತ್ತೆ, ಮಾವನನ್ನು ಪುಸಲಾಯಿಸಿ ಅಪಹರಣ ಮಾಡಿದ್ದಾರೆ. ಪತ್ನಿ ಅಶ್ವಿನಿ ಅಕೌಂಟ್‍ನಿಂದ 19 ಲಕ್ಷ ರೂಪಾಯಿ ತನ್ನ ಅಕೌಂಟ್‍ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಆರೋಪ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಡಗಿ ಗ್ರಾಮದ ಶಿವಾನಂದ ವಾಲಿ, ಮನೆಕೆಲಸದಾಕೆಯಾಗಿದ್ದ ಗಂಗಾ ಕುಲಕರ್ಣಿ ವಿರುದ್ಧ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಲ್ಯಾಣ್ ಪತ್ನಿ ಅಶ್ವಿನಿ ಕರೆತಂದು ಪೊಲೀಸರು ಮಾಹಿತಿ ಪಡೆದಿದ್ದರು. ಸದ್ಯ ಪತಿ ವಿರುದ್ಧ ನೀಡಿರುವ ವಿಚ್ಛೇದನ ಹಿಂಪಡೆಯುವುದಾಗಿ ಅಶ್ವಿನಿ ತಿಳಿಸಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ.

  • ಬ್ರಿಟಿಷ್ ರಾಯಲ್ ಫ್ಯಾಮಿಲಿಯಿಂದ ಮನೆ ಕೆಲಸದವರ ಹುಡುಕಾಟ- 18.5 ಲಕ್ಷ ರೂ. ಸಂಬಳ

    ಬ್ರಿಟಿಷ್ ರಾಯಲ್ ಫ್ಯಾಮಿಲಿಯಿಂದ ಮನೆ ಕೆಲಸದವರ ಹುಡುಕಾಟ- 18.5 ಲಕ್ಷ ರೂ. ಸಂಬಳ

    ಲಂಡನ್: ಬ್ರಿಟಿಷ್ ರಾಯಲ್ ಫ್ಯಾಮಿಲಿ ಮನೆ ಕೆಲಸದವರಿಗಾಗಿ ಹುಡುಕಾಟ ನಡೆಸುತ್ತಿದ್ದು, ಬರೋಬ್ಬರಿ 18.5 ಲಕ್ಷ ರೂ. ಆರಂಭಿಕ ಸಂಬಳ ನೀಡುವುದಾಗಿ ಘೋಷಿಸಿದೆ.

    ರಾಜ ಮನೆತನದ ಅಧಿಕೃತ ವೆಬ್‍ಸೈಟ್ ರಾಯಲ್ ಹೌಸ್‍ಹೋಲ್ಡ್‍ನಲ್ಲಿ ಈ ಕುರಿತು ಪ್ರಕಟಿಸಿದ್ದು, ಇದು 2ನೇ ಹಂತದ ಅಪ್ರಂಟಿಸ್‍ಶಿಪ್(ತರಬೇತಿ ಅವಧಿ) ಕೆಲಸವಾಗಿದೆ. ಆಯ್ದ ಅಭ್ಯರ್ಥಿಗಳು ಮಾತ್ರ ವಿಂಡ್ಸರ್ ಕ್ಯಾಸ್ಟಲ್‍ನಲ್ಲಿ ವಾಸಿಸಬೇಕಾಗಿರುತ್ತದೆ ಎಂದು ತಿಳಿಸಲಾಗಿದೆ.

    ಈಗಾಗಲೇ ಹೇಳಿದ ಹಾಗೆ ಇದೊಂದು ಎರಡನೇ ಹಂತದ ಅಪ್ರೆಂಟಿಸ್‍ಶಿಪ್ ಕೆಲಸವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಇಂಗ್ಲೆಂಡ್‍ನ ವಿಂಡ್ಸರ್ ಕ್ಯಾಸ್ಟಲ್‍ನಲ್ಲಿ ಇರಬೇಕು. ವಾರದಲ್ಲಿ ಐದು ದಿನ ಕೆಲಸ ಮಾಡಬೇಕು.

    ಸಂಬಳ ಎಷ್ಟು?
    ರಾಯಲ್ ಫ್ಯಾಮಿಲಿಗೆ ತಕ್ಕಂತೆ ಆಕರ್ಷಕ ಸಂಬಳವನ್ನೇ ನೀಡಲಾಗುತ್ತಿದೆ. ಈ ಅಪ್ರೆಂಟಿಸ್‍ಶಿಪ್ ಕೆಲಸದ ವೇಳೆ 19,140 ಬ್ರಿಟಿಷ್ ಪೌಂಡ್ (18.5 ಲಕ್ಷ ರೂ.) ಆರಂಭಿಕ ಸಂಬಳ ನೀಡಲಾಗುತ್ತದೆ. ಇದರ ಜೊತೆಗೆ ಇರಲು ವ್ಯವಸ್ಥೆ ಹಾಗೂ ಅರಮನೆಯಿಂದ ಊಟವನ್ನು ಸಹ ನೀಡಲಾಗುತ್ತದೆ. ಆದರೆ ಸಂಬಳದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲದೆ ಇದರಲ್ಲೇ ಪ್ರಯಾಣ ವೆಚ್ಚ ಸಹ ಸೇರಿದೆ.

    ಅರ್ಹತೆ ಏನು?
    ಆಯ್ಕೆಯಾದ ಅಭ್ಯರ್ಥಿಯನ್ನು ವರ್ಷ ಪೂರ್ತಿ ರಾಯಲ್ಸ್‍ನ ಇತರ ಅರಮನೆಗಳಿಗೆ ಕೆಲಸಕ್ಕಾಗಿ ಸ್ಥಳಾಂತರಿಸಲಾಗುತ್ತದೆ. ಇದರಲ್ಲಿ ಬಕ್ಕಿಂಗ್ಹ್ಯಾಮ್ ಅರಮನೆ ಸಹ ಸೇರಿದೆ. ಈ ಸಮಗ್ರ ಲಾಭಗಳ ಪ್ಯಾಕೇಜ್‍ನಲ್ಲಿ ಬ್ಯಾಂಕ್ ರಜೆ ಸೇರಿ 33 ದಿನಗಳ ರಜೆ ಸಹ ಇದೆ. ಆದರೆ ಅಭ್ಯರ್ಥಿಗಳು ಕೆಲಸ ಪಡೆಯಲು ಇಂಗ್ಲಿಷ್ ಹಾಗೂ ಗಣಿತದಲ್ಲಿ ಪರಿಣಿತಿ ಹೊಂದಿರಬೇಕು. ನೀವು ಅಗತ್ಯ ಅರ್ಹತೆಗಳನ್ನು ಹೊಂದಿಲ್ಲವಾದಲ್ಲಿ ನಿಮ್ಮ ಕಲಿಕೆ ವೃತ್ತಿಯ ಭಾಗವಾಗಿ ಅರ್ಹತೆಗಳನ್ನು ಪಡೆಯಲು ನಿಮಗೆ ಬೆಂಬಲ ನೀಡುತ್ತೇವೆ ಎಂದು ಪೋಸ್ಟ್‍ನಲ್ಲಿ ಉಲ್ಲೇಖಿಸಲಾಗಿದೆ.

    ಏನು ಕೆಲಸ?

    ಕೆಲಸದ ಅಗತ್ಯತೆಗಳನ್ನು ಸಹ ವಿವರಿಸಲಾಗಿದ್ದು, ನೀವು ನಮ್ಮ ಮನೆ ಕೆಲಸದ ವೃತ್ತಿಪರರ ತಂಡವನ್ನು ಸೇರುತ್ತೀರಿ. ಒಳಾಂಗಣ ಮತ್ತು ವಸ್ತುಗಳನ್ನು ನೋಡಿಕೊಳ್ಳಲು, ಸ್ವಚ್ಛವಾಗಿಟ್ಟುಕೊಳ್ಳಲು ಹಾಗೂ ಕಾಳಜಿ ವಹಿಸಲು ನೀವು ಅವರೊಂದಿಗೆ ಕೆಲಸ ಮಾಡುವಾಗ ಕಲಿಯುತ್ತೀರಿ. ಇದನ್ನು ಅವರು ಚೆನ್ನಾಗಿ ಮಾಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.

    ಕೆಲಸದ ತರಬೇತಿ ಸಮಯ 13 ತಿಂಗಳಾಗಿದ್ದು, ಅಭ್ಯರ್ಥಿಗಳು ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದಲ್ಲಿ ಆ ವ್ಯಕ್ತಿಯನ್ನು ರಾಯಲ್ ಫ್ಯಾಮಿಲಿಯ ಶಾಶ್ವತ ಕೆಲಸಗಾರನನ್ನಾಗಿ ಸೇರಿಸಿಕೊಳ್ಳಲಾಗುವುದು ಎಂದು ಹೇಳಿದೆ.

  • ಸಿನಿಮಾ ಬಿಟ್ಟು ಮನೆಕೆಲಸದಲ್ಲಿ ಬ್ಯುಸಿಯಾದ್ರು ರಾಜಮೌಳಿ

    ಸಿನಿಮಾ ಬಿಟ್ಟು ಮನೆಕೆಲಸದಲ್ಲಿ ಬ್ಯುಸಿಯಾದ್ರು ರಾಜಮೌಳಿ

    ಹೈದರಾಬಾದ್: ಸದ್ಯ ಲಾಕ್‍ಡೌನ್‍ನಿಂದ ಸಿನಿಮಾಗಳಿಗೆ ಬ್ರೇಕ್ ಕೊಟ್ಟಿರುವ ಬಾಹುಬಲಿ ನಿರ್ದೇಶಕ ಎಸ್. ಎಸ್ ರಾಜಮೌಳಿ ಅವರು ಮನೆಯಲ್ಲಿ ಏನು ಮಾಡುತ್ತಿದ್ದಾರೆ ಎನ್ನುವ ಸ್ಪೆಷಲ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ‘ಬಾಹುಬಲಿ’ಯಂತಹ ಸರಣಿ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ರಾಜಮೌಳಿ ಸದ್ಯ ಮನೆಯಲ್ಲಿ ಕೆಲಸ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಮನೆಯಲ್ಲಿ ಕಸ ಗುಡಿಸುತ್ತಾ, ಕಿಟಕಿ ಕ್ಲೀನ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟರ್ ನಲ್ಲಿ ರಾಜಮೌಳಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಸಿನಿಮಾ ಮಾತ್ರವಲ್ಲ ಮನೆ ಕೆಲಸವನ್ನೂ ಚೆನ್ನಾಗೆ ಮಾಡ್ತೀರಾ ಸಾರ್ ಎಂದು ನೆಟ್ಟಿಗರು ರಾಜಮೌಳಿ ಟ್ವೀಟ್‍ಗೆ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ.

    ನಿರ್ದೇಶಕ ಹಾಗೂ ನಿರ್ಮಾಪಕ ಸಂದೀಪ್ ವಂಗಾ ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲಿ ಕೆಲಸ ಮಾಡುವ ವಿಡಿಯೋವೊಂದನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಕೇಲವ ವಿಡಿಯೋ ಪೊಲೀಸ್ ಮಾಡೋದಲ್ಲದೇ #BetheREALMAN ಅಂತ ಸೆಲೆಬ್ರಿಟಿಗಳಿಗೆ ಚಾಲೆಂಜ್ ಕೂಡ ಮಾಡಿದ್ದಾರೆ. ಮನೆ ಕೆಲಸದವರು ಇಲ್ಲದಿದ್ದಾಗ ಮಹಿಳೆಯರಿಗೆ ಮನೆ ಕೆಲಸದಲ್ಲಿ ಸಹಾಯ ಮಾಡಿ ರಿಯಲ್ ಮ್ಯಾನ್ ಆಗಿ ಎಂದು ಸಂದೀಪ್ ರಾಜಮೌಳಿ ಅವರನ್ನು ಟ್ಯಾಗ್ ಮಾಡಿ, ಚಾಲೆಂಜ್ ಹಾಕಿದ್ದರು.

    ಈ ಸವಾಲನ್ನು ಸ್ವೀಕರಿಸಿದ ರಾಜಮೌಳಿ ತಮ್ಮ ಮನೆ ಕೆಲಸ ಮಾಡಿ ರಿಯಲ್ ಮ್ಯಾನ್ ಆಗಿದ್ದಾರೆ. ಅಷ್ಟೇ ಅಲ್ಲದೇ ಮನೆ ಕೆಲಸ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿ, ಜೂನಿಯರ್ ಎನ್‍ಟಿಆರ್, ರಾಮ್ ಚರಣ್ ಹಾಗೂ ಎಂಎಂ ಕೀರವಾಣಿ ಅವರಿಗೂ ಚಾಲೆಂಜ್ ಪಾಸ್ ಮಾಡಿದ್ದಾರೆ.

    ಲಾಕ್‍ಡೌನ್‍ಗೂ ಮುನ್ನ ಟಾಲಿವುಡ್‍ನ ಬಹುನಿರೀಕ್ಷಿತ ಸಿನಿಮಾ ‘ಆರ್‌ಆರ್‌ಆರ್’ ಚಿತ್ರೀಕರಣದಲ್ಲಿ ರಾಜಮೌಳಿ ಅವರು ಬ್ಯುಸಿಯಾಗಿದ್ದರು. ರಾಮ್ ಚರಣ್ ಹಾಗೂ ಜೂನಿಯರ್ ಎನ್‍ಟಿಆರ್ ಜೊತೆಗೆ ಬಾಲಿವುಡ್ ತಾರೆಯರು ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದು, ಲಾಕ್‍ಡೌನ್‍ನಿಂದಾಗಿ ಶೂಟಿಂಗ್ ಕೆಲಸ ಸ್ಥಗಿತಗೊಂಡಿದೆ.