Tag: ಮನೆ ಕುಸಿತ

  • ಧಾರವಾಡ | ಎಡೆಬಿಡದೆ ಸುರಿದ ಮಳೆಗೆ ಕುಸಿದ ಮನೆ

    ಧಾರವಾಡ | ಎಡೆಬಿಡದೆ ಸುರಿದ ಮಳೆಗೆ ಕುಸಿದ ಮನೆ

    ಧಾರವಾಡ: ಕಳೆದ ಮೂರು ದಿನಗಳಿಂದ ಧಾರವಾಡ (Dharwad) ತಾಲೂಕಿನ ನವಲಗುಂದದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮನೆಯೊಂದು ಕುಸಿದಿದೆ.

    ನವಲಗುಂದ (Navalgund) ಪಟ್ಟಣದ ಹಳ್ಳದ ಓಣಿಯಲ್ಲಿರುವ ಮಕ್ತುಮಬಿ ನರಗುಂದ ಅವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇದೀಗ ಮನೆಯಿಲ್ಲದೆ ಮಕ್ತುಮಬಿ ನರಗುಂದ ಅವರ ಕುಟುಂಬ ಪರದಾಡುತ್ತಿದ್ದು, ಪಕ್ಕದ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಎಟಿಎಂ ಕಳ್ಳತನ ಮಾಡುವಾಗಲೇ ಎಎಸ್ಐಯಿಂದ ಕಳ್ಳ ಅರೆಸ್ಟ್‌ – ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

    ಸ್ಥಳಕ್ಕೆ ವಿಪತ್ತು ನಿರ್ವಹಣಾ ಅಧಿಕಾರಿಗಳು ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದಾರೆ. ಮನೆ ಕಳೆದುಕೊಂಡ ಕುಟುಂಬಸ್ಥರು ಸರ್ಕಾರ ಆದಷ್ಟು ಬೇಗ ಪರಿಹಾರವನ್ನ ನೀಡಬೇಕು ಎಂದು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

  • ಕಾರವಾರ| ಧಾರಾಕಾರ ಮಳೆಗೆ ಕುಸಿದ 2 ಮನೆಗಳು

    ಕಾರವಾರ| ಧಾರಾಕಾರ ಮಳೆಗೆ ಕುಸಿದ 2 ಮನೆಗಳು

    ಕಾರವಾರ: ಧಾರಾಕಾರವಾಗಿ ಸುರಿದ ಮಳೆಗೆ 2 ಮನೆಗಳು ಧರೆಗುರುಳಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಂಕನಾಳ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರಾಘು ಇಡುಕಪ್ಪ ನಾಯ್ಕ ಮತ್ತು ದಾಕ್ಷಾಯಿಣಿ ಇಡುಕಪ್ಪ ನಾಯ್ಕ ಎಂಬವರಿಗೆ ಸೇರಿದ ಮನೆ ಅಬ್ಬರದ ಗಾಳಿಮಳೆಗೆ ಕುಸಿದು ಬಿದ್ದು ಸಾಕಷ್ಟು ಹಾನಿಯುಂಟಾಗಿದೆ. ಇದನ್ನೂ ಓದಿ: ಕುಡಿತದ ಚಟ ಬಿಡಿಸೋ ನಾಟಿ ಔಷಧಿ ಸೇವಿಸಿ ನಾಲ್ವರು ಸಾವು – ನಕಲಿ ವೈದ್ಯ ಅರೆಸ್ಟ್

    ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ ವಸ್ತುಗಳು ನಾಶವಾಗಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಇಲ್ಲದೇ ಆ ಬಡ ಕುಟುಂಬ ಇದೀಗ ಬೀದಿಪಾಲಾಗಿದೆ.

    ಸಂತ್ರಸ್ಥರಿಗೆ ವಾಸ ಮಾಡಲು ಸೂರಿಲ್ಲದೇ ಪರದಾಡುವ ಸ್ಥಿತಿ ಎದುರಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಆ ಕುಟುಂಬದವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರೆಂದು ಗೊತ್ತಿಲ್ಲ: ಡಾ.ಸುಧಾಕರ್ ರಿಯಾಕ್ಷನ್

  • ಭಾರೀ ಗಾಳಿ ಸಹಿತ ಮಳೆ – ಮನೆ ಕುಸಿದು ಕಾರ್ಮಿಕ ಮಹಿಳೆ ಸಾವು

    ಭಾರೀ ಗಾಳಿ ಸಹಿತ ಮಳೆ – ಮನೆ ಕುಸಿದು ಕಾರ್ಮಿಕ ಮಹಿಳೆ ಸಾವು

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಭಾರೀ ಗಾಳಿ ಸಹಿತ ಮಳೆ ಪ್ರಮಾಣ ಹೆಚ್ಚಾಗಿದ್ದು, ಜಿಲ್ಲೆಯ ನಾನಾ ಭಾಗಗಳಲ್ಲಿ ಮಳೆಯ ಅವಾಂತರಗಳು (Rain Effect) ಮುಂದುವರಿಯುತ್ತಿದೆ.

    ಈ‌ ನಡುವೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ ಗ್ರಾಮದಲ್ಲಿಂದು ಬೆಳಗ್ಗೆ 5:30ರ ಸುಮಾರಿಗೆ ಮಳೆ ಗಾಳಿಗೆ ಮನೆ ಕುಸಿದು ಬಿದ್ದು ಕಾರ್ಮಿಕ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ. ಇದನ್ನೂ ಓದಿ: ಬಾಗಲಕೋಟೆ | ಬೈಕ್ ತಪ್ಪಿಸಲು ಹೋಗಿ ಕಾರಿನ ಮೇಲೆ ಲಾರಿ ಪಲ್ಟಿ – ಇಬ್ಬರು ದುರ್ಮರಣ

    ಮಹಿಳೆ ಮೃತಪಟ್ಟಿದ್ದು, ಆಕೆಯ ಮಕ್ಕಳು ಹಾಗೂ ಸಹೋದರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾನಗಲ್‌ ಗ್ರಾಮದ ಗಣಪತಿ ದೇವಸ್ಥಾನದ ಸಮೀಪದಲ್ಲಿರುವ ಸುಷ್ಮಾ (37) ಮೃತ ಮಹಿಳೆ ಆಗಿದ್ದಾರೆ. ಇವರ ಮೂವರು ಮಕ್ಕಳು ಹಾಗೂ ಸಹೋದರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದನ್ನೂ ಓದಿ: ಉದಯಪುರದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ – ಶಿಕ್ಷಕರಿಂದ ಕಿರುಕುಳ ಆರೋಪ

    ಮಳೆಯಲ್ಲೇ ಕೊಡಗಿನಲ್ಲಿ ಕಾರ್ಗಿಲ್‌ ವಿಜಯೋತ್ಸವ
    ಇನ್ನೂ ಸೇನಾನಾಡು ಕೊಡಗಿನಲ್ಲಿ ಕಾರ್ಗಿಲ್‌ ವಿಜಯೋತ್ಸವವನ್ನ (Kargil Vijay Diwas) ಸಂಭ್ರಮದಿಂದ ಆಚರಿಸಲಾಯಿತು. ಮಳೆಯನ್ನು ಲೆಕ್ಕಿಸದೇ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ನಿಂದ ಮಡಿಕೇರಿ ನಗರದ ಯುದ್ಧ ಸ್ಮಾರಕ ಬಳಿ ಪುಷ್ಪ ನಮನ ಸಲ್ಲಿಸುವ ಮೂಲಕ ಯೋಧರಿಗೆ ಗೌರವ ಸಲ್ಲಿಲಾಯಿತು. ಇದನ್ನೂ ಓದಿ: ರಾಧಾನಗರಿ ಜಲಾಶಯದಿಂದ 4 ಗೇಟ್‌ಗಳ ಮೂಲಕ ನೀರು ಬಿಡುಗಡೆ – ದೂದ್‌ಗಂಗಾ ನದಿ ತೀರದಲ್ಲಿ ಹೈಅಲರ್ಟ್

    ನೂರಾರೂ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಅಗಲಿದ ವೀರ ಸೇನಾನಿಗಳನ್ನ ಸ್ಮರಿಸಿದರು. ಅಲ್ಲದೇ ಅಂದಿನ ದಿನದಲ್ಲಿ ಸೈನಿಕರು ಹಾಗೂ ಅವರ ಕುಟುಂಬಸ್ಥರು ಯಾವ ರೀತಿಯ ನೋವು ಅನುಭವಿಸುತ್ತಿದ್ದರು, ಇಂದಿನ ದಿನಗಳಲ್ಲಿ ಸೈನಿಕರ ಕುಟುಂಬಗಳನ್ನ ಸರ್ಕಾರಿ ಅಧಿಕಾರಿಗಳು ಹೇಗೆ ನೋಡ್ತಿದ್ದಾರೆ ಅಂತ ಕೆಲ ಸೈನಿಕರು ನೋವು ಹಂಚಿಕೊಂಡರು. ಈ ಸಂದರ್ಭದಲ್ಲಿ ಹಿಂದೂ ಪರ ಕಾರ್ಯಕರ್ತರು ಸಿಹಿ ಹಂಚಿ ಕಾರ್ಗಿಲ್‌ ವಿಜಯೋತ್ಸವವನ್ನು ಸಂಭ್ರಮಿಸಿದರು.

  • ಕಲಬುರಗಿಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ – ಮನೆ ಕುಸಿತ

    ಕಲಬುರಗಿಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ – ಮನೆ ಕುಸಿತ

    ಕಲಬುರಗಿ: ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಬಿರುಗಾಳಿ, ಗುಡುಗು, ಮಿಂಚಿನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ವೆಂಕಟಾಪುರ(Venkatapura) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗಾನಗರ ತಾಂಡಾದಲ್ಲಿ ಮನೆ ಕುಸಿದಿದೆ. ಲಿಂಗಾನಗರದ(Linganagara) ಅನುಷಾಬಾಯಿ ಚವ್ಹಾಣ್ ಎಂಬುವವರಿಗೆ ಸೇರಿದ ಮನೆ ಸಂಪೂರ್ಣ ಕುಸಿದಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅನುಷಾಬಾಯಿ ಅವರ ಪತಿ ಬೇರೆ ಮದುವೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದು, ಮೂವರು ಹೆಣ್ಣು ಮಕ್ಕಳ ಪೋಷಣೆ ಅನುಷಾಬಾಯಿ ಅವರ ಮೇಲಿದೆ. ಇದೀಗ ಮನೆಯೂ ಕಳೆದುಕೊಂಡ ಅನುಷಾಬಾಯಿ ಕುಟುಂಬ ಅಕ್ಷರಶಃ ಬೀದಿಗೆ ಬಂದಿದೆ. ಇದನ್ನೂ ಓದಿ: ಫ್ಯಾಂಟಸಿ ಕ್ರಿಕೆಟ್‌ನಲ್ಲಿ ಗೆದ್ದ ಅಭಿಮಾನಿಗೆ ಲ್ಯಾಂಬೊರ್ಗಿನಿ ಕಾರು ಗಿಫ್ಟ್‌ ಕೊಟ್ಟ ರೋಹಿತ್‌ ಶರ್ಮಾ

    ತಾಲೂಕಿನ ಕೆಲವೆಡೆ ರಸ್ತೆಯಲ್ಲಿ ಮರಗಳು ಉರುಳಿ ಬಿದ್ದು, ಸಂಚಾರಕ್ಕೆ ತೊಂದರೆ ಉಂಟಾಯಿತು. ಸಂಬಂಧಪಟ್ಟ ಅಧಿಕಾರಿಗಳು ಮರ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಿದ್ಯುತ್ ಕಂಬಗಳು ಧರೆಗುರುಳಿದರಿಂದ ಗ್ರಾಮಸ್ಥರು ಕತ್ತಲಲ್ಲಿ ಸಮಯ ಕಳೆಯುವಂತಾಯಿತು. ಇದನ್ನೂ ಓದಿ: PSI ಗಂಡ ಚೆನ್ನಾಗಿ ನೋಡಿಕೊಳ್ತಿಲ್ಲ ಅಂತಾ ಪತ್ನಿ ನೇಣಿಗೆ ಶರಣು!

    ಸೋಮವಾರ ಚಿಂಚೋಳಿಯಲ್ಲಿ 40.4 ಮಿ.ಮೀ, ಕುಂಚಾವರಂ 50.4, ಐನಾಪುರ 7.7, ಸುಲೇಪೇಟ 8.8, ಚಿಮ್ಮನಚೋಡ 4, ಕೋಡ್ಲಿ 24.2 ಮಿ.ಮೀ ಮಳೆಯಾಗಿದೆ. ಮಳೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ.

  • ಬೆಂಗಳೂರಿನಲ್ಲಿ ಎರಡು ಅಂತಸ್ತಿನ ಮನೆ ಕುಸಿತ

    ಬೆಂಗಳೂರಿನಲ್ಲಿ ಎರಡು ಅಂತಸ್ತಿನ ಮನೆ ಕುಸಿತ

    ಬೆಂಗಳೂರು: ಮತ್ತೊಂದು ಕಟ್ಟಡಕ್ಕೆ ಪಾಯ ತೆಗೆಯುತ್ತಿದ್ದ ವೇಳೆ ಎರಡು ಅಂತಸ್ತಿನ ಮನೆ (Home) ಕುಸಿದ ಘಟನೆ ಬೆಂಗಳೂರಿನ (Bengaluru) ಭೀಮಾ ನಗರದ ತಿಪ್ಪಸಂದ್ರದಲ್ಲಿ (Thippasandra) ನಡೆದಿದೆ.

    ಕಟ್ಟಡದ ಪಕ್ಕದಲ್ಲಿ ಮತ್ತೊಂದು ಕಟ್ಟಡಕ್ಕೆ ಪಾಯ ತೆಗೆಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಸದ್ಯ ಮನೆಯಲ್ಲಿದ್ದ ಎಲ್ಲರನ್ನೂ ಪೊಲೀಸರು ಹೊರ ಕಳುಹಿಸಿದ್ದಾರೆ. ಸಂಜೆ 4:15ರ ಸುಮಾರಿಗೆ ಕಟ್ಟಡ ಕುಸಿದಿದೆ. ಕಟ್ಟಡದಲ್ಲಿ ಐದು ಬಾಡಿಗೆ ಮನೆಗಳಿದ್ದವು. ಕಟ್ಟಡ ಕುಸಿದ ವೇಳೆ ಮನೆಯಲ್ಲಿದ್ದವರು ಹೊರಗೆ ಓಡಿದ್ದಾರೆ. ಇದನ್ನೂ ಓದಿ: ಅಮಾನವೀಯವಾಗಿ ಮೃತ ಕಾರ್ಮಿಕನ ಶವ ಎಳೆದೊಯ್ದ 6 ಮಂದಿ ವಿರುದ್ಧ ಎಫ್ಐಆರ್

    ಬೇಸ್‌ಮೆಂಟ್‌ನಲ್ಲಿ ಐದಕ್ಕೂ ಹೆಚ್ಚು ಬೈಕ್‌ಗಳು ಜಖಂಗೊಂಡಿವೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ತಿಳಿದುಬಂದಿದೆ. ಕಟ್ಟಡ ಕುಸಿಯುವ ವೇಳೆ ಆರು ಜನರಿದ್ದರು. ಸದ್ಯ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ದೌಡಾಯಿಸಿದ್ದಾರೆ. ಕಟ್ಟಡ ಮತ್ತಷ್ಟು ಕುಸಿಯುವ ಸಾಧ್ಯತೆಯಿದ್ದು, ಮನೆಯ ಎರಡೂ ಕಡೆ ಬ್ಯಾರಿಕೇಡ್‌ ಹಾಕಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.  ಇದನ್ನೂ ಓದಿ: ಬೋನಿ ದಾಖಲೆ ಮುರಿಯಲು ಸಜ್ಜಾದ ಸ್ನೇಹಿತೆ – 1,000 ಪುರುಷರೊಟ್ಟಿಗೆ ಸೆಕ್ಸ್‌ ಮಾಡಲು ಅನ್ನಿ ನೈಟ್ ತಯಾರಿ

  • ಧಾರಾಕಾರ ಸುರಿದ ಮಳೆಗೆ ಮನೆ ಕುಸಿತ – 20 ದಿನದ ಹಸುಗೂಸು, ವೃದ್ಧೆ ಸಾವು

    ಧಾರಾಕಾರ ಸುರಿದ ಮಳೆಗೆ ಮನೆ ಕುಸಿತ – 20 ದಿನದ ಹಸುಗೂಸು, ವೃದ್ಧೆ ಸಾವು

    ಕೊಪ್ಪಳ: ಕಳೆದ 2 ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಮನೆಯೊಂದು ಕುಸಿದು ಬಿದ್ದು, 20 ದಿನದ ಹಸುಗೂಸು (Infant) ಹಾಗೂ ವೃದ್ಧೆ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕೊಪ್ಪಳ (Koppala) ಜಿಲ್ಲೆಯಲ್ಲಿ ನಡೆದಿದೆ.

    ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಜೀರಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆ ಕುಸಿತದಿಂದ (House Collapse) ಹಸುಗೂಸು ಹಾಗೂ ವೃದ್ಧೆ ಫಕೀರಮ್ಮ (60) ಸಾವನ್ನಪ್ಪಿದ್ದಾರೆ. ಮಂಗಳವಾರ ಬೆಳಗ್ಗಿನ ಜಾವ ಎಲ್ಲರೂ ಮಲಗಿದ್ದ ವೇಲೆ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಆಡಿ ಕಾರು, ಬೈಕ್ ಮುಖಾಮುಖಿ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಸಾವು

    ಬಾಣಂತಿ ಕನಕಮ್ಮಳಿಗೆ ಗಾಯಗಳಾಗಿದ್ದು, ಅವರನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಪತಿ ಸದ್ಯ ಮನೆಯ ಹೊರಗಡೆ ಮಲಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲು ತೂರಾಟ

  • ಅಕಾಲಿಕ ಮಳೆಗೆ ಕುಸಿದ ಮನೆ – ಅವಶೇಷಗಳಡಿ ಸಿಲುಕಿ ಬಾಲಕಿ ಸಾವು

    ಅಕಾಲಿಕ ಮಳೆಗೆ ಕುಸಿದ ಮನೆ – ಅವಶೇಷಗಳಡಿ ಸಿಲುಕಿ ಬಾಲಕಿ ಸಾವು

    ರಾಯಚೂರು: ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ಸುರಿದ ಅಕಾಲಿಕ ಮಳೆಗೆ (Rain) ರಾಯಚೂರು (Raichur) ತಾಲೂಕಿನ ಕುರುವಕಲಾ ಗ್ರಾಮದಲ್ಲಿ ಮನೆಯೊಂದು ಕುಸಿದಿದ್ದು (House Collapse) ಬಾಲಕಿಯೊಬ್ಬಳು (Girl) ಸಾವನ್ನಪ್ಪಿದ್ದಾಳೆ.

    ನಿರ್ಮಲಾ (13) ಮನೆ ಕುಸಿತದಿಂದಾಗಿ ಮೃತಪಟ್ಟ ಬಾಲಕಿ. ಮನೆ ಅವಶೇಷಗಳಡಿ ಸಿಲುಕಿದ್ದ ಬಾಲಕಿ ನಿರ್ಮಲಾ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಹಿಂಡಲಗಾ ಕೈದಿ ಹೆಸರಲ್ಲಿ ನಿತಿನ್ ಗಡ್ಕರಿ ಕಚೇರಿಗೆ ಮತ್ತೊಮ್ಮೆ ಜೀವಬೆದರಿಕೆ ಕರೆ

    ಜಿಲ್ಲೆಯಲ್ಲಿ ಮಳೆಯ ಆರ್ಭಟ ನಿಂತಿದ್ದರೂ ಕಳೆದ 3 ದಿನಗಳಿಂದ ಸುರಿದಿದ್ದ ಅಕಾಲಿಕ ಮಳೆಗೆ ಹಳೆಯ ಮಣ್ಣಿನ ಮನೆಗಳು ಶಿಥಿಲಗೊಂಡಿವೆ. ಕುರುವಕಲಾ ಗ್ರಾಮದಲ್ಲಿ ಮನೆ ಹಳೆಯದಾಗಿದ್ದರಿಂದ ಮಳೆಗೆ ಕುಸಿದು ಬಿದ್ದಿದ್ದೆ. ಮನೆಯಲ್ಲಿದ್ದ ಮೃತ ಬಾಲಕಿಯ ತಾಯಿ ಹಾಗೂ ತಂಗಿಗೆ ಗಂಭೀರ ಗಾಯಗಳಾಗಿವೆ.

    ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮುಂಬೈನಿಂದ ಗದಗ ನಗರಕ್ಕೆ ತರುತ್ತಿದ್ದ 4 ಕೆಜಿ ಬಂಗಾರ ಸೀಜ್

  • ಬೆಂಗಳೂರಿನಲ್ಲಿ ತಪ್ಪಿದ ದೊಡ್ಡ ದುರಂತ – ಇದ್ದಕಿದ್ದಂತೆ ಕುಸಿದ ಮನೆ

    ಬೆಂಗಳೂರಿನಲ್ಲಿ ತಪ್ಪಿದ ದೊಡ್ಡ ದುರಂತ – ಇದ್ದಕಿದ್ದಂತೆ ಕುಸಿದ ಮನೆ

    ಬೆಂಗಳೂರು: ಇದ್ದಕ್ಕಿಂದಂತೆ ಮನೆ ಕುಸಿದಿರುವ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್‍ನಲ್ಲಿ ನಡೆದಿದೆ. ಇದನ್ನೂ ಓದಿ: ಕಿರುತೆರೆ ಖಡಕ್ ಖಳನಟ ಈಗ ಬೆಳ್ಳಿತೆರೆಯ ನಾಯಕನಟ – ‘ಬಹುಕೃತಂ ವೇಷಂ’ನಲ್ಲಿ ಶಶಿಕಾಂತ್ ಹೊಸ ಅವತಾರ

    building collapse

    ಈ ಕಟ್ಟಡ ಮಾಲೀಕ ಸುರೇಶ್‍ರವರಿಗೆ ಸೇರಿದ್ದಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆ ಮನೆ ಬಾಗಿತ್ತು. ಅಲ್ಲದೇ ಎರಡು ವಾರದ ಹಿಂದೆ ಕಟ್ಟದಲ್ಲಿ ವಾಸವಾಗಿದ್ದ ಎಲ್ಲರನ್ನು ಖಾಲಿ ಮಾಡಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಮನೆ ವಾಲುವುದಕ್ಕೆ ಪ್ರಾರಂಭವಾಗಿದೆ. ವಿಚಾರ ತಿಳಿದು ಸ್ಥಳೀಯ ನಿವಾಸಿಗಳು ಕೂಡಲೇ ಹೊರಗೆ ಓಡಿ ಬಂದಿದ್ದಾರೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸುವಷ್ಟರಲ್ಲಿ ಮನೆ ಕುಸಿದು ಬಿದ್ದಿದೆ.

    building collapse

    ಈ ಕಟ್ಟಡದಲ್ಲಿ ಸುಮಾರು 70 ಮಂದಿ ವಾಸವಾಗಿದ್ದು, ಎಲ್ಲರೂ ಮೆಟ್ರೋ ಕಾಮಗಾರಿ ಮಾಡುವ ಕಾರ್ಮಿಕರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆ ನಗರದ ವಿಲ್ಸನ್ ಗಾರ್ಡನ್‍ನ ಲಕ್ಕ ಸಂದ್ರದ 14ನೇ ಕ್ರಾಸ್ ಬಳಿ ನಡೆದಿದೆ. ಇದನ್ನೂ ಓದಿ: ಒಳ ಉಡುಪು ಜಾಹೀರಾತಿನಲ್ಲಿ ಅಭಿನಯ – ಟ್ರೋಲ್ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ಸದ್ಯ ಸ್ಥಳಕ್ಕೆ ಬಿಬಿಎಂಪಿ ಜಂಟಿ ಆಯುಕ್ತ ವೀರಭದ್ರಯ್ಯ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಬಿಲ್ಡಿಂಗ್ ಗೆ ಎಲ್ಲೂ ಡ್ಯಾಮೇಜ್ ಆಗಿಲ್ಲ. ಇದು ಕೇವಲ ಹಳೇ ಬಿಲ್ಡಿಂಗ್ ಎಂದು ರಿಪೋರ್ಟ್‍ನಲ್ಲಿ ತಿಳಿಸಿರುವುದಾಗಿ ಹೇಳಿದ್ದಾರೆ.

  • ಭಾರೀ ಮಳೆಗೆ ಮನೆ ಕುಸಿತ- ತಂದೆ, ಮಗ ಸಾವು

    ಭಾರೀ ಮಳೆಗೆ ಮನೆ ಕುಸಿತ- ತಂದೆ, ಮಗ ಸಾವು

    – ತಾಯಿ, ಮಗಳು ಪಾರು

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹಲವು ಅನಾಹುತಗಳು ಸಂಭವಿಸಿದ್ದು, ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ತಂದೆ ಮಗ ಸಾವನ್ನಪ್ಪಿದ್ದು, ತಾಯಿ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಜಿಲ್ಲೆಯ ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಭಾರೀ ಮಳೆಯಿಂದಾಗಿ ಇಂದು ಬೆಳಗಿನ ಜಾವ 6.30ರ ಸುಮಾರಿಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಮನೆಯ ಯಜಮಾನ ರವಿಕುಮಾರ್ (42), ಮಗ ರಾಹುಲ್ (15) ಮೃತಪಟ್ಟಿದ್ದಾರೆ. ಮೃತ ರವಿಕುಮಾರ್ ಪತ್ನಿ ಮುನಿರಾಜಮ್ಮ ಹಾಗೂ ಮಗಳು ರುಚಿತಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಗಾಯಾಳುಗಳಿಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮನೆ ಕುಸಿತವಾಗುತ್ತಿದ್ದಂತೆ ನೆರೆ ಹೊರೆಯವರು ಗಮನಿಸಿದ್ದು, ತಕ್ಷಣವೇ ನಾಲ್ವರನ್ನೂ ಅವಶೇಷಗಳಿಂದ ಹೊರ ತೆಗೆದಿದ್ದಾರೆ. ಆದರೆ ಕೆಲಸ ವೇಗವಾಗದ ಹಿನ್ನೆಲೆ ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಕೊನೆಗೆ ಸ್ಥಳಕ್ಕೆ ಬಂದ ಆಗ್ನಿಶಾಮಕ ದಳ ಸಿಬ್ಬಂದಿ ನಾಲ್ವರನ್ನು ಹೊರತೆಗೆದಿದ್ದಾರೆ. ಈ ವೇಳೆ ತಂದೆ ಮಗ ಸಾವನ್ನಪ್ಪಿರುವುದು ತಿಳಿದಿದೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಳೆಯಿಂದ ರೈತ ಮಹಿಳೆಯ ಮನೆ ಕುಸಿತ – ಎತ್ತುಗಳಿಗೆ ಗಾಯ, 3 ಮೇಕೆ ಸಾವು

    ಮಳೆಯಿಂದ ರೈತ ಮಹಿಳೆಯ ಮನೆ ಕುಸಿತ – ಎತ್ತುಗಳಿಗೆ ಗಾಯ, 3 ಮೇಕೆ ಸಾವು

    ಹಾಸನ: ನಿರಂತರ ಮಳೆಯಿಂದ ರೈತ ಮಹಿಳೆಯ ಮನೆ ಮತ್ತು ಕೊಟ್ಟಿಗೆ ಕುಸಿದು ಬಿದ್ದಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಪುಟ್ಟಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

    ಮಳೆಗೆ ಸಂಪೂರ್ಣ ಮನೆ ಕುಸಿದು ಬಿದಿದ್ದು, ಈ ವೇಳೆ ಕೊಟ್ಟಿಗೆಯಲ್ಲಿದ್ದ ಮೂರು ಮೇಕೆ ಸಾವನ್ನಪ್ಪಿವೆ ಜೊತೆಗೆ ಎರಡು ಎತ್ತುಗಳಿಗೆ ಗಾಯವಾಗಿದೆ. ಆದರೆ ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಣಾಪಾಯದಿಂದ ಪಾರಾಗಿದ್ದಾರೆ.

    ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗಿದ್ದ ಪರಿಣಾಮ ಶಿಥಿಲಗೊಂಡಂತಾಗಿದ್ದ, ರೈತ ಮಹಿಳೆ ಜಯಮ್ಮ ಅವರ ಮನೆ ಮತ್ತು ಕೊಟ್ಟಿಗೆ ಕುಸಿದು ಬಿದ್ದಿದೆ. ಪರಿಣಾಮ ಕೊಟ್ಟಿಗೆಯೊಳಗಿದ್ದ ಮೂರು ಮೇಕೆ ಸಾವನ್ನಪ್ಪಿವೆ. ಆಶ್ರಯವಾಗಿದ್ದ ಮನೆ ಮತ್ತು ಜೀವನಾಧಾರವಾಗಿದ್ದ ಮೇಕೆಗಳ ಸಾವಿನಿಂದ ರೈತ ಮಹಿಳೆ ಕಂಗಾಲಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.