Tag: ಮನೆ ಕಾಂಪೌಂಡ್

  • ಮನೆಯ ಕಾಂಪೌಡ್‍ನಲ್ಲಿ ಕಟ್ಟಿ ಹಾಕಿದ್ದ ನಾಯಿ ಹೊತ್ತೊಯ್ದ ಚಿರತೆ

    ಮನೆಯ ಕಾಂಪೌಡ್‍ನಲ್ಲಿ ಕಟ್ಟಿ ಹಾಕಿದ್ದ ನಾಯಿ ಹೊತ್ತೊಯ್ದ ಚಿರತೆ

    ಹಾಸನ: ಮನೆಯ ಕಾಂಪೌಡ್‍ನಲ್ಲಿ ಚೈನ್‍ನಿಂದ ಕಟ್ಟಿ ಹಾಕಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ.

    ಶ್ರೀಕಂಠನಗರ ಬಡಾವಣೆಯ ಪುಟ್ಟಸ್ವಾಮಿ ಅವರಿಗೆ ಸೇರಿದ ನಾಯಿಯನ್ನು ಕಾಂಪೌಡ್‍ನಲ್ಲಿ ಕಟ್ಟಿದ್ದರು. ತಡರಾತ್ರಿ ಒಂದು ಗಂಟೆ ಸುಮಾರಿಗೆ ಬಂದಿರುವ ಚಿರತೆ ಕೆಲಕಾಲ ಹೊಂಚುಹಾಕಿ ನಂತರ ನಾಯಿಯನ್ನು ಹೊತ್ತೊಯ್ಯಲು ಪ್ರಯತ್ನಪಟ್ಟಿದೆ. ಬಾಕ್ಸ್‍ಗೆ ಚೈನ್‍ನಿಂದ ನಾಯಿ ಕಟ್ಟಿಹಾಕಿದ್ದರಿಂದ ನಾಯಿಯನ್ನು ಎಳೆದೊಯ್ಯಲು ಹರಸಾಹಸಪಟ್ಟಿದೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯ ಪರಿಚಯವನ್ನು ಸ್ವತಃ ಸುದೀಪ್ ಅವರಿಂದಲೇ ಕೇಳಿ..

    ಕೊನೆಗೂ ಚಿರತೆ ನಾಯಿಯನ್ನು ಸಾಯಿಸಿ ಕಚ್ಚಿಕೊಂಡು ಬೈಕ್ ಮೇಲೆ ಹತ್ತಿ ಹೋಗಿದೆ. ಈ ವೇಳೆ ಬೈಕ್ ಕೆಳಕ್ಕೆ ಬಿದ್ದಿದೆ. ಚಿರತೆ ನಾಯಿಯನ್ನು ಹೊತ್ತೊಯ್ಯುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಪಲ್ಲವಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಇದನ್ನೂ ಓದಿ: ನಡೆಯುತ್ತಿದ್ದಂತೆ ಕುಸಿದ ಫುಟ್‍ಪಾತ್ – ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪಾರು

    ಬೆಟ್ಟದ ಚಿರತೆಗಳು ಹೆಚ್ಚು ವಾಸಿಸುತ್ತಿದ್ದು ರಾತ್ರಿ ವೇಳೆ ಶ್ರವಣಬೆಳಗೊಳ ಪಟ್ಟಣಕ್ಕೆ ಬಂದು ನಾಯಿಗಳನ್ನು ಹೊತ್ತೊಯ್ದು ತಿಂದು ಹಾಕುತ್ತಿವೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಶ್ರವಣಬೆಳಗೊಳಕ್ಕೆ ಭೇಟಿ ನೀಡುತ್ತಾರೆ. ಆದ್ದರಿಂದ ಚಿರತೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಿನ್ನ, ಬೆಳ್ಳಿ, ಹಣ ಬಿಟ್ಟು ಫ್ಲವರ್ ಪಾಟ್ ಕದ್ದೊಯ್ದ ಕಳ್ಳ

    ಚಿನ್ನ, ಬೆಳ್ಳಿ, ಹಣ ಬಿಟ್ಟು ಫ್ಲವರ್ ಪಾಟ್ ಕದ್ದೊಯ್ದ ಕಳ್ಳ

    ಹಾಸನ: ಹಾಸನದಲ್ಲೊಬ್ಬ ಕಳ್ಳ ಚಿನ್ನ, ಬೆಳ್ಳಿ, ಹಣ ಬಿಟ್ಟು ಫ್ಲವರ್ ಪಾಟ್ ಕದಿಯುತ್ತಿದ್ದು, ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ:  ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಎದುರಲ್ಲೇ ಶಾಸಕಿ ರೂಪಾಲಿ ನಾಯ್ಕ್ ಗರಂ

    Thief Flower Pot

    ರಾತ್ರಿ ವೇಳೆ ನಿಧಾನವಾಗಿ ಮನೆಯ ಕಾಂಪೌಂಡ್ ಆವರಣಕ್ಕೆ ಬರುವ ಕಳ್ಳ, ಒಳಗೆ ಮಲಗಿರುವ ಮನೆಯವರಿಗೆ ತಿಳಿಯದಂತೆ ಫ್ಲವರ್ ಪಾಟ್ ಕದ್ದು ಪರಾರಿಯಾಗಿದ್ದಾನೆ. ಹಾಸನ ನಗರದ ಸಂಗಮೇಶ್ವರ ಬಡಾವಣೆಯ ಒಂದನೇ ಹಂತದಲ್ಲಿರುವ ಸುಮಾರು ಮೂರು ಮನೆಯಲ್ಲಿ ಕಳ್ಳತನ ನಡೆದಿದೆ. ಕಳ್ಳರು ಒಂದೇ ದಿನ ಸುಮಾರು ಮೂವತ್ತಕ್ಕೂ ಹೆಚ್ಚು ಫ್ಲವರ್ ಪಾಟ್ ಕದ್ದೊಯ್ದಿದ್ದಾರೆ.

    Thief Flower Pot

    ಬೆಳಗಿನ ಜಾವ 3.41ರ ಸಮಯದಲ್ಲಿ ಕಳ್ಳತನ ನಡೆದಿದ್ದು, ಕಳ್ಳತನ ಮಾಡುತ್ತಿರುವ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದಷ್ಟು ಬೇಗ ಪಾಟ್ ಕಳ್ಳರನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಪೆನ್‍ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.  ಇದನ್ನೂ ಓದಿ:  ತಪ್ಪು ಕಲ್ಪನೆಗಳಿಂದ ಭಾರತ್ ಬಂದ್ ಕರೆ ನೀಡಲಾಗಿದೆ: ಲಕ್ಷ್ಮಣ್ ಸವದಿ