Tag: ಮನೆದೇವ್ರು ಸೀರಿಯಲ್‌

  • ಕೂಸು ಹುಟ್ಟುವ ಮೊದಲೇ ಹೆಣ್ಣು ಎಂದು ಬೇಬಿ ಶವರ್ ಆಚರಿಸಿದ ನಟಿ ಅರ್ಚನಾ

    ಕೂಸು ಹುಟ್ಟುವ ಮೊದಲೇ ಹೆಣ್ಣು ಎಂದು ಬೇಬಿ ಶವರ್ ಆಚರಿಸಿದ ನಟಿ ಅರ್ಚನಾ

    ‘ಮನೆದೇವ್ರು’ (Manedevaru) ನಟಿ ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ (Lakshmi Narasimhaswamy) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಕೂಸು ಹುಟ್ಟುವ ಮೊದಲೇ ಹೆಣ್ಣು ಎಂದು ಘೋಷಿಸಿ ಬೇಬಿ ಶವರ್ (Baby Shower)  ಆಚರಿಸಿಕೊಂಡಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.

    ಸದ್ಯ ಅರ್ಚನಾ, ಪತಿ ವಿಘ್ನೇಶ್ ಶರ್ಮಾ (Vignesh Sharma) ಜೊತೆ ವಿದೇಶದಲ್ಲಿ ಸೆಟೆಲ್ ಆಗಿದ್ದಾರೆ. ಇತ್ತೀಚಿಗಷ್ಟೇ ಅವರಿಗೆ ಸೀಮಂತ ಶಾಸ್ತ್ರ ಅದ್ದೂರಿಯಾಗಿ ಮಾಡಿದ್ದರು. ಅಲ್ಲಿ ಮಗುವಿನ ಲಿಂಗ ಪತ್ತೆ ಹಚ್ಚಿದ ನಂತರ ಬೇಬಿ ಶವರ್‌ನಲ್ಲಿ ಹೆಣ್ಣು ಮಗು ಎಂದು ಖುಷಿಯಿಂದ ಅನೌನ್ಸ್ ಮಾಡಿದ್ದಾರೆ.

    ಕುಟುಂಬ, ಆತ್ಮೀಯರ ಜೊತೆ ಬೇಬಿ ಶವರ್‌ನಲ್ಲಿ ಪಿಂಕ್ ಬಣ್ಣದ ಉಡುಗೆಯಲ್ಲಿ ನಟಿ ಮಿಂಚಿದ್ದಾರೆ. ಬೇಬಿ ಶರ್ಮಾ ನಿನಗೆ ಸ್ವಾಗತ ಎಂದು ಬೋರ್ಡ್ ಹಿಂದೆ ನಿಂತು ಕ್ಯಾಮೆರಾಗೆ ಅರ್ಚನಾ ದಂಪತಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಡಾ.ವಿಷ್ಣುವರ್ಧನ್ ಆಪ್ತ, ನಿರ್ದೇಶಕ ವಿ.ಆರ್. ಭಾಸ್ಕರ್ ನಿಧನ

    ಕೆಲ ವರ್ಷಗಳ ಹಿಂದೆ ವಿಘ್ನೇಶ್ ಶರ್ಮಾ ಜೊತೆ ನಟಿ ಅರ್ಚನಾ ಮದುವೆಯಾದರು. ಗುರುಹಿರಿಯರ ಸಮ್ಮತಿಸಿದ ಮದುವೆಯಾಗಿತ್ತು. ಕಳೆದ ಜೂನ್‌ನಲ್ಲಿ ತಾವು ತಾಯಿಯಾಗ್ತಿರುವ ಗುಡ್ ನ್ಯೂಸ್ ನಟಿ ಹಂಚಿಕೊಂಡಿದ್ದರು. ಮನೆಗೆ ಆಗಮನವಾಗುತ್ತಿರೋ ಹೊಸ ಅತಿಥಿಗೆ ಈ ಜೋಡಿ ಕಾಯ್ತಿದೆ. ಇದನ್ನೂ ಓದಿ:‘ಫ್ಲರ್ಟ್’ ಮಾಡಲು ರೆಡಿಯಾದ ನಟ ಚಂದನ್

    ಮಧುಬಾಲ (Madhubala) ಸೀರಿಯಲ್‌ನಲ್ಲಿ ವಿಲನ್ ಆಗಿ ಅರ್ಚನಾ (Archana) ನಟಿಸಿದ್ದರು. ಬಳಿಕ ಮನೆದೇವ್ರು ಸೀರಿಯಲ್‌ನಲ್ಲಿ ನಾಯಕಿಯಾಗಿ ಅರ್ಚನಾ ಬಣ್ಣ ಹಚ್ಚಿದ್ದರು. ಪುನೀತ್ ರಾಜ್‌ಕುಮಾರ್ Puneeth Rajkumar) ನಿರ್ಮಾಣದ ಸೀರಿಯಲ್ ಇದಾಗಿತ್ತು. ಪ್ರೋಮೋ ಶೂಟ್‌ನಲ್ಲಿ ಅರ್ಚನಾರನ್ನ ಪರಿಚಯಿಸಿದ್ದರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೇಬಿ ಬಂಪ್ ಫೋಟೋ ಹಂಚಿಕೊಂಡ ‘ಮನೆದೇವ್ರು’ ನಟಿ ಅರ್ಚನಾ

    ಬೇಬಿ ಬಂಪ್ ಫೋಟೋ ಹಂಚಿಕೊಂಡ ‘ಮನೆದೇವ್ರು’ ನಟಿ ಅರ್ಚನಾ

    ಕಿರುತೆರೆ ನಟಿ ಅರ್ಚನಾ(Actress Archana) ಇದೀಗ ಮೊದಲ ಮಗುವಿನ(Baby) ಆಗಮನದ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಕಲರ್‌ಫುಲ್ ಬೇಬಿ ಬಂಪ್ (Baby Bump) ಫೋಟೋಶೂಟ್‌ನಲ್ಲಿ ನಟಿ ಮಿಂಚಿದ್ದಾರೆ. ಈ ಕುರಿತು ಫೋಟೋಗಳನ್ನ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ನಟಿ ಅರ್ಚನಾ ಮದುವೆಯಾದ ಬಳಿಕ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಫಾರಿನ್‌ಲ್ಲಿದ್ರು ನಟಿ ಹಿಂದೂ ಪದ್ಧತಿಯನ್ನ ಫಾಲೋ ಮಾಡ್ತಿದ್ದಾರೆ. ಸದ್ಯ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಹೈಲೆಟ್ ಆಗಿದ್ದಾರೆ.

    ಲೈಟ್ ಹಸಿರು ಬಣ್ಣದ ಗೌನ್ ಧರಿಸಿ, ಪತಿ ಜೊತೆ ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಅರ್ಚನಾ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ.

    ಕೆಲ ವರ್ಷಗಳ ಹಿಂದೆ ವಿಘ್ನೇಶ್ ಶರ್ಮಾ (Vignesh Sharma) ಜೊತೆ ನಟಿ ಅರ್ಚನಾ ಮದುವೆಯಾದರು. ಗುರುಹಿರಿಯರ ಸಮ್ಮತಿಸಿದ ಮದುವೆಯಾಗಿತ್ತು. ಕಳೆದ ಜೂನ್‌ನಲ್ಲಿ ತಾವು ತಾಯಿಯಾಗ್ತಿರುವ ಗುಡ್ ನ್ಯೂಸ್ ನಟಿ ಹಂಚಿಕೊಂಡಿದ್ದರು. ಮನೆಗೆ ಆಗಮನವಾಗುತ್ತಿರೋ ಹೊಸ ಅತಿಥಿಗೆ ಈ ಜೋಡಿ ಕಾಯ್ತಿದೆ. ಇದನ್ನೂ ಓದಿ:ಮದುವೆ ಬಳಿಕ ಅಮೆರಿಕಾಗೆ ಹಾರಿದ ಹರ್ಷಿಕಾ ದಂಪತಿ

    ‘ಮಧುಬಾಲ’ (Madhubala) ಸೀರಿಯಲ್‌ನಲ್ಲಿ ವಿಲನ್ ಆಗಿ ಅರ್ಚನಾ ನಟಿಸಿದ್ದರು. ಬಳಿಕ ‘ಮನೆದೇವ್ರು’ (Mandevaru) ಸೀರಿಯಲ್‌ನಲ್ಲಿ ನಾಯಕಿಯಾಗಿ ಅರ್ಚನಾ ಬಣ್ಣ ಹಚ್ಚಿದ್ದರು. ಪುನೀತ್ ರಾಜ್‌ಕುಮಾರ್ (Puneeth Rajkumar) ನಿರ್ಮಾಣದ ಸೀರಿಯಲ್ ಇದಾಗಿತ್ತು. ಪ್ರೋಮೋ ಶೂಟ್‌ನಲ್ಲಿ ಅರ್ಚನಾರನ್ನ ಪರಿಚಯಿಸಿದ್ದರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಾಯಿಯಾಗುತ್ತಿರುವ ಸಂತಸದಲ್ಲಿ ‘ಮನೆದೇವ್ರು’ ನಟಿ- ಫ್ಲೋರಿಡಾದಲ್ಲಿ ಅರ್ಚನಾ ಬೇಬಿ ಶವರ್ ಪಾರ್ಟಿ

    ತಾಯಿಯಾಗುತ್ತಿರುವ ಸಂತಸದಲ್ಲಿ ‘ಮನೆದೇವ್ರು’ ನಟಿ- ಫ್ಲೋರಿಡಾದಲ್ಲಿ ಅರ್ಚನಾ ಬೇಬಿ ಶವರ್ ಪಾರ್ಟಿ

    ಕಿರುತೆರೆಯ ಸಹಜ ಸುಂದರಿ ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ (Archana Lakshminarasimhaswamy) ಅವರು ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಈಗ ಬೇಬಿ ಶವರ್ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಈ ಕುರಿತ ಪೋಸ್ಟ್ ಎಲ್ಲೆಡೆ ಸದ್ದು ಮಾಡುತ್ತಿದೆ.

    ‘ಮಧುಬಾಲ’ ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟ ನಟಿ ಅರ್ಚನಾ(Actress Archana) ಅವರು ಪುನೀತ್ ರಾಜ್‌ಕುಮಾರ್ ನಿರ್ಮಾಣದ ‘ಮನೆದೇವ್ರು’ (Manedevaru) ಸೀರಿಯಲ್ ನಾಯಕಿಯಾಗಿ ಮಿಂಚಿದ್ದರು. ಅದ್ಭುತ ನಟಿಯಾಗಿ ಗಮನ ಸೆಳೆದರು ಬಳಿಕ ಗುರುಹಿರಿಯರ ಸಮ್ಮುಖದ ಮೇರೆಗೆ ವಿಘ್ನೇಶ್ ಶರ್ಮಾ (Vignesh Sharma) ಜೊತೆ ಹಸೆಮಣೆ ಏರಿದರು. ಈಗ ಫಾರಿನ್‌ನಲ್ಲಿ ಸೆಟಲ್ ಆಗಿದ್ದಾರೆ.

    ಫ್ಲೋರಿಡಾದಲ್ಲಿ ನೆಲೆಸಿರುವ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗ ಅವರು ಪತಿ, ಸ್ನೇಹಿತರು, ಕುಟುಂಬದ ಜೊತೆಗೆ (Gender Reveal Party) ಆಚರಿಸಿಕೊಂಡಿದ್ದಾರೆ. ಏನಿದು ಪಾರ್ಟಿ ಅಂತ ಕೆಲವರಿಗೆ ಸಂದೇಹ ಬಂದಿರಬಹುದು. ವಿದೇಶದಲ್ಲಿ ಮಗುವಿನ ಲಿಂಗವನ್ನು ಊಹಿಸುವ ಪಾರ್ಟಿ ಇದಾಗಿದೆ.

    ಈ ಪಾರ್ಟಿಯಲ್ಲಿ ಮಗುವಿನ ಲಿಂಗ ಪತ್ತೆ ಹಚ್ಚುವ ವೈದ್ಯರು ಕೂಡ ಒಮ್ಮೊಮ್ಮೆ ಭಾಗಿ ಆಗುವುದುಂಟು. ಆದರೆ ಅರ್ಚನಾ ಅವರ ಈ ಪಾರ್ಟಿಯಲ್ಲಿ ವೈದ್ಯರು ಭಾಗಿಯಾಗಿಲ್ಲ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಇದನ್ನೂ ಓದಿ:ಮೆಗಾಸ್ಟಾರ್ ಕುಟುಂಬಕ್ಕೆ ಸೊಸೆಯಾಗಿ ಬರುತ್ತಿರುವ ಲಾವಣ್ಯ ಜಾತಿ ಬಗ್ಗೆ ತಲೆಕೆಡಿಸಿಕೊಂಡ ಫ್ಯಾನ್ಸ್

    ವಿದೇಶಿಗರು ಇದೊಂದು ಫನ್ ಪಾರ್ಟಿ ಎನ್ನುವಂತೆ ಮಾಡಿಕೊಂಡಿದ್ದಾರೆ. ಬೇಬಿ ಶವರ್ (Baby Shower) ಜೊತೆಗೆ ಜೆಂಡರ್ ರಿವೀಲ್ ಪಾರ್ಟಿ ಕೂಡ ಮಾಡುತ್ತಾರೆ. ಆ ಸಂದರ್ಭದಲ್ಲಿ ಕುಟುಂಬಸ್ಥರು, ಆತ್ಮೀಯರನ್ನು ಆಹ್ವಾನಿಸುತ್ತಾರೆ. ಭಾರತದಲ್ಲಿ ಈ ರೀತಿ ಪಾರ್ಟಿ ಮಾಡಲು ಅವಕಾಶವೇ ಇಲ್ಲ. ಸದ್ಯ ಮನೆದೇವ್ರು ನಾಯಕಿ ಮೊದಲ ಮಗುವಿನ ಬರುವಿಕೆಯ ಸಂತಸದಲ್ಲಿದ್ದಾರೆ.