Tag: ಮನೆದೇವ್ರು

  • ‘ಮನೆದೇವ್ರು’ ಧಾರಾವಾಹಿ ನಟಿ ಅರ್ಚನಾ ನಿಶ್ಚಿತಾರ್ಥ

    ‘ಮನೆದೇವ್ರು’ ಧಾರಾವಾಹಿ ನಟಿ ಅರ್ಚನಾ ನಿಶ್ಚಿತಾರ್ಥ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿರ್ಮಾಣದಲ್ಲಿ ಮೂಡಿ ಬಂದಿದ್ದ ‘ಮನೆದೇವ್ರು’ ಧಾರಾವಾಹಿಯಲ್ಲಿ ನಟಿಸಿದ ನಾಯಕಿ ಅರ್ಚನಾ ಲಕ್ಷ್ಮೀನಾರಾಯಣ ಸ್ವಾಮಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಕೆಲವು ದಿನಗಳ ಹಿಂದೆ ನಟಿ ಅರ್ಚನಾ, ವಿಘ್ನೇಶ್ ಶರ್ಮಾ ಅವರ ಜೊತೆ ಮನೆಯವರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ವಿಘ್ನೇಶ್ ಮೂಲತಃ ಬೆಂಗಳೂರಿನವರೇ ಆಗಿದ್ದು, ನ್ಯೂಯಾರ್ಕ್‍ನಲ್ಲಿ ವಾಸವಿದ್ದಾರೆ. ಇನ್ನೂ ಅರ್ಚನಾ ಮೂಲತಃ ಮೈಸೂರಿನವರಾಗಿದ್ದು, 2013ರಲ್ಲಿ ಮಿಸ್ ಕರ್ನಾಟಕ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ನಂತರ ಅಲ್ಲಿಂದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಅಭಿನಯಿಸಲು ಶುರು ಮಾಡಿದ್ದರು.

    ಅರ್ಚನಾ ‘ಮಧುಬಾಲ’, ‘ಮನೆದೇವ್ರು’ ಧಾರಾವಹಿಯಲ್ಲಿ ನಟಿಸಿದ್ದರು. ಬಳಿಕ ‘ನೂರೊಂದು ನೆನಪು’ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.