Tag: ಮನೆಗೆ ಬೆಂಕಿ

  • ನೆಲಮಂಗಲ| ಗ್ಯಾಸ್‌ ಲೀಕೇಜ್‌ನಿಂದ ಹೊತ್ತಿ ಉರಿದ ಬೆಂಕಿ – ಇಬ್ಬರು ಸಾವು

    ನೆಲಮಂಗಲ| ಗ್ಯಾಸ್‌ ಲೀಕೇಜ್‌ನಿಂದ ಹೊತ್ತಿ ಉರಿದ ಬೆಂಕಿ – ಇಬ್ಬರು ಸಾವು

    ನೆಲಮಂಗಲ: ಗ್ಯಾಸ್‌ ಲೀಕೇಜ್‌ನಿಂದ ಮನೆ ಹೊತ್ತಿ ಉರಿದಿದ್ದು, ಇಬ್ಬರು ಸಾವಿಗೀಡಾಗಿರುವ ಘಟನೆ ನೆಲಮಂಗಲದಲ್ಲಿ (Nelamangala) ನಡೆದಿದೆ.

    ನಾಗರಾಜ್ (50), ಶ್ರೀನಿವಾಸ್ (50) ಮೃತ ದುರ್ದೈವಿಗಳು. ಅವಘಡದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನೆಲಮಂಗಲ ಬಳಿಯ ಅಡಕಮಾರನಹಳ್ಳಿ ಓವರ್ ಟ್ಯಾಂಕ್ ಬಳಿ ಅವಘಡ ಸಂಭವಿಸಿದೆ. ಇದನ್ನೂ ಓದಿ: ಬಿಯರ್ ಪ್ರಿಯರಿಗೆ ಮತ್ತೆ ಶಾಕ್ – 20ರೂ. ಹೆಚ್ಚಳಕ್ಕೆ ನಿರ್ಧಾರ!

    ಗಂಗಯ್ಯ ಎಂಬವರಿಗೆ ಸೇರಿದ ಎರಡು ಬಾಡಿಗೆ ಮನೆ ಇವೆ. ಎರಡರಲ್ಲಿ ಒಂದು ಮನೆಯನ್ನ ನಾಗರಾಜ್ ಬಾಡಿಗೆಗೆ ಪಡೆದಿದ್ದರು. ಮೂಲತಃ ಬಳ್ಳಾರಿಯವರಾಗಿದ್ದ ನಾಗರಾಜ್ ಕುಟುಂಬ ಎರಡು ವರ್ಷದ ಹಿಂದೆ ಬಾಡಿಗೆಗೆ ಬಂದಿತ್ತು.

    ನಾಗರಾಜ್ ಪತ್ನಿ ಲಕ್ಷ್ಮಿ ದೇವಿ (35), ಮಕ್ಕಳಾದ ಬಸನಗೌಡ (19), ಅಭಿಷೇಕ್ ಗೌಡ (18) ವಾಸವಾಗಿದ್ದರು. ಬೆಳಗ್ಗೆ ಕೆಲಸಕ್ಕೆಂದು ತೆರಳುತ್ತಿದ್ದ ನಾಗರಾಜ್ ದೇವರಿಗೆ ದೀಪ ಹಚ್ಚಿದ್ದರು. ಖಾಲಿಯಾಗಿದ್ದ ಸಿಲಿಂಡರ್ ಬದಲಾಯಿಸಲು ಎರಡನೇ ಮಗ ಅಭಿಷೇಕ್ ಮುಂದಾಗಿದ್ದರು. ಈ ವೇಳೆ ಸಿಲಿಂಡರ್‌ನಿಂದ ಗ್ಯಾಸ್ ಲೀಕ್ ಆಗಿದ್ದು, ದೀಪದ ಬೆಂಕಿ ತಗುಲಿದೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿಯಲ್ಲಿ ತಂದೆ ಕಳೆದುಕೊಂಡ ಹುಡುಗಿಗೆ ಐಎಸ್‌ಸಿ ಬೋರ್ಡ್‌ ಪರೀಕ್ಷೆಯಲ್ಲಿ ಶೇ.87 ಅಂಕ

    ಮನೆ ಹೊತ್ತಿ ಉರಿದಿದ್ದು ನಾಗರಾಜ್, ಲಕ್ಷ್ಮಿದೇವಿ, ಬಸವನಗೌಡ, ಅಭಿಷೇಕ್‌ಗೂ ಬೆಂಕಿ ಅವಘಡಕ್ಕೆ ಸಿಲುಕಿದ್ದರು. ಕೂಡಲೇ ಎಲ್ಲರನ್ನೂ ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದರು. ಅಭಿಷೇಕ್, ಶಿವಶಂಕರ್, ಲಕ್ಷ್ಮೀದೇವಿ ಹಾಗೂ ಬಸವ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮದುವೆಯಾಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯ ಮನೆ, ಆಟೋಗೆ ಬೆಂಕಿ ಹಚ್ಚಿದ ಮಹಿಳೆ!

    ಮದುವೆಯಾಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯ ಮನೆ, ಆಟೋಗೆ ಬೆಂಕಿ ಹಚ್ಚಿದ ಮಹಿಳೆ!

    ಬೀದರ್: ಮದುವೆಯಾಗಲು ನಿರಾಕರಿಸಿದ ವ್ಯಕ್ತಿಯ ಮನೆ ಹಾಗೂ ಆಟೋಗೆ ಮಹಿಳೆ ಬೆಂಕಿ ಹಚ್ಚಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಾಗ್ ಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ.

    ಭೀಮರಾವ್ ಎಂಬಾತ ಸುಮಾ ಎಂಬ ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ್ದರು. ಈ ಸಿಟ್ಟಿನಿಂದ ಊರು ಬಿಟ್ಟರೂ ವ್ಯಕ್ತಿ ನೆಲೆಸಿದ್ದ ಸ್ಥಳಕ್ಕೆ ಹೋಗಿ ಮಹಿಳೆ ಮನೆ ಹಾಗೂ ಆಟೋಗೆ ಬೆಂಕಿ ಹಾಕಿದ್ದಾಳೆ. ಇದನ್ನೂ ಓದಿ: ಹೆಂಡತಿ, ಮಗುವನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂ. ಬಹುಮಾನ

    ಮೂಲತಃ ಚಿಕನಾಗಾಂವ್ ಗ್ರಾಮದ ನಿವಾಸಿಯಾಗಿದ್ದ ಭೀಮರಾವ್ ಕೆಲವು ದಿನಗಳಿಂದ ಸಸ್ತಾಪೂರ್ ಗ್ರಾಮದ ಸಮೀಪದ ಅಡವಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದ. ಈ ವೇಳೆ ಸುಮಾ ಎಂಬ ಮಹಿಳೆ ಪರಿಚಯವಾಗಿದ್ದಾಳೆ. ತನ್ನನ್ನು ಮದುವೆಯಾಗುವಂತೆ ಭೀಮರಾವ್‌ನನ್ನು ಸುಮಾ ಒತ್ತಾಯಿಸಿದ್ದಾಳೆ. ಆಕೆಯ ಕಾಟ ತಾಳಲಾರದೇ ಭೀಮರಾವ್ ತನ್ನ ತಾಯಿ ತವರು ಬಾಗ್ ಹಿಪ್ಪರಗಾ ಗ್ರಾಮದಲ್ಲಿ ವಾಸವಾಗಿದ್ದ.

    ಈ ವಿಷಯ ತಿಳಿದು ಮಹಿಳೆ ಬಾಗ್ ಹಿಪ್ಪರಗಾ ಗ್ರಾಮಕ್ಕೆ ತೆರಳಿ ಮದುವೆ ಮಾಡಿಕೊಳ್ಳಬೇಕು ಎಂದು ಸತಾಯಿಸಿದ್ದಾಳೆ. ಇಲ್ಲದಿದ್ದರೆ ನಾನು ನೀಡಿರುವ 4 ಲಕ್ಷ ರೂ. ವಾಪಸ್‌ ಕೊಡುವಂತೆ ಒತ್ತಾಯಿಸಿದ್ದಾಳೆ. ಇದಕ್ಕೆ ಭೀಮರಾವ್‌ ಒಪ್ಪದೇ ಇದ್ದಾಗ ಇಬ್ಬರ ಸಹಾಯದಿಂದ ಮನೆ ಹಾಗೂ ಆಟೋಗೆ ಮಹಿಳೆ ಬೆಂಕಿ ಹಾಕಿದ್ದಾಳೆ. ಈ ಸಂಬಂಧ ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೃತ ತಾಯಿಯ ತೋಳುಗಳಲ್ಲಿ 2 ರಾತ್ರಿಗಳನ್ನು ಕಳೆದ 3 ರ ಬಾಲಕಿ!