Tag: ಮನೀಷ್ ಸಿಸೋಡಿಯಾ

  • Delhi Assembly Election | 20 ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟಿಸಿದ ಆಪ್

    Delhi Assembly Election | 20 ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟಿಸಿದ ಆಪ್

    – ಮನೀಷ್ ಸಿಸೋಡಿಯಾ ಕ್ಷೇತ್ರ ಬದಲಾವಣೆ

    ನವದೆಹಲಿ: ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಗೆ (Delhi Assembly Election) ಆಮ್ ಆದ್ಮಿ ಪಕ್ಷ (Aam Aadmi Party) 20 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮನೀಷ್ ಸಿಸೋಡಿಯಾ (Manisha Sisodia) ಅವರ ಕ್ಷೇತ್ರದಲ್ಲಿ ಬದಲಾವಣೆಯಾಗಿದೆ.

    70 ವಿಧಾನಸಭಾ ಕ್ಷೇತ್ರಗಳಿಗೆ 2025ರ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದ್ದು, ಇಂದು (ಡಿ.9) ಆಮ್ ಆದ್ಮಿ ಪಕ್ಷ 20 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದಕ್ಕೂ ಮುಂಚೆ ನ.21 ರಂದು 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು.ಇದನ್ನೂ ಓದಿ: 5 ದಿನಗಳ ವ್ರತ ಆಚರಣೆ – ಹನುಮ ಮಾಲೆ ಧರಿಸಿದ ಜನಾರ್ದನ ರೆಡ್ಡಿ

    ಮಾಜಿ ಡಿಸಿಎಂ ಹಾಗೂ ಪಕ್ಷದ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರು ದೆಹಲಿಯ ಪಟ್ಪರ್‌ಗಂಜ್ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಈ ಬಾರಿ ಜಂಗ್‌ಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಇತ್ತೀಚೆಗೆ ಎಎಪಿ ಸೇರ್ಪಡೆಗೊಂಡಿದ್ದ ಅವಧ್ ಓಜಾ ಪಟ್ಪರ್‌ಗಂಜ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

    ಶಹದಾರದಿಂದ ಕ್ಷೇತ್ರದಿಂದ ಜಿಂಟೆಂಡರ್ ಸಿಂಗ್ ಶುಂಟಿ, ಇತ್ತೀಚೆಗೆ ಬಿಜೆಪಿ ತೊರೆದು ಆಪ್ ಸೇರಿದ್ದ ಸುರೀಂದರ್ ಪಾಲ್ ಸಿಂಗ್ ಬಿಟ್ಟು ಅವರು ತಿಮಾರ್‌ಪುರ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಮೊದಲು ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬಿಟ್ಟು ಎಎಪಿ ಸೇರಿದ್ದ 6 ನಾಯಕರು ಸೇರಿದಂತೆ ಒಟ್ಟು 11 ಅಭ್ಯರ್ಥಿಗಳ ಹೆಸರಿತ್ತು. ಬಿಜೆಪಿಯಿಂದ ಬ್ರಹ್ಮ ಸಿಂಗ್ ತನ್ವಾರ್, ಬಿಬಿ ತ್ಯಾಗಿ, ಅನಿಲ್ ಝಾ ಹಾಗೂ ಕಾಂಗ್ರೆಸ್‌ನಿಂದ ಜುಬೇರ್ ಚೌಧರಿ, ವೀರ್ ಸಿಂಗ್ ದಿಂಗನ್, ಸೋಮೇಶ್ ಶೋಕೀನ್ ಆಮ್ ಆದ್ಮಿ ಪಕ್ಷವನ್ನು ಸೇರಿದ್ದರು. ಇವರನ್ನು ಒಳಗೊಂಡಂತೆ ರಾಮ್ ಸಿಂಗ್ ನೇತಾಜಿ, ಗೌರವ್ ಶರ್ಮಾ, ಮನೋಜ್ ತ್ಯಾಗಿ, ದೀಪಕ್ ಸಿಂಘಾಲ್ ಹಾಗೂ ಸರಿತಾ ಸಿಂಗ್‌ರವರ ಹೆಸರು ಪಟ್ಟಿಯಲ್ಲಿದೆ.

    ಸದ್ಯ 70 ವಿಧಾನಸಭಾ ಕ್ಷೇತ್ರಗಳ ಪೈಕಿ 31 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದು, ಇನ್ನೂ 39 ಕ್ಷೇತ್ರಗಳಿಗೆ ಘೋಷಣೆ ಮಾಡಬೇಕಿದೆ.ಇದನ್ನೂ ಓದಿ:ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಅವಿರೋಧ ಆಯ್ಕೆ

  • ಕೆಲ ತಿಂಗಳು ಜೈಲಲ್ಲಿದ್ರೂ I Don’t Care- ವಿಚಾರಣೆಗೆ ಸಿಬಿಐ ಕಚೇರಿ ತಲುಪಿದ ಸಿಸೋಡಿಯಾ

    ಕೆಲ ತಿಂಗಳು ಜೈಲಲ್ಲಿದ್ರೂ I Don’t Care- ವಿಚಾರಣೆಗೆ ಸಿಬಿಐ ಕಚೇರಿ ತಲುಪಿದ ಸಿಸೋಡಿಯಾ

    ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದ (Delhi excise policy case) ತನಿಖೆಯ ಭಾಗವಾಗಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರು ಭಾನುವಾರ ಬೆಳಗ್ಗೆ ತಮ್ಮ ನಿವಾಸದಿಂದ ಸಿಬಿಐ ಕಚೇರಿಗೆ ವಿಚಾರಣೆಗೆ ತೆರಳಿದ್ದಾರೆ.

    ಕೇಂದ್ರೀಯ ತನಿಖಾ ಸಂಸ್ಥೆ (CBI) ಅವರ ವಿಚಾರಣೆ ನಡೆಸುವುದಕ್ಕೂ ಮುಂಚಿತವಾಗಿ ಸಿಸೋಡಿಯಾ ಅವರ ನಿವಾಸದಿಂದ ಕಚೇರಿಯುದ್ದಕ್ಕೂ ಆಮ್ ಆದ್ಮಿ ಪಕ್ಷದ (AAP) ಬೆಂಬಲಿಗರು ಫಲಕಗಳನ್ನು ಹಿಡಿದುಕೊಂಡು ಅವರೊಂದಿಗೆ ಮೆರವಣಿಗೆ ತೆರಳಿದ್ದಾರೆ. ಸಿಬಿಐ ಕಚೇರಿ ಆವರಣದ ಸುತ್ತಲೂ ಬೆಂಬಲಿಗರು ಜಮಾಯಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಸಿಬಿಐ ಮನೀಶ್ ಸಿಸೋಡಿಯಾ ಅವರಿಗೆ ಫೆಬ್ರವರಿ 19 ರಂದು ವಿಚಾರಣೆಗೆ ಹಾಜರಾಗುವಂತೆ ಕರೆ ನೀಡಿತ್ತು. ಆದರೆ ಅವರು ರಾಜ್ಯ ಬಜೆಟ್‌ನಲ್ಲಿ ನಿರತರಾಗಿದ್ದರಿಂದ ಅದನ್ನು ಮುಂದೂಡಲಾಗಿತ್ತು. ಭಾನುವಾರ ವಿಚಾರಣೆಗೆ ತೆರಳುವುದಕ್ಕೂ ಮುನ್ನ ಸಿಸೋಡಿಯಾ ತಾವು ಕೆಲ ತಿಂಗಳು ಜೈಲಿಗೆ ಹೋಗಲು ಸಿದ್ಧ ಎಂದು ಹೇಳಿದ್ದಾರೆ. ಇದನ್ನೂ ಓದಿ: PublicTV Explainer: ಕರಗುತ್ತಿವೆ ಹಿಮಸರೋವರಗಳು – ಭಾರತ, ಪಾಕಿಸ್ತಾನದ ಜನರಿಗೆ ಕಾದಿದೆ ಪ್ರವಾಹದ ಅಪಾಯ!

    ಇಂದು ನಾನು ಮತ್ತೊಮ್ಮೆ ಸಿಬಿಐ ವಿಚಾರಣೆಗೆ ತೆರಳುತ್ತಿದ್ದೇನೆ. ನಾನು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ಲಕ್ಷಾಂತರ ಮಕ್ಕಳ ಪ್ರೀತಿ ಹಾಗೂ ಕೋಟ್ಯಂತರ ದೇಶ ವಾಸಿಗಳ ಆಶೀರ್ವಾದ ನನ್ನೊಂದಿಗಿದೆ. ನಾನು ಕೆಲವು ತಿಂಗಳು ಜೈಲಿನಲ್ಲಿ ಇರಬೇಕಾಗಿ ಬಂದರೂ ನನಗೆ ಚಿಂತೆಯಿಲ್ಲ ಎಂದು ಸಿಸೋಡಿಯಾ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

    ಸಿಬಿಐ ವಿಚಾರಣೆಯ ಬಳಿಕ ಸಿಸೋಡಿಯಾ ಅವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರಿಗೆ ಲಕ್ಷಗಳ ರೂಪದಲ್ಲಿ ನೆರವಿನ ಹಸ್ತಚಾಚಿದ ನಟ ಅನುಪಮ್ ಖೇರ್

  • ಆಪ್ ಸರ್ಕಾರದ ವಿರುದ್ಧ ಎಲ್‍ಜಿ ವಾರ್ – ಮನೀಷ್ ಸಿಸೋಡಿಯಾ ವಿರುದ್ಧ ತನಿಖೆಗೆ ಸೂಚನೆ

    ಆಪ್ ಸರ್ಕಾರದ ವಿರುದ್ಧ ಎಲ್‍ಜಿ ವಾರ್ – ಮನೀಷ್ ಸಿಸೋಡಿಯಾ ವಿರುದ್ಧ ತನಿಖೆಗೆ ಸೂಚನೆ

    ನವದೆಹಲಿ: ಆಡಳಿತರೂಢ ದೆಹಲಿ ಸರ್ಕಾರ ವಿರುದ್ಧ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ (Vinai Kumar Saxena) ಆಂತರಿಕ ಯುದ್ಧ ಮುಂದುವರಿಸಿದ್ದಾರೆ. ದೆಹಲಿ ಜಲ ಮಂಡಳಿಯಲ್ಲಿ (Jal Board) ನಡೆದಿರುವ 20 ಕೋಟಿ ರೂ. ಅಕ್ರಮದ ಬಗ್ಗೆ ತನಿಖೆ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

    ದೆಹಲಿ ಜಲ ಬೋರ್ಡ್‍ನಲ್ಲಿ ಅಧಿಕಾರಿಗಳ ಸಹಾಯದಿಂದ ಡಿಸಿಎಂ ಮನೀಷ್ ಸಿಸೋಡಿಯಾ (Manish Sisodia) ಅಕ್ರಮ ನಡೆಸಿದ್ದು ಅಧಿಕಾರಿಗಳ ವಿರುದ್ಧ ಎಫ್‍ಐಆರ್ (FIR) ದಾಖಲಿಸಿ ತನಿಖೆ ನಡೆಸಿ ಹದಿನೈದು ದಿನಗಳಲ್ಲಿ ಕ್ರಮದ ಬಗ್ಗೆ ವರದಿ ನೀಡುವಂತೆ ಅವರು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಶಾಲೆ ಕ್ಲೋಸ್ ಮಾಡಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ: ಬಿ.ಸಿ ನಾಗೇಶ್

    ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷ ಮತ್ತು ಎಎಪಿ (AAP) ಶಾಸಕ ಸೌರಭ್ ಭಾರದ್ವಾಜ್, ಎಲ್ಲಾ ರೀತಿಯ ತನಿಖೆಗಳನ್ನು ನಾವು ಸ್ವಾಗತಿಸುತ್ತೇವೆ. ಮನೀಶ್ ಸಿಸೋಡಿಯಾ ಕೂಡ ಈ ರೀತಿಯ ತನಿಖೆಗೆ ಶಿಫಾರಸು ಮಾಡಿದ್ದರು ಎಂದು ಹೇಳಿದ್ದಾರೆ. ದೆಹಲಿ ಜಲ ಮಂಡಳಿ ಗ್ರಾಹಕರಿಂದ 20 ಕೋಟಿ ರೂಪಾಯಿಯಷ್ಟು ನೀರಿನ ಬಿಲ್ ಸಂಗ್ರಹಿಸಿದೆ, ಈ ಹಣವನ್ನು ಹಲವಾರು ವರ್ಷಗಳಿಂದ ಜಲ ಮಂಡಳಿ ಬ್ಯಾಂಕ್ ಖಾತೆಗೆ ಬದಲಾಗಿ ಖಾಸಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನೀರಿನ ಬಿಲ್ ಸಂಗ್ರಹಿಸಲು ಕಾರ್ಪೊರೇಷನ್ ಬ್ಯಾಂಕ್‍ಗೆ ಅನುಮತಿ ನೀಡಲಾಗಿತ್ತು. ಇದನ್ನೂ ಓದಿ: ಕರಾಟೆ ಕ್ಲಾಸ್‌ನಲ್ಲಿ ನಡೀತಿತ್ತು PFI ಉಗ್ರ ಚಟುವಟಿಕೆಯ ರಣತಂತ್ರ – NIA ದಾಳಿಗೂ ಅದೇ ಕಾರಣ

    ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಲ ಮಂಡಳಿ ಅಧ್ಯಕ್ಷರಾಗಿದ್ದಾಗ 2019 ಅಕ್ಟೋಬರ್ 10ರ ಬಳಿಕ ಬ್ಯಾಂಕ್‍ನ ಒಪ್ಪಂದವನ್ನು ವಿಸ್ತರಿಸುವಾಗ ಈ ವ್ಯತ್ಯಾಸ ಮತ್ತು ಅಕ್ರಮಗಳು ಗಮನಕ್ಕೆ ಬಂದಿದ್ದು, ಅದಾಗ್ಯೂ ಕೇಜ್ರಿವಾಲ್ ನೇತೃತ್ವದ ಮಂಡಳಿಯು ಕಾರ್ಪೊರೇಷನ್ ಬ್ಯಾಂಕ್‍ನ ಒಪ್ಪಂದವನ್ನು ಮತ್ತಷ್ಟು ವಿಸ್ತರಿಸಿತ್ತು. ಹೀಗಾಗಿ ಸರ್ಕಾರವು ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಿಬಿಐ ದಾಳಿ ಬೆನ್ನಲ್ಲೇ ಹೊಸ ಮಿಸ್ಡ್‌ಕಾಲ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್

    ಸಿಬಿಐ ದಾಳಿ ಬೆನ್ನಲ್ಲೇ ಹೊಸ ಮಿಸ್ಡ್‌ಕಾಲ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಸಿಬಿಐ ದಾಳಿ ನಡೆಸಿದ ಕೆಲವೇ ಗಂಟೆಗಳ ಬಳಿಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ದೇಶದ 130 ಕೋಟಿ ಜನರಿಗೆ “ಭಾರತವನ್ನು ವಿಶ್ವದ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು” ಒತ್ತಾಯಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ರಾಷ್ಟ್ರವನ್ನು ಪ್ರಗತಿ ಮಾಡಲು ಅವರು ಬಿಡುವುದಿಲ್ಲ” ಎಂದು ಬಿಜೆಪಿಯನ್ನು ಹೆಸರಿಸದೇ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ನಮಗೆ ಕೆಲಸ ಮಾಡಲು ಬಿಡುವುದಿಲ್ಲ, ನಮ್ಮ ರಸ್ತೆಗಳಿಗೆ ಅಡ್ಡಲಾಗುತ್ತಿದ್ದಾರೆ. ಇದರ ಭಾಗವಾಗಿ ಈಗ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದರು.

    ಕಳೆದ 7 ವರ್ಷಗಳಲ್ಲಿ ಅವರು, ನನ್ನ, ಕೈಲಾಶ್ ಗೆಹ್ಲೋಟ್ ಮತ್ತು ಎಎಪಿ ನಾಯಕರ ವಿರುದ್ಧ ಅನೇಕ ದಾಳಿಗಳು ಮತ್ತು ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ ಏನೇ ಅಡ್ಡಿವುಂಟು ಮಾಡಿದರೂ ನಾವು ದೇಶದ ಅಭಿವೃದ್ಧಿಯನ್ನು ಕೈಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಹತ್ಯೆಗೆ RSS, ಬಿಜೆಪಿ ಸಂಚು ಮಾಡಿದೆ: ಶಿವರಾಮ್ ಗಂಭೀರ ಆರೋಪ

    ಬಿಜೆಪಿ ನಡುವಿನ ಉದ್ವಿಗ್ನತೆಯ ನಡುವೆ ಅವರು ಅಮೆರಿಕದ ಅತಿದೊಡ್ಡ ಪತ್ರಿಕೆಯಾದ ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ  ದೆಹಲಿ ಶಿಕ್ಷಣ ಮಾದರಿಯ ವರದಿಯನ್ನು ಪ್ರಕಟಿಸಿರುವ ಬಗ್ಗೆ ಮಾಹಿತಿ ನೀಡಿದರು. ಈ ವರದಿ ದೆಹಲಿ ಸರ್ಕಾರಿ ಶಾಲೆಗಳಲ್ಲಿ ಕ್ರಾಂತಿಯ ಬಗ್ಗೆ ಮಾತನಾಡಿದೆ. ಇದು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆ ತರುವ ವಿಷಯವಾಗಿದೆ. ನಾನು ಎಲ್ಲರಿಗೂ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಎಂದರು.

    MANISH SISODIA

    ವಿಶ್ವದ ಎಲ್ಲಾ ನಾಯಕರು ವರದಿ ಮಾಡಲು ಬಯಸುವ ಪತ್ರಿಕೆಯಲ್ಲಿ ಮನೀಷ್ ಸಿಸೋಡಿಯಾ ಅವರ ಫೋಟೋದೊಂದಿಗೆ ವರದಿ ಪ್ರಕಟವಾಗಿದೆ. ಇದರರ್ಥ ಸಿಸೋಡಿಯಾ ಒಂದು ರೀತಿಯಲ್ಲಿ ಅತ್ಯುತ್ತಮ ಶಿಕ್ಷಣ ಸಚಿವ ಎಂದು ಗುರುತಿಸಲ್ಪಟ್ಟಿದ್ದಾರೆ. ಆದರೆ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ದೆಹಲಿ ಡಿಸಿಎಂ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ – 20 ಕಡೆಗಳಲ್ಲಿ ಶೋಧ

    ನಾವು ಅವರಿಗೆ ದೇಶವನ್ನು ಬಿಟ್ಟರೆ, ಅವರು ದೇಶವನ್ನು ಎಂದಿಗೂ ಪ್ರಗತಿಯಾಗಲು ಬಿಡುವುದಿಲ್ಲ. ನಾವೆಲ್ಲರೂ ಒಟ್ಟಾಗಿ ಸೇರಬೇಕು. ನಾನು ಮಿಸ್ಡ್‌ಕಾಲ್‌ಗಾಗಿ ನಂಬರ್ ನೀಡುತ್ತಿದ್ದೇನೆ. 95100100 ಯಾರು ಬೇಕಾದರೂ ಮಿಸ್ಡ್‌ಕಾಲ್ ಮಾಡಬಹುದು. ಭಾರತ ಬಲಿಷ್ಠ ರಾಷ್ಟ್ರ ಮಿಷನ್‌ಗೆ ಸೇರಿಕೊಳ್ಳಬಹುದು, ನಾವೇಲ್ಲರು ಸೇರಿ ಭಾರತವನ್ನು ವಿಶ್ವದ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೆಹಲಿ ದಂಗೆಗೆ ಸೋನಿಯಾ, ರಾಹುಲ್ ಪ್ರಚೋದನೆ – ಎಫ್‍ಐಆರ್ ದಾಖಲಿಸಲು ಕೇಂದ್ರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

    ದೆಹಲಿ ದಂಗೆಗೆ ಸೋನಿಯಾ, ರಾಹುಲ್ ಪ್ರಚೋದನೆ – ಎಫ್‍ಐಆರ್ ದಾಖಲಿಸಲು ಕೇಂದ್ರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

    ನವದೆಹಲಿ: ದ್ವೇಷದ ಭಾಷಣ ಮಾಡಿ ದೆಹಲಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನೀಷ್ ಸಿಸೋಡಿಯಾ ವಿರುದ್ಧ ಎಫ್‍ಐಆರ್ ದಾಖಲಿಸುವ ಸಂಬಂಧ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ಬಳಿ ಪ್ರತಿಕ್ರಿಯೆ ನೀಡಿದೆ.

    ದೆಹಲಿ ಗಲಭೆಗೆ ರಾಜಕೀಯ ನಾಯಕರ ಪ್ರಚೋದನಾಕಾರಿ ಹೇಳಿಕೆಯೇ ಕಾರಣ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ, ಆಪ್ ಶಾಸಕ ಅಮಾನತುಲ್ಲಾ ಖಾನ್, ಎಐಎಂಐಎಂ ನಾಯಕರಾದ ಅಕ್ಬರುದ್ದೀನ್ ಓವೈಸಿ, ವಾರಿಸ್ ಪಠಾಣ್, ವಕೀಲ ಮೊಹಮ್ಮದ್ ಪ್ರಾಚ ವಿರುದ್ಧ ಎಫ್‍ಐಆರ್ ದಾಖಲಿಸಲು ಆದೇಶ ನೀಡಬೇಕೆಂದು ‘ಲಾಯರ್ಸ್ ವಾಯ್ಸ್’ ಸಂಘಟನೆ ಅರ್ಜಿ ಸಲ್ಲಿಸಿತ್ತು.

    ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಸಿ ಹರಿ ಶಂಕರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಎಫ್‍ಐಆರ್ ದಾಖಲಿಸುವ ಸಂಬಂಧ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿದೆ.

    ದ್ವೇಷದ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ನೋಟಿಸ್ ಜಾರಿ ಮಾಡಿದ ಕೋರ್ಟ್ ವಿಚಾರಣೆಯನ್ನು ಏಪ್ರಿಲ್ 13ಕ್ಕೆ ಮುಂದೂಡಿದೆ.

    ಅಜಿ ವಿಚಾರಣೆಯ ಸಂದರ್ಭದಲ್ಲಿ ಲಾಯರ್ಸ್ ವಾಯ್ಸ್ ಸಂಘಟನೆಯ ಪರ ವಕೀಲರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇತರೇ ನಾಯಕರ ಹೇಳಿಕೆಗಳನ್ನು ನ್ಯಾಯಾಧೀಶರ ಮುಂದೆ ಓದಿದರು. ಈ ಹೇಳಿಕೆಗಳು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದ್ದರಿಂದ ದೆಹಲಿ ದಂಗೆ ನಡೆದಿದೆ. ಈ ಕೋಮು ಗಲಬೆ ಏಳಲು ಇವರ ಹೇಳಿಕೆಯೇ ಮುಖ್ಯ ಕಾರಣ ಎಂದು ಕೋರ್ಟ್ ಗಮನಕ್ಕೆ ತಂದರು.