Tag: ಮನೀಷ್ ಪಾಂಡೆ

  • ರಣಜಿಯಲ್ಲಿ ಬ್ಯಾಟಿಂಗ್ ಅಬ್ಬರ- ಮನೀಷ್ ದ್ವಿಶತಕ ಮಿಂಚಿಂಗ್, ಸೂರ್ಯನಿಗೆ ಶತಕ ಮಿಸ್ಸಿಂಗ್

    ರಣಜಿಯಲ್ಲಿ ಬ್ಯಾಟಿಂಗ್ ಅಬ್ಬರ- ಮನೀಷ್ ದ್ವಿಶತಕ ಮಿಂಚಿಂಗ್, ಸೂರ್ಯನಿಗೆ ಶತಕ ಮಿಸ್ಸಿಂಗ್

    ಮುಂಬೈ/ಪಣಜಿ: ಟೀಂ ಇಂಡಿಯಾದ ಆಟಗಾರ ಮನೀಷ್ ಪಾಂಡೆ (Manish Pandey) ತನ್ನ ಕೆರಿಯರ್‌ನ 100ನೇ ಪ್ರಥಮ ದರ್ಜೆ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಸೌರಾಷ್ಟ್ರ ವಿರುದ್ಧ ಇನ್ನಿಂಗ್ಸ್‌ನಲ್ಲಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಟೀಂ ಇಂಡಿಯಾ ಟಿ20 ಉಪನಾಯಕನಾದ ಮೊದಲ ಪಂದ್ಯದಲ್ಲಿ ಶತಕ ವಂಚಿತರಾಗಿದ್ದಾರೆ.

    ಗೋವಾ ವಿರುದ್ಧದ ರಣಜಿ ಟ್ರೋಫಿ (Ranji Trophy) ಕ್ರಿಕೆಟ್ (Cricket) ಪಂದ್ಯದ 2ನೇ ದಿನದಾಟದಲ್ಲಿ ಅಬ್ಬರಿಸಿದ ಮನೀಷ್ ಪಾಂಡೆ ಔಟಾಗದೆ 208 ರನ್ ಚಚ್ಚಿದ್ದಾರೆ. 14 ಬೌಂಡರಿ ಹಾಗೂ 11 ಸಿಕ್ಸರ್‌ಗಳು ಇದರಲ್ಲಿ ಸೇರಿವೆ. ಈ ಮೂಲಕ ಕರ್ನಾಟಕ ತಂಡವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದಿದ್ದಾರೆ. ಇನ್ನೂ ಕನ್ನಡಿಗ ಮಯಾಂಕ್ ಅಗರ್ವಾಲ್ ಬಳಗ 7 ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಬುಧವಾರದ ಆಟದ ಅಂತ್ಯಕ್ಕೆ ಗೋವಾ ಮೊದಲ ಇನಿಂಗ್ಸ್‌ನಲ್ಲಿ  3 ವಿಕೆಟ್‌ಗೆ 146 ರನ್ ಗಳಿಸಿ, 457 ರನ್‌ಗಳ ಬೃಹತ್ ಹಿನ್ನಡೆ ಕಾಯ್ದುಕೊಂಡಿದೆ.

    ಕರ್ನಾಟಕ ತಂಡ (Team India) 3 ವಿಕೆಟ್‌ಗೆ 294 ರನ್‌ಗಳಿಂದ 2ನೇ ದಿನದಾಟ ಮುಂದುವರಿಸಿತ್ತು. ಮೊದಲ ದಿನ ಎಂಟು ರನ್‌ಗಳೊಂದಿಗೆ ಅಜೇಯರಾಗುಳಿದಿದ್ದ ಪಾಂಡೆ, 2ನೇ ದಿನ ಭರ್ತಿ 200 ರನ್ ಕಲೆಹಾಕಿದರು. ಇದನ್ನೂ ಓದಿ: ಟಿ20ಗೆ ಪಾಂಡ್ಯ ನಾಯಕ, ಸೂರ್ಯ ಉಪನಾಯಕ – ಟೀಂ ಇಂಡಿಯಾದಲ್ಲಿ ಪಂತ್‍ಗಿಲ್ಲ ಸ್ಥಾನ

    ಇನ್ನೊಂದೆಡೆ ಟೀಂ ಇಂಡಿಯಾದ (Team India) T20 ಉಪನಾಯಕನಾಗಿ ಕಣಕ್ಕಿಳಿರುವ ಸೂರ್ಯಕುಮಾರ್ ಯಾದವ್ ಸದ್ಯ ರಣಜಿ ಟ್ರೋಫಿಯಲ್ಲಿ ಅಬ್ಬರಿಸುತ್ತಿದ್ದಾರೆ. ರಣಜಿಯಲ್ಲೂ ಅದ್ಭುತ ಫಾರ್ಮ್ ಕಾಯ್ದುಕೊಂಡಿರುವ ಸೂರ್ಯಕುಮಾರ್ ಸೌರಾಷ್ಟ್ರ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ 107 ಎಸೆತಗಳಿಗೆ 95 ರನ್‌ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾಗಿದ್ದಾರೆ. ಇದರಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ ಸೇರಿವೆ. ಇದನ್ನೂ ಓದಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಹಲವರಿಗೆ T20 ಯಿಂದ ಬ್ರೇಕ್?

    ಇಂದು ಸೌರಾಷ್ಟ್ರ ವಿರುದ್ಧ ಮುಂಬೈ 2ನೇ ಇನ್ನಿಂಗ್ಸ್ ಮುಂದುವರಿಸಿದ್ದು, 16 ಓವರ್‌ಗಳಲ್ಲಿ 70 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದೆ. ಪೃಥ್ವಿ ಶಾ 41 ರನ್ (59 ಎಸೆತ, 6 ಬೌಂಡರಿ) ಗಳಿಸಿದ್ರೆ, ಸೂರ್ಯಕುಮಾರ್ 20 ರನ್ (25 ಎಸೆತ, 3 ಬೌಂಡರಿ) ಗಳಿಸಿ (1 ಗಂಟೆ ಸಮಯಕ್ಕೆ) ಕ್ರೀಸ್‌ನಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮನೀಶ್ ಪಾಂಡೆ, ಶಂಕರ್ ದಾಖಲೆಯ ಜೊತೆಯಾಟ – ಹೈದರಾಬಾದ್‍ಗೆ 8 ವಿಕೆಟ್‍ಗಳ ಭರ್ಜರಿ ಜಯ

    ಮನೀಶ್ ಪಾಂಡೆ, ಶಂಕರ್ ದಾಖಲೆಯ ಜೊತೆಯಾಟ – ಹೈದರಾಬಾದ್‍ಗೆ 8 ವಿಕೆಟ್‍ಗಳ ಭರ್ಜರಿ ಜಯ

    – ಬರೋಬ್ಬರಿ 8 ಸಿಕ್ಸರ್ ಸಿಡಿಸಿ ಮಿಂಚಿದ ಕನ್ನಡಿಗ ಪಾಂಡೆ

    ದುಬೈ: ಇಂದು ದುಬೈ ಮೈದಾನದಲ್ಲಿ ನಡೆದ ಐಪಿಎಲ್-2020ಯ 40ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್‍ರೈಸರ್ಸ್ ಹೈದರಾಬಾದ್ ತಂಡ ಎಂಟು ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಎಂಟು ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ಜಿಗಿದಿದೆ.

    ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಸನ್‍ರೈಸರ್ಸ್ ಹೈದರಾಬಾದ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯ್ತು. ಈ ಮೂಲಕ ನಿಗದಿತ 20 ಓವರಿನಲ್ಲಿ ಆರು ವಿಕೆಟ್ ಕಳೆದುಕೊಂಡು ಕೇವಲ 154 ರನ್ ಸೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ಮೊದಲ ಎರಡು ವಿಕೆಟ್ ಬೇಗನೇ ಕಳೆದುಕೊಂಡರು ಮೂರನೇ ವಿಕೆಟ್‍ಗೆ ಭರ್ಜರಿ ಜೊತೆಯಾಟವಾಡಿದ ಪಾಂಡೆ ಮತ್ತು ಶಂಕರ್ 140 ರನ್‍ಗಳನ್ನು ಹೊಡೆದು ರೈಸರ್ಸ್ ಗೆ 8 ವಿಕೆಟ್‍ಗಳ ಜಯ ತಂದಿತ್ತರು.

    ಪಾಂಡೆ, ಶಂಕರ್ ದಾಖಲೆಯ ಜೊತೆಯಾಟ
    ನಾಯಕ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್‍ಸ್ಟೋವ್ ಅವರು ಬೇಗನೇ ಔಟ್ ಆದರು. ಆದರೆ ಮೂರನೇ ವಿಕೆಟ್‍ಗೆ ಜೊತೆಯಾದ ಮನೀಶ್ ಪಾಂಡೆ ಮತ್ತು ವಿಜಯ್ ಶಂಕರ್ ಅವರು 140 ರನ್‍ಗಳ ಜೊತೆಯಾಟವಾಡಿ ದಾಖಲೆ ಬರೆದರು. ಈ ಮೂಲಕ ಇಬ್ಬರು ಭಾರತ ಆಟಗಾರೇ ಸೇರಿ ಸನ್‍ರೈಸರ್ಸ್ ಹೈದರಾಬಾದ್ ತಂಡಕ್ಕಾಗಿ ಶತಕ ಜೊತೆಯಾಟವಾಡಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    2013ರಲ್ಲಿ ಐಪಿಎಲ್‍ಗೆ ಪಾದಾರ್ಪಾಣೆ ಮಾಡಿದ ಸನ್‍ರೈಸರ್ಸ್ ಹೈದರಾಬಾದ್ ತಂಡದ ಆಟಗಾರರು ಇದುವರೆಗೂ 24 ಬಾರಿ ಶತಕ ಜೊತೆಯಾಟವಾಡಿದ್ದಾರೆ. ಆದರೆ ಇದರಲ್ಲಿ 23 ಬಾರಿಯೂ ವಿದೇಶಿ ಆಟಗಾರರು ಪಾಲುದಾರಿಕೆ ಹೊಂದಿದ್ದಾರೆ. ಆದರೆ ಏಳು ವರ್ಷದಲ್ಲಿ ಇದೇ ಮೊದಲ ಬಾರಿಗೆ ಯಾವುದೇ ವಿದೇಶಿ ಆಟಗಾರನ ಪಾಲುದಾರಿಕೆ ಇಲ್ಲದೇ ಮನೀಶ್ ಪಾಂಡೆ ಮತ್ತು ರವಿ ಶಂಕರ್ ಶತಕ ಜೊತೆಯಾಟವಾಡಿ ದಾಖಲೆ ಬರೆದಿದ್ದಾರೆ.

    155 ರನ್ ಗುರಿಯನ್ನು ಬೆನ್ನಟ್ಟಿದ ಸನ್‍ರೈಸರ್ಸ್ ಹೈದರಾಬಾದ್ ತಂಡಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಜೋಫ್ರಾ ಆರ್ಚರ್ ಆರಂಭಿಕ ಆಘಾತ ನೀಡಿದರು. ಈ ಮೂಲಕ ಇನ್ನಿಂಗ್ಸ್ ನ ನಾಲ್ಕನೇ ಬಾಲಿನಲ್ಲೇ ನಾಯಕ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡಿದರು. ನಂತರ ಜೋಫ್ರಾ ಆರ್ಚರ್ ಅವರೇ 2ನೇ ಓವರ್ ನಾಲ್ಕನೇ ಬಾಲಿನಲ್ಲಿ 10 ರನ್ ಗಳಿಸಿದ್ದ ಜಾನಿ ಬೈರ್‍ಸ್ಟೋವ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.

    ನಂತರ ಅಬ್ಬರಿಸಿದ ಕನ್ನಡಿಗ ಮನೀಶ್ ಪಾಂಡೆ ಅವರು, ವಿಜಯ್ ಶಂಕರ್ ಅವರ ಜೊತೆಗೂಡಿ ಸಿಕ್ಸರ್ ಬೌಂಡರಿಗಳ ಸುರಿಮಳೆಗೈದರು. ಈ ಮೂಲಕ ಪವರ್ ಪ್ಲೇ ಅಂತ್ಯದ ವೇಳೆಗೆ ಹೈದರಾಬಾದ್ ತಂಡ ಎರಡು ವಿಕೆಟ್ ಕಳೆದುಕೊಂಡು ಬರೋಬ್ಬರಿ 58 ರನ್ ಪೇರಿಸಿತು. ಜೊತೆಗೆ ಪಾಂಡೆ ಮತ್ತು ವಿಜಯ್ ಶಂಕರ್ ಜೋಡಿ ಕೇವಲ 30 ಬಾಲಿನಲ್ಲಿ ಅರ್ಧಶತಕದ ಜೊತೆಯಾಟವಾಡಿ ಆರಂಭದಲ್ಲಿ ಕುಸಿದಿದ್ದ ತಂಡಕ್ಕೆ ನೆರವಾದರು.

    ಇದರ ಜೊತೆಗೆ ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ಮನೀಶ್ ಪಾಂಡೆ ಅವರು ಅರ್ಧಶತಕ ಸಿಡಿಸಿ ಮಿಂಚಿದರು. ಜೊತೆಗೆ ಈ ಜೋಡಿ 71 ಬಾಲಿಗೆ ಶತಕದ ಜೊತೆಯಾಟವಾಡಿತು. ಜೊತೆಗೆ 51 ಬಾಲಿಗೆ ವಿಜಯ್ ಶಂಕರ್ ಅವರು ಅರ್ಧಶತಕ ಸಿಡಿಸಿದರು. ಕೊನೆಯವರೆಗೂ ಔಟ್ ಆಗದೇ ಉಳಿದ ಮನೀಶ್ ಪಾಂಡೆ 47 ಬಾಲಿನಲ್ಲಿ ಬರೋಬ್ಬರಿ 8 ಸಿಕ್ಸರ್ ಮತ್ತು 4 ಫೋರ್ ಸಮೇತ 83 ರನ್ ಸಿಡಿಸಿ ಮಿಂಚಿದರು.

    ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ರಾಜಸ್ಥಾನ್ ರಾಯಲ್ಸ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಕುಂಟುತ್ತಾ ಸಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಅವರು 26 ಬಾಲಿಗೆ 36 ರನ್ ಸಿಡಿಸಿ ಕೊಂಚ ವೇಗ ನೀಡಿದರು. ಕೊನೆಯಲ್ಲಿ ರಿಯಾನ್ ಪರಾಗ್ ಮತ್ತು ಜೋಫ್ರಾ ಆರ್ಚರ್ ಅವರು ಸ್ಫೋಟಕ ಬ್ಯಾಟಿಂಗ್ ಆಡಿದ ಕಾರಣ ರಾಜಸ್ಥಾನ್ ತಂಡ 20 ಓವರಿನಲ್ಲಿ ಆರು ವಿಕೆಟ್ ಕಳೆದುಕೊಂಡು 154 ರನ್ ಸಿಡಿಸಿತ್ತು.

  • 50 ರನ್ ಹೊಡೆದ ಪಾಂಡೆ ಕಳೆದ 6 ಪಂದ್ಯಗಳಲ್ಲಿ ಔಟಾಗಿಲ್ಲ

    50 ರನ್ ಹೊಡೆದ ಪಾಂಡೆ ಕಳೆದ 6 ಪಂದ್ಯಗಳಲ್ಲಿ ಔಟಾಗಿಲ್ಲ

    ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ 4ನೇ ಟಿ 20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಭಾರತವನ್ನು ಪಾರು ಮಾಡಿದ್ದ ಮನೀಷ್ ಪಾಂಡೆ ಕಳೆದ 6 ಪಂದ್ಯಗಳಲ್ಲಿ ಔಟಾಗಿಲ್ಲ.

    ಮನೀಷ್ ಪಾಂಡೆ ಕೊನೆಯ ಬಾರಿಗೆ ಔಟಾಗಿದ್ದು ಆಗಸ್ಟ್ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ. ಈ ಪಂದ್ಯದಲ್ಲಿ 8 ಎಸೆತ ಎದುರಿಸಿದ ಪಾಂಡೆ 6 ರನ್ ಗಳಿಸಿದ್ದರು. ಕಳೆದ 6 ಇನ್ನಿಂಗ್ಸ್ ಗಳಲ್ಲಿ ಪಾಂಡೆ 133 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಶಾರ್ದೂಲ್ ನೀಡಿದ ಬಾಲನ್ನು ವಿಕೆಟ್‍ಗೆ ಎಸೆದು ಪಂದ್ಯಕ್ಕೆ ರೋಚಕ ತಿರುವು ಕೊಟ್ಟ ಕೊಹ್ಲಿ: ವಿಡಿಯೋ

    ಹಾಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯದಲ್ಲಿ 14, 14, 50 ರನ್ ಹೊಡೆದಿದ್ದಾರೆ. ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸಲು ಪಾಂಡೆಗೆ ಅವಕಾಶ ಸಿಕ್ಕಿರಲಿಲ್ಲ.

    ನ್ಯೂಜಿಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದ ವೇಳೆ 8.4 ಓವರ್ ಗಳಲ್ಲಿ 75 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಅಪಾಯಕ್ಕೆ ಸಿಲುಕಿದಾಗ ಪಾಂಡೆ ಔಟಾಗದೇ 50 ರನ್(36 ಎಸೆತ, 3 ಬೌಂಡರಿ) ಹೊಡೆದು ತಂಡವನ್ನು ಪಾರು ಮಾಡಿದ್ದರು. 7ನೇ ವಿಕೆಟಿಗೆ ಶಾರ್ದೂಲ್ ಠಾಕೂರ್ ಜೊತೆ 43 ರನ್ ಜೊತೆಯಾಟವಾಡಿದ ಪಾಂಡೆ ಮುರಿಯದ 9ನೇ ವಿಕೆಟಿಗೆ ನವದೀಪ್ ಶೈನಿ ಜೊತೆ 22 ರನ್‍ಗಳ ಜೊತೆಯಾಟವಾಡಿದ್ದರು. ಕೊನೆಯಲ್ಲಿ ವಿಕೆಟ್ ಉಳಿಸಿಕೊಂಡ ಪರಿಣಾಮ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ಇದನ್ನೂ ಓದಿ: ಶೈನಿ, ಶಾರ್ದೂಲ್, ರಾಹುಲ್, ಪಾಂಡೆ ಕಮಾಲ್- ಸೂಪರ್ ಓವರಿನಲ್ಲಿ ಮತ್ತೆ ಭಾರತಕ್ಕೆ ಜಯ

  • ರಾಹುಲ್, ಧೋನಿ, ಪಾಂಡೆ ಬ್ಯಾಟಿಂಗ್ ಕಮಾಲ್: ಚಹಲ್, ಪಾಂಡ್ಯ ಬೌಲಿಂಗ್‍ಗೆ ಲಂಕಾದಹನ

    ರಾಹುಲ್, ಧೋನಿ, ಪಾಂಡೆ ಬ್ಯಾಟಿಂಗ್ ಕಮಾಲ್: ಚಹಲ್, ಪಾಂಡ್ಯ ಬೌಲಿಂಗ್‍ಗೆ ಲಂಕಾದಹನ

    ಕಟಕ್: ಲಂಕಾ ವಿರುದ್ಧ ಮೊದಲ ಟಿ 20 ಪಂದ್ಯವನ್ನು ಭಾರತ 93 ರನ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    ಗೆಲ್ಲಲು 181 ರನ್ ಗಳ ಗುರಿಯನ್ನು ಪಡೆದ ಲಂಕಾ 87 ಆಲೌಟ್ ಆಯಿತು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 16 ಓವರ್ ಗಳಲ್ಲಿ  ಸರ್ವಪತನ ಕಂಡಿತು. ಚಹಲ್ 4 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದು ಮಿಂಚಿದರು.

    ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ 38 ರನ್ ಗಳಿಸಿದ್ದಾಗ ರೋಹಿತ್ ಶರ್ಮಾ ಔಟಾದರು. 17 ರನ್(13 ಎಸೆತ, 2 ಬೌಂಡರಿ) ಗಳಿಸಿದ್ದಾಗ ಕ್ಯಾಚ್ ನೀಡಿ ಹೊರ ನಡೆದರು. ನಂತರ ಎರಡನೇ ವಿಕೆಟ್ ಗೆ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ 63 ರನ್ ಪೇರಿಸಿದರು.

    ಕೆಎಲ್ ರಾಹುಲ್ 61 ರನ್(48 ಎಸೆತ, 7 ಬೌಂಡರಿ, 1 ಸಿಕ್ಸರ್), ಶ್ರೇಯಸ್ ಅಯ್ಯರ್ 24 ರನ್(20 ಎಸೆತ, 3 ಬೌಂಡರಿ) ಹೊಡೆದು ಔಟಾದರು.

    ಶ್ರೇಯಸ್ ಅಯ್ಯರ್ ಔಟಾಗುವ ವೇಳೆ ಟೀಂ ಇಂಡಿಯಾದ ಮೊತ್ತ 14.2 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿತ್ತು. ನಂತರ ಧೋನಿ ಮತ್ತು ಮನೀಷ್ ಪಾಂಡೆ ಕೊನೆಯ 34 ಎಸೆತದಲ್ಲಿ 68 ರನ್ ಪೇರಿಸಿದ ಪರಿಣಾಮ ಭಾರತ 180 ರನ್ ಗಳಿಸಿತು.

    ಧೋನಿ ಔಟಾಗದೇ 39 ರನ್(22 ಎಸೆತ, 4 ಬೌಂಡರಿ, 1 ಸಿಕ್ಸರ್), ಮನೀಷ್ ಪಾಂಡೆ 32 ರನ್(18 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು. 17ನೇ ಓವರ್ ನಲ್ಲಿ 19ರನ್ ಬಂದಿದ್ದರೆ, 18 ನೇ ಓವರ್ ನಲ್ಲಿ 9 ರನ್, 19ನೇ ಓವರ್ ನಲ್ಲಿ 21 ರನ್, 20ನೇ ಓವರ್ ನಲ್ಲಿ 12 ರನ್ ಬಂದಿತ್ತು.

     4 ಓವರ್ ಎಸೆದು 23 ರನ್ ನೀಡಿ 4 ವಿಕೆಟ್ ಪಡೆದ ಚಹಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಎರಡನೇ ಟಿ20 ಪಂದ್ಯ ಇಂದೋರ್ ನಲ್ಲಿ ಶುಕ್ರವಾರ ನಡೆಯಲಿದೆ.

  • ಶ್ರೀಲಂಕಾ ವಿರುದ್ಧದ ಟಿ20ಯಲ್ಲೂ ಟೀಂ ಇಂಡಿಯಾಗೆ ಗೆಲುವು

    ಶ್ರೀಲಂಕಾ ವಿರುದ್ಧದ ಟಿ20ಯಲ್ಲೂ ಟೀಂ ಇಂಡಿಯಾಗೆ ಗೆಲುವು

    ಕೊಲಂಬೋ: ಶ್ರೀಲಂಕಾ ವಿರುದ್ಧದ ಏಕೈಕ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳ ಜಯಗಳಿಸಿದೆ. ಈ ಮೂಲಕ ಟೆಸ್ಟ್, ಏಕದಿನ, ಟಿ20 ಪಂದ್ಯವನ್ನೂ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ.

    171 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಭಾರತ 19.2 ಓವರ್ ಗಳಲ್ಲಿ ಗೆಲುವು ಸಾಧಿಸಿದೆ. ಟೀಂ ಇಂಡಿಯಾ ಪರವಾಗಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮನೀಷ್ ಪಾಂಡೆ ಆಕ್ರಮಣಕಾರಿಯಾಗಿ ಆಡಿದರು. ಕೇವಲ 30 ಎಸೆತಗಳಲ್ಲಿ ಕೊಹ್ಲಿ ಅರ್ಧ ಶತಕ ದಾಖಲಿಸಿದರು. 19ನೇ ಓವರ್‍ನಲ್ಲಿ 54 ಎಸೆತಗಳಲ್ಲಿ 82 ರನ್ ಗಳಿಸಿದ್ದ ಕೊಹ್ಲಿ ಔಟಾದರು. ರೋಹಿತ್ ಶರ್ಮಾ 9 (8 ಬಾಲ್), ಕೆ.ಎಲ್.ರಾಹುಲ್ 24 (18) ರನ್ ಗಳಿಸಿ ಔಟಾದರು. ಬೌಂಡರಿ ಮೂಲಕ ಗೆಲುವಿನ ರನ್ ಬಾರಿಸಿ ಮನೀಷ್ ಪಾಂಡೆ ಅರ್ಧ ಶತಕ ದಾಖಲಿಸಿದರು. ಶ್ರೀಲಂಕಾ ಪರವಾಗಿ ಉದನ, ಲಸಿತ್ ಮಾಲಿಂಗ, ಪ್ರಸನ್ನ ತಲಾ 1 ವಿಕೆಟ್ ಗಳಿಸಿದರು.

    ಟಾಸ್ ಗೆದ್ದ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲೇ ಶ್ರೀಲಂಕಾ ತಂಡ ಆಕ್ರಮಣಕಾರಿ ಆಟಕ್ಕಿಳಿದಿತ್ತು. ಆದರೆ 3ನೇ ಓವರ್ ನಲ್ಲೇ ಭುವನೇಶ್ವರ್ ಕುಮಾರ್ ಮೊದಲ ವಿಕೆಟ್ ಪಡೆದರು. ನಂತರ ಬ್ಯಾಟಿಂಗ್ ಗೆ ಆಗಮಿಸಿದ ಮುನವೀರ ಆಕ್ರಮಣಕಾರಿ ಆಟಕ್ಕಿಳಿದರು. ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 53 ರನ್ ಗಳಿಸಿ ಸ್ಪಿನ್ನರ್ ಕುಲದೀಪ್ ಯಾದವ್ ಎಸೆತದಲ್ಲಿ ಬೌಲ್ಡ್ ಆದ್ರು. ಶ್ರೀಲಂಕಾ ಪರವಾಗಿ ಡಿಕ್ವೆಲ್ಲಾ 17 (14 ಬಾಲ್), ಪ್ರಿಯಾಂಜನ್ 40 (40 ಬಾಲ್), ಪಿರೇರಾ 11 (7 ಬಾಲ್), ಪ್ರಸನ್ನ 11 (8 ಬಾಲ್), ಉದನ 19 (10), ಮ್ಯಾಥ್ಯೂಸ್ 7 (5) ರನ್ ಗಳಿಸಿದರು. ನಿಗದಿತ 20 ಓವರ್ ಗಳು ಮುಗಿದಾಗ ಶ್ರೀಲಂಕಾ 7 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತ್ತು.

    ಟೀಂ ಇಂಡಿಯಾ ಪರವಾಗಿ ಚಹಲ್ 3, ಕುಲದೀಪ್ ಯಾದವ್ 2, ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬೂಮ್ರಾ ತಲಾ 1 ವಿಕೆಟ್ ಗಳಿಸಿದರು.