Tag: ಮನೀಶ್ ಪಾಂಡೆ

  • ಆ ಕಡೆ ಯಾಕೆ ನೋಡ್ತಿದ್ದಿ, ನನ್ನನ್ನು ನೋಡು – ಪಾಂಡೆ ವಿರುದ್ಧ ಕ್ಯಾಪ್ಟನ್ ಕೂಲ್ ಗರಂ

    ಆ ಕಡೆ ಯಾಕೆ ನೋಡ್ತಿದ್ದಿ, ನನ್ನನ್ನು ನೋಡು – ಪಾಂಡೆ ವಿರುದ್ಧ ಕ್ಯಾಪ್ಟನ್ ಕೂಲ್ ಗರಂ

    ಸೆಂಚೂರಿಯನ್: ಕ್ಯಾಪ್ಟನ್ ಕೂಲ್ ಎಂದೇ ಫೇಮಸ್ ಆಗಿರುವ ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಟಿ -20 ಪಂದ್ಯದಲ್ಲಿ ಮನೀಶ್  ಪಾಂಡೆ ವಿರುದ್ಧ ಗರಂ ಆಗಿದ್ದಾರೆ.

    ಕೊನೆಯ ಸ್ಲಾಗ್ ಓವರ್ ಗಳಲ್ಲಿ ಧೋನಿ ತಂಡದ ಮೊತ್ತ ಹೆಚ್ಚಿಸಲು ವೇಗವಾಗಿ ಓಡುತ್ತಿದ್ದರು. ಈ ವೇಳೆ ಮನೀಶ್ ಪಾಂಡೆ ಅವರಿಂದ ಸರಿಯಾದ ಸಹಕಾರ ಸಿಕ್ಕಿರಲಿಲ್ಲ. ಕೊನೆಯ ಓವರ್ ಮೊದಲ ಎಸೆತದ ಬಳಿಕ ಪಾಂಡೆ ಗಮನವನ್ನು ಬೇರೆ ಕಡೆ ಹರಿಸಿದ್ದರು. ಇದನ್ನು ನೋಡಿದ ಧೋನಿ, “ಆ ಕಡೆ ಯಾಕೆ ನೋಡುತ್ತಿದ್ದಿ. ನನ್ನನ್ನು ನೋಡು” ಎಂದು ಗರಂ ಆಗಿ ಹೇಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಾಂಡೆಯನ್ನು ತರಾಟೆಗೆ ತೆಗೆದುಕೊಂಡ ನಂತರದ ಎಸೆತವನ್ನು ಧೋನಿ ಸಿಕ್ಸರ್ ಗೆ ಅಟ್ಟಿದ್ದರು. ಕೊನೆಯ ಓವರ್ ನಲ್ಲಿ ಧೋನಿ ಎರಡು ಬೌಂಡರಿ, 1 ಸಿಕ್ಸರ್ ಸಿಡಿಸಿ ಅರ್ಧಶತಕ ಸಿಡಿಸಿದ್ದರು. ಈ ಓವರ್ ನಲ್ಲಿ ಭಾರತಕ್ಕೆ 19 ರನ್ ಗಳು ಬಂದಿತ್ತು.

    ಧೋನಿ ಔಟಾಗದೇ 52 ರನ್ (28 ಎಸೆತ, 4 ಬೌಂಡರಿ, 3 ಸಿಕ್ಸರ್), ಮನೀಶ್ ಪಾಂಡೆ ಔಟಾಗದೇ 79 ರನ್(48 ಎಸೆತ, 6 ಬೌಂಡರಿ, 3 ಸಿಕ್ಸರ್) ಹೊಡೆದಿದ್ದರು. ಅಂತಿಮವಾಗಿ ಭಾರತ 4 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತ್ತು.

    ಸವಾಲಿನ ಮೊತ್ತವಾದರೂ ನಾಯಕ ಡುಮಿನಿ ಔಟಾಗದೇ 64 ರನ್(40 ಎಸೆತ, 4 ಬೌಂಡರಿ, 3 ಸಿಕ್ಸರ್), ಕ್ಲಾಸನ್ 69 ರನ್( 30 ಎಸೆತ, 3 ಬೌಂಡರಿ, 7 ಸಿಕ್ಸರ್) ಸಿಡಿಸಿದ ಪರಿಣಾಮ ದಕ್ಷಿಣ ಆಫ್ರಿಕಾ 18.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 189 ರನ್ ಗಳಿಸುವ ಮೂಲಕ 6 ವಿಕೆಟ್ ಗಳಿಂದ ಜಯಗಳಿಸಿತು.

    ಮೂರನೇ ಹಾಗೂ ಅಂತಿಮ ಪಂದ್ಯ ಫೆ.24 ಶನಿವಾರ ಕೇಪ್ ಟೌನ್ ನಲ್ಲಿ ನಡೆಯಲಿದೆ. ಇದನ್ನೂ ಓದಿ: ಮೊದಲ ಟಿ-20ಯಲ್ಲಿ ಧೋನಿಯಿಂದ ವಿಶ್ವದಾಖಲೆ