Tag: ಮನಿ ಲಾಂಡ್ರಿಂಗ್

  • ಸುಶಾಂತ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಆಗಿಲ್ಲ- ರಿಯಾಗೆ ರಿಲೀಫ್?

    ಸುಶಾಂತ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಆಗಿಲ್ಲ- ರಿಯಾಗೆ ರಿಲೀಫ್?

    – ಕುಟುಂಬಸ್ಥರ ತಪ್ಪು ಗ್ರಹಿಕೆಯಿಂದ ದೂರು ದಾಖಲು
    – ಸುಶಾಂತ್ ಗೆಳತಿ ರಿಯಾ ಮತ್ತಷ್ಟು ನಿರಾಳ

    ಮುಂಬೈ: ಮೃತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಬ್ಯಾಂಕ್ ಖಾತೆಗಳಿಂದ ಅಕ್ರಮ ಹಣ ವರ್ಗಾವಣೆಯಾಗಿಲ್ಲ ಎಂದು ಜಾರಿ ನಿರ್ದೇಶನಾಲಯ ಹೇಳಿರುವ ಬಗ್ಗೆ ಖಾಸಗಿ ಪತ್ರಿಕೆ ವರದಿ ಮಾಡಿದೆ.

    ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವು ಪ್ರಕರಣ ಅಕ್ರಮ ಹಣ ವರ್ಗಾವಣೆಯ ಆಯಾಮವನ್ನು ಪಡೆದುಕೊಂಡಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಯನ್ನ ಮೂರು ಬಾರಿ ವಿಚಾರಣೆಗೆ ಒಳಪಡಿಸಿತ್ತು. ರಿಯಾ ವಿಚಾರಣೆ ಬಳಿಕ ಇಡಿ ತನಿಖೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿರಲಿಲ್ಲ. ಇದೀಗ ಪತ್ರಿಕೆಯೊಂದರ ಪ್ರಕಾರ ಸುಶಾಂತ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆಯಾಗಿಲ್ಲ ಎಂಬ ತೀರ್ಮಾನಕ್ಕೆ ಇಡಿ ಬಂದಿದೆ ಎನ್ನಲಾಗಿದೆ. ಸುಶಾಂತ್ ಕುಟುಂಬಸ್ಥರು ತಪ್ಪು ಗ್ರಹಿಕೆಯಿಂದಾಗಿ ದೂರು ದಾಖಲಿಸಿದ್ದಾರೆ. ಸುಶಾಂತ್ ಪರಿವಾರಕ್ಕೆ ನಟನ ಆರ್ಥಿಕ ವ್ಯವಹಾರಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಇಡಿ ಹೇಳಿದೆ. ಇದನ್ನೂ ಓದಿ: 5 ವರ್ಷದಲ್ಲಿ ಸುಶಾಂತ್ ಗಳಿಸಿದ್ದು 70 ಕೋಟಿ-ರಿಯಾಗಾಗಿ ಖರ್ಚು ಮಾಡಿದೆಷ್ಟು?

    ತನಿಖೆ ಹಿನ್ನೆಲೆ ಜಾರಿ ನಿರ್ದೇಶನಾಲಯ ಸುಶಾಂತ್ ಬ್ಯಾಂಕ್ ಖಾತೆ ಮತ್ತು ಆರ್ಥಿಕ ವ್ಯವಹಾರಗಳನ್ನು ಆಡಿಟ್ ಮಾಡಿಸಲಾಗಿತ್ತು. ಆಡಿಟ್ ನಲ್ಲಿ ತಮ್ಮ ಆದಾಯಕ್ಕೆ 2.78 ಕೋಟಿ ತೆರಿಗೆ ಸಹ ಪಾವತಿಸಿದ್ದಾರೆ. ಚಿಕ್ಕ ಪುಟ್ಟ ವ್ಯವಹಾರಗಳ ತೆರಿಗೆ ಬಾಕಿ ಇರೋದು ಮಾತ್ರ ಇಡಿ ಗಮನಕ್ಕೆ ಬಂದಿದ್ದು, ಉಳಿದೆಲ್ಲ ಆರ್ಥಿಕ ಚಟುವಟಿಕೆಗಳು ಪಾರದರ್ಶಕವಾಗಿ ಎಂದ ಪತ್ರಿಕೆ ಬಿತ್ತರಿಸಿದೆ. ಇದನ್ನೂ ಓದಿ: ಜೈಲಿನಲ್ಲಿದ್ದ 28 ದಿನದ ರಿಯಾ ದಿನಚರಿ ಬಿಚ್ಚಿಟ್ಟ ವಕೀಲ

    ಕೆಲ ದಿನಗಳ ಹಿಂದೆ ಸುಶಾಂತ್ ಬಳಸುತ್ತಿದ್ದ ಬ್ಯಾಂಕ್ ಖಾತೆಯ ವ್ಯವಹಾರದ ಪ್ರತಿಯೊಂದನ್ನ ಮಾಧ್ಯಮ ರಿವೀಲ್ ಮಾಡಿತ್ತು. ಐದು ವರ್ಷದಲ್ಲಿ ಸುಶಾಂತ್ 70 ಕೋಟಿ ಹಣ ಗಳಿಸಿದ್ದು, ಪ್ರೇಯಸಿ ರಿಯಾಗಾಗಿ 55 ಲಕ್ಷ ರೂ. ಖರ್ಚು ಮಾಡಿರುವ ವಿಷಯ ತಿಳಿದು ಬಂದಿತ್ತು. ಇನ್ನುಳಿದಂತೆ ಸುಶಾಂತ್ ಹೆಚ್ಚಿನ ಹಣವನ್ನು ಪ್ರವಾಸ, ಗಿಫ್ಟ್ ಮತ್ತು ಸ್ಪಾಗಾಗಿ ಖರ್ಚು ಮಾಡಿರುವ ವಿಚಾರ ಹೊರ ಬಂದಿತ್ತು. ಇದನ್ನೂ ಓದಿ: ಸುಶಾಂತ್ ಸಾವಿಗೆ ಭೂಗತ ಲೋಕದ ಲಿಂಕ್: ಸುಬ್ರಮಣಿಯನ್ ಸ್ವಾಮಿ

    ಜುಲೈ 31ರಂದು ಸುಶಾಂತ್ ಸಿಂಗ್ ತಂದೆ ಕೆ.ಕೆ.ಸಿಂಗ್ ಅಕ್ರಮ ಹಣ ವರ್ಗಾವಣೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬಿಹಾರ ಪಾಟ್ನಾದಲ್ಲಿ ದೂರು ದಾಖಲಿಸಿದ್ದರು. ಕೆ.ಕೆ.ಸಿಂಗ್ ನೀಡಿದ ದೂರನಿನ್ವಯ ಇಡಿ ತನಿಖೆಗೆ ಮುಂದಾಗಿತ್ತು. ಈ ಸಂಬಂಧ ನಟಿ ರಿಯಾ ಚಕ್ರವರ್ತಿ, ಸೋದರ ಶೌವಿಕ್ ಚಕ್ರವರ್ತಿ, ತಂದೆ ಇಂದ್ರಜಿತ್ ಚಕ್ರವರ್ತಿ, ಸುಶಾಂತ್ ಹೌಸ್ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ ಮತ್ತು ಮ್ಯಾನೇಜರ್ ಶೃತಿ ಮೋದಿ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಪ್ರಕರಣ ದಾಖಲಾಗಿತ್ತು. ಇಡಿ ಈಗಾಗಲೇ 24ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದೆ.  ಇದನ್ನೂ ಓದಿ: ಸುಶಾಂತ್ ಕೇಸ್- ಅದು ಕೊಲೆಯಲ್ಲ, ಆತ್ಮಹತ್ಯೆ: ಏಮ್ಸ್ ವೈದ್ಯ

    ಎಲ್ಲ ಆರೋಪಿಗಳ ಮಗನ ಖಾತೆಯಿಂದ ಸುಮಾರು 15 ಕೋಟಿ ರೂ. ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯಾಗಿರುವ ಖಾತೆಗಳ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಆರೋಪಿಸಿದ್ದರು. ಇದೀಗ ಇಡಿಗೆ ಯಾವುದೇ ಅಕ್ರಮ ಕಂಡು ಬರದ ಹಿನ್ನೆಲೆ ರಿಯಾ ಚಕ್ರವರ್ತಿ ಮತ್ತಷ್ಟು ನಿರಾಳವಾಗುವ ಸಾಧ್ಯತೆಗಳಿವೆ. ಕೆಲ ದಿನಗಳ ಹಿಂದೆ ಸುಶಾಂತ್ ವೈದ್ಯಕೀಯ ವರದಿ ನೀಡಿದ್ದ ಏಮ್ಸ್ ವೈದ್ಯ ಸುಧೀರ್ ಗುಪ್ತಾ, ಇದೊಂದು ಆತ್ಮಹತ್ಯೆ. ಕೊಲೆಯಲ್ಲ ಎಂಬ ಸ್ಫೋಟಕ ಹೇಳಿಕೆ ನೀಡಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಜೈಲಿನಲ್ಲಿದ್ದ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ದನ್ನೂ ಓದಿ: ಸುಶಾಂತ್ ರೀತಿಯಲ್ಲಿ ಮತ್ತೋರ್ವ ನಟನ ಅನುಮಾನಾಸ್ಪದ ಸಾವು

  • ಡಿಕೆಶಿಗೆ ಮತ್ತೆ ಶಾಕ್ – ಸಿಬಿಐ ಬೆನ್ನಲ್ಲೇ ಫೀಲ್ಡಿಗೆ ಇಳಿದ ಇಡಿ

    ಡಿಕೆಶಿಗೆ ಮತ್ತೆ ಶಾಕ್ – ಸಿಬಿಐ ಬೆನ್ನಲ್ಲೇ ಫೀಲ್ಡಿಗೆ ಇಳಿದ ಇಡಿ

    ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಮತ್ತು ಮನಿ ಲಾಂಡ್ರಿಂಗ್ ಪ್ರಕರಣ ಸಂಬಂಧ ಡಿಕೆ ಶಿವಕುಮಾರ್ ಅವರನ್ನು ತನಿಖಾ ಸಂಸ್ಥೆಗಳು ಬಿಡುವಂತೆ ಕಾಣ್ತಿಲ್ಲ. ಸಿಬಿಐ ಬೆನ್ನಲ್ಲೇ ಜಾರಿ ನಿರ್ದೇಶನಾಲಯ(ಇಡಿ) ಕೂಡ ಫೀಲ್ಡಿಗೆ ಇಳಿದಿದೆ.

    ಡಿಕೆಶಿ ಆಪ್ತರು ಮತ್ತು ಬಂಧುಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಒಳಪಡಿಸಬೇಕು ಎಂದು ದೆಹಲಿ ಹೈಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಆದೇಶ ನೀಡಿದೆ. ಡಿಕೆಶಿ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸುವ ಸಂಬಂಧ ದಿನಾಂಕ ಮತ್ತು ಸಮಯವನ್ನು ನಿಗದಿ ಮಾಡುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದೆ.

    ಮನಿ ಲಾಂಡ್ರಿಂಗ್ ಪ್ರಕರಣದ ತನಿಖೆಯ ಭಾಗವಾಗಿ ವಿಚಾರಣೆಗೆ ಹಾಜರಾಗಬೇಕು ಎಂದು 7 ಮಂದಿಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಆದ್ರೆ ಈ ಹಂತದಲ್ಲಿ ಖುದ್ದು ಹಾಜರಾತಿ ಸಾಧ್ಯವಿಲ್ಲ ಎಂದು ರಾಜೇಶ್, ಗಂಗಾಶರಣ್, ಜಯಶೀಲಾ, ಚಂದ್ರ, ಲಕ್ಷ್ಮಮ್ಮ, ಮೀನಾಕ್ಷಿ ಮತ್ತು ಹನುಮಂತರಾಯಪ್ಪ ದೆಹಲಿ ಹೈಕೋರ್ಟನ್ನು ಆಶ್ರಯಿಸಿದ್ರು. ಈ ಅರ್ಜಿಗಳ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಅವಕಾಶ ನೀಡಿ ಆದೇಶ ನೀಡಿದೆ.

    ನವೆಂಬರ್ 19ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ. ಸಿಆರ್‌ಪಿಸಿ ಸೆಕ್ಷನ್ ಉಲ್ಲಂಘಿಸಿ ಇಡಿ ಸಮನ್ಸ್ ಜಾರಿ ಮಾಡಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು. ಆದರೆ ಇಡಿ ಪರ ವಕೀಲರು, ವಿಚಾರಣೆ ಅಗತ್ಯವಿದ್ದ ಕಾರಣಕ್ಕೆ ಸಮನ್ಸ್ ನೀಡಲಾಗಿದೆ ಎಂದು ಸಮರ್ಥಿಸಿಕೊಂಡ್ರು. ಇದೇ ಪ್ರಕರಣದಲ್ಲಿ ಡಿಕೆಶಿವಕುಮಾರ್ ಕಳೆದ ವರ್ಷ ಜೈಲು ಸೇರಿದ್ದರು.