Tag: ಮನಿಲಾ

  • ಆರ್ಡರ್ ಮಾಡಿದ್ದು ಫ್ರೈಡ್ ಚಿಕನ್ ಬಂದಿದ್ದು ಮಾತ್ರ ಟವಲ್

    ಆರ್ಡರ್ ಮಾಡಿದ್ದು ಫ್ರೈಡ್ ಚಿಕನ್ ಬಂದಿದ್ದು ಮಾತ್ರ ಟವಲ್

    ಮನಿಲಾ: ಫ್ರೈಡ್ ಚಿಕನ್ ಆರ್ಡರ್ ಮಾಡಿದ ಮಹಿಳೆಗೆ ಬಂದಿದ್ದ ಫ್ರೈಡ್ ಟವಲ್ ನೋಡಿ ಮಹಿಳೆ ಶಾಕ್ ಆಗಿರುವ ಘಟನೆ ಫಿಲಿಪೈನ್ಸ್‌ನಲ್ಲಿ ನಡೆದಿದೆ. ಈ ಸುದ್ದಿ ಸೋಶಿಯಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ಅಲೀಫರೇಜ್ ಎಂಬ ಮಹಿಳೆ ಫ್ರೈಡ್ ಚಿಕನ್ ತಿನ್ನಬೇಕು ಎಂದು ಆಸೆಯಿಂದ ಫುಡ್ ಆರ್ಡರ್ ಮಾಡಿದ್ದಾಳೆ. ಆದರೆ ಡೀಪ್ ಫ್ರೈಡ್ ಚಿಕನ್ ಬದಲು ಡೀಪ್ ಫ್ರೈಡ್ ಟವಲ್ ಸಿಕ್ಕಿದೆ. ಇದನ್ನೂ ಓದಿ:  ಸಂಜೆ ಸ್ನ್ಯಾಕ್ಸ್‌ಗೆ ಮಾಡಿ ಆಲೂ ಭುಜಿಯಾ

    ಅಲೀ ಚಿಕನ್ ಅಂದುಕೊಂಡು ತಿನ್ನಲು ಶುರು ಮಾಡಿದಾಗ ವಿಚಿತ್ರವೆನಿಸಿದ್ದು, ಪೂರ್ತಿ ಚಿಕನ್ ಬಿಡಿಸಿ ನೋಡಿದ್ದಾಳೆ. ಆಗ ಅದು ಚಿಕನ್ ಅಲ್ಲ, ಟವಲ್ ಎಂದು ಗೊತ್ತಾಗಿದೆ. ಇದರ ವೀಡಿಯೋವನ್ನು ಅಲೀಫರೆಜ್ ತಮ್ಮ ಇನ್‍ಸ್ಟಾಗ್ರಾಮ್‍ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಫುಡ್ ಆರ್ಡರ್ ಮಾಡಿದ ರೆಸ್ಟೋರೆಂಟ್ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.

    ನನ್ನ ಮಗನಿಗೆ ಫ್ರೈಡ್ ಚಿಕನ್ ಆರ್ಡರ್ ಮಾಡಿದ್ದನು. ನಾನು ಫ್ರೈಡ್ ಚಿಕನ್ ತಿನ್ನಲು ಪ್ರಯತ್ನಿಸುತ್ತಿರುವಾಗ, ತುಂಡು ಮಾಡುವುದು ಸಹ ಕಷ್ಟವಾಯಿತ್ತು. ನನ್ನ ಕೈಗಳಿಂದ ಅದನ್ನು ತೆರೆಯಲು ಪ್ರಯತ್ನಿಸಿದೆ ಆಗ ಫ್ರೈಡ್ ಚಿಕನ್ ಬದಲಾಗಿ ಇರುವ ಕರಿದ ಟವೆಲ್ ನೋಡಿ ಆಶ್ಚರ್ಯವಾಯಿತ್ತು. ಇದು ನಿಜಕ್ಕೂ ಗೊಂದಲದ ಸಂಗತಿಯಾಗಿದೆ ಎಂದು ಬರೆದಕೊಂಡಿದ್ದಾರೆ. ಅಲೀಫರೆಜ್ ಫ್ರೈಡ್ ಟವಲ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಈ ಸುದ್ದಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ಸಖತ್ ಮಜವಾಗಿ ಕಮೆಂಟ್ ಮಾಡುತ್ತಿದ್ದಾರೆ.

  • ಮಾಹಾಮಾರಿ ಕೊರೊನಾಗೆ 23 ದಿನದ ಕಂದಮ್ಮ ಬಲಿ

    ಮಾಹಾಮಾರಿ ಕೊರೊನಾಗೆ 23 ದಿನದ ಕಂದಮ್ಮ ಬಲಿ

    ಮನಿಲಾ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 23 ದಿನದ ಹಸುಗೂಸು ಸಾವನ್ನಪ್ಪಿರುವ ಪ್ರಕರಣ ಫಿಲಿಪ್ಪೀನ್ಸ್ ನ ದಕ್ಷಿಣ ಮನಿಲಾದಲ್ಲಿ ವರದಿಯಾಗಿದೆ.

    ದಕ್ಷಿಣ ಮನಿಲಾದ 70 ಕಿಮೀ ದೂರದಲ್ಲಿರುವ ಲಿಪಾ ಪಟ್ಟಣದಲ್ಲಿ ಏಪ್ರಿಲ್ 5 ರಂದು 23 ದಿನದ ಮಗು ಸಾವನ್ನಪ್ಪಿತ್ತು. ಆದರೆ ಮಗು ಸಾವನ್ನಪ್ಪಲು ಕಾರಣವೇನು ಎಂಬುದು ತಿಳಿದು ಬಂದಿರಲಿಲ್ಲ. ಗುರುವಾರ ಮಗುವಿನ ವೈದ್ಯಕೀಯ ಪರೀಕ್ಷಾ ವರದಿ ಬಂದಿದ್ದು, ಮಗುವಿಗೆ ಕೊರೊನಾ ಸೋಂಕು ತಗುಲಿತ್ತು ಎಂಬುದು ಬೆಳಕಿಗೆ ಬಂದಿದೆ.

    ಈ ಹಿಂದೆ ಬುಧವಾರ ಬ್ರೆಜಿಲ್‍ನಲ್ಲಿ ಅವಧಿ ಪೂರ್ವವಾಗಿ ಹುಟ್ಟಿದ್ದ 4 ದಿನದ ಶಿಶು ಸಾವನ್ನಪ್ಪಿರುವುದು ವರದಿಯಾಗಿತ್ತು. ಶ್ವಾಸಕೋಶ ವೈಫಲ್ಯದಿಂದ ಮಗು ಮೃತಪಟ್ಟಿತ್ತು. ಈ ಪ್ರಕರಣ ವರದಿಯಾದ ಒಂದು ದಿನದ ಬಳಿಕ ಅಂದರೆ ಗುರುವಾರ ಬೊಲಿವಿಯಾದಲ್ಲಿ ಐಸಿಯುನಲ್ಲಿ ಇರಿಸಿದ್ದ 5 ತಿಂಗಳ ಮಗು ಕೊರೊನಾದಿಂದ ಮೃತಪಟ್ಟಿತ್ತು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಫಿಲಿಪ್ಪೀನ್ಸ್ ನ ಆರೋಗ್ಯ ಇಲಾಖೆ ಗುರುವಾರ ಪ್ರಕಟ ಮಾಡಿದ್ದ ದೈನಂದಿನ ಬುಲೆಟಿನ್‍ನಲ್ಲಿ ಲಿಪಾದಲ್ಲಿ ಮೃತಪಟ್ಟ ಮಗುವಿನ ಬಗ್ಗೆ ಉಲ್ಲೇಖಿಸಿದೆ. ಗುರುವಾರ ರಾತ್ರಿವರೆಗೆ ಫಿಲಿಪ್ಪೀನ್ಸ್ ನಲ್ಲಿ 4,076 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 203 ಮಂದಿ ಸಾವನ್ನಪ್ಪಿದ್ದು, 124 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದ ಅತೀ ದೊಡ್ಡ ಲುಜಾನ್ ದ್ವೀಪವನ್ನು ಮಾರ್ಚ್ 17ರಿಂದ ಏಪ್ರಿಲ್ 12ರವರೆಗೆ ಸಂಪೂರ್ಣ ಲಾಕ್‍ಡೌನ್ ಮಾಡಲಾಗಿದೆ.

  • ಪೊಲೀಸ್ರು ಬಂದು ಮುಂದೆ ನಿಂತ್ರೂ ಸೆಕ್ಸ್ ನಿಲ್ಲಿಸಲು ಒಪ್ಪದ ಜೋಡಿ

    ಪೊಲೀಸ್ರು ಬಂದು ಮುಂದೆ ನಿಂತ್ರೂ ಸೆಕ್ಸ್ ನಿಲ್ಲಿಸಲು ಒಪ್ಪದ ಜೋಡಿ

    – ಕಡಲ ತೀರದಲ್ಲಿ ಎಲ್ಲರ ಮುಂದೆ ಬೆತ್ತಲಾದ್ರು

    ಮನಿಲಾ: ಬ್ರಿಟಿಷ್ ಯುವತಿ ಮತ್ತು ಆಸ್ಟ್ರೇಲಿಯಾದ ಯುವಕ ಹಾಡಹಗಲೇ ಜನರು ಓಡಾಡುವ ಬೀಚ್‍ನಲ್ಲಿ ಸೆಕ್ಸ್ ಮಾಡಿದ್ದು, ಪೊಲೀಸರು ಬಂದರೂ ಮುಂದುವರಿಸಿರುವ ಘಟನೆ ಫಿಲಿಪೈನ್ಸ್ ನಲ್ಲಿ ನಡೆದಿದೆ.

    ಜಾಸ್ಮಿನ್ ನೆಲ್ಲಿ ಮತ್ತು ಆಂಥೋನಿ ಕ್ಯಾರಿಯೊ ಎಂದು ಗುರುತಿಸಲಾಗಿದೆ. ಇಬ್ಬರೂ 26 ನೇ ವಯಸ್ಸಿನವರಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

    ಯುವಕ ಮತ್ತು ಯುವತಿ ಸಂಜೆ ಬೀಜ್ ಬಳಿ ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ ಇಬ್ಬರೂ ನಗ್ನವಾಗಿ ಲೈಂಗಿಕ ಸಂಬಂಧ ಹೊಂದಿದ್ದಾರೆ. ಆ ಬೀಚ್‍ನಲ್ಲಿ ಅನೇಕ ಮಕ್ಕಳು ತಮ್ಮ ಕುಟುಂಬದವರೊಂದಿಗೆ ಬಂದಿದ್ದು, ತುಂಬಾ ಜನರು ಕೂಡ ಓಡಾಡುತ್ತಿದ್ದರು. ಆದರೂ ಜೋಡಿ ಅಸಭ್ಯವಾಗಿ ಜೋಡಿ ಸೆಕ್ಸ್ ಮಾಡಿದ್ದಾರೆ.

    ಪೊಲೀಸರು ಸ್ಥಳಕ್ಕೆ ಬಂದು ಜೋಡಿ ಮುಂದೆ ನಿಂತಿದ್ದಾರೆ. ಆದರೆ ಜೋಡಿ ಸೆಕ್ಸ್ ಮಾಡುವುದನ್ನು ನಿಲ್ಲಿಸದೆ ಮುಂದುವರಿಸಿದ್ದಾರೆ. ನಂತರ ಅವರನ್ನು ಪೊಲೀಸರು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

    ಯುವವ-ಯುವತಿ ಕಾರಿನಲ್ಲಿ ಬೀಚ್‍ಗೆ ಹೋಗಿದ್ದಾರೆ. ಆದರೆ ಅವರು ಬೀಚ್‍ಗೆ ಹೋಗುವ ಮೊದಲು ತುಂಬಾ ಕುಡಿದಿದ್ದರು. ನಂತರ ಇಬ್ಬರು ಸುತ್ತಮುತ್ತಲೂ ಜನರು ಇದ್ದಾರೆ ಎಂದು ನೋಡದೆ ಸೆಕ್ಸ್ ಮಾಡಲು ಮುಂದಾಗಿದ್ದಾರೆ. ನಮ್ಮ ಪೊಲೀಸರು ಅವರ ಪಕ್ಕದಲ್ಲಿ ಹೋಗಿ ನಿಂತರೂ ಸೆಕ್ಸ್ ಮಾಡುವುದನ್ನು ಮುಂದುವರಿಸಿದ್ದಾರೆ. ಕೊನೆಗೆ ಪೊಲೀಸರು ಇಬ್ಬರನ್ನು ಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ದಂಡ ವಿಧಿಸಲಾಗಿದೆ. ನಂತರ ಜಾಮೀನಿನ ಮೇಲೆ ಜೋಡಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಇದೇ ತಿಂಗಳು ವಿಚಾರಣೆಗೆಂದು ನ್ಯಾಯಾಲಯಕ್ಕೆ ಹಾಜರಾಗಬೇಕು. ಇನ್ನೂ ನಿಖರವಾದ ದಿನಾಂಕವನ್ನು ಸೂಚಿಸಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

  • ಹೆಲ್ಮೆಟ್ ಹಾಕಿಕೊಂಡ್ರೆ ಜೀವ ಉಳಿಯುತ್ತೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ

    ಹೆಲ್ಮೆಟ್ ಹಾಕಿಕೊಂಡ್ರೆ ಜೀವ ಉಳಿಯುತ್ತೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ

    ಮನಿಲಾ: ಲಾರಿಯಡಿ ಬಿದ್ದು ಅದರ ಹಿಂಬದಿ ಚಕ್ರ ಬೈಕ್ ಸವಾರನ ಮೇಲೆ ಹರಿದರೂ ಆತ ಎದ್ದು ನಿಂತ ಅಚ್ಚರಿಯ ಘಟನೆ ಫಿಲಿಪೈನ್ಸ್ ನಲ್ಲಿ ನಡೆದಿದೆ.

    ಈ ಘಟನೆ ಮಂಗಳವಾರ ಫಿಲಿಪೈನ್ಸ್ ನ ಕೈಂಟಾ ನಗರದಲ್ಲಿ ನಡೆದಿದ್ದು, ಈ ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೋಟರ್ ಬೈಕ್ ಸವಾರ ಲಾರಿ ಕೆಳಗೆ ಬಿದ್ದರೂ, ಪವಾಡ ಸದೃಶವೆಂಬಂತೆ ಎಂದು ನಿಂತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

    ವಿಡಿಯೋದಲ್ಲೇನಿದೆ?:
    ಲಾರಿಯೊಂದು ಮುಂದೆ ಹೋಗುತ್ತಿರುತ್ತದೆ. ಅದರ ಹಿಂದೆ ಇಬ್ಬರು ಮೋಟರ್ ಬೈಕ್ ಸವಾರರು ಹೋಗುತ್ತಿರುತ್ತಾರೆ. ಮುಂದೆ ಹೋಗುತ್ತಿದ್ದ ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದು, ಆತ ಲಾರಿಯನ್ನು ಓವರ್ ಟೇಕ್ ಮಾಡಿ ಮುಂದೆ ಹೋಗಲು ಪ್ರಯತ್ನಿಸುತ್ತಾನೆ. ಆಗ ಪಾದಾಚಾರಿ ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದು, ಬೈಕಿನ ನಿಯಂತ್ರಣ ತಪ್ಪಿ ಬಿದ್ದು, ಲಾರಿಯಡಿ ಸಿಲುಕುತ್ತಾನೆ.

    ಲಾರಿ ಕೆಳಗೆ ಬಿದ್ದ ಸವಾರನ ಮೇಲೆ ಲಾರಿಯ ಹಿಂಬದಿಯ ಚಕ್ರ ಹರಿಯುತ್ತದೆ. ಆದರೆ ಆತ ತನಗೇನೂ ಆಗಿಲ್ಲವೆಂಬಂತೆ ಕೆಲವೇ ಸೆಕೆಂಡ್ ಗಳಲ್ಲಿ ಎದ್ದು ನಿಲ್ಲುತ್ತಾನೆ. ಈ ಅಪಘಾತದಿಂದ ಬೈಕ್ ಸವಾರನ ತಲೆಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅಪಘಾತವಾದರೂ ಲಾರಿ ಚಾಲಕ ಮಾತ್ರ ಕೆಳಗಿಳಿದು ಬಂದು ನೋಡಲಿಲ್ಲ. ಆದ್ರೆ ಅಪಘಾತವಾದ ತಕ್ಷಣವೇ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರು ಬೈಕ್ ಸವಾರ ಸಹಾಯಕ್ಕೆ ಬಂದಿದ್ದಾರೆ.

    ಈ ಎಲ್ಲಾ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಭೀಕರ ಅಪಘಾತವಾದರೂ ಹೆಲ್ಮೆಟ್ ನಿಂದಾಗಿ ಬೈಕ್ ಸವಾರನ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ.

    https://www.youtube.com/watch?v=ivQHuU-Ykws

     

     

  • ಸಾವಿರಾರು ಜನ ಓಡಾಡೋ ರಸ್ತೆಯ ಎಲೆಕ್ಟ್ರಾನಿಕ್ ಫಲಕದಲ್ಲಿ ಪ್ರಸಾರವಾಯ್ತು ಪೋರ್ನ್ ವಿಡಿಯೋ!

    ಸಾವಿರಾರು ಜನ ಓಡಾಡೋ ರಸ್ತೆಯ ಎಲೆಕ್ಟ್ರಾನಿಕ್ ಫಲಕದಲ್ಲಿ ಪ್ರಸಾರವಾಯ್ತು ಪೋರ್ನ್ ವಿಡಿಯೋ!

    ಮನಿಲಾ: ರಸ್ತೆಯಲ್ಲಿರುವ ದೊಡ್ಡ ಎಲೆಕ್ಟ್ರಾನಿಕ್ ಫಲಕದಲ್ಲಿ ಜಾಹಿರಾತು ಪ್ರಸಾರವಾಗೋ ಬದಲು ಪೋರ್ನ್ ವಿಡಿಯೋ ಪ್ರಸಾರವಾದ ಘಟನೆ ಫಿಲಿಪೈನ್ಸ್ ನ ರಾಜಧಾನಿ ಮನಿಲಾದ ಮಕಾಟಿ ಸಿಟಿಯಲ್ಲಿ ನಡೆದಿದೆ.

    30 ಸೆಕೆಂಡ್‍ಗಳಿರುವ ಈ ಪೋರ್ನ್ ವಿಡಿಯೋ ಅಕಸ್ಮಾತಾಗಿ ರಸ್ತೆ ಮಧ್ಯೆ ಜನಸಂದಣಿಯಲ್ಲಿರುವ ಎಲೆಕ್ಟ್ರಾನಿಕ್ಸ್ ಫಲಕದಲ್ಲಿ ಪ್ರಸಾರವಾಗಿದೆ. ಈ ವಿಡಿಯೋ ನೋಡಿದ ಸಾರ್ವಜನಿಕರು ಒಂದು ಕ್ಷಣ ದಂಗಾಗಿ ಹೋದರು. ವಿಡಿಯೋದಲ್ಲಿದ್ದ ಜೋಡಿ ನಗ್ನವಾಗಿದ್ದು, ಆ ರಸ್ತೆಯಲ್ಲಿದ್ದ ಲಕ್ಷಾಂತರ ಮಂದಿ ಅಂದ್ರೆ ಮಕ್ಕಳಿಂದ ವಯೋವೃದ್ಧರವರೆಗೂ ಈ ವಿಡಿಯೋ ನೋಡುವಂತಾಯಿತು.

    ಈ ವಿಡಿಯೋ ಪ್ರಸಾರವಾಗುತ್ತಿದ್ದಂತೆ ಮಕಾಟಿಯ ಮೇಯರ್ ಅಭಿಗೇಲ್ ಬಿನಯ್ ಅದನ್ನು ನಿಲ್ಲಿಸಲ್ಲು ಹೇಳಿದ್ದಾರೆ. ಆದರೆ ಅಷ್ಟರಲ್ಲಿ ಅಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದಿದ್ದರು. ಇನ್ನೂ ಕೆಲವರು ಆ ವಿಡಿಯೋ ನೋಡಲಾಗದೇ ಅದನ್ನು ನಿರ್ಲಕ್ಷಿಸಿದರು.

    ಫಿಲಿಪೈನ್ಸ್ ನಲ್ಲಿ ಈ ರಸ್ತೆ ಅತ್ಯಂತ ಬ್ಯೂಸಿ ರಸ್ತೆಯಾಗಿದ್ದು, ಸಾವಿರಾರು ವಾಹನಗಳು ಹಾಗೂ ಸಾಕಷ್ಟು ಜನರು ಈ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ಇಂತಹ ರಸ್ತೆಯಲ್ಲಿ ಪೋರ್ನ್ ವಿಡಿಯೋ ಪ್ರಸಾರವಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ಆಸಿಯಾನ್ ಶೃಂಗದಲ್ಲಿ ಡೊನಾಲ್ಡ್ ಟ್ರಂಪ್ ಎಡವಟ್ಟು

    ಆಸಿಯಾನ್ ಶೃಂಗದಲ್ಲಿ ಡೊನಾಲ್ಡ್ ಟ್ರಂಪ್ ಎಡವಟ್ಟು

    ಮನಿಲಾ: ಫಿಲಿಪ್ಪಿನ್ಸ್ ಮನಿಲಾದಲ್ಲಿ ಆಸಿಯಾನ್ ಶೃಂಗಸಭೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಡವಟ್ಟು ಮಾಡಿಕೊಂಡಿದ್ದಾರೆ.

    ಶೃಂಗದ ವೇಳೆ ಪರಸ್ಪರ ಏಕತೆ ಪ್ರದರ್ಶಿಸುವ ಸಲುವಾಗಿ ವಿಶ್ವದ ಎಲ್ಲ ನಾಯಕರು ಕೈ ಕೈ ಹಿಡಿದುಕೊಂಡು ಗ್ರೂಪ್ ಫೋಟೋಗೆ ಪೋಸ್ ಕೊಡಲು ನಿಂತಿದ್ದರು. ಈ ವೇಳೆ ಡೊನಾಲ್ಡ್ ಟ್ರಂಪ್ ಕೈ ಕೊಡಲು ಪರದಾಡಿದ್ದಾರೆ. ಕೊನೆಗೆ ಕೈಯನ್ನು ನೀಡುವ ಮೂಲಕ ಗ್ರೂಪ್ ಫೋಟೋಗೆ ಪೋಸ್ ನೀಡಿದ್ದಾರೆ.

    ಟ್ರಂಪ್ ಕೈ ಕೊಡಲು ಪರದಾಡಿದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಶೃಂಗದಲ್ಲಿ ಭಾರತದ ಪ್ರಧಾನಿ ಮೋದಿ, ಚೀನಾ, ರಷ್ಯಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಕೆನಡಾ, ಜಪಾನ್, ದಕ್ಷಿಣ ಕೊರಿಯಾದ ನಾಯಕರು ಭಾಗವಹಿದ್ದರು.

    ಆಸಿಯಾನ್ ಶೃಂಗದಲ್ಲಿ ಭಾಗವಹಿಸಿರುವ ಪ್ರಧಾನಿ ಮೋದಿ ಅವರು ಟ್ರಂಪ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

    https://twitter.com/ASEAN/status/930281982046625796