Tag: ಮನಸ್ತಾಪ

  • ದರ್ಶನ್ ಜೊತೆಗಿನ ಮನಸ್ತಾಪ: ಅವರಿಗೆ ಒಂದಷ್ಟು ಪ್ರಶ್ನೆ ಕೇಳಬೇಕಿದೆ ಎಂದ ಧ್ರುವ

    ದರ್ಶನ್ ಜೊತೆಗಿನ ಮನಸ್ತಾಪ: ಅವರಿಗೆ ಒಂದಷ್ಟು ಪ್ರಶ್ನೆ ಕೇಳಬೇಕಿದೆ ಎಂದ ಧ್ರುವ

    ಸ್ಯಾಂಡಲ್ ವುಡ್ ಹೆಸರಾಂತ ನಟ ದರ್ಶನ್ (Darshan) ಮತ್ತು ಧ್ರುವ ಸರ್ಜಾ (Dhruva Sarja) ನಡುವೆ ಕೋಲ್ಡ್ ವಾರ್ ನಡೀತಾ ಇದೆ ಎನ್ನುವ ವಿಚಾರ ಹಲವು ದಿನಗಳಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕಾವೇರಿ ಹೋರಾಟ ಸಂದರ್ಭದಲ್ಲಿ ಧ್ರುವ ಮತ್ತು ದರ್ಶನ್ ಹತ್ತಿರದಲ್ಲೇ ಕುಳಿತುಕೊಂಡಿದ್ದರೂ ಇಬ್ಬರೂ ಮಾತನಾಡಲಿಲ್ಲ ಎನ್ನುವುದು ಇದಕ್ಕೆ ಸಾಕ್ಷಿಯಾಗಿತ್ತು. ಧ್ರುವ ಮತ್ತು ದರ್ಶನ್ ಅಭಿಮಾನಿಗಳು ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಆರೋಪ ಪ್ರತ್ಯಾರೋಪವನ್ನೂ ಮಾಡುತ್ತಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಧ್ರುವ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ದರ್ಶನ್ ಜೊತೆಗಿನ ಮುನಿಸಿನ ಬಗ್ಗೆ ಮಾತನಾಡಿದ ಧ್ರುವ, ‘ದರ್ಶನ್ ನಮ್ಮ ಸೀನಿಯರ್ ಆಕ್ಟರ್. ಅವರ ಪ್ರಸೆನ್ಸ್, ಆಬ್ಸೆಂಟ್ ಅಲ್ಲೂ ಗೌರವ ಇದೆ. ಆದರೆ, ದರ್ಶನ್ ಅವ್ರಿಗೆ ಒಂದೆರಡು ಪ್ರಶ್ನೆ ಕೇಳಬೇಕಿದೆ. ಆ ಪ್ರಶ್ನೆಗಳನ್ನ ಕ್ಲಿಯರ್ ಮಾಡಿಕೊಳ್ಳದೇ ಮನಸ್ಸಲ್ಲೊಂದು, ಎದುರು ಒಂದು‌ ಮಾತಾಡೋಕ್ ಆಗಲ್ಲ.  ಮನಸ್ಸಲ್ಲಿ ಒಂದ್ ಇಟ್ಕೊಂಡು ಯಾರನ್ನೋ ಮೆಚ್ಚಿಸಲು ನಾಟಕ ಆಡುವ ಅವಶ್ಯಕತೆ ನನಗೆ ಇಲ್ಲ. ಆರ್ಟಿಫಿಸಿಯಲ್ ಆಗಿ ಫೇಕ್ ಆಗಿ ಇರೋಕ್ ನನಗೆ ಬರಲ್ಲ. ನಮ್ಗೂ ಸೆಲ್ಫ್ ರೆಸ್ಪೆಕ್ಟ್, ಸ್ವಾಭಿಮಾನ ಇದೆ ಅಲ್ವಾ. ದರ್ಶನ್ ಸೀನಿಯರ್ ಆಕ್ಟರ್. ಅವರ ಬಗ್ಗೆ ಗೌರವ ಇದ್ದೇ ಇರುತ್ತೆ’ ಎಂದು ಹೇಳುವ ಮೂಲಕ ಮತ್ತಷ್ಟು ಅನುಮಾನ ಮೂಡಿಸಿದ್ದಾರೆ ಧ್ರುವ.ಇದನ್ನೂ ಓದಿ:ಪತ್ನಿ ಜೊತೆ ಮಾಲ್ಡೀವ್ಸ್‌ನಲ್ಲಿ ‘ವಿಕ್ರಾಂತ್‌ ರೋಣ’ ನಟ

    ಮುಂದುವರೆದು ಮಾತನಾಡಿದ ಧ್ರುವ, ‘ನಮ್ಮ ಸಿನಿಮಾಗಳಿಗೆ ಅವ್ರು ಡಬ್ಬಿಂಗ್ ಮಾಡಿಕೊಟ್ಟಿದ್ದಾರೆ. ಮನಸ್ಸಲ್ಲಿ ಒಂದು ಇಟ್ಕೊಂಡು ನಾಟಕ ಆಡೋಕ್ ನನ್ಗೆ ಬರಲ್ಲ. ಅದು ನಾನಲ್ಲ ಅನ್ಸುತ್ತೆ. ನನಗೆ ದರ್ಶನ್ ಅವ್ರ ಬಳಿ ಕೇಳಲು ಕೆಲ ಪ್ರಶ್ನೆಗಳಿವೆ.ನಾನು ಅವರ ಬಳಿ ಮಾತನಾಡಿ ನೋಡ್ತೀನಿ. ಮನಸ್ತಾಪ ಕ್ಲಿಯರ್ ಆಗಬಹುದು, ಇಲ್ಲ ಆಗದೇ ಇರಬಹುದು. ಅದು ನಮ್ಮ ವೈಯಕ್ತಿಕ’ ಎಂದು ಹೇಳುವ ಮೂಲಕ ಮನಸ್ತಾಪ ಇರುವುದನ್ನು ಪರೋಕ್ಷವಾಗಿ ಅವರು ಒಪ್ಪಿಕೊಂಡಿದ್ದಾರೆ.

     

    ಧ್ರುವ ಮತ್ತು ದರ್ಶನ್ ಅವರ ಮನಸ್ತಾಪಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅವರ ಮಧ್ಯ ಮತ್ತಷ್ಟು ಮನಸ್ತಾಪ ಆಗುವಂತೆ ಕೆಲವರು ಕುತಂತ್ರ ನಡೆಸಿದ್ದಾರಂತೆ. ಅವರಿಗೆ ಧ್ರುವ ಖಡಕ್ ವಾರ್ನಿಂಗ್ ನೀಡಿದ್ದಾರೆ. ‘ಈ ಬೆಳವಣಿಗೆ ಆದ್ಮೇಲೆ ನನ್ನ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಆಗಿವೆ. ನಮ್ಮ ನಮ್ಮಲ್ಲೇ ವೈರಿಂಗ್ ಮಾಡ್ತಿದ್ದಾರೆ. ಈ ರೀತಿ ಮಾಡುವವರಿಗೆ ಒಂದು ರಿಕ್ವೆಸ್ಟ್. ದಯವಿಟ್ಟು ನನ್ನ ಹತ್ರ ತಗಲಾಕ್ಕೊಬೇಡಿ. ಫೇಕ್ ಆಕೌಂಟ್ ಕ್ರಿಯೇಟ್ ಮಾಡ್ತಿರೋರು ಎಚ್ಚರವಾಗಿರಿ’ ಎಂದು ಧ್ರುವ ಎಚ್ಚರಿಕೆಯನ್ನು ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಜವಾನ್’ ಚಿತ್ರದ ನಿರ್ದೇಶಕನ ಜೊತೆ ನಯನತಾರಾ ಮುನಿಸು

    ‘ಜವಾನ್’ ಚಿತ್ರದ ನಿರ್ದೇಶಕನ ಜೊತೆ ನಯನತಾರಾ ಮುನಿಸು

    ಶಾರುಖ್ ಖಾನ್ (Shah Rukh Khan) ನಟನೆಯ ಜವಾನ್ (Jawan) ಸಿನಿಮಾದಲ್ಲಿ ನಟಿಸಿದ್ದ ದಕ್ಷಿಣದ ಹೆಸರಾಂತ ತಾರೆ ನಯನತಾರಾ (Nayantara) ಆ ಚಿತ್ರದ ನಿರ್ದೇಶಕ ಅಟ್ಲಿ (Atlee) ಜೊತೆ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ನಿರ್ದೇಶಕನ ಜೊತೆಗಿನ ಮುನಿಸಿನಿಂದಾಗಿಯೇ ಇನ್ಮುಂದೆ ಅವರು ಬಾಲಿವುಡ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎನ್ನುವ ಗುಸುಗುಸು ಶುರುವಾಗಿತ್ತು. ಇದೆಲ್ಲದಕ್ಕೂ ಉತ್ತರ ಎನ್ನುವಂತೆ ಅಟ್ಲಿ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ ನಯನತಾರಾ.

    ಜವಾನ್ ಸಿನಿಮಾದಲ್ಲಿ ತಮ್ಮ ಪಾತ್ರವನ್ನು ಕಟ್ ಮಾಡಲಾಗಿದೆ ಮತ್ತು ಶೂಟ್ ಮಾಡಿದಷ್ಟು ದೃಶ್ಯಗಳನ್ನು ತೋರಿಸಿಲ್ಲವೆಂದು ನಯನತಾರ ಅಸಮಾಧಾನ ಹೊಂದಿದ್ದರು ಎಂದು ಹೇಳಲಾಗಿತ್ತು. ದೀಪಿಕಾ ಪಡುಕೋಣೆ ಅವರದ್ದು ಅತಿಥಿ ಪಾತ್ರವಾಗಿದ್ದರೂ, ಅವರನ್ನು ನಾಯಕಿ ಎನ್ನುವಂತೆ ತೋರಿಸಲಾಗಿತ್ತು ಎನ್ನುವ ಕೋಪ ಕೂಡ ನಯನತಾರಾ ಹೊಂದಿದ್ದರು. ಹಾಗಾಗಿ ನಿರ್ದೇಶಕ ಅಟ್ಲಿ ಬಗ್ಗೆ ಮುನಿಸಿಕೊಂಡಿದ್ದರು ಎಂದು ಹೇಳಲಾಗಿತ್ತು.

    ಆದರೆ, ಅಟ್ಲಿ ಅವರ ಹುಟ್ಟು ಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿರುವ ನಯನತಾರಾ, ಜವಾನ್ ಸಿನಿಮಾದ ಸೆಟ್ ನಲ್ಲಿ ಸೆರೆ ಹಿಡಿಯಲಾಗಿದ್ದ ಅಟ್ಲಿ ಜೊತೆಗಿನ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ. ಈ ಮೂಲಕ ತಮ್ಮಿಬ್ಬರ ಮಧ್ಯ ಯಾವುದೇ ಅಸಮಾಧಾನವಿಲ್ಲ ಎನ್ನುವುದನ್ನು ತೋರಿಸಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ಚಿತ್ರಕ್ಕೆ ಸಮಂತಾ ನಾಯಕಿನಾ? ಸ್ಯಾಮ್ ಕಡೆಯಿಂದ ಸಿಕ್ತು ಉತ್ತರ

    ಜವಾನ್ ಸಿನಿಮಾ ರಿಲೀಸ್ ಗೂ ಮುನ್ನ ನಿರಂತರವಾಗಿ ನಯನತಾರಾ ಅವರನ್ನು ಹಾಡಿ ಹೊಗಳಿದ್ದರು ಶಾರುಖ್ ಖಾನ್. ಜವಾನ್ ಸಿನಿಮಾದ ಪೋಸ್ಟರ್, ಪ್ರಿವ್ಯೂ ರಿಲೀಸ್ ಆಗುತ್ತಿದ್ದಂತೆಯೇ ನಯನತಾರಾ ಅವರನ್ನು ಬಿರುಗಾಳಿಗೆ ಹೋಲಿಸಿದ್ದರು. ಸಿನಿಮಾದಲ್ಲಿ ಇನ್ನೂ ಹಲವರು ನಾಯಕಿಯರಿದ್ದರೂ ನಯನತಾರಾ ಅವರದ್ದು  ಪವರ್ ಫುಲ್ ಪಾತ್ರವಾಗಿದ್ದರಿಂದ ಅವರನ್ನು ಮೆಚ್ಚಿ ಮಾತನಾಡಿದ್ದರು.

     

    ಪ್ರಿವ್ಯೂನಲ್ಲಿ ನಯನತಾರಾ (Nayantara) ಅವರನ್ನು ಸಾಹಸ ದೃಶ್ಯಗಳಲ್ಲಿ ಪ್ರೇಕ್ಷಕರು ನೋಡಿ ಅವಕ್ಕಾಗಿದ್ದರು. ಆಕೆಯನ್ನು ಇನ್ನಷ್ಟು ನೋಡಬಯಸಿದ್ದರು. ನಯನತಾರಾ ಪೋಸ್ಟರ್ ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ನಯನತಾರಾ ಅವರ ಪಾತ್ರವನ್ನು ‘ಬಿರುಗಾಳಿಗೂ ಮುಂಚೆ ಬರುವ ಗುಡುಗು’ ಎಂದು ಶಾರುಖ್ ಖಾನ್ ವರ್ಣಿಸಿದ್ದು, ಆಕೆಯ ಪಾತ್ರದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಾಗಿತ್ತು. ಸಿನಿಮಾ ರಿಲೀಸ್ ನಂತರ ಏಕಾಏಕಿ ಚಿತ್ರತಂಡದ ಮೇಲೆ ನಯನಾ ಮುನಿಸಿಕೊಂಡಿದ್ದರು ಎಂದು ಹೇಳಲಾಗಿತ್ತು. ಇದೀಗ ಎಲ್ಲದಕ್ಕೂ ಅವರೇ ಉತ್ತರ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]