Tag: ಮನವಿ ಪತ್ರ

  • ಡಿಕೆಶಿ ಕಾಲಿಗೆ ಬಿದ್ದ ಶಾಸಕ ಮುನಿರತ್ನ

    ಡಿಕೆಶಿ ಕಾಲಿಗೆ ಬಿದ್ದ ಶಾಸಕ ಮುನಿರತ್ನ

    ಬೆಂಗಳೂರು: ಶಾಸಕ ಮುನಿರತ್ನ (Muniratna) ಅವರು ಅರಮನೆ ಮೈದಾನದಲ್ಲಿ (Palace Ground) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿಯಾಗಿ ಅವರ ಕಾಲಿಗೆ ಬಿದ್ದು ಅನುದಾನ (Grant) ನೀಡುವಂತೆ ಮನವಿ ಪತ್ರ (Letter of Appeal) ಸಲ್ಲಿಕೆ ಮಾಡಿದ್ದಾರೆ.

    ಅರಮನೆ ಮೈದಾನದಲ್ಲಿ ಕಂಬಳ ಭೂಮಿ ಪೂಜೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ ಶಾಸಕ ಮುನಿರತ್ನ ಅವರು ವೇದಿಕೆ ಮುಂಭಾಗದಲ್ಲಿ ಡಿಕೆಶಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲು ಕಾಯುತ್ತಿದ್ದರು. ಕಾರ್ಯಕ್ರಮದ ಬಳಿಕ ಡಿಕೆ ಶಿವಕುಮಾರ್ ಅವರು ವೇದಿಕೆಯಿಂದ ಕೆಳಗೆ ಬಂದ ವೇಳೆ ಮುನಿರತ್ನ ಅವರು ಡಿಕೆಶಿ ಅವರ ಕಾಲಿಗೆ ಬಿದ್ದು ತಮ್ಮ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಮನವಿ ಪತ್ರವನ್ನು ನೀಡಿದ್ದಾರೆ. ಇದನ್ನೂ ಓದಿ: ಬಾಲಕೃಷ್ಣ ಮೊದಲು ತಮ್ಮ ಅನುದಾನ ಪಡೆಯಲಿ: ಬೊಮ್ಮಾಯಿ

    ಕಾಂಗ್ರೆಸ್ 126 ಕೋಟಿ ರೂ. ಅನುದಾನ ವಾಪಸ್ ಪಡೆದ ಹಿನ್ನೆಲೆ ಶಾಸಕ ಮುನಿರತ್ನ ಮತ್ತು ಅವರ ಬೆಂಬಲಿಗರು ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದ್ದರು. ಬಳಿಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶಾಸಕರನ್ನು ಭೇಟಿ ಮಾಡಿ ಅವರ ಮನವೊಲಿಸಿ ಧರಣಿ ಹಿಂಪಡೆಯುವಂತೆ ಮನವಿ ಮಾಡಿದ್ದರು. ಬಿಎಸ್‌ವೈ ಭರವಸೆ ಹಿನ್ನೆಲೆ ಮುನಿರತ್ನ ಉಪವಾಸ ಸತ್ಯಾಗ್ರಹ ಹಿಂಪಡೆದು ಅರಮನೆ ಮೈದಾನಕ್ಕೆ ತೆರಳಿ ಅನುದಾನ ಬಿಡುಗಡೆ ಮಾಡುವಂತೆ ಡಿಕೆಶಿಗೆ ಮನವಿ ಪತ್ರ ಸಲ್ಲಿಸಿದರು. ಇದನ್ನೂ ಓದಿ: ಯಡಿಯೂರಪ್ಪ ಮನವೊಲಿಕೆ – ಉಪವಾಸ ಸತ್ಯಾಗ್ರಹ ವಾಪಸ್‌ ಪಡೆದ ಶಾಸಕ ಮುನಿರತ್ನ

    ಮುನಿರತ್ನ ಅವರ ಮನವಿಯನ್ನು ಸ್ವೀಕರಿಸಿದ ಬಳಿಕ ಡಿಕೆಶಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಶಾಸಕರು ಮನವಿ ಪತ್ರ ಕೊಟ್ಟಿದ್ದಾರೆ. ನಾನು ಬೆಂಗಳೂರು ಕಂಬಳ ಭೂಮಿ ಪೂಜೆಗೆ ಬಂದಿದ್ದೆ. ಪ್ರಜಾಪ್ರಭುತ್ವದಲ್ಲಿ ಧರಣಿ, ಹೋರಾಟ ಎಲ್ಲಾ ಆಗಬೇಕು. ಮುನಿರತ್ನ ಇಲ್ಲಿ ಬಂದು ಸೀನ್ ಕ್ರಿಯೇಟ್ ಮಾಡಬಾರದಿತ್ತು. ನಾನು ಅವರನ್ನು ಭೇಟಿ ಮಾಡುತ್ತೇನೆ. ಭೇಟಿಗಾಗಿ ಸಮಯ ನಿಗದಿ ಮಾಡುತ್ತೇನೆ. ಈಗ ಮೈಸೂರು ದಸರಾ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಮತ ಹಾಕದಿದ್ರೆ ಅಭಿವೃದ್ಧಿ ಮಾಡಲ್ಲ- ಬಾಲಕೃಷ್ಣ ಪರೋಕ್ಷ ಹೇಳಿಕೆಗೆ ಭಾರೀ ಆಕ್ರೋಶ

    ಯಾರೂ ನನ್ನ ಕಾಲಿಗೆ ಬೀಳುವ ಅವಶ್ಯಕತೆ ಇಲ್ಲ. ಬೇಕಾದರೆ ಜನರ ಕಾಲಿಗೆ ಬೀಳಲಿ. ನನ್ನ ಕಾಲಿಗೆ ಬೀಳಿಸಿಕೊಳ್ಳಲು ನಾನು ಸ್ವಾಮೀಜಿ ಅಲ್ಲ ಎಂದು ಹೇಳಿದರು. ಈ ಹಿಂದೆ ಮುನಿರತ್ನ ಅನುದಾನದ ವಿಚಾರವಾಗಿ ಡಿಕೆಶಿ ಕಾಲಿಗೆ ಬೀಳುವುದಾಗಿ ಹೇಳಿಕೆ ನೀಡಿದ್ದರು. ಇದೀಗ ನುಡಿದಂತೆ ಡಿಕೆಶಿ ಕಾಲಿಗೆ ಬಿದ್ದು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: ದೇವರಮನೆ ಪ್ರವಾಸ ಮುಗಿಸಿ ವಾಪಸ್ ಬರುತ್ತಿದ್ದಾಗ ಯುವಕ ಕಣ್ಮರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಂಪಿ ವಿವಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 85 ಲಕ್ಷ ರೂ. ಕರೆಂಟ್ ಬಿಲ್

    ಹಂಪಿ ವಿವಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 85 ಲಕ್ಷ ರೂ. ಕರೆಂಟ್ ಬಿಲ್

    ವಿಜಯನಗರ: ಕಾಂಗ್ರೆಸ್ (Congress) ಉಚಿತ 200 ಯೂನಿಟ್ ವಿದ್ಯುತ್ ನೀಡುವ ಭರವಸೆ ನೀಡಿದ ಬೆನ್ನಲ್ಲೇ ಜನರು ಏರಿಕೆಯಾಗಿರುವ ವಿದ್ಯುತ್ ಬಿಲ್ (Electricity Bill) ದರವನ್ನು ನೋಡಿ ಶಾಕ್ ಆಗಿದ್ದಾರೆ. ನಾಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿರುವ ಹಂಪಿ ವಿಶ್ವವಿದ್ಯಾಲಯಕ್ಕೆ (Hampi University) ಬರೋಬ್ಬರಿ 85 ಲಕ್ಷ ರೂ. ವಿದ್ಯುತ್ ಬಿಲ್ ಬಂದಿದ್ದು, ಬಿಲ್ ಕಟ್ಟಲು ಹಣವಿಲ್ಲದೆ ಪರದಾಡುತ್ತಿದೆ.

    ವಿಜಯನಗರ (Vijayanagara) ಜಿಲ್ಲೆಯ ಹೊಸಪೇಟೆ (Hospet) ತಾಲೂಕಿನಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ಕನ್ನಡದ ಸಂಶೋಧನೆಗಾಗಿ ಜನ್ಮ ತಾಳಿರುವ ಏಕೈಕ ವಿಶ್ವವಿದ್ಯಾಲಯ. ಈ ವಿವಿಗೆ ಅನುದಾನ ಸರಿಯಾಗಿ ಬಾರದ ಕಾರಣ ಹಿಂದಿನ ಕರೆಂಟ್ ಬಿಲ್ ಸಹ ಕಟ್ಟಿರಲಿಲ್ಲ. ಇದೀಗ ಹಿಂದಿನ ಬಾಕಿ ಮೊತ್ತವನ್ನು ಸೇರಿಸಿದಂತೆ ಇಲ್ಲಿವರೆಗಿನ ಒಟ್ಟು ವಿದ್ಯುತ್ ಬಿಲ್ 85 ಲಕ್ಷ ರೂ.ಗಳಷ್ಟಾಗಿದ್ದು, ಹಂಪಿ ವಿಶ್ವವಿದ್ಯಾಲಯ ಸಂಕಷ್ಟಕ್ಕೆ ಸಿಲುಕಿದೆ. ಇದನ್ನೂ ಓದಿ: ಅಕ್ಕಿ ವಿತರಣೆ ರಾಜ್ಯ ಸರ್ಕಾರದ ಜವಾಬ್ದಾರಿ, ಎಲ್ಲಿಯಾದ್ರೂ ಖರೀದಿ ಮಾಡಿ ಕೊಡಲಿ: ಯಡಿಯೂರಪ್ಪ

    ಮನ್ನಾ ಮಾಡುವಂತೆ ಮನವಿ:
    ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಹಂಪಿ ವಿಶ್ವವಿದ್ಯಾಲಯ ಕರೆಂಟ್ ಬಿಲ್ ಮನ್ನಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಹಂಪಿ ವಿವಿಯ ಕುಲಪತಿ ಡಾ.ಪರಮಶಿವಮೂರ್ತಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಕರೆಂಟ್ ಬಿಲ್ ಮನ್ನಾ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಧಾರವಾಡ ಮೇಯರ್‌ ಚುನಾವಣೆ – ಗದ್ದುಗೆ ಹಿಡಿಯಲು ಕೈ ಕಸರತ್ತು, ಬೆಂಗಳೂರಿನಲ್ಲಿ ಸಭೆ

    ವಿದ್ಯುತ್ ಬಿಲ್ ಕಟ್ಟಲು ಸಾಕಷ್ಟು ಹಣವಿಲ್ಲ. ಸರ್ಕಾರದಿಂದಲೂ ಸಕಾಲಕ್ಕೆ ಅನುದಾನ ಬರುತ್ತಿಲ್ಲ. ಸಿಬ್ಬಂದಿಗಳಿಗೆ ಸಂಬಳ ಕೊಡಲು ಹಣವಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ 85 ಲಕ್ಷ ರೂ. ಕರೆಂಟ್ ಬಿಲ್ ಪಾವತಿಸಲು ಅಸಾಧ್ಯ. ಹೀಗಾಗಿ ಹಂಪಿ ವಿವಿಯ ಕರೆಂಟ್ ಬಿಲ್ ಮನ್ನಾ ಮಾಡಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಶ್ ಅಂತ ಡ್ರೈವರ್ ಸೀಟ್‌ನಲ್ಲಿ ಮಕ್ಕಳ ಜೊತೆ ಬಸ್‌ ಹತ್ತಿದ ಮಹಿಳೆ

    ಹಂಪಿ ವಿವಿಯ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ವಿಶ್ವವಿದ್ಯಾಲಯದ ಕರೆಂಟ್ ಬಿಲ್ ಅನ್ನು ರಾಜ್ಯ ಸರ್ಕಾರ ಮನ್ನಾ ಮಾಡುತ್ತಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಇದನ್ನೂ ಓದಿ: ಡಿಕೆಶಿ ಸಿಎಂ ಆಗುವಂತೆ ಆಶೀರ್ವದಿಸಿ – ವಿನಯ್ ಗುರೂಜಿಗೆ ಶಾಸಕ ತಮ್ಮಯ್ಯ ಮನವಿ

  • ಮತದಾನ ಮಾಡಲು ಅವಕಾಶ ನೀಡಿ – ಅನಿವಾಸಿ ಕನ್ನಡಿಗರಿಂದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿ

    ಮತದಾನ ಮಾಡಲು ಅವಕಾಶ ನೀಡಿ – ಅನಿವಾಸಿ ಕನ್ನಡಿಗರಿಂದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿ

    ಬೆಂಗಳೂರು: ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆಯನ್ನು (Election) ಘೋಷಿಸಿದ್ದು, ಅನಿವಾಸಿ ಕನ್ನಡಿಗರು (Non Resident Kannadigas) ತಾವಿರುವ ಸ್ಥಳದಲ್ಲಿಯೇ ಮತದಾನ (Voting) ಮಾಡಲು ಅವಕಾಶ ಕಲ್ಪಿಸಿ ಕೊಡುವಂತೆ ಮುಖ್ಯ ಚುನಾವಣಾ ಅಧಿಕಾರಿಗಳಿಗೆ (Chief Electoral Officer) ಮನವಿ ಮಾಡಿದ್ದಾರೆ.

    ಕರ್ನಾಟಕದ (Karnataka) ಅನೇಕ ಕನ್ನಡಿಗರು ಕೆಲಸದ ಸಲುವಾಗಿ ದೇಶ- ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ. ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಅನಿವಾಸಿ ಕನ್ನಡಿಗರಿಗೆ ಬರಲು ಅಸಾಧ್ಯ. ಆದ್ದರಿಂದ ಅಂಚೆ ಮತದಾನ (Postal Voting) ಅಥವಾ ಭಾರತೀಯ ರಾಯಭಾರಿ ಕಚೇರಿಯಲ್ಲಿ (Indian Embassy) ಮತಗಟ್ಟೆ (Polling Booth) ತೆರೆಯುವ ಮೂಲಕ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕೆಂದು ಸಾಗರೋತ್ತರ ಕನ್ನಡಿಗರು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದು, ಡಿಕೆಶಿ ಫೈಟ್‌ನಲ್ಲಿ ಗೆದ್ದ ಪರಮೇಶ್ವರ್‌! 

    ಅಲ್ಲದೇ ಚುನಾವಣಾ ಆಯೋಗವು ಧ್ವಜಾಧಾರಿ ಮತ್ತು ಪ್ರಜಾಸತ್ತಾತ್ಮಕ ಸುಧಾರಣೆಗಳ ಜವಾಬ್ದಾರಿಯುತ ಸಂಸ್ಥೆಯಾಗಿದೆ. ಪ್ರಜಾಸತ್ತಾತ್ಮಕ ಪ್ರಗತಿಯನ್ನು ಬಲಪಡಿಸುವ ನಿಮ್ಮ ಕೆಲಸವನ್ನು ಶ್ಲಾಘಿಸುತ್ತೇವೆ ಎಂದು ಮನವಿ ಪತ್ರದ ಮೂಲಕ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆ – ಈಶ್ವರಪ್ಪಗೆ ಹೈಕಮಾಂಡ್‌ ಶಾಕ್‌ 

    ಸುಮಾರು 60 ಲಕ್ಷ ಭಾರತೀಯರು ವಿದೇಶದಲ್ಲಿ ವಾಸಿಸುತ್ತಿದ್ದು, ಇವರ ಮತದಾನದಿಂದ ಪ್ರಜಾಪ್ರಭುತ್ವದಲ್ಲಿ (Democracy) ಮಹತ್ವದ ಬದಲಾವಣೆ ತರಬಹುದು. ಅಲ್ಲದೇ 5 ಲಕ್ಷ ಅನಿವಾಸಿ ಕನ್ನಡಿಗರು ಮತದಾನ ಮಾಡಲು ಅರ್ಹರಾಗಿದ್ದಾರೆ. ಈ ಕುರಿತು ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಮತದಾನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗಿಂತ ಪತ್ನಿಯೇ ಹೆಚ್ಚು ಶ್ರೀಮಂತೆ – ಆಸ್ತಿ ಎಷ್ಟಿದೆ ಗೊತ್ತಾ?

  • ‘ಕನ್ಯೆ ಹುಡುಕಿ ಮದುವೆ ಮಾಡಿ’ – ಗ್ರಾಮ ಪಂಚಾಯತಿಗೆ 50ರ ವ್ಯಕ್ತಿಯಿಂದ ಮನವಿ

    ‘ಕನ್ಯೆ ಹುಡುಕಿ ಮದುವೆ ಮಾಡಿ’ – ಗ್ರಾಮ ಪಂಚಾಯತಿಗೆ 50ರ ವ್ಯಕ್ತಿಯಿಂದ ಮನವಿ

    ಹಾವೇರಿ: ಮದುವೆ ಆಗಲು ಒಂದು ವರ್ಷ, ಎರಡು ವರ್ಷ ಹಾಗೂ ಐದು ವರ್ಷ ಕನ್ಯೆ ಹುಡುಕುತ್ತಾರೆ. ಅದರೂ ಕೆಲವರಿಗೆ ಕನ್ಯೆ ಸಿಗುವುದಿಲ್ಲ. ಆದರೆ ಕನ್ಯೆ ಹುಡುಕಿ ಮದುವೆ ಮಾಡಿ ಎಂದು ಗ್ರಾಮ ಪಂಚಾಯತಿಗೆ ವ್ಯಕ್ತಿ ಮನವಿ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ನರೇಗಲ್ ಗ್ರಾಮದಲ್ಲಿ ನಡೆದಿದೆ.

    ಐವತ್ತು ವರ್ಷದ ದ್ಯಾಮಣ್ಣ ಕಮ್ಮಾರ ಗ್ರಾಮ ಪಂಚಾಯತಿಗೆ ಮನವಿ ಕೊಟ್ಟ ವ್ಯಕ್ತಿ. ಎಷ್ಟು ಹುಡುಕಿದರೂ ಕನ್ಯೆ ಸಿಗುತ್ತಿಲ್ಲ. ಅಡುಗೆ ಮಾಡಲು ಯಾರು ಇಲ್ಲ. ಮದುವೆ ಆಗೋ ಆಸೆಯಾಗಿದೆ, ಕನ್ಯೆ ಹುಡುಕಿ ಮದುವೆ ಮಾಡಬೇಕು ಎಂದು ದ್ಯಾಮಣ್ಣ ಮನವಿ ಮಾಡಿಕೊಂಡಿದ್ದಾರೆ.

    ಅಲ್ಲದೆ ಒಂದು ಪತ್ರವನ್ನ ಬರೆದು ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಪಿಡಿಓಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಸೋಮಣ್ಣ ಬಾರ್ಕಿ ಮನವಿಯನ್ನು ಸ್ವೀಕರಿಸಿದ್ದಾರೆ. ವ್ಯಕ್ತಿಯ ಮನವಿ ಕಂಡು ಪಂಚಾಯತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಆಶ್ಚರ್ಯಗೊಂಡಿದ್ದಾರೆ.