Tag: ಮಧ್ಯ ಪ್ರದೇಶ

  • ಇಂದೋರ್| ಹಣಕ್ಕಾಗಿ ಅಜ್ಜಿಯನ್ನು ಕೊಂದು ಬೆಡ್‌ನ ಬಾಕ್ಸ್‌ನಲ್ಲಿ ಬಚ್ಚಿಟ್ಟ ಮೊಮ್ಮಗ

    ಇಂದೋರ್| ಹಣಕ್ಕಾಗಿ ಅಜ್ಜಿಯನ್ನು ಕೊಂದು ಬೆಡ್‌ನ ಬಾಕ್ಸ್‌ನಲ್ಲಿ ಬಚ್ಚಿಟ್ಟ ಮೊಮ್ಮಗ

    ಭೋಪಾಲ್: ಹಣದ ಆಸೆಗಾಗಿ ಮೊಮ್ಮಗನೊಬ್ಬ ಅಜ್ಜಿಯನ್ನು ಕೊಂದು ಬೆಡ್‌ನ ಬಾಕ್ಸ್‌ನಲ್ಲಿ ಬಚ್ಚಿಟ್ಟ ಘಟನೆ ಮಧ್ಯಪ್ರದೇಶದ ಇಂದೋರ್‌ನ (Indore) ಮಲ್ಹರ್‌ಗಂಜ್‌ನಲ್ಲಿ ನಡೆದಿದೆ.

    ಶಾಂತಿ ಧನಂಜಯ್ (65) ಕೊಲೆಯಾದ ವೃದ್ಧೆ. ವಿಕಾಸ್ ಗೌಹರ್ (28) ಕೊಲೆ ಮಾಡಿದ ಮೊಮ್ಮಗ. ಶಾಂತಿ ನಿವೃತ್ತ ಪೌರ ಕಾರ್ಮಿಕರಾಗಿದ್ದರು. ಮೊಮ್ಮಗ ವಿಕಾಸ್ (Vikas Gauhar) ಕುಡಿತದ ಚಟಕ್ಕೆ ಒಳಗಾಗಿದ್ದ. ಇದರಿಂದ ಬೇಸತ್ತು ಆತನ ಹೆಂಡತಿ, ಇಬ್ಬರು ಮಕ್ಕಳು ಹಾಗೂ ವಿಕಾಸ್‌ನನ್ನು ತೊರೆದಿದ್ದಳು. ಪಿಂಚಣಿ ಹಣವನ್ನು ಅವಲಂಬಿಸಿದ್ದ ವೃದ್ಧೆ, ವಿಕಾಸ್‌ನ 7 ವರ್ಷದ ಹಾಗೂ 5 ವರ್ಷದ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇದನ್ನೂ ಓದಿ: ಪಂಜಾಬ್ | ಸೋಷಿಯಲ್ ಮೀಡಿಯಾ ಸ್ಟಾರ್ ಕಾರಿನೊಳಗೆ ಶವವಾಗಿ ಪತ್ತೆ – ಕೊಲೆ ಶಂಕೆ

    ಮಾದಕ ವ್ಯಸನದಿಂದ ಬಳಲುತ್ತಿದ್ದ ವಿಕಾಸ್, ನಿರುದ್ಯೋಗಿಯಾಗಿದ್ದ. ಅಲ್ಲದೇ ವೃದ್ಧೆಯ ಬಳಿ ಬಂದು ಪದೇಪದೇ ಹಣ ನೀಡುವಂತೆ ಪೀಡಿಸುತ್ತಿದ್ದ. ಬುಧವಾರ ರಾತ್ರಿಯೂ ಮದ್ಯ ಖರೀದಿಗೆ ಹಣ ನೀಡುವಂತೆ ವೃದ್ಧೆ ಬಳಿ ಕೇಳಿದ್ದ. ಇದಕ್ಕೆ ವೃದ್ಧೆ ನಿರಾಕರಿಸಿದ್ದಳು. ಈ ವೇಳೆ ಮಕ್ಕಳು ಮಲಗಿರುವುದನ್ನು ಗಮನಿಸಿದ ವಿಕಾಸ್, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ. ಇದನ್ನೂ ಓದಿ: ತಪಾಸಣೆ ವೇಳೆ ಪೊಲೀಸರಿಗೆ ಗುದ್ದಿದ ಕಾರು – ಓರ್ವ ಮಹಿಳಾ ಕಾನ್‌ಸ್ಟೆಬಲ್ ಸಾವು, ಇಬ್ಬರು ಅಧಿಕಾರಿಗೆ ಗಾಯ

    ಬಳಿಕ ವೃದ್ಧೆಯ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಬೆಡ್‌ನ ಬಾಕ್ಸ್‌ನಲ್ಲಿ ಬಚ್ಚಿಟ್ಟಿದ್ದ. ಬಳಿಕ ವಿಕಾಸ್ ತಾಯಿ, ವೃದ್ಧೆಯ ಬಗ್ಗೆ ವಿಚಾರಿಸಿದಾಗ ವಿಕಾಸ್ ಹಾರಿಕೆಯ ಉತ್ತರಗಳನ್ನು ನೀಡಿದ್ದ. ಇದರಿಂದ ಅನುಮಾನಗೊಂಡ ವಿಕಾಸ್ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು

    ಮನೆಗೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ, ಕೋಣೆಯಲ್ಲಿ ಬೆಡ್ ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು, ಬೆಡ್ ಬಾಕ್ಸ್ ತೆರೆದಾಗ ವೃದ್ಧೆಯ ಶವ ಪತ್ತೆಯಾಗಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಗಾಯಾಳು ಮಕ್ಕಳ ವಿವರ ಕೋರಿ ಸಿಐಡಿಗೆ ಮಕ್ಕಳ ಹಕ್ಕುಗಳ ಆಯೋಗ ನೋಟಿಸ್

    ಪೊಲೀಸರು ಮನೆ ಪರಿಶೀಲನೆಗೆ ಬರುವ ಮೊದಲೇ ವಿಕಾಸ್, ಅಲ್ಲಿಂದ ಪರಾರಿಯಾಗಿದ್ದ. ಬಳಿಕ ತನಿಖೆಗಿಳಿದ ಪೊಲೀಸರು ಒಂದೇ ಗಂಟೆಯಲ್ಲಿ ಆರೋಪಿಯನ್ನು ಹೆಡೆಮುರಿಕಟ್ಟಿದ್ದಾರೆ.

  • ನಕಲಿ ಮೇಲ್ ಬಳಸಿ 2.11 ಕೋಟಿ ರೂ. ವಂಚಿಸಿದ ಆರೋಪಿ ಬಂಧನ

    ನಕಲಿ ಮೇಲ್ ಬಳಸಿ 2.11 ಕೋಟಿ ರೂ. ವಂಚಿಸಿದ ಆರೋಪಿ ಬಂಧನ

    ಬಳ್ಳಾರಿ: ನಕಲಿ ಇಮೇಲ್ ಬಳಸಿ 2.11 ಕೋಟಿ ರೂ. ವಂಚಿಸಿದ ಆರೋಪಿಯನ್ನು ಪೊಲೀಸರು ಮಧ್ಯ ಪ್ರದೇಶದವರೆಗೂ (Madhya Pradesh) ಹೋಗಿ ಹಿಡಿದುಕೊಂಡು ಬಂದಿರುವ ಬಲು ರೋಚಕ ಘಟನೆ ಬಳ್ಳಾರಿಯಲ್ಲಿ (Ballary) ನಡೆದಿದೆ.

    ಅಜಯ್ ಕುಮಾರ್ ಜೈಸ್ವಾಲ್ ಬಂಧಿತ ಆರೋಪಿ. ಕಲ್ಲಿದ್ದಲು ಸಪ್ಲೆ ಮಾಡುವ ಕಂಪನಿಗೆ 2.11 ಕೋಟಿ ರೂ. ವಂಚಿಸಿದ್ದಾನೆ. ಹಿಂದುಸ್ತಾನ್ ಕ್ಯಾಲ್ಸೀನ್ಡ್ ಮೆಟಲ್ ಪ್ರೈವೇಟ್ ಲಿಮಿಟೆಟ್ ಕಂಪನಿಯೂ ಅಗರ್ವಾಲ್ ಕೋಲ್ ಕಾರ್ಪೋರೇಷನ್ ಕಂಪನಿಯಿಂದ ಕಲ್ಲಿದ್ದಲು ಖರೀದಿಸಿತ್ತು. ಹೀಗಾಗಿ ಹಿಂದುಸ್ತಾನ್ ಕಂಪನಿ ಅಗರ್ವಾಲ್ ಕಂಪನಿಗೆ 2.11 ಕೋಟಿ ಹಣ ಕೊಡಬೇಕಿತ್ತು. ಇದರ ಬಗ್ಗೆ ಮಾಹಿತಿ ಪಡೆದಿದ್ದ ಖದೀಮ ಅಜಯ್, ಅಗರ್ವಾಲ್ ಕಂಪನಿಯ ನಕಲಿ ಇಮೇಲ್ ತಯಾರಿಸಿ ಕಂಪನಿಯ ಬ್ಯಾಂಕ್ ಖಾತೆ ನಂಬರ್ ಚೇಂಜ್ ಆಗಿದೆ ಎಂದು ಹಿಂದುಸ್ತಾನ್‌ಗೆ ಕಳಿಸಿ ವಂಚನೆ ಮಾಡಿದ್ದ. ಇದನ್ನೂ ಓದಿ: ಎಂಸಿಸಿ ಸೀಟು ಉಳಿಸಿಕೊಂಡು, ಕೆಇಎ ಸೀಟು ರದ್ದತಿಗೆ ಅವಕಾಶ: ಕೆಇಎ

    ಹಿಂದುಸ್ತಾನ್ ಕಂಪನಿಯವರು ಅಜಯ್ ಕುಮಾರ್ ಜೈಸ್ವಾಲ್ ಕಳಿಸಿದ್ದ ಅಕೌಂಟ್ ನಂಬರ್‌ಗೆ ಹಣ ಹಾಕಿದ್ದರು. ತನ್ನ ಖಾತೆಗೆ ಬಂದ ಹಣವನ್ನ ಇತರೆ 18 ಖಾತೆಗಳಿಗೆ ಹಾಕಿ ಡ್ರಾ ಮಾಡಿದ್ದ. ಸೆಪ್ಟೆಂಬರ್ 3 ರಂದು ಹಣ ವಂಚನೆ ಗೊತ್ತಾಗಿ, ಬಳ್ಳಾರಿ ಸೈಬರ್ ಠಾಣೆಗೆ ಹಿಂದುಸ್ತಾನ್ ಕಂಪನಿಯಿಂದ ದೂರು ದಾಖಲಾಗಿದೆ. ಕೂಡಲೇ ಬಳ್ಳಾರಿ ಎಸ್ಪಿ ಶೊಭಾ ರಾಣಿ ಅವರಿಂದ ಪ್ರಕರಣ ಭೇದಿಸಲು ಡಿಎಸ್‌ಪಿ ಸಂತೋಷ್ ನೇತೃತ್ವದ ತಂಡ ರಚನೆ ಮಾಡಿ ಕೆವೈಸಿ ಹಾಗೂ ಹಣ ವರ್ಗಾವಣೆಯಾದ ಖಾತೆ ಜಾಡು ಹಿಡಿದು ಹೊರಟಿತ್ತು. ಇದನ್ನೂ ಓದಿ: ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ – ಜಗನ್ ಅವಧಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ!

    ಆರೋಪಿ ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ಅಡಗಿದ್ದು ಪೊಲೀಸರು ಬಂಧಿಸಿದ್ದಾರೆ. ಈತನ ಹಿಂದೆ ದೆಹಲಿ (Dehli) ಮೂಲದ ಕುಖ್ಯಾತ ವ್ಯಕ್ತಿಯ ಕೈವಾಡ ಶಂಕೆಯಾಗಿದೆ. ಪೊಲೀಸರ ತನಿಖೆ ಚುರುಕು ಆರೋಪಿಯಿಂದ 1.21 ಕೋಟಿ ರೂ. ನಗದು, ಅಲ್ಲದೇ ಆರೋಪಿ ಬೇರೆ ಬೇರೆ ಖಾತೆಗೆ ಹಾಕಿದ್ದ 27.97 ಲಕ್ಷ ರೂ. ಹಣ ಫ್ರೀಜ್ ಮಾಡಿಸಿದರು. ಒಟ್ಟಾರೆ ಸದ್ಯಕ್ಕೆ ಪೊಲೀಸರು 1.49 ಕೋಟಿ ರೂ. ವಶಕ್ಕೆ ಪಡೆದಿದ್ದು, ಇನ್ನುಳಿದ 62 ಲಕ್ಷ ರೂ. ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಿಶ್ವಾದ್ಯಂತ ಟಾಪ್ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ 8 ಪ್ರಾಧ್ಯಾಪಕರು

  • ಬೆಂಗಳೂರು ಲೇಡಿಸ್‌ ಪಿಜಿಯಲ್ಲಿ ಯುವತಿಯ ಹತ್ಯೆ – ಆರೋಪಿ 10 ದಿನ ಪೊಲೀಸ್‌ ಕಸ್ಟಡಿಗೆ

    ಬೆಂಗಳೂರು ಲೇಡಿಸ್‌ ಪಿಜಿಯಲ್ಲಿ ಯುವತಿಯ ಹತ್ಯೆ – ಆರೋಪಿ 10 ದಿನ ಪೊಲೀಸ್‌ ಕಸ್ಟಡಿಗೆ

    ಬೆಂಗಳೂರು: ಕೋರಮಂಗಲದ ಮಹಿಳೆಯರ ಪಿಜಿಯಲ್ಲಿ (Koramangala Ladies PG) ಯುವತಿ ಕೃತಿ ಕುಮಾರಿ ಹತ್ಯೆ ಪ್ರಕರಣದ ಆರೋಪಿಯನ್ನು 10 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶಿಸಿದೆ.

    ಜು.23 ರಂದು ನಡೆದಿದ್ದ ಕೃತಿ ಕುಮಾರಿಯ ಹತ್ಯೆ ಕೇಸ್‌ ಆರೋಪಿ ಅಭಿಷೇಕ್‌ನನ್ನು ಶನಿವಾರ ಮಧ್ಯಪ್ರದೇಶದಲ್ಲಿ (Madhya Pradesh) ಪೊಲೀಸರು ಬಂಧಿಸಿ, ವಿಮಾನದ ಮೂಲಕ ಬೆಂಗಳೂರಿಗೆ ಕರೆತಂದಿದ್ದರು. ಬಳಿಕ ಕೋರ್ಟ್‌ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಲು ಅವಕಾಶ ಕೋರಿದ್ದರಿಂದ ಕೋರ್ಟ್‌ 10 ದಿನಗಳ ಕಾಲ ಕಸ್ಟಡಿಗೆ ನೀಡಿ ಆದೇಶಿಸಿತು. ಇದನ್ನೂ ಓದಿ: ಬೆಂಗಳೂರಿನ ಹೋಟೆಲ್‌, ಪಬ್‌, ಬಾರ್‌ & ರೆಸ್ಟೋರೆಂಟ್‌ಗಳಿಗೆ ಹೊಸ ರೂಲ್ಸ್‌ – ಇಲ್ಲಿದೆ ಡೀಟೆಲ್ಸ್

    ಈ ಕುರಿತು ಪ್ರತಿಕ್ರಿಯೆ ನೀಡಿದ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮಾ, ಕೃತಿ ಕುಮಾರಿ ಕೊಲೆ ಪ್ರಕರಣದಲ್ಲಿ ಮಧ್ಯಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದೇವೆ. ಈಗಷ್ಟೇ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಯಾವ ಕಾರಣಕ್ಕೆ ಕೊಲೆಯಾಗಿದೆ ಅನ್ನೋದು ತಿಳಿಯಬೇಕಿದೆ. ಆರೋಪಿ ಅಭಿಷೇಕ್ ಎಂಬಿಎ ಓದಿಕೊಂಡು ಬೆಂಗಳೂರಿಗೆ ಬಂದಿದ್ದಾನೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಆರೋಪಿ ತನ್ನ ಸಹೋದರನ ಜೊತೆಗೆ ವಾಸವಿದ್ದ ಅನ್ನೋದು ಗೊತ್ತಾಗಿದೆ. ಆರೋಪಿಯ ವಿಚಾರಣೆಯ ನಂತರವಷ್ಟೇ ಎಲ್ಲಾ ವಿಚಾರಗಳು ತಿಳಿಯಬೇಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದ ಜನರಿಗೆ ಮತ್ತೊಂದು ಶಾಕ್‌ – ಬಸ್‌ ಪ್ರಯಾಣ ದರ ಹೆಚ್ಚಿಸಲು KSRTCಯಿಂದ ಪ್ರಸ್ತಾವನೆ ಸಲ್ಲಿಕೆ  

    ಜುಲೈ 23ರ ರಾತ್ರಿ 11ರ ವೇಳೆಗೆ ಪಿಜಿಗೆ ನುಗ್ಗಿದ್ದ ಅಭಿಷೇಕ್, 3ನೇ ಮಹಡಿಯಲ್ಲಿದ್ದ ಕೃತಿ ಕುಮಾರಿಯ ಕೊಠಡಿ ಬಾಗಿಲು ತೆಗೆಯುತ್ತಿದ್ದಂತೆ ಏಕಾಏಕಿ ಮನಸೋ ಇಚ್ಛೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಗುರುತಿಸಿದ್ದರು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಾಲ ಮಾಡ್ಕೊಂಡು ರಾಜಕಾರಣ ಮಾಡಿದ್ದೇನೆ, ನನ್ನಂಥ ರಾಜಕಾರಣಿ ದೇಶದಲ್ಲೇ ಇಲ್ಲ: ಜಿಟಿಡಿ

  • 5 ಮರಿಗಳಿಗೆ ಜನ್ಮ ನೀಡಿದ ಗಾಮಿನಿ – ಕುನೋದಲ್ಲಿ ಚೀತಾಗಳ ಸಂಖ್ಯೆ 26ಕ್ಕೆ ಏರಿಕೆ

    5 ಮರಿಗಳಿಗೆ ಜನ್ಮ ನೀಡಿದ ಗಾಮಿನಿ – ಕುನೋದಲ್ಲಿ ಚೀತಾಗಳ ಸಂಖ್ಯೆ 26ಕ್ಕೆ ಏರಿಕೆ

    ಭೋಪಾಲ್‌: ದಕ್ಷಿಣ ಆಫ್ರಿಕಾದಿಂದ ತರಿಸಲಾಗಿದ್ದ 5 ವರ್ಷದ ಚೀತಾ (African Cheetah) 5 ಮರಿಗಳಿಗೆ ಜನ್ಮ ನೀಡಿದ್ದು, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಒಟ್ಟು ಚೀತಾಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಇದರಲ್ಲಿ ಭಾರತದಲ್ಲಿ ಜನಿಸಿದ 13 ಮರಿಗಳೂ ಸೇರಿವೆ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ (Bhupendra Yadav) ತಿಳಿಸಿದ್ದಾರೆ.

    ಈ ಕುರಿತು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ, ಸುಮಾರು 5 ವರ್ಷ ಪ್ರಾಯದ ಹೆಣ್ಣು ಚೀತಾ ಗಾಮಿನಿ ಭಾನುವಾರ 5 ಮರಿಗಳಿಗೆ (Cheetah Cubs) ಜನ್ಮ ನೀಡಿದ್ದು, ಭಾರತದಲ್ಲಿ ಜನಿಸಿದ ಚೀತಾ ಮರಿಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ, ಈ ಚೀತಾವನ್ನು ದಕ್ಷಿಣ ಆಫ್ರಿಕಾದ ತ್ಸ್ವಾಲು ಕಲಹರಿ ಮೀಸಲು ಪ್ರದೇಶದಿಂದ ತರಲಾಗಿತ್ತು ಎಂದು ತಿಳಿಸಿದ್ದಾರೆ.

    ಇಲ್ಲಿನ ಅರಣ್ಯಾಧಿಕಾರಿಗಳು (Forest Officers), ಪಶು ವೈದ್ಯರು ಹಾಗೂ ರಕ್ಷಣಾ ಸಿಬ್ಬಂದಿ ತಂಡವು ಚೀತಾಗಳಿಗೆ ಒತ್ತಡ ರಹಿತ ವಾತಾವರಣವನ್ನು ಕಲ್ಪಿಸಿಕೊಟ್ಟಿದ್ದಾರೆ. ಇದು ಚೀತಾಗಳ ಜನನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಇದೀಗ ಕುನೋದಲ್ಲಿ ಒಟ್ಟು ಚೀತಾಗಳ ಸಂಖ್ಯೆ 26 ಆಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 2 ಚೀತಾಗಳ ಸಾವಿಗೆ ಕಾರಣ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್!

    ಇದಕ್ಕೂ ಮುನ್ನ ಜ್ವಾಲಾ ಎಂಬ ಚೀತಾ ಕಳೆದ ಜನವರಿ 20 ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆಶಾ ಹೆಸರಿನ ಮತ್ತೊಂದು ಚೀತಾ ಅದೇ ತಿಂಗಳ ಆರಂಭದಲ್ಲಿ 3 ಮರಿಗಳಿಗೆ ಜನ್ಮ ನೀಡಿತು.

    1952 ರಲ್ಲಿ ಭಾರತದಲ್ಲಿ ಚೀತಾಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಲಾಗಿತ್ತು. ಆ ನಂತರ ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು (Wildlife) ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ (Namibia) ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ಚೀತಾಗಳನ್ನು ಎರಡು ಬ್ಯಾಚ್‌ಗಳಲ್ಲಿ ಆಮದು ಮಾಡಿಕೊಳ್ಳಲಾಯಿತು. 2022 ರಲ್ಲಿ ನಮೀಬಿಯಾದಿಂದ ಮೊದಲ ಬ್ಯಾಚ್‌ ಅನ್ನು ಆಮದು ಮಾಡಿಕೊಳ್ಳಲಾಗಿತ್ತು. ಸೆ.17 ರಂದು ಪ್ರಧಾನಿ ಮೋದಿ (Narendra Modi) ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು.

    ಆರಂಭದ ಒಂದು ವರ್ಷದ ಅವಧಿಯಲ್ಲಿ ಸುಮಾರು 10 ಚೀತಾಗಳು ಸಾವಿಗೀಡಾಗಿದ್ದವು. ಆದ್ರೆ ಪ್ರಸಕ್ತ ವರ್ಷದ ಮೊದಲ ಮೂರು ತಿಂಗಳಲ್ಲೇ 12 ಮರಿಗಳ ಜನನವಾಗಿದ್ದು, ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ವರ್ಷದಿಂದಲೇ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾ ಸಫಾರಿ ಆರಂಭಿಸುವ ಬಗ್ಗೆಯೂ ಅಧಿಕಾರಿಗಳು ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಕಾರಿನಲ್ಲಿ ಮಲಗಿದ್ದ ವ್ಯಾಪಾರಿ; ಆಚೆಗೆಳೆದು 35 ಸುತ್ತು ಗುಂಡು ಹಾರಿಸಿ ಕೊಂದ ದುರುಳರು!

  • ಬಿಜೆಪಿಗೆ ಮತ ಹಾಕಿದ್ದಕ್ಕೆ ಹಲ್ಲೆ – ಮುಸ್ಲಿಂ ಮಹಿಳೆಯನ್ನು ಭೇಟಿಯಾಗಿ ಧೈರ್ಯ ತುಂಬಿದ ಚೌಹಾಣ್‌

    ಬಿಜೆಪಿಗೆ ಮತ ಹಾಕಿದ್ದಕ್ಕೆ ಹಲ್ಲೆ – ಮುಸ್ಲಿಂ ಮಹಿಳೆಯನ್ನು ಭೇಟಿಯಾಗಿ ಧೈರ್ಯ ತುಂಬಿದ ಚೌಹಾಣ್‌

    ಭೋಪಾಲ್: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ (Madhya Pradesh Election) ಬಿಜೆಪಿಗೆ (BJP) ಮತ ಚಲಾಯಿಸಿದ್ದಕ್ಕೆ ಸಂಬಂಧಿಯಿಂದಲೇ ಹಲ್ಲೆಗೆ ಒಳಗಾಗಿದ್ದ ಮಹಿಳೆಯನ್ನು ಶಿವರಾಜ್‌ ಸಿಂಗ್‌ ಚೌಹಾಣ್‌ (Shivraj Singh Chouhan) ಭೇಟಿಯಾಗಿ ಧೈರ್ಯ ತುಂಬಿದ್ದಾರೆ.

    ಇಂದು ಪುತ್ರ ಮತ್ತು ಪುತ್ರಿಯ ಜೊತೆ ಸಮೀನಾ ಶಿವರಾಜ್‌ ಸಿಂಹ್‌ ಚೌಹಾಣ್‌ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದರು. ಭೇಟಿಯ ವೇಳೆ ಚೌಹಾಣ್‌ ಜೊತೆ ನಾನು ಬಿಜೆಪಿಗೆ ಮತ ಹಾಕಿದ್ದಕ್ಕೆ ನನ್ನ ಮೇಲೆ ಥಳಿಸಲಾಗಿದೆ ಎಂದು 30 ವರ್ಷದ ಸಮೀನಾ ಹೇಳಿದ್ದಾರೆ.

    ಚೌಹಾಣ್‌ ಅವರು ಯಾವುದೇ ತಪ್ಪು ಮಾಡಿಲ್ಲ. ಉತ್ತಮ ಆಡಳಿತ ನೀಡಿದ್ದಾರೆ. ಅದಕ್ಕೆ ನಾನು ಸಂವಿಧಾನ ನೀಡಿದ ಹಕ್ಕನ್ನು ಚಲಾಯಿಸಿದ್ದೇನೆ ಎಂದು ಸಮೀನಾ ತಿಳಿಸಿದ್ದಾರೆ.

    ಹಲ್ಲೆ ಪ್ರಕರಣ ದಾಖಲಾದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಚೌಹಾಣ್‌ ಅವರು ಮಹಿಳೆಯನ್ನು ಭೇಟಿ ಮಾಡಲು ನಿರ್ಧರಿಸಿದ್ದರು.  ಇದನ್ನೂ ಓದಿ: ಕರ್ನಾಟಕದ ಯುವ ಆಟಗಾರ್ತಿ 1.3 ಕೋಟಿಗೆ ಸೇಲ್‌ – ಇತಿಹಾಸ ನಿರ್ಮಿಸಿದ ವೃಂದಾ ದಿನೇಶ್‌

    ಏನಿದು ಘಟನೆ?
    ಮಧ್ಯಪ್ರದೇಶದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದ ಬಳಿಕ ಸಮೀನಾ ಸಂಭ್ರಮಾಚರಣೆ ಮಾಡಿದ್ದರು. ಇದು ಮಹಿಳೆಯ ಕುಟುಂಬಕ್ಕೆ ಕಸಿವಿಸಿ ಉಂಟುಮಾಡಿತ್ತು. ಸಮೀನಾ ವಿರುದ್ಧ ಸಿಟ್ಟಾದ ಮೈದುನ ಜಾವೇದ್ ಖಾನ್ ನಿಂದಿಸತೊಡಗಿದ್ದ.

    ಜಾವೇದ್ ಬಳಸಿದ ಭಾಷೆಯನ್ನು ಪ್ರಶ್ನಿಸಿದ್ದಕ್ಕೆ ಸಮೀನಾ ಮೇಲೆ ಬಡಿಗೆಯಿಂದ ಹಲ್ಲೆ ಮಾಡಿದ್ದ. ಇದರಿಂದ ಆಕೆಯ ಕೈಗಳು ಮತ್ತು ದೇಹದ ಇತರೆ ಭಾಗಗಳಲ್ಲಿ ಗಾಯಗಳಾಗಿತ್ತು. ಬಿಜೆಪಿ ಮುಂದೆಯೂ ಬೆಂಬಲ ನೀಡಿದರೆ ಇದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಮೀನಾಗೆ ಬೆದರಿಕೆ ಹಾಕಿದ್ದ.

  • ಕರ್ನಾಟಕದಲ್ಲಿ ನಮ್ಮ ಮುಟ್ಟಾಳತನದಿಂದಲೇ ಅಧಿಕಾರ ಕಳೆದುಕೊಂಡ್ವಿ – ಈಶ್ವರಪ್ಪ

    ಕರ್ನಾಟಕದಲ್ಲಿ ನಮ್ಮ ಮುಟ್ಟಾಳತನದಿಂದಲೇ ಅಧಿಕಾರ ಕಳೆದುಕೊಂಡ್ವಿ – ಈಶ್ವರಪ್ಪ

    – ಸಿದ್ದರಾಮಯ್ಯ, ಡಿಕೆಶಿ ಸ್ವರ್ಗದಲ್ಲಿದ್ದಾರೆ ಎಂದು ಮಾಜಿ ಸಚಿವ ವ್ಯಂಗ್ಯ
    – ಕಾಂಗ್ರೆಸ್‌ನಲ್ಲಿ ದಿನಕ್ಕೊಬ್ಬ ಸಿಎಂ ಹುಟ್ಟಿಕೊಳ್ಳುತ್ತಿದ್ದಾರೆ ಎಂದ ಈಶ್ವರಪ್ಪ

    ಬೆಂಗಳೂರು: ಮಧ್ಯಪ್ರದೇಶ, ಛತ್ತಿಸ್‌ಗಢ (Chhattisgarh), ರಾಜಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಉತ್ಸಾಹದಲ್ಲಿದೆ. ಈ ನಡುವೆ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಕುರಿತು ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ (Eshwarappa) ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ.

    4 ರಾಜ್ಯಗಳ ಚುನಾವಣಾ ಫಲಿತಾಂಶ (4 State Election Results) ನೋಡಿದ ಮೇಲೆ ನಮ್ಮ ದೇಶಕ್ಕೆ ಭವಿಷ್ಯ ಇದೆ ಅನ್ನಿಸಿದೆ. ಆದ್ರೆ ಕರ್ನಾಟಕದ ಮತದಾರರ (Karnataka Voters) ವಿಚಾರದಲ್ಲಿ ನಾವು ಮಾಡಿಕೊಂಡ ಮುಟ್ಟಾಳತನದಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು. ರಾಜ್ಯದಲ್ಲಿಯೂ ಬಿಜೆಪಿ ಒಟ್ಟಾಗಿ ಹೋಗಿದ್ದರೆ, ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ ಎಂದು ಅವಲೋಕನ ಮಾಡಿಕೊಂಡಿದ್ದಾರೆ.

    ಕರ್ನಾಟಕದಲ್ಲಿ ಬಿಜೆಪಿ (Karnataka BJP) ಒಟ್ಟಾಗಿ ಹೋಗದೇ ಇದ್ದದ್ದು, ನಮ್ಮ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾದೆವು. ಈ ನಡುವೆ ಕಾಂಗ್ರೆಸ್‌ ಬಡವರಿಗೆ ಕೊಟ್ಟ ಗ್ಯಾರಂಟಿಗಳನ್ನ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದೆವು. ಇದೆಲ್ಲವೂ ಬಿಜೆಪಿ ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ತೆಲಂಗಾಣ ಜನರ ಹೃದಯದಲ್ಲಿ ಗಾಂಧಿ ಕುಟುಂಬಕ್ಕೆ ವಿಶೇಷ ಸ್ಥಾನವಿದೆ – ಈ ಬಾರಿ ಸರ್ಕಾರ ನಮ್ಮದೇ ಎಂದ ಕಾಂಗ್ರೆಸ್ ಸಂಸದ

    ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್‌ಗಢ ರಾಜ್ಯಗಳೂ ಸೇರಿದಂತೆ ಇಡೀ ದೇಶದಲ್ಲಿ ಗ್ಯಾರಂಟಿ ನೀಡಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಪ್ರಯತ್ನಿಸಿತ್ತು. ಈ ಚುನಾವಣೆಗಳಲ್ಲಿ ಅದು ವಿಫಲವಾಗಿದೆ. ಅಲ್ಲದೇ ಹಿಂದೂ-ಮುಸ್ಲಿಮರ ಬಗೆಗಿನ ತುಷ್ಟೀಕರಣ ರಾಜಕೀಯ ಇವೆಲ್ಲವೂ ಕಾಂಗ್ರೆಸ್‌ ಸೋಲಿಗೆ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ ನಾಯಕರು ಇಂದೇ ಪಾಠ ಕಲಿಯಬೇಕು. ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ನಾಯಕರು ಮಾಡಿದ ತಪ್ಪಿಗೆ‌ ಕಾರ್ಯಕರ್ತರು ನೊಂದಿದ್ದಾರೆ. ಆದ್ದರಿಂದ ನಾವೆಲ್ಲ ಒಂದಾಗಿ ಮುಂದಿನ ಚುನಾವಣೆ ಎದುರಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: 2 ದೊಡ್ಡ ರಾಜ್ಯಗಳಲ್ಲಿ ಗೆಲುವು ಸಿಕ್ಕಿದೆ, ಈ ಫಲಿತಾಂಶ ಮತ್ತೆ ಮೋದಿ ಪ್ರಧಾನಿ ಎಂದು ಹೇಳ್ತಿದೆ: ಮುನಿರತ್ನ

    ಸಿದ್ದು, ಡಿಕೆಶಿ ಸ್ವರ್ಗದಲ್ಲಿದ್ದಾರೆ: ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ ಸ್ವರ್ಗದಲ್ಲಿದ್ದಾರೆ. ನಮ್ಮ ಸ್ಥಾನ ಯಾರೂ ಕಸಿದುಕೊಳ್ಳಲಾಗದು ಎಂಬ ಭ್ರಮೆಯಲ್ಲಿದ್ದಾರೆ. ಈ ಭ್ರಮೆಯಿಂದ ಹೊರಬರಬೇಕಾದ್ರೆ ಮುಂದಿನ ಚುನಾವಣೆವರೆಗೆ ಕಾಯಬೇಕು ಎಂದಿದ್ದಾರೆ.

    ಅಲ್ಲದೇ ಕಾಂಗ್ರೆಸ್‌ನಲ್ಲಿ ಪ್ರತಿದಿನ ಒಬ್ಬೊಬ್ಬ ಮುಖ್ಯಮಂತ್ರಿ ಹುಟ್ಟಿಕೊಳ್ಳುತ್ತಿದ್ದಾರೆ. ಸಂವಿಧಾನವನ್ನೇ ತಿದ್ದುಪಡಿ ಮಾಡಿ 224 ಮುಖ್ಯಮಂತ್ರಿಗಳನ್ನ ಮಾಡಿಬಿಟ್ಟರೆ ಯಾರಿಗೂ ಸಮಸ್ಯೆಯಿಲ್ಲ ಎಂದು ಲೇವಡಿ ಮಾಡಿದ್ದಾರೆ.

  • ಅರೆಬೆತ್ತಲಾಗಿ ಸಹಾಯಕ್ಕೆ ಅಂಗಲಾಚಿದ ಸಂತ್ರಸ್ತೆಗೆ ಬಿಡಿಗಾಸಿನ ನೆರವು – ಬಾಲಕಿ ಯಾತನೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಟ ಉಜ್ಜಯಿನಿ ಪೊಲೀಸ್

    – ಆಸ್ಪತ್ರೆಗೆ ಕರೆದೊಯ್ಯುವಾಗ ಬಾಲಕಿ ಬಳಿಯಿದ್ದದ್ದು 120 ರೂಪಾಯಿ ಮಾತ್ರ

    ಭೋಪಾಲ್‌: ಮಧ್ಯ ಪ್ರದೇಶದ (Madhya Pradesh) ಉಜ್ಜಯಿನಿಯಲ್ಲಿ ಅತ್ಯಾಚಾರ ಸಂತ್ರಸ್ತೆಯಾದ ಬಾಲಕಿಯ ದೇಹ ರಕ್ತದ ಮಡುವಿನಿಂದ ಕೂಡಿತ್ತು, ಅರೆಬೆತ್ತಲಾಗಿ ಮೈಯೆಲ್ಲಾ ಗಾಯ ಮಾಡಿಕೊಂಡು ಸಹಾಯಕ್ಕಾಗಿ ಅಂಗಲಾಚಿದರೂ ಆಕೆಯ ನೆರವಿಗೆ ಬರಲಿಲ್ಲ ಎಂಬ ವಿಚಾರ ಸದ್ಯ ದೇಶಾದ್ಯಂತ ಚರ್ಚೆಯಾಗುತ್ತಿದೆ. ಅರೆಬೆತ್ತಲೆ ಸ್ಥಿತಿಯಲ್ಲಿ ಬಾಲಕಿ ರಸ್ತೆಯಲ್ಲಿ ನಡೆದಾಡುತ್ತಿದ್ದ ವೀಡಿಯೋ ಜಾಲತಾಣದಲ್ಲಿ (Social Media) ಹರಿದಾಡುತ್ತಿದ್ದು, ಭಾರೀ ಆಕ್ರೋಶಕ್ಕೂ ಕಾರಣವಾಗಿದೆ.

    ಇನ್ನೂ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಕುರಿತು ಉಜ್ಜಯಿನಿ ಪೊಲೀಸ್ ಮುಖ್ಯಸ್ಥ (Ujjain Police Chief) ಸಚಿನ್ ಶರ್ಮಾ ಸಮಗ್ರ ಮಾಹಿತಿ ನೀಡಿದ್ದಾರೆ. 15ರ ಬಾಲಕಿ ಅನುಭವಿಸಿದ ನರಕ ಯಾತನೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದರೊಂದಿಗೆ ಬಾಲಕಿಗೆ ಯಾರೊಬ್ಬರೂ ಸಹಾಯ ಮಾಡಿಲ್ಲ ಎಂಬ ವಾದವನ್ನು ತಳ್ಳಿಹಾಕಿರುವ ಉಜ್ಜಯಿನಿ ಪೊಲೀಸರು ಸಹಾಯಹಸ್ತ ನೀಡಿದವರ ಬಗ್ಗೆ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

    ಸಂತ್ರಸ್ತೆ ಸ್ಥಿತಿಯನ್ನ ಎಳೆಎಳೆಯಾಗಿ ಬಿಚ್ಚಿಟ್ಟ ಪೊಲೀಸರು:
    ಅತ್ಯಾಚಾರ ಸಂತ್ರಸ್ತೆಯು ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಸಾಕಷ್ಟು ಜನರನ್ನ ನೆರವಿಗೆ ಧಾವಿಸುವಂತೆ ಬೇಡಿಕೊಂಡಿದ್ದಾಳೆ. ಆಗ ಜನರು ಆಕೆಗೆ 50 ರೂ. ಅಥವಾ 100 ರೂ. ಕೊಟ್ಟು ತಮ್ಮ ಪಾಡಿಗೆ ಹೋಗಿದ್ದಾರೆ. ಆಕೆ ಬರುವ ಹಾದಿಯಲ್ಲಿ ಒಂದು ಟೋಲ್ ಬೂತ್ ಕೂಡಾ ಸಿಕ್ಕಿದೆ. ಈ ಟೋಲ್ ಬೂತ್‌ನ ಜನರು ಅರೆಬೆತ್ತಲಾಗಿದ್ದ ಬಾಲಕಿಗೆ ಹಣ ಹಾಗೂ ಬಟ್ಟೆಯನ್ನೂ ನೀಡಿದ್ದಾರೆ. ಕೊನೆಗೆ ಬಾಲಕಿ ಆಶ್ರಮವೊಂದಕ್ಕೆ ತಲುಪಿದ್ದಾಳೆ. ಅಲ್ಲಿ ಆಶ್ರಮದ ಪೂಜಾರಿ ಆಕೆಗೆ ಆಶ್ರಯ ನೀಡಿ, ಬಟ್ಟೆ ಕೊಟ್ಟು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಬಳಿಕ ಪೊಲೀಸರು ಆಶ್ರಮಕ್ಕೆ ಧಾವಿಸಿ ಬಾಲಕಿಯನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನೂ ಓದಿ: ಪ್ಲಾಟ್‍ಫಾರ್ಮ್ ಮೇಲೆ ರೈಲು ಏರಿದ ಪ್ರಕರಣಕ್ಕೆ ಟ್ವಿಸ್ಟ್ – ಕುಡಿದ ಮತ್ತಿನಲ್ಲಿ ಸಹಾಯಕನ ಎಡವಟ್ಟು

    ರಸ್ತೆಯಲ್ಲಿ ಸಾಗುತ್ತಿದ್ದ ಬಾಲಕಿಗೆ ಸುಮಾರು 8 ಮಂದಿ ನೆರವಾಗಿದ್ದಾರೆ. ಬಹುತೇಕರು ಬಾಲಕಿಗೆ ಹಣ ನೀಡಿದ್ದಾರೆ. ಆದ್ರೆ ಆಕೆಗೆ ಆಶ್ರಯ ನೀಡಿದ್ದು ಮಾತ್ರ ಓರ್ವ ಪೂಜಾರಿ. ಅವರೇ ಪೊಲೀಸರಿಗೆ ಸುದ್ದಿ ಮುಟ್ಟಿಸಿ, ಬಾಲಕಿಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿಯೂ ನೆರವಾಗಿದ್ದಾರೆ. ಜನತೆಗೆ ನೆರವು ನೀಡಬೇಕೆಂಬ ಮನಸ್ಸು ಇತ್ತು. ಹೀಗಾಗಿ, ಹಣ ನೀಡಿದ್ದಾರೆ. ಆದೆ ಪೊಲೀಸರನ್ನು ಸಂಪರ್ಕಿಸುವ ಹಾಗೂ ಬಾಲಕಿಗೆ ವೈದ್ಯಕೀಯ ನೆರವು ಒದಗಿಸಲು ಮುಂದಾಗುವಷ್ಟು ಜನರು ಮನಸ್ಸು ಮಾಡಿಲ್ಲ. ಏಕೆಂದರೆ ಅವರು ಭಯಗೊಂಡಿರಬಹುದು ಅಥವಾ ತಮ್ಮ ಇತಿ ಮಿತಿಯಲ್ಲಿ ಸಹಾಯ ಮಾಡಿರಬಹುದು ಎಂದು ಸಚಿನ್‌ ಶರ್ಮಾ ಹೇಳಿದ್ದಾರೆ.

    ಬಾಲಕಿಯನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆಕೆಯ ಬಳಿ 120 ರೂ. ಹಣವಿತ್ತು ಎಂಬುದು ತಿಳಿದು ಬಂದಿದೆ. ಆದ್ರೆ ರಕ್ತದ ಮಡುವಿನಲ್ಲಿದ್ದ ಬಾಲಕಿಗೆ ಬೇಕಾಗಿದ್ದು, ಸೂಕ್ತ ತುರ್ತು ಚಿಕಿತ್ಸೆಯೇ ಹೊರತು ಬಿಡಿಗಾಸಲ್ಲ ಎಂಬುದು ಜನರ ಅಭಿಪ್ರಾಯವಾಗಿದೆ ಎಂದು ವಿವರಿಸಿದ್ದಾರೆ.

    ಇನ್ನೂ ಬಾಲಕಿಯ ಈ ಸ್ಥಿತಿಗೆ ಕಾರಣರಾದವರು ಯಾರು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಆಕೆಯ ಮೇಲೆ ಅತ್ಯಾಚಾರ ಎಸಗಿ, ಮಾರಣಾಂತಿಕವಾಗಿ ಥಳಿಸಿ, ಅರೆಬೆತ್ತಲೆ ಮಾಡಿ ಎಸೆದು ಹೋಗಿದ್ದು ಯಾರು ಅನ್ನೋದರ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಸ್ವದೇಶಿ ಆಯುಧ ನಿರ್ಮಾಣ ತಂತ್ರಜ್ಞಾನದಲ್ಲಿ ಭಾರತದ ಸಾಧನೆ; ಶತ್ರುಗಳ ನಿದ್ದೆಗೆಡಿಸಲಿದೆ ಧ್ರುವಾಸ್ತ್ರ

    ಪೊಲೀಸರ ಕಣ್ಗಾವಲಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಗಂಭೀರ ಗಾಯಗಳಿಂದ ಬಳಲುತ್ತಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಗ್ಯ ಚೇತರಿಕೆ ಕಂಡ ಕೂಡಲೇ ಪೊಲೀಸರು ಆಕೆಯಿಂದ ಮಾಹಿತಿ ಸಂಗ್ರಹಿಸಲಿದ್ದಾರೆ.

    ಸಂತ್ರಸ್ತ ಬಾಲಕಿಯು ಮಧ್ಯ ಪ್ರದೇಶದ ಉಜ್ಜಯಿನಿಯಿಂದ 700 ಕಿಮೀ ದೂರದಲ್ಲಿ ಇರುವ ಗ್ರಾಮದವಳು ಎಂದು ತಿಳಿದು ಬಂದಿದೆ. ಆಕೆ ತನ್ನ ಅಜ್ಜ ಹಾಗೂ ಅಣ್ಣನ ಜೊತೆ ನೆಲೆಸಿದ್ದಳು. ಶಾಲೆಗೆ ಹೋಗಿದ್ದ ಬಾಲಕಿ ಮನೆಗೆ ಬಂದಿಲ್ಲ ಎಂದು ಆಕೆಯ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮರಕ್ಕೆ ಕಾರು ಡಿಕ್ಕಿ – ಐವರು ಸಾವು

    ಮರಕ್ಕೆ ಕಾರು ಡಿಕ್ಕಿ – ಐವರು ಸಾವು

    ಭೋಪಾಲ್: ರಾಷ್ಟ್ರೀಯ ಹೆದ್ದಾರಿ ಪಕ್ಕ ಚಲಿಸುತ್ತಿದ್ದ ಕಾರು (Car) ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ (Madhya Pradesh) ಉಮಾರಿಯ (Umaria) ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.

    ಘುಂಗುಟಿ ಪೊಲೀಸ್ ಪೋಸ್ಟ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 43ರ ಮಜ್ಗಾವ ಗ್ರಾಮದ ಬಳಿ ಮುಂಜಾನೆ 3 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಹೆಚ್ಚಿನ ಹಣ ಕೊಡಲು ನಿರಾಕರಿಸಿದ ದಲಿತ ಮಹಿಳೆಗೆ ಮೂತ್ರ ಕುಡಿಸಿದ ದುಷ್ಕರ್ಮಿಗಳು

    ಕಾರು ಉಮಾರಿಯಾದಿಂದ ಶಹದೋಲ್‌ಗೆ ತೆರಳುತ್ತಿದ್ದ ಸಂದರ್ಭ ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ ಎಂದು ಸಹಾಯಕ ಸಬ್ ಇನ್ಸ್ಪೆಕ್ಟರ್ ಶೈಲೇಂದ್ರ ಚತುರ್ವೇದಿ ತಿಳಿಸಿದ್ದಾರೆ. ಇದನ್ನೂ ಓದಿ: ಮೆಟ್ರೋದಲ್ಲಿ ಟಿಕೆಟ್ ಇಲ್ಲದೇ ಗೇಟ್ ಹಾರಿ ವಿದೇಶಿ ಯೂಟ್ಯೂಬರ್‌ನಿಂದ ಹುಚ್ಚಾಟ

    ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮೃತಪಟ್ಟ ಐವರೂ ಸಹ ಸುಮಾರು 30-35 ವರ್ಷ ವಯಸ್ಸಿನವರಾಗಿದ್ದು, ಕೆಲವರು ಸರ್ಕಾರಿ ನೌಕರಿಯನ್ನು ಹೊಂದಿದ್ದರು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಫ್ಲೈ ಓವರ್‌ನಲ್ಲೇ ಕಾರು ಪಲ್ಟಿ; ಓರ್ವ ಸ್ಥಳದಲ್ಲೇ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಪ್ಪಿತ ಸೆಕ್ಸ್ ವಯೋಮಿತಿ 18 ರಿಂದ 16 ಕ್ಕೆ ಇಳಿಸಿ: ಕೇಂದ್ರಕ್ಕೆ ಹೈಕೋರ್ಟ್ ಒತ್ತಾಯ

    ಒಪ್ಪಿತ ಸೆಕ್ಸ್ ವಯೋಮಿತಿ 18 ರಿಂದ 16 ಕ್ಕೆ ಇಳಿಸಿ: ಕೇಂದ್ರಕ್ಕೆ ಹೈಕೋರ್ಟ್ ಒತ್ತಾಯ

    ಭೂಪಾಲ್: ಲೈಂಗಿಕತೆಯ ಸಮ್ಮತಿ ವಯೋಮಿತಿಯನ್ನು ಈಗಿರುವ 18 ವರ್ಷದಿಂದ 16 ವರ್ಷಕ್ಕೆ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ (Central Government) ಮಧ್ಯಪ್ರದೇಶ ಹೈಕೋರ್ಟ್ (Madhya Pradesh High Court) ಹೇಳಿದೆ.

    ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆ 2013ನ್ನು ಜಾರಿಗೊಳಿಸಿದ್ದರಿಂದಾಗಿ ಹುಡುಗಿಯರ ಲೈಂಗಿಕ ಕ್ರಿಯೆಗೆ ಸಮ್ಮತಿಸುವ ವಯಸ್ಸನ್ನು 16ರಿಂದ 18 ವರ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಅಲ್ಲದೇ ಸಮ್ಮತಿಯ ಲೈಂಗಿಕತೆ ವಯೋಮಿತಿಯನ್ನು 18 ವರ್ಷಕ್ಕೆ ಹೆಚ್ಚಿಸಿರುವುದು ಹದಿಹರೆಯದ ಹುಡುಗರನ್ನು ಸಮಾಜದಲ್ಲಿ ಅಪರಾಧಿಗಳೆಂದು ಪರಿಗಣಿಸುವಂತೆ ಮಾಡಿದೆ. ಇದು ಸಮ್ಮತಿಯ ಲೈಂಗಿಕ ಸಂಬಂಧ ಬೆಳೆಸುವ ಹದಿಹರೆಯದ ಹುಡುಗರಿಗೆ ಅನ್ಯಾಯವಾಗಿ ಪರಿಣಮಿಸಿದೆ ಎಂದು ನ್ಯಾಯಮೂರ್ತಿ ದೀಪಕ್ ಕುಮಾರ್ ಅಗರ್‌ವಾಲ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಮಗನನ್ನು ಹೊಡೆದು ಕೊಂದು ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ!

    ಹದಿಹರೆಯದಲ್ಲಿ ಹುಡುಗ ಹುಡುಗಿಯರು ಸ್ನೇಹ ಬೆಳೆಸುತ್ತಾರೆ. ಬಳಿಕ ಆಕರ್ಷಣೆಯಿಂದಾಗಿ ದೈಹಿಕ ಸಂಬಂಧ ಬೆಳೆಸುತ್ತಾರೆ. ಆದರೆ ಇದರಿಂದಾಗಿ ಸಮಾಜದಲ್ಲಿ ಅವರನ್ನು ಅಪರಾಧಿಗಳು ಎಂದು ಪರಿಗಣಿಸಲಾಗುತ್ತಿದೆ. ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ ಸಂತ್ರಸ್ತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುತ್ತಾರೆ. ಇದರಿಂದಾಗಿ ಹದಿಹರೆಯದ ಹುಡುಗರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಅನ್ಯಾಯ ಸರಿಪಡಿಸಲು ಹುಡುಗಿಯರ ವಯೋಮಿತಿಯನ್ನು 18ರಿಂದ 16 ವರ್ಷಕ್ಕೆ ಇಳಿಸುವ ಬಗ್ಗೆ ಕೇಂದ್ರ ಸರ್ಕಾರ ಯೋಚಿಸಬೇಕು ಎಂದು ಕೋರ್ಟ್ ಸಲಹೆ ನೀಡಿದೆ.

    ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮದ ಅರಿವು ಮತ್ತು ಸುಲಭ ಲಭ್ಯವಾಗಿರುವ ಇಂಟರ್ನೆಟ್ ಸಂಪರ್ಕದಿಂದಾಗಿ 14 ವರ್ಷ ವಯಸ್ಸಿನ ಪ್ರತಿಯೊಬ್ಬ ಗಂಡು ಅಥವಾ ಹೆಣ್ಣು ಚಿಕ್ಕ ವಯಸ್ಸಿನಲ್ಲಿಯೇ ಪ್ರೌಢಾವಸ್ಥೆ ತಲುಪುತ್ತಿದ್ದಾರೆ. ಇದರಿಂದಾಗಿ ಹೆಣ್ಣು ಮತ್ತು ಗಂಡು ಮಕ್ಕಳು ಆಕರ್ಷಣೆಗೆ ಒಳಗಾಗುತ್ತಿದ್ದು ಈ ಆಕರ್ಷಣೆಗಳು ಸಮ್ಮತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಲು ಪ್ರೇರಣೆ ನೀಡುತ್ತಿವೆ. ಇದರಲ್ಲಿ ಯುವಕರು ಅಪರಾಧಿಗಳಲ್ಲ. ಅವರು ಹೆಣ್ಣಿನ ಸಂಪರ್ಕಕ್ಕೆ ಬಂದಾಗ ಮತ್ತು ದೈಹಿಕ ಸಂಬಂಧ ಬೆಳೆಸಿದಾಗ ಅದು ವಯಸ್ಸಿಗೆ ಸಂಬಂಧಿಸಿದ ವಿಚಾರವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

    ಪ್ರಕರಣವೊಂದರ ವಿಚಾರಣೆ ವೇಳೆ, ಸಂತ್ರಸ್ತೆ ರೀತಿಯ ಹದಿಹರೆಯದವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಮೇಲ್ನೋಟಕ್ಕೆ ಪ್ರಸುತ ಪ್ರಕರಣದಲ್ಲಿ ಆರೋಪಿಗೆ ದುಷ್ಕøತ್ಯ ಎಸಗುವ ಉದ್ದೇಶ ಇರಲಿಲ್ಲ ಎಂದು ಕೋರ್ಟ್ ಹೇಳಿದೆ.

    23 ವರ್ಷದ ಯುವಕ ತನ್ನ ವಿರುದ್ಧ ಪೋಕ್ಸೊ (POCSO) ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಕಾಯ್ದೆ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೇ ಎಫ್‍ಐಆರ್ ರದ್ದುಗೊಳಿಸುವುದು ಸೂಕ್ತ ಎಂದಿದೆ. ಇದನ್ನೂ ಓದಿ: ಈಗಿರುವ ಯಾರೂ ಬಿಜೆಪಿ ಕಟ್ಟಿಲ್ಲ: ಸ್ವಪಕ್ಷೀಯರ ವಿರುದ್ಧವೇ ಮತ್ತೆ ಗುಡುಗಿದ ರೇಣುಕಾಚಾರ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಜ್ಞಾ ಠಾಕೂರ್‌ನೊಂದಿಗೆ ಕೇರಳ ಸ್ಟೋರಿ ಸಿನಿಮಾ ವೀಕ್ಷಿಸಿದ ಯುವತಿ ನಾಪತ್ತೆ- ಮುಸ್ಲಿಂ ಯುವಕನೊಂದಿಗೆ ಪರಾರಿ?

    ಪ್ರಜ್ಞಾ ಠಾಕೂರ್‌ನೊಂದಿಗೆ ಕೇರಳ ಸ್ಟೋರಿ ಸಿನಿಮಾ ವೀಕ್ಷಿಸಿದ ಯುವತಿ ನಾಪತ್ತೆ- ಮುಸ್ಲಿಂ ಯುವಕನೊಂದಿಗೆ ಪರಾರಿ?

    ಭೋಪಾಲ್: ಬಿಜೆಪಿಯ ಪ್ರಜ್ಞಾ ಸಿಂಗ್ ಠಾಕೂರ್ (Pragya Thakur) ಅವರೊಂದಿಗೆ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ವೀಕ್ಷಿಸಿದ ಯುವತಿ (Woman) ಕೆಲವೇ ದಿನಗಳ ಬಳಿಕ ನಾಪತ್ತೆಯಾಗಿರುವ ಘಟನೆ ಮಧ್ಯ ಪ್ರದೇಶದಲ್ಲಿ (Madhya Pradesh) ನಡೆದಿದೆ.

    20 ವರ್ಷದ ಯುವತಿ ಮುಸ್ಲಿಂ ಯುವಕನೊಂದಿಗೆ ಓಡಿಹೋಗಿದ್ದಾಳೆಂದು ಆಕೆಯ ಕುಟುಂಬದವರು ಶಂಕಿಸಿದ್ದಾರೆ. ಆಕೆ ಮನೆಯಿಂದ 70,000 ರೂ. ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾಳೆ ಎಂದು ಆರೋಪಿಸಿದ್ದಾರೆ.

    ಈ ನಡುವೆ ಯುವತಿ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದಾಳೆ. ನಾನು ವಯಸ್ಕಳಾಗಿದ್ದೇನೆ ಹಾಗೂ ತನಗೆ ಏನು ಮಾಡಬೇಕೆಂಬ ತಿಳುವಳಿಕೆ ಇದೆ ಎಂದು ಆಕೆ ವೀಡಿಯೋದಲ್ಲಿ ಹೇಳಿರುವುದು ಕಂಡುಬಂದಿದೆ. ಇದನ್ನೂ ಓದಿ: ಲಿವ್ ಇನ್ ಪಾರ್ಟ್ನರ್‌ಳನ್ನು ಕೊಂದು ದೇಹವನ್ನು ಪೀಸ್ ಪೀಸ್ ಮಾಡಿದ!

    ಈ ಹಿಂದೆಯೂ ಯುವತಿ ಒಂದು ಬಾರಿ ನಾಪತ್ತೆಯಾಗಿದ್ದಳು. ಆ ಸಂದರ್ಭ ಆಕೆಯ ಕುಟುಂಬ ಸಂಸದೆ ಪ್ರಜ್ಞಾ ಠಾಕೂರ್ ಅವರ ಸಹಾಯ ಕೋರಿತ್ತು. ಈ ಹಿನ್ನೆಲೆ ಪ್ರಜ್ಞಾ ಸಿಂಗ್ ಠಾಕೂರ್ ಮೇ 11 ರಂದು ಹಿಂದೂ ಯುವತಿಯರನ್ನು ಇಸ್ಲಾಂಗೆ ಪರಿವರ್ತಿಸುವ ವಿವಾದಿತ ಚಿತ್ರವಾಗಿರುವ ದಿ ಕೇರಳ ಸ್ಟೋರಿಯನ್ನು ವೀಕ್ಷಿಸಲು ಮಹಿಳೆಯರ ಗುಂಪೊಂದನ್ನು ಕರೆದುಕೊಂಡು ಹೋಗಿದ್ದರು. ಆ ಗುಂಪಿನಲ್ಲಿ ನಾಪತ್ತೆಯಾಗಿರುವ ಯುವತಿಯೂ ಸೇರಿದ್ದಳು. ಇದಾದ ಬಳಿಕ ಯುವತಿ ಮೇ 15 ರಂದು ಮತ್ತೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಎಚ್ಚರಗೊಂಡ ಪೋಷಕರು ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ಅವರು ಈ ಕೇಸ್‌ನಲ್ಲಿ ಸಹಕರಿಸಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

    ವರದಿಗಳ ಪ್ರಕಾರ ಯುವತಿಗೆ ನರ್ಸಿಂಗ್ ಶಾಲೆಯಲ್ಲಿ ಸ್ನೇಹಿತೆಯಾಗಿದ್ದಾಕೆಯ ಸಹೋದರ ಯೂಸುಫ್ ಖಾನ್ ಅವನೊಂದಿಗೆ ಓಡಿಹೋಗಿರುವುದಾಗಿ ಶಂಕಿಸಲಾಗಿದೆ. ಆತನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಮೊದಲೇ ಹಲ್ಲೆ, ಕಳ್ಳತನ, ಬೆಂಕಿ ಹಚ್ಚಿರುವಂತಹ ಕ್ರಿಮಿನಲ್ ಕೇಸ್‌ಗಳು ದಾಖಲಾಗಿವೆ.

    ಇದೀಗ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ನಾವು ಪ್ರಕರಣವನ್ನು ದಾಖಲಿಸಿದ್ದೇವೆ. ಸಾಧ್ಯವಿರುವ ಎಲ್ಲಾ ವಿಧಾನಗಳಿಂದಲೂ ಆಕೆಯನ್ನು ಹುಡುಕುವ ಪ್ರಯತ್ನ ಮಾಡುತ್ತೇವೆ. ಆಕೆಯ ಹೇಳಿಕೆ ಆಧಾರದ ಮೇಲೆ ನಾವು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಥಳೀಯ ಹಿರಿಯ ಪೊಲೀಸ್ ಅಧಿಕಾರಿ ಅನಿಲ್ ಬಾಜ್‌ಪೇಯ್ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂ-ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ಭಯಾನಕ ಅಪಘಾತ- 5 ತಿಂಗಳಲ್ಲೇ 55 ಮಂದಿ ಸಾವು!