Tag: ಮಧ್ಯಪ್ರದೇಶ ಸರ್ಕಾರ

  • ಹೊಸ ವರ್ಷಕ್ಕೆ ಗುಡ್‌ನ್ಯೂಸ್- ಫೆಬ್ರವರಿಯಿಂದ ಚೀತಾ ಪ್ರವಾಸೋದ್ಯಮ ಸಾಧ್ಯತೆ

    ಹೊಸ ವರ್ಷಕ್ಕೆ ಗುಡ್‌ನ್ಯೂಸ್- ಫೆಬ್ರವರಿಯಿಂದ ಚೀತಾ ಪ್ರವಾಸೋದ್ಯಮ ಸಾಧ್ಯತೆ

    ಭೋಪಾಲ್: ಹೊಸ ವರ್ಷಕ್ಕೆ ಮಧ್ಯಪ್ರದೇಶ ಸರ್ಕಾರ (Madhya Pradesh Government) ವನ್ಯಜೀವಿ ಪ್ರಿಯರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ನಮೀಬಿಯಾದಿಂದ (Namibia) ತರಿಸಲಾದ ಚಿರತೆಗಳು (Cheetah) ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಆರೋಗ್ಯವಾಗಿವೆ. ಈ ಹಿನ್ನೆಲೆಯಲ್ಲಿ 2023ರ ವರ್ಷದ ಫೆಬ್ರವರಿಯಿಂದ ಕುನೊ ಪಾರ್ಕ್‌ನಲ್ಲಿ ಚೀತಾ ಪ್ರವಾಸೋದ್ಯಮ (Cheetah Tourism) ಆರಂಭಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕುನೊ ರಾಷ್ಟ್ರೀಯ ಉದ್ಯಾನವನದ (Kuno National Park) ವಿಭಾಗೀಯ ಅರಣ್ಯಾಧಿಕಾರಿ (DFO) ಪ್ರಕಾಶ್ ಕುಮಾರ್ ವರ್ಮಾ ಈ ಬಗ್ಗೆ ಮಾತನಾಡಿದ್ದಾರೆ. ಚೀತಾಗಳನ್ನು ಹಂತ-ಹಂತವಾಗಿ ದೊಡ್ಡ ಆವರಣಕ್ಕೆ ಬಿಡಲಾಗಿದೆ. ಈಗ ಅವು ವಾತಾವರಣಕ್ಕೆ ಒಗ್ಗಿಕೊಂಡಿದ್ದು, ಆರೋಗ್ಯಕರವಾಗಿವೆ. ಎಲ್ಲಾ ಚಿರತೆಗಳು ಸಂಪೂರ್ಣವಾಗಿ ಫಿಟ್ ಆಗಿದ್ದು ಮುಕ್ತವಾಗಿ ಬೇಟೆಯಾಡುತ್ತಿವೆ. ಆದ್ರೆ ದೊಡ್ಡ ಆವರಣದಲ್ಲಿರುವ ಚಿರತೆಗಳನ್ನು ತೆರೆದ ಅರಣ್ಯಕ್ಕೆ ಬಿಡುವ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ. ಚೀತಾ ಟಾಸ್ಕ್ ಫೋರ್ಸ್, ಚಿರತೆ ಪರಿಚಯಿಸುವ ಯೋಜನೆಯ ಮೇಲ್ವಿಚಾರಣೆಯ ತಜ್ಞರ ಗುಂಪು ಹಾಗೂ ಮಧ್ಯಪ್ರದೇಶ ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳಲಿದೆ ಎಂದು ಹೇಳಿದ್ದಾರೆ.

    ಚೀತಾಗಳು ಹಂತ-ಹಂತವಾಗಿ ಕಾಡಿಗೆ: ಕಳೆದ ನವೆಂಬರ್ 5 ರಂದು ಎಲ್ಟನ್ ಮತ್ತು ಫ್ರೆಡ್ಡಿ ಗಂಡು ಚೀತಾ, ನವೆಂಬರ್ 18ರಂದು ಒಬಾನ್ ಗಂಡು ಚೀತಾ, ನವೆಂಬರ್ 27 ರಂದು ಆಶಾ ಮತ್ತು ಟಿಬಿಲಿಸಿ ಹೆಣ್ಣು ಚೀತಾ, ನವೆಂಬರ್ 28 ರಂದು ಸಿಯಾಯಾ, ಸವನ್ನಾ ಹಾಗೂ ಸಾಶಾ ಹೆಣ್ಣು ಚಿರತೆಗಳನ್ನ ದೊಡ್ಡ ಆವರಣಕ್ಕೆ ಬಿಡಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯ ಭೀಕರ ಹತ್ಯೆ – ಶಿರಚ್ಛೇದಿಸಿ, ಚರ್ಮ ಸುಲಿದ್ರು

    ಆದಾಗ್ಯೂ 2023ರ ಫೆಬ್ರವರಿಯಿಂದ ಚೀತಾ ಪ್ರವಾಸೋದ್ಯಮ ಆರಂಭವಾಗುವ ನಿರೀಕ್ಷೆಯನ್ನ ಅಧಿಕಾರಿಗಳು ಹೊಂದಿದ್ದಾರೆ. ಅದಕ್ಕೆ ಪೂರಕ ಸಿದ್ಧತೆಗಳೂ ಬರದಲ್ಲಿ ಸಾಗುತ್ತಿವೆ. ಎಲ್ಲವೂ ಅಂದುಕೊಂಡಂತೆ ಆದ್ರೆ, 75 ವರ್ಷಗಳ ಬಳಿಕ ಕಾಡಿನಲ್ಲಿ ಚೀತಾಗಳು ಕಾಣಿಸಿಕೊಳ್ಳಲಿವೆ. ಅಲ್ಲದೇ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ಅವರು ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಬರ್ತಾರೆ ಅಂತ ಅಸೆಂಬ್ಲಿ ಮೊಟಕುಗೊಳಿಸಿದ್ರು: ಸಿದ್ದರಾಮಯ್ಯ

    ಅಲ್ಲದೇ ಭಾರತೀಯ ವನ್ಯಜೀವಿ ಸಂಸ್ಥೆಯು (Wildlife Institute of India) ಸಿದ್ಧಪಡಿಸಿದ `ಭಾರತದಲ್ಲಿ ಚಿರತೆಯ ಮರುಪರಿಚಯಕ್ಕಾಗಿ ಕ್ರಿಯಾ ಯೋಜನೆ’ ಚೀತಾ ಫ್ಯಾಮಿಲಿಯನ್ನು ಅಭಿವೃದ್ಧಿ ಪಡಿಸಲು ಇನ್ನೂ 12 ರಿಂದ 14 ಚೀತಾಗಳನ್ನು (ಹೆಣ್ಣು-ಗಂಡು ಸೇರಿದಂತೆ) ದಕ್ಷಿಣ ಆಫ್ರಿಕಾ, ನಮೀಬಿಯಾ ಹಾಗೂ ಇತರ ಆಫ್ರಿಕನ್ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಸಾರ್ವಜನಿಕರ ಆಸ್ತಿಗೆ ಹಾನಿಗೊಳಿಸಿದ್ರೆ ಪ್ರತಿಭಟನಾಕಾರರಿಂದಲೇ ವಸೂಲಿ- ಮಸೂದೆ ಜಾರಿಗೆ ಮಧ್ಯಪ್ರದೇಶ ಚಿಂತನೆ

    ಸಾರ್ವಜನಿಕರ ಆಸ್ತಿಗೆ ಹಾನಿಗೊಳಿಸಿದ್ರೆ ಪ್ರತಿಭಟನಾಕಾರರಿಂದಲೇ ವಸೂಲಿ- ಮಸೂದೆ ಜಾರಿಗೆ ಮಧ್ಯಪ್ರದೇಶ ಚಿಂತನೆ

    ಭೋಪಾಲ್‌: ಪ್ರತಿಭಟನೆ ವೇಳೆ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗಳಿಗೆ ಹಾನಿಯುಂಟುಮಾಡುವಂತಹ ಪ್ರತಿಭಟನಾಕಾರರಿಂದಲೇ ಹಣ ವಸೂಲಿ ಮಾಡುವ ಮಸೂದೆ ಜಾರಿಗೊಳಿಸಲು ಮಧ್ಯಪ್ರದೇಶ ಸರ್ಕಾರ ಚಿಂತಿಸಿದೆ. ಆಸ್ತಿ ಹಾನಿಗೆ ತಗುಲುವ ವೆಚ್ಚವನ್ನು ಮರುಪಡೆಯಲು ರಾಜ್ಯಾದ್ಯಂತ ಹಕ್ಕು ನ್ಯಾಯಮಂಡಳಿ ಸ್ಥಾಪಿಸಲು ಯೋಜಿಸಿದೆ.

    ಬಿಜೆಪಿ ನೇತೃತ್ವದ ಸರ್ಕಾರ ಆಡಳಿತದಲ್ಲಿರುವ ಉತ್ತರ ಪ್ರದೇಶ ಹಾಗೂ ಹರಿಯಾಣದಲ್ಲಿ ಈ ಕಾನೂನನ್ನು ಜಾರಿಗೊಳಿಸಲಾಗಿದೆ. ಆಸ್ತಿಗೆ ಹಾನಿ ಮಾಡುವವರಿಂದ ಪರಿಹಾರ ಮರುಪಡೆಯಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು 2020ರಲ್ಲಿ ರಾಜ್ಯಾದ್ಯಂತ ನ್ಯಾಯಮಂಡಳಿಗಳನ್ನು ಸ್ಥಾಪಿಸಿದ್ದಾರೆ. ಇದನ್ನೂ ಓದಿ: ಬೆಕ್ಕು, ಶ್ವಾನಗಳಲ್ಲೂ ಕೊರೊನಾ ರೂಪಾಂತರ ಆಲ್ಫಾ ಸೋಂಕು ಪತ್ತೆ- ಅಧ್ಯಯನ

    ನ್ಯಾಯಮಂಡಳಿಗಳನ್ನು ಸ್ಥಾಪಿಸುವ ಹೊಸ ಕಾನೂನನ್ನು ಶೀಘ್ರವೇ ಜಾರಿಗೆ ತರಲಾಗುವುದು. ನ್ಯಾಯಮಂಡಳಿಗಳು ಸಿವಿಲ್ ನ್ಯಾಯಾಲಯದಂತೆಯೇ ಅಧಿಕಾರ ಹೊಂದಿರುತ್ತವೆ. ಸಾರ್ವಜನಿಕ ಆಸ್ತಿಗೆ ಹಾನಿಯಾದ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿ ಜಿಲ್ಲಾಧಿಕಾರಿಗಳದ್ದಾಗಿರುತ್ತದೆ ಎಂದು ಮಧ್ಯಪ್ರದೇಶ ಸರ್ಕಾರ ತಿಳಿಸಿದೆ.

    ನ್ಯಾಯಮಂಡಳಿಯಲ್ಲಿರುವ ಪ್ರಕರಣಗಳನ್ನು ಮೂರು ತಿಂಗಳೊಳಗೆ ಪರಿಹರಿಸಬೇಕು. ನ್ಯಾಯಮಂಡಳಿ ಆದೇಶವನ್ನು ಹೈಕೋರ್ಟ್‌ನಲ್ಲಿ ಮಾತ್ರ ಪ್ರಶ್ನಿಸಬಹುದು. ವಸೂಲಿ ಮಾಡದಿದ್ದರೆ ಆರೋಪಿಗಳ ಆಸ್ತಿಯನ್ನೂ ಹರಾಜು ಹಾಕಬಹುದು. ಜಿಲ್ಲಾಮಟ್ಟದಲ್ಲಿ ಹಕ್ಕು ಆಯುಕ್ತರಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಕುರಿತು ನ್ಯಾಯಾಧೀಕರಣಕ್ಕೆ ವರದಿ ಸಲ್ಲಿಸುತ್ತಾರೆ ಎಂದು ಹೇಳಿದೆ. ಇದನ್ನೂ ಓದಿ: ‘ಅಪ್ಪು’ ಸವಿನೆನಪು – ನ.9 ರಂದು ಅಭಿಮಾನಿಗಳಿಗೆ ಅನ್ನಸಂತರ್ಪಣೆ

    ಆದರೆ, ಈ ಮಸೂದೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಮಾಜಿ ಕಾನೂನು ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ.ಸಿ.ಶರ್ಮಾ ಮಾತನಾಡಿ, ಮತದಾರರಿಗೆ ಪ್ರತಿಭಟಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಸರ್ಕಾರ, ಅವುಗಳನ್ನು ಹತ್ತಿಕ್ಕಲು ಈ ಕಾನೂನುಗಳನ್ನು ತರುತ್ತಿದೆ ಎಂದು ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಇದೇ ನವೆಂಬರ್‌ ಅಂತ್ಯಕ್ಕೆ ನಿಗದಿಯಾಗಿರುವ ವಿಧಾನಸಭಾ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಜಾರಿ ಬಗ್ಗೆ ಚರ್ಚಿಸಲಾಗುವುದು ಎಂದು ಸರ್ಕಾರ ಹೇಳಿದೆ.