Tag: ಮಧ್ಯಪ್ರದೇಶ ಚುನಾವಣೆ

  • 500 ರೂ.ಗೆ ಗ್ಯಾಸ್‌ ಸಿಲಿಂಡರ್‌, ಕೃಷಿ ಸಾಲ ಮನ್ನಾ – 5 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

    500 ರೂ.ಗೆ ಗ್ಯಾಸ್‌ ಸಿಲಿಂಡರ್‌, ಕೃಷಿ ಸಾಲ ಮನ್ನಾ – 5 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

    ಭೋಪಾಲ್‌: ಕರ್ನಾಟಕ ರಾಜ್ಯದಲ್ಲಿ 200 ಯೂನಿಟ್‌ ವಿದ್ಯುತ್‌ ಉಚಿತ, ಬಡ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ, ಮನೆಯೊಡತಿಗೆ 2,000 ರೂ. ಕರ್ನಾಟಕದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಹಾಗೂ ಯುವನಿಧಿ ಕಾರ್ಯಕ್ರಮದ ಅಡಿಯಲ್ಲಿ ಎರಡು ವರ್ಷಗಳವರೆಗೆ ನಿರುದ್ಯೋಗ ಭತ್ಯೆ – ಪದವೀಧರರಿಗೆ ತಿಂಗಳಿಗೆ 3,000 ರೂ. ಮತ್ತು ಡಿಪ್ಲೋಮಾ ಮಾಡಿದವರಿಗೆ ತಿಂಗಳಿಗೆ 1,500 ರೂ. ಗ್ಯಾರಂಟಿಗಳನ್ನ ಘೋಷಣೆ ಮಾಡಿರುವ ರಾಷ್ಟ್ರೀಯ ಕಾಂಗ್ರೆಸ್‌ ಇದೀಗ ಮಧ್ಯ ಪ್ರದೇಶದಲ್ಲಿಯೂ ಗ್ಯಾರಂಟಿಗಳನ್ನ ಘೋಷಣೆ ಮಾಡಿದೆ.

    ಇದೇ ವರ್ಷ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿಯೂ ಜಯಭೇರಿ ಬಾರಿಸಲು ಎದುರು ನೋಡುತ್ತಿದೆ. ಈ ಹಿನ್ನೆಲೆಯಲ್ಲಿ 500 ರೂ.ಗಳಿಗೆ ಎಲ್‌ಪಿಜಿ, ಕೃಷಿ ಸಾಲ ಮನ್ನಾ ಸೇರಿದಂತೆ ಅಲ್ಲಿಯೂ 5 ಗ್ಯಾರಂಟಿಗಳನ್ನ ಘೋಷಣೆ ಮಾಡಿದೆ. ಇದನ್ನೂ ಓದಿ: ಮಂಗಳವಾರದಿಂದ್ಲೇ 2 ಸಾವಿರ ರೂ.ನೋಟ್ ಹಿಂತೆಗೆತ- ವಿನಿಮಯಕ್ಕೆ ಬೇಕಿಲ್ಲ ದಾಖಲೆ

    5 ಗ್ಯಾರಂಟಿಗಳು ಯಾವುವು?
    500 ರೂ.ಗೆ ಗ್ಯಾಸ್‌ ಸಿಲಿಂಡರ್‌, ಪ್ರತಿ ಮಹಿಳೆಗೆ 1,500 ರೂ., 100 ಯೂನಿಟ್‌ ವಿದ್ಯುತ್‌ ಉಚಿತ, 200 ಯೂನಿಟ್‌ ಬಿಲ್‌ ಬಂದ್ರೆ ಅರ್ಧ ಹಣ ಕಟ್ಟಬೇಕು. ಕೃಷಿ ಸಾಲ ಮನ್ನಾ ಮಾಡಲಾಗುವುದು ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಿದೆ. ಇದನ್ನೂ ಓದಿ: `ಗ್ಯಾರಂಟಿ’ ಕಾಂಗ್ರೆಸ್ ಜನರಿಗೆ ಮೋಸ ಮಾಡಿದೆ, 40% ಕಮಿಷನ್ ಆರೋಪ ತನಿಖೆಯಾಗಲಿ – ಬೊಮ್ಮಾಯಿ

    ಹಿರಿಯ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜೂನ್ 12 ರಂದು ನರ್ಮದಾ ನದಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಜಬಲ್ಪುರದಲ್ಲಿ ರೋಡ್ ಶೋ ಮತ್ತು ರ‍್ಯಾಲಿಯೊಂದಿಗೆ ಮಧ್ಯಪ್ರದೇಶದಲ್ಲಿ ಪಕ್ಷದ ಚುನಾವಣಾ ಪ್ರಚಾರ ಪ್ರಾರಂಭಿಸಲಿದ್ದಾರೆ.

    2023 ರ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ರಾಜ್ಯಸಭಾ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಹೇಳಿದ್ದಾರೆ.

  • ಮೋದಿ ತಂದೆ ಯಾರು: ಕೈ ನಾಯಕನಿಂದ ಕೀಳು ಮಟ್ಟದ ಹೇಳಿಕೆ

    ಮೋದಿ ತಂದೆ ಯಾರು: ಕೈ ನಾಯಕನಿಂದ ಕೀಳು ಮಟ್ಟದ ಹೇಳಿಕೆ

    ನವದೆಹಲಿ: ಮೋದಿ ತಂದೆ ಯಾರು ಎಂದು ಪ್ರಶ್ನಿಸುವ ಮೂಲಕ ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ವಿಲಾಸ್ ಮುತ್ತೆಮ್‍ವಾರ್ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ.

    ರಾಹುಲ್ ಗಾಂಧಿ ರಾಜಕೀಯಕ್ಕೆ ಬರುವುದಕ್ಕೂ ಮೊದಲೇ ಅವರ ತಲೆಮಾರುಗಳ ಪರಿಚಯ ಜನರಿಗಿದೆ. ರಾಹುಲ್ ತಂದೆ ತಂದೆ ರಾಜೀವ್ ಎನ್ನುವುದು ಗೊತ್ತಿದೆ. ರಾಜೀವ್ ತಾಯಿ ಇಂದಿರಾ, ಇಂದಿರಾ ತಂದೆ ನೆಹರು ಎಂದು, ನೆಹರು ತಂದೆ ಮೋತಿ ಲಾಲ್ ನೆಹರು ಎನ್ನುವುದು ಗೊತ್ತು. ಆದರೆ ಮೋದಿಯ ತಂದೆ ಯಾರು ಎನ್ನುವುದು ಯಾರಿಗೂ ಗೊತ್ತಿಲ್ಲ ಎಂದಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ತಂದೆಯ ಹೆಸರು ಯಾರಿಗೂ ಗೊತ್ತಿಲ್ಲ. ಈ ವ್ಯಕ್ತಿ ಈಗ ಕಾಂಗ್ರೆಸ್ ದೇಶಕ್ಕೆ ಏನು ಕೊಡುಗೆ ನೀಡಿದೆ ಎಂದು ಪ್ರಶ್ನಿಸುತ್ತಿದ್ದಾನೆ ಎಂದು ಮುತ್ತೆಮ್‍ವಾರ್ ಹೇಳಿದ್ದಾರೆ. ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿಲಾಸ್ ಮುತ್ತೆಮ್‍ವಾರ್ ಮಾತನಾಡಿರುವ ವಿಡಿಯೋವನ್ನು ಟ್ವೀಟ್ ಮಾಡಿ ಕಾಂಗ್ರೆಸ್ಸಿಗೆ ನಾಚಿಕೆಯಾಗಬೇಕು ಎಂದು ಬರೆದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಮಧ್ಯಪ್ರದೇಶ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಸಂಸದ ರಾಜ್ ಬಬ್ಬರ್ ಡಾಲರ್ ಮೌಲ್ಯವನ್ನು ಮೋದಿ ತಾಯಿ ವಯಸ್ಸಿಗೆ ಹೋಲಿಸಿ ವ್ಯಂಗ್ಯವಾಡಿದ್ದರು. ರೂಪಾಯಿ ಮೌಲ್ಯ ಕುಸಿದು ಮನಮೋಹನ್ ಸಿಂಗ್ ವಯಸ್ಸಿನ ಸನಿಹಕ್ಕೆ ಬಂದಿದೆ ಎಂದು ಮೋದಿ ಹೇಳಿದ್ದರು. ಆದರೆ ಇಂದು ತಮ್ಮ ಪ್ರೀತಿಯ ತಾಯಿಯ ವಯಸ್ಸಿಗೆ ರೂಪಾಯಿ ಮೌಲ್ಯ ಬಂದಿದೆ ಎಂದು ರಾಜ್ ಬಬ್ಬರ್ ಹೇಳಿಕೆ ನೀಡಿ ಲೇವಡಿ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv