Tag: ಮಧ್ಯಪಾನ

  • ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು ರಂಪಾಟ ಮಾಡಿದ ಸರ್ಕಾರಿ ನೌಕರ

    ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು ರಂಪಾಟ ಮಾಡಿದ ಸರ್ಕಾರಿ ನೌಕರ

    ಬೆಳಗಾವಿ: ಸಾಕಷ್ಟು ಜನರು ಸರ್ಕಾರಿ ನೌಕರಿಗಾಗಿ ಪರದಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಸರ್ಕಾರಿ ನೌಕರ ತನ್ನ ಕೆಲಸಕ್ಕೆ ಮರ್ಯಾದೆ ಕೊಡದೆ ರಂಪಾಟ ಮಾಡಿದ್ದಾನೆ. ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು ಅಡ್ಡಲಾಗಿ ಮಲಗಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ತಹಶೀಲ್ದಾರ್ ಕಚೇರಿ ಎದುರು ನಡೆದಿದೆ.

    ಸಂಜು ಬೆಣ್ಣಿ ಕಂಠಪೂರ್ತಿ ಕುಡಿದು ಮಲಗಿದ್ದ ಗ್ರಾಮ ಲೆಕ್ಕಾಧಿಕಾರಿ. ಈ ಮೊದಲು ಸಂಜು ಬೆಣ್ಣಿ ಸವದತ್ತಿ ತಾಲೂಕಿನ ಗೊರವನಕೊಳ್ಳ ಗ್ರಾಮದಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕೆಲಸಕ್ಕಿದ್ದ. ಅಲ್ಲಿಯೂ ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿಯುತ್ತಿದ್ದ ಹಿನ್ನೆಲೆ ಸವದತ್ತಿ ತಹಶೀಲ್ದಾರ್ ಕಚೇರಿ ಕರ್ತವ್ಯಕ್ಕೆ ನಿಯೋಜಿಸಿದ್ದರು. ಇದನ್ನೂ ಓದಿ: 80ಕ್ಕೂ ಹೆಚ್ಚು ಮಕ್ಕಳನ್ನ ಕಾಡುತ್ತಿದೆ ಟೊಮೆಟೊ ಜ್ವರ – ಏನಿದರ ಲಕ್ಷಣ? 

    ಆದ್ರೆ, ಇಲ್ಲಿಯೂ ಸಹ ಸಂಜು ಬೆಣ್ಣಿ ತನ್ನ ಹಳೇ ಚಾಳಿ ಮುಂದುವರಿಸಿದ್ದಾನೆ. ಈತನ ರಂಪಾಟದ ಜೊತೆಗೆ ಗ್ರಾಮಸ್ಥರ ಜೊತೆ ದುರ್ವರ್ತನೆ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ಜೊತೆ ಸಂಜು ಬೆಣ್ಣಿ ವಿರುದ್ಧ ಕ್ರಮಕೈಗೊಳ್ಳದ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ವಿರುದ್ಧವೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮದ್ಯದ ಗ್ಲಾಸ್, ಕೈತುಂಬ ಗನ್ ಹಿಡಿದು ಡ್ಯಾನ್ಸ್- ಶಾಸಕನನ್ನು ಉಚ್ಚಾಟಿಸಿದ ಬಿಜೆಪಿ

    ಮದ್ಯದ ಗ್ಲಾಸ್, ಕೈತುಂಬ ಗನ್ ಹಿಡಿದು ಡ್ಯಾನ್ಸ್- ಶಾಸಕನನ್ನು ಉಚ್ಚಾಟಿಸಿದ ಬಿಜೆಪಿ

    ಡೆಹ್ರಾಡೂನ್: ಮದ್ಯದ ಗ್ಲಾಸ್, ಕೈತುಂಬ ಗನ್ ಹಿಡಿದು ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದ ಉತ್ತರಾಖಂಡ್‍ನ ಶಾಸಕ ಪ್ರಣವ್ ಸಿಂಗ್ ಅವರನ್ನು ಬಿಜೆಪಿ ಉಚ್ಚಾಟನೆ ಮಾಡಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ರಾಷ್ಟ್ರೀಯ ಮಾಧ್ಯಮ ಸಲಹೆಗಾರ ಅನಿಲ್ ಬಲುನಿ ಅವರು, ಪ್ರಣವ್ ಸಿಂಗ್ ನಿರಂತರವಾಗಿ ದುರ್ನಡತೆ ತೋರುತ್ತಾ ಬಂದಿದ್ದಾರೆ. ಹೀಗಾಗಿ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದೇವೆ ಎಂದು ತಿಳಿಸಿದರು.

    ಕಪ್ಪು ಬಣ್ಣದ ಬನಿಯನ್ ಹಾಗೂ ಬಿಳಿ ಪ್ಯಾಂಟ್ ಧರಿಸಿ, ಎರಡೂ ಕೈಯಲ್ಲಿ ನಾಲ್ಕು ಗನ್ ಹಿಡಿದುಕೊಂಡು, ಮೊಣಕಾಲ ಮೇಲೆ ಮದ್ಯಪಾನದ ಗ್ಲಾಸ್ ಇಟ್ಟುಕೊಂಡು, ಡ್ಯಾನ್ಸ್ ಮಾಡುತ್ತ ಪೋಸ್ ನೀಡಿದ್ದರು. ಪ್ರಣವ್ ಸಿಂಗ್ ಅವರ ಜೊತೆ ಸಹಚರರು ಸಹ ಡ್ಯಾನ್ಸ್ ಮಾಡಿದ್ದು, ಸುಮಾರು 1.45 ನಿಮಿಷಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಈ ಕುರಿತು ಎಚ್ಚರ ವಹಿಸಿದ್ದರು. ತಕ್ಷಣವೇ ಗನ್ ಹಾಗೂ ಶಸ್ತ್ರಾಸ್ತ್ರಗಳಿಗೆ ಪರವಾನಿಗೆ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ತನಿಖೆ ನಡೆಸಿದ್ದರು. ಈ ಘಟನೆಯಿಂದ ಮುಜುಗುರಕ್ಕೆ ಈಡಾಗಿದ್ದ ಬಿಜೆಪಿ ಸಹ ಖಂಡನೆ ವ್ಯಕ್ತಪಡಿಸಿದ್ದು, ಪ್ರಣವ್ ಸಿಂಗ್ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿತ್ತು.

    ನಾನು ಈ ವಿಡಿಯೋವನ್ನು ಗಮನಿಸಿದ್ದು, ಶಾಸಕ ಪ್ರಣವ್ ಸಿಂಗ್ ಇಂತಹ ವರ್ತನೆಗಳಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಹೀಗಾಗಿಯೇ ಈ ಹಿಂದೆ ಮೂರು ತಿಂಗಳುಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಘಟನೆ ಕುರಿತು ಉತ್ತರಾಖಂಡ್ ರಾಜ್ಯ ಬಿಜೆಪಿ ಜೊತೆ ಮಾತನಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿಯ ರಾಷ್ಟ್ರೀಯ ಮಾಧ್ಯಮ ಸಲಹೆಗಾರ ಅನಿಲ್ ಬಲುನಿ ತಿಳಿಸಿದ್ದರು.

    ತಮ್ಮ ನಡತೆಯನ್ನು ಸಮರ್ಥಿಸಿಕೊಂಡಿದ್ದ ಶಾಸಕ ಪ್ರಣವ್ ಸಿಂಗ್, ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ನಾನು ಗುಂಡುಗಳನ್ನು ಲೋಡ್ ಮಾಡದ ಗನ್ ಹಿಡಿದುಕೊಂಡಿದ್ದೆ. ಮನೆಯಲ್ಲಿ ಪಾರ್ಟಿ ಮಾಡುವುದು, ಕುಡಿಯುವುದು ತಪ್ಪೇ ಎಂದು ಪ್ರಶ್ನಿಸಿದ್ದರು.

  • ಮದ್ಯದ ಗ್ಲಾಸ್, ಕೈತುಂಬ ಗನ್ ಹಿಡಿದು ಬಿಜೆಪಿ ಶಾಸಕನ ಡ್ಯಾನ್ಸ್ – ವಿಡಿಯೋ ವೈರಲ್

    ಮದ್ಯದ ಗ್ಲಾಸ್, ಕೈತುಂಬ ಗನ್ ಹಿಡಿದು ಬಿಜೆಪಿ ಶಾಸಕನ ಡ್ಯಾನ್ಸ್ – ವಿಡಿಯೋ ವೈರಲ್

    ಡೆಹ್ರಾಡೂನ್: ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತಿದ್ದ ಉತ್ತರಾಖಂಡ್‍ನ ಬಿಜೆಪಿ ಶಾಸಕ ಪ್ರಣವ್ ಸಿಂಗ್ ಇದೀಗ ಮತ್ತೆ ಸುದ್ದಿಯಾಗಿದ್ದು, ನಾಲ್ಕೈದು ಗನ್ ಹಿಡಿದುಕೊಂಡು ಅಶ್ಲೀಲ ಪದಗಳನ್ನು ಬಳಸಿ ಬೈಯುತ್ತ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಶಾಸಕ ಆಕಾಶ್ ವಿಜಯ್‍ವರ್ಗಿಯಾ ಪ್ರಕರಣದ ನಂತರ ಪ್ರಧಾನಿ ಮೋದಿ ಅವರು ಎಲ್ಲ ಜನಪ್ರತಿನಿಧಿಗಳು ಶಿಸ್ತಿನಿಂದ ವರ್ತಿಸಬೇಕು. ಅಶಿಸ್ತು ಹಾಗೂ ದುರ್ವರ್ತನೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಆದರೂ ಕೆಲ ನಾಯಕರು ಒಂದಿಲ್ಲೊಂದು ವಿವಾದಗಳನ್ನು ಸೃಷ್ಟಿಸುವ ಮೂಲಕ ಸುದ್ದಿಯಾಗುತ್ತಿದ್ದು, ಉತ್ತರಾಖಂಡ ಶಾಸಕರೊಬ್ಬರು ಇದೀಗ ನಾಲ್ಕೈದು ಗನ್‍ಗಳನ್ನು ಹಿಡಿದುಕೊಂಡು ಅಶ್ಲೀಲ ಶಬ್ದಗಳಿಂದ ಬೈಯ್ಯುವ ಮೂಲಕ ವಿಚಿತ್ರವಾಗಿ ವರ್ತಿಸಿದ್ದಾರೆ.

    ಕಪ್ಪು ಬಣ್ಣದ ಬನಿಯನ್ ಹಾಗೂ ಬಿಳಿ ಪ್ಯಾಂಟ್ ಧರಿಸಿ, ಎರಡೂ ಕೈಯ್ಯಲ್ಲಿ ನಾಲ್ಕು ಗನ್ ಹಿಡಿದುಕೊಂಡು, ಮೊಣಕಾಲ ಮೇಲೆ ಮಧ್ಯಪಾನದ ಗ್ಲಾಸ್ ಇಟ್ಟುಕೊಂಡು, ಡ್ಯಾನ್ಸ್ ಮಾಡುತ್ತ ಪೋಸ್ ನೀಡಿದ್ದಾರೆ. ಶಾಸಕರ ಜೊತೆ ಸಹಚರರು ಸಹ ಡ್ಯಾನ್ಸ್ ಮಾಡಿದ್ದು, ಸುಮಾರು 1.45 ನಿಮಿಷಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಈ ಕುರಿತು ಎಚ್ಚರ ವಹಿಸಿದ್ದು, ಗನ್ ಹಾಗೂ ಶಸ್ತ್ರಾಸ್ತ್ರಗಳಿಗೆ ಪರವಾನಿಗೆ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

    ಬಿಜೆಪಿ ಸಹ ಈ ಕುರಿತು ಖಂಡನೆ ವ್ಯಕ್ತಪಡಿಸಿದ್ದು, ಶಾಸಕನ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದೆ.

    ನಾನು ಈ ವಿಡಿಯೋವನ್ನು ಗಮನಿಸಿದ್ದು, ಶಾಸಕ ಪ್ರಣವ್ ಸಿಂಗ್ ಇಂತಹ ವರ್ತನೆಗಳಿಂದಲೇ ಹೆಚ್ಚು ಪ್ರಸಿದ್ದಿ ಪಡೆದಿದ್ದಾರೆ. ಹೀಗಾಗಿಯೇ ಈ ಹಿಂದೆ ಮೂರು ತಿಂಗಳುಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಘಟನೆ ಕುರಿತು ಉತ್ತರಾಖಂಡ್ ರಾಜ್ಯ ಬಿಜೆಪಿ ಜೊತೆ ಮಾತನಾಡಿ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಬಿಜೆಪಿಯ ರಾಷ್ಟ್ರೀಯ ಮಾಧ್ಯಮ ಸಲಹೆಗಾರ ಅನಿಲ್ ಬಲುನಿ ತಿಳಿಸಿದ್ದಾರೆ.

    ಪತ್ರಕರ್ತರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಕಳೆದ ತಿಂಗಳು ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿತ್ತು. ಅಲ್ಲದೆ, ಅಶಿಸ್ತು ಹಾಗೂ ದುರ್ವರ್ತನೆಯಿಂದ ಬಿಜೆಪಿ ರೋಸಿ ಹೋಗಿದ್ದು, ಅಮಾನತುಗೊಳಿಸಿದರೂ ಸಹ ಶಾಸಕರ ದುರ್ವರ್ತನೆಗೆ ಕಡಿವಾಣ ಬಿದ್ದಿಲ್ಲ.

  • ಒಂದಕ್ಕಿಂತ ಹೆಚ್ಚು ಲಿಕ್ಕರ್ ಬಾಟಲ್ ತೆಗೆದುಕೊಂಡು ಯುಪಿ ಪ್ರವೇಶಿಸುವಂತಿಲ್ಲ-ನಿಯಮ ಮುರಿದರೆ 5 ವರ್ಷ ಜೈಲು!

    ಒಂದಕ್ಕಿಂತ ಹೆಚ್ಚು ಲಿಕ್ಕರ್ ಬಾಟಲ್ ತೆಗೆದುಕೊಂಡು ಯುಪಿ ಪ್ರವೇಶಿಸುವಂತಿಲ್ಲ-ನಿಯಮ ಮುರಿದರೆ 5 ವರ್ಷ ಜೈಲು!

    ಘಜಿಯಾಬಾದ್: ನೆರೆ ರಾಜ್ಯಗಳಿಂದ ಒಂದಕ್ಕಿಂತ ಹೆಚ್ಚು ಮದ್ಯದ ಬಾಟಲಿ ತೆಗೆದುಕೊಂಡು ಬಂದರೆ, 5 ವರ್ಷ ಜೈಲು ಹಾಗೂ 5 ಸಾವಿರ ರೂ. ದಂಡ ವಿಧಿಸುವ ಹೊಸ ನಿಯಮವನ್ನು ಉತ್ತರ ಪ್ರದೇಶದ ಸರ್ಕಾರ ಜಾರಿಗೊಳಿಸಿದೆ.

    ಈ ನಿಯಮವನ್ನು ಮುರಿದು ಒಂದಕ್ಕಿಂತ ಹೆಚ್ಚು ಬಾಟಲಿ ಮದ್ಯ ತೆಗೆದುಕೊಂಡು ಬಂದರೆ ಇದನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಯುಪಿ ನೆರೆಯ ರಾಜ್ಯದಲ್ಲಿ ಮದ್ಯದ ಬೆಲೆ ಕಡಿಮೆ ಇದರುವುರಿಂದ ಮಾರಾಟಗಾರರು ಹೆಚ್ಚು ಇತರೇ ರಾಜ್ಯಗಳಿಂದ ಮದ್ಯ ರವಾನೆ ಮಾಡಿಕೊಳ್ಳುತ್ತಿದ್ದರು. ಈ ಕ್ರಮಕ್ಕೆ ತಡೆ ನೀಡಲು ರಾಜ್ಯ ಸರ್ಕಾರ ಈ ಹೊಸ ನಿಯಮಗಳನ್ನು ರೂಪಿಸಿದೆ.

    ಈ ಕುರಿತು ಮಾಹಿತಿ ನೀಡಿರುವ ಅಬಕಾರಿ ಅಧಿಕಾರಿಯೊಬ್ಬರು 2017ರಲ್ಲೇ ಈ ಕುರಿತು ನಿಯಮ ರೂಪಿಸಲಾಗಿತ್ತು. ಒಬ್ಬ ವ್ಯಕ್ತಿಗೆ ಸೀಲ್ ಮಾಡಿದ ಒಂದು ಬಾಟಲ್ ಮದ್ಯವನ್ನು ಮಾತ್ರ ನೆರೆಯ ರಾಜ್ಯದಿಂದ ತೆಗೆದುಕೊಂಡು ಬರಲು ಅನುಮತಿ ನೀಡಲಾಗಿದೆ. ತೆರೆದ ಸಿಲ್ ಬಂದಿರುವ ಬಾಟಲ್‍ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಮಾಹಿತಿ ತಿಳಿಸಿದ್ದಾರೆ.

    ಮಾಧ್ಯಹ್ನದ ಬಳಿಕವೇ ಲಿಕ್ಕರ್ ಶಾಪ್ ಓಪನ್:
    ಮದ್ಯಪಾನ ಸೇವನೆ ಮಾಡುವವರ ಸಂಖ್ಯೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಉತ್ತರ ಪ್ರದೇಶ ಸರ್ಕಾರ ಮಧ್ಯಾಹ್ನದ ಬಳಿಕವೇ ಮದ್ಯದ ಅಂಗಡಿ ತೆರೆಯಲು ಅನುಮತಿ ನೀಡಿದ್ದು, ರಾತ್ರಿ 10 ಗಂಟೆ ವೇಳೆಗೆ ಬಂದ್ ಮಾಡಲು ಸೂಚಿಸಿದೆ.