Tag: ಮಧ್ಯಂತರ ಜಾಮೀನು

  • ಅತ್ಯಾಚಾರ ಕೇಸ್‌ – ಸ್ವಯಂ ಘೋಷಿತ ದೇವಮಾನವ ಅಸರಾಂಗೆ ಮಧ್ಯಂತರ ಜಾಮೀನು

    ಅತ್ಯಾಚಾರ ಕೇಸ್‌ – ಸ್ವಯಂ ಘೋಷಿತ ದೇವಮಾನವ ಅಸರಾಂಗೆ ಮಧ್ಯಂತರ ಜಾಮೀನು

    ನವದೆಹಲಿ/ಜೈಪುರ: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಂಗೆ (Asaram Bapu) ವೈದ್ಯಕೀಯ ಚಿಕಿತ್ಸೆಗಾಗಿ ರಾಜಸ್ಥಾನ ಹೈಕೋರ್ಟ್ (Rajasthan High Court) ಆರು ತಿಂಗಳುಗಳ ಕಾಲ ಮಧ್ಯಂತರ ಜಾಮೀನು (Interim Bail) ನೀಡಿದೆ.

    ಪ್ರಕರಣದ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಪ್ರಕಾಶ್ ಶರ್ಮಾ ಅವರ ವಿಭಾಗೀಯ ಪೀಠ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸರಾಂ ಅವರ ಪ್ರಸ್ತುತ ಆರೋಗ್ಯ ಸ್ಥಿತಿಯನ್ನು ಉಲ್ಲೇಖಿಸಿ ನಿಯಮಿತ ಜಾಮೀನು ಮಂಜೂರು ಮಾಡಿತು. ಇದನ್ನೂ ಓದಿ: ಕ್ವಾಂಟಮ್‌ ಸಿಟಿ ಅಭಿವೃದ್ಧಿ, ಸಹಭಾಗಿತ್ವಕ್ಕೆ ಸ್ವಿಟ್ಜರ್ಲೆಂಡ್‌ ಕಂಪನಿ, ಸಂಶೋಧನಾ ಸಂಸ್ಥೆಗಳ ಒಲವು: ಸಚಿವ ಬೋಸರಾಜು

    ಆಗಸ್ಟ್ 2013ರಿಂದ ಅಸಾರಾಂ ಬಾಪು ಜೈಲಿನಲ್ಲಿದ್ದಾರೆ. ಶಾಲಾ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧನಕ್ಕೊಳಗಾದರು. ಬಾಲಕಿಯ ಪೋಷಕರು ಅವರ ಭಕ್ತರಾಗಿದ್ದು, ಪೊಲೀಸರಿಗೆ ದೂರು ನೀಡಿದ ನಂತರ ಬಂಧನ ಮಾಡಲಾಯ್ತು. ಎರಡು ತಿಂಗಳ ನಂತರ, ಗುಜರಾತ್‌ನ ಸೂರತ್ ಆಶ್ರಮದಲ್ಲಿ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರ ಆರೋಪದಲ್ಲಿ ಅಸಾರಾಂ ಮತ್ತು ಅವರ ಮಗ ನಾರಾಯಣ್ ಸಾಯಿ ವಿರುದ್ಧ ಪ್ರಕರಣ ದಾಖಲಾಯಿತು. ಈ ಪ್ರಕರಣಗಳಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಕಾಗಿನೆಲೆ ಅಭಿವೃದ್ಧಿಗಾಗಿ 34 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ

    ಈ ವರ್ಷ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಅಸಾರಾಂಗೆ ವೈದ್ಯಕೀಯ ಆಧಾರದ ಮೇಲೆ ಮಾರ್ಚ್ ಅಂತ್ಯದವರೆಗೆ ಮಧ್ಯಂತರ ಜಾಮೀನು ನೀಡಿತ್ತು. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ರಾಜೇಶ್ ಬಿಂದಾಲ್ ಅವರ ಪೀಠ ಈ ಆದೇಶ ನೀಡಿತ್ತು. ಮಧ್ಯಂತರ ಜಾಮೀನಿನ ಮೇಲೆ ಹೊರಗಿರುವಾಗ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಲು ಅಥವಾ ಅವರ ಅನುಯಾಯಿಗಳನ್ನು ಭೇಟಿ ಮಾಡಲು ಪ್ರಯತ್ನಿಸಬಾರದು ಎಂದು ಆದೇಶಿಸಿತು. ಇದನ್ನೂ ಓದಿ: ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಬಗ್ಗೆ ಮಾತಾಡದೇ ಬಾಯಿಮುಚ್ಚಿಕೊಂಡು ಇರ್ಬೇಕು: ಬೋಸರಾಜು

    ಅಸಾರಾಂ ಬಾಪು ಹೃದಯ ಸಂಬಂಧಿ ಸಮಸ್ಯೆಗಳು, ಇತರ ವಯೋಸಹಜ ರೋಗಗಳಿಂದ ಬಳಲುತ್ತಿದ್ದಾರೆ. ಜೈಲಿನಲ್ಲಿ ಸರಿಯಾದ ಚಿಕಿತ್ಸೆ ಸಿಗದಿರುವುದು ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಉತ್ತಮ ಆರೈಕೆ ಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಹೈಕೋರ್ಟ್ ಈ ಆಧಾರಗಳನ್ನು ಪರಿಗಣಿಸಿ ಆರು ತಿಂಗಳ ಜಾಮೀನು ನೀಡಿದೆ. ಇದನ್ನೂ ಓದಿ: ನಾವು ಮಾತಾಡಿದಷ್ಟು ಪಕ್ಷಕ್ಕೆ ಡ್ಯಾಮೇಜ್, ಸೈಲೆಂಟ್ ಆಗಿ ಇರದಿದ್ರೆ ವಿಪಕ್ಷಗಳಿಗೆ ಆಹಾರ ಆಗ್ತೀವಿ: ರಾಮಲಿಂಗಾ ರೆಡ್ಡಿ

  • ಶಾಸಕ ಸತೀಶ್ ಸೈಲ್‌ಗೆ 7 ದಿನಗಳ ಮಧ್ಯಂತರ ಜಾಮೀನು ಮಂಜೂರು

    ಶಾಸಕ ಸತೀಶ್ ಸೈಲ್‌ಗೆ 7 ದಿನಗಳ ಮಧ್ಯಂತರ ಜಾಮೀನು ಮಂಜೂರು

    ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದಡಿ (Money Laundering Case) ಬಂಧನವಾಗಿರುವ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ (Satish Sail) ಜನಪ್ರತಿನಿಧಿಗಳ ನ್ಯಾಯಾಲಯ 7 ದಿನಗಳ ಕಾಲ ಮಧ್ಯಂತರ ಜಾಮೀನು (Interim Bail) ಮಂಜೂರು ಮಾಡಿದೆ.

    ಬುಧವಾರವಷ್ಟೇ ವಿಚಾರಣೆ ನಡೆಸಿದ ನ್ಯಾಯಾಲಯ ಸತೀಶ್ ಸೈಲ್ ಅವರನ್ನು ಎರಡು ದಿನ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ – ಶಾಸಕ ಸತೀಶ್ ಸೈಲ್ 2 ದಿನ ಇ.ಡಿ ಕಸ್ಟಡಿಗೆ

    ಸತೀಶ್ ಸೈಲ್ ಉಸಿರಾಟದ ಸಮಸ್ಯೆ, ಡಯಾಬಿಟಿಸ್‌ನಿಂದ ಬಳಲುತ್ತಿದ್ದು, ಕಸ್ಟಡಿಯಲ್ಲಿ ಇದ್ದಾಗ ಅನಾರೋಗ್ಯ ಹಿನ್ನೆಲೆ ಜಾಮೀನು ಮಂಜೂರು ಮಾಡಿದೆ. ಇತ್ತೀಚೆಗೆ ಅವರ ಮನೆ ಮೇಲೆ ದಾಳಿ ನಡೆಸಿದ್ದ ಇ.ಡಿ ಕೋಟ್ಯಂತರ ರೂ. ಹಣ ಹಾಗೂ ಚಿನ್ನದ ಬಿಸ್ಕೆಟ್‌ಗಳನ್ನು ವಶಕ್ಕೆ ಪಡೆದಿತ್ತು. 1.68 ಕೋಟಿ ನಗದು, 6.75 ಕೆಜಿ ಚಿನ್ನದ ಬಿಸ್ಕೆಟ್‌ಗಳು ಮತ್ತು 14.13 ಕೋಟಿ ಹಣ ಹೊಂದಿರುವ ಬ್ಯಾಂಕ್ ಖಾತೆಯನ್ನು ಜಾರಿ ನಿರ್ದೇಶನಾಲಯ ಸೀಜ್ ಮಾಡಿತ್ತು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್‌ – ಇ.ಡಿಯಿಂದ ಶಾಸಕ ಸತೀಶ್ ಸೈಲ್‌ ಅರೆಸ್ಟ್‌

    ಅಕ್ರಮ ಅದಿರು ಪ್ರಕರಣದಲ್ಲಿ ಜಾಮೀನಿನ ಮೇಲೆ ಶಾಸಕ ಸತೀಶ್ ಸೈಲ್ ಹೊರಗಿದ್ದರು. ಆ.13 ಮತ್ತು 14 ರಂದು ಇ.ಡಿ ಅಧಿಕಾರಿಗಳು, ಶಾಸಕರ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದರು. ಈ ವೇಳೆ ಅಪಾರ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್ ಸೈಲ್ ಅವರನ್ನು ಮಂಗಳವಾರ ಇ.ಡಿ ಅಧಿಕಾರಿಗಳು ಬಂಧಿಸಿದ್ದರು. ಇದನ್ನೂ ಓದಿ: Rain Alert | ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ – ಬೆಳೆಹಾನಿಗೆ ರೈತರು ಕಂಗಾಲು, ಸೇತುವೆಗಳು ಜಲಾವೃತ

  • ಪುತ್ರನಿಗೆ ಶಸ್ತ್ರಚಿಕಿತ್ಸೆ – ಶಾಸಕ ವಿನಯ್‌ಗೆ 2 ದಿನಗಳ ಮಧ್ಯಂತರ ಜಾಮೀನು ಮಂಜೂರು

    ಪುತ್ರನಿಗೆ ಶಸ್ತ್ರಚಿಕಿತ್ಸೆ – ಶಾಸಕ ವಿನಯ್‌ಗೆ 2 ದಿನಗಳ ಮಧ್ಯಂತರ ಜಾಮೀನು ಮಂಜೂರು

    ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಸಾಕ್ಷಿ ನಾಶದ ಆರೋಪದ ಮೇಲೆ ಸಿಬಿಐನಿಂದ ಬಂಧಿತರಾಗಿರುವ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎರಡು ದಿನಗಳ ಕಾಲ ಮಧ್ಯಂತರ ಜಾಮೀನು (Interim bail) ಮಂಜೂರು ಮಾಡಿದೆ.

    ಈ ಹಿಂದೆ ಸಿಬಿಐನಿಂದ ಬಂಧಿತರಾಗಿ ಸೆರೆವಾಸ ಅನುಭವಿಸಿದ್ದ ವಿನಯ್ ಕುಲಕರ್ಣಿ, ಜಾಮೀನಿನ ಮೇಲೆ ಹೊರ ಬಂದು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಆದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪದ ಮೇಲೆ ನ್ಯಾಯಾಲಯ ಇವರ ಜಾಮೀನು ರದ್ದು ಮಾಡಿದ್ದರಿಂದ ಮರಳಿ ಅವರು ಪರಪ್ಪನ ಅಗ್ರಹಾರ ಸೇರಬೇಕಾಯಿತು. ಈಗ ತಮ್ಮ ಮಗ ಹೇಮಂತ್ ಅವರಿಗೆ ಅಪಘಾತವಾಗಿದ್ದರಿಂದ ಆತನ ಕಾಲಿನ ಶಸ್ತ್ರಚಿಕಿತ್ಸೆ ಮಾಡಿಸುತ್ತಿರುವುದರಿಂದ ತಮಗೆ ಜಾಮೀನು ನೀಡಬೇಕು ಎಂದು ಕೋರಿ ಶಾಸಕ ವಿನಯ್ ಅವರು ಮರಳಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಕೇವಲ ಎರಡು ದಿನಗಳವರೆಗೆ ಮಾತ್ರ ಜಾಮೀನು ಮಂಜೂರು ಮಾಡಿದೆ. ಮರಳಿ ವಿನಯ್ ಕುಲಕರ್ಣಿ ಅವರು ಸೆ.11ರ ಸಂಜೆ 5ಕ್ಕೆ ಸಿಬಿಐ ಅಧಿಕಾರಿಗಳ ಎದುರು ಹಾಜರಾಗಿ ಮರಳಿ ಜೈಲು ಸೇರಬೇಕಿದೆ. ಇದನ್ನೂ ಓದಿ: ಈ ಜನ್ಮದಲ್ಲೇ ಮುಸ್ಲಿಂ ಧರ್ಮಕ್ಕೆ ಹೋಗಿಬಿಡಿ, ನಾವೇ ಹಾರ ಹಾಕಿ ಕಳುಹಿಸ್ತೇವೆ: ಶೋಭಾ ಕರಂದ್ಲಾಜೆ

    ಸದ್ಯ ಎರಡು ದಿನಗಳ ಕಾಲ ಜಾಮೀನು ಸಿಕ್ಕಿರುವ ವಿನಯ್ ಕುಲಕರ್ಣಿ ಅವರನ್ನು ಮಂಗಳವಾರ ಸಂಜೆಯೇ ಜೈಲಿನಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ. ವಿನಯ್ ಕುಲಕರ್ಣಿ ಅವರ ಪುತ್ರ ಹೇಮಂತ್ ಅವರ ಕಾಲಿನ ಶಸ್ತ್ರ ಚಿಕಿತ್ಸೆ ಬೆಂಗಳೂರಿನಲ್ಲೇ ನಡೆಯುವುದರಿಂದ ವಿನಯ್ ಅವರು ಬೆಂಗಳೂರಿನಲ್ಲೇ ಉಳಿಯಬೇಕಾಗಿದೆ. ಜಾಮೀನು ಸಿಕ್ಕಿರುವ ಈ ಎರಡು ದಿನಗಳ ಅವಧಿಯಲ್ಲಿ ಯಾವುದೇ ಸಭೆ ಮಾಡುವಂತಿಲ್ಲ ಎಂದು ಶಾಸಕ ವಿನಯ್‌ಗೆ ನ್ಯಾಯಾಲಯ ಸೂಚನೆ ನೀಡಿದೆ. ಇದನ್ನೂ ಓದಿ: ಸರ್ಕಾರ ಬುಡಮೇಲು ಮಾಡಲು ಅಮಿತ್ ಶಾ ಸಲಹೆ – ಬಿಜೆಪಿ ನಾಯಕರ ದೆಹಲಿ ಭೇಟಿಗೆ ಹರಿಪ್ರಸಾದ್ ಲೇವಡಿ

  • ಆಪರೇಷನ್ ಸಿಂಧೂರ ಹೇಳಿಕೆ ವಿವಾದ – ಅಶೋಕ ವಿವಿ ಪ್ರೊಫೆಸರ್‌ಗೆ ಮಧ್ಯಂತರ ಜಾಮೀನು

    – ಎಸ್‌ಐಟಿ ರಚನೆಗೆ ಡಿಜಿಪಿಗೆ ಸೂಚಿಸಿದ ಸುಪ್ರೀಂ ಕೋರ್ಟ್

    ನವದೆಹಲಿ: ಆಪರೇಷನ್ ಸಿಂಧೂರದ (Operation Sindoor) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಹರಿಯಾಣದ ಅಶೋಕ ವಿಶ್ವವಿದ್ಯಾಲಯದ (Ashok University) ಅಸೋಸಿಯೇಟ್ ಪ್ರೊಫೆಸರ್ ಮತ್ತು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಅಲಿ ಖಾನ್ ಮಹ್ಮದಾಬಾದ್ (Ali Khan Mahmudabad) ಅವರಿಗೆ ಸುಪ್ರೀಂಕೋರ್ಟ್ (Supreme Court) ಮಧ್ಯಂತರ ಜಾಮೀನು ನೀಡಿದೆ. ಸೋನಿಪತ್‌ನ ಸಿಜೆಎಂ ತೃಪ್ತಿಗೆ ಅನುಸಾರ ಜಾಮೀನು ಬಾಂಡ್ ಒದಗಿಸುವಂತೆ ಸೂಚಿಸಿದೆ.

    ತನಿಖೆಯ ವಿಷಯವಾಗಿರುವ ಈ ಎರಡು ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಆನ್‌ಲೈನ್ ಲೇಖನವನ್ನು ಬರೆಯಬಾರದು ಅಥವಾ ಯಾವುದೇ ಆನ್‌ಲೈನ್ ಭಾಷಣವನ್ನು ಮಾಡಬಾರದು ಎಂದು ಅಲಿ ಖಾನ್ ಮಹ್ಮದಾಬಾದ್‌ಗೆ ನಿರ್ದೇಶಿಸಲಾಗಿದೆ.ಇದನ್ನೂ ಓದಿ: ಆಪರೇಷನ್‌ ಸಿಂಧೂರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ – ಅಶೋಕ ವಿಶ್ವವಿದ್ಯಾಲಯದ ಪ್ರೊಫೆಸರ್ ಅರೆಸ್ಟ್‌

    ಭಾರತದ ನೆಲದಲ್ಲಿ ನಡೆದ ಭಯೋತ್ಪಾದಕ ದಾಳಿಗಳ ಬಗ್ಗೆ ಅಥವಾ ನಮ್ಮ ರಾಷ್ಟ್ರ ನೀಡಿದ ಪ್ರತೀಕಾರದ ಪ್ರತಿಕ್ರಿಯೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಸುಪ್ರೀಂ ಕೋರ್ಟ್ ಅವರನ್ನು ನಿರ್ಬಂಧಿಸಿದೆ. ಜೊತೆಗೆ ತಮ್ಮ ಪಾಸ್‌ಪೋರ್ಟ್ ಸಲ್ಲಿಸಲು ತಿಳಿಸಿದೆ. ಇದರೊಂದಿಗೆ, ಮೂವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚನೆಗೂ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಸಮಿತಿಯು ರಾಜ್ಯದ ಹೊರಗಿನಿಂದ ಬಂದಿರುವ ಒಬ್ಬ ಮಹಿಳಾ ಅಧಿಕಾರಿಯನ್ನು ಸಹ ಒಳಗೊಂಡಿರುತ್ತದೆ. 24 ಗಂಟೆಗಳ ಒಳಗೆ ಎಸ್‌ಐಟಿ ರಚಿಸುವಂತೆ ನಿರ್ದೇಶಿಸಿದ್ದು, ಅಸೋಸಿಯೇಟ್ ಪ್ರೊಫೆಸರ್ ತನಿಖೆಗೆ ಸಂಪೂರ್ಣವಾಗಿ ಸಹಕರಿಸುವಂತೆ ಹೇಳಿದೆ.

    ಮಹ್ಮದಾಬಾದ್ ಅವರನ್ನು ಮೇ 27ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಕಸ್ಟಡಿ ಅವಧಿ ಪೂರ್ಣಗೊಂಡ ನಂತರ, ಪೊಲೀಸರು ಪ್ರೊ.ಅಲಿಯನ್ನು ಜೆಎಂಐಸಿ ಆಜಾದ್ ಸಿಂಗ್ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಪೊಲೀಸರು ಪ್ರಾಧ್ಯಾಪಕರನ್ನು ಇನ್ನೂ ಏಳು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರಿದರು. ಆದರೆ ನ್ಯಾಯಾಲಯ ಈ ಬೇಡಿಕೆಯನ್ನು ತಿರಸ್ಕರಿಸಿತು.

    ಪ್ರಕರಣ ಏನು?
    ಅಲಿ ಖಾನ್ ಮಹ್ಮದಾಬಾದ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಬಿಜೆಪಿಯ ಯುವ ಘಟಕದ ಸದಸ್ಯರೊಬ್ಬರು ದೂರು ದಾಖಲಿಸಿದ್ದರು. ಇದಾದ ಬಳಿಕ, ಹೇಳಿಕೆಗೆ ಸಂಬಂಧಿಸಿದಂತೆ ಹರಿಯಾಣದ ಮಹಿಳಾ ಆಯೋಗವು ಮಹ್ಮದಾಬಾದ್‌ಗೆ ಮೇ 15 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆದರೆ, ಮಹ್ಮದಾಬಾದ್ ಹಾಜರಾಗಿರಲಿಲ್ಲ. ಬಳಿಕ ಸೋನಿಪತ್ ಪೊಲೀಸರು ಮಹ್ಮದಾಬಾದ್ ಅವರನ್ನು ಬಂಧಿಸಿದ್ದರು.ಇದನ್ನೂ ಓದಿ: ಮುಂದಿನ ಮಳೆಗಾಲದೊಳಗೆ ಸಮಸ್ಯೆ ಬಗೆಹರಿಯದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ: ಬೈರತಿ ಬಸವರಾಜ್

  • ಅಲ್ಲು ಅರ್ಜುನ್‌ಗೆ ಮತ್ತೆ ಸಂಕಷ್ಟ – ಜಾಮೀನು ಪ್ರಶ್ನಿಸಿ ತೆಲಂಗಾಣ ಪೊಲೀಸರು ಸುಪ್ರೀಂ ಮೆಟ್ಟಿಲೇರುವ ಸಾಧ್ಯತೆ

    ಅಲ್ಲು ಅರ್ಜುನ್‌ಗೆ ಮತ್ತೆ ಸಂಕಷ್ಟ – ಜಾಮೀನು ಪ್ರಶ್ನಿಸಿ ತೆಲಂಗಾಣ ಪೊಲೀಸರು ಸುಪ್ರೀಂ ಮೆಟ್ಟಿಲೇರುವ ಸಾಧ್ಯತೆ

    ಹೈದರಾಬಾದ್: ಪುಷ್ಪ 2 ಪ್ರೀಮಿಯರ್ ಶೋ (Pushpa 2 Premiere Show) ಅಭಿಮಾನಿ ಸಾವಿನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಜಾಮೀನಿನ ಮೇಲೆ ನಟ ಅಲ್ಲು ಅರ್ಜುನ್ (Allu Arjun) ಹೊರಬಂದಿದ್ದಾರೆ ಆದರೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

    ಡಿ.13 ರಂದು ಹೈದರಾಬಾದ್‌ನಲ್ಲಿ (Hyderabad) ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದರು. ಬಳಿಕ ತೆಲಂಗಾಣ ಹೈಕೋರ್ಟ್ಗೆ ಹಾಜರುಪಡಿಸಿದಾಗ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ಕೋರ್ಟ್ ಆದೇಶದ ಬೆನ್ನಲ್ಲೇ ಅಲ್ಲು ಅರ್ಜುನ್ ಅವರನ್ನು ಚಂಚಲಗೂಡ ಜೈಲಿಗೆ ಶಿಫ್ಟ್ ಮಾಡುವ ಪ್ರಕ್ರಿಯೆ ಆರಂಭವಾಗಿತ್ತು. ತದನಂತರ ತುರ್ತು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ 50,000 ವೈಯಕ್ತಿಕ ಬಾಂಡ್ ಆಧಾರದ ಮೇಲೆ 4 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.ಇದನ್ನೂ ಓದಿ: ಹೊರಗುತ್ತಿಗೆ ಚಾಲಕನ ಲಂಚಾವತಾರದ ವಿಡಿಯೋ ವೈರಲ್ ಕೇಸ್‌ – ಪನ್ನಗ ಏಜೆನ್ಸಿ ವಿರುದ್ಧ KSRTC ನೋಟಿಸ್!

    ಈ ಪ್ರಕರಣಕ್ಕೆ ಸಂಬಂಧ ಇದೀಗ ತೆಲಂಗಾಣ ಪೊಲೀಸ್ ಅಧಿಕಾರಿಗಳು ಅಲ್ಲು ಅರ್ಜುನ್‌ಗೆ ನೀಡಿರುವ ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ಪ್ರಕರಣ ಏನು?
    ಡಿ.04 ರಂದು ಪುಷ್ಪ 2 ಸಿನಿಮಾದ ಪ್ರೀಮಿಯರ್ ಶೋ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದರು. ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರೊಂದಿಗೆ ಶೋಗೆ ಬಂದಿದ್ದ ಅಲ್ಲು ಅರ್ಜುನ್ ಅವರನ್ನು ನೋಡಲು ಬೃಹತ್ ಜನಸ್ತೋಮ ಜಮಾಯಿಸಿತ್ತು. ಈ ವೇಳೆ ನಡೆದ ಗಲಾಟೆಯಲ್ಲಿ ಥಿಯೇಟರ್‌ನ ಮುಖ್ಯ ಗೇಟ್ ಕುಸಿದು ನೂಕುನುಗ್ಗಲು ಉಂಟಾಯಿತು. ಇದರಿಂದ ಅವ್ಯವಸ್ಥೆ ಉಂಟಾಗಿ ಕಾಲ್ತುಳಿತಕ್ಕೊಳಗಾಗಿ 35 ವರ್ಷದ ಮಹಿಳೆ ಪ್ರಾಣ ಕಳೆದುಕೊಂಡಿದ್ದು, ಅವರ 9 ವರ್ಷದ ಮಗನಿಗೆ ತೀವ್ರ ಗಾಯಗಳಾಗಿದ್ದವು. ಈ ಘಟನೆ ಕುರಿತಂತೆ ನಟ ಅಲ್ಲು ಅರ್ಜುನ್ ಹಾಗೂ ಇನ್ನೂ ಇತರರ ವಿರುದ್ಧ ದೂರು ದಾಖಲಾಗಿತ್ತು.ಇದನ್ನೂ ಓದಿ: ಅಭಿವ್ಯಕ್ತಿ ಸ್ವಾತಂತ್ರ‍್ಯ ಮೊಟಕುಗೊಳಿಸಲು ಕಾಂಗ್ರೆಸ್‌ ಸಂವಿಧಾನ ತಿದ್ದುಪಡಿ – ಅಮಿತ್‌ ಶಾ ವಾಗ್ದಾಳಿ

  • ಒಂದು ವೇಳೆ ಜಾಮೀನು ನೀಡಿದ್ರೆ ಅಧಿಕೃತ ಕರ್ತವ್ಯ ನಿರ್ವಹಿಸುವಂತಿಲ್ಲ: ಸುಪ್ರೀಂ

    ಒಂದು ವೇಳೆ ಜಾಮೀನು ನೀಡಿದ್ರೆ ಅಧಿಕೃತ ಕರ್ತವ್ಯ ನಿರ್ವಹಿಸುವಂತಿಲ್ಲ: ಸುಪ್ರೀಂ

    • ಮೇ 20ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

    ನವದೆಹಲಿ: ಒಂದು ವೇಳೆ ಮಧ್ಯಂತರ ಜಾಮೀನು (Interim Bail) ನೀಡಿದರೆ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಮುಖ್ಯಮಂತ್ರಿಯಾಗಿ ಯಾವುದೇ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ (Supreme Court) ಹೇಳಿದೆ.

    ಈ ಮೂಲಕ ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ (Judicial Custody) ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.

    ನ್ಯಾ. ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ, ಲೋಕಸಭಾ ಚುನಾವಣೆ (Lok Sabha Election) ಹಿನ್ನಲೆ ನಾವು ನಿಮ್ಮ ಮಧ್ಯಂತರ ಜಾಮೀನು ಅರ್ಜಿಯನ್ನು ಪರಿಗಣಿಸುತ್ತಿದ್ದೇವೆ. ಚುನಾವಣೆ ಇಲ್ಲದಿದ್ದರೆ  ನಾವು ಪರಿಗಣಿಸುತ್ತಿರಲಿಲ್ಲ ಎಂದು ಹೇಳಿತು. ಇದನ್ನೂ ಓದಿ: ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ವಕ್ತಾರೆ ರಾಧಿಕಾ ಖೇರಾ

    ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಧ್ಯಂತರ ಜಾಮೀನು ಅರ್ಜಿ ನೀಡುವುದನ್ನು ತೀವ್ರವಾಗಿ ವಿರೋಧಿಸಿದರು. ದಯವಿಟ್ಟು ರಾಜಕೀಯ ನಾಯಕನನ್ನು ಪ್ರತ್ಯೇಕ ವರ್ಗ ಎಂದು ಗುರುತಿಸಬೇಡಿ ಮತ್ತು ಅವರನ್ನು ಸಾಮಾನ್ಯರಿಂದ ಬೇರ್ಪಡಿಸಬೇಡಿ. 1.5 ವರ್ಷಗಳಲ್ಲಿ ಇಡಿ ಏನನ್ನೂ ಮಾಡಿಲ್ಲ. ಚುನಾವಣೆಯ ಸಮಯದಲ್ಲಿ ಅವರನ್ನು ಬಂಧಿಸಿದೆ ಎನ್ನುವ ಅಭಿಪ್ರಾಯ ಇದೆ. ಇದು ಸರಿಯಾದ ಅಭಿಪ್ರಾಯವಲ್ಲ ಎಂದು ಅವರು ಹೇಳಿದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ನಿಷ್ಪ್ರಯೋಜಕ- SP ನಾಯಕ ವಿವಾದಾತ್ಮಕ ಹೇಳಿಕೆ

    ಚುನಾವಣೆಗಳನ್ನು ಉಲ್ಲೇಖಿಸಿ ಕೇಜ್ರಿವಾಲ್ ಜಾಮೀನು ನೀಡಿವುದು ಕೆಟ್ಟ ಸಂಪ್ರದಾಯ. ಒಂದು ವೇಳೆ ನೀಡಿದರೆ ಇತರರು ಇದೇ ರೀತಿಯ ವಿನಾಯಿತಿಗಳನ್ನು ಬಯಸುತ್ತಾರೆ. ಆದಾಗ್ಯೂ ರಾಜಕಾರಣಿಗಳಿಗೆ ಯಾವುದೇ ವಿಶೇಷ ವಿನಾಯಿತಿಯನ್ನು ರಚಿಸುತ್ತಿಲ್ಲ. ಆದರೆ ಸಾರ್ವತ್ರಿಕ ಚುನಾವಣೆಗಳು ಬಾಕಿಯಿದೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡು ಆದೇಶವನ್ನು ನೀಡುತ್ತಿದೆ ಎಂದು ನ್ಯಾಯಾಲಯ ಹೇಳಿತು‌.

    ಈ ನಡುವೆ ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಪ್ರಶ್ನಿಸಿದ ಪೀಠ, ಚುನಾವಣೆಗಳ ಹಿನ್ನೆಲೆಯಲ್ಲಿ ನಾವು ಮಧ್ಯಂತರ ಜಾಮೀನು ನೀಡುತ್ತೇವೆ ಎಂದಿಟ್ಟುಕೊಳ್ಳಿ. ನಂತರ ನೀವು ಕಚೇರಿಗೆ ಹಾಜರಾದರೆ ಘರ್ಷಣೆಗೆ ದಾರಿ ಮಾಡಿಕೊಡುತ್ತದೆ. ಸರ್ಕಾರದ ಕೆಲಸದಲ್ಲಿ ಹಸ್ತಕ್ಷೇಪ ಮಾಡಲು ನಾವು ಬಯಸುವುದಿಲ್ಲ. ಮಧ್ಯಂತಜಾಮೀನು ನೀಡಬೇಕೇ ಬೇಡವೇ ಎನ್ನುವುದು ಪರಿಶೀಲಿಸಲಿದ್ದೇವೆ. ಮೇ 9 ಅಥವಾ ಮುಂದಿನ ವಾರ ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ತಿಳಿಸಿ ವಿಚಾರಣೆಯನ್ನು ಮುಂದೂಡಿತು.

    ನ್ಯಾಯಾಂಗ ಬಂಧನ ವಿಸ್ತರಣೆ:  ದೆಹಲಿಯ ರೋಸ್‌ ಅವೆನ್ಯೂ ನ್ಯಾಯಾಲಯ ಅರವಿಂದ್‌ ಕೇಜ್ರಿವಾಲ್‌ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮೇ 20ರವರೆಗೆ ವಿಸ್ತರಿಸಿ ಆದೇಶಿಸಿದೆ.

  • ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ಗೆ ಮಧ್ಯಂತರ ಜಾಮೀನು ಮಂಜೂರು

    ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ಗೆ ಮಧ್ಯಂತರ ಜಾಮೀನು ಮಂಜೂರು

    ನವದೆಹಲಿ: 2002ರ ಗೋಧ್ರಾ ಹತ್ಯಾಕಾಂಡ ಪ್ರಕರಣಗಳಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಉನ್ನತ ಅಧಿಕಾರಿಗಳನ್ನು ಬಂಧಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಗುಜರಾತ್ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.

    ತಮ್ಮ ಜಾಮೀನು ಅರ್ಜಿಯನ್ನು ದೀರ್ಘಾವಧಿಗೆ ಮುಂದೂಡಿದ ಗುಜರಾತ್ ಹೈಕೋರ್ಟ್ ಆದೇಶದ ವಿರುದ್ಧ ಸೆಟಲ್ವಾಡ್ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಯು.ಯು ಲಲಿತ್ ನೇತೃತ್ವದ ತ್ರಿ ಸದಸ್ಯ ಪೀಠ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಕರಾವಳಿಯ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸುಲಭವಾಗಿ ತಲುಪಬೇಕು: ಮೋದಿ

    ತೀಸ್ತಾ ಕಸ್ಟಡಿ ವಿಚಾರಣೆ ಪೂರ್ಣಗೊಂಡಿರುವುದರಿಂದ ಗುಜರಾತ್ ಹೈಕೋರ್ಟ್ ಮಧ್ಯಂತರ ಜಾಮೀನು ಅರ್ಜಿಯನ್ನು ಪರಿಗಣಿಸಬೇಕಿತ್ತು. ಆದರೆ ಪ್ರಕರಣದ ವಿಚಾರಣೆ ಬಾಕಿ ಇರುವಾಗ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೇ ಅಥವಾ ಇಲ್ಲವೇ ಎಂಬುದನ್ನು ನಾವು ಪರಿಗಣಿಸುವುದಿಲ್ಲ. ಅದನ್ನು ಹೈಕೋರ್ಟ್ ನಿರ್ಧರಿಸಲಿ. ಅಂತಹ ಅರ್ಜಿಗಳು ಬಾಕಿ ಇರುವಾಗ ಮಾಧ್ಯಂತರ ಜಾಮೀನು ನೀಡಲು ಅವಕಾಶಗಳಿವೆ. ಹೀಗಾಗಿ ನಾವು ಮಧ್ಯಂತರ ಜಾಮೀನು ನೀಡುತ್ತಿದ್ದೇವೆ ಎಂದು ಕೋರ್ಟ್ ಹೇಳಿದೆ.

    ಜಾಮೀನು ನೀಡುವ ವೇಳೆ ಮುಂದೆಯೂ ತನಿಖೆಗೆ ಸಹಕರಿಸಬೇಕು. ಹೈಕೋರ್ಟ್‌ಗೆ ಪಾಸ್‌ಪೊರ್ಟ್ ಒಪ್ಪಿಸಬೇಕು. ಸಾಕ್ಷಿ ನಾಶಕ್ಕೆ ಪ್ರಯತ್ನ ಮಾಡಬಾರದು ಎಂದು ಷರತ್ತು ವಿಧಿಸಿದೆ. ಇದನ್ನೂ ಓದಿ: ಬೆಂಗಳೂರಿನಿಂದ ಹಾಂಕಾಂಗ್‍ಗೆ ನೇರ ಸಂಪರ್ಕ ಕಲ್ಪಿಸುವ ವಿಮಾನ ಹಾರಾಟ ಪ್ರಾರಂಭ

    Live Tv
    [brid partner=56869869 player=32851 video=960834 autoplay=true]