Tag: ಮಧ್ಯ

  • ಕಲಬುರಗಿ ನಗರದ ವಿವಿಧ ದೇವಸ್ಥಾನಗಳ ಸುತ್ತಮುತ್ತ 144 ಸೆಕ್ಷನ್ ಜಾರಿ

    ಕಲಬುರಗಿ ನಗರದ ವಿವಿಧ ದೇವಸ್ಥಾನಗಳ ಸುತ್ತಮುತ್ತ 144 ಸೆಕ್ಷನ್ ಜಾರಿ

    ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಶುದ್ಧೀಕರಣ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಸ್ಥಾನಗಳ ಸುತ್ತಮುತ್ತ 144 ನಿಷೇಧಾಜ್ಞೆ ಜಾರಿ ಮಾಡಿ ಎಂದು ನಗರ ಪೊಲೀಸ್ ಆಯುಕ್ತ ವೈ.ಎಸ್ ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

    ನಗರದ ಶ್ರೀ ರಾಮ ಮಂದಿರ, ಶ್ರೀ ಶರಣಬಸವೇಶ್ವರ ದೇವಸ್ಥಾನ ಮತ್ತು ಶ್ರೀ ವಿಶ್ವರಾಧ್ಯ ದೇವಸ್ಥಾನಗಳ ಸುತ್ತಲೂ ನಿಷೇಧಾಜ್ಞೆ ವಿಧಿಸಲಾಗಿದೆ. ನಗರದ ವಿವಿಧ ದೇವಸ್ಥಾನಗಳಿಂದ ಶಿವಲಿಂಗ ಶುದ್ಧೀಕರಣದ ಕಾರ್ಯಕ್ಕೆ ಅನೇಕ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ತೆರಳುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ಇದನ್ನೂ ಓದಿ: ಪ್ರಮೋದ್ ಮುತಾಲಿಕ್, ಚೈತ್ರಾ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿದ ಡಿಸಿ

    ಇನ್ನೂ ಇದಕ್ಕೂ ಮುನ್ನ ಆಳಂದ ಪಟ್ಟಣದ ದರ್ಗಾದಲ್ಲಿನ ಶಿವಲಿಂಗ ಶುದ್ದೀಕರಣ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಬೆಳಗ್ಗೆಯಿಂದ ರಾತ್ರಿವರೆಗೆ ಮಧ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾ ಪ್ರಭಾರಿ ಡಿಸಿ ಡಾ. ದಿಲಿಸ್ ಸಸಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಕಲಬುರಗಿಗೆ ಬರುವಾಗ ಚೈತ್ರಾ ವಶಕ್ಕೆ – ಯಾದಗಿರಿ ಗಡಿ ದಾಟಿಸಿ ಬಿಟ್ಟ ಪೊಲೀಸರು

  • ಬೆಳಗಾವಿಯ 10 ಪ್ರದೇಶಗಳಲ್ಲಿ ಸಿಗಲ್ಲ ಮದ್ಯ

    ಬೆಳಗಾವಿಯ 10 ಪ್ರದೇಶಗಳಲ್ಲಿ ಸಿಗಲ್ಲ ಮದ್ಯ

    ಬೆಳಗಾವಿ: ಜಿಲ್ಲೆಯ 10 ಪ್ರದೇಶಗಳನ್ನು ಕಂಪ್ಲೀಟ್ ಸೀಲ್‍ಡೌನ್ ಮಾಡಲಾಗಿದ್ದು, ಈ ಕಂಟೈನ್ಮೆಂಟ್ ಝೋನ್ ಗಳಲ್ಲಿ ಇಂದು ಕೂಡ ಮದ್ಯ ಸಿಗಲ್ಲ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಬೆಳಗಾವಿ ನಗರದ ಕ್ಯಾಂಪ್ ಪ್ರದೇಶ, ಅಮನ್ ನಗರ, ಆಜಾದ್ ಗಲ್ಲಿ, ಸಂಗಮೇಶ್ವರ ನಗರ, ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ, ಬೆಳಗುಂದಿ, ಪೀರನವಾಡಿ, ಯಳ್ಳೂರು, ಹುಕ್ಕೇರಿ ತಾಲೂಕಿನ ಸಂಕೇಶ್ವರ, ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಎಣ್ಣೆ ಸಿಗಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರದೇಶಗಳ ಎಣ್ಣೆ ಪ್ರಿಯರು ನಿರಾಶರಾಗಿದ್ದಾರೆ.

    ಬೆಳಗಾವಿ ಜಿಲ್ಲೆಯ ಈ 10 ಕಂಟೈನ್ಮೆಂಟ್ ಝೋನ್ ಬಿಟ್ಟು ಉಳಿದ ಕಡೆ ಎಣ್ಣೆ ಸಿಗುತ್ತಿದೆ. ಒಂದು ವೇಳೆ ಈ 10 ಕಂಟೈನ್‍ಮೆಂಟ್ ಝೋನ್ ನಲ್ಲಿ ಎಣ್ಣೆ ಮಾರಾಟ ಮಾಡಿದರೆ ಅಂಗಡಿಯ ಪರವಾನಗಿ ರದ್ದು ಮಾಡಲಾಗುತ್ತದೆ. ಆರೆಂಜ್ ಝೋನ್ ಬೆಳಗಾವಿಯಲ್ಲಿ ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದೆ. ಮಾತ್ರವಲ್ಲದೆ ಸೀಲ್‍ಡೌನ್ ಪ್ರದೇಶಗಳಲ್ಲಿ ಯಾವುದೇ ರೀತಿಯ ಆರ್ಥಿಕ ಚಟುವಟಿಕೆಗಳು ಇರಲ್ಲ.

    ಬೆಳಗಾವಿ ತಾಲೂಕು, ಹುಕ್ಕೇರಿ ತಾಲೂಕಿನ ಸಂಕೇಶ್ವರ, ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಮೂರು ತಾಲೂಕು ಹೊರತುಪಡಿಸಿ ಉಳಿದೆಡೆ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ವ್ಯಾಪಾರ ವಹಿವಾಟು ನಡೆಯಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯವಾಗಿದೆ.

    ಮಾಸ್ಕ್ ಧರಿಸದಿದ್ದರೆ, ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ದಂಡ ವಿಧಿಸಲಾಗುತ್ತಿದೆ. ಕಾಂಪ್ಲೆಕ್ಸ್ ಗಳಲ್ಲಿರುವ ಮಳಿಗೆಗಳು, ಮಾಲ್‍ಗಳನ್ನು ತೆರೆಯಲು ಅವಕಾಶವಿಲ್ಲ. ಕೈಗಾರಿಕೋದ್ಯಮಗಳಲ್ಲಿ ಶೇ.50ರಷ್ಟು ಕಾರ್ಮಿಕರಿಗೆ ಕೆಲಸಕ್ಕೆ ಅವಕಾಶ ನೀಡಲಾಗಿದೆ. ಕಾರ್ಮಿಕರಿಗೆ ಯಾವುದೇ ರೀತಿಯ ಪಾಸ್‍ಗಳಿಗೆ ಅಗತ್ಯವಿಲ್ಲ. ಕಾರ್ಖಾನೆಯವರು ಸೆಲ್ಫ್ ಡಿಕ್ಲೆರೇಷನ್ ಕೊಟ್ಟು ಕಾರ್ಖಾನೆ ತೆರೆಯಲು ಅವಕಾಶ ನೀಡಲಾಗಿದೆ.

    ಎಲ್ಲಾ ರೀತಿಯ ಸರ್ಕಾರಿ ಕಚೇರಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಸಾರ್ವಜನಿಕ ಕೆಲಸಕ್ಕೆ ಹಾಗೂ ಮದುವೆ ಸಮಾರಂಭದಲ್ಲಿ 50 ಜನರಿಗೆ ಮಾತ್ರ ಅವಕಾಶ ನಿಡಲಾಗಿದೆ.