Tag: ಮಧುಸೂದನ್ ಮಿಸ್ತ್ರಿ

  • ಯೂಟರ್ನ್ ಹೊಡೆದ ಸಿದ್ದರಾಮಯ್ಯ

    ಯೂಟರ್ನ್ ಹೊಡೆದ ಸಿದ್ದರಾಮಯ್ಯ

    ಬೆಂಗಳೂರು: ವಿಪಕ್ಷ ನಾಯಕನ ಸ್ಥಾನ ಹಾಗೂ ಸಿಎಲ್‍ಪಿ ನಾಯಕನ ಸ್ಥಾನಕ್ಕೆ ಕೊಟ್ಟ ರಾಜೀನಾಮೆ ವಾಪಸ್ ಪಡೆಯಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಇದುವರೆಗೆ ರಾಜೀನಾಮೆ ವಾಪಸ್ ಪಡೆಯಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯ ಅವರು ಈಗ ಯೂಟರ್ನ್ ಹೊಡೆದಿದ್ದಾರೆ.

    ದೆಹಲಿಗೆ ತಲುಪಿದ ನಂತರ ಕೊನೆಯ ಅಭಿಪ್ರಾಯ ಕೇಳಲು ಸಿದ್ದರಾಮಯ್ಯ ಅವರಿಗೆ ಮಧುಸೂದನ್ ಮಿಸ್ತ್ರಿ ಕರೆ ಮಾಡಿದ್ದಾರೆ. 10 ದಿನದಲ್ಲಿ ಅಂತಿಮ ತೀರ್ಮಾನ ಹೇಳುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.

    ಈ ವೇಳೆ 10 ದಿನ ಅಲ್ಲ 1 ಗಂಟೆಯಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಮಧುಸೂದನ್ ಮಿಸ್ತ್ರಿ ಹೇಳಿದಾಗ, ನಾನು ದೆಹಲಿಗೆ ಬಂದು ಹೈಕಮಾಂಡ್ ಭೇಟಿ ಮಾಡುತ್ತೇನೆ. ಹೈಕಮಾಂಡ್ ಸೂಚನೆ ಕೊಟ್ಟರೆ ವಿಪಕ್ಷ ಹಾಗೂ ಸಿಎಲ್‍ಪಿಯಲ್ಲಿ ಮುಂದುವರಿಯುತ್ತೇನೆ ಎಂದು ಸಿದ್ದರಾಮಯ್ಯ ಉತ್ತರಿಸಿದ್ದಾರೆ.

    ಈ ಮೂಲಕ ವಿಪಕ್ಷ ಹಾಗೂ ಸಿಎಲ್‌ಪಿ ನಾಯಕನ ಸ್ಥಾನದಲ್ಲಿ ಮುಂದುವರಿಯುವ ಇಚ್ಚೆಯನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ರಾಜೀನಾಮೆ ನೀಡಿದ್ದ ಸಿದ್ದರಾಮಯ್ಯ ಕಡೆ ಗಳಿಗೆಯಲ್ಲಿ ಯೂಟರ್ನ್ ಹೊಡೆದಿದ್ದಾರೆ.

  • ಪಟ್ಟಕ್ಕೆ ತಂದವರು ಅವರೇ – ಪಟ್ಟದಿಂದ ಇಳಿಸೋದು ಅವರೇ

    ಪಟ್ಟಕ್ಕೆ ತಂದವರು ಅವರೇ – ಪಟ್ಟದಿಂದ ಇಳಿಸೋದು ಅವರೇ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯರ ತಲೆದಂಡ ಸನ್ನಿಹಿತವಾಗಿದ್ದರೂ ಅದರ ನೇತೃತ್ವ ವಹಿಸಿದ ಮಿಸ್ತ್ರಿ ಮಾತ್ರ ಸಿದ್ದರಾಮಯಯ್ಯ ಪಾಲಿಗೆ ಆಪತ್ಭಾಂದವ ಜೊತೆಗೆ ಕಂಟಕವಾಗಿದ್ದಾರೆ.

    ಸಮ್ಮಿಶ್ರ ಸರ್ಕಾರದ ಪತನದ ನಂತರ ಸಿದ್ದರಾಮಯ್ಯರನ್ನು ವಿಪಕ್ಷ ನಾಯಕನ ಸ್ಥಾನಕ್ಕೆ ತರಲು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ ಸೋನಿಯ ಗಾಂಧಿಯವರ ನಂಬಿಕೆಯ ಬಂಟ ಮಧುಸೂದನ್ ಮಿಸ್ತ್ರಿ ರಾಜ್ಯಕ್ಕೆ ಬಂದು ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ಯಥಾವತ್ ವರದಿ ಹೈಕಮಾಂಡಿಗೆ ನೀಡಿದ್ದರು. ಅದರಂತೆ ಎಐಸಿಸಿ ನಾಯಕಿ ಸೋನಿಯಗಾಂಧಿ ಸಿದ್ದರಾಮಯ್ಯರನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಸಿದ್ದರಾಮಯ್ಯರಿಗೆ ವಿಪಕ್ಷ ಹಾಗೂ ಸಿಎಲ್‍ಪಿ ಎರಡು ನಾಯಕತ್ವ ಸಿಗಲು ಮಧುಸೂದನ್ ಮಿಸ್ತ್ರಿಯೇ ಕಾರಣ.

    ಇಂದು ಪರ್ಯಾಯ ನಾಯಕತ್ವದ ಆಯ್ಕೆಗೂ ಅದೇ ಮಧುಸೂದನ್ ಮಿಸ್ತ್ರಿ ರಾಜ್ಯಕ್ಕೆ ಬರುತ್ತಿದ್ದಾರೆ. ಅವರು ಕೊಡುವ ವರದಿಯ ಮೇಲೆಯೇ ಸಿದ್ದರಾಮಯ್ಯ ತಲೆದಂಡ ನಿರ್ಧಾರವಾಗಲಿದೆ.

    ಸಿದ್ದರಾಮಯ್ಯರನ್ನ ಪಟ್ಟಕ್ಕೆ ತಂದ ಕೀರ್ತಿಯು ಮಧುಸೂದನ್ ಮಿಸ್ತ್ರಿಯಾದರೆ ಅವರನ್ನ ಪಟ್ಟದಿಂದ ಇಳಿಸಿ ಬೇರೆಯವರಿಗೆ ನಾಯಕತ್ವ ವಹಿಸಿಕೊಟ್ಟ ಕೀರ್ತಿಯು ಮಧುಸೂದನ್ ಮಿಸ್ತ್ರಿಗೆ ಸಲ್ಲಲಿದೆ.

  • ಮೂಲ, ವಲಸಿಗ ಫೈಟ್ ಇಲ್ಲಿಗೆ ನಿಲ್ಲಿಸಿ – ಸಿದ್ದು, ಖರ್ಗೆಗೆ ಹೈಕಮಾಂಡ್ ವಾರ್ನಿಂಗ್

    ಮೂಲ, ವಲಸಿಗ ಫೈಟ್ ಇಲ್ಲಿಗೆ ನಿಲ್ಲಿಸಿ – ಸಿದ್ದು, ಖರ್ಗೆಗೆ ಹೈಕಮಾಂಡ್ ವಾರ್ನಿಂಗ್

    ಬೆಂಗಳೂರು: ಕಾಂಗ್ರೆಸ್ ಪಾಳಯದಲ್ಲಿ ಮೂಲ ಹಾಗೂ ವಲಸಿಗರ ಮಧ್ಯೆ ವಾರ್ ನಡೆಯುತ್ತಿದ್ದು, ಈ ಮುಸುಕಿನ ಗುದ್ದಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದೆ.

    ಹೌದು. ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಖಡಕ್ ವಾರ್ನಿಂಗ್ ರವಾನಿಸಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ನೆಚ್ಚಿನ ಬಂಟ ಮಧುಸೂದನ್ ಮಿಸ್ತ್ರಿ ಅವರನ್ನ ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ವಿಪಕ್ಷ ನಾಯಕನ ಆಯ್ಕೆ ಸಂಬಂಧ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸುವುದು ಮಿಸ್ತ್ರಿ ಭೇಟಿಯ ಉದ್ದೇಶವಾಗಿದೆ. ಆದರೆ ಇಲ್ಲಿ ಹೈಕಮಾಂಡ್ ರವಾನಿಸಿರುವ ಸಂದೇಶವೇ ಬೇರೆಯಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ರಾಜ್ಯ ಕಾಂಗ್ರೆಸ್ಸಿನ ಎರಡು ಬಣಗಳಾದ ಮೂಲ ಹಾಗೂ ವಲಸಿಗರಿಗೆ ಫುಲ್ ಸ್ಟಾಪ್ ಅನ್ನೋ ಖಡಕ್ ವಾರ್ನಿಂಗ್ ಒಂದನ್ನ ಕಾಂಗ್ರೆಸ್ ಹೈಕಮಾಂಡ್ ರವಾನಿಸಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಇಬ್ಬರಿಗೂ ಈ ಮೆಸೇಜ್ ತಲುಪಿಸುವ ಜವಬ್ದಾರಿ ಮಿಸ್ತ್ರಿ ಮೇಲಿದೆ.

    ಮೂಲ, ವಲಸಿಗ ಫೈಟ್ ಇಂದಿಗೆ ನಿಲ್ಲಿಸಿ. ನೀವಾಗಲಿ ಅಥವಾ ನಿಮ್ಮ ಬೆಂಬಲಿಗರಾಗಲಿ ಎಲ್ಲೂ ಮಾತನಾಡಕೂಡದು. ಯಾರ ಬೆಂಬಲಿಗರು ಮಾತನಾಡಿದರೂ ಅದಕ್ಕೆ ನೀವುಗಳೇ ಜವಬ್ದಾರಾಗಿರುತ್ತೀರಿ ಎಂಬ ಸಂದೇಶವನ್ನು ಸೋನಿಯಗಾಂಧಿ ರವಾನಿಸಿದ್ದಾರೆ.

    ಪಕ್ಷ ಸಂಕಷ್ಟದಲ್ಲಿದೆ ಈ ಸಂದರ್ಭದಲ್ಲಿ ಮೂಲ ವಲಸಿಗ ಅನ್ನೋ ಮುಸುಕಿನ ಗುದ್ದಾಟ ನಡೆಸಿ ಮತ್ತಷ್ಟು ಸಂಕಷ್ಟ ತಂದಿಡಬೇಡಿ. ತಮ್ಮ ತಮ್ಮ ಬೆಂಬಲಿಗರನ್ನ ತಾವು ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಿ. ಇದು ಲಾಸ್ಟ್ ವಾರ್ನಿಂಗ್ ಎಲ್ಲಕ್ಕೂ ಫುಲ್ ಸ್ಟಾಪ್ ಬೀಳಲಿ ಎಂಬ ಸಂದೇಶ ಹೊತ್ತು ಮಧುಸೂದನ್ ಮಿಸ್ತ್ರಿ ಬಂದಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್ಸಿನ ಮೂಲ ವಲಸಿಗ ಫೈಟ್‍ಗೆ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಸೋನಿಯ ಗಾಂಧಿಯವರ ಮಿಸ್ತ್ರಿ ಅಸ್ತ್ರ ಮುಸುಕಿನ ಗುದ್ದಾಟಕ್ಕೆ ಫುಲ್ ಸ್ಟಾಪ್ ಹಾಕುತ್ತಾ ಅಥವಾ ತಾತ್ಕಾಲಿಕ ಸ್ಪೀಡ್ ಬ್ರೇಕರ್ ಅಗುತ್ತಾ ಎಂಬುದೇ ಸದ್ಯದ ಕುತೂಹಲವಾಗಿದೆ.