Tag: ಮಧುಬಾಲಾ

  • ವಿಷ್ಣು ಮಂಚು ನಟನೆಯ ‘ಕಣ್ಣಪ್ಪ ಚಿತ್ರದಲ್ಲಿ ಮಧುಬಾಲ- ಫಸ್ಟ್ ಲುಕ್ ರಿಲೀಸ್‌

    ವಿಷ್ಣು ಮಂಚು ನಟನೆಯ ‘ಕಣ್ಣಪ್ಪ ಚಿತ್ರದಲ್ಲಿ ಮಧುಬಾಲ- ಫಸ್ಟ್ ಲುಕ್ ರಿಲೀಸ್‌

    ಪಾತ್ರವರ್ಗದ ವಿಚಾರವಾಗಿಯೇ ಸಾಕಷ್ಟು ಸದ್ದು ಮಾಡುತ್ತಿದೆ ಟಾಲಿವುಡ್‌ನ ‘ಕಣ್ಣಪ್ಪ’ (Kanappa) ಸಿನಿಮಾ. ಈಗಾಗಲೇ ಸರಣಿ ಸ್ಟಾರ್ ಕಲಾವಿದರನ್ನೇ ಒಳಗೊಂಡಿರುವ ಕಣ್ಣಪ್ಪ ಸಿನಿಮಾ ಸದ್ಯ ಶೂಟಿಂಗ್ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೂ ಮುಂದುವರಿಸಿದೆ. ಜೊತೆಗೆ ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಸಹ ನೋಡುಗರ ಹುಬ್ಬೇರಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ವಿಷ್ಣು ಮಂಚು (Vishnu Manchu) ಕಣ್ಣಪ್ಪನಾಗಿ ತಮ್ಮ ಖದರ್ ತೋರಿಸಲಿದ್ದಾರೆ. ಇದೀಗ ಇದೇ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಮಧುಬಾಲ ಅವರ ಲುಕ್ ಅನಾವರಣ ಮಾಡಲಾಗಿದೆ.

    ನಟಿ ಮಧುಬಾಲಾ (Madhubala) ಕಣ್ಣಪ್ಪ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬುದು ಈ ಹಿಂದೆಯೇ ಗೊತ್ತಿದ್ದ ವಿಚಾರ. ಆದರೆ, ಅವರ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಈ ವರೆಗೂ ಚಿತ್ರತಂಡ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಮಧುಬಾಲ ಅವರ ಪಾತ್ರ ಪರಿಚಯದ ಫಸ್ಟ್ ಲುಕ್ ರಿಲೀಸ್ ಆಗಿದೆ. ಕಣ್ಣಪ್ಪ ಚಿತ್ರದಲ್ಲಿ ಪನ್ನಗ ಹೆಸರಿನ ಖಡಕ್ ಪಾತ್ರದಲ್ಲಿ ಮಧುಬಾಲ ಮಿಂಚು ಹರಿಸಲಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು ಶತ್ರುಗಳ ಸಂಹಾರಕ್ಕೆ ನಿಂತಂತಿದೆ ಮಧುಬಾಲಾ ಅವರ ಫಸ್ಟ್ ಲುಕ್.

    ಬೇಡ ಕುಲದ ನಾಯಕಿಯಾಗಿ ಮಧುಬಾಲಾ ಅವರ ಪಾತ್ರ ಕಣ್ಣಪ್ಪ ಚಿತ್ರದಲ್ಲಿ ಸಾಗಲಿದೆ. ತಮ್ಮ ಸಮುದಾಯದ ನಾಯಕಿ ಮಾತ್ರವಲ್ಲ, ಹೋರಾಟದಲ್ಲಿಯೂ ದಿಟ್ಟೆ, ಧೀರೆ. ಅಂದುಕೊಂಡಂತೆ ಮಧುಬಾಲ ಅವರ ಪಾತ್ರ ಮೂಡಿಬಂದಿದ್ದು, ನೋಡುಗರಿಗೆ ಇಷ್ಟವಾಗಲಿದೆ ಎಂಬುದು ಚಿತ್ರತಂಡ ಭರವಸೆಯ ಮಾತುಗಳು. ಇನ್ನು ಈಗಾಗಲೇ ಕಣ್ಣಪ್ಪ ಚಿತ್ರದ ಟೀಸರ್ ಜಾಗತಿಕ ಮಟ್ಟದಲ್ಲಿಯೂ ಕ್ರೇಜ್ ಸೃಷ್ಟಿಸಿದೆ. ಇತ್ತೀಚಿನ ಕಾನ್ ಸಿನಿಮೋತ್ಸವದಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಯಾಗಿ, ಜಾಗತಿಕ ಪ್ರೇಕ್ಷಕರ ಗಮನ ಸೆಳೆದಿತ್ತು. ಇದನ್ನೂ ಓದಿ:ಶ್ರೀವಲ್ಲಿ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಕಿರುತೆರೆಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ

    ಕಣ್ಣಪ್ಪ ಸಿನಿಮಾ ಬರೀ ಇತಿಹಾಸವಲ್ಲ, ಇದು ಎರಡನೇ ಶತಮಾನದ ಚೋಳರ ಕಾಲದ ಕಥೆ ಎಂದು ಶಂಕರಾಚಾರ್ಯರು ಹೇಳಿದ್ದರು. 14 ನೇ ಶತಮಾನದಲ್ಲಿ ಕವಿ ಧೂರ್ಜಟಿ ಈ ಬಗ್ಗೆ ಬರೆದಿದ್ದಾರೆ. 18ನೇ ಶತಮಾನದಲ್ಲಿ ಬ್ರಿಟಿಷರೂ ಇಂಗ್ಲಿಷ್‌ನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಇದೆಲ್ಲವನ್ನು ಅಧ್ಯಯನ ನಡೆಸಿ ಈ ಸಿನಿಮಾ ಮಾಡಲಾಗಿದೆ ಎಂದು ಟೀಸರ್ ಬಿಡುಗಡೆ ಸಂದರ್ಭದಲ್ಲಿ ವಿಷ್ಣು ಮಂಚು ಹೇಳಿಕೊಂಡಿದ್ದರು. ಹಾಗಾಗಿಯೇ ಕುತೂಹಲ ದುಪ್ಪಟ್ಟಾಗಿದೆ.

    ಚಿತ್ರದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಶರತ್‌ಕುಮಾರ್, ಮಧುಬಾಲ, ಕಾಜಲ್ ಅಗರ್‌ವಾಲ್ ಸೇರಿ ಬಹು ತಾರಾಗಣವೇ ಇದೆ. ಮಗನ ಚಿತ್ರವನ್ನು ಸ್ವತಃ ತಂದೆ ಮೋಹನ್ ಬಾಬು ನಿರ್ಮಿಸುತ್ತಿರುವ ಈ ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾರತೀಯ ಭಾಷೆಗಳಿಗೂ ಈ ಚಿತ್ರ ಡಬ್ ಆಗಿ ರಿಲೀಸ್ ಆಗಲಿದೆ. ಡಿಸೆಂಬರ್‌ನಲ್ಲಿ ‘ಕಣ್ಣಪ್ಪ’ ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ.

    ಎವಿಎ ಎಂಟರ್‌ಟೈನ್‌ಮೆಂಟ್ಸ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಬ್ಯಾನರ್‌ಗಳಲ್ಲಿ ನೂರಾರು ಕೋಟಿ ಬಜೆಟ್‌ನಲ್ಲಿ ದೊಡ್ಡ ಕ್ಯಾನ್ವಾಸ್‌ನೊಂದಿಗೆ ಮೂಡಿಬರುತ್ತಿರುವ ಈ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದು, ವಿಎಫ್‌ಎಕ್ಸ್ ಕೆಲಸಕ್ಕೆ ಇಡೀ ತಂಡ ಹೆಚ್ಚಿನ ಶ್ರಮ ಹಾಕುತ್ತಿದೆ.

  • ಖ್ಯಾತ ನಟಿ ಮಧುಬಾಲಾ ಬಯೋಪಿಕ್: ಡೈರೆಕ್ಟರ್ ಫಿಕ್ಸ್

    ಖ್ಯಾತ ನಟಿ ಮಧುಬಾಲಾ ಬಯೋಪಿಕ್: ಡೈರೆಕ್ಟರ್ ಫಿಕ್ಸ್

    ಬಾಲಿವುಡ್ (Bollywood) ಚಿತ್ರರಂಗದಲ್ಲಿ ಇಪ್ಪತ್ತು ವರ್ಷಗಳ ಕಾಲ ರಾರಾಜಿಸಿದ ನಟಿ ಮಧುಬಾಲಾ (Madhubala) ನಿಜ ಜೀವನದ ಕಥೆಯನ್ನ ತೆರೆಯ ಮೇಲೆ ತರಲು ಮಧುಬಾಲಾ ಅವರ ಸಹೋದರಿ ಮಧುರ್  (Madhur)ಸಜ್ಜಾಗಿದ್ದಾರೆ. ಮಧುರ್‌ಗೆ `ಶಕ್ತಿಮಾನ್’ ಧಾರಾವಾಹಿ ನಿರ್ಮಾಪಕರು ಸಾಥ್ ನೀಡಿದ್ದಾರೆ. ನಿರ್ಮಾಪಕರು ಮುಂದೆ ಬಂದಿದ್ದಾರೆ. ಆದರೆ, ನಿರ್ದೇಶಕ ಹಾಗೂ ಮಧುಬಾಲಾ ಪಾತ್ರಧಾರಿ ಯಾರು ಎನ್ನುವುದು ಹೇಳಿರಲಿಲ್ಲ. ಇದೀಗ ಡೈರೆಕ್ಟರ್ ಫಿಕ್ಸ್ ಆಗಿದ್ದಾರೆ.

    ಮಧುಬಾಲಾ ಅವರನ್ನು ತೆರೆಯ ಮೇಲೆ ತೋರಿಸುವಂತಹ ಶಕ್ತಿ ಜಸ್ಮೀತ್ ಕೆ ರೀನ್ (Jasmeet K Reen) ಅವರಿಗೆ ಇದೆಯಂತೆ. ಹಾಗಾಗಿ ಇವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಮಧುಬಾಲಾ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವುದನ್ನು ಸದ್ಯಕ್ಕೆ ಸಸ್ಪೆನ್ಸ್ ಇಡಲಾಗಿದೆ.

    ಹಿಂದಿ ಚಿತ್ರರಂಗದಲ್ಲಿ 20 ವರ್ಷಗಳ ಕಾಲ ಆಳಿದ ನಟಿ ಮಧುಬಾಲಾ ನೈಜ ಜೀವನದ ಕಥೆಯನ್ನ ಬೆಳ್ಳಿಪರದೆಯಲ್ಲಿ ಪ್ರಸ್ತುತ ಪಡಿಸಲು ತೆರೆಮರೆಯಲ್ಲಿ ಭರ್ಜರಿ ಕೆಲಸ ನಡೆಯುತ್ತಿದೆ. ಸ್ವತಃ ಮಧುಭಾಲಾ ಅವರ ಸಹೋದರಿ ಮಧುರ್ ಈ ಚಿತ್ರವನ್ನು ನಿರ್ಮಾಣ ಮಾಡೋಕೆ ರೆಡಿಯಾಗಿದ್ದಾರೆ.

     

    ಮುಸ್ಲಿಂ ಧರ್ಮದ ಸಾಮಾನ್ಯ ಹುಡುಗಿಯೊಬ್ಬಳು ಮಧುಬಾಲಾ ಆಗಿ ಮಿಂಚಿದ ಕಥೆ, ಚಿತ್ರರಂಗದಲ್ಲಿ 70ಕ್ಕೂ ಹೆಚ್ಚು ಚಿತ್ರದಲ್ಲಿ ನಾನಾ ಬಗೆಯ ಪಾತ್ರದ ಮೂಲಕ ಮಧುಬಾಲಾ ರಂಜಿಸಿದ್ದಾರೆ. ತೆರೆಯ ಮೇಲಿನ ಕಥೆಯ ಜತೆ ತೆರೆಯ ಹಿಂದಿನ ಅಸಲಿತ್ತು ಎನಿತ್ತು ಎಂಬುದನ್ನ ಈ ಬಯೋಪಿಕ್ ಮೂಲಕ ತೋರಿಸಲಿದ್ದಾರೆ. ಮಧುಬಾಲಾ ಪಾತ್ರಕ್ಕಾಗಿ ಬಾಲಿವುಡ್ ಸೂಕ್ತ ನಾಯಕಿಯನ್ನೇ ಚಿತ್ರತಂಡ ಆಯ್ಕೆ ಮಾಡಲಿದೆ. ಇನ್ನು ಮಧುಬಾಲಾ ಪಾತ್ರದಲ್ಲಿ ಯಾವ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

  • ಮಿಸಸ್ ಕರ್ನಾಟಕ ಕಿರೀಟ ಮುಡಿಗೇರಿಸಿಕೊಂಡ ಕವಿತಾ

    ಮಿಸಸ್ ಕರ್ನಾಟಕ ಕಿರೀಟ ಮುಡಿಗೇರಿಸಿಕೊಂಡ ಕವಿತಾ

    ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕರ್ನಾಟಕದ ಅತಿದೊಡ್ಡ ಬ್ಯೂಟಿ ಪೇಜೆಂಟ್ ರಿಷಿಸ್ ಮಿಸಸ್ ಕರ್ನಾಟಕ (Miss Karnataka) ಕಿರೀಟವನ್ನು ಕವಿತಾ ವೀರೇಂದ್ರ  (Kavita Virendra)ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಖ್ಯಾತ ಬಾಲಿವುಡ್ ನಟಿ ಮಧುಬಾಲ ವಿಶೇಷ ಅತಿಥಿಯಾಗಿ ಆಗಮಿಸಿ ರೂಪದರ್ಶಿಗಳಿಗೆ ಪ್ರೋತ್ಸಾಹ ಕೊಟ್ಟರು.

    ಈ ವೇಳೆ ಮಾತನಾಡಿದ ಮಧುಬಾಲ, ಈ ಕಾರ್ಯಕ್ರಮದಲ್ಲಿ ಭಾಗವಾಗಿರುವುದು ಖುಷಿ ಕೊಟ್ಟಿದೆ. ಇಂದು ಮಹಿಳೆಯರು ರಾಜಕೀಯ, ಸಾಹಿತ್ಯ, ಶಿಕ್ಷಣ ಮತ್ತು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ತಾಯಿಯಾಗಿ ಮಕ್ಕಳ ಲಾಲನೆ, ಪಾಲನೆ ಜೊತೆಯಲ್ಲಿ ತನ್ನ ಸೌಂದರ್ಯ ಮತ್ತು ಆರೋಗ್ಯದ ಮೇಲೆ ಗಮನಹರಿಸಬೇಕಿದೆ ಎಂದರು.

    ಸರ್ಕಾರದ ರಾಜಕೀಯ ದಿಗ್ಗಜರು, ಸಾಮಾಜಿಕ ಕಾರ್ಯಕರ್ತರು, ಉದ್ಯಮಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕವಿತಾ ವೀರೇಂದ್ರ ವಿನ್ನರ್ ಆಗಿ ಹೊರಹೊಮ್ಮಿದ್ರೆ, ಪ್ರಿಯಾಂಕ ರಿಯಾ ಫಸ್ಟ್ ವಿನ್ನರ್ ಆಗಿ ಹಾಗೂ ಶಹಿಸ್ತಾ ನಾಜ್ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು. ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್ ನಿಂದ ಆಯೋಜಿಸಲಾಗಿದ್ದ ಈ ಬ್ಯೂಟಿ ಪೇಜೆಂಟ್ ನಲ್ಲಿ ಪಲ್ಲವಿ ಗೌಡ, ಚೈತ್ರಾ ಗೌಡ, ಆರ್ ಜೆ ರಾಜೇಶ್, ಮನೋಜ್ ಕುಮಾರ್ ಹಾಗೂ ಪ್ರಿಯಾ ಗೌತಮ್ ಡೈರೆಕ್ಟರ್ಸ್ ಆಗಿದ್ದಾರೆ.

     

    ಇದೇ ವೇಳೆ ಮಾತನಾಡಿದ ಆರ್.ಜೆ.ರಾಜೇಶ್, 2022ರ ಮಿಸಸ್ ಕರ್ನಾಟಕ ರನ್ನರ್ ಅಪ್ ಚೈತ್ರಾ ಗೌಡ ಅವರ ಕನಸಿಗೆ ಪಲ್ಲವಿ ಗೌಡ ಅವರು ಬಣ್ಣ ಹಚ್ಚಿದರು. ಈ ಸಣ್ಣ ಪ್ರಯತ್ನಕ್ಕೆ ನಟ ಮನೋಜ್ ಕುಮಾರ್, ವಾಣಿಜ್ಯ ಉದ್ಯಮಿ ಪ್ರಿಯಾ ಮತ್ತು ಆರ್.ಜೆ.ರಾಜೇಶ್ ಕೈ ಜೋಡಿಸಿದ್ದಾರೆ. ಎಲ್ಲರೂ ಕನಸು ಕಾಣಬಹುದು. ಆ ಕನಸು ನನಸು ಮಾಡಿಕೊಳ್ಳಲು ಪ್ರಯತ್ನಪಡಬೇಕು. ಇಷ್ಟು ದೊಡ್ಡ ಇವೆಂಟ್ ಮಾಡಲು ಸಾಧ್ಯವಾಗಿದ್ದು, ಪ್ರಯೋಜಕರಿಂದ ಅವರೆಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು. ಈ ಬ್ಯೂಟಿ ಪೇಜೆಂಟ್ ನಲ್ಲಿ ರೂಪದರ್ಶಿಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ನೋಡುಗರ ಗಮನಸೆಳೆದರು. ಅಂದಹಾಗೇ ಗ್ರಾಮೀಣ ಭಾಗದ ಬಡ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ.

  • ತೆರೆಗೆ ಬರಲಿದೆ ಬಾಲಿವುಡ್ ನಟಿ ಮಧುಬಾಲಾ ಬಯೋಪಿಕ್

    ತೆರೆಗೆ ಬರಲಿದೆ ಬಾಲಿವುಡ್ ನಟಿ ಮಧುಬಾಲಾ ಬಯೋಪಿಕ್

    ಬಾಲಿವುಡ್ ಚಿತ್ರರಂಗದಲ್ಲಿ ಇಪ್ಪತ್ತು ವರ್ಷಗಳ ಕಾಲ ರಾರಾಜಿಸಿದ ನಟಿ ಮಧುಬಾಲಾ ನಿಜ ಜೀವನದ ಕಥೆಯನ್ನ ತೆರೆಯ ಮೇಲೆ ತರಲು ಮಧುಬಾಲಾ ಅವರ ಸಹೋದರಿ ಮಧುರ್ ಸಜ್ಜಾಗಿದ್ದಾರೆ. ಮಧುರ್‌ಗೆ `ಶಕ್ತಿಮಾನ್’ ಧಾರಾವಾಹಿ ನಿರ್ಮಾಪಕರು ಸಾಥ್ ನೀಡಿದ್ದಾರೆ.

    ಹಿಂದಿ ಚಿತ್ರರಂಗದಲ್ಲಿ 20 ವರ್ಷಗಳ ಕಾಲ ಆಳಿದ ನಟಿ ಮಧುಬಾಲಾ ನೈಜ ಜೀವನದ ಕಥೆಯನ್ನ ಬೆಳ್ಳಿಪರದೆಯಲ್ಲಿ ಪ್ರಸ್ತುತ ಪಡಿಸಲು ತೆರೆಮರೆಯಲ್ಲಿ ಭರ್ಜರಿ ಕೆಲಸ ನಡೆಯುತ್ತಿದೆ. ಸ್ವತಃ ಮಧುಭಾಲಾ ಅವರ ಸಹೋದರಿ ಮಧುರ್ ಈ ಚಿತ್ರವನ್ನು ನಿರ್ಮಾಣ ಮಾಡೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರದ ಮತ್ತೊಂದು ಹಾಡು ರಿಲೀಸ್

    ಮುಸ್ಲಿಂ ಧರ್ಮದ ಸಾಮಾನ್ಯ ಹುಡುಗಿಯೊಬ್ಬಳು ಮಧುಬಾಲಾ ಆಗಿ ಮಿಂಚಿದ ಕಥೆ, ಚಿತ್ರರಂಗದಲ್ಲಿ 70ಕ್ಕೂ ಹೆಚ್ಚು ಚಿತ್ರದಲ್ಲಿ ನಾನಾ ಬಗೆಯ ಪಾತ್ರದ ಮೂಲಕ ಮಧುಬಾಲಾ ರಂಜಿಸಿದ್ದಾರೆ. ತೆರೆಯ ಮೇಲಿನ ಕಥೆಯ ಜತೆ ತೆರೆಯ ಹಿಂದಿನ ಅಸಲಿತ್ತು ಎನಿತ್ತು ಎಂಬುದನ್ನ ಈ ಬಯೋಪಿಕ್ ಮೂಲಕ ತೋರಿಸಲಿದ್ದಾರೆ. ಮಧುಬಾಲಾ ಪಾತ್ರಕ್ಕಾಗಿ ಬಾಲಿವುಡ್ ಸೂಕ್ತ ನಾಯಕಿಯನ್ನೇ ಚಿತ್ರತಂಡ ಆಯ್ಕೆ ಮಾಡಲಿದೆ. ಇನ್ನು ಮಧುಬಾಲಾ ಪಾತ್ರದಲ್ಲಿ ಯಾವ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಐದು ಜನರ ಹಿಂದೆ ಜಗ್ಗಾಡಬೇಡಿ ಅಂದ್ರು ಜಗ್ಗಣ್ಣ!

    ಐದು ಜನರ ಹಿಂದೆ ಜಗ್ಗಾಡಬೇಡಿ ಅಂದ್ರು ಜಗ್ಗಣ್ಣ!

    ಬೆಂಗಳೂರು: ‘ಕನ್ನಡ ಚಿತ್ರರಂಗದಲ್ಲಿ ಇರುವುದು ಬರೀ ಐದು ಜನ ಹೀರೋಗಳಷ್ಟೇನಾ? ಯಾರೇ ಉತ್ತಮ ಸಿನಿಮಾ ಮಾಡಿದರೂ ಪ್ರೇಕ್ಷಕರು ಅವರ ಕೈಹಿಡಿಯಬೇಕು. ಚೆಂದಗೆ ಸಿನಿಮಾ ಮಾಡಿದವರಿಗೆ ಬೆನ್ನು ತಟ್ಟಬೇಕು. ನನಗಿದ್ದ ಕ್ವಾಲಿಟಿಗೆ ನನ್ನನ್ನು ಯಾರು ತಾನೆ ಹೀರೋ ಮಾಡಲು ಬರುವಂತಿತ್ತು? ನಾನು ಧೈರ್ಯ ಮಾಡಿ ನನ್ನ ಭಾವನ ಜೊತೆ ಸೇರಿ ಭಂಡ ನನ್ನ ಗಂಡ ಸಿನಿಮಾ ಮಾಡಿದೆ. ಸಿನಿಮಾವನ್ನು ಜನ ಕೈ ಹಿಡಿದರು. ಇವತ್ತು ನಾನು ಮುಂದಿನ ಪೀಳಿಗೆಗೆ ಒಂದಿಷ್ಟು ಸಲಹೆ ನೀಡಲಿಕ್ಕಾದರೂ ಕೂರುವಂತಾಗಿದೆ. ನಮ್ಮ ನೆಲದಲ್ಲಿ ಅದ್ಭುತ ಪ್ರತಿಭೆಗಳಿವೆ. ಹೊಸಬರ ಕೈ ಹಿಡಿದರೆ ಅವರೂ ಮುಂದೊಂದು ದಿನ ತಮ್ಮ ಮುಂದಿನ ಪೀಳಿಗೆಗೆ ಒಂದಿಷ್ಟು ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ. ಆಂಧ್ರದಲ್ಲಿ ನೋಡಿದರೆ ನಾಲ್ಕು ಜನ, ತಮಿಳುನಾಡಿನಲ್ಲೂ ನಾಲ್ಕೇ ಜನ, ಕೇರಳಕ್ಕೆ ಹೋದರೆ ಅಲ್ಲಿ ಮೂರು ಮತ್ತೊಂದು ಜನರೇ ಚಿತ್ರರಂಗದಲ್ಲಿ ಆಳ್ವಿಕೆ ನಡೆಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲೂ ಕೂಡಾ ಐದು ಜನ ಹೀರೋಗಳನ್ನೇ ಹಿಡಿದುಕೊಂಡು ಜಗ್ಗಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮುಂದೆ ಬೇರೆಯವರನ್ನೂ ಪ್ರೋತ್ಸಾಹಿಸಿ…’ ಇದು ನವರಸ ನಾಯಕ ಜಗ್ಗೇಶ್ ನುಡಿಗಳು.

    ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲಿ ಜಗ್ಗೇಶ್ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಜಗ್ಗೇಶ್ ಅವರನ್ನು ಹೊರತುಪಡಿಸಿದರೆ ಮಿಕ್ಕವರೆಲ್ಲರೂ ಬಹುತೇಕ ನವ ಪ್ರತಿಭೆಗಳು. ಈ ಚಿತ್ರದಲ್ಲಿ ಹೊಸ ಕಲಾವಿದರ ಜೊತೆಗೆ ಅಭಿನಯಿಸಿದ್ದು ಜಗ್ಗೇಶ್ ಅವರಿಗೆ ಮತ್ತಷ್ಟು ಹುರುಪು ತುಂಬಿದೆಯಂತೆ. ಶೃತಿ ನಾಯ್ಡು ನಿರ್ಮಾಣದ, ರಮೇಶ್ ಇಂದಿರಾ ನಿರ್ದೇಶನದ ‘ಪ್ರೀಮಿಯರ್ ಪದ್ಮಿನಿ’ ಇದೇ ತಿಂಗಳು ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯರಾದ ಮಧುಬಾಲಾ ಮತ್ತು ಸುಧಾರಾಣಿ ಕೂಡಾ ನಟಿಸಿದ್ದಾರೆ.

    https://twitter.com/premierpadmini/status/1100342311660093440

  • ಜಗ್ಗಣ್ಣನಿಗೆ ಜೊತೆಯಾದರು ಮಧುಬಾಲಾ!

    ಜಗ್ಗಣ್ಣನಿಗೆ ಜೊತೆಯಾದರು ಮಧುಬಾಲಾ!

    ನವರಸ ನಾಯಕ ಜಗ್ಗೇಶ್ ಅವರು ಬಹುಕಾಲದಿಂದ ಚಿತ್ರಗಳಲ್ಲಿ ನಟಿಸಿರಲಿಲ್ಲ. ಕಿರುತೆರೆ ಕಾರ್ಯಕ್ರಮದ ಮೂಲಕ ಬ್ಯುಸಿಯಾಗಿದ್ದ ಅವರು ಲಾಂಗ್ ಗ್ಯಾಪಿನ ನಂತರ ಮತ್ತೆ ನಟಿಸುತ್ತಿರುವ ಚಿತ್ರ ಪ್ರೀಮಿಯರ್ ಪದ್ಮಿನಿ. ಕಿರುತೆರೆ ನಿರ್ದೇಶಕ ರಮೇಶ್ ಇಂದಿರಾ ನಿರ್ದೇಶನದ ಈ ಚಿತ್ರಕ್ಕೀಗ ದಕ್ಷಿಣ ಭಾರತದ ಖ್ಯಾತ ನಟಿ ಮಧುಬಾಲಾ ಎಂಟ್ರಿ ಕೊಟ್ಟಿದ್ದಾರೆ!

    ಪ್ರೀಮಿಯರ್ ಪದ್ಮಿನಿ ಚಿತ್ರ ಫೋಟೋ ಶೂಟ್ ಹಂತದಿಂದಲೂ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಜಗ್ಗೇಶ್ ಈವರೆಗಿನ ಎಲ್ಲ ಚಿತ್ರಗಳಿಗಿಂತಲೂ ಭಿನ್ನವಾದ ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ಸುಧಾರಾಣಿ ನಟಿಸುತ್ತಿದ್ದಾರೆ. ಇದೀಗ ಇನ್ನೊಂದು ಪ್ರಧಾನವಾದ ಪಾತ್ರಕ್ಕೆ ಮಧುಬಾಲಾ ಎಂಟ್ರಿ ಕೊಟ್ಟಿದ್ದಾರೆ.

    ಮಧುಬಾಲಾ ಕನ್ನಡ ಪ್ರೇಕ್ಷಕರಿಗೆ ಚಿರಪರಿಚಿತರು. ರವಿಚಂದ್ರನ್ ಅಭಿನಯದ ಅಣ್ಣಯ್ಯ, ಸುದೀಪ್ ಅಭಿನಯದ ರನ್ನ, ನಾನು ಮತ್ತು ವರಲಕ್ಷ್ಮಿ ಮುಂತಾದ ಚಿತ್ರಗಳಲ್ಲಿಯೂ ಮಧುಬಾಲಾ ನಟಿಸಿದ್ದಾರೆ. ನಿಖಿಲ್ ಗೌಡ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದಲ್ಲಿಯೂ ನಟಿಸಿರುವ ಮಧುಬಾಲಾ ಈಗ ಜಗ್ಗೇಶ್ ಅವರಿಗೆ ಜೊತೆಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv