Tag: ಮದ್ರಾಸ್ ಹೈ ಕೋರ್ಟ್

  • 48 ಗಂಟೆಯೊಳಗೆ ವಿದೇಶಿ ಕಾರಿನ ತೆರಿಗೆ ಪಾವತಿಸಿ – ಧನುಷ್‍ಗೆ ಹೈಕೋರ್ಟ್ ಆದೇಶ

    48 ಗಂಟೆಯೊಳಗೆ ವಿದೇಶಿ ಕಾರಿನ ತೆರಿಗೆ ಪಾವತಿಸಿ – ಧನುಷ್‍ಗೆ ಹೈಕೋರ್ಟ್ ಆದೇಶ

    ಚೆನ್ನೈ: ಕಾಲಿವುಡ್ ಸೂಪರ್ ಸ್ಟಾರ್ ನಟ ರಜನಿಕಾಂತ್ ಅಳಿಯ ನಟ ಧನುಷ್‍ಗೆ 48 ಗಂಟೆಗಳ ಒಳಗೆ ವಿದೇಶಿ ಕಾರಿನ ತೆರಿಗೆ ಪಾವತಿಸುವಂತೆ ಮದ್ರಾಸ್ ಹೈ ಕೋರ್ಟ್ ಆದೇಶಿಸಿದೆ.

    ನಟ ದಳಪತಿ ವಿಜಯ್ ನಂತರ ಇದೀಗ ಧನುಷ್‍ಗೆ ಐಷಾರಾಮಿ ಕಾರುಗಳ ತೆರಿಗೆ ಪಾವತಿಸುವಂತೆ ಕೋರ್ಟ್ ಸೂಚಿಸಿದೆ. ಧನುಷ್‍ರವರು ಇಂಗ್ಲೆಂಡಿನಿಂದ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಆಮದು ಮಾಡಿಕೊಂಡಿದ್ದರು. ಇದೀಗ ಈ ಕಾರಿಗೆ ಸಂಬಂಧಿಸಿದಂತೆ ಬಾಕಿ ಇರುವ 30,30,757(30.3 ಲಕ್ಷ) ರೂ. ತೆರಿಗೆ ಪಾವತಿಸುವಂತೆ ಮದ್ರಾಸ್ ಹೈಕೋರ್ಟ್ ತಿಳಿಸಿದೆ. ಈ ಮುನ್ನ 2018ರಲ್ಲಿ ಧನುಷ್ ರಿಟ್ ಅರ್ಜಿ ಸಲ್ಲಿಸಿದ್ದರು.

    ಇದೀಗ ಸೋಮವಾರ ತೆರಿಗೆ ಪಾವತಿಸಲು ತಯಾರಾಗಿದ್ದು, 2015ರಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹಿಂಪಡೆಯುವುದಾಗಿ ಧನುಷ್ ಪರ ವಕೀಲರು ತಿಳಿಸಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, 2.15 ಕೋಟಿ ಹಣ ನೀಡಿ ಧನುಷ್ ಕಾರು ಖರೀದಿಸಿದ್ದು, ಅಬಕಾರಿ ಸುಂಕ 2.69 ಕೋಟಿ ರೂ. ಪಾವತಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಪ್ರವೇಶ ತೆರಿಗೆ ಪಾವತಿಸುವಂತಿಲ್ಲ ಎಂದು ಧನುಷ್ ಪರ ವಕೀಲರು ವಾದಿಸಿದ್ದಾರೆ. ಈ ವೇಳೆ ನ್ಯಾಯಾಧೀಶ ಸುಬ್ರಮಣಿಯನ್, ಅಫಿಡವಿಟ್‍ನಲ್ಲಿ ಧನುಷ್ ಒಬ್ಬ ನಟ ಎಂದು ನಮೂದಿಸಿಲ್ಲ. ಧನುಷ್‍ಗೆ ಬೇಕಾದ ರೀತಿಯಲ್ಲಿ ಅಫಿಡೆಟ್ ತಿದ್ದಲು ಸಹಕರಿಸಿದ ಕೋರ್ಟ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಇದನ್ನೂ ಓದಿ:ಬಿಕಿನಿ ತೊಟ್ಟು ಫೋಟೋಗೆ ಹಾಟ್ ಫೋಸ್ – ಪಡ್ಡೆಹುಡುಗರ ನಿದ್ದೆಗೆಡಿಸಿದ ದಿಶಾ

  • ಜಯಲಲಿತಾ ಜೀವಿತಾವಧಿಯಲ್ಲಿ ಗರ್ಭವತಿ ಆಗಿರಲಿಲ್ಲ-ಮದ್ರಾಸ್ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ ಸರ್ಕಾರ

    ಜಯಲಲಿತಾ ಜೀವಿತಾವಧಿಯಲ್ಲಿ ಗರ್ಭವತಿ ಆಗಿರಲಿಲ್ಲ-ಮದ್ರಾಸ್ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ ಸರ್ಕಾರ

    ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ತಮ್ಮ ಜೀವಿತಾವಧಿಯಲ್ಲಿ ಗರ್ಭವತಿ ಆಗಿರಲಿಲ್ಲ ಎಂದು ರಾಜ್ಯ ಸರ್ಕಾರ ಮದ್ರಾಸ್ ಹೈ ಕೋರ್ಟ್ ಗೆ 1980ರ ಅವಧಿಯ ದೃಶ್ಯ ಸಾಕ್ಷ್ಯವನ್ನು ಸಲ್ಲಿಸಿದೆ.

    ಬೆಂಗಳೂರಿನ ಅಮೃತ ತಾವು ಜಯಲಲಿತಾರ ಪುತ್ರಿ ಎಂದು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 1980ರ ಅವಧಿಯ ದೃಶ್ಯ ಸಾಕ್ಷ್ಯವನ್ನು ನೀಡಿದೆ ಎಂದು ತಮಿಳುನಾಡು ಪರ ವಕೀಲ ವಿಜಯ್ ನಾರಾಯಣ್ ಹೇಳಿದ್ದಾರೆ.

     

    ಅರ್ಜಿದಾರರಾದ ಅಮೃತಾ ತಾವು ಜಯಲಲಿತಾರ ಪುತ್ರಿ ಎಂದು ಆಸ್ತಿ ಕಬಳಿಸಲು ಮುಂದಾಗಿದ್ದಾರೆ. ತಾವು ಮಾಜಿ ಸಿಎಂ ಪುತ್ರಿ ಎಂದು ಹೇಳಿಕೊಳ್ಳುವ ಅಮೃತ ಇದೂವರೆಗೂ ಹಲವು ದಾಖಲೆಗಳನ್ನು ಸಲ್ಲಿಸಿದ್ದಾರೆ. ಆದರೆ ತಾಯಿ ಜೊತೆಗಿನ ಒಂದು ಫೋಟೋವನ್ನು ಸಹ ಬಹಿರಂಗಗೊಳಿಸಿಲ್ಲ. ಹಾಗಾಗಿ ಅಮೃತ ಹೇಳುತ್ತಿರೋದು ಸುಳ್ಳು ಎಂದು ಅಡ್ವೋಕೇಟ್ ಜನರಲ್ ವಿಜಯ್ ನಾರಾಯಣ್ ವಾದ ಮಂಡಿಸಿದ್ದಾರೆ.

    1980 ಆಗಸ್ಟ್ ತಿಂಗಳಲ್ಲಿ ಅಮೃತ ಜನಿಸಿದ್ದಾರೆ. ಹೀಗಾಗಿ 1980ರಲ್ಲಿಯ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ ಜಯಲಲಿತಾ ಭಾಗಿಯಾಗಿದ್ದ ದೃಶ್ಯಾವಳಿಗಳ ವಿಡಿಯೋ ಸಲ್ಲಿಸಲಾಗಿದೆ. ಈ ಕಾರ್ಯಕ್ರಮ ಅಮೃತಾ ಹುಟ್ಟುವ ಒಂದು ತಿಂಗಳ ಮೊದಲೇ ನಡೆದಿತ್ತು. ವಿಡಿಯೋದಲ್ಲಿ ಜಯಲಲಿತಾ ಗರ್ಭಿಣಿಯಾದಂತೆ ಕಂಡಿಲ್ಲ. ಜಯಲಲಿತಾರ ಇತರೆ ಸಂಬಂಧಿಗಳ ಡಿಎನ್ ಸ್ಯಾಂಪಲ್ ಪಡೆದುಕೊಂಡು, ಅಮೃತಾರ ಡಿಎನ್‍ಎ ಪರೀಕ್ಷೆ ನಡೆಸಲು ನ್ಯಾಯಾಲಯ ಅನುಮತಿ ನೀಡಬೇಕೆಂದು ವಿಜಯ್ ನಾರಾಯಣ್ ಮನವಿ ಮಾಡಿಕೊಂಡಿದ್ದಾರೆ. ನ್ಯಾಯಾಧೀಶರು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದ್ದಾರೆ.