Tag: ಮದ್ರಸಾ

  • ಪಾಕ್‍ನಲ್ಲಿ ಹಿಂದೂ ದೇವಾಲಯ ಧ್ವಂಸ ಮಾಡಿದ 22 ಮಂದಿಗೆ 5 ವರ್ಷ ಜೈಲು ಶಿಕ್ಷೆ

    ಪಾಕ್‍ನಲ್ಲಿ ಹಿಂದೂ ದೇವಾಲಯ ಧ್ವಂಸ ಮಾಡಿದ 22 ಮಂದಿಗೆ 5 ವರ್ಷ ಜೈಲು ಶಿಕ್ಷೆ

    ಇಸ್ಲಾಮಾಬಾದ್: ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ(ಎಟಿಸಿ)ವು ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ್ದ 22 ಆರೋಪಿಗಳಿಗೆ ಬುಧವಾರ ತಲಾ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

    ಜುಲೈ 2021 ರಲ್ಲಿ, ಮಂದ್ರಸಾದಲ್ಲಿ 8 ವರ್ಷದ ಬಾಲಕ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಹಿನ್ನೆಲೆ ಮುಸ್ಲಿಮರು ನಮ್ಮ ದೇವರಿಗೆ ಈ ಬಾಲಕ ಅಪವಿತ್ರಗೊಳಿಸಿದ್ದಾನೆ ಎಂದು ಆಕ್ರೋಶ ಹೊರಹಾಕಿದು. ಪರಿಣಾಮ ಗಣೇಶ ಮಂದಿರದ ಮೇಲೆ ದಾಳಿ ನಡೆಸಲು ಮುಂದಾಗಿದ್ದು, ಮರಣಾತಿಕ ಆಯುಧಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ದೇವಾಲಯವನ್ನು ಧ್ವಂಸಗೊಳಿಸುವುದಲ್ಲದೇ, ಭದ್ರತೆಗಾಗಿ ನಿಯೋಜಿಸಿದ್ದ ಪೆÇಲೀಸರ ಮೇಲೆ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆ 84 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.

    ಈ ಹಿನ್ನೆಲೆ ಘಟನೆಗೆ ಸಂಬಂಧಿಸಿದಂತೆ 84 ಶಂಕಿತರನ್ನು ವಿಚಾರಣೆ ನಡೆಸಿದ್ದು, 22 ಮಂದಿಗೆ ಶಿಕ್ಷೆಯನ್ನು ಕೊಡಲಾಗಿದೆ. ಬುಧವಾರ, ಎಟಿಸಿ ನ್ಯಾಯಾಧೀಶ(ಬಹ್ವಾಲ್ಪುರ್) ನಾಸಿರ್ ಹುಸೇನ್ ಅವರು ತೀರ್ಪನ್ನು ಪ್ರಕಟಿಸಿದರು. ನ್ಯಾಯಾಧೀಶರು 22 ಶಂಕಿತರಿಗೆ ತಲಾ ಐದು ವರ್ಷಗಳ ಜೈಲು ಶಿಕ್ಷೆಯನ್ನು ನೀಡಿದರು. ಉಳಿದ 62 ಮಂದಿಯನ್ನು ಬಿಡುಗಡೆ ಮಾಡಿದರು. ಇದನ್ನೂ ಓದಿ: ಭಗವಂತ್ ಮಾನ್ ಭೇಟಿಯಾದ ನಂತರ ಊಟದ ತಟ್ಟೆಗೆ ಕಿತ್ತಾಡಿದ ಶಿಕ್ಷಕರು, ಪ್ರಾಂಶುಪಾಲರು 

    ಪಾಕಿಸ್ತಾನದ ಸಂಸತ್ತು ಕೂಡ ನಿರ್ಣಯವನ್ನು ಅಂಗೀಕರಿಸುವ ಮೂಲಕ ದೇವಾಲಯದ ದಾಳಿಯನ್ನು ಖಂಡಿಸಿತ್ತು.

  • ಹಮೀದ್ ಅನ್ಸಾರಿ ಪತ್ನಿ ನಡೆಸೋ ಮದ್ರಸಾದ ಕುಡಿಯುವ ನೀರಿಗೆ ಇಲಿ ಪಾಷಾಣ ಹಾಕಿದ್ರು!

    ಹಮೀದ್ ಅನ್ಸಾರಿ ಪತ್ನಿ ನಡೆಸೋ ಮದ್ರಸಾದ ಕುಡಿಯುವ ನೀರಿಗೆ ಇಲಿ ಪಾಷಾಣ ಹಾಕಿದ್ರು!

    ಆಗ್ರಾ: ಮಾಜಿ ಉಪ-ರಾಷ್ಟ್ರಪತಿ ಹಮೀದ್ ಅನ್ಸಾರಿ ಪತ್ನಿ ಸಲ್ಮಾ ಅನ್ಸಾರಿ ನಡೆಸುವ ಮದ್ರಸಾದ ಕುಡಿಯುವ ನೀರಿಗೆ ಇಬ್ಬರು ದುಷ್ಕರ್ಮಿಗಳು ಬಂದು ಇಲಿ ಪಾಷಾಣ ಹಾಕಿರುವ ಘಟನೆ ಆಗ್ರಾದ ಅಲಿಘಡ್ ನಲ್ಲಿ ನಡೆದಿದೆ.

    ಮದ್ರಸಾದಲ್ಲಿ ಸುಮಾರು 4000 ಕ್ಕೂ ಹೆಚ್ಚು ಮಕ್ಕಳಿದ್ದು, ಅಪರಿಚಿತರು ವಿಷ ಬೆರೆಸುವುದನ್ನು ವಿದ್ಯಾರ್ಥಿಯು ನೋಡಿ ವಾರ್ಡನ್ ಗೆ ತಿಳಿಸಿದ್ದನು. ಈ ಘಟನೆಯಿಂದ ಆಘಾತಕ್ಕೆ ಒಳಗಾದ ಸಲ್ಮಾ ಅನ್ಸಾರಿ ಮದ್ರಸಾದ ವಾರ್ಡನ್ ಮೂಲಕ ದೂರು ನೀಡಿದ್ದಾರೆ.

    ಸಲ್ಮಾ ಅನ್ಸಾರಿ ಮುಖ್ಯಸ್ಥೆಯಾಗಿರುವ ಅಲ್ ನೂರ್ ಚಾರಿಟೆಬಲ್ ಸೊಸೈಟಿ ನಗರದ ಮಧ್ಯೆ ಇದೆ. ಪೊಲೀಸರು ಐಪಿಸಿ ಸೆಕ್ಷನ್ 328 ಮತ್ತು ಐಪಿಸಿ ಸೆಕ್ಷನ್ 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

    ಮಾಹಿತಿ ತಿಳಿದ ತಕ್ಷಣ ನೀರಿನ ಸಂಪರ್ಕವನ್ನು ಸ್ಥಗಿತಗೊಳಿಸಿದ್ದು, ಹಾಗೂ ನೀರಿನ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘಟನೆಯ ನಂತರ ಸಂಸ್ಥೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸೂಚಿಸಿದ್ದೇವೆ ಎಂದು ಅಲಿಘಡ್ ಎಸ್‍ಪಿ ರಾಜೇಶ್ ಪಾಂಡೆ ತಿಳಿಸಿದ್ದಾರೆ.

    ಹಾಸ್ಟೆಲ್‍ನಲ್ಲಿರುವ ನಮ್ಮ ವಿದ್ಯಾರ್ಥಿ ಮಹಮ್ಮದ್ ಅಫ್ಝಲ್ ನೀರು ಕುಡಿಯಲು ತೆರಳಿದ್ದ. ಆ ಸಂದರ್ಭದಲ್ಲಿ ಇಬ್ಬರು ಟ್ಯಾಂಕ್ ಗೆ ಮಾತ್ರೆ ಹಾಕುತ್ತಿರುವುದನ್ನು ನೋಡಿದ್ದಾನೆ. ಯಾಕೆ ಮಾತ್ರೆ ಹಾಕುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾಗ ಅವರು ಬಂದೂಕು ತೋರಿಸಿ ವಿದ್ಯಾರ್ಥಿಯನ್ನು ಹೆದರಿಸಿದ್ದರು ಎಂದು ವಾರ್ಡನ್ ಜುನೈದ್ ಸಿದ್ದೀಕ್ ಹೇಳಿದ್ದಾರೆ.