Tag: ಮದ್ಯ ಹಗರಣ

  • ದಾಖಲೆಗಳನ್ನು ನೋಡಲ್ಲ ಎಂದಿದ್ದ ದೆಹಲಿ ಕೋರ್ಟ್‌ – ಕೇಜ್ರಿವಾಲ್‌ಗೆ ಜಾಮೀನಿಗೆ ತಡೆ ನೀಡಿದ ಹೈಕೋರ್ಟ್‌

    ದಾಖಲೆಗಳನ್ನು ನೋಡಲ್ಲ ಎಂದಿದ್ದ ದೆಹಲಿ ಕೋರ್ಟ್‌ – ಕೇಜ್ರಿವಾಲ್‌ಗೆ ಜಾಮೀನಿಗೆ ತಡೆ ನೀಡಿದ ಹೈಕೋರ್ಟ್‌

    – ದಾಖಲೆಗಳು ದೊಡ್ಡದಾಗಿದೆ ಎಂದು ದೆಹಲಿ ಕೋರ್ಟ್‌ ಹೇಳಿದೆ
    – ನಮ್ಮ ವಾದವನ್ನು ಸರಿಯಾಗಿ ಆಲಿಸಿಲ್ಲ: ಇಡಿ

    ನವದೆಹಲಿ: ದೆಹಲಿ ಮದ್ಯ ಹಗರಣದಲ್ಲಿ (Delhi Liquor Scam) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (CM Arvind Kejriwal) ಅವರಿಗೆ ರೋಸ್ ಅವೆನ್ಯೂ  ಕೋರ್ಟ್‌  ನೀಡಿದ ಜಾಮೀನಿಗೆ (Bail) ದೆಹಲಿ ಹೈಕೋರ್ಟ್ (Delhi High Court) ಮಧ್ಯಂತರ ತಡೆ ನೀಡಿದೆ. ವಿಸ್ತೃತ ಆದೇಶವನ್ನು ಕಾಯ್ದಿರಿಸಿದ್ದು ಎರಡು ಮೂರು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

    ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ED) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಈ ಆದೇಶ ನೀಡಿದ್ದಾರೆ. ನಾನು ಆದೇಶವನ್ನು ಎರಡು ಮೂರು ದಿನಗಳವರೆಗೆ ಕಾಯ್ದಿರಿಸುತ್ತಿದ್ದೇನೆ. ಆದೇಶವನ್ನು ಪ್ರಕಟಿಸುವವರೆಗೆ ವಿಚಾರಣಾ ನ್ಯಾಯಾಲಯದ ಆದೇಶದ ಕಾರ್ಯಾಚರಣೆಯನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದರು.

    court order law

    ವಿಚಾರಣೆ ವೇಳೆ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಆದೇಶವಾಗಿದ್ದರೂ ವಿಚಾರಣಾ ನ್ಯಾಯಾಲಯವು ಇಡಿ ವಾದವನ್ನು ಸರಿಯಾಗಿ ಆಲಿಸಿಲ್ಲ ಎಂದು ಪ್ರತಿಪಾದಿಸಿದರು. ಇಡಿ ಸಲ್ಲಿಸಿದ ದಾಖಲೆಗಳನ್ನು ಪರಿಗಣಿಸಲು ವಿಚಾರಣಾ ನ್ಯಾಯಾಲಯ ವಿಫಲವಾಗಿದೆ ಎಂದು ಹೇಳಿದರು.  ಇದನ್ನೂ ಓದಿ: ಕೆಡಿಪಿ ಸಭೆಯಲ್ಲಿ ಭರ್ಜರಿ ನಿದ್ದೆ ಮಾಡಿದ ಎಂಎಲ್‌ಸಿ ವಸಂತ ಕುಮಾರ್‌

    ದಯವಿಟ್ಟು ವಿಚಾರಣಾ ನ್ಯಾಯಾಲಯದ ಆದೇಶವನ್ನು ಗಮನಿಸಬೇಕು. ನ್ಯಾಯಾಲಯವು ನಮ್ಮ ಮಾತುಗಳನ್ನು ಕೇಳುವುದಿಲ್ಲ, ನಾವು ನೀಡಿದ ದಾಖಲೆಗಳನ್ನು ನೋಡುವುದಿಲ್ಲ ಮತ್ತು ಅದು ದೊಡ್ಡದಾಗಿದೆ ಎಂದು ಹೇಳುತ್ತದೆ. ಬೃಹತ್ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ನ್ಯಾಯಾಲಯ ಹೇಳುತ್ತದೆ. ಇದಕ್ಕಿಂತ ವಿಕೃತ ಆದೇಶ ಇರಲು ಸಾಧ್ಯವಿಲ್ಲ. ಈ ಮೂಲಕ ನ್ಯಾಯಧೀಶರು ದಾಖಲೆಗಳನ್ನು ಪರಿಶೀಲಿಸಲಿಲ್ಲ ಎಂದು ಆದೇಶದಲ್ಲೇ ಒಪ್ಪಿಕೊಂಡಿದ್ದಾರೆ ಎಂಬ ವಿಚಾರವನ್ನು ಕೋರ್ಟ್‌ ಗಮನಕ್ಕೆ ತಂದರು.

     

    ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ (Abhishek Singhvi), ಇಡಿ 3 ಗಂಟೆ 45 ನಿಮಿಷಗಳ ಕಾಲ ವಾದ ಮಂಡಿಸಿದೆ. ತನ್ನ ವಾದದಲ್ಲಿ ಸರ್ಕಾರಿ ಸಂಸ್ಥೆಯ ಮೂಲಕ ನ್ಯಾಯಧೀಶರನ್ನು ನಿಂದಿಸಿದ್ದಾರೆ. ಬಂಧನದ ಕಾನೂನು ಬದ್ಧತೆಯ ವಿಷಯವು ಇನ್ನೂ ಉನ್ನತ ನ್ಯಾಯಾಲಯದ ಮುಂದೆ ಬಾಕಿ ಇದೆ. ಆರ್ಟಿಕಲ್ 21 ಅಸ್ತಿತ್ವದಲ್ಲಿಲ್ಲ, ವ್ಯಕ್ತಿ ಸ್ವಾತಂತ್ರ್ಯವು ತುಂಬಾ ಕಡಿಮೆಯಾಗಿದೆ. ಇಡಿಗೆ ಕಣ್ಣುಗಳಿದ್ದರೆ ವಾಸ್ತವದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸುತ್ತಿರಲಿಲ್ಲ. ಜೈಲಿಗೆ ಕಳುಹಿಸುತ್ತಿರಲಿಲ್ಲ. ಇದು ಕೇವಲ ಹೇಳಿಕೆ ಮೇಲೆ ದಾಖಲಿಸಿರುವ ಪ್ರಕರಣ ಎಂದು ವಾದಿಸಿದರು.

  • ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಜಾಮೀನು ಮಂಜೂರು

    ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಜಾಮೀನು ಮಂಜೂರು

    ನವದೆಹಲಿ: ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ  ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

    ಕಳೆದ ತಿಂಗಳು ಬಂಧನಕ್ಕೊಳಗಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಸಾಮಾನ್ಯ ಜಾಮೀನು (Bail) ಅರ್ಜಿ ವಿಚಾರಣೆ ನಡೆಸಿದ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಗುರುವಾರ ತೀರ್ಪನ್ನು ಕಾಯ್ದಿರಿಸಿತ್ತು. ನ್ಯಾಯಾಧೀಶರಾದ ನಿಯಯ್ ಬಿಂದು ಎರಡು ದಿನಗಳ ಕಾಲ ಈ ಪ್ರಕರಣದ ಸುದೀರ್ಘ ವಿಚಾರಣೆ ಆಲಿಸಿ ಇಂದು ಜಾಮೀನು ಮಂಜೂರು ಮಾಡಿದರು.

    ಮೇಲ್ಮನವಿ ಸಲ್ಲಿಸುವ ಉದ್ದೇಶದಿಂದ ಜಾಮೀನು ಬಾಂಡ್‌ಗೆ ಸಹಿ ಹಾಕಲು 48 ಗಂಟೆಗಳ ಕಾಲಾವಕಾಶ ನೀಡುವಂತೆ ಇಡಿ ಮನವಿ ಮಾಡಿತ್ತು. ಈ ಮನವಿಯನ್ನು ತಿರಸ್ಕರಿಸಿದ ಕೋರ್ಟ್‌ ಶುಕ್ರವಾರ 1 ಲಕ್ಷ ರೂ. ಬಾಂಡ್ ಸಲ್ಲಿಕೆಗೆ ಕೇಜ್ರಿವಾಲ್ ಪರ ವಕೀಲರಿಗೆ ಸೂಚನೆ ನೀಡಿತು. ಎಲ್ಲಾ ಪ್ರಕ್ರಿಯೆಗಳು ಸರಿಯಾಗಿ ಮುಗಿದರೆ ಕೇಜ್ರಿವಾಲ್‌ ನಾಳೆ ಜೈಲಿನಿಂದ ಹೊರ ಬರುವ ಸಾಧ್ಯತೆಯಿದೆ.

    ವಿಚಾರಣೆ ವೇಳೆ ವಾದ ಮಂಡಿಸಿದ ಇಡಿ ಪರ ವಕೀಲ ಎಎಸ್‌ಜಿ ಎಸ್‌ವಿ ರಾಜು, 2021-22ರ ದೆಹಲಿ ಮದ್ಯ ನೀತಿಯಲ್ಲಿ ಉದ್ದೇಶಪೂರ್ವಕವಾಗಿ ಲೋಪದೋಷಗಳನ್ನು ಮಾಡಲು ಕಿಕ್‌ಬ್ಯಾಕ್ ಪಡೆಯಲಾಗಿದೆ. ಈ ಹಣವನ್ನು ಗೋವಾ ಚುನಾವಣೆಗೆ ಬಳಸಿದೆ. ಇದಕ್ಕೆ ಪೂರಕವಾದ ಎಲ್ಲಾ ಸಾಕ್ಷಿಗಳು ಇಡಿ ಬಳಿ ಇದೆ. ಗೋವಾದಲ್ಲಿ ಅರವಿಂದ್ ಕೇಜ್ರಿವಾಲ್ ತಂಗಿದ್ದ ಹೋಟೆಲ್ ಬಾಡಿಗೆ ಒಂದು ಲಕ್ಷ ರೂಪಾಯಿಯನ್ನು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೊಬ್ಬರು ಪಾವತಿಸಿದ್ದಾರೆ. ಅವರು ಕಿಕ್‌ಬ್ಯಾಕ್ ರೂಪದಲ್ಲಿ ಬಂದ ಸುಮಾರು 40 ಕೋಟಿ ರೂ. ಪಡೆದುಕೊಂಡಿದ್ದಾರೆ. ಇದನ್ನು ಹೊರತುಪಡಿಸಿ ಇನ್ನಷ್ಟು ಸಾಕ್ಷಿಗಳಿದೆ ಎಂದು ತಿಳಿಸಿದರು.

     

    ಇಡಿ ಗಾಳಿಯಲ್ಲಿ ಗುಂಡು ಹಾರಿಸುತ್ತಿಲ್ಲ. ತಮ್ಮ ತನಿಖೆಯಲ್ಲಿ ಅಸಮರ್ಪಕ ದಾಖಲೆಗಳನ್ನು ಇಟ್ಟುಕೊಂಡಿದೆ. ಕಿಕ್‌ಬ್ಯಾಕ್ ರೂಪದಲ್ಲಿ ಪಡೆದ ಹಣ ಫೋಟೋಗಳು ಲಭ್ಯವಿದೆ. ಇದೇ ಹಣವನ್ನು ಗೋವಾ ಚುನಾವಣಾ ಪ್ರಚಾರಕ್ಕೆ ಬಳಸಿದೆ. ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಮೊಬೈಲ್ ಪಾಸ್‌ವರ್ಡ್ ನೀಡಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ಪ್ರತಿಕೂಲವಾದ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಅವರು ತಮ್ಮ ಫೋನ್ ಪಾಸ್‌ವರ್ಡ್ ಹೇಳಿದರೆ ಇನ್ನಷ್ಟು ಮಾಹಿತಿ ಸಿಗಲಿದೆ ಎಂದು ಹೇಳಿದರು.

    ಕೇಜ್ರಿವಾಲ್ ಅವರು ವೈಯಕ್ತಿಕವಾಗಿ ಯಾವುದೇ ಅಪರಾಧದಲ್ಲಿ ಭಾಗಿಯಾಗದಿದ್ದರೂ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ವಿಚಾರಣೆ ನಡೆಸಬಹುದು. ಅವರು ನೇರವಾಗಿ ಅಪರಾಧ ಮಾಡದೇ ಇರಬಹುದು. ಆದರೆ ಎಎಪಿ ಪಕ್ಷದ ವ್ಯವಹಾರಗಳಿಗೆ ಜವಾಬ್ದಾರರಾಗಿರುತ್ತಾರೆ. ಒಂದು ವೇಳೆ ಎಎಪಿ ಅಪರಾಧದಲ್ಲಿ ತಪ್ಪಿತಸ್ಥರಾಗಿದ್ದರೆ ಸೆಕ್ಷನ್ 70 ಪಿಎಂಎಲ್‌ಎ ಪ್ರಕಾರ ಅವರು ತಪ್ಪಿತಸ್ಥರಾಗುತ್ತಾರೆ ಎಂದು ಎಸ್‌ವಿ ರಾಜು ವಾದಿಸಿದರು.

    ಇಡಿ ಆರೋಪಕ್ಕೆ ಅರವಿಂದ್ ಕೇಜ್ರಿವಾಲ್ ಪರ ವಕೀಲ ವಿಕ್ರಮ್ ಚೌಧರಿ ಆಕ್ಷೇಪ ವ್ಯಕ್ತಪಡಿಸಿದರು. ಇಡಿ ಒಂದು ಸ್ವತಂತ್ರ ಸಂಸ್ಥೆಯೇ ಅಥವಾ ಕೆಲವು ರಾಜಕೀಯ ಯಜಮಾನರ ಕೈಯಲ್ಲಿ ಆಟವಾಡುತ್ತಿದೆಯೇ? ಇಡಿ ಊಹೆಯ ಆಧಾರದ ಮೇಲೆ ತನ್ನ ಎಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಅವರು ಇನ್ನೂ ವಸ್ತುಗಳನ್ನು ಸಂಗ್ರಹಿಸುತ್ತಿದ್ದರೆ ಅದು ಅಂತ್ಯವಿಲ್ಲದ ತನಿಖೆಯಾಗುತ್ತದೆ. ಆಪ್‌ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ಅದಕ್ಕಾಗಿಯೇ ಪಕ್ಷವು ಮಾಡಿದ ಪ್ರತಿಯೊಂದಕ್ಕೂ ಜವಾಬ್ದಾರಾಗುತ್ತಾರೆ ಎಂದು ಅವರು ಹೇಳುತ್ತಾರೆ. ಇದು ಊಹಾಪೋಹಗಳು, ಪೂರ್ವಾಗ್ರಹ. ಸಾಕ್ಷಿ ಇಲ್ಲದೇ 100 ಕೋಟಿ ಲಂಚ ಸ್ವೀಕರಿಸಲಾಗಿದೆ ಎಂದು ಹೇಳಿಕೆ ನೀಡುತ್ತಲೇ ಇದ್ದಾರೆ ಎಂದು ಚೌಧರಿ ವಾದಿಸಿದರು. ಕೇಜ್ರಿವಾಲ್ ಅವರನ್ನು ವಿಶೇಷ ವ್ಯಕ್ತಿ ಎಂದು ಪರಿಗಣಿಸಬೇಡಿ. ಅವರು ವಿಶೇಷ ವ್ಯಕ್ತಿ ಎಂದು ಪರಿಗಣಿಸಲು ಬಯಸುವುದಿಲ್ಲ. ಆದರೆ ದಯವಿಟ್ಟು ಸಾಮಾನ್ಯ ವ್ಯಕ್ತಿಯಂತೆ ಪರಿಗಣಿಸಿ ಎಂದು ಮನವಿ ಮಾಡಿದರು.

    ಲೋಕಸಭಾ ಚುನಾವಣೆಯ ಸಮಯದಲ್ಲಿ ಸುಪ್ರೀಂ ಕೋರ್ಟ್‌ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.  ಜೂನ್‌ 2 ರಂದು ಕೇಜ್ರಿವಾಲ್‌ ಮರಳಿ ದೆಹಲಿಯ  ತಿಹಾರ್‌ ಜೈಲಿಗೆ ಹೋಗಿದ್ದರು.

  • ಸುಪ್ರೀಂನಿಂದ ಸದ್ಯಕ್ಕಿಲ್ಲ ರಿಲೀಫ್ – ಏ.29 ರಂದು ಕೇಜ್ರಿವಾಲ್ ಅರ್ಜಿ ವಿಚಾರಣೆ

    ಸುಪ್ರೀಂನಿಂದ ಸದ್ಯಕ್ಕಿಲ್ಲ ರಿಲೀಫ್ – ಏ.29 ರಂದು ಕೇಜ್ರಿವಾಲ್ ಅರ್ಜಿ ವಿಚಾರಣೆ

    ನವದೆಹಲಿ: ತಮ್ಮ ಬಂಧನವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ (Supreme Court) ಏ.29ಕ್ಕೆ ಮುಂದೂಡಿದೆ.

    ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ (ED) ನೋಟಿಸ್ ನೀಡಿದ್ದು ಏಪ್ರಿಲ್‌ 24 ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ.

    ದೆಹಲಿ ಮದ್ಯ ನೀತಿಯಲ್ಲಿ (Delhi Liquor Scam) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಬಂಧಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇಡಿ ಬಂಧನ‌ ಕಾನೂನು ವ್ಯಾಪ್ತಿಯಲ್ಲಿದೆ. ಪ್ರಕರಣವನ್ನು ರಾಜಕೀಯಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜ ವಜಾ ಮಾಡಿತ್ತು. ಇದನ್ನೂ ಓದಿ: ಮಿಸ್ಟರ್ ಕುಮಾರಸ್ವಾಮಿ ನೀನು ಚುನಾವಣೆಯಲ್ಲಿ ಗೆಲ್ಲಲ್ಲ – ಏಕವಚನದಲ್ಲೇ ಹರಿಹಾಯ್ದ ಡಿಕೆಶಿ

    ಹೈಕೋರ್ಟ್‌ನಲ್ಲಿ ಅರ್ಜಿ ವಜಾ ಆದ ಹಿನ್ನಲೆ ಕೇಜ್ರಿವಾಲ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ ಮಧ್ಯಂತರ ಆದೇಶ ನೀಡಲು ನಿರಾಕರಿಸಿತು ಮತ್ತು ಇಡಿಗೆ ನೋಟಿಸ್ ಜಾರಿ ಮಾಡಿ ಸುದೀರ್ಘ ವಿಚಾರಣೆ ನಡೆಸುವುದಾಗಿ ಹೇಳಿತು.

    ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನುಸಿಂಘ್ವಿ, ಶುಕ್ರವಾರ ಸಣ್ಣ ದಿನಾಂಕವನ್ನು ಕೋರುತ್ತಿದ್ದೇನೆ ಈ ಪ್ರಕರಣದಲ್ಲಿ ಆಯ್ದ ಸೋರಿಕೆಗಳಿವೆ ಎಂದು ಹೇಳಿದರು. ಇದಕ್ಕೆ ಜಸ್ಟಿಸ್ ಖನ್ನಾ ನಿಮಗೆ ಒಂದು ಸಣ್ಣ ದಿನಾಂಕವನ್ನು ನೀಡುತ್ತೇನೆ ಆದರೆ ನೀವು ಸೂಚಿಸಿದ ದಿನಾಂಕ ಸಾಧ್ಯವಿಲ್ಲ ಎಂದು ಉತ್ತರಿಸಿದರು.

    ಬಳಿಕ ಕೇಜ್ರಿವಾಲ್ ಅವರನ್ನ ಎನ್‌ಫೋರ್ಸ್‌ಮೆಂಟ್ ಕೇಸ್ ಮಾಹಿತಿ ವರದಿ (ಇಸಿಐಆರ್) ಅಥವಾ ಚಾರ್ಜ್‌ಶೀಟ್‌ನಲ್ಲಿ ಬಂಧಿಸಿಲ್. ಬದಲಿಗೆ ಇತರೆ ಆರೋಪಿಗಳ 15 ಹೇಳಿಕೆಗಳ ಮೇಲೆ ಬಂಧಿಸಿದೆ. ಚುನಾವಣಾ ಪ್ರಚಾರದಿಂದ ತಪ್ಪಿಸಲು ಬಂಧನ ಮಾಡಲಾಗಿದೆ ಎಂದು ಸಿಂಘ್ವಿ ಹೇಳಿದರು.

    ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಏ. 23 ವರೆಗೂ ರೋಸ್ ಅವೆನ್ಯೂ ಕೋರ್ಟ್ ವಿಸ್ತರಿಸಿದೆ.

     

  • ಜೈಲಿನಲ್ಲಿ ಕೇಜ್ರಿವಾಲ್‌ ತೂಕ 1 ಕೆಜಿ ಹೆಚ್ಚಾಗಿದೆ: ಬಿಜೆಪಿ

    ಜೈಲಿನಲ್ಲಿ ಕೇಜ್ರಿವಾಲ್‌ ತೂಕ 1 ಕೆಜಿ ಹೆಚ್ಚಾಗಿದೆ: ಬಿಜೆಪಿ

    ನವದೆಹಲಿ: ದೆಹಲಿ ಮುಖ್ಯಮಂತ್ರಿ (Delhi CM) ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ತೂಕ 1 ಕೆಜಿ ಹೆಚ್ಚಾಗಿದೆ ಎಂದು ಬಿಜೆಪಿ (BJP) ಹೇಳಿದೆ.

    ಸುದ್ದಿಗೋಷ್ಠಿ ನಡೆಸಿದ ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮವೀರ್ ಸಿಂಗ್ ಬಿಧುರಿ (Delhi LoP Ramvir Singh Bidhuri) ಅವರು, ಅರವಿಂದ್ ಕೇಜ್ರಿವಾಲ್ ಅವರು ಯಾವುದೇ ತೂಕವನ್ನು ಕಳೆದುಕೊಂಡಿಲ್ಲ ಆದರೆ ವಾಸ್ತವವಾಗಿ ತಿಹಾರ್ ಜೈಲಿನಲ್ಲಿ (Tihar Jail) 1 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಿದರು.  ಇದನ್ನೂ ಓದಿ: ಅಧಿಕಾರಕ್ಕೆ ಬಂದರೆ ಮೊಬೈಲ್‌ ಡೇಟಾಗೆ 500 ರೂ. ಫ್ರೀ – ಅಖಿಲೇಶ್‌ ಯಾದವ್‌ ಘೋಷಣೆ

    ಅಧಿಕೃತ ವೈದ್ಯಕೀಯ ಆರೋಗ್ಯ ಮಾಹಿತಿ ಇರುವ ಚಾರ್ಟ್ ಉಲ್ಲೇಖಿಸಿದ ಅವರು ಬಿಜೆಪಿ ನಾಯಕ ಕೇಜ್ರಿವಾಲ್ ಜೈಲಿನಲ್ಲಿ 4.5 ಕೆಜಿ ತೂಕವನ್ನು ಕಳೆದುಕೊಂಡಿಲ್ಲ ಮತ್ತು ಅವರ ಪ್ರಮುಖ ಅಂಕಿಅಂಶಗಳಾದ ಬಿಪಿ ಮತ್ತು ಶುಗರ್ ಸಹ ಸಾಮಾನ್ಯವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ದಿನೇಶ್ ಗುಂಡುರಾವ್ ಮನೆ ಅಂದ್ರೆ ಅದು ಕಾಂಗ್ರೆಸ್‌ ಮನೆ : ಅರ್ಧ ಪಾಕಿಸ್ತಾನ ಹೇಳಿಕೆಗೆ ಯತ್ನಾಳ್‌ ಸಮರ್ಥನೆ

     

     ಸಾಮಾನ್ಯ ವ್ಯಕ್ತಿಯಾಗಲಿ ಅಥವಾ ವಿಐಪಿಯಾಗಲಿ ಎಲ್ಲರಿಗೂ ಜೈಲು ನಿಯಮಗಳು ಒಂದೇ ಆಗಿರುತ್ತವೆ. ನಿನ್ನೆಯಷ್ಟೇ ಅವರ ಪತ್ನಿ ಸುನೀತಾ ಮತ್ತು ಪಿಎ ವೈಭವ್ ಅವರನ್ನು ಅರ್ಧ ಗಂಟೆ ಭೇಟಿಯಾಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ತಮ್ಮ ವಕೀಲರನ್ನು ವಾರಕ್ಕೆ ಐದು ಬಾರಿ ಭೇಟಿಯಾಗಲು ಅವಕಾಶ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ನ್ಯಾಯಲಯ ಈ ಮನವಿಯನ್ನು ಪುರಸ್ಕರಿಸಲಿಲ್ಲ. ಯಾಕೆಂದರೆ ಜೈಲು ನಿಯಮಗಳ ಪ್ರಕಾರ ವಾರಕ್ಕೆ ಎರಡು ಬಾರಿ ಮಾತ್ರ ಸಭೆಗಳನ್ನು ನಡೆಸಲು ಅನುಮತಿ ನೀಡುತ್ತದೆ ಎಂದು ಹೇಳಿದರು.

    ಈ ಹಿಂದೆ ಬಂಧನಕ್ಕೆ ಒಳಗಾದ 12 ದಿನಗಳಲ್ಲಿಯೇ ಕೇಜ್ರಿವಾಲ್‌ 4.5 ಕೆಜಿ ಕಳೆದುಕೊಂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕಿ ಹಾಗೂ ಸಚಿವೆ ಆತಿಶಿ ಆರೋಪಿಸಿದ್ದರು. ಈ ಆರೋಪಕ್ಕೆ ತಿಹಾರ್‌ ಜೈಲು ಅಧಿಕಾರಿಗಳು ಪ್ರತಿಕ್ರಿಯಿಸಿ ಇಡಿ ಕಸ್ಟಡಿಯಲ್ಲಿದ್ದ ಕೇಜ್ರಿವಾಲ್‌ ಅವರನ್ನು ಜೈಲಿಗೆ ಕರೆತರುವಾಗ 65 ಕೆಜಿ ಇದ್ದು, ಈಗಲೂ ಅಷ್ಟೇ ತೂಕವಿದ್ದಾರೆ ಎಂದು ಹೇಳಿದ್ದರು.

  • ಕೇಜ್ರಿವಾಲ್‌ ಇತರರೊಂದಿಗೆ ಸೇರಿ ಪಿತೂರಿ ನಡೆಸಿದ್ದಾರೆ – ಜಾಮೀನು ಅರ್ಜಿ ವಜಾ

    ಕೇಜ್ರಿವಾಲ್‌ ಇತರರೊಂದಿಗೆ ಸೇರಿ ಪಿತೂರಿ ನಡೆಸಿದ್ದಾರೆ – ಜಾಮೀನು ಅರ್ಜಿ ವಜಾ

    ನವದೆಹಲಿ: ದೆಹಲಿ ಮದ್ಯ ಹಗರಣಕ್ಕೆ (Delhi Liquor Scam) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಬಂಧಿಸಿದ್ದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ (Delhi CM) ಅರವಿಂದ್ ಕೇಜ್ರಿವಾಲ್ (Aravind Kejriwal) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ (High Court) ಮಂಗಳವಾರ ವಜಾಗೊಳಿಸಿದೆ.

    ಅರವಿಂದ್ ಕೇಜ್ರಿವಾಲ್ ಅವರು “ಇತರರೊಂದಿಗೆ ಪಿತೂರಿ ನಡೆಸಿದ್ದಾರೆ” ಮತ್ತು”ಅಪರಾಧದ ಆದಾಯವನ್ನು ಬಳಸಿಕೊಳ್ಳುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ” ಎಂದು ಜಾರಿ ನಿರ್ದೇಶನಾಲಯ ಹಂಚಿಕೊಂಡ ವಿವರವನ್ನು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

    ರದ್ದುಗೊಂಡಿರುವ ಮದ್ಯ ನೀತಿಯನ್ನು ರೂಪಿಸುವಲ್ಲಿ ಮತ್ತು ಕಿಕ್‌ಬ್ಯಾಕ್‌ಗೆ ಬೇಡಿಕೆಯಿಡುವಲ್ಲಿ ಕೇಜ್ರಿವಾಲ್ ಭಾಗಿಯಾಗಿದ್ದಾರೆ ಎಂದು ಹೈಕೋರ್ಟ್ ಹೇಳಿದೆ. ಪೂರಕ ಸಾಕ್ಷ್ಮಧಾರಗಳಿರುವ ಹಿನ್ನಲೆಯಲ್ಲಿ ಕೇಜ್ರಿವಾಲ್‌ ಬಂಧನ ಕಾನೂನು ಬದ್ಧವಾಗಿದೆ ಎಂದು ಅಭಿಪ್ರಾಯಪಟ್ಟ ಕೋರ್ಟ್‌ ಕೇಜ್ರಿವಾಲ್‌ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

     

  • ಬೆಳಗ್ಗೆದ್ದು ಸೆಲ್‌ ಕ್ಲೀನ್‌, ಯೋಗ ನಂತ್ರ 2 ಪೀಸ್‌ ಬ್ರೆಡ್-‌ ಜೈಲಲ್ಲಿರೋ ಕೇಜ್ರಿವಾಲ್‌ ದಿನಚರಿ ಹೇಗಿದೆ?

    ಬೆಳಗ್ಗೆದ್ದು ಸೆಲ್‌ ಕ್ಲೀನ್‌, ಯೋಗ ನಂತ್ರ 2 ಪೀಸ್‌ ಬ್ರೆಡ್-‌ ಜೈಲಲ್ಲಿರೋ ಕೇಜ್ರಿವಾಲ್‌ ದಿನಚರಿ ಹೇಗಿದೆ?

    ನವದೆಹಲಿ: ಮದ್ಯ ಹಗರಣಕ್ಕೆ (Liquor Scam) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ತಮ್ಮ ಸೆಲ್‌ನಲ್ಲಿ ಧ್ಯಾನ, ಪುಸ್ತಕಗಳನ್ನು ಓದುವುದು ಮತ್ತು ಯೋಗ ಮಾಡುವುದರಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ.

    ಸೆಲ್‌ನಲ್ಲಿ ಟಿವಿ ವ್ಯವಸ್ಥೆ ಮಾಡಲಾಗಿದೆ. ಆದರೆ ಟಿವಿ ವೀಕ್ಷಿಸಲು ಕುರ್ಚಿ ಅಥವಾ ಸ್ಟೂಲ್ ಹೊಂದಿಲ್ಲ. ಇನ್ನು ಬೆಳಗ್ಗೆ ಬೇಗನೆ ಎದ್ದು ತನ್ನ ಸೆಲ್ ಅನ್ನು ಗುಡಿಸಿ, ಬಳಿಕ ಯೋಗ ಮಾಡುತ್ತಾರೆ. ನಂತರ ಉಪಾಹಾರಕ್ಕಾಗಿ ಎರಡು ಪೀಸ್ ಬ್ರೆಡ್ ಮತ್ತು ಚಹಾವನ್ನು ತೆಗೆದುಕೊಳ್ಳುತ್ತಾರೆ. ಬಳಿಕ ಜೈಲಿನ ಆವರಣದಲ್ಲಿ ನಡೆಯುತ್ತಾರೆ ಎಂದು ಜೈಲು ಮೂಲಗಳು ತಿಳಿಸಿವೆ.

    ದಿನದ ಬಹುಪಾಲು ಪುಸ್ತಕಗಳನ್ನು ಓದುತ್ತಾರೆ ಮತ್ತು ಯೋಗ ಮಾಡುತ್ತಾರೆ ಮತ್ತು ದಿನಕ್ಕೆ ಎರಡು ಬಾರಿ ಧ್ಯಾನ ಮಾಡುತ್ತಾರೆ. ಅವರಿಗೆ ಒದಗಿಸಿದ ಪುಸ್ತಕಗಳಲ್ಲಿ ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಸೇರಿದೆ. ಕೆಲವೊಮ್ಮೆ ತಮ್ಮ ಪಾಡಿಗೆ ಬರೆಯುತ್ತಾ ಕುಳಿತಿರುತ್ತಾರೆ. ಕೇಜ್ರಿವಾಲ್ ಅವರು ಸ್ವಲ್ಪ ಬೆರಗುಗೊಂಡಂತೆ ತೋರುತ್ತಿದ್ದಾರೆ. ಸ್ವಲ್ಪ ಗೊಂದಲಕ್ಕೊಳಗಾಗಿದ್ದಾರೆ. ಅವರು ಇನ್ನೂ ಜೈಲಿನೊಳಗೆ ತಮ್ಮ ಸುತ್ತಮುತ್ತಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪ್ರತಿಯೊಬ್ಬ ಶಾಸಕರು ಪ್ರತಿದಿನ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ- ಜೈಲಿನಿಂದ್ಲೇ ಕೇಜ್ರಿವಾಲ್‌ ಪತ್ರ

    ಕೇಜ್ರಿವಾಲ್ ಅವರ ತೂಕ, ಶುಗರ್‌ ಹಾಗೂ ರಕ್ತದೊತ್ತಡ ಸಂಬಂಧ ಹಿರಿಯ ವೈದ್ಯರೊಬ್ಬರು ದಿನಕ್ಕೆ ಎರಡು ಬಾರಿ ಮೇಲ್ವಿಚಾರಣೆ ಮಾಡುತ್ತಾರೆ. ದೆಹಲಿ ಮುಖ್ಯಮಂತ್ರಿ ಸಂಪೂರ್ಣವಾಗಿ ಚೆನ್ನಾಗಿದ್ದಾರೆ. ಬಿಪಿ ಉತ್ತಮವಾಗಿದೆ, ಶುಗರ್ ನಿಯಂತ್ರಣದಲ್ಲಿದೆ ಮತ್ತು ಅವರ ತೂಕ 65 ಕೆಜಿ ಸ್ಥಿರವಾಗಿದ್ದು, ತೂಕ ಕಡಿಮೆಯಾಗಿಲ್ಲ ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ. ಆದರೆ ಮಾರ್ಚ್ 21 ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದಾಗಿನಿಂದ 4.5 ಕೆಜಿ ಕಳೆದುಕೊಂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಮತ್ತು ದೆಹಲಿ ಸಚಿವ ಅತಿಶಿ ಆರೋಪಿಸಿದ್ದರು.

    55ರ ಹರೆಯದ ದೆಹಲಿ ಮುಖ್ಯಮಂತ್ರಿಗೆ ತಮ್ಮ ಸೆಲ್‌ನ ಹೊರಗೆ ನಡೆಯಲು ಅವಕಾಶ ನೀಡಲಾಗಿದೆ. ಆದರೆ ಭದ್ರತಾ ಕಾರಣಗಳಿಂದಾಗಿ ಅವರು ಇತರ ಕೈದಿಗಳೊಂದಿಗೆ ಮಾತನಾಡಲು ಸಾಧ್ಯವಿಲ್ಲ ಎಂದು ವರದಿ ಹೇಳಿದೆ.

    ಏಷ್ಯಾದ ಅತಿದೊಡ್ಡ ಜೈಲಿನಲ್ಲಿ ಇರಿಸಲಾಗಿರುವ ಮೊದಲ ಹಾಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್‌ನ ಜೈಲು ಸಂಖ್ಯೆ 2 ರ ಸಾಮಾನ್ಯ ವಾರ್ಡ್ ಸಂಖ್ಯೆ 3 ರಲ್ಲಿ 14×8 ಅಡಿ ಕೊಠಡಿಯಲ್ಲಿ ಇರಿಸಲಾಗಿದೆ. ಜೈಲು ಕೈದಿಗಳ ಪ್ರಕಾರ, ಎಲ್ಲಾ ಕೈದಿಗಳಂತೆ ಕೇಜ್ರಿವಾಲ್‌ ಅವರಿಗೂ ಅವರ ಸೆಲ್‌ ಶುಚಿಗೊಳಿಸಲೆಂದು ಪೊರಕೆ, ಬಕೆಟ್‌ ಮತ್ತು ಬಟ್ಟೆ ನೀಡಲಾಗಿದೆ.

  • ಸಿಎಂ ಸ್ಥಾನದಿಂದ ಕೇಜ್ರಿವಾಲ್ ಕೆಳಗಿಳಿಸುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್ ವಜಾ

    ಸಿಎಂ ಸ್ಥಾನದಿಂದ ಕೇಜ್ರಿವಾಲ್ ಕೆಳಗಿಳಿಸುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್ ವಜಾ

    ನವದೆಹಲಿ : ಆಮ್ ಆದ್ಮಿ ಪಕ್ಷದ (AAP) ನಾಯಕ ಅರವಿಂದ್ ಕೇಜ್ರಿವಾಲ್ (Aravind Kejriwal) ಅವರನ್ನು ದೆಹಲಿ ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಪರಿಗಣಿಸಲು ದೆಹಲಿ ಹೈಕೋರ್ಟ್ (Delhi High Court) ಗುರುವಾರ ನಿರಾಕರಿಸಿದೆ.

    ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ (Delhi Liquor Scam) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸುವಂತೆ ಉಲ್ಲೇಖಿಸಿ ಹಿಂದೂ ಸೇನಾ ಎಂಬ ಸಂಘಟನೆಯ ಅಧ್ಯಕ್ಷರಾಗಿರುವ ವಿಷ್ಣು ಗುಪ್ತಾ ಅವರು ಸಲ್ಲಿಸಿದ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾ. ಮನಮೋಹನ್ ನೇತೃತ್ವದ ವಿಭಾಗೀಯ ಪೀಠವು ಸಿಎಂ ಆಗಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದು ಕೇಜ್ರಿವಾಲ್ ಅವರ ವೈಯಕ್ತಿಕ ಕರೆ ಎಂದು ಹೇಳಿದೆ. ಇದನ್ನೂ ಓದಿ: ಪುಲ್ವಾಮ ದಾಳಿ ಮಾಡಿಸಿದ್ದು ಬಿಜೆಪಿ, ಸರ್ಜಿಕಲ್ ಸ್ಟ್ರೈಕ್ ನಾಟಕ: ಎಸ್.ಆರ್ ಶ್ರೀನಿವಾಸ್

     

    court order law

    ಕೆಲವೊಮ್ಮೆ ವೈಯಕ್ತಿಕ ಹಿತಾಸಕ್ತಿಯು ರಾಷ್ಟ್ರೀಯ ಹಿತಾಸಕ್ತಿಗೆ ಅಧೀನವಾಗಿರಬೇಕು ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿ ಕೋರ್ಟ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅಥವಾ ಮುಂದುವರಿಯುವುದು ಅದು ಅವರ ವೈಯಕ್ತಿಕ ನಿರ್ಧಾರ. ಈ ವಿಷಯವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

    ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅಥವಾ ಭಾರತದ ರಾಷ್ಟ್ರಪತಿಗಳು ಈ ವಿಷಯದ ಬಗ್ಗೆ ಕರೆಯನ್ನು ತೆಗೆದುಕೊಳ್ಳುಬಹುದು. ಸರ್ಕಾರ ಕಾರ್ಯನಿರ್ವಹಿಸುತ್ತಿಲ್ಲ ಎಂದು ನಾವು ಹೇಗೆ ಘೋಷಿಸಲು ಸಾಧ್ಯ? ಅದನ್ನು ನಿರ್ಧರಿಸಲು ಎಲ್‌ಜಿ ಸಂಪೂರ್ಣ ಸಮರ್ಥರಾಗಿದ್ದಾರೆ. ಅವರಿಗೆ ನಮ್ಮ ಮಾರ್ಗದರ್ಶನ ಅಗತ್ಯವಿಲ್ಲ. ಅವರಿಗೆ ಸಲಹೆ ನೀಡಲು ನಾವು ಯಾರೂ ಅಲ್ಲ. ಅವರು ಕಾನೂನಿನ ಪ್ರಕಾರ ಏನು ಮಾಡಬೇಕೋ ಅದನ್ನು ಮಾಡುತ್ತಾರೆ ಎಂದು ನ್ಯಾಯಾಲಯ ವಿಚಾರಣೆ ಸಮಯದಲ್ಲಿ ಹೇಳಿದೆ. ಇದನ್ನೂ ಓದಿ: ನಾಮಪತ್ರ ಸಲ್ಲಿಸಿದ ಡಾ.ಮಂಜುನಾಥ್ – ಡಿಕೆಸು ನೋಡಿ ಮೋದಿ ಘೋಷಣೆ ಕೂಗಿದ ಕಾರ್ಯಕರ್ತರು

    ಸಮಸ್ಯೆಯನ್ನು ನಿರ್ಧರಿಸಲು ರಾಷ್ಟ್ರಪತಿ ಅಥವಾ ಎಲ್‌ಜಿ ಸಮರ್ಥರಿದ್ದಾರೆ, ಅವರನ್ನು ಸಂಪರ್ಕಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯವಿದೆ ಎಂದು ಕೋರ್ಟ್ ಹೇಳಿತು. ಕೋರ್ಟ್ ಸಲಹೆ ಮೇರೆಗೆ ಅರ್ಜಿದಾರರು ಅರ್ಜಿಯನ್ನು ಹಿಂಪಡೆದರು. ಕೇಜ್ರಿವಾಲ್ ಅವರನ್ನು ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಲು ಇದು ಎರಡನೇ ಪಿಐಎಲ್ ಆಗಿದ್ದು, ಇದನ್ನು ಹೈಕೋರ್ಟ್ ವಜಾಗೊಳಿಸಿದೆ.

  • ಜೈಲು ಸೇರಿದ ಕೇಜ್ರಿವಾಲ್‌ 4.5 ಕೆಜಿ ಕಳೆದುಕೊಂಡಿದ್ದಾರೆ: ಆಪ್‌ ಗಂಭೀರ ಆರೋಪ

    ಜೈಲು ಸೇರಿದ ಕೇಜ್ರಿವಾಲ್‌ 4.5 ಕೆಜಿ ಕಳೆದುಕೊಂಡಿದ್ದಾರೆ: ಆಪ್‌ ಗಂಭೀರ ಆರೋಪ

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಮಾರ್ಚ್ 21 ರಂದು ಬಂಧಿಸಿದಾಗಿನಿಂದ 4.5 ಕೆಜಿ ಕಳೆದುಕೊಂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (AAP) ನಾಯಕಿ ಮತ್ತು ಸಚಿವ ಅತಿಶಿ (Atishi) ಇಂದು ಹೇಳಿದ್ದಾರೆ.

    ಇಂದು ಬೆಳಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅತಿಶಿ, ಕೇಜ್ರಿವಾಲ್ ಅವರು ಮಧುಮೇಹದಿಂದ ಬಳಲುತ್ತಿದ್ದಾರೆ. ಆರೋಗ್ಯ ಸಮಸ್ಯೆ ಇದ್ದರೂ ಅವರು ರಾಷ್ಟ್ರದ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಬಂಧನಗೊಂಡ ದಿನದಿಂದ ಕೇಜ್ರಿವಾಲ್ ಅವರು 4.5 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಇದು ತುಂಬಾ ಕಳವಳಕಾರಿಯಾಗಿದೆ. ಬಿಜೆಪಿ ಅವರ ಆರೋಗ್ಯವನ್ನು ಅಪಾಯಕ್ಕೆ ತಳ್ಳುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಏನಾದರೂ ಸಂಭವಿಸಿದರೆ, ದೇಶವೇ ಅಲ್ಲ, ದೇವರು ಕೂಡ ಅವರನ್ನು ಕ್ಷಮಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಯಾರೇ ಹೇಳಲಿ, ಬಿಡಲಿ ನಮ್ಮ ಕ್ಷೇತ್ರದಲ್ಲಿ ಸುಧಾಕರ್‌ಗೆ ಬಹುಮತ ಕೊಡುತ್ತೇವೆ: ಎಸ್‌ಆರ್‌ ವಿಶ್ವನಾಥ್‌

    ಮದ್ಯ ಹಗರಣಕ್ಕೆ (Liquor Scam) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ED) ಬಂಧನಕ್ಕೊಳಗಾದ ಕೇಜ್ರಿವಾಲ್‌ ಅವರನ್ನು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ ಸೋಮವಾರ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಯಿತು.

    ಮುಖ್ಯಮಂತ್ರಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮನೆಯ ಆಹಾರವನ್ನು ನೀಡಲಾಗುತ್ತದೆ. ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಗಾಗಿ ಅವರ ಸೆಲ್ ಬಳಿ ಕ್ವಿಕ್‌ ರೆಸ್ಪಾನ್ಸ್‌ ತಂಡವನ್ನು ನಿಯೋಜಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

  • ದೆಹಲಿ ಮದ್ಯ ಹಗರಣದಲ್ಲಿ ಕೇಜ್ರಿವಾಲ್‌ ಕಿಂಗ್‌ಪಿನ್‌: ಇಡಿ

    ದೆಹಲಿ ಮದ್ಯ ಹಗರಣದಲ್ಲಿ ಕೇಜ್ರಿವಾಲ್‌ ಕಿಂಗ್‌ಪಿನ್‌: ಇಡಿ

    ನವದೆಹಲಿ: ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ದೆಹಲಿ ಮದ್ಯ ಹಗರಣದ (Delhi Liquor Excise Scam) ಕಿಂಗ್‌ಪಿನ್‌ ಎಂದು ಜಾರಿ ನಿರ್ದೇಶನಾಲಯ (ED) ಹೇಳಿದೆ.

    ಗುರುವಾರ ಬಂಧನಕ್ಕೆ ಒಳಗಾದ ಕೇಜ್ರಿವಾಲ್‌ ಅವರನ್ನು ಇಡಿ ಅಧಿಕಾರಿಗಳು ಇಂದು ಪಿಎಂಎಲ್‌ಎ (PMLA) ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಇದನ್ನೂ ಓದಿ: ಏನಿದು ದೆಹಲಿ ಮದ್ಯ ಹಗರಣ? ಕೇಜ್ರಿವಾಲ್‌ ಮೇಲಿರುವ ಆರೋಪ ಏನು? ಬಂಧನವಾದ ಪ್ರಮುಖರು ಯಾರು?

     

    ಈ ವೇಳೆ ಇಡಿ ಪರ ವಕೀಲರು, ಕೇಜ್ರಿವಾಲ್ ಕೆಲವು ವ್ಯಕ್ತಿಗಳಿಗೆ ಕಿಕ್-ಬ್ಯಾಕ್ ಸ್ವೀಕರಿಸಲು ಸೂಚಿಸಿದರು. ಈ ಹಣವನ್ನು ಆಪ್‌ ಗೋವಾ ಚುನಾವಣೆಯಲ್ಲಿ ಬಳಸಲಾಗಿತ್ತು. ಮದ್ಯದ ನೀತಿಯ ರಚನೆಯಲ್ಲಿ ಅವರು ನೇರವಾಗಿ ಭಾಗಿಯಾಗಿದ್ದು ಅವರೇ ಕಿಂಗ್‌ ಪಿನ್‌ ಆಗಿದ್ದು, ಕಿಕ್‌ಬ್ಯಾಕ್‌ಗೆ ಬೇಡಿಕೆ ಇಟ್ಟಿದ್ದರು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕೇಜ್ರಿವಾಲ್‌ ಅಕ್ರಮದ ಬಗ್ಗೆ ಸಾಕ್ಷ್ಯಗಳೊಂದಿಗೆ ಕಾಂಗ್ರೆಸ್‌ ದೂರು ನೀಡಿತ್ತು: ಬಿಜೆಪಿ ತಿರುಗೇಟು

     

    ಇಡಿ ಹೇಳಿದ್ದೇನು?
    ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರನ್ನೂ ಬಂಧಿಸಲಾಗಿದ್ದು ಅವರಿಗೂ ಜಾಮೀನು ನೀಡಿಲ್ಲ. ಸಹ ಆರೋಪಿ ಕೆ ಕವಿತಾ ಅವರ ಹೇಳಿಕೆಯನ್ನೂ ತೆಗೆದುಕೊಳ್ಳಲಾಗಿದೆ. ಎಎಪಿ ಮಾಜಿ ಸಂವಹನ ಉಸ್ತುವಾರಿ ವಿಜಯ್ ನಾಯರ್ ಅರವಿಂದ್ ಕೇಜ್ರಿವಾಲ್ ಅವರ ಪರವಾಗಿ ಕೆಲಸ ಮಾಡುತ್ತಿದ್ದರು.

    ವಿಜಯ್ ನಾಯರ್ ಅವರು ಕೇಜ್ರಿವಾಲ್ ಅವರೊಂದಿಗೆ ಅತ್ಯಂತ ನಿಕಟವಾಗಿ ಕೆಲಸ ಮಾಡುತ್ತಿದ್ದು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕೇಜ್ರಿವಾಲ್ ಪಂಜಾಬ್ ಚುನಾವಣೆಗೆ ‘ಸೌತ್ ಗ್ರೂಪ್’ನಿಂದ ಕಿಕ್‌ಬ್ಯಾಕ್‌ ನೀಡುವಂತೆ ಒತ್ತಾಯಿಸಿದರು. ಈ ಹೇಳಿಕೆಯನ್ನು ಸಾಬೀತುಪಡಿಸಲು ನಮ್ಮ ಬಳಿ ಸಾಕ್ಷ್ಯಗಳಿವೆ. ನಗದು ವರ್ಗಾವಣೆ ಎರಡು ಬಾರಿ ನಡೆದಿದೆ. ಕೇಜ್ರಿವಾಲ್ ಅವರು ಕವಿತಾ ಅವರನ್ನು ಭೇಟಿಯಾಗಿ ದೆಹಲಿ ಅಬಕಾರಿ ನೀತಿಯಲ್ಲಿ ಒಟ್ಟಾಗಿ ಕೆಲಸ ಮಾಡಬೇಕೆಂದು ಹೇಳಿದ್ದರು.

    ದೆಹಲಿ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿತ್ತು. ಆದರೆ ಅದು ನೆಪಮಾತ್ರದ ಸಮಿತಿಯಾಗಿತ್ತು. ಲಂಚವನ್ನು ಸ್ವೀಕರಿಸಲು ಮತ್ತು ಲಂಚ ನೀಡಿದ ವ್ಯಕ್ತಿಗಳಿಗೆ ಮರುಪಾವತಿ ಮಾಡಲು ಸಾಧ್ಯವಾಗುವಂತೆ ನೀತಿಯನ್ನು ಮಾಡಲಾಗಿದೆ.

    ಈ ಪ್ರಕರಣದ ಅವಧಿ ವೇಳೆ ಡಿಸಿಎಂ ಆಗಿದ್ದ ಮನೀಶ್ ಸಿಸೋಡಿಯಾ ಜೊತೆಗೆ ಕೇಜ್ರಿವಾಲ್ ನೇರ ಸಂಪರ್ಕದಲ್ಲಿದ್ದರು. ಆಪ್ ಸಂವಹನ ವಿಭಾಗದ ವಿಜಯ್ ನಾಯರ್ ಕೇಜ್ರಿವಾಲ್ ಬಳಿಯ ಮನೆಯಲ್ಲಿ ತಂಗಿದ್ದರು. ದೆಹಲಿ ಸರ್ಕಾರದ ಸಚಿವರಾದ ಕೈಲಾಶ್ ಗಹ್ಲೋಟ್ ಅವರಿಗೆ ನೀಡಲಾದ ಮನೆಯಲ್ಲಿ ಅವರು ತಂಗಿದ್ದರು. ವಿಜಯ್‌ ನಾಯರ್‌ ಸೌತ್ ಗ್ರೂಪ್ ಮತ್ತು ಆಪ್‌ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದರು.

    ಅರವಿಂದ್ ಕೇಜ್ರಿವಾಲ್ ಪರವಾಗಿ ಸೌತ್ ಗ್ರೂಪ್‌ನಿಂದ ನಾಯರ್ ಕಿಕ್‌ಬ್ಯಾಕ್‌ಗಳನ್ನು ಕೇಳಿದ್ದರು. ಇದು ಹೇಳಿಕೆಗಳಿಂದ ದೃಢೀಕರಿಸಲ್ಪಟ್ಟಿದೆ. ಕಿಕ್ ಬ್ಯಾಕ್ ನೀಡಿದ ಹಿನ್ನಲೆ ದೆಹಲಿಯಲ್ಲಿ ಸೌತ್ ಗ್ರೂಪ್ ನಿಯಂತ್ರಣ ಸಾಧಿಸಿತ್ತು. ಎಲ್ಲ ಮದ್ಯ ವ್ಯಾಪಾರಿಗಳಿಂದ ಕಿಕ್ ಬ್ಯಾಕ್ ಪಡೆಯಲಾಗಿದೆ. ಒಟ್ಟು 600 ಕೋಟಿ ರೂ.ಗೂ ಅಧಿಕ ಲಾಭ ಮಾಡಲಾಗಿದೆ.

    ಹವಾಲಾ ಮೂಲಕ ಗೋವಾ ಚುನಾವಣೆ ವೇಳೆ 45 ಕೋಟಿ ರೂ ನೀಡಲಾಗಿತ್ತು. ಇದು ಹೇಳಿಕೆಯಿಂದ ಮಾತ್ರವಲ್ಲ, ಸಿಡಿಆರ್‌ಗಳಿಂದಲೂ ದೃಢೀಕರಣವಾಗಿದೆ. ಹಣದ ಮೂಲವನ್ನು ಪರಿಶೀಲಿಸಿದ್ದು ನಾಲ್ಕು ಮೂಲಗಳಿಂದ ಹಣ ಗೋವಾಕ್ಕೆ ಬಂದಿದೆ.