Tag: ಮದ್ಯ ಸೇವನೆ

  • ಕುಡಿಯಲು ಹಣ ಕೊಡಲಿಲ್ಲ ಅಂತ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ

    ಕುಡಿಯಲು ಹಣ ಕೊಡಲಿಲ್ಲ ಅಂತ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ

    ಬೆಂಗಳೂರು: ಕತ್ತೆಗೆ ವಯಸ್ಸಾದಂತೆ ವಯಸ್ಸಾದ್ರು ಎಣ್ಣೆ (Drinks) ಕುಡಿಯಲು ವೃದ್ಧ ತಾಯಿಯ ಬಳಿ ಪ್ರತಿದಿನ ಹಣ ಕೇಳ್ತಿದ್ದ. ಆ ತಾಯಿ ತಾನೆ ಎಲ್ಲಿಂದ ಹಣ ತಂದು ಕೊಡಬೇಕು. ಇವತ್ತು ಹಣ ಕೊಡಲಿಲ್ಲ ಅಂತ 82 ವರ್ಷದ ವೃದ್ಧ ತಾಯಿಯನ್ನ ಪಾಪಿ ಮಗ ಹತ್ಯೆ ಮಾಡಿದ್ದಾನೆ.

    ವೃದ್ಧ ತಾಯಿಯನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕಾದ ಪಾಪಿ ಮಗ, ಕುಡಿಯಲು ಹಣ ಕೊಡಲಿಲ್ಲ ಅಂತ 82 ವರ್ಷದ ವೃದ್ಧ ತಾಯಿಯನ್ನು ಹತ್ಯೆ ಮಾಡಿದ್ದಾನೆ. 82 ವರ್ಷದ ಶಾಂತಾಬಾಯಿ ಕೊಲೆಯಾದ (Murder) ತಾಯಿ. ಇನ್ನು ಕೊಲೆ ಹಂತಕ ಮಗ 52 ವರ್ಷದ ಈ ಮಹೆಂದ್ರ ಸಿಂಗ್‌. ಬಗಲಗುಂಟೆಯ ಮುನೇಶ್ವರ ನಗರದಲ್ಲಿ ನಿನ್ನೆ (ಗುರುವಾರ) ತಡರಾತ್ರಿ 1.30ಕ್ಕೆ ಕೊಲೆ ಮಾಡಿ ಮಗ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಹೆಂಡತಿಯನ್ನು ಕೊಂದು ಚರಂಡಿಗೆಸೆದ ದೆಹಲಿ ಉದ್ಯಮಿ – ಪತ್ನಿಯ ಮೂಗುತಿಯಿಂದ ಗುರುತು ಪತ್ತೆ

    ಕುಡಿತದ ಚಟಕ್ಕೆ ಬಿದ್ದಿದ್ದ ಮಹೇಂದ್ರ ಸಿಂಗ್ ಕೆಲಸಕ್ಕೆ ಹೋಗದೇ ಅಲೆಯುತ್ತಿದ್ದನಂತೆ. ನಿತ್ಯ ಹಣಕ್ಕಾಗಿ ತಾಯಿಗೆ ಹಿಂಸೆ ಕೊಟ್ಟು, ನಿಂದಿಸುತ್ತಿದ್ದ. ಗುರುವಾರ ಹಣ ಕೊಡದೇ ಇದಿದ್ದಕ್ಕೆ ಕಿರಿಕ್ ತೆಗೆದು ಕಬ್ಬಿಣದ ರಾಡ್ ನಿಂದ (Iron Rod) ತಾಯಿಯ ತಲೆಗೆ ಹೊಡೆದು ಕೊಲೆ‌ಮಾಡಿ ತನ್ನ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಹೆಂಡತಿಯನ್ನು ಮನೆಗೆ ಕರೆದ ಗಂಡನಿಗೆ ಚಾಕು ಇರಿದ ಬಾಮೈದ!

    ಈ ಬಗ್ಗೆ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ (Bagalagunte Police Station) ಪ್ರಕರಣ ದಾಖಲಾಗಿದ್ದು, ಹಂತಕ ಮಗನಿಗಾಗಿ ಹುಡುಕಾಟ ನಡೆಯುತ್ತಿದೆ. ಇದನ್ನೂ ಓದಿ: ಜಾತಿಗಣತಿ ವರದಿ ಸೀಲ್ ಓಪನ್… ಕ್ಯಾಬಿನೆಟ್‌ನಲ್ಲಿ ಮಂಡನೆ; ಮುಂದಿನ‌ ಕ್ಯಾಬಿನೆಟ್‌ಗೆ ಕ್ಲೈಮ್ಯಾಕ್ಸ್..!

  • ಬಂಗಾಳದ ಬಾರ್‌ಗಳಲ್ಲಿ ಮಹಿಳೆಯರಿಗೆ ಕೆಲಸಕ್ಕೆ ಅವಕಾಶ – ಹೊಸ ಮಸೂದೆ ಅಂಗೀಕಾರ

    ಬಂಗಾಳದ ಬಾರ್‌ಗಳಲ್ಲಿ ಮಹಿಳೆಯರಿಗೆ ಕೆಲಸಕ್ಕೆ ಅವಕಾಶ – ಹೊಸ ಮಸೂದೆ ಅಂಗೀಕಾರ

    ಕೋಲ್ಕತ್ತಾ: ಮಹಿಳೆಯರಿಗೆ ಬಾರ್‌ಗಳಲ್ಲಿ ಕೆಲಸ ಮಾಡಲು ಹಾಗೂ ಮದ್ಯ ಸೇವಿಸಲು ಅವಕಾಶ ಕಲ್ಪಿಸುವ ಪ್ರಮುಖ ಮಸೂದೆಯೊಂದನ್ನು ಪಶ್ಚಿಮಬಂಗಾಳ (West Bengal) ವಿಧಾನಸಭೆ ಅಂಗೀಕರಿಸಿದೆ. ಈ ಹೊಸ ಕಾನೂನು ರಾಜ್ಯದಲ್ಲಿ ಲಿಂಗ ಸಮಾನತೆ ಮತ್ತು ಉದ್ಯೋಗ ಅವಕಾಶಗಳನ್ನು ವಿಸ್ತರಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.

    ರಾಜ್ಯ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ಪಶ್ಚಿಮ ಬಂಗಾಳ ಹಣಕಾಸು ಮಸೂದೆ- 2025 ಅನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಈ ಮಸೂದೆಯು 1909ರ ಬಂಗಾಳ ಅಬಕಾರಿ ಕಾಯ್ದೆಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸುತ್ತದೆ. ಇದರಲ್ಲಿ ಆನ್-ಕೆಟಗರಿ ಮದ್ಯದ ಅಂಗಡಿಗಳಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳುವುದರ ಮೇಲಿನ ನಿಷೇಧವನ್ನು ತೆಗೆದುಹಾಕುವುದು ಹಾಗೂ ಅಂಗಡಿಗಳ ಆವರಣದಲ್ಲಿ ಮದ್ಯ ಸೇವನೆಯನ್ನು ಅನುಮತಿಸಲಾಗಿದೆ.ಇದನ್ನೂ ಓದಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವೈಟಿಪಿಎಸ್‌ನ 1,500 ಗುತ್ತಿಗೆ ನೌಕರರಿಂದ ಉಗ್ರ ಹೋರಾಟ

    ಈ ಮಸೂದೆಯ ಪ್ರಕಾರ, ಮಹಿಳೆಯರು ಈಗ ಬಾರ್‌ಗಳಲ್ಲಿ ಉದ್ಯೋಗ ಮಾಡಲು ಅರ್ಹರಾಗಿದ್ದಾರೆ. ಇದು ಈ ಹಿಂದೆ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಕ್ಷೇತ್ರವಾಗಿತ್ತು. ಈ ಬದಲಾವಣೆಯು ಮಹಿಳೆಯರಿಗೆ ಹೊಸ ಆರ್ಥಿಕ ಅವಕಾಶಗಳನ್ನು ತೆರೆಯುವ ಜೊತೆಗೆ ಸಾಂಪ್ರದಾಯಿಕ ಲಿಂಗ ಆಧಾರಿತ ಉದ್ಯೋಗ ಮಿತಿಗಳನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ.

    ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಈ ಮಸೂದೆಯನ್ನು ಬೆಂಬಲಿಸಿದ ಶಾಸಕರು, ಮಹಿಳೆಯರಿಗೆ ಸಮಾನ ಉದ್ಯೋಗ ಅವಕಾಶಗಳನ್ನು ಒದಗಿಸುವುದು ಸಮಾಜದ ಪ್ರಗತಿಗೆ ಅವಶ್ಯಕ ಎಂದು ವಾದಿಸಿದರು. ಆದರೆ, ಕೆಲವು ಶಾಸಕರು ಸುರಕ್ಷತೆ ಮತ್ತು ಕೆಲಸದ ವಾತಾವರಣದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಈ ಮಸೂದೆ ಈಗ ರಾಜ್ಯಪಾಲರ ಅಂಗೀಕಾರಕ್ಕಾಗಿ ಕಾಯುತ್ತಿದ್ದು, ರಾಜ್ಯಪಾಲರ ಅಂಗೀಕಾರದ ಬಳಿಕ ಇದು ಕಾನೂನಾಗಿ ಜಾರಿಗೆ ಬರಲಿದೆ.ಇದನ್ನೂ ಓದಿ: ಜೋರಾಯ್ತು ಛತ್ರಿ ಪಾಲಿಟಿಕ್ಸ್ – ನನಗೆ ಅಧಿಕಾರದ ಮದ, ಕಮ್ಮಿ ಮಾಡಲಿ : ಡಿಕೆಶಿ ತಿರುಗೇಟು

  • ಮದ್ಯ ಕುಡಿಸಿ ವಿದ್ಯಾರ್ಥಿಯೊಂದಿಗೆ ಸೆಕ್ಸ್‌ – ಪಾಠ ಹೇಳಿಕೊಡಲು ಹೋದ ಶಿಕ್ಷಕಿ ಹೀಗೆ ಮಾಡೋದಾ?

    ಮದ್ಯ ಕುಡಿಸಿ ವಿದ್ಯಾರ್ಥಿಯೊಂದಿಗೆ ಸೆಕ್ಸ್‌ – ಪಾಠ ಹೇಳಿಕೊಡಲು ಹೋದ ಶಿಕ್ಷಕಿ ಹೀಗೆ ಮಾಡೋದಾ?

    – ನೆಚ್ಚಿನ ವಿದ್ಯಾರ್ಥಿಗಳಿಗೆ ನಗ್ನ ಫೋಟೋ ಕಳಿಸುತ್ತಿದ್ದಳಂತೆ ಶಿಕ್ಷಕಿ

    ವಾಷಿಂಗ್ಟನ್‌: ತನ್ನ ವಿದ್ಯಾರ್ಥಿಗಳಿಗೆ (Students) ಆಗಾಗ್ಗೆ ನಗ್ನ ಫೋಟೋಗಳನ್ನು ಕಳುಹಿಸೋದು, ಬಾರ್‌ಗಳಲ್ಲಿ ಮದ್ಯ ತಂದು ಕುಡಿಸುವುದರ ಜೊತೆಗೆ ವಿದಾರ್ಥಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಆರೋಪಗಳ ಮೇಲೆ ಲೂಯಿಸಿಯಾಬದ ಶೀಕ್ಷಕಿಯನ್ನು (US School Teacher) ಬಂಧಿಸಿರುವ ಘಟನೆ ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ನಡೆದಿದೆ.

    ಅಲೆಕ್ಸಾ ವಿಂಗರ್ಟರ್‌ (35) ಬಂಧಿತ ಶಿಕ್ಷಕಿ. ತನ್ನ ಪುರುಷ ವಿದ್ಯಾರ್ಥಿಗಳಿಗೆ ಸ್ಥಳೀಯ ಬಾರ್‌ಗಳಿಂದ ಮದ್ಯ (Alcohol) ತಂದು ಕೊಡುವುದಲ್ಲದೇ, ಓರ್ವ ವಿದ್ಯಾರ್ಥಿಯೊಂದಿಗೆ ಸೆಕ್ಸ್‌ ನಡೆಸಿದ್ದಾಳೆ ಎಂಬ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಕಳೆದ ಮಾರ್ಚ್‌ ತಿಂಗಳಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕ್ರೀಡಾ ವಿದ್ಯಾರ್ಥಿಯೊಂದಿಗೆ ಕಾರಿನಲ್ಲಿ ಸೆಕ್ಸ್‌ – ಶಿಕ್ಷಕಿಯನ್ನ ರೆಡ್‌ಹ್ಯಾಂಡಾಗಿ ಹಿಡಿದು ಪೊಲೀಸರಿಗೊಪ್ಪಿಸಿದ ತಾಯಿ

    ಯಾವ ಸಿನಿಮಾಗೂ ಕಡಿಮೆಯಿಲ್ಲ ಈಕೆ ಸ್ಟೋರಿ?
    ಹೌದು. ಶಾಲೆಗೆ ಹೋಗಿ ಪಾಠ ಹೇಳಿಕೊಡಬೇಕಾದ ಶಿಕ್ಷಕಿ ಸ್ಥಳೀಯ ಬಾರ್‌ಗಳಿಂದ ಮದ್ಯ ತಂದು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದಳಂತೆ, ಅಷ್ಟೇ ಕೆಲ ವಿದ್ಯಾರ್ಥಿಗಳಿಗೆ ತನ್ನ ಬೆತ್ತಲೆ ಫೋಟೋಗಳನ್ನು ಕಳಿಸಿಕೊಡುತ್ತಿದ್ದಂತೆ. ಇಂತಹ ಕೃತ್ಯ ನಡೆಸುತ್ತಿದ್ದಾಲೇ ಮದ್ಯ ಕುಡಿದು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಓರ್ವ ವಿದ್ಯಾರ್ಥಿಯೊಂದಿಗೆ ಲೈಂಗಿಕ ಕ್ರಿಯೆ ಸಹ ನಡೆಸಿದ್ದಾಳೆ ಎಂದು ಪೊಲೀಸ ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಗಾಳಿಯಲ್ಲಿ ಹಾರಿ ಮರಕ್ಕೆ ಅಪ್ಪಳಿಸಿದ ಕಾರು – ಅಮೆರಿಕದಲ್ಲಿ ಮೂವರು ಭಾರತದ ಮಹಿಳೆಯರು ಸಾವು

    ಕಳೆದ ಮಾರ್ಚ್‌ನಲ್ಲಿ ಈಕೆಯನ್ನು ಬಂಧಿಸಿದ ಬಳಿಕ ಸ್ಲೈಡೆಲ್ ಪೊಲೀಸರು ಪ್ರಾಥಮಿಕ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆಕೆಯ ಮೊಬೈಲ್‌ ಅನ್ನು ಪರಿಶೀಲಿಸಿದಾಗ, ವಿದ್ಯಾರ್ಥಿಗಳಿಗೆ ಬೆತ್ತಲೆ ಫೋಟೋಗಳನ್ನು ಕಳುಹಿಸಿರುವುದು ಹಾಗೂ ಸೆಕ್ಸ್‌ ಚಾಟ್‌ ನಡೆಸಿರುವುದು ಬಯಲಾಗಿದೆ. ಅಲ್ಲದೇ ಈಕೆ 18 ವರ್ಷ ಪುರುಷ ವಿದ್ಯಾರ್ಥಿಯೊಂದಿಗೆ ಸೆಕ್ಸ್‌ ನಡೆಸಿದ್ದಾಳೆ ಎಂಬುದೂ ತನಿಖೆಯಲ್ಲಿ ಪುರಾವೆಗಳೊಂದಿಗೆ ಸಾಬೀತಾಗಿದೆ. ಈಕೆ ತನ್ನ ವಿದ್ಯಾರ್ಥಿಗಳಿಗೆ ಸ್ಥಳೀಯ ಬಾರ್‌ಗಳಿಂದ ಮದ್ಯ ತಂದು ಕೊಡುತ್ತಿದ್ದುದ್ದಕ್ಕೆ ವೀಡಿಯೋ ಆಧಾರಗಳು ಸಿಕ್ಕಿವೆ ಈ ಹಿನ್ನೆಲೆಯಲ್ಲಿ ಆಕೆಯನ್ನ ಮುಂದಿನ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಹೇಳಲಾಗಿದೆ.

    ಟೀಚರ್‌ ಸಸ್ಪೆಂಡ್‌: ವಿಂಗರ್ಟರ್‌ ಸೇಂಟ್ ಟಮ್ಮನಿ ಪ್ಯಾರಿಷ್ ಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದಳು, ಆದ್ರೆ ಯಾವ ವಿಷಯ ಬೋಧಿಸುತ್ತಿದ್ದಳು ಎಂಬುದು ತಿಳಿದುಬಂದಿಲ್ಲ. ಸದ್ಯ ಶಾಲಾ ಮಂಡಳಿ ಆಕೆಯನ್ನ ಕೆಲಸದಿಂದ ವಜಾಗೊಳಿಸಿದೆ. ನಮ್ಮ ವಿದ್ಯಾರ್ಥಿಗಳ ಸುರಕ್ಷತೆಗೆ ಧಕ್ಕೆ ತರುವ ಯಾವುದೇ ನಡವಳಿಕೆಯನ್ನು ಸಹಿಸುವುದಿಲ್ಲ ಎಂದು ಮಂಡಳಿ ಹೇಳಿದೆ. ಈ ಶಾಲೆಯಲ್ಲಿ ಸುಮಾರು 40,000 ವಿದ್ಯಾರ್ಥಿಗಳಿದ್ದಾರೆ. ಇದನ್ನೂ ಓದಿ: ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ ಮೇಲೆ ದಾಳಿ ಕೇಸ್‌ – ಖಲಿಸ್ತಾನಿ ಪರ ಆರೋಪಿ ಬಂಧನ

  • ಹೊಸ ವರ್ಷಕ್ಕೂ ಮುನ್ನವೇ ಗುಡ್‌ನ್ಯೂಸ್‌ – ಗುಜರಾತ್‌ನ GIFT ಸಿಟಿಯಲ್ಲಿ ಮದ್ಯ ಸೇವನೆಗೆ ಅವಕಾಶ

    ಹೊಸ ವರ್ಷಕ್ಕೂ ಮುನ್ನವೇ ಗುಡ್‌ನ್ಯೂಸ್‌ – ಗುಜರಾತ್‌ನ GIFT ಸಿಟಿಯಲ್ಲಿ ಮದ್ಯ ಸೇವನೆಗೆ ಅವಕಾಶ

    ಗಾಂಧಿನಗರ: ಗುಜರಾತ್‌ನಲ್ಲಿ ಮದ್ಯ ಸೇವನೆ ಮತ್ತು ಮಾರಾಟಕ್ಕೆ ಅಲ್ಲಿನ ಸರ್ಕಾರ ಅವಕಾಶ ಕಲ್ಪಿಸಿದೆ. ಗುಜರಾತ್ ಸರ್ಕಾರವು ಗುಜರಾತ್ ಇಂಟರ್‌ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (GIFT City) ನಲ್ಲಿ ವೈನ್ ಮತ್ತು ಡೈನ್ (Wine and Dine) ನೀಡುವ ಹೋಟೆಲ್‌, ರೆಸ್ಟೋರೆಂಟ್ಸ್‌ ಹಾಗೂ ಕ್ಲಬ್‌ಗಳಲ್ಲಿ ಮದ್ಯ ಸೇವನೆಗೆ ಅನುಮತಿ ನೀಡಿದೆ.

    ರಾಜಧಾನಿ ಗಾಂಧಿನಗರದ ಸಂಪೂರ್ಣ ಗಿಫ್ಟ್ ಸಿಟಿಯಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳು ಹಾಗೂ ಮಾಲೀಕರಿಗೆ ಮದ್ಯ ಸೇವನೆ ಪರವಾನಗಿಯನ್ನು ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಬಹುಮಹಡಿ ಕಟ್ಟಡದ 8ನೇ ಮಹಡಿಯಿಂದ ಬಿದ್ದ ಲಿಫ್ಟ್- ಐವರು ಟೆಕ್ಕಿಗಳು ಐಸಿಯುಗೆ ದಾಖಲು

    ಸಾಂದರ್ಭಿಕ ಚಿತ್ರ

    ಇದಲ್ಲದೇ, ಪ್ರತಿ ಕಂಪನಿಯ ಅಧಿಕೃತ ಸಂದರ್ಶಕರು ಆ ಕಂಪನಿಯ ಕಾಯಂ ಉದ್ಯೋಗಿಗಳ ಉಪಸ್ಥಿತಿಯಲ್ಲಿ ತಾತ್ಕಾಲಿಕ ಪರವಾನಗಿ ಹೊಂದಿರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಲಬ್‌ಗಳಲ್ಲಿ ಮದ್ಯ ಸೇವಿಸಲು ಅವಕಾಶ ಕಲ್ಪಿಸಲಾಗಿದೆ.

    ಗಿಫ್ಟ್ ಸಿಟಿಯಲ್ಲಿರುವ ಅಥವಾ ಬರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಅಥವಾ ಕ್ಲಬ್‌ಗಳು ಅಲ್ಲಿ ವೈನ್ ಮತ್ತು ಡೈನ್ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಗಿಫ್ಟ್ ಸಿಟಿಯಲ್ಲಿ ಅಧಿಕೃತವಾಗಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳು ಮತ್ತು ಅಧಿಕೃತವಾಗಿ ಭೇಟಿ ನೀಡುವ ಸಂದರ್ಶಕರು ಹೋಟೆಲ್‌ಗಳು, ಕ್ಲಬ್‌, ರೆಸ್ಟೋರೆಂಟ್‌ಗಳಲ್ಲಿ ಮದ್ಯ ಸೇವಿಸಬಹುದು. ಆದ್ರೆ, ಇಲ್ಲಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಸರ್ಕಾರ ಹೇಳಿದೆ.

    ಗಿಫ್ಟ್ ಸಿಟಿಯು ತೆರಿಗೆಗೆ ತಟಸ್ಥ ಹಣಕಾಸು ಕೇಂದ್ರವಾಗಿದ್ದು, ಸಿಂಗಾಪುರದಂತಹ ಕೇಂದ್ರಗಳೊಂದಿಗೆ ಸ್ಪರ್ಧಿಸುವ ಗುರಿ ಹೊಂದಿದೆ. ಏಕೆಂದರೆ ಇದು ಹಣಕಾಸಿನ ಪ್ರೋತ್ಸಾಹ ಮತ್ತು ಸಡಿಲವಾದ ಕಾನೂನು ನಿಯಂತ್ರಣಗಳನ್ನು ಹೊಂದಿದೆ. ಇದನ್ನೂ ಓದಿ: ಲೋಕಸಭೆ ಚುನಾವಣೆ 2024 – ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿಯಲ್ಲಿ ಸಿದ್ದರಾಮಯ್ಯಗೆ ಸ್ಥಾನ 

  • ಗುಂಡು ಹಾಕುವ ಮಹಿಳೆಯರ ಸಂಖ್ಯೆ ಹೆಚ್ಚಳ- ಡ್ರಂಕನ್ ಡ್ರೈವ್ ಸಮೀಕ್ಷೆ

    ಗುಂಡು ಹಾಕುವ ಮಹಿಳೆಯರ ಸಂಖ್ಯೆ ಹೆಚ್ಚಳ- ಡ್ರಂಕನ್ ಡ್ರೈವ್ ಸಮೀಕ್ಷೆ

    ನವದೆಹಲಿ: ಕೋವಿಡ್ (Covid-19) ಸಾಂಕ್ರಾಮಿಕದ ನಂತರ ಮದ್ಯಸೇವನೆ (Drinking) ಮಾಡುವುದರಲ್ಲಿ ಮಹಿಳೆಯರ (Women) ಸಂಖ್ಯೆಯೇ ಹೆಚ್ಚಾಗಿದೆ ಎಂದು ಕಮ್ಯುನಿಟಿ ಅಗೇನ್ಸ್ಟ್‌ ಡ್ರಂಕನ್ ಡ್ರೈವಿಂಗ್ (CADD) ಸರ್ಕಾರೇತರ ಸಂಸ್ಥೆ ನಡೆಸಿದ ಸಮೀಕ್ಷೆ ತೋರಿಸಿದೆ.

    ಈ ವರ್ಷ ಆಗಸ್ಟ್‌ನಿಂದ ಅಕ್ಟೋಬರ್ ವರೆಗೆ 18 ರಿಂದ 68ನೇ ವಯಸ್ಸಿನ 5,000 ಮಹಿಳೆಯರ ಮೇಲೆ ನಡೆಸಿದ ಸಮೀಕ್ಷೆಯ ದತ್ತಾಂಶವು ಮಹಿಳೆಯರಲ್ಲಿ (Women’s) ಮದ್ಯ ಸೇವನೆ ಹೆಚ್ಚಾಗಿರುವುದನ್ನು ಸೂಚಿಸಿದೆ. ಮನೆಯಲ್ಲಿ ಹಾಗೂ ಮನೆಯ ಪಾರ್ಟಿಗಳಲ್ಲಿ (House Parties) ಕುಡಿಯುವವರು ಹೆಚ್ಚಾಗಿದ್ದಾರೆ. ಇನ್ನೂ ಕೆಲ ಮಹಿಳೆಯರು ಪಬ್‌ಗಳಿಗೆ (Pub) ಹೋಗಿ ಕುಡಿಯಲು ಇಷ್ಟಪಡುತ್ತಾರೆ ಎಂಬುದನ್ನು ಸಮೀಕ್ಷೆ ಸೂಚಿಸಿದೆ. ಇದನ್ನೂ ಓದಿ: ಹೊಸ ಮನೆಗೆ ಕಾಲಿಟ್ಟ ಮಿಲನಾ- ಡಾರ್ಲಿಂಗ್ ಕೃಷ್ಣ ಜೋಡಿ

    ಈ ಕುರಿತು ಸಿಎಡಿಡಿ (ACDD) ಸಂಸ್ಥಾಪಕ ಪ್ರಿನ್ಸ್ ಸಿಂಘಾಲ್ ಮಾತನಾಡಿದ್ದು, ಇತ್ತೀಚಿನ ಪ್ರವೃತ್ತಿಗಳು ಮಹಿಳೆಯರಲ್ಲಿ ಮದ್ಯ ಸೇವೆನೆ ಮಾಡುವುದನ್ನು ಹೆಚ್ಚಾಗಿಸಿದೆ. ಕಳೆದ 3 ವರ್ಷಗಳಲ್ಲಿ ಕುಡಿಯುವ ಮಾದರಿಗಳು ಬದಲಾಗಿದೆ. ಸಾಂಕ್ರಾಮಿಕದ ನಂತರ ಅದರ ಒತ್ತಡದಿಂದಾಗಿಯೇ ಹೆಚ್ಚು ಮದ್ಯ ಸೇವಿಸಲು ಆರಂಭಿಸಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಮಹಿಳೆಯರು ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುತ್ತಿದ್ದರು. ನಂತರ ಕನಿಷ್ಠ ಶೇ.30 ಮಹಿಳೆಯರು ತಮ್ಮ ಆಲ್ಕೋಹಾಲ್ (Alcohol) ಸೇವನೆಯನ್ನು ಶೇ.42.3ರಷ್ಟು ಹೆಚ್ಚಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮದ್ಯನಾದ್ರೂ ಸೇವಿಸಿ, ಗುಟ್ಕಾ ಬೇಕಾದ್ರೂ ತಿನ್ನಿ – ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

    ಶೇ.45.7 ರಷ್ಟು ಮಹಿಳೆಯರು ಒತ್ತಡದಿಂದ, ಶೇ.30.1 ರಷ್ಟು ಮಹಿಳೆಯರು ಬೇಸರ ಹಾಗೂ ಒಂಟಿ ತನದಿಂದ ಹಾಗೂ ಶೇ.34.4 ರಷ್ಟು ಮಹಿಳೆಯರು ಆಲ್ಕೋಹಾಲ್ ಲಭ್ಯವಾಗುತ್ತಿರುವುದರಿಂದ ಕುಡಿತದ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರು ಕುಟುಂಬ ನಿರ್ವಹಣೆ, ಮನೆಗೆಲಸ, ವೃತ್ತಿಪರ ಜೀವನ ನಿರ್ವಹಣೆ ನಿಭಾಯಿಸುವುದರಿಂದ ಪುರುಷರಿಗಿಂತ ಮೂರುಪಟ್ಟು ಹೆಚ್ಚಿನ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಮಹಿಳೆಯರಲ್ಲಿ ಮದ್ಯ ಸೇವನೆ ಮಾಡುವವರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿದೆ ಎಂದು ಸಮೀಕ್ಷೆ ತೋರಿಸಿರುವುದಾಗಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯುವಕರಿಗೆ ಮದ್ಯ ಸೇವಿಸಲು ಉತ್ತೇಜನ ನೀಡುತ್ತಿದೆ ಜಪಾನ್- ಕಾರಣ ಏನು ಗೊತ್ತಾ?

    ಯುವಕರಿಗೆ ಮದ್ಯ ಸೇವಿಸಲು ಉತ್ತೇಜನ ನೀಡುತ್ತಿದೆ ಜಪಾನ್- ಕಾರಣ ಏನು ಗೊತ್ತಾ?

    ಟೋಕಿಯೋ: ಕೋವಿಡ್‌ನಿಂದ ತೀವ್ರ ಆರ್ಥಿಕ ಸಂಕಷ್ಟ, ಜನಸಂಖ್ಯೆ ಸಮಸ್ಯೆಯನ್ನು ಎದುರಿಸುತ್ತಿರುವ ಜಪಾನ್ ಸರ್ಕಾರ ತನ್ನ ಆದಾಯ ಹೆಚ್ಚಿಸಲು ಹೊಸ ಅಭಿಯಾನ ಆರಂಭಿಸಿದೆ. ಯುವ ವಯಸ್ಕರಿಗೆ ಹೆಚ್ಚು ಮದ್ಯಪಾನ ಮಾಡಲು ಕರೆ ಕೊಟ್ಟಿದ್ದು, “ಸೇಕ್ ವಿವಾ” ಎನ್ನುವ ಸ್ಪರ್ಧೆಯನ್ನು ಆರಂಭಿಸಿದೆ.

    ರಾಷ್ಟ್ರೀಯ ತೆರಿಗೆ ಏಜೆನ್ಸಿ (NTA) “ಸೇಕ್ ವಿವಾ!” ಎಂಬ ರಾಷ್ಟ್ರೀಯ ವ್ಯಾಪಾರ ಸ್ಪರ್ಧೆಯನ್ನು ಘೋಷಿಸಿದ್ದು, ದೇಶದ ಕಿರಿಯ ಜನಸಂಖ್ಯೆಯಲ್ಲಿ ಮದ್ಯಪಾನವನ್ನು ಉತ್ತೇಜಿಸಲು ಈ ಅಭಿಯಾನ ಪ್ರೋತ್ಸಾಹಿಸುತ್ತದೆ. ಹೊಸ ವ್ಯಾಪಾರ ಕಲ್ಪನೆಗಳೊಂದಿಗೆ ಬರುವುದು, ಸೇಕ್, ಶೋಚು, ಅವಮೊರಿ, ಬಿಯರ್, ವಿಸ್ಕಿ ಮತ್ತು ವೈನ್ ನಂತಹ ಜಪಾನಿನ ಆಲ್ಕೊಹಾಲ್‌ಯುಕ್ತ ಪಾನೀಯಗಳಿಗೆ ಬೇಡಿಕೆಯನ್ನು ಹೆಚ್ಚಿಸಲು ಅಭಿಯಾನ ಸಹಾಯ ಮಾಡಲಿದೆ.

    ಈ ಅಭಿಯಾನ ಮದ್ಯದ ಉದ್ಯಮವನ್ನು ಪುನಶ್ಚೇತನಗೊಳಿಸಲು ಮತ್ತು ಇತರೆ ಸಮಸ್ಯೆಗಳನ್ನು ಪರಿಹರಿಸಲು ಕೊಡುಗೆ ನೀಡಲಿದೆ ಎಂದು ಜಪಾನಿನ ತೆರಿಗೆ ಏಜೆನ್ಸಿ ಯೋಜನೆಯನ್ನು ವಿವರಿಸಿದೆ. “ಸೇಕ್ ವಿವಾ!” ಆಲ್ಕೊಹಾಲ್‌ಯುಕ್ತ ಪಾನೀಯಗಳ ಆಕರ್ಷಣೆಯನ್ನು ಪುನರುಜ್ಜೀವನಗೊಳಿಸಲಿದ್ದು, ಅಭಿಯಾನದಲ್ಲಿ ಪಾಲ್ಗೊಳ್ಳಲು 20 ಮತ್ತು 39ರ ನಡುವಿನ ವಯಸ್ಸಿನ ಜನರನ್ನು ಆಹ್ವಾನಿಸಲಾಗುತ್ತಿದೆ. ಇದನ್ನೂ ಓದಿ: 10 ಮಕ್ಕಳನ್ನು ಹೆರಿ, ಹಣ ಪಡೆಯಿರಿ- ರಷ್ಯಾ ಮಹಿಳೆಯರಿಗೆ ಬಂಪರ್‌ ಆಫರ್‌

    ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಯಾವುದೇ ಪ್ರವೇಶ ಶುಲ್ಕವಿಲ್ಲ, ಇದು ಕೃತಕ ಬುದ್ಧಿಮತ್ತೆ, ಮೆಟಾವರ್ಸ್ ಮತ್ತು ಭೌಗೋಳಿಕ ಸೂಚನೆಗಳನ್ನು (ಉತ್ಪನ್ನಗಳ ಭೌಗೋಳಿಕ ಮೂಲವನ್ನು ಸೂಚಿಸಲು ಬಳಸುವ ಚಿಹ್ನೆ) ಬಳಸುವ ಹೊಸ ಮಾರಾಟ ವಿಧಾನಗಳನ್ನು ಸೂಚಿಸಲು ಜನರನ್ನು ಕೇಳುತ್ತದೆ. ಇದಕ್ಕೆ ಸ್ಪರ್ಧಿಗಳು ಹೊಸ ಯೋಚನೆಗಳನ್ನು ನೀಡಬೇಕು.

    ಸ್ಪರ್ಧೆಯಲ್ಲಿ ಫೈನಲಿಸ್ಟ್‌ಗಳನ್ನು ಸೆಪ್ಟೆಂಬರ್ 27 ರೊಳಗೆ ಆಯ್ಕೆ ಮಾಡಲಾಗುವುದು. ನಂತರ ಅಕ್ಟೋಬರ್‌ನಲ್ಲಿ ಮತ್ತೊಂದು ಸುತ್ತು ನಡೆಯಲಿದ್ದು, ಈ ವಿಶಿಷ್ಟ ಸ್ಪರ್ಧೆಯ ಫಲಿತಾಂಶಗಳನ್ನು ನವೆಂಬರ್ 10 ರಂದು ಟೋಕಿಯೊದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: 21 ಯುದ್ಧವಿಮಾನ, 5 ರಕ್ಷಣಾ ಹಡಗುಗಳಿಂದ ತೈವಾನ್ ಸುತ್ತುವರಿದ ಚೀನಾ

    NTA ಪ್ರಕಾರ, 1995 ಕ್ಕೆ ಹೋಲಿಸಿದರೆ ದೇಶವು ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ 2020 ರಲ್ಲಿ ಜಪಾನಿಯರು ಕಡಿಮೆ ಮದ್ಯ ಸೇವನೆ ಮಾಡುತ್ತಿದ್ದಾರೆ. 1995 ರಲ್ಲಿ ಜನರು 100 ಲೀಟರ್ (22 ಗ್ಯಾಲನ್) ಆಲ್ಕೋಹಾಲ್ ಅನ್ನು ಸೇವಿಸುತ್ತಿದ್ದರು. ಸದ್ಯ ಕುಡಿಯುವಿಕೆಯು 75 ಲೀಟರ್‌ಗಳಿಗೆ (16 ಗ್ಯಾಲನ್‌ಗಳು) ಕಡಿಮೆಯಾಗಿದೆ  ಎಂದು ವರದಿಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಮದ್ಯ ಸೇವಿಸುವವರು ಭಾರತೀಯರಲ್ಲ, ಮಹಾಪಾಪಿಗಳು: ನಿತೀಶ್ ಕುಮಾರ್

    ಮದ್ಯ ಸೇವಿಸುವವರು ಭಾರತೀಯರಲ್ಲ, ಮಹಾಪಾಪಿಗಳು: ನಿತೀಶ್ ಕುಮಾರ್

    ಪಾಟ್ನಾ: ಮಹಾತ್ಮ ಗಾಂಧಿ ಕೂಡ ಮದ್ಯ ಸೇವನೆಯನ್ನು ವಿರೋಧಿಸಿದ್ದರು. ಅವರ ತತ್ವಗಳಿಗೆ ವಿರುದ್ಧವಾಗಿ ನಡೆಯುವವರು ಮಹಾಪಾಪಿಗಳು. ಅಂತವರನ್ನು ಭಾರತೀಯರೆಂದು ಪರಿಗಣಿಸಲಾಗುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯಪಾನ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಜನರು ಸೇವಿಸುತ್ತಾರೆ. ಹೀಗಾಗಿ ಅದರ ಪರಿಣಾಮಗಳಿಗೆ ಅವರೇ ಹೊಣೆ ಹೊರತು ರಾಜ್ಯ ಸರ್ಕಾರ ಹೊಣೆಯಲ್ಲ. ಮದ್ಯಪಾನ ಸೇವಿಸಿ ಮೃತಪಡುವ ಜನರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ಹೇಳಿದರು.

    ಬಿಹಾರ ನಿಷೇಧ ಮತ್ತು ಅಬಕಾರಿ (ತಿದ್ದುಪಡಿ) ಮಸೂದೆ, 2022, ರಾಜ್ಯಪಾಲರ ಅನುಮೋದನೆಯನ್ನು ಪಡೆಯಿತು. ಇದರ ಪ್ರಕಾರ ಅಪರಾಧಿಗಳು ದಂಡವನ್ನು ಠೇವಣಿ ಮಾಡಿದ ನಂತರ ಡ್ಯೂಟಿ ಮ್ಯಾಜಿಸ್ಟ್ರೇಟ್‍ನಿಂದ ಜಾಮೀನು ಪಡೆಯುತ್ತಾರೆ. ಒಂದು ವೇಳೆ ವ್ಯಕ್ತಿಯು ಅದನ್ನು ಪಾವತಿಸಲು ವಿಫಲವಾದರೆ, ಒಂದು ತಿಂಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಇದನ್ನೂ ಓದಿ: ಬಾಯಿ ಮುಚ್ಚು, ಇದು ನಿನಗೆ ಒಳ್ಳೆಯದಲ್ಲ: ಪತ್ರಕರ್ತ ವಿರುದ್ಧ ರಾಮದೇವ್ ಕಿಡಿ

    ಮದ್ಯ ನಿಷೇಧ ಕಾನೂನನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿಲ್ಲ ಮತ್ತು ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದರೆ, ಮದ್ಯ ನಿಷೇಧ ಕೇವಲ ಕಾಗದದಲ್ಲಿ ಮಾತ್ರ ಉಳಿದಿದೆ ಎಂದು ಪ್ರತಿಪಕ್ಷಗಳು ಟೀಕಿಸಿದೆ. ಇದನ್ನೂ ಓದಿ: ಮೋದಿ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಬೆಳಗಾವಿಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

  • ಇನ್ಮುಂದೆ 21 ವಯಸ್ಸಿನವರೂ ʻಎಣ್ಣೆʼ ಹೊಡಿಯಬಹುದು – ಹರಿಯಾಣ

    ಇನ್ಮುಂದೆ 21 ವಯಸ್ಸಿನವರೂ ʻಎಣ್ಣೆʼ ಹೊಡಿಯಬಹುದು – ಹರಿಯಾಣ

    ಚಂಡೀಗಢ: ಹರಿಯಾಣ ಸರ್ಕಾರವು ಬುಧವಾರ ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ರಾಜ್ಯದಲ್ಲಿ ಮದ್ಯ ಸೇವನೆ ಮತ್ತು ಅದರ ಖರೀದಿ, ಮಾರಾಟದ ಕಾನೂನುಬದ್ಧ ವಯಸ್ಸನ್ನು 25ರಿಂದ 21ಕ್ಕೆ ಇಳಿಸಿದೆ.

    ಹರಿಯಾಣ ಅಬಕಾರಿ (ತಿದ್ದುಪಡಿ) ಮಸೂದೆ- 2021 ಅನ್ನು ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಈಚೆಗಷ್ಟೇ ಮದ್ಯ ಸೇವನೆ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಇಳಿಸಿದೆ. ಇದನ್ನೂ ಓದಿ: ರಿಲಯನ್ಸ್‌, ಪತಂಜಲಿ, ಟಾಟಾ, ಇನ್ಫೋಸಿಸ್‌ ಸೇರಿ 11 ಖಾಸಗಿ ಸಂಸ್ಥೆಗಳಿಗೆ ಸಿಐಎಸ್‌ಎಫ್‌ ಭದ್ರತೆ

    ಅಬಕಾರಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ದುಷ್ಯಂತ್‌ ಚೌತಾಲ್‌ ಅವರು ಮಸೂದೆ ಮಂಡಿಸಿದರು. ಈ ವೇಳೆ ಮಾತನಾಡಿದ ಅವರು, ಹೊಸ ನಿಬಂಧನೆಗಳನ್ನು ಅಬಕಾರಿ ಕಾಯ್ದೆಯಲ್ಲಿ ಅಳವಡಿಸಿರುವುದರಿಂದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಜನರು ಈಗ ಹೆಚ್ಚು ವಿದ್ಯಾವಂತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕುಡಿಯುವ ವಿಚಾರದಲ್ಲೂ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: 1.5 ಕೋಟಿ ರೂ. ಮೌಲ್ಯದ ತಿಮಿಂಗಲ ವಾಂತಿ ವಶಕ್ಕೆ – 6 ಮಂದಿ ಅರೆಸ್ಟ್

    2021-22ರ ಅಬಕಾರಿ ನೀತಿಯನ್ನು ರೂಪಿಸುವಾಗ ದೆಹಲಿ ಸೇರಿದಂತೆ ಹಲವು ರಾಜ್ಯಗಳು ಮದ್ಯ ಸೇವನೆಯ ವಯಸ್ಸಿನ ಮಿತಿಯನ್ನು ಇಳಿಸಿವೆ. ಈ ಕುರಿತು ಆಮೂಲಾಗ್ರ ಚರ್ಚೆ ನಡೆಸಿ ಹರಿಯಾಣ ಸರ್ಕಾರವೂ ಮಸೂದೆ ತಂದಿದೆ. ಅಬಕಾರಿಗೆ ಸಂಬಂಧಿಸಿದಂತೆ 6 ಮಸೂದೆಗಳನ್ನು ಹರಿಯಾಣ ವಿಧಾನಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.

  • ಬೆಂಗಳೂರಿನಲ್ಲಿ ಭೀಕರ ಅಪಘಾತ – ಇಬ್ಬರ ಪ್ರಾಣ ಉಳಿಸಿದ ಏರ್‌ ಬ್ಯಾಗ್‌

    ಬೆಂಗಳೂರಿನಲ್ಲಿ ಭೀಕರ ಅಪಘಾತ – ಇಬ್ಬರ ಪ್ರಾಣ ಉಳಿಸಿದ ಏರ್‌ ಬ್ಯಾಗ್‌

    ಬೆಂಗಳೂರು: ನಗರದಲ್ಲಿ ಮಧ್ಯರಾತ್ರಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಏರ್‌ಬ್ಯಾಗ್‌ ಇಬ್ಬರ ಪ್ರಾಣವನ್ನು ಉಳಿಸಿದೆ.

    ಮಡಿವಾಳದ ಸೆಂಟ್‍ಜಾನ್ ಆಸ್ಪತ್ರೆ ಸಿಗ್ನಲ್ ಬಳಿ ಇರುವ ಡಿವೈಡರ್‌ಗೆ ಬಲೆನೊ ಕಾರು ಗುದ್ದಿದೆ. ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿ ಚಾಸಿ ತುಂಡಾಗಿದ್ದು ಟಯರ್‌ 30 ಮೀಟರ್‌ ದೂರಕ್ಕೆ ಹೋಗಿ ಬಿದ್ದಿದೆ. ಇದನ್ನೂ ಓದಿ: ಇಂದು ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಮೋದಿ ಭಾಷಣ

    ಗಮನಿಸಬೇಕಾದ ವಿಚಾರ ಅಂದ್ರೆ ಇಬ್ಬರಿಗೂ ಒಂದು ಸಣ್ಣ ಗಾಯವೂ ಆಗಿಲ್ಲ. ಮುಂಭಾಗದಲ್ಲಿದ್ದ ಏರ್‌ ಬ್ಯಾಗ್‌ ತೆರೆದ ಪರಿಣಾಮ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮದ್ಯದ ನಶೆಯಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಅಪಘಾತ ಎಸಗಿದ್ದು, ಈ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿ ಬಿಯರ್‌ ಬಾಟಲ್‌ ಪತ್ತೆಯಾಗಿದೆ. ವಿದ್ಯಾರ್ಥಿಗಳ ವಿರುದ್ಧ ಡ್ರಿಂಕ್ಸ್‌ ಆಂಡ್‌ ಡ್ರೈವ್‌ ಕೇಸ್‌ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ತಾಲಿಬಾನ್‌ ಸರ್ಕಾರದಲ್ಲಿ ಸೂಸೈಡ್‌ ಬಾಂಬರ್‌ ಕುಟುಂಬಕ್ಕೆ ನಗದು ಪರಿಹಾರ, ನಿವೇಶನ ಗಿಫ್ಟ್‌

    ಈ ಹಿಂದೆ ಆಗಸ್ಟ್‌ 31 ರಂದು ಕೋರಮಂಗಲದಲ್ಲಿ ಭೀಕರ ಕಾರು ಅಪಘಾತ ಸಂಭವಿಸಿತ್ತು. ಮಂಗಳ ಕಲ್ಯಾಣ ಮಂಟಪದ ಬಳಿ ನಡೆದ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದರು. ಇದನ್ನೂ ಓದಿ: ಕೋರಮಂಗಲ ಅಪಘಾತ – 7 ಮಂದಿಯ ಸಾವಿಗೆ ಮದ್ಯ ಪಾರ್ಟಿಯೇ ಕಾರಣ

  • ವೈದ್ಯರ ಸಲಹೆ ಪಡೆದು ಮದ್ಯ ಸೇವನೆ ಬಿಟ್ಬಿಡಿ: ಅಬಕಾರಿ ಸಚಿವ ನಾಗೇಶ್ ಸಲಹೆ

    ವೈದ್ಯರ ಸಲಹೆ ಪಡೆದು ಮದ್ಯ ಸೇವನೆ ಬಿಟ್ಬಿಡಿ: ಅಬಕಾರಿ ಸಚಿವ ನಾಗೇಶ್ ಸಲಹೆ

    ಕೋಲಾರ: ಮದ್ಯವ್ಯಸನಿಗಳೇ ಬೇರೆ ಮದ್ಯಪ್ರಿಯರೇ ಬೇರೆ ಎನ್ನುವ ಮೂಲಕ ಮದ್ಯಪಾನಿಗಳ ಬಗ್ಗೆ ಸಚಿವ ಎಚ್.ನಾಗೇಶ್ ವಿಭಿನ್ನ ರೀತಿಯಲ್ಲಿ ವಿಶ್ಲೇಷಣೆ ನೀಡಿದ್ದಾರೆ.

    ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜನರ ಸುರಕ್ಷತೆಗಾಗಿಯೇ ಮದ್ಯ ಬಂದ್ ತೀರ್ಮಾನ ಮಾಡಿದ್ದೇವೆ. ವೈದ್ಯರಿಂದ ಸಲಹೆ ಪಡೆದುಕೊಂಡು ಚಟವನ್ನು ಬಿಟ್ಡು ಬಿಡಿ ಎಂದು ಕಿವಿ ಮಾತು ಹೇಳಿದ್ರು. ತಾಳ್ಮೆ, ಚಟ ತ್ಯಜಿಸಿ ಕೌನ್ಸಿಲಿಂಗ್ ಮಾಡಿಸಿಕೊಳ್ಳಿ. ಮದ್ಯ ಬಿಟ್ಟು ಕುಟುಂಬದ ಜೊತೆ ಚೆನ್ನಾಗಿರಿ. ಇನ್ನೂ ಇದೆ ವೇಳೆ ಕಳ್ಳಬಟ್ಟಿ ಹತೋಟಿಗೆ ತರಲು ಕಠಿಣ ಕ್ರಮ ಜರುಗಿಸಲು ಸೂಚನೆ ನೀಡಲಾಗಿದೆ. ಮೇ-3 ವರೆಗೂ ಪ್ರಧಾನಿಗಳ ಮಾತಿಗೆ ಗೌರವಿಸಿ ಸಹಕರಿಸಿ ಎಂದು ಮದ್ಯಪ್ರಿಯರಿಗೆ ಸಲಹೆ ನೀಡಿದರು.

    ಲಾಕ್‍ಡೌನ್ ಆದಾಗಿನಿಂದ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಎಣ್ಣೆ ಸಿಗದೇ ಕುಡುಕರು ಮದ್ಯದಂಗಡಿಗಳಿಗೆ ಕನ್ನ ಹಾಕಿ ಹಣ ಮುಟ್ಟದೇ ತಮ್ಮ ಬ್ರ್ಯಾಂಡ್ ಕದ್ದು ತೆಗೆದುಕೊಂಡು ಹೋಗುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಮದ್ಯ ಸಿಗದ್ದಕ್ಕೆ ಇಬ್ಬರು ಸ್ಯಾನಿಟೈಸರ್ ಕುಡಿದು ಸಾವನ್ನಪ್ಪಿರುವ ವರದಿ ಆಗಿದೆ. ಬುಧವಾರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾಜಿ ಸಚಿವ, ಹೆಚ್.ವಿಶ್ವನಾಥ್, ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕು. ಪ್ರತಿನಿತ್ಯ ನೀಡದಿದ್ದರೂ ವಾರದಲ್ಲಿ ಎರಡು ದಿನ ಎಂಎಸ್‍ಐಎಲ್ ಸೇರಿದಂತೆ ಬಾರ್ ಗಳಲ್ಲಿ ಪಾರ್ಸಲ್ ವ್ಯವಸ್ಥೆ ಕಲ್ಪಿಸಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದ್ದರು.