Tag: ಮದ್ಯ ಶಾಪ್

  • ಅಂಗಡಿ ಮುಂದೆ ಬ್ಯಾಗ್, ಚಪ್ಪಲಿ ಇಟ್ಟು ಸಾಮಾಜಿಕ ಅಂತರ ಕಾಯ್ದುಕೊಂಡ ಮದ್ಯಪ್ರಿಯರು

    ಅಂಗಡಿ ಮುಂದೆ ಬ್ಯಾಗ್, ಚಪ್ಪಲಿ ಇಟ್ಟು ಸಾಮಾಜಿಕ ಅಂತರ ಕಾಯ್ದುಕೊಂಡ ಮದ್ಯಪ್ರಿಯರು

    ಹುಬ್ಬಳ್ಳಿ: ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ 2ನೇ ದಿನವೂ ಮದ್ಯ ಖರೀದಿಗೆ ಮದ್ಯಪ್ರಿಯರು ಬೆಳ್ಳಂಬೆಳಗ್ಗೆ ಕ್ಯೂ ನಿಂತಿದ್ದಾರೆ. ವಿಶೇಷ ಅಂದರೆ ಮದ್ಯದಂಗಡಿಗಳ ಮುಂದೆ ಬ್ಯಾಗ್, ಚಪ್ಪಲಿ ಹಾಗೂ ವಾಟರ್ ಬಾಟಲಿ ಇಟ್ಟು ಸಾಮಾಜಿಕ ಅಂತರ ಕಾಯ್ದುಕೊಂಡು ಕ್ಯೂ ನಿಂತಿದ್ದಾರೆ.

    ಹುಬ್ಬಳ್ಳಿಯ ಗೋಕುಲ್ ರಸ್ತೆಯ ಹಲವು ಬಾರ್‌ಗಳ ಮುಂದೆ ಮದ್ಯ ಪ್ರಿಯರು ಬೆಳಗ್ಗೆಯಿಂದಲೇ ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಖರೀದಿಗೆ ಮತ್ತೆ ತಯಾರಾಗಿದ್ದಾರೆ. ಜಿಲ್ಲೆಯಲ್ಲಿ ಸೋಮವಾರದಿಂದ ಮದ್ಯ ಮಾರಾಟ ಆರಂಭವಾಗಿದ್ದು, ದಾಖಲೆಯ ಮದ್ಯ ಮಾರಾಟವಾಗಿದೆ.

    ಜಿಲ್ಲೆಯ 68 ಎಂಆರ್‌ಪಿ ಹಾಗೂ 24 ಎಂಎಸ್‍ಐಎಲ್ ಮದ್ಯದ ಅಂಗಡಿಗಳಲ್ಲಿ ಒಟ್ಟು 7,58,122 ಲೀಟರ್ 8,596 ಕೇಸ್ ಬಾಕ್ಸ್ ಮದ್ಯ ಮಾರಾಟವಾಗಿರುವುದು ಮದ್ಯ ಮಾರಾಟದಲ್ಲಿಯೇ ದಾಖಲೆಯನ್ನು ಸೃಷ್ಟಿಸಿದೆ. ಇನ್ನೂ 24,700 ಲೀಟರ್ ಬಿಯರ್ ಒಟ್ಟು 3,167 ಕೇಸ್ ಬಾಕ್ಸ್ ಗಳ ಮಾರಾಟವಾಗಿದೆ. ಒಂದೇ ದಿನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮದ್ಯ ಖರೀದಿಯಾಗಿದ್ದರೂ ಎರಡನೇ ದಿನವೂ ಜನಜಂಗುಳಿಯಿಂದ ಕೂಡಿದೆ.

    ಮಂಡ್ಯದಲ್ಲೂ ಬೆಳಗ್ಗೆಯೇ ಬಾರ್‌ಗಳ ಮುಂದೆ ಜನರು ಕಾದು ಕುಳಿತಿದ್ದಾರೆ. ಮಂಡ್ಯದ ನೂರಡಿ ರಸ್ತೆಯಲ್ಲಿರುವ ಬಾರ್‌ಗಳ ಮುಂದೆ ತರಕಾರಿ ಚೀಲ, ಡಬ್ಬಗಳನ್ನ ಇಟ್ಟು ಜನರು ಕುಳಿತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾಡಲಾಗಿರುವ ಬಾಕ್ಸ್ ಗಳಲ್ಲಿ ತರಕಾರಿ ಚೀಲ ಇಟ್ಟು ಪಕ್ಕದಲ್ಲಿ ಜನರು ನಿಂತಿದ್ದಾರೆ. ಸೋಮವಾರ ಮದ್ಯ ಸಿಗಲಿಲ್ಲ, ಹೀಗಾಗಿ ಇಂದು ಬೆಳಗ್ಗೆಯೇ ಬಂದಿರೋದಾಗಿ ಮದ್ಯ ಪ್ರಿಯರು ಹೇಳುತ್ತಿದ್ದಾರೆ.