Tag: ಮದ್ಯ ನೀತಿ ಪ್ರಕರಣ

  • ಮನೀಶ್ ಸಿಸೋಡಿಯಾ ಜಾಮೀನು ನಿಯಮ ಸಡಿಲಿಸಿದ ಸುಪ್ರೀಂ

    ಮನೀಶ್ ಸಿಸೋಡಿಯಾ ಜಾಮೀನು ನಿಯಮ ಸಡಿಲಿಸಿದ ಸುಪ್ರೀಂ

    ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ದೆಹಲಿಯ (Delhi) ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರ ಜಾಮೀನು ಷರತ್ತುಗಳನ್ನು ಸುಪ್ರೀಂಕೋರ್ಟ್ (Supreme Court) ಸಡಿಲಿಸಿದೆ. ಈ ಮೂಲಕ ವಾರಕ್ಕೆ ಎರಡು ಬಾರಿ ತನಿಖಾ ಸಂಸ್ಥೆಗಳಿಗೆ ಮುಂದೆ ಹಾಜರಾಗುವ ಷರತ್ತಿಗೆ ತಡೆ ನೀಡಿದೆ.ಇದನ್ನೂ ಓದಿ: ಬಿಜೆಪಿ ಸಂಸದರಿಗೆ ಗುಲಾಬಿ ಜೊತೆಗೆ ತ್ರಿವರ್ಣ ಧ್ವಜ ನೀಡಿದ ವಿಪಕ್ಷಗಳು

    ಆಪಾದಿತ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಭ್ರಷ್ಟಾಚಾರ ಮತ್ತು ಮನಿ ಲ್ಯಾಂಡರಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಆ.9 ರಂದು ಸಿಸೋಡಿಯಾ ಅವರ ಜಾಮೀನಿನಲ್ಲಿ ಷರತ್ತುಗಳನ್ನು ವಿಧಿಸಲಾಗಿತ್ತು. ಇದೀಗ ಷರತ್ತುಗಳ ಮಾರ್ಪಡಿಸುವ ಸಂದರ್ಭದಲ್ಲಿ ಷರತ್ತುಗಳ ಅಗತ್ಯವಿಲ್ಲ ಎಂದು ಪೀಠ ಆದೇಶ ಹೊರಡಿಸಿದೆ.

    ಸುಪ್ರೀಂಕೋರ್ಟ್ನ ತೀರ್ಪು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣಗಳೆರಡಕ್ಕೂ ಅನ್ವಯಿಸುತ್ತದೆ. ಆದಾಗ್ಯೂ, ಸಿಸೋಡಿಯಾ ಅವರು ನಿಯಮಿತವಾಗಿ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.ಇದನ್ನೂ ಓದಿ: ಪಿಎಂ ಮೋದಿರನ್ನು ಭೇಟಿಯಾದ ಕರೀನಾ ಕಪೂರ್ ಕುಟುಂಬ

     

  • 5 ದಿನ ಸಿಸೋಡಿಯಾ CBI ವಶಕ್ಕೆ

    5 ದಿನ ಸಿಸೋಡಿಯಾ CBI ವಶಕ್ಕೆ

    ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ (Liquor Policy Scam) ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ದೆಹಲಿಯ ಉಪ ಮುಖ್ಯಮಂತ್ರಿ (Delhi Deputy Chief Minister) ಮನೀಶ್ ಸಿಸೋಡಿಯಾ (Manish Sisodia) ಅವರನ್ನು ದೆಹಲಿ ನ್ಯಾಯಾಲಯ 5 ದಿನಗಳ ವರೆಗೆ ಸಿಬಿಐ (CBI) ಕಸ್ಟಡಿಗೆ ನೀಡಿದೆ.

    ಸಿಸೋಡಿಯಾ ಅವರು ಮದ್ಯ ಮಾರಾಟಗಾರರಿಗೆ ಅನಗತ್ಯ ಪ್ರಯೋಜನಗಳನ್ನು ನೀಡುತ್ತಿದ್ದಾರೆ. ಅಕ್ರಮವಾಗಿ ರಿಯಾಯಿತಿಯನ್ನು ನೀಡುತ್ತಿದ್ದಾರೆ ಹಾಗೂ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಒಪ್ಪಿಗೆಯಿಲ್ಲದೇ ಅಬಕಾರಿ ನೀತಿಗಳನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ಬೆಳಗ್ಗೆಯಿಂದ ವಿಚಾರಣೆಗೆ ಒಳಪಡಿಸಿದ್ದರು. ಆದರೆ ಅವರು ವಿಚಾರಣೆ ವೇಳೆ ಸರಿಯಾಗಿ ಸಹಕರಿಸದೇ ಹಾರಿಕೆಯ ಉತ್ತರಗಳನ್ನು ನೀಡಿರುವುದರಿಂದ ಅವರನ್ನು ಸಿಬಿಐ ಬಂಧಿಸಿದೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸದ್ಯಕ್ಕೆ ಟೋಲ್‌ ಸಂಗ್ರಹ ಇಲ್ಲ

    MANISH SISODIA

    ಸೋಮವಾರ ಸಿಸೋಡಿಯಾ ಅವರನ್ನು ಸಿಬಿಐ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಸಿಬಿಐ ಹಾಗೂ ಮನೀಶ್ ಸಿಸೋಡಿಯಾ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯ ಸಿಸೋಡಿಯಾ ಅವರನ್ನು 5 ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ. ದೆಹಲಿ ಉಪಮುಖ್ಯಮಂತ್ರಿ ಮಾರ್ಚ್ 4ರ ವರೆಗೆ ಸಿಬಿಐ ಕಸ್ಟಡಿಯಲ್ಲಿ ಇರಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಕರ್ನಾಟಕಕ್ಕೆ ಅವಮಾನ, ಖರ್ಗೆಗೆ ಛತ್ರಿಯೇ ಸಿಗಲಿಲ್ಲ: ಮೋದಿ

  • ನನಗೆ AAP ತೊರೆಯುವಂತೆ ಒತ್ತಡ ಹೇರಿದ್ದಾರೆ – ಸಿಸೋಡಿಯಾ ಆರೋಪ, CBI ಪ್ರತಿಕ್ರಿಯೆ

    ನನಗೆ AAP ತೊರೆಯುವಂತೆ ಒತ್ತಡ ಹೇರಿದ್ದಾರೆ – ಸಿಸೋಡಿಯಾ ಆರೋಪ, CBI ಪ್ರತಿಕ್ರಿಯೆ

    ನವದೆಹಲಿ: ದೆಹಲಿಯ (Delhi) ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರು ಸೋಮವಾರ ಕೇಂದ್ರೀಯ ತನಿಖಾ ದಳದ (CBI) 9 ಗಂಟೆಗಳ ವಿಚಾರಣೆಯ ಬಳಿಕ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ದೆಹಲಿ ಸರ್ಕಾರದ ವಿವಾದಿತ ಮದ್ಯ ನೀತಿಯ (Liquor Policy Case) ಬಗ್ಗೆ ಪ್ರಶ್ನಿಸಬೇಕಿದ್ದ ಅಧಿಕಾರಿಗಳು ನನಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷವನ್ನು (AAP) ತೊರೆಯುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.

    ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿ ಮೇ ತಿಂಗಳಿನಿಂದ ಜೈಲಿನಲ್ಲಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರ ಪ್ರಕರಣದಂತೆಯೇ ನಿಮ್ಮ ಪ್ರಕರಣವೂ ಆಗಬಹುದು ಎಂದು ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ಸಿಸೋಡಿಯಾ ಮಾಧ್ಯಮಗಳೊಂದಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು, ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ- ಇಬ್ಬರು ಸ್ಥಳೀಯೇತರ ಕಾರ್ಮಿಕರು ಬಲಿ

    ಆದರೆ ಸಿಬಿಐ ಈ ಆರೋಪಗಳನ್ನು ಬಲವಾಗಿ ತಳ್ಳಿಹಾಕಿದೆ. ಎಫ್‌ಐಆರ್‌ನಲ್ಲಿರುವ ಅವರ ವಿರುದ್ಧದ ಆರೋಪಗಳ ಪ್ರಕಾರವೇ ಸಿಸೋಡಿಯಾ ಅವರಿಗೆ ಕಾನೂನು ರೀತಿಯಲ್ಲಿ ವಿಚಾರಣೆ ನಡೆಸಲಾಗಿದೆ. ಪ್ರಕರಣದ ತನಿಖೆ ಕಾನೂನಿನ ಪ್ರಕಾರವೇ ಮುಂದುವರಿಯುತ್ತದೆ ಎಂದು ಹೇಳಿದೆ.

    ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಭಾನುವಾರ ಮನೀಶ್ ಸಿಸೋಡಿಯಾಗೆ ಸೋಮವಾರ ವಿಚಾರಣೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಅದರಂತೆ ನಿನ್ನೆ ಮಧ್ಯಾಹ್ನ ಪ್ರಾರಂಭವಾದ ಸಿಬಿಐ ವಿಚಾರಣೆ 9 ಗಂಟೆಗಳವರೆಗೆ ನಡೆದಿದೆ. ಇದನ್ನೂ ಓದಿ: ಬೆಂಗಳೂರು ಗುಂಡಿಗೆ ಮಹಿಳೆ ಬಲಿ – KSRTC ಡ್ರೈವರ್‌ ಅರೆಸ್ಟ್‌

    Live Tv
    [brid partner=56869869 player=32851 video=960834 autoplay=true]

  • ನನ್ನನ್ನು ಬಂಧಿಸುವಂತೆ ಒತ್ತಡ ಹಾಕಿದ್ದಕ್ಕೆ ಸಿಬಿಐ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ: ಮನೀಶ್ ಸಿಸೋಡಿಯಾ

    ನನ್ನನ್ನು ಬಂಧಿಸುವಂತೆ ಒತ್ತಡ ಹಾಕಿದ್ದಕ್ಕೆ ಸಿಬಿಐ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ: ಮನೀಶ್ ಸಿಸೋಡಿಯಾ

    ನವದೆಹಲಿ: ನನ್ನನ್ನು ಬಂಧಿಸುವಂತೆ ಒತ್ತಡ ಹಾಕಿದ್ದಕ್ಕೆ ಸಿಬಿಐ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸ್ಫೋಟಕ ಹೇಳಿಕೆಯನ್ನು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನೀಡಿದ್ದಾರೆ. ಆದರೆ ಈ ಹೇಳಿಕೆಯನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ತಳ್ಳಿಹಾಕಿದೆ.

    ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಉಪ ಕಾನೂನು ಸಲಹೆಗಾರರಾಗಿದ್ದ ಸಿಬಿಐ ಅಧಿಕಾರಿ ಜಿತೇಂದ್ರ ಕುಮಾರ್ ಅವರಿಗೆ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಬಂಧಿಸುವಂತೆ ಒತ್ತಡ ಹೇರಲಾಗಿತ್ತು. ಈ ಹಿನ್ನೆಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸೋಮವಾರ ಸಿಸೋಡಿಯಾ ಹೇಳಿದ್ದಾರೆ.

    MANISH SISODIA

    ಸಿಸೋಡಿಯಾ ಅವರ ಹೇಳಿಕೆಯನ್ನು ತಳ್ಳಿಹಾಕಿರುವ ಸಿಬಿಐ, ದೆಹಲಿ ಉಪ ಮುಖ್ಯಮಂತ್ರಿಯವರ ಹೇಳಿಕೆಯು ತಪ್ಪುದಾರಿಗೆಳೆಯುವಂತೆ ಮಾಡುತ್ತಿದೆ. ಈ ಹೇಳಿಕೆ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಭಾರತದ ರಿಷಿಗೆ ಸೋಲು – ಬ್ರಿಟನ್ ಪ್ರಧಾನಿ ಗದ್ದುಗೆ ಏರಿದ ಲಿಜ್ ಟ್ರಸ್

    ಸಿಸೋಡಿಯಾ ಅವರ ಹೇಳಿಕೆಯನ್ನು ಸಿಬಿಐ ಬಲವಾಗಿ ನಿರಾಕರಿಸುತ್ತದೆ. ಜಿತೇಂದ್ರ ಕುಮಾರ್ ಅವರು ಈ ಪ್ರಕರಣದ ತನಿಖೆಯೊಂದಿಗೆ ಯಾವುದೇ ರೀತಿಯ ಸಂಬಂಧ ಹೊಂದಿರಲಿಲ್ಲ. ಅವರು ಪ್ರಾಸಿಕ್ಯೂಷನ್ ಉಸ್ತುವಾರಿ ಉಪ ಕಾನೂನು ಸಲಹೆಗಾರರಾಗಿದ್ದರು. ಅವರು ಈಗಾಗಲೇ ಚಾರ್ಜ್ ಶೀಟ್ ಮಾಡಿರುವ ಪ್ರಕರಣ ತನಿಖೆ ನಡೆಸುತ್ತಿರುವ ಪ್ರಾಸಿಕ್ಯೂಟರ್‌ಗಳನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯ ಹೊಂದಿದ್ದರು ಎಂದು ಸಿಬಿಐ ತಿಳಿಸಿದೆ.

    ಕಳೆದ ವಾರ ಜಿತೇಂದ್ರ ಕುಮಾರ್ ಅವರ ಮೃತದೇಹ ದಕ್ಷಿಣ ದೆಹಲಿಯ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದ ಸೂಸೈಡ್ ನೋಟ್ ಅನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಮಗೆ ದ್ರೋಹ ಬಗೆದ ಉದ್ಧವ್ ಠಾಕ್ರೆಗೆ ಪಾಠ ಕಲಿಸಬೇಕು: ಅಮಿತ್ ಶಾ ಗುಡುಗು

    Live Tv
    [brid partner=56869869 player=32851 video=960834 autoplay=true]