Tag: ಮದ್ಯಪ್ರಿಯ

  • ಕುಡಿಯಲು ಹಣವಿಲ್ಲದೇ ಟಿವಿಯನ್ನೇ ಮಾರಲು ಹೊರಟ ಭೂಪ

    ಕುಡಿಯಲು ಹಣವಿಲ್ಲದೇ ಟಿವಿಯನ್ನೇ ಮಾರಲು ಹೊರಟ ಭೂಪ

    ಹಾಸನ: ಕುಡಿಯಲು ಹಣವಿಲ್ಲದೇ ಮದ್ಯಪ್ರಿಯನೊಬ್ಬ ಮನೆಯಲ್ಲಿ ಇದ್ದ ಹಳೇ ಟಿವಿಯನ್ನು ಮಾರಲು ಹೊರಟಿರುವ ಘಟನೆ ಹಾಸನ ನಗರದ ವಲ್ಲಭಾಯಿ ರಸ್ತೆಯಲ್ಲಿ ನಡೆದಿದೆ.

    ಕೊರೊನಾ ಲಾಕ್‍ಡೌನ್‍ನಿಂದು ಸುಮಾರು 42 ದಿನಗಳ ಕಾಲ ಮುಚ್ಚಿದ್ದ ಮದ್ಯದಂಗಡಿಗಳು ಕಳೆದ ಸೋಮವಾರದಿಂದ ಓಪನ್ ಆಗಿವೆ. ಈ ಕಾರಣ ಮತ್ತೆ ಎಣ್ಣೆ ಕುಡಿಯಲು ಕುಡುಕರು ಇಲ್ಲಸಲ್ಲದ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಕುಡಿಯಲು ಹಣವಿಲ್ಲದೆ ಮನೆಯ ವಸ್ತುಗಳನ್ನೇ ಮಾರಲು ಸಿದ್ಧವಾಗುತ್ತಿದ್ದಾರೆ.

    ಅಂತಯೇ ಹಾಸನ ನಗರದ ವಲ್ಲಭಾಯಿ ರಸ್ತೆಯ ನಿವಾಸಿ ನಾಗರಾಜ್, ಕುಡಿಯಲು ಹಣವಿಲ್ಲ ಎಂದು ತಮ್ಮ ಮನೆಯಲ್ಲಿದ್ದ ಹಳೇ ಟಿವಿಯನ್ನು ಮಾರಲು ಹೋಗಿದ್ದಾನೆ. ಈ ವೇಳೆ ಟಿವಿಯನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀಯಾ ಎಂದು ದಾರಿಹೋಕರು ಪ್ರಶ್ನಿಸಿದಾಗ ನಿಜಾಂಶ ಬಾಯಿಬಿಟ್ಟಿರುವ ಮದ್ಯಪ್ರಿಯ, ಲಾಕ್‍ಡೌನ್‍ನಿಂದ ಕೆಲಸವಿಲ್ಲ, ಸಂಬಳವಿಲ್ಲ, ಮದ್ಯ ಸೇವಿಸಲು ಹಣವಿಲ್ಲ. ಹಾಗಾಗಿ ಟಿವಿ ಮಾರಲು ಹೋಗುತ್ತಿದ್ದೇನೆ ಎಂದು ಉತ್ತರಿಸಿದ್ದಾನೆ.

    ಮೇ 4 ರಂದು ರಾಜ್ಯಾದ್ಯಂತ ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದ್ದು, ಈ ಬೆನ್ನಲ್ಲೇ ಮದ್ಯದಂಗಡಿಗಳು ಓಪನ್ ಆಗಿದ್ದವು. ಇದೇ ಸಂದರ್ಭದಲ್ಲಿ 42 ದಿನಗಳ ಕಾಲ ಮದ್ಯವಿಲ್ಲದೆ ಕಂಗಾಲಾಗಿದ್ದ ಎಣ್ಣೆಪ್ರಿಯರು ಬಿಸಿಲು ಎನ್ನದೇ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡಿದ್ದರು. ಮೊದಲ ದಿನವೇ ಕರ್ನಾಟಕದಲ್ಲಿ 45 ಕೋಟಿ ಮೌಲ್ಯದ ಮದ್ಯ ಸೇಲ್ ಆಗಿತ್ತು.

  • 40 ದಿನದ ಬಳಿಕ ಟೈಟಾಗಿ ರಸ್ತೆ ಮಧ್ಯೆಯೇ ಮಲಗಿದ ರಾಜ್ಯದ ಮೊದಲಿಗ

    40 ದಿನದ ಬಳಿಕ ಟೈಟಾಗಿ ರಸ್ತೆ ಮಧ್ಯೆಯೇ ಮಲಗಿದ ರಾಜ್ಯದ ಮೊದಲಿಗ

    ಚಿಕ್ಕಮಗಳೂರು: ಮದ್ಯ ಪ್ರಿಯನೊಬ್ಬ 40 ದಿನದ ಮದ್ಯದ ಆಸೆಯನ್ನ ಒಂದೇ ಗಂಟೆಯಲ್ಲಿ ಈಡೇರಿಸಿಕೊಂಡು ರಸ್ತೆ ಮಧ್ಯೆ ಸ್ಲೀಪಿಂಗ್ ಮೂಡ್‍ಗೆ ಜಾರಿರೋ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.

    ಬೆಳಗ್ಗೆ 6 ಗಂಟೆಗೆ ಬಂದು ಕ್ಯೂನಲ್ಲಿ ನಿಂತು ಬಾರ್ ಮಾಲೀಕನ ದಾರಿಯನ್ನೇ ಕಾಯುತ್ತಿದ್ದ ಎಣ್ಣೆ ಪ್ರಿಯರು ಖರೀದಿಸಿದ ಕೂಡಲೇ ಕಂಠಪೂರ್ತಿ ಕುಡಿದು ರಸ್ತೆ ಮಧ್ಯೆಯೇ ತೂರಾಡಿಕೊಂಡು, ತೇಲಾಡಿಕೊಂಡು ಬಾಡಿ ಬ್ಯಾಲೆನ್ಸ್ ತಪ್ಪಿ ಪಾಚಿಕೊಂಡಿದ್ದಾನೆ. ಫೋನಿನಲ್ಲಿ ಮಾತನಾಡಿಕೊಂಡು ಬಂದು ಹಾಗೇ ಬಿದ್ದಿದ್ದಾನೆ. ಕೈಯಲ್ಲಿ ಫೋನ್, ಜೇಬಲ್ಲಿ ಸ್ಟಾಕ್ ಹಾಗೆಯೇ ಇದೆ.

    ತರೀಕೆರೆಯ ಕೋಡಿಕ್ಯಾಂಪ್‍ನಲ್ಲಿ ಎಣ್ಣೆಗಾಗಿ ಸುಮಾರು 200 ಮೀಟರ್ ಕ್ಯೂ ನಿಂತಿದ್ದಾರೆ. ಯುವಕರು ಹೆಲ್ಮೆಟ್ ಹಾಕಿಕೊಂಡೇ ನಿಂತರೆ, ವೃದ್ಧರು ತಲೆ ಮೇಲೆ ಟವೆಲ್ ಹಾಕಿಕೊಂಡು ಕಾದು ನಿಂತಿದ್ದಾರೆ. ಬೆಳಗ್ಗೆಯಿಂದ ಕಾಯುತ್ತಾ ಕೂತಿದ್ದ ಮದ್ಯ ಪ್ರಿಯರು ಬೈಕ್-ಕಾರಿನಲ್ಲಿ ಯಾರಾದರೂ ಬಂದರೆ ಬಾರ್ ಓನರ್ ಬಂದರು ಎಂದು ಎದ್ದು ನಿಲ್ಲುತ್ತಿದ್ದ ದೃಶ್ಯ ಕೂಡ ಕಂಡುಬಂದಿದೆ.

    ಜೊತೆಗೆ ಬಂದವರು ಕ್ಯೂನಲ್ಲಿ ಬಂದು ನಿಂತ ಬಳಿಕ ಥೋ, ಇವನ್ಯಾರೋ ನಮ್ಮ ಗಿರಾಕಿಯೇ, ನಾವು ಓನರ್ ಅಂದುಕೊಂಡೆವು ಎಂದು ಮತ್ತೆ ನಿಂತಲ್ಲೇ ಕುಳಿತುಕೊಂಡು ಕಾಯುತ್ತಿದ್ದರು. ಕೊನೆಗೆ 9 ಗಂಟೆಗೆ ಬಂದು ಬಾಗಿಲು ತೆಗೆಯುತ್ತಿದ್ದಂತೆ ಅವರ ಮುಖದಲ್ಲಿನ ಹರ್ಷಕ್ಕೆ ಪಾರವೇ ಇಲ್ಲದಂತಾಗಿ ಹೊಟ್ಟೆ ತುಂಬಾ ಕುಡಿದು ರಸ್ತೆ ಮಧ್ಯೆಯೇ ಮಲಗಿದ್ದಾರೆ.