Tag: ಮದ್ಯಪಾನ

  • 2022ರಲ್ಲಿ ದಾಖಲೆಯ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು

    2022ರಲ್ಲಿ ದಾಖಲೆಯ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಈ ವರ್ಷ ದಾಖಲೆಯ ಮಟ್ಟದಲ್ಲಿ ಡ್ರಿಂಕ್ ಅಂಡ್ ಡ್ರೈವ್ (Drink And Drive) ಕೇಸ್‍ಗಳು ದಾಖಲಾಗಿದೆ.

    ಹೌದು. 2022 ಅಂತ್ಯಗೊಂಡು, 2023 ಪ್ರಾರಂಭವಾಗಲು ಐದೇ ದಿನ ಬಾಕಿಯಿದೆ. ಈಗಾಗಲೇ 2023ರ ಆಚರಣೆಗೆ ಅದ್ಧೂರಿಯ ಸಿದ್ಧತೆಯು ಪ್ರಾರಂಭಗೊಂಡಿದ್ದು, ಎಲ್ಲಾ ಪಬ್‍ಗಳು ಬುಕ್ ಆಗಿದೆ. ಆದರೆ ಕೇವಲ ಸಿಲಿಕಾನ್ ಸಿಟಿಯೊಂದರಲ್ಲಿ ಈ ವರ್ಷದ ನವೆಂಬರ್‌ವರೆಗೆ 26,017 ಮಂದಿಯ ವಿರುದ್ಧ ಡ್ರಿಂಕ್ ಅಂಡ್ ಡ್ರೈವ್ ಕೇಸ್‍ಗಳು ದಾಖಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

    ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ವಾಹನ ಸವಾರರು 26 ಕೋಟಿ ರೂ. ಸಂದಾಯ ಮಾಡಿದ್ದಾರೆ. 2020 ಹಾಗೂ 2021ರಲ್ಲಿ ಕೋವಿಡ್ ಹಿನ್ನೆಲೆ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಅಷ್ಟಾಗಿ ನಡೆದಿರಲಿಲ್ಲ. ಆದರೆ ಈ ವರ್ಷ ಅಪಘಾತ ತಡೆಯುವ ಸಲುವಾಗಿ ಸಂಚಾರಿ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಿದ್ದಾರೆ. ಇದನ್ನೂ ಓದಿ: ಇಂಧನ ಟ್ಯಾಂಕರ್ ಭೀಕರ ಸ್ಫೋಟ – 10 ಸಾವು, 40 ಮಂದಿಗೆ ಗಾಯ

    2020ರಲ್ಲಿ 5,343 ಡ್ರಿಂಕ್ ಅಂಡ್ ಡ್ರೈವ್ ಕೇಸ್‍ಗಳು ದಾಖಲಾಗಿದ್ದವು. 2021ರಲ್ಲಿ 4,144 ಡ್ರಿಂಕ್ ಅಂಡ್ ಡ್ರೈವ್ ಕೇಸ್‍ಗಳು ದಾಖಲಾಗಿದ್ದವು. ಆದರೆ ಈ ಬಾರಿ ಸಾಕಷ್ಟು ಜನ ಕುಡಿದು ಗಾಡಿ ಓಡಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಕೈ ನಾಯಕ ಅಲ್ತಾಫ್‌ ಖಾನ್ ಮನೆ ಬಳಿ ಹೊಂಚು ಹಾಕಿದ್ದ ಮೂವರು ವಶಕ್ಕೆ

    Live Tv
    [brid partner=56869869 player=32851 video=960834 autoplay=true]

  • ಮದ್ಯಪಾನ ಮಾಡೋರು ಸಾಯ್ತಾರೆ: ಬಿಹಾರ್ ಸಿಎಂ

    ಮದ್ಯಪಾನ ಮಾಡೋರು ಸಾಯ್ತಾರೆ: ಬಿಹಾರ್ ಸಿಎಂ

    ಪಾಟ್ನಾ: ಯಾರು ಮದ್ಯಪಾನ (Liquor) ಮಾಡುತ್ತಾರೋ ಅವರು ಸಾಯುತ್ತಾರೆ. ಈ ಪ್ರಕರಣ ನಮಗೆ ಉದಾಹರಣೆ ಆಗಿದೆ ಎಂದು ಬಿಹಾರ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಹೇಳಿದರು.

    ಬಿಹಾರದ ಛಾಪ್ರಾದಲ್ಲಿ ಕಳ್ಳಬಟ್ಟಿ ಸೇವಿಸಿ 37 ಮಂದಿ ಬಲಿಯಾದ ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮದ್ಯ ಸೇವಿಸುವವರು ಸಾಯುತ್ತಾರೆ. ಜನರು ಜಾಗರೂಕರಾಗಿರಬೇಕು ಎಂದ ಅವರು, ಕಳ್ಳಬಟ್ಟಿಯಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ನೀಡುವುದಿಲ್ಲ ಎಂದು ತಿಳಿಸಿದರು.

    ಮದ್ಯ ನಿಷೇಧದ ಬಗ್ಗೆ ನಾವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಆದರೆ ಜನರು ಹೆಚ್ಚು ಜಾಗರೂಕರಾಗಿರಬೇಕು. ನಿಷೇಧವಿರುವಾಗ ಮಾರಾಟವಾಗುವ ಮದ್ಯದಲ್ಲಿ ಏನಾದರೂ ತಪ್ಪು ಇರುತ್ತದೆ. ಹೀಗಾಗಿ ನೀವು ಮದ್ಯ ಸೇವಿಸಬಾರದು. ಹೆಚ್ಚಿನ ಜನರು ನಿಷೇಧ ನೀತಿಯನ್ನು ಒಪ್ಪಿದ್ದಾರೆ. ಆದರೆ ಕೆಲವರು ತಪ್ಪು ಮಾಡುತ್ತಾರೆ ಅವರು ವಾದಿಸಿದರು. ಇದನ್ನೂ ಓದಿ: ಕತ್ತು ಕೊಯ್ದ ಸ್ಥಿತಿಯಲ್ಲಿ ಖಾಸಗಿ ಕಾಲೇಜಿನ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿ ಶವ ಪತ್ತೆ

    ಛಾಪ್ರಾ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಳ್ಳಬಟ್ಟಿ ಸೇವಿಸಿ ಕನಿಷ್ಠ 38 ಮಂದಿ ಸಾವನ್ನಪ್ಪಿದ್ದು, ಇನ್ನಷ್ಟು ಸಾವು ಸಂಭವಿಸುವ ಭೀತಿ ಎದುರಾಗಿದೆ. ಏಪ್ರಿಲ್ 2016ರಲ್ಲಿ ನಿತೀಶ್ ಕುಮಾರ್ ಸರ್ಕಾರವು ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿತು. ಆದರೆ ನಿಷೇಧವನ್ನು ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ವಿಧಾನಸಭೆ ಮತ್ತು ಹೊರಗೆ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಚೀನಾ ವಿರುದ್ಧ ಮಾತನಾಡಲು ಅವಕಾಶವೇ ಇಲ್ಲ – ಖರ್ಗೆ ಕಿಡಿ

    Live Tv
    [brid partner=56869869 player=32851 video=960834 autoplay=true]

  • ನಾಯಿಮರಿಗಳ ಬಾಲ, ಕಿವಿ ಕತ್ತರಿಸಿ ಸ್ನ್ಯಾಕ್ಸ್ ಮಾಡಿ ತಿಂದ ಕುಡುಕ

    ನಾಯಿಮರಿಗಳ ಬಾಲ, ಕಿವಿ ಕತ್ತರಿಸಿ ಸ್ನ್ಯಾಕ್ಸ್ ಮಾಡಿ ತಿಂದ ಕುಡುಕ

    ಲಕ್ನೋ: ಕುಡುಕನೊಬ್ಬ ಮದ್ಯ (alcohol) ಸೇವಿಸಿದ ಅಮಲಿನಲ್ಲಿ 2 ನಾಯಿಮರಿಗಳ (Puppy) ಬಾಲ (Tail) ಮತ್ತು ಕಿವಿಗೆ (Ear) ಉಪ್ಪು ಸವರಿ ಸ್ನ್ಯಾಕ್ಸ್ ತಿಂದ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

    ಬರೇಲಿ ಜಿಲ್ಲೆಯ ಫರೀದ್‍ಪುರ ಪ್ರದೇಶದ ಎಸ್‍ಡಿಎಂ ಕಾಲೋನಿಯಲ್ಲಿ ಈ ಘಟನೆ ವರದಿಯಾಗಿದೆ. ಆರೋಪಿ ಮುಖೇಶ್ ವಾಲ್ಮೀಕಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಮದ್ಯಪಾನ ಮಾಡುತ್ತಿದ್ದಾಗ ಈ ಅಮಾನವೀಯ ಕೃತ್ಯ ಎಸಗಿದ್ದಾನೆ.

    ALCOHOL

    ಕುಡುಕ ಮುಖೇಶ್ 2 ನಾಯಿ ಮರಿಗಳ ಒಂದು ಕಿವಿ ಹಾಗೂ ಬಾಲವನ್ನು ಕತ್ತರಿಸಿ ಮದ್ಯದೊಂದಿಗೆ ಸೇವಿಸಿದ್ದಾನೆ. ಇದರಿಂದಾಗಿ 2 ನಾಯಿ ಮರಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಅವೆರೆಡು ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿವೆ. ಇದನ್ನೂ ಓದಿ: ಮದ್ಯಕ್ಕೆ ಸಾಲ ಕೊಡಲ್ಲ ಎಂದಿದ್ದಕ್ಕೆ ಮಹಿಳೆಯನ್ನು ಕೊಲೆ ಮಾಡಿದ ನೆರೆಮನೆಯಾತ

    ಘಟನೆಗೆ ಸಂಬಂಧಿಸಿ ಪೀಪಲ್ ಫಾರ್ ಅನಿಮಲ್ಸ್ ಸಂಘಟನೆಯ ಸದಸ್ಯ ಧೀರಜ್ ಪಾಠಕ್ ಎಂಬಾತ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳ ಕುಟ್ಟಿ ಫೋಟೋಗೆ ಮನಸೋತ ಶಿಕ್ಷಕ – ಮ್ಯಾಟ್ರಿಮೊನಿ ಹೆಸರಲ್ಲಿ ಲಕ್ಷ ಲಕ್ಷ ಪೀಕಿದ ಯುವತಿ

    Live Tv
    [brid partner=56869869 player=32851 video=960834 autoplay=true]

  • ಮದ್ಯ ಸೇವಿಸಿ ಗಲಾಟೆ- ಮಗಳ ಮದುವೆಗೆ ಕೆಲವೇ ಗಂಟೆ ಇರುವಾಗಲೇ ತಂದೆ ಆತ್ಮಹತ್ಯೆ

    ಮದ್ಯ ಸೇವಿಸಿ ಗಲಾಟೆ- ಮಗಳ ಮದುವೆಗೆ ಕೆಲವೇ ಗಂಟೆ ಇರುವಾಗಲೇ ತಂದೆ ಆತ್ಮಹತ್ಯೆ

    ಲಕ್ನೋ: ಮದ್ಯ (Alcohol) ಸೇವಿಸಿದ್ದಕ್ಕೆ ಅವಮಾನಿಸಿದ್ದಕ್ಕಾಗಿ ವ್ಯಕ್ತಿಯೊಬ್ಬ ತನ್ನ ಮಗಳ (Daughter) ಮದುವೆಗೆ (Marriage) ಕೆಲವೇ ಗಂಟೆಗಳು ಇರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

    ಸುನೀಲ್ ಕುಮಾರ್ ದ್ವಿವೇದಿ (58) ಎಂಬಾತ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಲಕ್ನೋದ ಹೊರವಲಯದಲ್ಲಿರುವ ಮೋಹನ್‍ಲಾಲ್‍ಗಂಜ್ ಪ್ರದೇಶದ ಟಿಕ್ರಾಸಾನಿ ಗ್ರಾಮದ ತನ್ನ ಮನೆಯಲ್ಲಿ ಈ ಘಟನೆ ನಡೆದಿದೆ. ಮದುವೆಗೆ ಬಂದಿದ್ದ ಸಂಬಂಧಿಕರು ಕೋಣೆಗೆ ಹೋಗಿ ನೋಡಿದಾಗ ಸುನೀಲ್ ಕುಮಾರ್ ಶವವಾಗಿ ಪತ್ತೆ ಆಗಿದ್ದಾನೆ.

    ಸುನೀಲ್ ಕುಮಾರ್ ತನ್ನ ಮಗಳ ಮದುವೆಗೆ ಕೆಲವೇ ಗಂಟೆಗಳಿರುವಾಗಲೇ ಮದ್ಯ ಸೇವಿಸಿ ಮದುವೆ ಮನೆಗೆ ಬಂದಿದ್ದ. ಅಷ್ಟೇ ಅಲ್ಲದೇ ಮದುವೆಗೆ ಬಂದಿದ್ದ ಸಂಬಂಧಿಗಳಿಗೆಲ್ಲ ಸುನೀಲ್ ಕುಮಾರ್‌ ಬೈದಿದ್ದ. ತಂದೆಯ ವರ್ತನೆಯನ್ನು ನೋಡಿದ್ದ ಆತನ ಪುತ್ರ ಬೈದು ಅವಮಾನ ಮಾಡಿದ್ದ. ಇದರಿಂದಾಗಿ ಸುನೀಲ್ ಕುಮಾರ್ ಬೇಸರಗೊಂಡು ನೇಣಿಗೆ ಶರಣಾಗಿದ್ದಾನೆ. ಇದನ್ನೂ ಓದಿ: ಪೀಸ್‌ಪೀಸ್ ಪ್ರೇಮಿ ಅಫ್ತಾಬ್ ಹತ್ಯೆಗೆ ಯತ್ನ – ಪೊಲೀಸ್ ವ್ಯಾನ್ ಮೇಲೆ ದಾಳಿ

    ಘಟನೆಗೆ ಸಂಬಂಧಿಸಿದಂತೆ ಸುನೀಲ್‌ ಕುಮಾರ್‌ನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಾನು ಲೂಟಿ ಹೊಡೆದು ರಾಜಕೀಯ ಮಾಡಿಲ್ಲ, ಅಕ್ರಮ ಮಾಡಿ ಜೀವನ ಮಾಡಿಲ್ಲ: HDK

    Live Tv
    [brid partner=56869869 player=32851 video=960834 autoplay=true]

  • ಇಬ್ಬರು ಮಕ್ಕಳೊಂದಿಗೆ ಚೆಕ್‍ಡ್ಯಾಂಗೆ ಹಾರಿ ಮಹಿಳೆ ಆತ್ಮಹತ್ಯೆ

    ಇಬ್ಬರು ಮಕ್ಕಳೊಂದಿಗೆ ಚೆಕ್‍ಡ್ಯಾಂಗೆ ಹಾರಿ ಮಹಿಳೆ ಆತ್ಮಹತ್ಯೆ

    ಚಿತ್ರದುರ್ಗ: ಮದ್ಯಪಾನ (Alcohol) ಕ್ಕೆ ದಾಸನಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಗಂಡನ ಟಾರ್ಚರ್ ತಾಳಲಾರದೆ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಚೆಕ್ ಡ್ಯಾಂ (Check Dam) ಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ.

    ಘಟನೆಯಲ್ಲಿಜಾನಕಲ್ ಲಂಬಾಣಿ ಹಟ್ಟಿಯ ಅರ್ಪಿತಾ(28), ಮಗಳು ಮಾನಸ(6), ಮಗ ಮದನ್(4) ಮೃತ ದುರ್ದೈವಿಗಳು. ಕಳೆದ 8ವರ್ಷದ ಹಿಂದೆ ಹೊಸದುರ್ಗ ತಾಲೂಕಿನ ಜಾನಕಲ್ ಲಂಬಾಣಿಹಟ್ಟಿಯ ಅರ್ಪಿತಾಳನ್ನು ಕೊಂಡಜ್ಜಿ ಲಂಬಾಣಿಹಟ್ಟಿಯ ಮಂಜಾನಾಯ್ಕ್ ಮದುವೆಯಾಗಿದ್ದು, ಪತ್ನಿ ಮೇಲೆ ಅನುಮಾನ ಪಡುತ್ತಿದ್ದನು. ಇದನ್ನೂ ಓದಿ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು – ಕಣ್ಣುಗಳನ್ನು ದಾನ ಮಾಡಿದ ಪೋಷಕರು

    ಅಲ್ಲದೇ ನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ಟಾರ್ಚರ್ (Torcher) ನೀಡುತ್ತಾ ಹಲ್ಲೆ ನಡೆಸುತ್ತಿದ್ದನಂತೆ. ಈ ಕಿರುಕುಳದಿಂದ ಮನನೊಂದ ಅರ್ಪಿತಾ ತನ್ನ ಇಬ್ಬರು ಮಕ್ಕಳೊಂದಿಗೆ ಚೆಕ್ ಡ್ಯಾಂಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಅರ್ಪಿತಾ, ಮೊಬೈಲ್ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೆಲ್ಫಿ ವೀಡಿಯೋ ವೇಳೆ ಅಪ್ಪ ಎಂದು ಕೂಗಿರುವ ಪುಟ್ಟ ಬಾಲಕ ಮದನ್‍ನ ಮನಕಲಕುವ ಸೆಲ್ಫಿ ವೀಡಿಯೋ ವೈರಲ್ ಆಗಿದೆ.

    ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕುಡಿದ ಮತ್ತಿನಲ್ಲಿ ಮಹಿಳೆಯರಿಂದ ಸೆಕ್ಯೂರಿಟಿ ಗಾರ್ಡ್ ಮೇಲೆ ದೌರ್ಜನ್ಯ

    ಕುಡಿದ ಮತ್ತಿನಲ್ಲಿ ಮಹಿಳೆಯರಿಂದ ಸೆಕ್ಯೂರಿಟಿ ಗಾರ್ಡ್ ಮೇಲೆ ದೌರ್ಜನ್ಯ

    ಲಕ್ನೋ: ಕುಡಿದ ಮತ್ತಿನಲ್ಲಿ ಮೂವರು ಮಹಿಳೆಯರು ಸೇರಿಕೊಂಡು ಸೆಕ್ಯೂರಿಟಿ ಗಾರ್ಡ್ ಮೇಲೆ ದೌರ್ಜನ್ಯ ಎಸಗಿರುವ ಘಟನೆ ನೋಯ್ಡಾದ ಸೆಕ್ಟರ್-121ರಲ್ಲಿ (Noida’s Sector-121) ನಡೆದಿದೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ವೀಡಿಯೋದಲ್ಲಿ ಮಹಿಳೆಯೊಬ್ಬರು ಸೆಕ್ಯೂರಿಟಿ ಗಾರ್ಡ್ ಕೊರಳಪಟ್ಟಿ ಹಿಡಿದುಕೊಂಡಿರುವುದನ್ನು ಕಾಣಬಹುದಾಗಿದೆ. ಈ ಸಂಬಂಧ ಪೊಲೀಸರು ಇದೀಗ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಯಿಂದ ನವಾಜ್ ಔಟ್- ಇಷ್ಟವಾಗಲಿಲ್ಲ ಹುಡುಗನ ನಡೆ

    ಸೆಕ್ಯೂರಿಟಿ ಗಾರ್ಡ್ ಅನ್ನು ಪಂಕಜ್ ಎಂದು ಗುರುತಿಸಲಾಗಿದ್ದು, ನೋಯ್ಡಾ ಸೊಸೈಟಿಗೆ ಮಹಿಳೆಯರು ಬಂದು ಕರ್ತವ್ಯನಿರತರಾಗಿದ್ದ ಪಂಕಜ್ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಮಹಿಳೆಯರು ಬಂದ ವಾಹನದಲ್ಲಿ ಸೊಸೈಟಿ ಸ್ಟಿಕ್ಕರ್ ಇಲ್ಲದೇ ಇರುವುದಕ್ಕೆ ಅವರನ್ನು ಸೆಕ್ಯೂರಿಟಿ ಗಾರ್ಡ್ ಅಡ್ಡ ಹಾಕಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಹಿಳೆಯರು ಆತನ ವಿರುದ್ಧ ನಿಂದಿಸಲು ಆರಂಭಿಸಿದರು. ಈ ವೇಳೆ ಜಗಳ ಬಿಡಿಸಲು ಇತರ ಸೆಕ್ಯೂರಿಟ ಗಾರ್ಡ್‍ಗಳು ಮಧ್ಯೆ ಪ್ರವೇಶಿಸಿದಾಗ, ಕುಡಿದ ಮತ್ತಿನಲ್ಲಿದ್ದ ಮಹಿಳೆಯರು ಅವರೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು.

    ಈ ಸಂಬಂಧ ಸೆಕ್ಯೂರಿಟಿ ಗಾರ್ಡ್ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಮಹಿಳೆಯರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅವರಲ್ಲಿ ಇಬ್ಬರಿಗೆ ಚಲನ್ ಜಾರಿ ಮಾಡಲಾಗಿದ್ದು, ಮತ್ತೋರ್ವ ಮಹಿಳೆ ತಲೆಮರೆಸಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಮಗನೇ ಟ್ರೈಲರ್ ರಿಲೀಸ್‍ಗೆ ನೀನೇ ನನ್ನ ಕರೆದೊಯ್ಯುತ್ತಿರುವೆ- ರಾಘಣ್ಣ ಭಾವುಕ

    ಸಿಆರ್‌ಪಿಸಿ ಸೆಕ್ಷನ್ 151ರ ಅಡಿಯಲ್ಲಿ ಇಬ್ಬರು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಅವರನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಮತ್ತು ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 323 (ಸ್ವಯಿಚ್ಛೆಯಿಂದ ಗಾಯವನ್ನುಂಟು ಮಾಡಿದ್ದಕ್ಕೆ ದಂಡನೆ) ಮತ್ತು 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪೊಲೀಸ್ ಠಾಣೆಯಲ್ಲೇ ಎಣ್ಣೆ ಪಾರ್ಟಿ

    ಪೊಲೀಸ್ ಠಾಣೆಯಲ್ಲೇ ಎಣ್ಣೆ ಪಾರ್ಟಿ

    ಕೋಲಾರ: ಪೊಲೀಸ್ ಠಾಣೆಯಲ್ಲೇ (Police Station) ಕುಳಿತು ಪೊಲೀಸ್ ಸಿಬ್ಬಂದಿ ಮದ್ಯಪಾನ (Drinks) ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ.

    ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಠಾಣೆಯ ಪೊಲೀಸ್ ಪೇದೆಗಳಾದ ಚಲಪತಿ, ಆಂಜಿ, ಹಾಗೂ ಮಂಜುನಾಥ್ ಮದ್ಯಪಾನ ಮಾಡುತ್ತಿರುವ ಸಿಬ್ಬಂದಿ ಆಗಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಲೀಕ್ ಪ್ರಕರಣ – ನಾಳೆಯಿಂದ 2 ದಿನ ವಿಶ್ವವಿದ್ಯಾಲಯ ಬಂದ್

    ಕೆಲಸದ ಸಮಯದಲ್ಲಿ ಎಣ್ಣೆ ಹಾಕಿ ಮಜಾ ಮಾಡುತ್ತಿರುವ ಸಿಬ್ಬಂದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದ್ದು, ಸಿಬ್ಬಂದಿ ಪೊಲೀಸ್ ಠಾಣೆಯನ್ನೇ ಬಾರ್ ಆಗಿ ಪರಿವರ್ತಿಸಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೈಕಲ್‍ಗೆ ಬೈಕ್ ಡಿಕ್ಕಿ- ಪಲ್ಸರ್ ಸವಾರ ಸ್ಥಳದಲ್ಲೇ ಸಾವು

    Live Tv
    [brid partner=56869869 player=32851 video=960834 autoplay=true]

  • ನಿತ್ಯ ಎಣ್ಣೆ ಹಾಕಿ ಪಾಠ – ಮದ್ಯದೊಂದಿಗೆ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕಿ

    ನಿತ್ಯ ಎಣ್ಣೆ ಹಾಕಿ ಪಾಠ – ಮದ್ಯದೊಂದಿಗೆ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕಿ

    ತುಮಕೂರು: ಬೆಳ್ಳಂಬೆಳಗ್ಗೆ ಮದ್ಯಪಾನ ಮಾಡಿಕೊಂಡು ಪಾಠ ಮಾಡುತ್ತಿದ್ದ ಲೇಡಿ ಟೀಚರ್(Teacher) ಒಬ್ಬಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವಿಲಕ್ಷಣ ಘಟನೆ ತುಮಕೂರು(Tumkuru) ತಾಲೂಕಿನ ಚಿಕ್ಕಸಾರಂಗಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

    ಕಳೆದ 25 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕಿ ಗಂಗಲಕ್ಷ್ಮಮ್ಮ ಸೇವೆ ಸಲ್ಲಿಸುತ್ತಿದ್ದಾಳೆ. ಆದರೆ ಕಳೆದ 5 ವರ್ಷದಿಂದ ಮದ್ಯ ವ್ಯಸನಕ್ಕೆ ದಾಸಳಾಗಿದ್ದಳು. ಇದನ್ನೂ ಓದಿ: ಅರ್ಧಂಬರ್ಧ ಮೆಟ್ರೋ ಕಾಮಗಾರಿಯಿಂದಲೇ ಮುಳುಗಿತಾ ಬೆಂಗಳೂರು..?

    ಮದ್ಯಪಾನ(Alcohol) ಮಾಡಿ ಪಾಠ ಮಾಡಿ, ವಿದ್ಯಾರ್ಥಿಗಳಿಗೆ ಸುಖಾಸುಮ್ಮನೆ ಹೊಡೆಯುವುದು ಹಾಗೂ ಸಹೋದ್ಯೋಗಿಗಳ ಜೊತೆ ಜಗಳ ಮಾಡುತ್ತಿದ್ದಳು. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯುಂಟಾಗಿತ್ತು. ಇದನ್ನು ಮನಗಂಡ ಪೋಷಕರು ಶಿಕ್ಷಕಿ ಗಂಗಲಕ್ಷ್ಮಮ್ಮಗೆ ತಪ್ಪು ತಿದ್ದಿಕೊಳ್ಳುವಂತೆ ತಾಕೀತು ಮಾಡಿದ್ದರು. ಆದರೆ ಗಂಗಲಕ್ಷ್ಮಮ್ಮ ತನ್ನ ಚಾಳಿ ಬದಲಿಸಲಿಲ್ಲ. ಇದರಿಂದ ಪೋಷಕರು ಶಾಲೆಗೆ ಬೀಗ ಹಾಕಿ ಶಿಕ್ಷಕಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು.

    ಈ ವೇಳೆ ಸ್ಥಳಕ್ಕೆ ಬಿ.ಇ.ಒ ಹನುಮಾ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿಕ್ಷಕಿಯ ಟೇಬಲ್‍ನ ಡ್ರಾಯರ್ ಓಪನ್ ಮಾಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದರು. ಸ್ವತಃ ಬಿಇಒ ಡ್ರಾಯರ್ ಓಪನ್ ಮಾಡಲು ಹೋದಾಗ ಶಿಕ್ಷಕಿ ಪ್ರತಿರೋಧ ಒಡ್ಡಿದ್ದಾಳೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಟೇಬಲನ್ನು ಹೊರಕ್ಕೆ ತಂದು ಡ್ರಾಯರ್ ಬೀಗ ಮುರಿದಿದ್ದಾರೆ. ಆಗ ಡ್ರಾಯರ್‍ನಲ್ಲಿ ಒಂದು ಫುಲ್ ಮತ್ತು ಎರಡು ಖಾಲಿ ಮದ್ಯದ ಬಾಟಲ್‍ಗಳು ಪತ್ತೆಯಾಗಿದೆ. ಇದನ್ನೂ ಓದಿ: ಈ ಹಿಂದೆ ಹಾವಿನ ಮೊಟ್ಟೆ, ಇದೀಗ ಹಕ್ಕಿ ಗೂಡಿನಿಂದಾಗಿ ರಾ. ಹೆದ್ದಾರಿ ಕೆಲಸ ಸ್ಥಗಿತ!

    ಮದ್ಯದ ಬಾಟಲ್ ಪತ್ತೆಯಾಗುತಿದ್ದಂತೆ ಕೊಠಡಿ ಬೀಗಹಾಕೊಂಡು ಗಂಗ ಲಕ್ಷ್ಮಮ್ಮ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡಿದ್ದಾಳೆ. ಬಳಿಕ ಪೊಲೀಸರು ಬಂದು ಮದ್ಯದ ಬಾಟಲನ್ನು ವಶಕ್ಕೆ ಪಡೆದಿದ್ದಾರೆ. ಶಿಕ್ಷಕಿ ಗಂಗಲಕ್ಷ್ಮಮ್ಮಳನ್ನು ಇಲಾಖಾ ವಿಚಾರಣೆಗೆ ಒಳಪಡಿಸಲಾಗಿದೆ. ಒಟ್ಟಾರೆ ಚಿಕ್ಕಸಾರಂಗಿ ಶಾಲೆಯ ಮುಂದೆ ನಡೆದ ಹೈಡ್ರಾಮಾಕ್ಕೆ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತ್ನಿಯನ್ನೇ ಬರ್ಬರವಾಗಿ ಕೊಚ್ಚಿ ಕೊಂದ ಪತಿರಾಯ – ಕಾರಣ ಮಾತ್ರ ಸಸ್ಪೆನ್ಸ್

    ಪತ್ನಿಯನ್ನೇ ಬರ್ಬರವಾಗಿ ಕೊಚ್ಚಿ ಕೊಂದ ಪತಿರಾಯ – ಕಾರಣ ಮಾತ್ರ ಸಸ್ಪೆನ್ಸ್

    ಹಾಸನ: ಪತಿಯೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಇಂದ್ರಮ್ಮ (48) ಕೊಲೆಯಾದ ಮಹಿಳೆಯಾಗಿದ್ದು, ಚಂದ್ರಯ್ಯ ಪತ್ನಿಯನ್ನೇ ಕೊಲೆ ಮಾಡಿ ಎಸ್ಕೇಪ್ ಆಗಿರುವ ಆರೋಪಿ. ಇಂದು ಬೆಳಗ್ಗೆ ಇಂದ್ರಮ್ಮ ನಾಲ್ವರ ಜೊತೆ ಕೇಶವಮೂರ್ತಿ ಅವರ ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಮಾರಕಾಸ್ತ್ರ ಹಿಡಿದು ಏಕಾಏಕಿ ದಾಳಿ ಮಾಡಿದ ಚಂದ್ರಯ್ಯ ತನ್ನ ಪತ್ನಿಯನ್ನು ಮನಸ್ಸೋ ಇಚ್ಚೆ ಕೊಚ್ಚಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: 10 ಕೋಟಿಗೆ ಒಂದು ವಿಲ್ಲಾ – ಮಳೆಗೆ ನಿವಾಸಿಗಳು ವಿಲವಿಲ

    POLICE JEEP

    ಈ ವೇಳೆ ಇಂದ್ರಮ್ಮನ ಜೊತೆಗಿದ್ದ ಮಹಿಳೆಯೊಬ್ಬರು ಕಾಪಾಡಲು ಮುಂದಾದಾಗ ಆ ಮಹಿಳೆಯ ಮೇಲು ಚಂದ್ರಯ್ಯ ಹಲ್ಲೆ ಮಾಡಿದ್ದಾನೆ. ಚಂದ್ರಯ್ಯ-ಇಂದ್ರಮ್ಮನ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಆರು ತಿಂಗಳ ಹಿಂದೆಯು ಇಂದ್ರಮ್ಮನನ್ನು ನೇಣು ಹಾಕಿ ಕೊಲ್ಲಲು ಚಂದ್ರಯ್ಯ ಯತ್ನಿಸಿದ್ದ ಎನ್ನಲಾಗಿದೆ. ಇದನ್ನೂ ಓದಿ: ನಿಮ್ಮ ಸರ್ಕಾರದಲ್ಲಿ ದಿಂಬು, ಚೆಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರ ನೆನಪಿಸಿಕೊಳ್ಳಿ- ಸಿದ್ದುಗೆ ಸುನಿಲ್ ತಿರುಗೇಟು

    ಕಳೆದ ರಾತ್ರಿ ಕಂಠಪೂರ್ತಿ ಕುಡಿದು ಬಂದಿದ್ದ ಚಂದ್ರಯ್ಯ ಪತ್ನಿ ಜೊತೆ ಜಗಳವಾಡಿದ್ದ. ಈ ವೇಳೆ ಚಂದ್ರೇಗೌಡ-ಇಂದ್ರಮ್ಮ ಪುತ್ರ ಚೀಕನಹಳ್ಳಿ ಗ್ರಾ.ಪಂ. ಸದಸ್ಯ ಪ್ರದೀಪ್ ಜಗಳ ಬಿಡಿಸಿ ಇಬ್ಬರಿಗೂ ಬುದ್ದಿ ಹೇಳಿದ್ದರು. ಇದೀಗ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ಈ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕುಡಿದ ಮತ್ತಲ್ಲಿ ತಾಯಿಯನ್ನೇ ಥಳಿಸಿ ಕೊಂದ ಪಾಪಿ ಪುತ್ರ

    ಕುಡಿದ ಮತ್ತಲ್ಲಿ ತಾಯಿಯನ್ನೇ ಥಳಿಸಿ ಕೊಂದ ಪಾಪಿ ಪುತ್ರ

    ರಾಂಚಿ: ವ್ಯಕ್ತಿಯೊಬ್ಬ ಕುಡಿದ ಮತ್ತಲ್ಲಿ ತನ್ನ ತಾಯಿಯನ್ನೇ ಥಳಿಸಿ ಹತ್ಯೆ ಮಾಡಿದ ಘಟನೆ ಜಾರ್ಖಂಡ್‍ನ ಗುಮ್ಲಾ ಜಿಲ್ಲೆಯಲ್ಲಿ ನಡೆದಿದೆ.

    ಜಾರ್ಖಂಡ್‍ನ ಗುಮ್ಲಾ ಜಿಲ್ಲೆಯ ಸಾರೆದ್ ಗ್ರಾಮದಲ್ಲಿ ಮನೋಜ್ ಚೀಕ್ ಬಡೈಕ್ (28) ಎಂಬಾತ ಕುಡಿದು ಮನೆಗೆ ಬಂದು ತನ್ನ ತಾಯಿ ಮನ್ಮೈತ್ ದೇವಿ(60)ಯನ್ನು ಥಳಿಸಲು ಪ್ರಾರಂಭಿಸಿದ್ದಾನೆ. ಇದರ ಪರಿಣಾಮವಾಗಿ ಆಕೆ ಸ್ಥಳದಲ್ಲೇ ಮೃತಪಟ್ಟದ್ದಾಳೆ. ಇದಾದ ಬಳಿಕ ಮನೋಜ್ ತನ್ನ ತಾಯಿ ಸಾವನ್ನಪ್ಪಿರುವುದನ್ನು ಗಮನಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: 20ಕ್ಕೂ ಹೆಚ್ಚು ಎಮ್ಮೆ, ಹಸುಗಳ ಮೇಲೆ ಆ್ಯಸಿಡ್ ಎರಚಿದ ಕಿಡಿಗೇಡಿಗಳು!

    crime

    ಗ್ರಾಮಸ್ಥರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಗೆ ಸಂಬಂಧಿಸಿ ಘಾಘ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸ್ ಠಾಣಾಧಿಕಾರಿ ಮಾತನಾಡಿ, ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಈ ಕುರಿತು ವಿವಿಧ ಆಯಾಮಾದಲ್ಲಿ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ಮನೋಜ್‍ಗಾಗಿ ಪೊಲೀಸರು ಹುಡಕಾಡುತ್ತಿದ್ದಾರೆ. ಇದನ್ನೂ ಓದಿ: ಬಿಹಾರ ಸ್ಪೀಕರ್‌ ಸ್ಥಾನಕ್ಕೆ ವಿಜಯ್‌ ಕುಮಾರ್‌ ಸಿನ್ಹಾ ರಾಜೀನಾಮೆ

    Live Tv
    [brid partner=56869869 player=32851 video=960834 autoplay=true]