Tag: ಮದ್ಯಪಾನ

  • ಮದ್ಯಪಾನ ಮಾಡಿ ಶಾಲಾ ಅಡುಗೆ ಕೋಣೆ ಮುಂದೆ ಮಲಗಿದ್ದ ಮುಖ್ಯ ಶಿಕ್ಷಕ ಅಮಾನತು

    ಮದ್ಯಪಾನ ಮಾಡಿ ಶಾಲಾ ಅಡುಗೆ ಕೋಣೆ ಮುಂದೆ ಮಲಗಿದ್ದ ಮುಖ್ಯ ಶಿಕ್ಷಕ ಅಮಾನತು

    ರಾಯಚೂರು: ಫುಲ್ ಟೈಟಾಗಿ ಶಾಲೆಗೆ ಬರುತ್ತಿದ್ದ ರಾಯಚೂರಿನ ಮಸ್ಕಿ ತಾಲೂಕಿನ ಗೋನಾಳ ಶಾಲಾ ಮುಖ್ಯೋಪಾಧ್ಯಾಯ ನಿಂಗಪ್ಪ ಕೊನೆಗೂ ಅಮಾನತಾಗಿದ್ದಾರೆ.

    ಈ ಹೆಡ್ ಮಾಸ್ಟರ್ ಕಂಠಪೂರ್ತಿ ಕುಡಿದು ಶಾಲಾ ಅಡುಗೆ ಕೋಣೆ ಬಾಗಿಲಲ್ಲೇ ಮಲಗಿದ್ದ. ಸುದ್ದಿ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ ಪರಿಶೀಲನೆ ನಡೆಸಿ‌ ಕ್ರಮ ಕೈಗೊಂಡಿದೆ. ಮದ್ಯಪಾನ ಮಾಡಿ ಶಾಲಾ ಆವರಣದಲ್ಲಿ ಮಲಗಿದ್ದ ಹೆಡ್‌ಮಾಸ್ಟರ್ ನಿಂಗಪ್ಪನನ್ನ ಅಮಾನತು ಮಾಡಲಾಗಿದೆ.

    ‌ಕರ್ತವ್ಯ ಲೋಪ, ದುರ್ನಡತೆ ಹಾಗೂ ಬೇಜವಾಬ್ದಾರಿತನ ಹಿನ್ನೆಲೆ ಅಮಾನತುಗೊಳಿಸಿ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ ಆದೇಶ ಹೊರಡಿಸಿದ್ದಾರೆ.

    ಗ್ರಾಮದ ಅಂಭಾದೇವಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಡ್‌ಮಾಸ್ಟರ್ ಬಿಸಿಯೂಟ ಅಡುಗೆ ಮಾಡುವ ಮಹಿಳೆಯರೊಂದಿಗೂ ಅಸಭ್ಯ ವರ್ತನೆ ತೋರಿದ್ದ. ಈ ಹಿಂದೆ ಗ್ರಾಮಸ್ಥರು, ಪೋಷಕರು ಎಷ್ಟೇ ಬಾರಿ ಛೀಮಾರಿ ಹಾಕಿದ್ರು ಬದಲಾಗಿರಲಿಲ್ಲ. ನಿತ್ಯ ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದ ಹೆಡ್‌ಮಾಸ್ಟರ್ ಈಗ ಅಮಾನತಾಗಿದ್ದಾನೆ.

  • ಪತಿಯ ಮರ್ಮಾಂಗವನ್ನು ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ ಕೊಟ್ಟ ಪತ್ನಿ!

    ಪತಿಯ ಮರ್ಮಾಂಗವನ್ನು ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ ಕೊಟ್ಟ ಪತ್ನಿ!

    ಲಕ್ನೋ: ಅಚ್ಚರಿಯ ಪ್ರಕರಣವೊಂದರಂತೆ ಪತ್ನಿಯೊಬ್ಬಳು ತನ್ನ ಪತಿಗೆ ಚಿತ್ರಹಿಂಸೆ ಕೊಟ್ಟ ಆಘಾತಕಾರಿ ಘಟನೆಯೊಂದು ಉತ್ತರಪ್ರದೇಶದ (Uttar Pradesh) ಸಿಯೋಹರಾ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಪತ್ನಿ ಮೆಹರ್‌ (30) ಹಾಗೂ ಪತಿಯನ್ನು ಮನ್ನನ್ ಜೈದಿ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ ಪತ್ನಿ ತನ್ನ ಪತಿಯ ಮೇಲೆ ಈ ರೀತಿಯ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ಸದ್ಯ ಪತಿಯ ಮೇಲೆ ಕ್ರೌರ್ಯ ಮೆರೆದ ಪತ್ನಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್‌ ಆಗುತ್ತಿದೆ.

    ಮೆಹರ್‌ ಹಾಗೂ ಮುನ್ನನ್‌ ಜೈದಿ ಪ್ರತ್ಯೇಕವಾಗಿ ವಾಸವಾಗಿದ್ದರು. ಇವರಿಬ್ಬರ ದಾಂಪತ್ಯದ ನಡುವೆ ಬಿರುಕು ಮೂಡಿದ ಬಳಿಕ ಮೆಹರ್‌ ಮದ್ಯಪಾನ ಹಾಗೂ ಸಿಗರೇಟ್‌ ಸೇದಲು ಆರಂಭಿಸಿದ್ದಾಳೆ. ಅಲ್ಲದೇ ಮೆಹರ್ ತನ್ನನ್ನು ದೈಹಿಕವಾಗಿ ನಿಂದಿಸಿದ್ದಾಳೆ. ತನ್ನ ಮೇಲೆ ಸುಳ್ಳು ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ತನ್ನ ಖಾಸಗಿ ಅಂಗಗಳನ್ನು ಸಿಗರೇಟಿನಿಂದ ಸುಡುವ ಮುನ್ನ ಪತ್ನಿ ತನ್ನ ಕೈಕಾಲುಗಳನ್ನು ಕಟ್ಟಿ ಹಾಕಿದ್ದಾಳೆ ಎಂದು ಸಂತ್ರಸ್ತ ಆರೋಪಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಭ್ರೂಣಹತ್ಯೆ ದಂಧೆ: ದಂಪತಿ ಅರೆಸ್ಟ್

    ತನ್ನ ಸುರಕ್ಷತೆಯ ಬಗ್ಗೆ ಕಳವಳ ವ್ಯ ಕ್ತಪಡಿಸಿದ ಮನ್ನನ್ ತಮ್ಮ ಮನೆಯಲ್ಲಿ ಸಿಸಿಕ್ಯಾಮೆರಾ ಅಳವಡಿಸಿದ್ದಾರೆ ಈ ಕ್ಯಾಮೆರಾದಲ್ಲಿ ಮೆಹರ್‌ ಕ್ರೂರ ಕೃತ್ಯ ಸೆರೆಯಾಗಿದ್ದು, ಮುನ್ನನ್‌ ಪೊಲೀಸರಿಗೆ ಈ ದೃಶ್ಯವನ್ನು ನೀಡಿದ್ದಾರೆ. ಪತಿ ದೂರು ಮತ್ತು ಸಿಸಿಟಿವಿ ದೃಶ್ಯಾ ವಳಿಗಳನ್ನು ಸಲ್ಲಿಸಿದ ನಂತರ ಸಿಯೋಹರಾ ಜಿಲ್ಲಾ ಪೊಲೀಸರು ಕ್ರಮ ಕೈಗೊಂಡಿದ್ದು, ಭಾನುವಾರ ಮಹಿಳೆಯನ್ನು ಬಂಧಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಮಹಿಳೆಯ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲಿಸಿಕೊಂಡಿದ್ದಾರೆ ಎಂದು ಎಸ್‌ಪಿ ಪೂರ್ವ ಧರಂಪಾಲ್ ಸಿಂಗ್ ತಿಳಿಸಿದ್ದಾರೆ.

  • ಮದ್ಯಪಾನ ಮಾಡದಂತೆ ಪೋಷಕರಿಂದ ಬುದ್ದಿವಾದ – ಆತ್ಮಹತ್ಯೆಗೆ ಶರಣಾದ ಪುತ್ರ

    ಮದ್ಯಪಾನ ಮಾಡದಂತೆ ಪೋಷಕರಿಂದ ಬುದ್ದಿವಾದ – ಆತ್ಮಹತ್ಯೆಗೆ ಶರಣಾದ ಪುತ್ರ

    ರಾಯಚೂರು: ಜಿಲ್ಲೆಯ ಮಾನ್ವಿ (Manvi) ಪಟ್ಟಣದಲ್ಲಿ ಪೋಷಕರ ಬುದ್ದಿಮಾತಿಗೆ ಮನನೊಂದು ಪುತ್ರ ನೇಣಿಗೆ (Suicide) ಶರಣಾಗಿರುವ ಘಟನೆ ನಡೆದಿದೆ. ನಿತ್ಯ ಮದ್ಯಪಾನ ಮಾಡದಂತೆ ಬುದ್ದಿಹೇಳಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    24 ವರ್ಷದ ಆದರ್ಶ ಆತ್ಮಹತ್ಯೆಗೆ ಶರಣಾದ ಯುವಕ. ನಿತ್ಯ ಮದ್ಯಪಾನ (Alcohol) ಸೇವಿಸಿ ಮನೆಗೆ ಬರುತ್ತಿದ್ದ ಮಗನ ವರ್ತನೆಯಿಂದ ಪೋಷಕರು ಬೇಸತ್ತಿದ್ದರು. ಇದೇ ವಿಚಾರಕ್ಕೆ ಬೈದು ಬುದ್ದಿವಾದ ಹೇಳಿದ್ದರು. ಬುದ್ದಿವಾದವನ್ನೇ ಅವಮಾನ ಎಂದು ತಿಳಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.  ಇದನ್ನೂ ಓದಿ: ‘ಇಂಡಿಯಾ’ ಬಣದಿಂದ ಅಂತರ ಕಾಪಾಡಿಕೊಂಡ ನಟ ಕಮಲ್ ಹಾಸನ್

    ಮನೆಯ ಬಾತ್ ರೂಮ್‌ನಲ್ಲಿದ್ದ ಕಬ್ಬಿಣದ ಪೈಪ್‌ಗೆ ಹಗ್ಗ ಹಾಕಿ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮಾನ್ವಿ ಪಟ್ಟಣದಲ್ಲಿ ಹೇರ್ ಸಲೂನ್ ನಡೆಸುತ್ತಿದ್ದ ಆದರ್ಶ ಮದ್ಯವ್ಯಸನಿಯಾಗಿದ್ದ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಣು ಶಕ್ತಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಖಾಸಗಿ ಹಣ – ರೇಸ್‌ನಲ್ಲಿ ಟಾಟಾ, ರಿಲಯನ್ಸ್‌, ಅದಾನಿ

  • 2 ಲಕ್ಷ ಬಹುಮಾನಕ್ಕಾಗಿ 10 ನಿಮಿಷದಲ್ಲಿ ಒಂದು ಲೀಟರ್ ಮದ್ಯ ಕುಡಿದು ವ್ಯಕ್ತಿ ಸಾವು

    2 ಲಕ್ಷ ಬಹುಮಾನಕ್ಕಾಗಿ 10 ನಿಮಿಷದಲ್ಲಿ ಒಂದು ಲೀಟರ್ ಮದ್ಯ ಕುಡಿದು ವ್ಯಕ್ತಿ ಸಾವು

    ಬೀಜಿಂಗ್: 2 ಲಕ್ಷ ರೂ. ಬಹುಮಾನಕ್ಕಾಗಿ ಆಫಿಸ್ ಪಾರ್ಟಿಯಲ್ಲಿ 10 ನಿಮಿಷದಲ್ಲಿ ಒಂದು ಲೀಟರ್ ಹಾರ್ಡ್ ಡ್ರಿಂಕ್ಸ್ (Alcohol) ಕುಡಿದು ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಚೀನಾದಲ್ಲಿ (China) ನಡೆದಿದೆ.

    ಝಾಂಗ್ ಎಂಬಾತ ತನ್ನ ಕಚೇರಿಯ ಸಹೋದ್ಯೋಗಿಗಳಿಗೆ ಮಾಲೀಕ ಆಯೋಜಿದ್ದ ಔತಣಕೂಟಕ್ಕೆ ತೆರಳಿದ್ದ. ಈ ವೇಳೆ ಕುಡಿಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಯಾರಾದರೂ ಕುಡಿತದಲ್ಲಿ ಝಾಂಗ್‍ನನ್ನು ಮೀರಿಸಿದರೆ 20,000 ಯುವಾನ್ ಬಹುಮಾನವನ್ನು ನೀಡುವುದಾಗಿ ಈ ವೇಳೆ ಘೋಷಿಸಲಾಗಿದೆ. ಸ್ಪರ್ಧೆಯಲ್ಲಿ ಸೋತರೆ ಅದೇ ಮೊತ್ತದ ಪಾರ್ಟಿ ಕೊಡಿಸುವಂತೆ ಹೇಳಲಾಗಿದೆ. ಬಳಿಕ ತೀವ್ರ ಮದ್ಯ ಸೇವನೆ ಮಾಡಿದ ಝಾಂಗ್ ಅಸ್ವಸ್ಥನಾಗಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಪ್ರಾಣಿಗಳ ದಿನಕ್ಕೆ ಮುದ್ದಾದ ಪಪ್ಪಿಯನ್ನು ತಾಯಿಗೆ ಉಡುಗೊರೆ ನೀಡಿದ್ರು ರಾಹುಲ್

    ಔತಣಕೂಟದಲ್ಲಿದ್ದ ಉದ್ಯೋಗಿಯೊಬ್ಬರು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಝಾಂಗ್ 10 ನಿಮಿಷಗಳಲ್ಲಿ ಒಂದು ಲೀಟರ್ ಬೈಜು ಎಂಬ ಹಾರ್ಡ್ ಡ್ರಿಂಕ್ಸ್ ಕುಡಿದಿದ್ದಾನೆ. ಇದು 30% ರಿಂದ 60% ರಷ್ಟು ವಿಶಿಷ್ಟವಾದ ಆಲ್ಕೋಹಾಲ್ ಅಂಶ ಹೊಂದಿರುವ ಚೈನೀಸ್ ಸ್ಪಿರಿಟ್ ಆಗಿದೆ ಎಂದು ತಿಳಿಸಿದ್ದಾರೆ.

    ಝಾಂಗ್ ಕುಸಿದು ಬಿದ್ದ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅವರು ಉಸಿರುಗಟ್ಟುವಿಕೆ ಮತ್ತು ಹೃದಯ ಸ್ತಂಭನದಿಂದ ಮೃತಪಟ್ಟರು ಎಂದು ಹೇಳಿದ್ದಾರೆ.

    ಇದೇ ಮದ್ಯವನ್ನು ಸೇವಿಸಿ ಚೀನಾದಲ್ಲಿ ಇತ್ತೀಚೆಗೆ ಪ್ರಭಾವಿ ಒಬ್ಬರು ಮೃತಪಟ್ಟಿದ್ದರು. ಬಳಿಕ ಈ ಮದ್ಯದ ಬಗ್ಗೆ ಚೀನಾದಲ್ಲಿ ಭಾರೀ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ಆಂಧ್ರಪ್ರದೇಶ-ತೆಲಂಗಾಣ ನಡುವೆ ಕೃಷ್ಣಾ ನದಿ ನೀರು ಹಂಚಿಕೆ ವಿವಾದ- ಕೃಷ್ಣಾ ನ್ಯಾಯಧಿಕರಣ 2 ರಚನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಣ್ಣೆ ಸಾಲ ಕೊಡಲ್ಲ ಎಂದಿದ್ದಕ್ಕೆ ಕ್ಯಾಶಿಯರ್ ಮೇಲೆ ಬಾಟ್ಲಿಯಿಂದ ಹಲ್ಲೆ!

    ಎಣ್ಣೆ ಸಾಲ ಕೊಡಲ್ಲ ಎಂದಿದ್ದಕ್ಕೆ ಕ್ಯಾಶಿಯರ್ ಮೇಲೆ ಬಾಟ್ಲಿಯಿಂದ ಹಲ್ಲೆ!

    ರಾಮನಗರ: ಎಣ್ಣೆ (Alcohol) ಸಾಲ ಕೊಡಲಿಲ್ಲ ಎಂದು ಬಾರ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕಲ್ಲು ತೂರಾಟ ಮಾಡಿರುವ ಘಟನೆ ಚನ್ನಪಟ್ಟಣ ತಾಲೂಕಿನ ಹೊಂಗನೂರಿನಲ್ಲಿ ನಡೆದಿದೆ.

    ಹೊಂಗನೂರಿನ ರಾಘವೇಂದ್ರ ವೈನ್ಸ್ ನಲ್ಲಿ ತಡರಾತ್ರಿ ಗಲಾಟೆ ನಡೆದಿದೆ. ಬಾರ್ ಕ್ಯಾಶಿಯರ್ ರಾಜಣ್ಣ, ದೀಪು ಎಂಬವರ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮತಗಳಿಂದ ಜೆಡಿಎಸ್‌ಗೆ ಈ ಬಾರಿ ಸೋಲಾಗಿಲ್ಲ: ಸಿಎಂ ಇಬ್ರಾಹಿಂ

    ಅದೇ ಗ್ರಾಮದ ಗಿರಿ, ಕೀರ್ತಿ, ಮನು, ಕೃಷ್ಣ ಮತ್ತು ಅಭಿ ತಡರಾತ್ರಿ ಬಾರ್‍ಗೆ ಆಗಮಿಸಿ ಎಣ್ಣೆ ಸಾಲ ಕೊಡುವಂತೆ ಹೇಳಿದ್ದಾರೆ. ಈ ವೇಳೆ ಸಾಲ ಕೊಡಲು ಆಗಲ್ಲ ಎಂದಾಗ ಏಕಾಏಕಿ ಬಾರ್‍ನಲ್ಲಿದ್ದ ಸಿಬ್ಬಂದಿ ಮೇಲೆ ದೊಣ್ಣೆ ಹಾಗೂ ಬಾಟ್ಲಿಯಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಬಾರ್ ಮೇಲೆ ಕಲ್ಲು ತೂರಿ ಎಸ್ಕೇಪ್ ಆಗಿದ್ದಾರೆ.

    ಪುಂಡರು ಬಾರ್ ಬಳಿ ದಾಂಧಲೆ ನಡೆಸಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಬಾರ್ ಸಿಬ್ಬಂದಿ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಧಾನ ಪರಿಷತ್‍ನಲ್ಲಿ ಗುಂಡಿನ ಗಮ್ಮತ್ತಿನ ಬಗ್ಗೆ ಚರ್ಚೆ- ನಗೆಗಡಲಲ್ಲಿ ತೇಲಿದ ಸದನ

    ವಿಧಾನ ಪರಿಷತ್‍ನಲ್ಲಿ ಗುಂಡಿನ ಗಮ್ಮತ್ತಿನ ಬಗ್ಗೆ ಚರ್ಚೆ- ನಗೆಗಡಲಲ್ಲಿ ತೇಲಿದ ಸದನ

    ಬೆಂಗಳೂರು: ಬಜೆಟ್ (Budget) ಮೇಲಿನ ಭಾಷಣದ ಚರ್ಚೆ ಗುಂಡಿನತ್ತ ತಿರುಗಿ ವಿಧಾನ ಪರಿಷತ್ (Vidhana Parishad) ಕಲಾಪದಲ್ಲಿ ಕೆಲ ಕಾಲ ಗುಂಡಿನ ಮತ್ತಿನ ಗಮ್ಮತ್ತಾಯಿತು. ಗುಂಡಿನ ಚರ್ಚೆಗೆ ಇಡೀ ಸದನವೇ ನಗೆಗಡಲಲ್ಲಿ ತೇಲಾಡಿತು. ಸರ್ವ ರೋಗಕ್ಕೂ ಸಾರಾಯಿ ಮದ್ದು ಅಂತ ಮಾತಿದೆ ಎಂದು ಗುಂಡಿನ ಬಗೆಗಿನ ಚರ್ಚೆಯನ್ನು ಹಾಸ್ಯದ ರೀತಿಯಲ್ಲಿ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ (H Vishwanath) ಸಮರ್ಥನೆ ಮಾಡಿಕೊಂಡರು.

    ವಿಧಾನ ಪರಿಷತ್ ವಿತ್ತೀಯ ಕಾರ್ಯಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮೊದಲಿಗರಾಗಿ ಮಾತನಾಡಿದ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್, ಕಾಂಗ್ರೆಸ್ ಬಜೆಟ್ ಬೆಂಬಲಿಸಿಕೊಂಡು ಮಾತನಾಡಿದರು. ಶಾಸನ ಸಭೆಗೆ ಬರೋದು ಜನರ ಸಮಸ್ಯೆ, ದುಃಖಗಳ ಬಗ್ಗೆ ಚರ್ಚೆ ಮಾಡುವುದಕ್ಕೆ. ಆದರೆ ಇವತ್ತು ವ್ಯವಸ್ಥೆ ಬದಲಾಗಿದೆ ಅಂತ ಕಳವಳ ವ್ಯಕ್ತಪಡಿಸಿದರು.

    ಈ ವೇಳೆ ಮಾತನಾಡುವಾಗ ಗುಂಡಿನ ಚರ್ಚೆಗೆ ವಿಷಯ ತಿರುಗಿತು. ಅತಿ ಹೆಚ್ಚು ಸರಕು ಮತ್ತು ಸೇವಾ ತೆರಿಗೆ (GST) ಕಟ್ಟುವುದು ನಾವು. ಜನ ಬೆಳಗ್ಗೆ ಎದ್ದರೆ ಜಿಎಸ್‍ಟಿ ಕಟ್ಟಬೇಕು. ಹಾಲು, ಪೇಪರ್ ಸೇರಿ ಎಲ್ಲದ್ದಕ್ಕೂ ಜಿಎಸ್‍ಟಿ. ನಾವು ರಾತ್ರಿ ಮಲಗೋವರೆಗೂ ಜಿಎಸ್‍ಟಿ ಕಟ್ಟುತ್ತೇವೆ ಎಂದರು.

    ಈ ವೇಳೆ ಗುಂಡಿನ ಬಗ್ಗೆ ಹೇಳಲಿಲ್ಲವಲ್ಲ ಎಂದು ಬಿಜೆಪಿ ಸದಸ್ಯರು ವಿಶ್ವನಾಥ್ ಕಾಲೆಳೆದರು. ಈ ವೇಳೆ ಸಮ್ಮಿಶ್ರ ಸರ್ಕಾರದ ಪತನದ ವಿಚಾರ ಪ್ರಸ್ತಾಪ ಮಾಡಿದ ವಿಶ್ವನಾಥ್, ಸಮ್ಮಿಶ್ರ ಸರ್ಕಾರದ ಪತನ ಸಮಯದಲ್ಲಿ ವೈಎ ನಾರಾಯಣಸ್ವಾಮಿ ಮನೆಯಲ್ಲಿ ಸೇರುತ್ತಿದ್ದೆವು. ಸಮ್ಮಿಶ್ರ ಸರ್ಕಾರ ಪತನಕ್ಕೆ ನಾರಾಯಣಸ್ವಾಮಿ ಮನೆಯಲ್ಲಿ ಸೇರುವಾಗ ಗುಂಡು ಹೊಡೆಯುತ್ತಿದ್ದೆವು ಎಂದ ಬಿಜೆಪಿ (BJP) ಸದಸ್ಯರ ಕಾಲೆಳೆದರು. ಇದನ್ನೂ ಓದಿ: ಸರ್ಕಾರದಿಂದ ವೆಬ್ ಸೀರೀಸ್ ಪ್ರಶಸ್ತಿ ಘೋಷಿಸಿದ ಸಚಿವ ಅನುರಾಗ್ ಠಾಕೂರ್

    ನಾರಾಯಣಸ್ವಾಮಿ (Narayanaswamy) ಮನೆಯಲ್ಲಿ ಎಣ್ಣೆ ಹೊಡೆದಿದ್ದೇವೆ ಎಂದಿದ್ದ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಛಲವಾದಿ ನಾರಾಯಣಸ್ವಾಮಿ, ಯಾವ ನಾರಾಯಣಸ್ವಾಮಿ ಎಂದು ವಿಶ್ವನಾಥ್ ಹೇಳಬೇಕು. ನಾನು ಈ ಎಣ್ಣೆ ವಿಚಾರದಲ್ಲಿ ಇಲ್ಲ ಎಂದರು. ಈ ವೇಳೆ ಸದನದಲ್ಲಿ ಹಾಸ್ಯದ ಹೊನಲು ಹರಿಯಿತು.

    ವಿಶ್ವನಾಥ್ ಮಾತಿಗೆ ಸದನದಲ್ಲಿ 10 ನಿಮಿಷ ಗುಂಡಿನ ಬಗ್ಗೆ ಚರ್ಚೆಯಾಯಿತು. ತೇಜಸ್ವಿನಿಗೌಡ, ರವಿಕುಮಾರ್, ಭಾರತಿ ಶೆಟ್ಟಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಹಾಸ್ಯಭರಿತ ಎಣ್ಣೆ ಬಗ್ಗೆ ಚರ್ಚೆಯಾಯಿತು. ಇದನ್ನೂ ಓದಿ: ಬಿಎಸ್‍ವೈ ಭೇಟಿಯಾಗಿ ಆಶೀರ್ವಾದ ಪಡೆದ್ರು ಸಿ.ಟಿ ರವಿ!

    ನಂತರ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ನಾನು ವಿಶ್ವನಾಥ್ ಜೊತೆಗೆ ಇದ್ದೆವು. ವಿಶ್ವನಾಥ್ ಈಗ ಗುಂಡು ಹೊಡೆಯುವುದು ಬಿಟ್ಟಿದ್ದಾರೆ. ಬಜೆಟ್ ಬಗ್ಗೆ ಮಾತನಾಡುವಾಗ ಲಾಟರಿ, ಸಾರಾಯಿ ನಿಷೇಧ ಮಾಡಿದ್ದು ಸರ್ಕಾರಕ್ಕೆ ಹೇಳಿ ಎಂದು ಕಿಚಾಯಿಸಿದರು.

    ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ರವಿಕುಮಾರ್ ಮಧ್ಯದ ಸುಂಕ ಹೆಚ್ಚಾಗಿದೆ. ಮದ್ಯಪ್ರಿಯರ ಬಗ್ಗೆ ಕಾಳಜಿಯಿಂದ ಇದರ ಬಗ್ಗೆಯೂ ಬೆಳಕು ಚೆಲ್ಲಲಿ ಎಂದರು. ತೇಜಸ್ವಿನಿಗೌಡ ಮಾತನಾಡಿ, ಇದರ ಬಗ್ಗೆ ಈಗ ಬೆಳಕನ್ನ ಚೆಲ್ಲಲು ಆಗುವುದಿಲ್ಲ. ಇದು ರಾತ್ರಿಯಲ್ಲಿ ನಡೆಯುವ ವಿಷಯ ಎಂದು ಹಾಸ್ಯ ಚಟಾಕಿ ಹಾರಿಸಿದರು. ಭಾರತಿ ಶೆಟ್ಟಿ ಮಾತನಾಡಿ, ಗುಂಡು ಹೊಡೆದವರ ಜೊತೆ ನಾವು ಬದುಕುತ್ತಿದ್ದೇವೆ ಎಂದರು.

    ಬಿಜೆಪಿ ಸದಸ್ಯರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಭಾ ನಾಯಕ ಬೋಸರಾಜ್, ಗುಂಡು ಹಾನಿಕರ ಎಂದು ಅದನ್ನ ಕಡಿವಾಣ ಹಾಕಬೇಕೆಂದು ಅದರ ಮೇಲೆ ಸುಂಕ ಹೆಚ್ಚು ಮಾಡಿದ್ದೇವೆ ಎಂದು ಅಬಕಾರಿ ಸುಂಕ ಹೆಚ್ಚಳ ಸಮರ್ಥಿಸಿಕೊಂಡರು.

    ನಂತರ ಮಾತನಾಡಿದ ವಿಶ್ವನಾಥ್, ಗುಂಡಿನ ಬಗ್ಗೆ ಚರ್ಚೆ ವೇಳೆ ಮಾತಾಡುತ್ತಿದ್ದ ಭಾರತಿ ಶೆಟ್ಟಿ, ತೇಜಸ್ವಿನಿಗೌಡ ಇಬ್ಬರಿಗೂ ಟಾಂಗ್ ಕೊಟ್ಟರು. ಗುಂಡು ಹೊಡೆಯದೆ ಇರುವ ಇವರಿಗೆ ಇಷ್ಟು ಗುಂಡಿಗೆ ಇರೋದಾದರೆ ಗುಂಡು ಹಾಕೋ ನಮಗೆ ಎಷ್ಟು ಗುಂಡಿಗೆ ಇರಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು.

    ನಾವು ಗೆದ್ದಾಗಲೂ ಕುಡಿಯುತ್ತೇವೆ. ಸೋತಾಗಲೂ ಕುಡಿಯುತ್ತೇವೆ. ಸತ್ತಾಗಲೂ ಕುಡಿಯುತ್ತೇವೆ. ಸರ್ವ ರೋಗಕ್ಕೂ ಸಾರಾಯಿ ಮದ್ದು ಅಂತ ಮಾತಿದೆ ಎಂದು ಗುಂಡಿನ ಬಗೆಗಿನ ಚರ್ಚೆಯನ್ನು ಹಾಸ್ಯದ ರೀತಿ ಸಮರ್ಥನೆ ಮಾಡಿಕೊಂಡರು ಸದನ ನಗೆಗಡಲಲ್ಲಿ ತೇಲೀತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದ್ಯಪಾನ ಮಾಡೋದನ್ನು ತಪ್ಪಿಸಲೆತ್ನಿಸಿದ ದಂಪತಿಯನ್ನು ಹೊಡೆದು ಕೊಂದ ಮದ್ಯವ್ಯಸನಿ!

    ಮದ್ಯಪಾನ ಮಾಡೋದನ್ನು ತಪ್ಪಿಸಲೆತ್ನಿಸಿದ ದಂಪತಿಯನ್ನು ಹೊಡೆದು ಕೊಂದ ಮದ್ಯವ್ಯಸನಿ!

    ಲಕ್ನೋ: ಮದ್ಯಪಾನ ಆರೋಗ್ಯಕ್ಕೆ (Alcohol) ಹಾನಿಕಾರಕ ಎಂದು ಗೊತ್ತಿದ್ದರೂ ಕುಡಿತದ ಚಟಕ್ಕೆ ದಾಸರಾದವರು ಅದರಿಂದ ಹೊರಬರಲು ಕಷ್ಟ ಸಾಧ್ಯ. ಅಂತೆಯೇ ಇಲ್ಲೊಂದು ಜೋಡಿ ವ್ಯಕ್ತಿಯನ್ನು ಕುಡಿತದ ಚಟದಿಂದ ದೂರ ಮಾಡಲು ಹೋಗಿ ತಾವೇ ಪ್ರಾಣಬಿಟ್ಟಿದ್ದಾರೆ.

    ಈ ಘಟನೆ ಉತ್ತಪ್ರದೇಶದ ಕಾನ್ಪುರದ ದೆಹತ್ ಜಿಲ್ಲೆಯ ಚಿರಖಿರಿ ಗ್ರಾಮದಲ್ಲಿ ನಡೆದಿದೆ. ವಿಪರೀತ ಮದ್ಯವ್ಯಸನ ಮಾಡುತ್ತಿದ್ದ ಸಹೋದರನನ್ನು ಹೇಗಾದರೂ ಮಾಡಿ ಇದರಿಂದ ಹೊರಬರುವಂತೆ ಮಾಡಬೇಕು ಅಂತಾ ಪತಿ ಹಾಗೂ ಪತ್ನಿ ಪ್ರಯತ್ನಿಸಿ ವಿಫಲರಾಗಿದ್ದಲ್ಲದೇ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

    ಸಹೋದರ ಹಾಗೂ ಆತನ ಪತ್ನಿ ಸೇರಿ ತನ್ನನ್ನು ಮದ್ಯಪಾನದಿಂದ ದೂರ ಮಾಡಲು ಯತ್ನಿಸುತ್ತಿದ್ದಾರೆ ಎಂಬುದನ್ನು ಮನಗಂಡ ಆರೋಪಿ, ವಿಪರೀತ ಮದ್ಯಪಾನ ಮಾಡಿಕೊಂಡು ಬಂದು ದಂಪತಿಯನ್ನು ಥಳಿಸಿ ಕೊಂದೇ ಬಿಟ್ಟಿದ್ದಾನೆ. ಸದ್ಯ ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೆ ಆರೋಪಿಯನ್ನು ಬಂಧಿಸಲಾಗಿದೆ.

    ಈ ಸಂಬಂಧ ಮಂಗಳ್ಪುರ್ ಪೊಲೀಸ್ ಠಾಣೆಯ (Mangalpur police Station) ಅಧಿಕಾರಿ ಪ್ರತಿಕ್ರಿಯಿಸಿ, ಮಂಗಳ್ಪುರ್ ಪೊಲೀಸ್ ಠಾಣೆಯ ಚಿರಖಿರಿ ಗ್ರಾಮದಲ್ಲಿ ಜೋಡಿ ಕೊಲೆ ನಡೆದಿದೆ. ಕೂಡಲೇ ಮಂಗಳ್ಪುರ್ ಪೊಲೀಸ್ ಠಾಣೆಯ ಪೊಲೀಸರ ತಂಡ ಮತ್ತು ಎಸ್‍ಒಜಿ ತಂಡ ಜಂಟಿಯಾಗಿ ಕ್ರಮ ಕೈಗೊಂಡು ಆರೋಪಿ ಮೋಹನ್ ಲಾಲ್ ನನ್ನು ಘಟನೆ ನಡೆದು 6 ಗಂಟೆಗಳ ಒಳಗೆ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಣ್ಣೆ ಏಟಲ್ಲಿ ಭಂಡ ಧೈರ್ಯದಿಂದ ಮೂರು ದಶಕದ ಹಿಂದಿನ ಕೊಲೆ ರಹಸ್ಯ ಬಾಯ್ಬಿಟ್ಟ!

    ಎಣ್ಣೆ ಏಟಲ್ಲಿ ಭಂಡ ಧೈರ್ಯದಿಂದ ಮೂರು ದಶಕದ ಹಿಂದಿನ ಕೊಲೆ ರಹಸ್ಯ ಬಾಯ್ಬಿಟ್ಟ!

    ಮುಂಬೈ: ವ್ಯಕ್ತಿಯೊಬ್ಬ ಎಣ್ಣೆ (Alcohol) ಏಟಲ್ಲಿ ತಾನು ಮೂರು ದಶಕಗಳ ಹಿಂದೆ ಮಾಡಿದ ಜೋಡಿ ಕೊಲೆ ಹಾಗೂ ಸುಲಿಗೆ ಕುರಿತು ಬಾಯ್ಬಿಟ್ಟ ಅಚ್ಚರಿಯ ಪ್ರಸಂಗವೊಂದು ಮುಂಬೈನಲ್ಲಿ ನಡೆದಿದೆ.

    ವ್ಯಕ್ತಿಯನ್ನು ಅವಿನಾಶ್ ಪವಾರ್(49) ಎಂದು ಗುರುತಿಸಲಾಗಿದೆ. ಸದ್ಯ ಈತನನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು (Mumbai Crime Branch Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಕುಡಿದ ಮತ್ತಲ್ಲಿ ಸತ್ಯ ಕಕ್ಕಿದ!: ಸ್ನೇಹಿತರ ಜೊತೆ ಪಾರ್ಟಿ ಮಾಡುವ ವೇಳೆ ಅವಿನಾಶ್ ಕಂಠಪೂರ್ತಿ ಕುಡಿದಿದ್ದನು. ತಾನು ಪೊಲೀಸರ ಕೈಗೆ ಸಿಕ್ಕಿ ಬೀಳುವುದಿಲ್ಲ ಎಂಬ ಭಂಡ ಧೈರ್ಯದ ಮೇಲೆ 30 ವರ್ಷಗಳ ಹಿಂದೆ ಮಾಡಿದ್ದ ತಾನು ಜೋಡಿ ಕೊಲೆ ಹಾಗೂ ಸುಲಿಗೆಯ ಬಗ್ಗೆ ಹೇಳಿಕೊಂಡಿದ್ದಾನೆ. ಇದನ್ನು ಕೇಳಿಸಿಕೊಂಡ ಆಪ್ತನೋರ್ವ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿ ದಯಾ ನಾಯಕ್ ಗೆ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಅವಿನಾಶ್ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಪ್ರಕರಣದ ಕುರಿತು ಮುಂಬೈ ಕ್ರೈಂ ಬ್ರಾಂಚ್ ಡಿಸಿಪಿ ರಾಜ್ ತಿಲಕ್ ರೋಶನ್ ಪ್ರತಿಕ್ರಿಯಿಸಿ, ಬಂಧಿತ ಆರೋಪಿ 30 ವರ್ಷಗಳ ಹಿಂದೆ ಕೊಲೆಯಾದ ದಂಪತಿ ಮನೆಯ ಸ್ವಲ್ಪ ದೂರದಲ್ಲಿ ಅಂಗಡಿ ನಡೆಸುತ್ತಿದ್ದನು. ದಂಪತಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿ ತನ್ನ ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದನು. ಇದೀಗ ಕುಡಿದ ಮತ್ತಿನಲ್ಲಿ ಆತ ಕೊಲೆ ಹಾಗೂ ಸುಲಿಗೆ ಮಾಡಿದ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ನಮಗೆ ಅವನ ಆಪ್ತರು ತಿಳಿಸಿದರು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದರು. ಇದನ್ನೂ ಓದಿ: ಹೆಡ್‍ಕಾನ್ಸ್ಟೇಬಲ್ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆಗೈದಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸರು

    ದಂಪತಿ ಕೊಲೆ: 1993ರ ಅಕ್ಟೋಬರ್ ತಿಂಗಳಲ್ಲಿ ಪುಣೆಯ ಲೋನಾವಾಲಾದಲ್ಲಿರುವ ಮನೆಯೊಂದರಲ್ಲಿ ಅವಿನಾಶ್ ಪವಾರ್ ಹಾಗೂ ಆತನ ಇಬ್ಬರು ಸ್ನೇಹಿತರು ಕಳ್ಳತನ ಮಾಡುವ ಸಂದರ್ಭದಲ್ಲಿ ದಂಪತಿಯನ್ನು ಕೊಲೆ ಮಾಡಿದ್ದರು. ಬಳಿಕ ಪೊಲೀಸರು ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆದರೆ ಅವಿನಾಶ್ ಮಾತ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದ. ಕೆಲ ವರ್ಷಗಳ ಬಳಿಕ ಮಹಾರಾಷ್ಟ್ರದ ಔರಂಗಬಾದ್‍ಗೆ ಮರಳಿದ ಈತ, ಅಮಿತ್ ಪವಾರ್ ಎಂಬ ಹೆಸರಲ್ಲಿ ಚಾಲನಾ ಪರವಾನಗಿಯನ್ನು ಪಡೆದನು. ನಂತರ ಮಹಾರಾಷ್ಟ್ರದಲ್ಲಿ ನಗರದಿಂದ ನಗರಕ್ಕೆ ವಲಸೆ ಹೋಗುತ್ತಾ ಮುಂಬೈನ ವಿಕ್ರೋಲಿ ಪ್ರದೇಶದಲ್ಲಿ ಬಂದು ನೆಲೆಸಿದ್ದನು.

  • ಮದ್ಯದ ಅಮಲಿನಲ್ಲಿ ಸ್ವಂತ ಕಾರನ್ನೇ ಅಪರಿಚಿತನಿಗೆ ಕೊಟ್ಟು ಮೆಟ್ರೋ ಹತ್ತಿದ!

    ಮದ್ಯದ ಅಮಲಿನಲ್ಲಿ ಸ್ವಂತ ಕಾರನ್ನೇ ಅಪರಿಚಿತನಿಗೆ ಕೊಟ್ಟು ಮೆಟ್ರೋ ಹತ್ತಿದ!

    – ಕಾರಿನ ಜೊತೆ ಲ್ಯಾಪ್‍ಟಾಪ್, 18 ಸಾವಿರನೂ ಕಳೆದುಕೊಂಡ

    ನವದೆಹಲಿ: ವ್ಯಕ್ತಿಯೊಬ್ಬ ಮದ್ಯದ (Alcohol) ಅಮಲಿನಲ್ಲಿ ತನ್ನ ಸ್ವಂತ ಕಾರನ್ನು ಬೇರೆಯವರಿಗೆ ಕೊಟ್ಟು ಬಳಿಕ ತಾನು ಮೆಟ್ರೋ (Metro) ದ ಮೂಲಕ ಮನೆಗೆ ಬಂದ ವಿಚಿತ್ರ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

    ವ್ಯಕ್ತಿಯನ್ನು 30 ವರ್ಷದ ಅಮಿತ್ ಪ್ರಕಾಶ್ (Amit Prakash) ಎಂದು ಗುರುತಿಸಲಾಗಿದ್ದು, ಈತ ಗ್ರೇಟರ್ ಕೈಲಾಶ್-|| ನಿವಾಸಿ. ಈತ ಕಾರಿನ ಜೊತೆ ಲ್ಯಾಪ್‍ಟಾಪ್ ಹಾಗೂ 18 ಸಾವಿರ ರೂ. ನಗದು ಕೂಡ ನೀಡಿದ್ದಾನೆ. ಸದ್ಯ ಕಾರು ತೆಗೆದುಕೊಂಡು ಹೋಗಿರುವವನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    ಗುರುಗ್ರಾಮದ ಖಾಸಗಿ ಕಂಪನಿ ಒಂದರಲ್ಲಿ ಅಮಿತ್ ಪ್ರಕಾಶ್ ಕೆಲಸ ಮಾಡುತ್ತಿದ್ದಾನೆ. ಎಂದಿನಂತೆ ಶುಕ್ರವಾರ ಸಂಜೆ ಕೆಲಸ ಮುಗಿಸಿ ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ಲೇಕ್ ಫಾರೆಸ್ಟ್ ವೈನ್ ಶಾಪ್‍ಗೆ ತೆರಳಿದ್ದಾನೆ. ಈ ವೇಳೆ ಅಮಿತ್ ಅಲ್ಲಿ ಕಂಠಪೂರ್ತಿ ಕುಡಿದಿದ್ದಾನೆ. ಇದನ್ನೂ ಓದಿ: 10 ರೂ. ಕೇಳಿದ್ದಕ್ಕೆ ಅಪ್ರಾಪ್ತ ಮಗನನ್ನು ಕತ್ತು ಹಿಸುಕಿ ಕೊಂದ ತಂದೆ

    ಅಮಿತ್ ಕುಡಿದ ಮತ್ತಿನಲ್ಲಿ ಇರುವುದನ್ನು ಗಮನಿಸಿದ ಅಪರಿಚಿತ ವ್ಯಕ್ತಿಯೊಬ್ಬ ತಾನು ಕೂಡ ತಮ್ಮ ಜೊತೆ ಸೇರಿಕೊಳ್ಳಬಹುದೇ ಎಂದು ಕೇಳಿದ್ದಾನೆ. ಈ ವೇಳೆ ಅಮಿತ್ ಓಕೆ ಅಂದಿದ್ದು, ಕುಡಿದ ಮತ್ತಿನಲ್ಲಿ ಇನ್ನೊಂದು ವೈನ್ ಬಾಟ್ಲಿ ಖರೀದಿಸುವಂತೆ ಹೇಳಿದ್ದಾನೆ. ಈ ಸಮಯದಲ್ಲಿ ಆ ವ್ಯಕ್ತಿ 2 ಸಾವಿರ ರೂ. ಬೆಲೆ ಬಾಳುವ ಬಾಟ್ಲಿಗೆ 20,000 ರೂ. ಪಡೆದಿದ್ದಾನೆ.

    ಇದಾದ ಕೆಲ ಹೊತ್ತಿನ ಬಳಿಕ ಆತನೇ ಅಮಿತ್ ಕಾರ್ ಡ್ರೈವ್ ಮಾಡಿಕೊಂಡು ಬಂದಿದ್ದು, ಆತನನ್ನು ದೆಹಲಿಯಲ್ಲಿರುವ ಸುಭಾಷ್ ಚೌಕ್ ಮೆಟ್ರೋ ನಿಲ್ದಾಣದ ಬಳಿ ಬಿಟ್ಟು ಕಾರು ಸಮೇತ ಪರಾರಿಯಾಗಿದ್ದಾನೆ.

    ಇತ್ತ ಮರುದಿನ ಬೆಳಗ್ಗೆ ಅಮಿತ್‍ಗೆ ಹಿಂದಿನ ದಿನ ನಡೆದ ಘಟನೆಗಳು ನೆನಪಾದವು. ಕೂಡಲೇ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿ ದೂರು ದಾಖಲಿಸಿದ್ದಾನೆ. ಸದ್ಯ ಪೊಲೀಸರು ಅಪರಿಚಿ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.

  • ನಮ್ಗೆ ಫ್ರೀ ಟಿಕೆಟ್ ಬೇಡ್ವೇಬೇಡ, ದಯವಿಟ್ಟು ಎಣ್ಣೆ ರೇಟು ಇಳಿಸಿ: ಯುವಕ ಮನವಿ

    ನಮ್ಗೆ ಫ್ರೀ ಟಿಕೆಟ್ ಬೇಡ್ವೇಬೇಡ, ದಯವಿಟ್ಟು ಎಣ್ಣೆ ರೇಟು ಇಳಿಸಿ: ಯುವಕ ಮನವಿ

    ಬೆಂಗಳೂರು: ರಾಜ್ಯಾದ್ಯಂತ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಇಂದು ಚಾಲನೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ಯುವಕನೊಬ್ಬ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾನೆ.

    ಹೌದು. ಮಹಿಳೆಯರಿಗೆ ಉಚಿತ ಬಸ್ (Free Bus Ticket) ಓಕೆ. ನಮಗೆ ಫ್ರೀ ಟಿಕೆಟ್ ಬೇಡ್ವೇ ಬೇಡ. ಆದರೆ ಸಿಎಂ ಸಾಹೇಬ್ರೆ ಎಣ್ಣೆ ರೇಟು ಹೆಚ್ಚು ಮಾಡಿದ್ದು ಸರಿಯಲ್ಲ. ಹೀಗಾಗಿ ದಯವಿಟ್ಟು ಎಣ್ಣೆ ರೇಟು ಇಳಿಸಿ ಎಂದು ಮನವಿ ಮಾಡಿಕೊಂಡಿದ್ದಾನೆ.

    ಮದ್ಯದ ದರದಲ್ಲಿ ಏರಿಕೆ: ಅಬಕಾರಿ ಇಲಾಖೆ (Excise Department) ಸದ್ದಿಲ್ಲದೆ ಮದ್ಯ ಬೆಲೆ ಏರಿಕೆ ಮಾಡಿದೆ. ಸ್ಲಾಬ್‍ಗಳಲ್ಲಿ ಏರಿಕೆ ಮಾಡಲಾಗಿದ್ದು, ಬಿಯರ್‍ಗೆ 10 ರೂ. ಏರಿಕೆ ಮಾಡಲಾಗಿದೆ. ಹಾಗೂ ಹಾಟ್ ಡ್ರಿಂಕ್ಸ್ ಗಳ ವಿವಿಧ ಬ್ರ್ಯಾಂಡ್‍ಗಳಿಗೆ ಬೇರೆ ಬೇರೆ ರೀತಿಯಾಗಿ ಬೆಲೆ ಏರಿಕೆ ಮಾಡಲಾಗಿದೆ.

    ಯಾವೆಲ್ಲಾ ಬ್ರ್ಯಾಂಡ್ ಎಷ್ಟು ಬೆಲೆ ಏರಿಕೆ?: 650 ಎಂಎಲ್‍ನ ಬಿಯರ್ 160 ರಿಂದ 170 ರೂ. ಏರಿಕೆ ಮಾಡಲಾಗಿದೆ. ಮ್ಯಾಕ್ ಡ್ಯಾವೆಲ್ಸ್ 180 ಎಂಎಲ್ 198 ರಿಂದ 220 ರೂ.ಗೆ ಏರಿಕೆ, ಕಿಂಗ್ ಫಿಷರ್ 650 ಎಂಎಲ್‍ಗೆ 160 ರಿಂದ 170 ರೂ. ಏರಿಕೆ, ಟ್ಯೂಬರ್ಗ್ 160 ರಿಂದ 170 ರೂ.ಗೆ ಹೆಚ್ಚಳ‌, ಬಡ್ವೈಸರ್ 200 ರಿಂದ 220 ರೂ. ಹೆಚ್ಚಳ, ಪವರ್ ಕೂಲ್ 100 ರಿಂದ 110 ರೂ. ಏರಿಕೆ, ಬಕಾಡಿ 275 ಎಂಎಲ್‍ಗೆ 90 ರಿಂದ 105 ರೂ. ಏರಿಕೆ ಮಾಡಲಾಗಿದೆ.