Tag: ಮದ್ಯದ ಬಾಟಲಿ

  • ದೆಹಲಿ ಮೆಟ್ರೋದಲ್ಲಿ 2 ಮದ್ಯದ ಬಾಟಲಿ ಕೊಂಡ್ಯೊಯಲು ಅಬಕಾರಿ ಇಲಾಖೆಯ ಆಕ್ಷೇಪ

    ದೆಹಲಿ ಮೆಟ್ರೋದಲ್ಲಿ 2 ಮದ್ಯದ ಬಾಟಲಿ ಕೊಂಡ್ಯೊಯಲು ಅಬಕಾರಿ ಇಲಾಖೆಯ ಆಕ್ಷೇಪ

    ನವದೆಹಲಿ: ದೆಹಲಿ ಮೆಟ್ರೋ (Delhi Metro) ರೈಲುಗಳಲ್ಲಿ ಪ್ರಯಾಣಿಕರು 2 ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು (Alcohol Bottle) ಪ್ರಯಾಣದ ವೇಳೆ ಸಾಗಿಸಲು ಅನುಮತಿ ನೀಡಿದ ಡಿಎಂಆರ್‌ಸಿ (DMRC) ನಿರ್ಧಾರಕ್ಕೆ ದೆಹಲಿ ಸರ್ಕಾರದ ಅಬಕಾರಿ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಅಬಕಾರಿ ನಿಯಮಗಳ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆ ನಿಯಮ ಬದಲಿಸಲು ಅದು ಸೂಚಿಸಿದೆ.

    ಅಬಕಾರಿ ಕಾಯ್ದೆಯ ಪ್ರಕಾರ 1 ಸೀಲ್ ಮಾಡಿದ ಮದ್ಯದ ಬಾಟಲಿಯ ರಮ್, ವೋಡ್ಕಾ ಮತ್ತು ವಿಸ್ಕಿಯನ್ನು ಮಾತ್ರ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸಬಹುದು. ಆದರೆ ಮೆಟ್ರೋದಲ್ಲಿ 2 ಬಾಟಲಿ ಸಾಗಿಸಲು ಅನುಮತಿ ನೀಡಿದೆ.

    ದೆಹಲಿಯಲ್ಲಿ ಸಂಚರಿಸುವ ಮೆಟ್ರೋ ಎನ್‌ಸಿಆರ್ ನಗರಗಳಾದ ನೋಯ್ಡಾ, ಘಾಜಿಯಾಬಾದ್, ಗುರುಗ್ರಾಮ ಮತ್ತು ಫರಿದಾಬಾದ್ ನಡುವೆ ಸಂಚರಿಸುತ್ತಿದೆ. ಇದು ಹರಿಯಾಣ ಮತ್ತು ಉತ್ತರ ಪ್ರದೇಶಕ್ಕೆ ಸಂಪರ್ಕಿಸುವ ಹಿನ್ನೆಲೆ ರಾಜ್ಯದ ಅಬಕಾರಿ ನಿಯಮಗಳ ಉಲ್ಲಂಘನೆಯಾಗಲಿದೆ ಎಂದು ಆಕ್ಷೇಪಿಸಿದೆ.

    ಅಲ್ಲದೆ ದೆಹಲಿಯಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಗೆ ಮದ್ಯವನ್ನು ಮಾರಾಟ ಮಾಡುವಂತಿಲ್ಲ. ಆದರೆ ಗುರುಗ್ರಾಮದಂತಹ ನಗರಗಳಲ್ಲಿ 18 ವರ್ಷ ವಯಸ್ಸಿನವರಿಗೆ ಮದ್ಯವನ್ನು ಮಾರಾಟ ಮಾಡಬಹುದು. ಮೆಟ್ರೋ ಹೊಸ ನಿಯಮದಿಂದ ಅಪ್ರಾಪ್ತ ವಯಸ್ಕರು ಇತರ ಸ್ಥಳಗಳಿಂದ ಮೆಟ್ರೋ ರೈಲುಗಳ ಮೂಲಕ ಮದ್ಯವನ್ನು ತಂದು ದೆಹಲಿಯಲ್ಲಿ ಸೇವಿಸಬಹುದು ಎಂದು ಅಧಿಕಾರಿಗಳು ಆರೋಪಿಸಿದರು. ಇದನ್ನೂ ಓದಿ: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

    ಈ ಬಗ್ಗೆ ಪ್ರತಿಕ್ರಿಯಿಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರು ಬಾಟಲಿಗಳನ್ನು ತಂದರೆ ಅಬಕಾರಿ ನಿಯಮ ಉಲ್ಲಂಘನೆಯಾಗದಂತೆ 2 ಮದ್ಯದ ಬಾಟಲಿಗಳನ್ನು ಒಯ್ಯುವ ನಿಯಮವನ್ನು ಬದಲಾಯಿಸುವಂತೆ ದೆಹಲಿ ಮೆಟ್ರೋ ರೈಲು ನಿಗಮಕ್ಕೆ ನೋಟಿಸ್ ಕಳುಹಿಸಲಾಗಿದೆ ಎಂದು ಹೇಳಿದರು.

    ಅಬಕಾರಿ ಇಲಾಖೆಯ ಕಾಳಜಿಯ ಅನುಗುಣವಾಗಿ ಪರೀಕ್ಷಿಸಲು ಭದ್ರತಾ ಏಜೆನ್ಸಿಗೆ ತಿಳಿಸಲಾಗುವುದು. ಪ್ರಯಾಣಿಕರು ಗಡಿಯಾಚೆಗಿನ ಸಾಗಣೆಯ ಸಮಯದಲ್ಲಿ ಮದ್ಯವನ್ನು ಸಾಗಿಸಲು ಸಂಬಂಧಿಸಿದ ರಾಜ್ಯ ಅಬಕಾರಿ ಇಲಾಖೆಯ ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಲು ನಿರೀಕ್ಷಿಸಲಾಗುತ್ತಿದೆ ಎಂದು ಡಿಎಂಆರ್‌ಸಿ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಲಿದ್ಯಾ ರೂಪಾಯಿ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೆಟ್ರೋದಲ್ಲಿ ಎರಡು ಮದ್ಯದ ಬಾಟಲ್ ಕೊಂಡೊಯ್ಯಲು ಅನುಮತಿ

    ಮೆಟ್ರೋದಲ್ಲಿ ಎರಡು ಮದ್ಯದ ಬಾಟಲ್ ಕೊಂಡೊಯ್ಯಲು ಅನುಮತಿ

    ನವದೆಹಲಿ: ಮೆಟ್ರೋದಲ್ಲಿ (Delhi Metro) ಓರ್ವ ಪ್ರಯಾಣಿಕ ಎರಡು ಸೀಲ್ಡ್ ಮದ್ಯದ (Metro Liquor) ಬಾಟಲ್‌ಗಳೊಂದಿಗೆ ಪ್ರಯಾಣಿಸಬಹುದು ಎಂದು ದೆಹಲಿ ಮೆಟ್ರೋ ಹೇಳಿದೆ.

    ಟ್ವಿಟರ್ ಬಳಕೆದಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ದೆಹಲಿ ಮೆಟ್ರೋ ರೈಲು ನಿಗಮ, 2 ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಅನುಮತಿಸಲಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಪ್ರತಿ ಆರ್ಡರ್‌ನಲ್ಲೂ ಚಾಕ್ಲೇಟ್ ಇಟ್ಟು ಹುಟ್ಟುಹಬ್ಬ ಆಚರಿಸಿದ ಝೋಮ್ಯಾಟೋ ಸಿಬ್ಬಂದಿ!

    ಈವರೆಗೂ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್ ಹೊರತುಪಡಿಸಿ ದೆಹಲಿ ಮೆಟ್ರೋದಲ್ಲಿ ಮದ್ಯ ಸಾಗಿಸುವುದನ್ನು ನಿಷೇಧಿಸಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಬಳಿಕ CISF ಮತ್ತು DMRC ಅಧಿಕಾರಿಗಳನ್ನೊಳಗೊಂಡ ಸಮಿತಿಯು ಈ ಬಗ್ಗೆ ಚರ್ಚಿಸಿ ಪ್ರತಿ ವ್ಯಕ್ತಿಗೆ ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಕೊಂಡೊಯ್ಯಲು ಅವಕಾಶ ನೀಡಿದೆ.

    ಮೆಟ್ರೋ ಆವರಣದಲ್ಲಿ ಮದ್ಯಪಾನ ನಿಷೇಧ ಮುಂದುವರಿಸಲಾಗಿದೆ ಎಂದು ತಿಳಿಸಿದ್ದು, ಮೆಟ್ರೋ ಪ್ರಯಾಣಿಕರು ಪ್ರಯಾಣಿಸುವಾಗ ಬಾಟಲ್‌ಗಳನ್ನು ವ್ಯವಸ್ಥಿತವಾಗಿ ಕೊಂಡೊಯ್ಯಲು ವಿನಂತಿಸಲಾಗಿದೆ. ಇದನ್ನೂ ಓದಿ: ದೆಹಲಿ ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಸಾಮಾನ್ಯನಂತೆ ಮೆಟ್ರೋದಲ್ಲಿ ಬಂದ ಪ್ರಧಾನಿ ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಾಟ್ಸಪ್ ಮೂಲಕ ದುಬಾರಿ ಬೆಲೆಗೆ ಮದ್ಯ ಮಾರಾಟ – ಓರ್ವನ ಬಂಧನ

    ವಾಟ್ಸಪ್ ಮೂಲಕ ದುಬಾರಿ ಬೆಲೆಗೆ ಮದ್ಯ ಮಾರಾಟ – ಓರ್ವನ ಬಂಧನ

    – ಗ್ರಾಹಕನ ಸೋಗಿನಲ್ಲಿ ಹೋಗಿ ಬಂಧಿಸಿದ ಪೊಲೀಸರು
    – 100 ರೂ. ಮೌಲ್ಯದ ಮದ್ಯ 400 ರೂ. ಗೆ ಮಾರಾಟ

    ಚೆನ್ನೈ: ಲಾಕ್‍ಡೌನ್ ಮಧ್ಯೆಯೂ ವಾಟ್ಸಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಓರ್ವನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಚೆನ್ನೈನ ಹಮ್ಸಾ ಪಾರ್ಕ್ ನಿವಾಸಿ ಅಯ್ಯಪ್ಪನ್ ಎಂದು ಗುರುತಿಸಲಾಗಿದೆ. ಈತ ಲಾಕ್‍ಡೌನ್ ಆಗಿರುವುದನ್ನೇ ಬಂಡವಾಳ ಮಾಡಿಕೊಂಡು ಮದ್ಯವನ್ನು ಸಂಗ್ರಹಿಸಿ ಅದನ್ನು ವಾಟ್ಸಪ್ ಮೂಲಕ ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ಮಾರುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗ್ರಾಹಕರ ಸೋಗಿನಲ್ಲಿ ಹೋಗಿ ಆತನನ್ನು ಬಂಧಿಸಿದ್ದಾರೆ.

    ಕೊರೊನಾ ಭಯದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಅಗತ್ಯವಸ್ತುಗಳ ಸರಬರಾಜು ಬಿಟ್ಟು ಬೇರೆಲ್ಲ ವಸ್ತುಗಳು ಮತ್ತು ಅಂಗಡಿಗಳು ಬಂದ್ ಆಗಿವೆ. ಇದರ ನಡುವೆ ಮದ್ಯದಂಗಡಿಗಳು ಕೂಡ ಮುಚ್ಚಿದ್ದು, ಮದ್ಯಪ್ರಿಯರಿಗೆ ತೊಂದರೆಯಾಗಿದೆ. ಇನ್ನೂ ಮದ್ಯಸಿಗದೆ ಕುಡುಕರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಎಣ್ಣೆಯನ್ನು ದುಬಾರಿ ಬೆಲೆಗೆ ಮಾರುತ್ತಿದ್ದಾರೆ.

    ಈ ರೀತಿಯಲ್ಲೇ ಅಯ್ಯಪ್ಪನ್ ಕೂಡ ಲಾಕ್‍ಡೌನ್‍ಗೂ ಮುಂಚೆಯೇ ಮದ್ಯದ ಬಾಟಲಿಗಳನ್ನು ಶೇಖರಣೆ ಮಾಡಿಕೊಂಡಿದ್ದು, ಈಗ ಅವುಗಳನ್ನು ದುಬಾರಿ ಬೆಲೆಗೆ ಮಾರುತ್ತಿದ್ದ. ಈ ವಿಚಾರ ತಿಳಿದ ಪೊಲೀಸರು ಗ್ರಾಹಕರಂತೆ ವಾಟ್ಸಪ್ ಮೂಲಕ ಮದ್ಯವನ್ನು ಆರ್ಡರ್ ಮಾಡಿದ್ದಾರೆ. ಆಗ ಅಯ್ಯಪ್ಪನ್ ಅವರಿಗೆ ತನ್ನ ಬೈಕಿನಲ್ಲಿ 12 ಬಾಟಲಿಗಳನ್ನು ತೆಗೆದುಕೊಂಡು ಕೊಡಲು ಬಂದಾಗ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ.

    ಅಯ್ಯಪ್ಪನ್ ಅವರನ್ನು ಅರೆಸ್ಟ್ ಮಾಡಿದ ಪೊಲೀಸರು ಆತನ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಹೋಗಿ ಚೆಕ್ ಮಾಡಿದಾಗ ಅವರ ಮನೆಯಲ್ಲಿ ನಿಂತಿದ್ದ ಕಾರಿನಲ್ಲಿ ಸುಮಾರು 870 ಮದ್ಯದ ಬಾಟಲಿಗಳು ಸಿಕ್ಕಿವೆ. ನಂತರ ಆತನನ್ನು ತನಿಖೆ ಮಾಡಿದಾಗ ನಾನು ಲಾಕ್‍ಡೌನ್ ಮುಂಚೆಯೇ ಈ ಮದ್ಯದ ಬಾಟಲಿಗಳನ್ನು ಖರೀದಿಸಿದ್ದೆ. ನಂತರ ನನ್ನ ನಂಬರ್ ಅನ್ನು ವಿವಿಧ ವಾಟ್ಸಪ್ ಗ್ರೂಪ್‍ಗಳಿಗೆ ಶೇರ್ ಮಾಡಿ ಆ ಮೂಲಕ 100 ರೂ. ಮೌಲ್ಯದ ಮದ್ಯವನ್ನು 400 ರೂ. ಬೆಲೆಗೆ ಮಾರುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ.

  • ರಾಹುಲ್ ಗಾಂಧಿ ಫುಲ್ ಗರಂ: ಆನಂದ್ ಸಿಂಗ್ ಕುಟುಂಬಸ್ಥರ ಮನವೊಲಿಕೆಗೆ ಕೈ ನಾಯಕರಿಂದ ಸರ್ಕಸ್

    ರಾಹುಲ್ ಗಾಂಧಿ ಫುಲ್ ಗರಂ: ಆನಂದ್ ಸಿಂಗ್ ಕುಟುಂಬಸ್ಥರ ಮನವೊಲಿಕೆಗೆ ಕೈ ನಾಯಕರಿಂದ ಸರ್ಕಸ್

    ಬೆಂಗಳೂರು: ಆನಂದ್ ಸಿಂಗ್ ಮೇಲೆ ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮರ್ಯಾದೆ ಹರಾಜು ಹಾಕಿದ ಕಂಪ್ಲಿ ಶಾಸಕ ಗಣೇಶ್ ಪಕ್ಷದಿಂದಲೇ ಉಚ್ಚಾಟನೆಯಾಗುವ ಸಾಧ್ಯತೆಯಿದೆ.

    ರೆಸಾರ್ಟಿನಲ್ಲಿ ಇಬ್ಬರು ಕಿತ್ತಾಡಿದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫುಲ್ ಗರಂ ಆಗಿದ್ದು, ಶಿಸ್ತು ಕ್ರಮ ಕೈಗೊಳ್ಳಿ ಎಂದು ಹಿರಿಯ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಕಾಂಗ್ರೆಸ್ ಪಕ್ಷದದಿಂದ ಹಲ್ಲೆಕೋರ ಶಾಸಕ ಗಣೇಶ್ ಉಚ್ಛಾಟನೆಯಾಗುವ ಸಾಧ್ಯತೆಯಿದ್ದು, ಇಂದು ಅಥವಾ ನಾಳೆ ಕಾಂಗ್ರೆಸ್ ಪಕ್ಷದಿಂದ ಅಧಿಕೃತ ನಿರ್ಧಾರ ಪ್ರಕಟವಾಗಲಿದೆ. ಆಪರೇಷನ್ ಕಮಲದ ಮಧ್ಯೆ ಶಾಸಕರ ಕೊರತೆ ಇರುವಾಗ ಉಚ್ಚಾಟನೆಯ ನಿರ್ಧಾರ ಕೈಗೊಳ್ಳುತ್ತಾ ಎನ್ನುವ ಪ್ರಶ್ನೆ ಎದುರಾಗಿದ್ದು ಯಾವ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ.

    ಇತ್ತ ಗಣೇಶ್ ವಿರುದ್ಧ ಕ್ರಮ ಕೈಗೊಳ್ಳಿ ಅಥವಾ ದೂರಿಗೆ ಅವಕಾಶ ಕೊಡಿ ಎಂದು ಆನಂದ್ ಸಿಂಗ್ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಕುಟುಂಬಸ್ಥರು ಪಟ್ಟು ಹಿಡಿಯುತ್ತಿದ್ದಂತೆ ಅವರ ಮನವೊಲಿಕೆಗೆ ಕೈ ನಾಯಕರು ಭಾನುವಾರ  ರಾತ್ರಿಯಿಂದ ಸರ್ಕಸ್ ಆರಂಭಿಸಿದ್ದಾರೆ.

    ದೂರು, ತನಿಖೆ ಎಂದು ಹೋದರೆ ಎಲ್ಲರಿಗೂ ಮುಜುಗರ ಆಗುತ್ತದೆ ಎಂದು ಹೇಳಿ ಅನಂದ್ ಸಿಂಗ್ ಜೊತೆ ಕಾಂಗ್ರೆಸ್ ನಾಯಕರು ಚರ್ಚಿಸಿದ್ದಾರೆ. ಆದರೆ ಅದರೆ ಕುಟುಂಬದವರು ದೂರು ದಾಖಲಿಸಲೇಬೇಕು. ಗಣೇಶ್ ಮೇಲೆ ಕಾನೂನು ರೀತಿಯ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹೀಗಾಗಿ ಕುಟುಂಬದವರ ಮನವೊಲಿಸಲು ಕೈ ನಾಯಕರು ಮುಂದಾಗಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದುಬಂದಿದೆ.


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂಗೆ ಖಾಲಿ ಮದ್ಯದ ಬಾಟಲಿ, ಮಹಿಳೆಯರ ಚಪ್ಪಲಿ ರವಾನೆ!

    ಸಿಎಂಗೆ ಖಾಲಿ ಮದ್ಯದ ಬಾಟಲಿ, ಮಹಿಳೆಯರ ಚಪ್ಪಲಿ ರವಾನೆ!

    ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮದ್ಯದ ಖಾಲಿ ಬಾಟಲಿಗಳು ಹಾಗೂ ಮಹಿಳೆಯರ ಚಪ್ಪಲಿಗಳನ್ನು ಪೋಸ್ಟ್ ಮಾಡುವ ಮೂಲಕ ರೈತರು ವಿನೂತನವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

    ಚಾಮರಾಜನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ರಸ್ತೆ ತಡೆದು ಪ್ರತಿಭಟಿಸಿದ ರೈತರು, ಮಣ್ಣಿನ ಮಗ ಎಂದು ಹೇಳಿಕೊಳ್ಳುವ ಸಿಎಂ ಕುಮಾರಸ್ವಾಮಿ ಕುಡಿದ ನಶೆಯಲ್ಲಿ ರೈತ ಮಹಿಳೆಯನ್ನು ಎಲ್ಲಿ ಮಲಗಿದ್ದೆ ಎಂದು ಕೇಳುತ್ತಾರೆ. ಪ್ರತಿಭಟನಾನಿರತ ರೈತರನ್ನು ಗೂಂಡಾಗಳು ಎಂದು ಹೀಯಾಳಿಸುತ್ತಾರೆ. ಇವರ ಹೇಳಿಕೆಯಿಂದ ಇಡೀ ರೈತ ಸಮುದಾಯಕ್ಕೆ ಹಾಗು ರೈತ ಮಹಿಳೆಯರಿಗೆ ಅವಮಾನವಾಗಿದ್ದು, ಕೂಡಲೇ ಅವರು ರೈತರ ಕ್ಷಮೆ ಕೇಳಬೇಕೆಂದು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಕೆ.ಗುರುಪ್ರಸಾದ್ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮದ್ಯದ ಬಾಟಲ್‍ನಿಂದ ಹಸುವಿನ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಮದ್ಯದ ಬಾಟಲ್‍ನಿಂದ ಹಸುವಿನ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಬೆಂಗಳೂರು: ಕೆಲ ದುಷ್ಕರ್ಮಿಗಳು ಕೆಆರ್ ಪುರ ಠಾಣೆ ವ್ಯಾಪ್ತಿಯ ಭಟ್ಟರಹಳ್ಳಿ ಮನೆಯೊಂದರ ಮುಂದಿದ್ದ ಹಸುವನ್ನು ಎಳೆದೊಯ್ದು, ನಿರ್ಮಾಣ ಹಂತದ ಮನೆಯಲ್ಲಿ ಕೂಡಿ ಹಾಕಿ, ಮದ್ಯದ ಬಾಟಲಿಯಿಂದ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಕೊಲೆ ಮಾಡಿದ್ದಾರೆ.

    ಭಟ್ಟರಹಳ್ಳಿ ನಿವಾಸಿ ನಾರಾಯಣಪ್ಪ ಮೃತ ಹಸುವಿನ ಮಾಲೀಕ. ಎಂದಿನಂತೆ ಶನಿವಾರ ರಾತ್ರಿಯೂ ಹಸುವನ್ನು ಮನೆಯ ಹೊರಗೆ ಕಟ್ಟಲಾಗಿತ್ತು. ಆದರೆ ಇಂದು ಕೆಲ ದುಷ್ಕರ್ಮಿಗಳು ಹಸುವನ್ನು ಎಳೆದೊಯ್ದು ಹಲ್ಲೆ ಮಾಡಿ, ಕೊಲೆಗೈದು ಪರಾರಿಯಾಗಿದ್ದಾರೆ.

    ಕೊಲೆ ಗೈದ ಮನೆಯು ನಿರ್ಜನ ಪ್ರದೇಶದಲ್ಲಿದ್ದು, ಇಲ್ಲಿಗೆ ಪ್ರತಿದಿನ ರಾತ್ರಿ ಸಮಯದಲ್ಲಿ ಅನೇಕ ಪುಂಡ ಪೋಕರಿಗಳು ಬೀಡಿ, ಸಿಗರೇಟ್, ಮದ್ಯ, ಗಾಂಜಾ ವ್ಯಸನಕ್ಕೆ ಬರುತ್ತಾರೆ. ಮದ್ಯದ ಅಮಲಿನಲ್ಲಿದ್ದವರೇ ಹಸುವನ್ನು ಎಳೆದುಕೊಂಡು ಬಂದು, ಕಾಲುಗಳನ್ನು ಕಟ್ಟಿಹಾಕಿದ್ದಾರೆ. ಜೊತೆಗೆ ಮದ್ಯದ ಬಾಟಲಿಯಿಂದ ಗುಪ್ತಾಂಗ, ಕೆಚ್ಚಲಿಗೆ ಚುಚ್ಚಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

    ಹಸುವನ್ನೇ ನಂಬಿಕೊಂಡು ನಾರಾಯಣಪ್ಪ ಅವರ ಕುಟುಂಬ ಜೀವನ ಸಾಗಿಸುತ್ತಿತ್ತು. ಹಾಲು ಕೊಡುತ್ತಿದ್ದ ಹಸುವನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರಿಂದ ದಿಕ್ಕು ತೋಚದಂತಾಗಿದ್ದು, ಬಡಕುಟುಂಬಕ್ಕೆ ಮುಂದಿನ ಜೀವನ ನಿರ್ವಹಣೆಗೆ ಕಷ್ಟದಾಯಕವಾಗಿದೆ.