Tag: ಮದುವೆ ಸಂಭ್ರಮ

  • ಹನ್ಸಿಕಾ ಮೋಟ್ವಾನಿಗೆ ರೊಮ್ಯಾಂಟಿಕ್‌ ಆಗಿ ಪ್ರಪೋಸ್‌ ಮಾಡಿದ ಭಾವಿ ಪತಿ

    ಹನ್ಸಿಕಾ ಮೋಟ್ವಾನಿಗೆ ರೊಮ್ಯಾಂಟಿಕ್‌ ಆಗಿ ಪ್ರಪೋಸ್‌ ಮಾಡಿದ ಭಾವಿ ಪತಿ

    ಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಟಿಯ ಮನೆಯಲ್ಲಿ ಮದುವೆ ಸದ್ದು ಜೋರಾಗಿದೆ. ಇದೀಗ ಭಾವಿ ಪತಿ ಪ್ರಪೋಸ್ ಮಾಡುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. ಈ ಮೂಲಕ ಭಾವಿ ಪತಿಯ ಜೊತೆಗಿನ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.

    ಕನ್ನಡದ ಬಿಂದಾಸ್ ಚಿತ್ರದಲ್ಲಿ ಅಪ್ಪುಗೆ ನಾಯಕಿಯಾಗಿ ನಟಿಸಿದ್ದ ಹನ್ಸಿಕಾ ಮೋಟ್ವಾನಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕೊನೆಗೂ ಭಾವಿ ಪತಿಯ ಫೋಟೋ ಹಂಚಿಕೊಂಡು ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಭಾವಿ ಪತಿ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬೀದಿ ನಾಯಿ ರಾನುಗೆ ʻಐ ಲವ್‌ ಯೂʼ ಹೇಳಿದ ರಮ್ಯಾ: ರಾನು ಜೊತೆಗಿನ ವರ್ಷದ ನೆನಪು

    ಮುಂಬೈ ಮೂಲದ ಉದ್ಯಮಿ ಸೊಹೈಲ್ ಕಥುರಿಯಾ ಜೊತೆ ಹನ್ಸಿಕಾಗೆ ಮದುವೆ(Wedding) ನಿಶ್ಚಯವಾಗಿದೆ. ಮದುವೆಗೂ ಮುನ್ನ ಹೈಫಿಲ್ ಟವರ್ ಬಳಿ ಮಂಡಿಯೂರಿ ಮ್ಯಾರಿ ಮೀ ಎಂದು ಪ್ರಪೋಸ್ ಮಾಡಿದ್ದಾರೆ. ಹನ್ಸಿಕಾ ಕೂಡ ಖುಷಿಯಿಂದ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೀಗ ಈ ಜೋಡಿಯ ರೊಮ್ಯಾಂಟಿಕ್ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Hansika Motwani (@ihansika)

    ಇನ್ನೂ ಡಿಸೆಂಬರ್ 3ರಂದು ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ಡಿ.4ರಂದು ರಾಜಸ್ತಾನದ ಜೈಪುರದ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ಮದುವೆ ನಡೆಯಲಿದೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಮದುವೆ ಜರುಗಲಿದೆ. ಸದ್ಯ ನೆಚ್ಚಿನ ನಟಿಯ ಹೊಸ ಬಾಳಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆ ಮೆರವಣಿಗೆಗೆ ಬಂದವರು ಮಸಣ ಸೇರಿದ್ರು- ಲಾರಿ ಹರಿದು 8 ಮಂದಿ ದುರ್ಮರಣ

    ಮದುವೆ ಮೆರವಣಿಗೆಗೆ ಬಂದವರು ಮಸಣ ಸೇರಿದ್ರು- ಲಾರಿ ಹರಿದು 8 ಮಂದಿ ದುರ್ಮರಣ

    ಪಾಟ್ನಾ: ಮದುವೆ ಮೆರವಣಿಗೆ ನಡೆಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಜನರ ಮೇಲೆ ಹರಿದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡ ಘಟನೆ ಬಿಹಾರದ ಲಖಿಸರೈನ ಹಲ್ಡಿ ಪೊಲೀಸ್ ಠಾಣೆ ಪ್ರದೇಶದ ಹಾಲ್ಸಿ ಬಜಾರ್ ನಲ್ಲಿ ನಡೆದಿದೆ.

    ತಡರಾತ್ರಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಮದುವೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ 8 ಮಂದಿ ಸಾವನ್ನಪ್ಪಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಲಖಿಸರೈನ ಸರ್ದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದಲ್ಲಿ ಮೂವರು ವರನ ಕಡೆಯವರು ಮತ್ತು ಐವರು ವಧುವಿನ ಕಡೆಯವರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

    ಹಲ್ಸಿ ಬಜಾರ್ ನ ನಿವಾಸಿ ನಕ್ ಮಾಂಜಿಯ ಅವರ ಮೊಮ್ಮಗಳ ವಿವಾಹವಿತ್ತು. ಅದಕ್ಕಾಗಿ ಠಾಣಾ ಪ್ರದೇಶದ ಗಧಿವಿಸನ್‍ಪುರ ಗ್ರಾಮದಿಂದ ವರನ ಮೆರವಣಿಗೆ ಬಂದಿತ್ತು. ಈ ಶುಭಸಮಾರಂಭದ ನಡುವೆ ಲಾರಿಯೊಂದು ಜವರಾಯನ ರೀತಿ ಬಂದು ಸಂತೋಷದಿಂದ ಕೂಡಿದ್ದ ಮದುವೆ ಸಂಭ್ರಮದಲ್ಲಿ ಸ್ಮಶಾನ ಮೌನ ಆವರಿಸುವಂತೆ ಮಾಡಿದೆ. ಲಖಿಸರೈನಿಂದ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮೊದಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಮದುವೆ ಸಮಾರಂಭದ ಸ್ಥಳಕ್ಕೆ ನುಗ್ಗಿದ್ದು, 8 ಮಂದಿಯನ್ನು ಬಲಿಪಡೆದಿದೆ.

    ಮೃತಪಟ್ಟವರನ್ನು ಮಂಜೀತ್ ಕುಮಾರ್, ನಕಾತ್ ಮಾಂಜಿ, ಮುಸ್ಕನ್ ಕುಮಾರಿ, ಉಮೇಶ್ ಮಾಂಜಿ, ರಾಜೀವ್ ಮಾಂಜಿ, ಧನರಾಜ್ ಮಾಂಜಿ, ಶಂಭು ಮಾಂಜಿ ಮತ್ತು ಗೋರ್ ಮಾಂಜಿ ಎಂದು ಗುರುತಿಸಲಾಗಿದೆ. ಹಾಗೆಯೇ ಕರುಕು ಮಾಂಜಿ, ಸಾನು ಮಾಂಜಿ, ರಿತಿಕ್ ಮಾಂಜಿ, ಕಾರ್ಪುರಿ ಮಾಂಜಿ, ಮಾಟ್ರು ಮಾಂಜಿ ಸೇರಿದಂತೆ ಗಾಯಗೊಂಡವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಎಸ್‍ಪಿ ಮನೀಶ್ ಕುಮಾರ್, ಎಸ್‍ಡಿಎಂ ಮುರ್ಲಿ ಪ್ರಸಾದ್ ಸಿಂಗ್ ಹಾಗೂ ಇತರೇ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಳಿಕ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಸದ್ಯ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದು, ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದಾರೆ.