Tag: ಮದುವೆ ಮೆರವಣಿಗೆ

  • ಮ್ಯೂಸಿಕ್ ಸದ್ದಿಗೆ ಗಾಬರಿಯಿಂದ ಜನರ ಮೇಲೆ ಓಡಿದ ಕುದುರೆ – 6 ಮಂದಿಗೆ ಗಾಯ

    ಮ್ಯೂಸಿಕ್ ಸದ್ದಿಗೆ ಗಾಬರಿಯಿಂದ ಜನರ ಮೇಲೆ ಓಡಿದ ಕುದುರೆ – 6 ಮಂದಿಗೆ ಗಾಯ

    ಲಕ್ನೋ: ಮದುವೆ ವೇಳೆ ಮ್ಯೂಸಿಕ್ ಹಾಕಿ ಸಂಭ್ರಮಿಸುವುದು ಸಾಮಾನ್ಯ. ಅನೇಕ ಮಂದಿ ಮದುವೆ ಮೆರವಣಿಗೆಯಲ್ಲಿ ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡುತ್ತಾರೆ. ಆದರೆ ಇಲ್ಲೊಂದು ಮದುವೆ ಮೆರವಣಿಗೆಯಲ್ಲಿ ಜೋರಾದ ಮ್ಯೂಸಿಕ್ ಸದ್ದಿಗೆ ಗಾಬರಿಗೊಂಡ ಕುದುರೆಯೊಂದು ಜನರನ್ನು ತನ್ನ ಪಾದಗಳಿಂದ ತುಳಿದು ಓಡಿದೆ.

    MARRIAGE

    ಹೌದು, ಉತ್ತರ ಪ್ರದೇಶದ ಹಮೀರ್‍ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದುವೆ ಮೆರವಣಿಗೆಯಲ್ಲಿ ಧ್ವನಿವರ್ಧಕಗಳನ್ನು ಜೋಡಿಸಿ 1996ರಲ್ಲಿ ತೆರೆಕಂಡಿದ್ದ ರಾಜಾ ಹಿಂದೂಸ್ತಾನಿ ಸಿನಿಮಾದ ತೇರೆ ಇಷ್ಕ್ ಮೇ ನಾಚೇಂಗೆ ಎಂಬ ಫೇಮಸ್ ಸಾಂಗ್‍ಗೆ ಯುವಕರು, ನೋಟುಗಳನ್ನು ಎಸೆಯುತ್ತಾ ನೃತ್ಯ ಮಾಡುತ್ತಿರುತ್ತಾರೆ. ಈ ವೇಳೆ ಯುವಕರ ಮಧ್ಯೆಯೇ ಇದ್ದ ಕುದುರೆ, ಮ್ಯೂಸಿಕ್ ಸದ್ದಿಗೆ ಗಾಬರಿಗೊಂಡು ಎಗರುತ್ತಾ, ತನ್ನ ಪಾದಗಳಿಂದ ಜನರನ್ನು ತುಳಿದುಕೊಂಡು ಓಡಿಹೋಗಿದೆ. ಇದನ್ನೂ ಓದಿ: ಸತ್ತೇ ಹೋದನೆಂದು ಭಾವಿಸಿದ್ದ ವ್ಯಕ್ತಿ ದಿಢೀರ್ ಪ್ರತ್ಯಕ್ಷ – ಚಿಕ್ಕಮಗಳೂರಿನಲ್ಲೊಂದು ಪ್ರಹಸನ

    ಬುಂದೇಲ್‍ಖಂಡ್ ಪ್ರದೇಶದ ಹಲವಾರು ಭಾಗಗಳಲ್ಲಿ ಕುದುರೆಗಳಿಂದ ನೃತ್ಯ ಮಾಡಿಸುವ ಸಂಪ್ರದಾಯವಿದೆ. ಅದೇ ರೀತಿ ಕುದುರೆಯಿಂದ ನೃತ್ಯ ಮಾಡಿಸಲು ಮಾಲೀಕರು ಪ್ರಯತ್ನಿಸಿದ್ದರು. ಆದರೆ ಜೋರಾದ ಮ್ಯೂಸಿಕ್ ಶಬ್ಧಕ್ಕೆ ಕುದುರೆ ನಿಯಂತ್ರಣ ತಪ್ಪಿ ಹೋಯಿತು. ಈ ವೇಳೆ ಕುದುರೆ ಕಾಲ್ತುಳಿತದಿಂದ ಪಾರಾಗಲು ಜನರು ಹರಸಾಹಸ ಪಟ್ಟಿದ್ದಾರೆ. ಸದ್ಯ ಘಟನೆಯಲ್ಲಿ ಗಾಯಗೊಂಡವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ‘ಶೈಕ್ಷಣಿಕ ದತ್ತು ಕಾರ್ಯಕ್ರಮ’ ಅನುಷ್ಠಾನ

    Live Tv
    [brid partner=56869869 player=32851 video=960834 autoplay=true]

  • ಹುತಾತ್ಮರಾದ ಯೋಧರಿಗೆ ಮೆರವಣಿಗೆ ಮೂಲಕ ನಮನ ಸಲ್ಲಿಸಿದ ನವಜೋಡಿ!

    ಹುತಾತ್ಮರಾದ ಯೋಧರಿಗೆ ಮೆರವಣಿಗೆ ಮೂಲಕ ನಮನ ಸಲ್ಲಿಸಿದ ನವಜೋಡಿ!

    ಗಾಂಧಿನಗರ: ಗುಜರಾತಿನ ನವಜೋಡಿಯೊಂದು ತಮ್ಮ ಮದುವೆ ಮೆರವಣಿಗೆ ವೇಳೆ ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದ್ದಾರೆ.

    ಮದುವೆಯಾಗಿ ಕೇವಲ ಒಂದು ಗಂಟೆ ಸಮಯವಾಗಿದೆ ಅಷ್ಟೇ, ಆದ್ರೆ ತಮ್ಮ ಮದುವೆ ಸಂಭ್ರಮವನ್ನು ಆಚರಿಸುವ ಬದಲಾಗಿ ತಮ್ಮ ಮದುವೆ ಮೆರವಣಿಗೆ ವೇಳೆ ಹುತಾತ್ಮ ಯೋಧರ ಭಾವಚಿತ್ರವನ್ನು ಹಿಡಿದು ಗೌರವ ಸಲ್ಲಿಸಿದ್ದಾರೆ. ನವಜೋಡಿಗಳ ಈ ನಿರ್ಧಾರಕ್ಕೆ ಅವರ ಕುಟುಂಬಸ್ಥರು ಹಾಗೂ ಬಂಧು-ಮಿತ್ರರು ಕೂಡ ಸಾಥ್ ಕೊಟ್ಟು ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪುತ್ರಿ ಮದುವೆ ಊಟ ರದ್ದು ಮಾಡಿ 11 ಲಕ್ಷ ರೂ. ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ ಉದ್ಯಮಿ

    ಮೆರವಣಿಗೆಯ ಉದ್ದಕ್ಕೂ ಯೋಧರಿಗೆ ಜೈಕಾರ ಹಾಕುತ್ತ ಉಗ್ರರ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ರಾಷ್ಟ್ರ ಧ್ವಜವನ್ನು ಹಿಡಿದು ಭಾರತದಲ್ಲಿ ಕೇವಲ 1427 ಹುಲಿಗಳಿಲ್ಲ, ಗಡಿಯಲ್ಲಿ 13 ಲಕ್ಷ ಹುಲಿಗಳು ದೇಶ ಕಾಯುತ್ತಿದ್ದಾರೆ ಎಂದು ಸಂದೇಶ ಸಾರಿದ್ದಾರೆ.

    ಕುದುರೆ ರಥದಲ್ಲಿ ನವಜೋಡಿಗಳು ಸಾಗುತ್ತಿದ್ದರೆ, ಅವರ ಮುಂದೆ ನೂರಾರು ಮಂದಿ ಭಾರತದ ಧ್ವಜವನ್ನು ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲೂ ಪುಟ್ಟ ಪುಟ್ಟ ಮಕ್ಕಳು ಧ್ವಜವನ್ನು ಹಿಡಿದು ಯೋಧರಿಗೆ ಜೈಕಾರ ಹಾಕಿದರೆ ಇನ್ನು ಕೆಲವರು ಸೈನಿಕರ ವೇಷಭೂಷಣ ಧರಿಸಿ ಮೆರೆವಣಿಗೆಯಲ್ಲಿ ಸಾಗುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆ ಮೆರವಣಿಗೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ

    ಮದ್ವೆ ಮೆರವಣಿಗೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ

    ಯಾದಗಿರಿ: ಮದುವೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಶಹಾಪೂರ ನಗರದ ಹಳಿಸಗರದ ಬಡಾವಣೆಯಲ್ಲಿ ನಡೆದಿದೆ.

    ಬಿಜೆಪಿ ಅಭ್ಯರ್ಥಿ ಗುರುಪಾಟೀಲ್ ಶಿರವಾಳ ಬೆಂಬಲಿಗರಾದ ಶರಣು ರತ್ತಾಳ, ಬಸ್ಸು ರತ್ತಾಳ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಶರಣ ಬಸಪ್ಪಾ ದರ್ಶನಾಪೂರ ಬೆಂಬಲಿಗರು ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ಮಾಡಲಾಗಿದೆ.

    ಇನ್ನೂ ಶಹಾಪೂರ ಮತಕ್ಷೇತ್ರದಲ್ಲಿ ಜಿದ್ದಾಜಿದ್ದಿ ರಾಜಕೀಯ ಇರುವುದರಿಂದ ಈ ಘಟನೆ ನಡೆದಿದೆ. ಸದ್ಯ ಗಾಯಳುಗಳನ್ನು ಶಹಾಪೂರ ತಾಲೂಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಶಾಸಕ ಗುರುಪಾಟೀಲ್ ಭೇಟಿ ನೀಡಿದ್ದಾರೆ.

    ಈ ಘಟನೆಯ ಕುರಿತು ಶಹಾಪೂರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.