Tag: ಮದುವೆ ಮನೆ

  • ಮದ್ವೆ ಮನೆಯಿಂದ 20 ಗ್ರಾಂ ಚಿನ್ನ, ನಗದು ಕಳವು

    ಮದ್ವೆ ಮನೆಯಿಂದ 20 ಗ್ರಾಂ ಚಿನ್ನ, ನಗದು ಕಳವು

    ಮಂಡ್ಯ: ಮದುವೆ ಸಂಭ್ರಮದಲ್ಲಿದ್ದ ವಧುವಿನ ಮನೆಯಲ್ಲಿ ಕಳ್ಳರು ಲಕ್ಷಾಂತರ ರೂ. ನಗದು ಹಾಗು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ನೀಲನಹಳ್ಳಿ ಗೇಟ್ ಬಳಿ ನಡೆದಿದೆ.

    ಲಕ್ಷ್ಮಿಸಾಗರ ಗ್ರಾಮದ ಸಣ್ಣ ಹನುಮೇಗೌಡ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಿಂದ 1 ಲಕ್ಷದ 20 ಸಾವಿರ ರೂ. ಹಾಗೂ 20 ಗ್ರಾಂ ಚಿನ್ನವನ್ನು ಖದೀಮರು ಕಳವು ಮಾಡಿದ್ದಾರೆ.

    ಮದುವೆ ಕಾರ್ಯಕೆಂದು ಹನುಮೇಗೌಡ ಹಾಗೂ ಅವರ ಕುಟುಂಬಸ್ಥರೆಲ್ಲಾ ಪಾಂಡವಪುರದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪಕ್ಕೆ ತೆರೆಳಿದ್ದರು. ಈ ವೇಳೆ ಮನೆಯಲ್ಲಿ ಯಾರು ಇಲ್ಲದ್ದನ್ನು ತಿಳಿದ ಕಳ್ಳರು ಶನಿವಾರ ರಾತ್ರಿ 9-10 ಗಂಟೆ ಸುಮಾರಿಗೆ ಮನೆಯನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.

    ಮನೆಯಿಂದ 1.20 ಸಾವಿರ ರೂ. ಹಾಗೂ 20 ಗ್ರಾಂ ಚಿನ್ನ ಕಳವಾಗಿದೆ ಎಂದು ಇದೀಗ ಹನುಮೇಗೌಡ ಪೊಲೀಸರಿಗೆ ದೂರು ನೀಡಿದ್ದಾರೆ.

    ಘಟನೆ ಕುರಿತು ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮದುವೆ ಮನೆಯಲ್ಲಿ ಊಟ ಸೇವಿಸಿ 60ಕ್ಕೂ ಹೆಚ್ಚು ಮಂದಿ ವಾಂತಿ, ಬೇಧಿ, ತಲೆ ಸುತ್ತಿನಿಂದ ಅಸ್ವಸ್ಥ!

    ಮದುವೆ ಮನೆಯಲ್ಲಿ ಊಟ ಸೇವಿಸಿ 60ಕ್ಕೂ ಹೆಚ್ಚು ಮಂದಿ ವಾಂತಿ, ಬೇಧಿ, ತಲೆ ಸುತ್ತಿನಿಂದ ಅಸ್ವಸ್ಥ!

    ಶಿವಮೊಗ್ಗ: ಮದುವೆ ಮನೆಯಲ್ಲಿ ಊಟ ಸೇವಿಸಿ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗುಡವಿ ಗ್ರಾಮದಲ್ಲಿ ನಡೆದಿದೆ.

    ಮದುವೆ ಮನೆಯಲ್ಲಿ ಊಟ ಮಾಡಿದ ಬಳಿಕ ಜನರು ವಾಂತಿ, ಬೇಧಿ, ತಲೆ ಸುತ್ತಿನಿಂದ ಅಸ್ವಸ್ಥಗೊಂಡಿದ್ದು, ಅಸ್ವಸ್ಥಗೊಂಡವರನ್ನು ಕೂಡಲೇ ಸೊರಬದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿಯಿಂದಲೇ ಸೊರಬ ಆಸ್ಪತ್ರೆಗೆ ಅಸ್ವಸ್ಥರನ್ನು ಸೇರಿಸಲಾಗಿತ್ತು. ಇಂದು ಬೆಳಗ್ಗೆ ಕೂಡ ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇನ್ನೂ ಆಸ್ಪತ್ರೆಯಲ್ಲಿ ಜಾಗ ಸಾಲದೇ ಇರುವುದರಿಂದ ಆಸ್ಪತ್ರೆಯ ಕಾರಿಡಾರ್ ನಲ್ಲಿ ಜನರನ್ನು ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಹಿಂದೆ ದಾವಣಗೆರೆಯಲ್ಲಿ ಆರತಕ್ಷತೆಯ ಊಟ ಮಾಡಿದ ಸುಮಾರು 200ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ಮೊದಲ ಒಂದು ಪಂಕ್ತಿಯ ನಂತರ ಊಟ ಮಾಡಿದ ಎಲ್ಲರೂ ಸ್ವಲ್ಪ ಸಮಯದಲ್ಲೇ ವಾಂತಿ- ಬೇಧಿ, ಹೊಟ್ಟೆನೋವು, ತಲೆಸುತ್ತು ಇತ್ಯಾದಿಗಳಿಂದ ಅಸ್ವಸ್ಥಗೊಂಡಿದ್ದರು. ವಧು-ವರ ಕೂಡ ಅಸ್ವಸ್ಥಗೊಂಡು ನಿತ್ರಾಣರಾಗಿದ್ದರು.

  • ಮದುವೆ ಮನೆಯಲ್ಲಿ ಸಿಲಿಂಡರ್ ಸ್ಫೋಟ- ಇಬ್ಬರಿಗೆ ಗಾಯ

    ಮದುವೆ ಮನೆಯಲ್ಲಿ ಸಿಲಿಂಡರ್ ಸ್ಫೋಟ- ಇಬ್ಬರಿಗೆ ಗಾಯ

    ಕೋಲಾರ: ಮದುವೆ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ನಗರದ ಕೋಟೆ ಬೀದಿಯಲ್ಲಿ ಜಯಮ್ಮ ಎಂಬವರ ಮನೆಯಲ್ಲಿ ತಡರಾತ್ರಿ ಈ ಅವಘಢ ಸಂಭವಿಸಿದೆ. ಮನೆಯಲ್ಲಿ ನೀರು ಕಾಯಿಸುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ.

    ಘಟನೆಯಲ್ಲಿ ಮಣಿಕಂಠ(14) ಹಾಗೂ ವೇಣುಗೋಪಾಲ್(16) ಗೆ ಗಂಭೀರವಾಗಿ ಗಾಯವಾಗಿದೆ. ಸಿಲಿಂಡರ್ ಸ್ಫೋಟಗೊಂಡ ರಭಸಕ್ಕೆ ಮನೆಯ ಮೇಲ್ಛಾವಣಿಯೇ ಕುಸಿದು ಬಿದ್ದಿದೆ.

    ಗಾಯಾಳುಗಳನ್ನ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.