Tag: ಮದುವೆ. ಐಪಿಎಲ್

  • ಮದುವೆ ಮನೆಯಲ್ಲಿ ಐಪಿಎಲ್ ಹವಾ – ಕುಣಿದು ಕುಪ್ಪಳಿಸಿದ ಅತಿಥಿಗಳು

    ಮದುವೆ ಮನೆಯಲ್ಲಿ ಐಪಿಎಲ್ ಹವಾ – ಕುಣಿದು ಕುಪ್ಪಳಿಸಿದ ಅತಿಥಿಗಳು

    ನವದೆಹಲಿ: ಮದುವೆ ಮನೆ ಎಂದರೆ ಅಲ್ಲಿ ವಧು – ವರರೇ ಆಕರ್ಷಣೆಯ ಕೇಂದ್ರ ಬಿಂದು ಆಗಿರುತ್ತಾರೆ. ಆದರೆ ಇಲ್ಲೊಂದು ಮದುವೆಯಲ್ಲಿ ಮನೆಯವರು ಮತ್ತು ಅತಿಥಿಗಳು ವಧು ವರರನ್ನು ನೋಡುವುದನ್ನು ಬಿಟ್ಟು ಐಪಿಎಲ್ ಫೈನಲ್ ನೋಡಿ ಕುಣಿದು ಕುಪ್ಪಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಕಳೆದ ಭಾನುವಾರ ನಡೆದ ಐಪಿಎಲ್ 12 ರ ಅವೃತ್ತಿಯ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಮದುವೆ ಮನೆಯಲ್ಲಿ ರಿಸೆಪ್ಷನ್ ನಡೆಯುತ್ತಿರುವಾಗ ದೊಡ್ಡ ಟಿವಿಯಲ್ಲಿ ಪ್ರಸಾರ ಮಾಡಲಾಗಿತ್ತು.

    ಕೊನೆಯ ಓವರಿನಲ್ಲಿ ಪಂದ್ಯ ತಿರುವು ಪಡೆದಕೊಂಡ ಕಾರಣ ಅತಿಥಿಗಳು ಕುತೂಹಲದಿಂದ ಪಂದ್ಯ ವೀಕ್ಷಿಸುತ್ತಿದ್ದರು. ಕೊನೆಯ ಎಸೆತದಲ್ಲಿ ಮುಂಬೈ ತಂಡ ಗೆದ್ದ ಕೂಡಲೇ ಅತಿಥಿಗಳು ಎದ್ದು ನಿಂತು ಗಟ್ಟಿ ಮೇಳದವರು ಬಾರಿಸಿದ ಸಂಗೀತಕ್ಕೆ ಕುಣಿದು ಕುಪ್ಪಳಿಸಿದ್ದಾರೆ.