Tag: ಮದುರೈ

  • ಬಸ್-ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ್ರೂ ಬದುಕುಳಿದ ಸವಾರರು: ವಿಡಿಯೋ ನೋಡಿ

    ಬಸ್-ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ್ರೂ ಬದುಕುಳಿದ ಸವಾರರು: ವಿಡಿಯೋ ನೋಡಿ

    ಚೆನ್ನೈ: ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ರಭಸಕ್ಕೆ ಸವಾರರು ಸುಮಾರು ಮೀಟರ್ ದೂರಕ್ಕೆ ಬಿದ್ದರೂ ಬದುಕುಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ಮಧುರೈನಲ್ಲಿ ಈ ಘಟನೆ ಸಂಭವಿಸಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಹಾಗೂ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಮೂರು ರಸ್ತೆಗಳು ಸೇರುವ ವೃತ್ತದ ಒಂದು ಕಡೆಯಿಂದ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಬರುತ್ತಿತ್ತು. ಅದರ ಎಡ ಭಾಗದ ರಸ್ತೆಯಿಂದ ಬೈಕ್‍ನಲ್ಲಿ ಮೂವರು ಸವಾರರು ಬಂದಿದ್ದಾರೆ. ವೇಗವಾಗಿದ್ದ ಇಬ್ಬರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಮೂವರು ಸವಾರರು ಬೈಕ್ ಸಮೇತ ಸುಮಾರು ಮೀಟರ್ ದೂರಕ್ಕೆ ಹಾರಿ ಬಿದ್ದಿದ್ದಾರೆ.

    ಭಾರೀ ಅನಾಹುತದಿಂದ ಎಚ್ಚೆತ್ತುಕೊಂಡ ಚಾಲಕ, ಬಸ್ಸನ್ನು ನಿಯಂತ್ರಕ್ಕೆ ತಂದಿದ್ದಾನೆ. ಇಲ್ಲದಿದ್ದರೇ ಬಸ್ ಮೂವರ ಮೇಲೂ ಹರಿದು ಹೋಗುತ್ತಿತ್ತು. ತಕ್ಷಣವೇ ಕೆಳಗೆ ಇಳಿದು ಬಂದ ಕೆಲ ಪ್ರಯಾಣಿಕರು, ಬಸ್ ಅಡಿಗೆ ಹಾಗೂ ರಸ್ತೆ ಮೇಲೆ ಬಿದ್ದಿದ್ದ ಸವಾರರನ್ನು ಹೊರಕ್ಕೆ ಏಳೆದು, ಆರೈಕೆ ಮಾಡಿದ್ದಾರೆ. ಬಳಿಕ ಸಣ್ಣ ಪುಟ್ಟ ಗಾಯಗಳಾಗಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸವಾರರ ಅಜಾಗೃತಿಯಿಂದಲೇ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಕೂದಲು ಉದುರುವ ಸಮಸ್ಯೆಯಿಂದ ಮನನೊಂದು ಬೆಂಗ್ಳೂರಿನ ಟೆಕ್ಕಿ ಆತ್ಮಹತ್ಯೆ

    ಕೂದಲು ಉದುರುವ ಸಮಸ್ಯೆಯಿಂದ ಮನನೊಂದು ಬೆಂಗ್ಳೂರಿನ ಟೆಕ್ಕಿ ಆತ್ಮಹತ್ಯೆ

    ಮಧುರೈ: ಕೂದಲು ಉದುರುವ ಸಮಸ್ಯೆಯಿಂದ ಮನನೊಂದು ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.

    ತಮಿಳುನಾಡಿನ ಜೈಹಿಂದ್‍ಪುರಂ ನಿವಾಸಿಯಾಗಿರುವ ಆರ್. ಮಿಥುನ್ ರಾಜ್(27) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಮಿಥುನ್ ಅವರು ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದು, ಈ ಕಾರಣದಿಂದ ಅವರ ಕೂದಲು ಹೆಚ್ಚು ಉದುರುತಿತ್ತು. ಈ ಸಮಸ್ಯೆಯಿಂದ ಹೊರಬರಲು ಮಿಥುನ್ ಹಲವು ಔಷಧಿಗಳನ್ನು ಸೇವಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಆರಂಭದಲ್ಲಿ ಚೆನ್ನೈ ನ ಇನ್ಫೋಸಿಸ್ ಕಂಪನಿಯಲ್ಲಿ ಟೆಕ್ಕಿಯಾಗಿ ವೃತ್ತಿ ಜೀವನ ಆರಂಭಿಸಿದ ಮಿಥುನ್ ಕೆಲ ವರ್ಷದ ಬಳಿಕ ಬೆಂಗಳೂರಿನ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗಿದ್ದರು.

    ಮಿಥುನ್ ಅವರ ತಂದೆ ರವಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು, ತಾಯಿ ವಸಂತಿ ಅವರು ಮಧುರೈನ ಜೈಹಿಂದ್‍ಪುರಂ ನಲ್ಲಿ ವಾಸವಾಗಿದ್ದರು. ವಸಂತಿ ಅವರು ಮಿಥುನ್ ಅವರಿಗೆ ಸೂಕ್ತ ವಧು ನೋಡಿ ಮದುವೆ ಮಾಡಲು ನಿರ್ಧರಿಸಿದ್ದರು. ಆದರೆ ಮಿಥುನ್ ತನ್ನ ಕೂದಲಿನ ಸಮಸ್ಯೆಯ ಬಗ್ಗೆ ಹೆಚ್ಚು ಆತಂಕಗೊಂಡಿದ್ದರು.

    ಕುದಲು ಉದುರುವಿಕೆಯಿಂದ ನೊಂದಿದ್ದ ಮಿಥುನ್ ರಜೆಯ ಮೇಲೆ ತಾಯಿಯ ಬಳಿ ತೆರಳಿದ್ದರು. ಈ ವೇಳೆ ಹೆಚ್ಚು ಆತಂಕಗೊಂಡಿದ್ದ ಮಿಥುನ್ ರನ್ನು ಕಂಡು ವಸಂತಿ ಅವರು ಧೈರ್ಯ ತುಂಬಿದ್ದರು. ಆದರೆ ಭಾನುವಾರ ತಾಯಿ ದೇವಾಲಯಕ್ಕೆ ತೆರಳಿದ್ದ ವೇಳೆ ಮಿಥುನ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಜಾಹಿರಾತು ಫಲಕಕ್ಕೆ ಬೈಕ್ ಡಿಕ್ಕಿಯಾಗಿ ಟೆಕ್ಕಿ ಸಾವು- Who Killed Ragu? ಈಗ ವೈರಲ್

    ಮನೆಗೆ ಹಿಂದಿರುಗಿದ ವೇಳೆ ವಸಂತಿ ಅವರು ಮಗ ಆತ್ಮಹತ್ಯೆ ಮಾಡಿಕೊಂಡಿದನ್ನು ಕಂಡು ಸ್ಥಳೀಯರ ಸಹಾಯದಿಂದ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ವೇಳೆಗೆ ಮಿಥುನ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ರಾತ್ರಿ ಗೋವಾದಲ್ಲಿ ಹುಟ್ಟುಹಬ್ಬ ಆಚರಿಸಿ ಬೆಳಗ್ಗೆ ಕಂಪೆನಿಯ 10 ಮಹಡಿಯಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ

    ತಮಿಳುನಾಡಿನ ಜೈಹಿಂದ್‍ಪುರಂ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ.

     

  • ಕೊತ ಕೊತ ಕುದಿಯುವ ಬಿಸಿ ಬಿಸಿ ಎಣ್ಣೆ ಗಂಡನ ‘ಅದಕ್ಕೇ’ ಸುರಿದ್ಳು ಪತ್ನಿ!

    ಕೊತ ಕೊತ ಕುದಿಯುವ ಬಿಸಿ ಬಿಸಿ ಎಣ್ಣೆ ಗಂಡನ ‘ಅದಕ್ಕೇ’ ಸುರಿದ್ಳು ಪತ್ನಿ!

    ಮದುರೈ: ತಾಳಿ ಕಟ್ಟಿದ ನಾನಿರಬೇಕಾದ್ರೆ ಇನ್ನೊಬ್ಳ ಜೊತೆ ಅಕ್ರಮ ಸಂಬಂಧವಿಟ್ಟುಕೊಳ್ಳಬೇಡ ಎಂದು ಹೇಳಿದರೂ ಕೇಳದ ಪತಿ ಮಹಾಶಯನಿಗೆ ಹೆಂಡತಿಯೊಬ್ಬಳು ತಕ್ಕ ಶಾಸ್ತಿ ಮಾಡಿದ್ದಾಳೆ. ಪತಿಯ ಲವ್ವಿ ಡವ್ವಿಯಿಂದ ಕೆರಳಿದ್ದ ಪತ್ನಿ ಕೊತ ಕೊತ ಕುದಿಯುತ್ತಿದ್ದ ಬಿಸಿ ಎಣ್ಣೆಯನ್ನು ಗಂಡನ ಗುಪ್ತಾಂಗದ ಮೇಲೆ ಸುರಿದಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದುರೈ ನಗರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ

    ಆಗಿದ್ದೇನು?: ಇಲ್ಲಿನ ನೆಹರೂ ನಗರದ ಎಂ.ಪರಮೇಶ್ವರನ್(37)ಗೆ ಶಶಿಕಲಾ ಎಂಬಾಕೆಯ ಜೊತೆ ಮದುವೆಯಾಗಿತ್ತು. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಪರಮೇಶ್ವರನ್ ಗೆ, ವಿರಟ್ಟಿಪತ್ತು ಎಂಬಲ್ಲಿನ ಮಹಿಳೆಯ ಜೊತೆ ಪರಿಚಯವಾಗಿದೆ. ಈ ಸಂಬಂಧವನ್ನು ಮತ್ತೂ ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದ ಇಬ್ಬರೂ ಅಕ್ರಮ ಸಂಬಂಧವಿಟ್ಟುಕೊಂಡಿದ್ದರು. ಈ ವಿಚಾರ ಪತ್ನಿ ಶಶಿಕಲಾ ಗಮನಕ್ಕೆ ಬಂದು ಪರಮೇಶ್ವರನ್ ಜೊತೆ ಆಗಾಗ ಗಲಾಟೆ ಮಾಡುತ್ತಿದ್ದಳು. ಪತ್ನಿಯ ವಿಚಾರಣೆಯಿಂದ ಬೇಸತ್ತ ಪತಿ ಪರಮೇಶ್ವರ್ ಮನೆಗೆ ಬರುವುದನ್ನು ಬಿಟ್ಟುಬಿಟ್ಟಿದ್ದ. ಈ ವಿಚಾರ ಎಸ್.ಎಸ್.ಕಾಲೋನಿ ಠಾಣೆಯ ಮೆಟ್ಟಿಲೇರಿತ್ತು. ನಂತರ ಪೊಲೀಸರು ಪರಮೇಶ್ವರ್ ನನ್ನು ಕರೆದು ಎಚ್ಚರಿಕೆ ನೀಡಿ ಮನೆಗೆ ವಾಪಸ್ ಕಳಿಸಿದ್ದರು. ಆದರೆ ಕೆಲ ದಿನಗಳ ಬಳಿಕ ಪರಮೇಶ್ವರನ್ ಮತ್ತೆ ಅಕ್ರಮ ಸಂಬಂಧ ಶುರು ಮಾಡ್ಕೊಂಡ. ಆಕೆಯ ಜೊತೆಯೇ ವಾಸ್ತವ್ಯವನ್ನೂ ಆರಂಭಿಸಿದ.

    ಇದನ್ನೂ ಓದಿ: ಫಸ್ಟ್ ನೈಟ್‍ನಲ್ಲೇ ರಾಕ್ಷಸನಾದ ಪತಿ- ಚೂರಿಯಿಂದ ಇರಿದು, ಅಂಗಾಂಗ ಕಚ್ಚಿ ಹಲ್ಲೆ

    ಪ್ಲ್ಯಾನ್ ಮಾಡಿ ಕರೆಸಿಕೊಂಡ್ಳು!: ಕಳೆದ ವಾರ ಪರಮೇಶ್ವರನ್ ಗೆ ಫೋನ್ ಮಾಡಿದ ಪತ್ನಿ ಶಶಿಕಲಾ ಆತನ ಬಳಿ ನಯವಾಗಿಯೇ ಮಾತನಾಡಿದ್ದಾಳೆ. ಮನೆಗೆ ಬಂದು ನನ್ನ ಜೊತೆಯೇ ಸಂಸಾರ ಮಾಡು ಎಂದು ಕೇಳಿಕೊಂಡಿದ್ದಾಳೆ. ಹೀಗಾಗಿ ಕಳೆದ ಶನಿವಾರ ಪರಮೇಶ್ವರನ್ ಮನೆಗೆ ಬಂದು ಊಟ ಮಾಡಿ ಮಲಗಿದ್ದ. ಇದಕ್ಕಾಗಿಯೇ ಕಾಯುತ್ತಿದ್ದ ಶಶಿಕಲಾ ಬಾಣಲೆಯಲ್ಲಿ ಎಣ್ಣೆ ಕಾಯಿಸಲು ಇಟ್ಟಿದ್ದಾಳೆ. ಈತ ನಿದ್ರಾದೇವಿಗೆ ಸಂಪೂರ್ಣವಾಗಿ ಶರಣಾಗಿದ್ದಾನೆ ಎಂದು ಖಚಿತಪಡಿಸಿಕೊಂಡು ಬಾಣಲೆ ಎತ್ತಿಕೊಂಡು ಬಂದು ಅದರಲ್ಲಿದ್ದ ಬಿಸಿ ಬಿಸಿಯಾಗಿ ಕುದಿಯುತ್ತಿದ್ದ ಎಣ್ಣೆಯನ್ನು ಆತನ ಗುಪ್ತಾಂಗಕ್ಕೆ ಸುರಿದಿದ್ದಾಳೆ. ಎಣ್ಣೆ ಬೀಳುತ್ತಿದ್ದಂತೆಯೇ ಎಚ್ಚೆತ್ತ ಪರಮೇಶ್ವರನ್ ಕಿರುಚಾಡಲು ಶುರುಮಾಡಿದ್ದಾನೆ. ತಕ್ಷಣ ಸ್ಥಳೀಯರು ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಇದನ್ನೂ ಓದಿ: ಲವ್ ಮಾಡಿ ಗರ್ಭಿಣಿ ಮಾಡ್ದ, ಮದುವೆಯಾಗು ಎಂದಿದ್ದಕ್ಕೆ ಕೊಲೆಯೇ ಮಾಡ್ಬಿಟ್ಟ ಪಾಪಿ!

    ಬಿಸಿ ಬಿಸಿ ಎಣ್ಣೆ ಬಿದ್ದಿದ್ದರಿಂದ ಗುಪ್ತಾಂಗಕ್ಕೆ ಸುಟ್ಟಗಾಯಗಳಾಗಿದ್ದು ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದುರೈ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆದರೆ ಮಹಿಳೆಯನ್ನು ಇನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.