Tag: ಮದುಮಗಳು

  • ಹಸೆಮಣೆ ಏರುವ ಮುನ್ನ ಮದುಮಗಳಿಂದ ಮೊದಲ ಮತದಾನ

    ಹಸೆಮಣೆ ಏರುವ ಮುನ್ನ ಮದುಮಗಳಿಂದ ಮೊದಲ ಮತದಾನ

    ಚಿಕ್ಕಮಗಳೂರು: ಹಸೆಮಣೆ ಏರುವ ಮುನ್ನ ಮದುಮಗಳಾಗಿ (Bride) ಅಲಂಕಾರಗೊಂಡು ಯುವತಿ ತನ್ನ ಬೂತ್‌ನಲ್ಲಿ ಮೊದಲ ಮತದಾನ (Voting) ಮಾಡಿ ಮದುವೆಗೆ ತೆರಳಿರುವ ಘಟನೆ ಚಿಕ್ಕಮಗಳೂರು (Chikkamagaluru)  ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.

    ಕುಂದೂರು ಸಮೀಪದ ತಳವಾರ ಗ್ರಾಮದ ಸುಮಿಕ್ಷಾ ಎಂಬ ಯುವತಿಯ ಮದುವೆ (Marriage) ಕೊಪ್ಪ ಮೂಲದ ಸಂಜಯ್ ಎಂಬವರೊಂದಿಗೆ ನಿಶ್ಚಯವಾಗಿತ್ತು. ಇಂದೇ ಮದುವೆ ನಿಗದಿಯಾಗಿದ್ದ ಕಾರಣ ಮದುವೆ ಮಂಟಪಕ್ಕೆ ತೆರಳುವ ಮುನ್ನ ಮದುಮಗಳಾಗಿ ಅಲಂಕಾರಗೊಂಡ ಯುವತಿ ಮೊದಲ ಮತದಾನ ಮಾಡಿ ಬಳಿಕ ಮದುವೆ ಮಂಟಪಕ್ಕೆ ತೆರಳಿದ್ದಾರೆ. ಮೂಡಿಗೆರೆ ಪಟ್ಟಣದ ಪ್ರೀತಂ ಹಾಲ್‌ನಲ್ಲಿ ಮದುವೆ ನಡೆಯಲಿದೆ. ಇದನ್ನೂ ಓದಿ: ಕಡ್ಡಾಯ ಮತದಾನ ಕಾನೂನು ತರಬೇಕು: ಸಿದ್ದಗಂಗಾ ಶ್ರೀ ಆಗ್ರಹ

    ಯುವತಿ ಕುಂದೂರು ಗ್ರಾಮದ ಬೂತ್ ನಂಬರ್ 86ರಲ್ಲಿ ಮತದಾನ ಮಾಡಿದ್ದಾರೆ. ಇದೇ ವೇಳೆ ದೇಶದ ಭದ್ರತೆಯ ರಕ್ಷಣೆಗಾಗಿ ಸುಭದ್ರತೆಯ ಸರ್ಕಾರ ನಿರ್ಮಾಣ ಮಾಡಲು ಮತದಾನ ಅತ್ಯಂತ ಮುಖ್ಯ ಎಂದು ಮದುಮಗಳ ಜೊತೆ ಆಕೆಯ 11 ಕುಟುಂಬಸ್ಥರು ಏಕಕಾಲದಲ್ಲಿ ಮತದಾನ ಮಾಡಿದ್ದಾರೆ. ಮದುಮಗಳಾಗಿ ಮತದಾನಕ್ಕೆ ಬಂದ ಯುವತಿ ಸುಮಿಕ್ಷಾ ಅವರಿಗೆ ಇತರೆ ಮತದಾರರು ಹಾಗೂ ಚುನಾವಣಾ ಸಿಬ್ಬಂದಿ ಕೂಡ ಶುಭಕೋರಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಮತದಾನ ಆರಂಭ : ತುಷಾರ್‌ ಗಿರಿನಾಥ್‌

  • ಕಾರು ಬಿಟ್ಟು ಮೆಟ್ರೋ ಏರಿದ ಮದುಮಗಳು

    ಕಾರು ಬಿಟ್ಟು ಮೆಟ್ರೋ ಏರಿದ ಮದುಮಗಳು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುಮಗಳಾಗಿ ಮಿಂಚಿದ ಬಾಲಿವುಡ್ ನಟಿ ಕತ್ರಿನಾ

    ಮದುಮಗಳಾಗಿ ಮಿಂಚಿದ ಬಾಲಿವುಡ್ ನಟಿ ಕತ್ರಿನಾ

    ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಮದುಮಗಳಾಗಿ ಮಿಂಚಿದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಇತ್ತೀಚೆಗೆ ಬಿಡುಗಡೆಯಾದ ‘ಭಾರತ್’ ಚಿತ್ರದಲ್ಲಿ ಕತ್ರಿನಾ ಮದುಮಗಳಾಗಿ ಮಿಂಚಿದ್ದರು. ಈ ಫೋಟೋವನ್ನು ಭಾರತ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಕತ್ರಿನಾ ಈ ಫೋಟೋಗೆ ಪೋಸ್ ನೀಡಿದ್ದರು. ಸದ್ಯ ಈ ಫೋಟೋ ಈಗ ವೈರಲ್ ಆಗುತ್ತಿದೆ.

    ಈ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ಅವರನ್ನು ಮದುವೆಯಾಗಲು ಕತ್ರಿನಾ ಕ್ಯಾಥೋಲಿಕ್ ಬ್ರೈಡೆಡ್ ಲುಕ್‍ನಲ್ಲಿ ನಟಿಸಿದ್ದರು. ಈ ಲುಕ್‍ನಲ್ಲಿ ಕತ್ರಿನಾ ಬಿಳಿ ಬಣ್ಣದ ಗೌನ್ ಧರಿಸಿ ಸುಂದರವಾಗಿ ಕಾಣಿಸುತ್ತಿದ್ದಾರೆ. ಕತ್ರಿನಾ ಈ ಗೌನ್ ಧರಿಸಿ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡಿದ್ದಾರೆ.

    ಕತ್ರಿನಾ ಕೈಫ್ ಧರಿಸಿರುವ ಈ ಗೌನ್‍ನನ್ನು ಸಲ್ಮಾನ್ ಖಾನ್ ಅವರ ಪರ್ಸನಲ್ ಡಿಸೈನರ್ ಎಶೇಲೆ ರೆಬೆಲೋ ವಿನ್ಯಾಸ ಮಾಡಿದ್ದಾರೆ. ಸದ್ಯ ಭಾರತ್ ಚಿತ್ರದಲ್ಲಿ ಕತ್ರಿನಾ ಕುಮುದ್ ರೈನಾ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಇದು ಅವರ ಬೆಸ್ಟ್ ಲುಕ್ ಆಗಿದೆ.

    ಸದ್ಯ ಭಾರತ್ ಚಿತ್ರ ಭಾರತದಲ್ಲಿ ಇದುವರೆಗೂ 160 ಕೋಟಿ ರೂ. ಕಲೆಕ್ಷನ್ ಆಗಿದ್ದು, ವಿಶ್ವಾದ್ಯಂತ 250 ಕೋಟಿ ರೂ. ಕಲೆಕ್ಷನ್ ಆಗಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ದಿಶಾ ಪಠಾನಿ ಸೇರಿದಂತೆ ಜಾಕಿ ಶ್ರಾಫ್, ಸುನಿಲ್ ಗ್ರೋವರ್, ತಬು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

  • ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ವಧು!

    ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ವಧು!

    ಕೊಡಗು: ರಾಜ್ಯಾದ್ಯಂತ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮಡಕೇರಿಯಲ್ಲಿ ಮದುವೆಗೂ ಮುನ್ನ ಮದುಮಗಳು ತಮ್ಮ ಮತವನ್ನು ಚಲಾಯಿಸಿದ್ದಾರೆ.

    ಸ್ಮಿತಾ ಮಡಿಕೇರಿ ತಾಲೂಕಿನ ಕಾಂಡನಕೊಲ್ಲಿ ಮತಗಟ್ಟಿ ಸಂಖ್ಯೆ 131 ಯಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ಮದುಮಗಳಂತೆ ಅಲಂಕರಿಸಿ ಮತಗಟ್ಟೆಗೆ ಆಗಮಿಸಿದ ಸ್ಮಿತಾ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.

    ಸ್ಮಿತಾ ಇಂದು ಗೌಡ ಸಮಾಜದಲ್ಲಿ ಮದುವೆ ಆಗುತ್ತಿದ್ದು, ಮಡಿಕೇರಿಯ ಮೂವತೊಕ್ಕಲಿನ ಬಿಎಂಟಿಸಿ ಸಿಬ್ಬಂದಿ ಆದ ಪ್ರವೀಣ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

    ಮಂಗಳೂರಿನಲ್ಲೂ ಕೂಡ ವಧುವೊಬ್ಬರು ತಮ್ಮ ಮತ ಚಲಾಯಿಸಿದ್ದಾರೆ. ನಗರದ ಬೋಂದೆಲ್ ಸೇಂಟ್ ಲಾರೆನ್ಸ್ ಮೀಡಿಯಂ ಶಾಲೆಯಲ್ಲಿ ಮತದಾನ ನಡೆಯುತ್ತಿದ್ದು, ಪಚ್ಚನಾಡಿಯ ಮದುಮಗಳು ವಿಯೋಲಾ ಮಾರಿಯಾ ಫೆರ್ನಾಂಡೀಸ್ ಮತದಾನ ಮಾಡಿದ್ದಾರೆ.

    7 ಗಂಟೆಗೆ ಮತದಾನ ಮಾಡಿ ಬಳಿಕ ಬೆಳ್ತಂಗಡಿಯಲ್ಲಿ ನಡೆಯೋ ಮದುವೆಗೆ ಮದುಮಗಳು ತೆರಳಿದ್ದಾರೆ. ಬೆಳ್ತಂಗಡಿಯ ವರ ಸಿಲ್ವೆಸ್ಟರ್ ರೋಡ್ರಿಗಸ್ ಜೊತೆ ಮಾರಿಯಾ ಮದುವೆ ನಡೆಯಲಿದೆ. ಒಟ್ಟಿನಲ್ಲಿ ವಿಯೋಲಾ ಹಾಗೂ ಸ್ಮಿತಾ ಅವರು ಮದುವೆಗೂ ಮುನ್ನ ಮತದಾನ ಮಾಡಿ ಮಾದರಿಯಾಗಿದ್ದಾರೆ.

  • ಮತ ಚಲಾಯಿಸಿ ಮದುವೆಗೆ ತೆರಳಿದ ಮದುಮಗಳು!

    ಮತ ಚಲಾಯಿಸಿ ಮದುವೆಗೆ ತೆರಳಿದ ಮದುಮಗಳು!

    ಮಂಗಳೂರು: ರಾಜ್ಯಾದ್ಯಂತ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮದುವೆಗೂ ಮುನ್ನ ಮದುಮಗಳು ಮತದಾನ ಮಾಡಿದ ಪ್ರಸಂಗವೊಂದು ಮಂಗಳೂರಿನಲ್ಲಿ ನಡೆದಿದೆ.

    ನಗರದ ಬೋಂದೆಲ್ ಸೇಂಟ್ ಲಾರೆನ್ಸ್ ಮೀಡಿಯಂ ಶಾಲೆಯಲ್ಲಿ ಮತದಾನ ನಡೆಯುತ್ತಿದೆ. ಪಚ್ಚನಾಡಿಯ ಮದುಮಗಳು ವಿಯೋಲಾ ಮಾರಿಯಾ ಫೆರ್ನಾಂಡೀಸ್ ಮತದಾನ ಮಾಡಿದ್ದಾರೆ.

    7 ಗಂಟೆಗೆ ಮತದಾನ ಮಾಡಿ ಬಳಿಕ ಬೆಳ್ತಂಗಡಿಯಲ್ಲಿ ನಡೆಯೋ ಮದುವೆಗೆ ಮದುಮಗಳು ತೆರಳಿದ್ದಾರೆ. ಮಂಗಳೂರಿನ ಬೆಳ್ತಂಗಡಿಯ ವರ ಸಿಲ್ವೆಸ್ಟರ್ ರೋಡ್ರಿಗಸ್ ಜತೆ ಯುವತಿಯ ಮದುವೆ ಇಂದು ನಡೆಯುತ್ತಿದೆ.

    ಒಟ್ಟಿನಲ್ಲಿ ವಿಯೋಲಾ ಅವರು ಮದುವೆಗೂ ಮುನ್ನ ಮತದಾನ ಮಾಡಿ ಮಾದರಿಯಾಗಿದ್ದಾರೆ.