Tag: ಮದುಮಗ

  • ಮದುವೆಯಾದ ಏಳೇ ದಿನಕ್ಕೆ ಮದುಮಗ ನೇಣಿಗೆ ಶರಣು!

    ಮದುವೆಯಾದ ಏಳೇ ದಿನಕ್ಕೆ ಮದುಮಗ ನೇಣಿಗೆ ಶರಣು!

    ಬೆಳಗಾವಿ: ಮದುವೆಯಾದ ಏಳೇ ದಿನಕ್ಕೆ ಮದುಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಖಾನಾಪುರ ತಾಲೂಕಿನ ಲಕ್ಕೇಬೈಲ್ ಗ್ರಾಮದಲ್ಲಿ ನಡೆದಿದೆ. ದೇಮಪ್ಪ ಅರ್ಜುನ್ ಸನದಿ(23) ಮೃತ ಮದುಮಗ.

    ದೇಮಪ್ಪ ಕಳೆದ ವಾರವಷ್ಟೇ ತನ್ನ ಸೋದರತ್ತೆಯ ಮಗಳನ್ನು ಮದುವೆಯಾಗಿದ್ದ. ತನ್ನ ಸಂಬಂಧಿಕರ ಮನೆಗೆ ಹೋಗಿ ರಾತ್ರಿ ಮನೆಗೆ ಮರಳಿದ ಬಳಿಕ ತನ್ನ ಮಲಗುವ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಬೆಂಗ್ಳೂರಲ್ಲೊಂದು ವಿಚಿತ್ರ ಘಟನೆ- ಹೆಣದ ಒಡವೆ ಕಿತ್ತುಕೊಂಡ್ರಾ ಆಸ್ಪತ್ರೆ ಸಿಬ್ಬಂದಿ..?

    MARRIAGE

    ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಖಾನಾಪುರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮೃತ ದೇಮಪ್ಪನ ಪತ್ನಿ ಹಾಗೂ ಆಕೆಯ ಪಾಲಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಸಾರಿಗೆ ಬಸ್, ಕಾರ್ ನಡುವೆ ಅಪಘಾತ – ದಂಪತಿ ಸಾವು

    Live Tv

  • ಮಿನ್ನಲ್ ಮುರಳಿ ಸೂಪರ್ ಹೀರೋ ಅವತಾರದಲ್ಲಿ ಕಂಗೊಳಿಸಿದ ಮದುಮಗ

    ಮಿನ್ನಲ್ ಮುರಳಿ ಸೂಪರ್ ಹೀರೋ ಅವತಾರದಲ್ಲಿ ಕಂಗೊಳಿಸಿದ ಮದುಮಗ

    ತಿರುವನಂತಪುರಂ: ಟೋವಿನೋ ಥಾಮಸ್ ಅವರ ಚಿತ್ರ ಮಿನ್ನಲ್ ಮುರಳಿಯಿಂದ ಪ್ರೇರಿತನಾದ ವರನೊಬ್ಬ ತನ್ನ ಮದುವೆಗೆ ಸೂಪರ್ ಹೀರೋ ಅವತಾರದಲ್ಲಿ ಕಂಗೊಳಿಸಿ ವೈರಲ್ ಆಗಿದ್ದಾರೆ. ವರ ಅಮಲ್ ರವೀಂದ್ರನ್ ಮದುವೆಯ ಬಳಿಕ ಸಿನಿಮಾದಲ್ಲಿ ಹೀರೋ ಧರಿಸಿರುವ ಕೆಂಪು ನೀಲಿ ಬಣ್ಣದ ಸಿಗ್ನೇಚರ್ ಧಿರಿಸನ್ನು ತೊಟ್ಟು ಫೋಟೋಶೂಟ್‍ಗೆ ಪೋಸ್ ನೀಡಿದ್ದಾರೆ.

    ಕೇರಳದ ಕೊಟ್ಟಾಯಂ ಮೂಲದ ದಂಪತಿ ಈ ಹಿಂದೆ ಮಿನ್ನಾಲ್ ಮುರಳಿ ಚಿತ್ರದಿಂದ ಪ್ರೇರಿತರಾಗಿ ಮದುವೆಗೂ ಮುನ್ನ ಪ್ರೀ-ವೆಡ್ಡಿಂಗ್ ಚಿತ್ರೀಕರಣ ಮಾಡಿದ್ದರು. ಇರದಿಂದ ಅವರ ಕುಟುಂಬ ಹಾಗೂ ಸ್ನೇಹಿತರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ತಮ್ಮ ಮದುವೆಯ ಬಳಿಕವೂ ವೀಡಿಯೋ ಚಿತ್ರೀಕರಣ ಮಾಡಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    ಈ ಹಿಂದೆ ಕೇರಳ ಆರೋಗ್ಯ ಇಲಾಖೆ ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಬಗ್ಗೆ ಜಾಗೃತಿ ಮೂಡಿಸಲು ಮಿನ್ನಾಲ್ ಮುರಳಿ ಥೀಮ್ ಬಳಸಿದ್ದರು. ಬಳಿಕ ಮೋಟಾರು ವಾಹನ ಇಲಾಖೆ ಅತೀ ವೇಗದ ಚಾಲನೆಯ ವಿರುದ್ಧ ಪ್ರಚಾರದ ವೀಡಿಯೋದಲ್ಲಿ ಚಲನಚಿತ್ರದ ತುಣುಕುಗಳನ್ನು ಬಳಸಿದ್ದರು. ಇದೀಗ ಮದುಮಗನ ಗೆಟಪ್ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೂ ಓದಿ: ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಕೇರಳ ಸಚಿವ – ರಾಜೀನಾಮೆಗೆ ಬಿಜೆಪಿ ಆಗ್ರಹ

  • ಮದುವೆ ಆಹ್ವಾನ ಪತ್ರ ನೀಡಲು ಬಂದ ಮದುಮಗ ಸೇರಿದ್ದು ಮಸಣಕ್ಕೆ

    ಮದುವೆ ಆಹ್ವಾನ ಪತ್ರ ನೀಡಲು ಬಂದ ಮದುಮಗ ಸೇರಿದ್ದು ಮಸಣಕ್ಕೆ

    ಮಡಿಕೇರಿ: ಮೈಸೂರಿನಿಂದ ತನ್ನ ಸಂಬಂಧಿಕರ ಮನೆಗೆ ಮದುವೆ ಆಹ್ವಾನ ಪತ್ರ ನೀಡಲು ಬಂದ ಮದುಮಗ ಹಸೆಮಣೆ ಏರುವ ಮುನ್ನವೇ ಮಸಣ ಸೇರಿದ ಘಟನೆ ಮಡಿಕೇರಿಯ ಹೊರವಲಯದಲ್ಲಿ ನಡೆದಿದೆ.

    Madikeri accident

    ಸೋಮವಾರ ರಾತ್ರಿ ಬೈಕ್ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಮೈಸೂರಿನ ವಿಶ್ವನಾಥ್ (32), ಅತ್ತಿಗೋಡಿನ ದಿನೇಶ್(23) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪರೀಕ್ಷೆಗೆ ತೆರಳೋ ಮುನ್ನ ಮೊಟ್ಟೆ ಬೇಯಿಸಲು ಹೋಗಿ ಅಗ್ನಿ ಅವಘಡ- ವಿದ್ಯಾರ್ಥಿನಿ ಸಾವು

    Madikeri accident

    ಇದೇ ಸೆಪ್ಟೆಂಬರ್ 19 ರಂದು ವಿವಾಹ ಇದ್ದಿದ್ದರಿಂದ ಆಹ್ವಾನ ಪತ್ರಿಕೆ ನೀಡಲು ಮಡಿಕೇರಿಗೆ ವಿಶ್ವನಾಥ್ ಹಾಗೂ ದಿನೇಶ್ ಇಬ್ಬರು ಬೈಕ್ ನಲ್ಲಿ ಬಂದಿದ್ದಾರೆ. ಇತ್ತೀಚೆಗೆ ಎಲ್‍ಎಲ್‍ಬಿ ಮುಗಿಸಿ ಪ್ರಾಕ್ಟೀಸ್ ಆರಂಭಿಸಿದ್ದ ವಿಶ್ವನಾಥ್, ಪದವಿ ಓದುತ್ತಿದ್ದ ದಿನೇಶ್ ಇಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದು, ಪೋಷಕರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಇದೀಗ ಮಡಿಕೇರಿ ನಗರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೋವಿಡ್ ನಿಯಮ ಮೀರಿ ವೈರಸ್ ಹರಡಿದ ವ್ಯಕ್ತಿ – 5 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

  • ಆಮಂತ್ರಣ ಪತ್ರಿಕೆ ಕೊಡಲು ಹೋದ ಮದುಮಗ ಅಪಘಾತದಲ್ಲಿ ದುರ್ಮರಣ

    ಆಮಂತ್ರಣ ಪತ್ರಿಕೆ ಕೊಡಲು ಹೋದ ಮದುಮಗ ಅಪಘಾತದಲ್ಲಿ ದುರ್ಮರಣ

    – ಮೂರೇ ದಿನ ಬಾಕಿ ಇದ್ದ ಮದ್ವೆ, ಕೈಕಾಲು ಛಿಧ್ರ ಛಿಧ್ರ

    ಚಿಕ್ಕಬಳ್ಳಾಪುರ: ಸಂಬಂಧಿಕರು ಮತ್ತು ಸ್ನೇಹಿತರಿಗೆ ವಿವಾಹ ಆಮಂತ್ರಣ ಪತ್ರಿಕೆ ಹಂಚಲು ಹೋಗಿದ್ದ ಮದುಮಗನೊರ್ವ ಅಪಘಾತದಲ್ಲಿ ಸಾವನ್ನಪ್ಪಿರುವ ಮನಕಲಕುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ತಡರಾತ್ರಿ ಚಿಕ್ಕಬಳ್ಳಾಪುರ ತಾಲೂಕು ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ, ರಾಷ್ಟ್ರೀಯ ಹೆದ್ದಾರಿ ನಾಗಾರ್ಜುನ ಕಾಲೇಜು ಬಳಿಯ ಸೇತುವೆ ಬಳಿ ಅಪಘಾತ ನಡೆದಿದೆ. ಟಿಪ್ಪರ್ ಹಾಗೂ ಬುಲೆಟ್ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ದೇವನಹಳ್ಳಿ ತಾಲೂಕು ಸೋಮತನಹಳ್ಳಿ ಗ್ರಾಮದ ಹನುಮಂತೇಗೌಡ (28) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆತನ ಮದುವೆಗೆ ಮೂರೇ ದಿನ ಬಾಕಿ ಇತ್ತು.

    ಹಿಂಬದಿ ಕಿಶೋರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಪಘಾತ ನಂತರ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದು, ನಂದಿಗಿರಿಧಾಮ ಪೊಲೀಸರು ಟಿಪ್ಪರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕಾನೂನು ಕ್ರಮ ಕೈಗೊಂಡಿದ್ದಾರೆ. ಮದುವೆ ಸಂಭ್ರಮದ ಮನೆಯಲ್ಲಿ ಈಗ ಸೂತಕದ ವಾತಾವರಣ ನಿರ್ಮಾಣವಾಗಿದೆ.

  • ಮದ್ವೆ ಮಾಡಿಕೊಳ್ಳಲು ಬೆಂಗ್ಳೂರಿನಿಂದ ಬಂದ ಮದುಮಗನಿಗೆ ಕೊರೊನಾ

    ಮದ್ವೆ ಮಾಡಿಕೊಳ್ಳಲು ಬೆಂಗ್ಳೂರಿನಿಂದ ಬಂದ ಮದುಮಗನಿಗೆ ಕೊರೊನಾ

    – ಮದುವೆ ಮನೆಯಲ್ಲಿ ಫುಲ್ ಟೆನ್ಶನ್

    ಯಾದಗಿರಿ: ಇಷ್ಟು ದಿನ ಮಹಾರಾಷ್ಟ್ರದ ಕಂಟಕ ಅನುಭವಿಸುತ್ತಿದ್ದ ಯಾದಗಿರಿಗೆ ಈಗ ಬೆಂಗಳೂರಿನ ಕಂಟಕ ಕೂಡ ಎದುರಾಗಿದೆ. ಬೆಂಗಳೂರಿನಿಂದ ತನ್ನ ಮದುವೆ ಸಲುವಾಗಿ ಜಿಲ್ಲೆಗೆ ಬಂದ ಯುವಕನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಮದುವೆಯಾಗಬೇಕಿದ್ದ ಮದುಮಗ ಈಗ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾನೆ.

    ಜಿಲ್ಲೆಯ ಶಹಾಪುರ ತಾಲೂಕಿನ ಹಳ್ಳಿಯೊಂದರ ಯುವಕನಿಗೆ ಕೊರೊನಾ ದೃಢಪಟ್ಟಿದೆ. ಕೊರೊನಾ ಪಾಸಿಟಿವ್ ಬಂದ ಯುವಕನ ಮದುವೆ ಇದೇ ತಿಂಗಳ 13ಕ್ಕೆ ಫಿಕ್ಸ್ ಆಗಿತ್ತು. ಹೀಗಾಗಿ ಕಳೆದ ತಿಂಗಳ ಜೂನ್ 29 ರಂದು ಬೆಂಗಳೂರಿನಿಂದ ಯಾದಗಿರಿಗೆ ಈ ಯುವಕ ಬಂದಿದ್ದನು.

    ಬೆಂಗಳೂರಿನಿಂದ ಬರುವಾಗಲೇ ಯುವಕನ ಆರೋಗ್ಯ ಹದಗೆಟ್ಟು, ತೀವ್ರ ಶೀತದಿಂದ ಬಳಲುತ್ತಿದ್ದ ಎನ್ನಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಯುವಕನಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಸದ್ಯ ಯುವಕನ ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಕೊವೀಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಇನ್ನೂ ಮುಂದಿನ ಸೋಮವಾರ ನಡೆಯಬೇಕಿದ್ದ ಮದುವೆ ಕೆಲಸಕ್ಕೆ ಯುವಕ ಓಡಾಡಿದ್ದಾನೆ. ಹೀಗಾಗಿ ಮದುವೆ ಮನೆಯಲ್ಲಿ ಹಾಗೂ ಗ್ರಾಮದಲ್ಲಿ ಕೊರೊನಾ ಭೀತಿ ಹೆಚ್ಚಾಗಿದೆ. ಮದುವೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.