Tag: ಮದರಾಸ

  • ರಾಜ್ಯದಲ್ಲಿ ಮದರಾಸಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತೇನೆ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

    ರಾಜ್ಯದಲ್ಲಿ ಮದರಾಸಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತೇನೆ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

    ಗುವಾಹಟಿ: ರಾಜ್ಯದಲ್ಲಿ ಮದರಾಸಗಳ (Madrassas) ಸಂಖ್ಯೆಯನ್ನು ಕಡಿಮೆ ಮಾಡಿ ಅವುಗಳನ್ನು ನೋಂದಣಿ ಮಾಡುವ ಬಗ್ಗೆ ಚಿಂತಿಸಲಾಗಿದೆ ಎಂದು ಅಸ್ಸಾಂ (Assam) ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ.

    ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ಮೊದಲನೆಯದಾಗಿ ನಾವು ಅಸ್ಸಾಂನಲ್ಲಿರುವ ಮದರಾಸಗಳ ಸಂಖ್ಯೆಯನ್ನು ಇಳಿಕೆ ಮಾಡಲು ತಯಾರಿ ನಡೆಸಿದ್ದೇವೆ. ಮದರಾಸಗಳಲ್ಲಿ ಸಾಮಾನ್ಯ ಶಿಕ್ಷಣವನ್ನು (General Education) ಬೋಧಿಸಲು ಕ್ರಮ ವಹಿಸುತ್ತೇವೆ. ಜೊತೆಗೆ ಮದರಾಸಗಳನ್ನು ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮೂತ್ರ ವಿಸರ್ಜನೆ ಕೇಸ್‌ನಲ್ಲಿ ಪೈಲಟ್‌ ಬಲಿಪಶು – ಏರ್‌ ಇಂಡಿಯಾ ಪೈಲಟ್‌ ಒಕ್ಕೂಟ

    ನಮ್ಮ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಜೊತೆ ಸೇರಿ ಕೆಲಸ ಮಾಡುತ್ತಿದೆ. ಅವರೂ ಕೂಡ ಸರ್ಕಾರದೊಂದಿಗೆ ಕೈಜೋಡಿಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಜಲ್ಲಿಕಟ್ಟು ಸ್ಪರ್ಧೆ – ಹೋರಿ ತಿವಿದು ಮೃತಪಟ್ಟ ಬಾಲಕ

    ASSAM MADARASA MADRASA

    ಕೆಲದಿನಗಳ ಹಿಂದೆ ಅಸ್ಸಾಂನ ಪೊಲೀಸ್ ಮಹಾನಿರ್ದೇಶಕ (DGP) ಭಾಸ್ಕರ್ ಜ್ಯೋತಿ ಮಹಂತ್, ರಾಜ್ಯದಲ್ಲಿನ ಮದರಸಾಗಳಲ್ಲಿ ಸುಧಾರಣೆಗಳನ್ನು ತರುವ ಕುರಿತು ಚರ್ಚೆಗಳು ನಡೆಯುತ್ತಿವೆ. ಅಸ್ಸಾಂನಲ್ಲಿ ಮದರಸಾಗಳು ಸರಿಯಾಗಿ ನಡೆಯುತ್ತಿವೆ. ನಾವು ಮದರಸಾಗಳನ್ನು ನಡೆಸುತ್ತಿರುವ 68 ಜನರೊಂದಿಗೆ ಸಂವಾದ ನಡೆಸಿದ್ದೇವೆ. ಅವರ ಸಲಹೆ ಸೂಚನೆಗಳೊಂದಿಗೆ ಸಣ್ಣ ಮದರಾಸಗಳನ್ನೂ ದೊಡ್ಡ ಮದರಾಸಗಳೊಂದಿಗೆ ವಿಲೀನಗೊಳಿಸಲು ಚಿಂತಿಸಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದರು. ಇದೀಗ ಸಿಎಂ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿ ಮದರಾಸಗಳ ವಿಲೀನದ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 20 ವರ್ಷಗಳ ಹಿಂದೆ ಮದರಸಾದಲ್ಲಿ ಹಿಂದೂಗಳು ಪೂಜೆ ಮಾಡಿದ ವೀಡಿಯೋ ವೈರಲ್

    20 ವರ್ಷಗಳ ಹಿಂದೆ ಮದರಸಾದಲ್ಲಿ ಹಿಂದೂಗಳು ಪೂಜೆ ಮಾಡಿದ ವೀಡಿಯೋ ವೈರಲ್

    ಬೀದರ್: ಮದರಸಾಗೆ (Mosque) ನುಗ್ಗಿ ಪೂಜೆ ಮಾಡಿದ 9 ಹಿಂದೂಗಳ (Hindu) ಮೇಲೆ ಎಫ್‍ಐಆರ್ (FIR) ಆಗಿ ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ 20 ವರ್ಷಗಳ ಹಿಂದೆ ವಿವಾದಿತ ಮದರಸಾದಲ್ಲಿ ಹಿಂದೂಗಳು ಪೂಜೆ ಮಾಡುವ ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಬೀದರ್‌ನ (Bidar) ಒಳಕೋಟೆಯಿಂದ ಚೌಬಾರ್, ಗವಾನ್ ಚೌಕ್, ನಗರ ಠಾಣೆ, ಮಹ್ಮದ್ ಗವಾನ್ ಮದರಸಾ ರಸ್ತೆಯಲ್ಲಿ ಭವಾನಿ ಭವ್ಯ ಮೆರವಣಿಗೆ ಮಾಡುತ್ತಾ ಸಾಗುತ್ತಿರುವ ಹಾಗೂ ಮದರಸಾ ಸೇರಿದಂತೆ ವಿವಿಧ ಕಡೆಗಳಲ್ಲಿ ಹಿಂದೂಗಳು ಪೂಜೆ ಸಲ್ಲಿಸುತ್ತಿರುವ ಹಳೆಯ ಪಾರಂಪರಿಕ ವೀಡಿಯೋ ತುಣುಕುಗಳು ಹರಿದಾಡುತ್ತಿದೆ. ಇದನ್ನೂ ಓದಿ: ಮದರಸಾದಲ್ಲಿ 1985ರಿಂದಲೂ ಪೂಜೆ ಇತ್ತು, ಪೊಲೀಸರ ಅನುಮತಿ ಸಿಕ್ಕಿತ್ತು: ಹಿಂದೂ ಮುಖಂಡರ ಸ್ಪಷ್ಟನೆ

    ಮದರಸಾ ವಿವಾದದ ಬೆನ್ನಲ್ಲೇ ಹಲವು ಅನ್ಯಕೋಮಿನ ಜನರು ಮದರಸಾದಲ್ಲಿ ಹಿಂದೂಗಳು ಪೂಜೆ ಮಾಡುತ್ತಿರಲಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆ ಮದರಸಾದಲ್ಲಿ ಹಿಂದೂಗಳ ಪೂಜೆ ಮಾಡುವ ಹಳೆಯ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಕೆಲ ದಿನಗಳ ಹಿಂದೆ ದಸರಾ (Dasara) ಮೆರವಣಿಗೆ ವೇಳೆ ಹಿಂದೂ ಸಮುದಾಯದ ಗುಂಪೊಂದು ಮದರಸಾಗೆ (Madrasa) ನುಗ್ಗಿ ಪೂಜೆ ಮಾಡಿರುವ ಘಟನೆ ಬೀದರ್ ನಗರದ ಓಲ್ಡ್ ಸಿಟಿಯಲ್ಲಿರುವ ಐತಿಹಾಸಿಕ ಮೊಹಮ್ಮದ್ ಗವಾನ್ ಮದರಸಾದಲ್ಲಿ ನಡೆದಿತ್ತು. ಇದನ್ನೂ ಓದಿ: ದಸರಾ ಮೆರವಣಿಗೆ ವೇಳೆ ಮದರಸಾಗೆ ನುಗ್ಗಿ ಪೂಜೆ – 9 ಜನರ ವಿರುದ್ಧ ಎಫ್‌ಐಆರ್

    Live Tv
    [brid partner=56869869 player=32851 video=960834 autoplay=true]

  • ಮಾನ್ಯತೆ ಇಲ್ಲದ ಮದರಸಾಗಳ ಆದಾಯ ಪರಿಶೀಲಿಸಲು ಮುಂದಾದ ಯುಪಿ ಸರ್ಕಾರ

    ಮಾನ್ಯತೆ ಇಲ್ಲದ ಮದರಸಾಗಳ ಆದಾಯ ಪರಿಶೀಲಿಸಲು ಮುಂದಾದ ಯುಪಿ ಸರ್ಕಾರ

    ಲಕ್ನೋ: ರಾಜ್ಯದಲ್ಲಿ ಮಾನ್ಯತೆ ಪಡೆಯದ ಮದರಸಾಗಳಲ್ಲಿರುವ ಶಿಕ್ಷಕರ ಸಂಖ್ಯೆ, ಪಠ್ಯಕ್ರಮ ಮತ್ತು ಅಲ್ಲಿ ಲಭ್ಯವಿರುವ ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಉತ್ತರ ಪ್ರದೇಶ ಸರ್ಕಾರ ಸಮೀಕ್ಷೆ ನಡೆಸಲು ಮುಂದಾಗಿದೆ.

    ಈ ಕುರಿತಂತೆ ಪ್ರತಿಕ್ರಿಯಿಸಿರುವ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಅವರು, ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‍ಸಿಪಿಸಿಆರ್) ಅಗತ್ಯಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೈಲಿನಲ್ಲಿ ಬಂದ ಪಾರ್ಸೆಲ್‍ಗಳನ್ನು ಬೀಸಾಡಿದ ಸಿಬ್ಬಂದಿ – ವೈರಲ್ ವೀಡಿಯೋಗೆ ರೈಲ್ವೆ ಇಲಾಖೆ ಸ್ಪಷ್ಟನೆ

    ಶೀಘ್ರದಲ್ಲೇ ಸಮೀಕ್ಷೆ ಆರಂಭವಾಗಲಿದೆ. ಸಮೀಕ್ಷೆ ವೇಳೆ ಮದರಸಾದ ಹೆಸರು ಮತ್ತು ಅದನ್ನು ನಿರ್ವಹಿಸುವ ಸಂಸ್ಥೆ, ಅದು ಖಾಸಗಿ ಅಥವಾ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆಯೋ, ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಕುಡಿಯುವ ನೀರು, ಶೌಚಾಲಯ, ಪೀಠೋಪಕರಣಗಳು ಮತ್ತು ವಿದ್ಯುತ್ ಸರಬರಾಜು ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಜೊತೆಗೆ ಮದರಸಾದಲ್ಲಿರುವ ಶಿಕ್ಷಕರ ಸಂಖ್ಯೆ, ಪಠ್ಯಕ್ರಮ, ಆದಾಯದ ಮೂಲ ಮತ್ತು ಯಾವುದೇ ಸರ್ಕಾರೇತರ ಸಂಸ್ಥೆ (ಎನ್‍ಜಿಒ)ಯೊಂದಿಗೆ ಹೊಂದಿರುವ ಸಂಬಂಧದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಎಂದಿದ್ದಾರೆ.

    ಈ ಸಮೀಕ್ಷೆಯ ನಂತರ ರಾಜ್ಯ ಸರ್ಕಾರ ಹೊಸ ಮದರಸಾಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆಯೇ ಎಂಬ ಪ್ರಶ್ನೆಗೆ, ಸದ್ಯ ಮಾನ್ಯತೆ ಇಲ್ಲದ ಮದರಸಾಗಳ ಬಗ್ಗೆ ಮಾತ್ರ ಮಾಹಿತಿ ಸಂಗ್ರಹಿಸುವುದು ಸರ್ಕಾರದ ಉದ್ದೇಶವಾಗಿದೆ. ಪ್ರಸ್ತುತ ಉತ್ತರ ಪ್ರದೇಶದಲ್ಲಿ ಒಟ್ಟು 16,461 ಮದರಸಾಗಳಿದ್ದು, ಈ ಪೈಕಿ 560ಕ್ಕೆ ಸರ್ಕಾರದ ಅನುದಾನ ನೀಡಿರುವುದು ಗಮನಾರ್ಹವಾಗಿದೆ. ರಾಜ್ಯದಲ್ಲಿ ಕಳೆದ ಆರು ವರ್ಷಗಳಿಂದ ಹೊಸ ಮದರಸಾಗಳು ಅನುದಾನದ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಗರ್ಭಿಣಿ ಪ್ರವಾಸಿ ಸಾವು- ಪೋರ್ಚುಗಲ್‍ನ ಆರೋಗ್ಯ ಸಚಿವೆ ರಾಜೀನಾಮೆ

    Live Tv
    [brid partner=56869869 player=32851 video=960834 autoplay=true]

  • ಮದರಸ ಟೆರರಿಸ್ಟ್‌ಗಳನ್ನು ತಯಾರು ಮಾಡುವ ಕೇಂದ್ರ: ಮುತಾಲಿಕ್

    ಮದರಸ ಟೆರರಿಸ್ಟ್‌ಗಳನ್ನು ತಯಾರು ಮಾಡುವ ಕೇಂದ್ರ: ಮುತಾಲಿಕ್

    ದಾವಣಗೆರೆ: ಮದರಾಸ ಶಿಕ್ಷಣವನ್ನು ಬ್ಯಾನ್ ಮಾಡಬೇಕು. ಮದರಸ ಟೆರರಿಸ್ಟ್‌ಗಳನ್ನು ತಯಾರು ಮಾಡುವ ಕೇಂದ್ರವಾಗುತ್ತಿದೆ. ಆಗಸ್ಟ್ 15 ರಂದು ಮದರಾಸಗಳಲ್ಲಿ ಮಕ್ಕಳು ಭಾರತ್ ಮಾತಕೀ ಜೈ, ವಂದೇ ಮಾತರಂ ಎಂದು ಕೂಗುವ ವೀಡಿಯೋ ಸರ್ಕಾರಕ್ಕೆ ರವಾನಿಸಬೇಕೆಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

    ASSAM MADARASA MADRASA

    ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುರಾನ್ ಬೇಕಾದ್ರೆ ಮನೆಯಲ್ಲಿ ಕಲಿಸಲಿ, ಶಿಕ್ಷಣವನ್ನು ಉರ್ದು ಶಾಲೆಯಲ್ಲಿ ಪಠ್ಯ ಪುಸ್ತಕ ಮೂಲಕ ಓದಲಿ, ಮದರಸ ಟೆರರಿಸ್ಟ್‌ಗಳನ್ನು ತಯಾರು ಮಾಡುವ ಕೇಂದ್ರವಾಗುತ್ತಿದೆ. ಪಾಕಿಸ್ತಾನದಲ್ಲಿ ಮದರಸಗಳನ್ನು ಬ್ಯಾನ್ ಮಾಡಿದ್ದಾರೆ. ಇಸ್ಲಾಂ ದೇಶದಲ್ಲೇ ಬ್ಯಾನ್ ಮಾಡಿದ್ದಾರೆ. ಇಲ್ಲಿ ನೂರಕ್ಕೆ ನೂರರಷ್ಟು ಬ್ಯಾನ್ ಮಾಡಬೇಕು. ಭಾರತದ ಪಠ್ಯ ಪುಸ್ತಕ ಓದಿ ಭಾರತೀಯ ನಾಗರೀಕರಾಗಿ ಅದನ್ನು ಬಿಟ್ಟು ಪಾಕಿಸ್ತಾನಿ, ತಾಲಿಬಾನ್‍ಗಳಾಗಬಾರದು. ರಿಜಿಸ್ಟರ್ ಆಗದೇ ಇರುವ ಮದರಸಗಳು ಇವೆ. ಇದನ್ನು ನಿಲ್ಲಿಸಲು ಕೇಂದ್ರ, ರಾಜ್ಯ ಸರ್ಕಾರ ಚಿಂತನೆ ಮಾಡಬೇಕು. ನೋಡುತ್ತೇವೆ, ಕ್ರಮ ಕೈಗೊಳ್ಳುತ್ತೇವೆ ಎನ್ನುವುದರ ಬದಲು ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ಪಾಸ್‌ವರ್ಡ್ ಹಂಚಿಕೆಗೆ ಶುಲ್ಕ ವಿಧಿಸಲು ನೆಟ್‌ಫ್ಲಿಕ್ಸ್ ಪರೀಕ್ಷಿಸುತ್ತಿದೆ ಹೊಸ ವಿಧಾನ

    ಸ್ವಾತಂತ್ರ್ಯ ದಿನಾಚರಣೆ ದಿನ ಎಲ್ಲಾ ಶಾಲೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸುವ ವಿಚಾರವಾಗಿ ಮಾತನಾಡಿ, ಮದರಸಗಳಲ್ಲಿ ರಾಷ್ಟ್ರ ಧ್ವಜ ಹಾರಿಸಬೇಕು ಎನ್ನುವುದು ಯೋಗ್ಯವಾಗಿದೆ. ಅಲ್ಲಿ ರಾಷ್ಟ್ರಧ್ವಜ ಹಾರಿಸಿ, ಅ ಮಕ್ಕಳ ಬಾಯಿಯಲ್ಲಿ ರಾಷ್ಟ್ರ ಗೀತೆ ಹಾಡಿಸಿ ಭಾರತ್ ಮಾತಾಕೀ ಜೈ ಎನ್ನಿಸಬೇಕು ಉತ್ತರ ಪ್ರದೇಶ ಮಾದರಿಯಲ್ಲಿ ವಂದೇ ಮಾತರಂ ಭಾರತ್ ಮಾತ ಕೀ ಜೈ ಎಂದು ಮದರಸಾದಲ್ಲಿ ಕೂಗುವ ವೀಡಿಯೋ ರಾಜ್ಯ ಸರ್ಕಾರಕ್ಕೆ ರವಾನಿಸಬೇಕೆಂದು ಮುತಾಲಿಕ್ ಒತ್ತಾಯಿಸಿದರು.

    ಗೋಹತ್ಯ ನಿಷೇಧ ಕಾಯ್ದೆಯಾಗಿದೆ ಅದು ಸರಿಯಾಗಿ ಜಾರಿಗೆ ಬಂದಿಲ್ಲ. ಎಲ್ಲಿ ಕಸಾಯಿಖಾನೆಗಳು ಇವೆ, ಎಲ್ಲಿ ಮಾರಾಟ ಆಗುತ್ತೆ ಎಂದು ಇಂಚಿಂಚು ಮಾಹಿತಿ ಪೊಲೀಸ್‌ ಇಲಾಖೆಗೆ ಗೊತ್ತಿರುತ್ತದೆ. ಪೊಲೀಸರಿಗೆ ಪ್ರೀ ಹ್ಯಾಂಡ್ ನೀಡಿದರೆ ಸಂಪೂರ್ಣ ನಿಲ್ಲುತ್ತದೆ. ಇಲ್ಲವಾದ್ರೆ ಬೂಟಾಟಿಗೆಯಾಗುತ್ತದೆ. ದಾವಣಗೆರೆಯಲ್ಲಿ 300ಕ್ಕೂ ಹೆಚ್ಚು ಅಕ್ರಮ ಕಸಾಯಿಖಾನೆಗಳಿವೆ. ತಾಖತ್ ಇದ್ದರೆ ತೆರವು ಮಾಡಿ. ಕರ್ನಾಟಕ ಸರ್ಕಾರಕ್ಕೆ ಗೋ ಮಾತೆಯ ಮೇಲೆ ಕಳಕಳಿ ಇದ್ದಲ್ಲಿ ಗೋಹತ್ಯೆ ಕಾಯ್ದೆ ಜಾರಿಗೆ ತನ್ನಿ. ಪ್ರತ್ಯೇಕ ಸ್ಕ್ವಾಡ್ ಮಾಡಿ ಆಗ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗುತ್ತೆ ಎಂದು ಅಭಿಪ್ರಾಯ ಹಂಚಿಕೊಂಡರು. ಇದನ್ನೂ ಓದಿ: ಗುರುತು ಮುಚ್ಚಿಟ್ಟು ಹಿಂದೂ ಯುವತಿಯನ್ನು ದೇವಾಲಯದಲ್ಲೇ ಮದುವೆಯಾದ- ಕೊನೆಗೆ ತಿಳೀತು ಅಸಲಿ ಸತ್ಯ

    ZAMEER

    ಚಾಮರಾಜಪೇಟೆ ಈದ್ಗಾ ಮೈದಾನ ಈಗಾಗಲೇ ಸುಪ್ರೀಂ ಕೋರ್ಟ್ ಕೂಡ ಬಿಬಿಎಂಪಿಗೆ ಸೇರಿದೆ ಎಂದು ಹೇಳಿದೆ, ಅದ್ರೇ ಶಾಸಕ ಜಮೀರ್ ಈ ಜಾಗ ನಮ್ಮದು ಎಂದು ವಕ್ಫ್ ಬೋರ್ಡ್‍ನ್ನು ಎತ್ತಿಕಟ್ಟಿದ್ದಾರೆ. ಈ ಜಾಗ ನಮ್ಮದು ಎಂದು ಹೇಳಲು ವಕ್ಫ್ ಬೋರ್ಡ್ ಬಳಿ ಒಂದು ದಾಖಲೆ ಇಲ್ಲ. ಈ ಜಾಗ ನಮ್ಮದು ಎಂದು ಸರ್ಕಾರ ಡಿಕ್ಲೇರ್ ಮಾಡಲಿ. ಅಲ್ಲಿ ವರ್ಷಕ್ಕೆ ಎರಡು ಬಾರಿ ನಮಾಜ್ ಮಾಡ್ತಾರೆ ಹಾಗೇ ಗಣಪತಿ ಹಬ್ಬಕ್ಕೆ ಅವಕಾಶ ನೀಡಲಿ. ಅಲ್ಲಿ ರಾಷ್ಟ್ರ ಧ್ವಜ ಹಾರಿಸಲು ವಿರೋಧ ಮಾಡ್ತಾರೆ. ಹೀಗೆ ಮಾಡಿದರೆ ರಾಷ್ಟ್ರದ್ರೋಹಿಗಳಾಗ್ತಿರಿ. ಈದ್ಗಾ ಮೈದಾನ ಮಾಡಲು ಐದು ಎಕರೆಯನ್ನು ನೀಡಿದ್ದಾರೆ. ಕೂಡಲೇ ಅಲ್ಲಿಗೆ ಶಿಪ್ಟ್ ಮಾಡಿಕೊಳ್ಳಿ. ಅಲ್ಲಿರುವ ಗೋಡೆಯನ್ನು ಅಲ್ಲಿಗೆ ಶಿಪ್ಟ್ ಮಾಡಿಕೊಳ್ಳಿ ಎಂದರು.

    Live Tv
    [brid partner=56869869 player=32851 video=960834 autoplay=true]

  • ಮೊದಲು ಕರ್ನಾಟಕದಲ್ಲಿ ಮದರಸಾವನ್ನು ಬ್ಯಾನ್ ಮಾಡಿ: ಪ್ರಮೋದ್ ಮುತಾಲಿಕ್

    ಮೊದಲು ಕರ್ನಾಟಕದಲ್ಲಿ ಮದರಸಾವನ್ನು ಬ್ಯಾನ್ ಮಾಡಿ: ಪ್ರಮೋದ್ ಮುತಾಲಿಕ್

    ಮೈಸೂರು: ಮದರಸಾಗಳಲ್ಲಿ ಅಪ್ರಾಪ್ತರಿಗೆ ಕೊಲೆಯ ತರಬೇತಿ ನೀಡಲಾಗುತ್ತಿದೆ. ಹಾಗಾಗಿ ಮೊದಲು ಕರ್ನಾಟಕ ಸರ್ಕಾರ ಮದರಾಸ ಬ್ಯಾನ್ ಮಾಡಿ  ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ಹಿಂದೂ ಮುಖಂಡರ ಹತ್ಯೆಯ ಪ್ಲಾನ್ ವಿಚಾರದ ಬಗ್ಗೆ ಮೈಸೂರಿನಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮುಸ್ಲಿಮರ ಅಬ್ಬರ ಅಟ್ಟಹಾಸ ಹೆಚ್ಚಾಗತ್ತಿದೆ. ಕೊಲೆ, ಗಲಾಟೆ ಮಾಡುತ್ತಿರುವವರು ಹಿಂದೂಗಳಲ್ಲ.  ಮೈಸೂರಿನ ‘ಕವಲಂದೆಯಲ್ಲಿ ಛೋಟಾ ಪಾಕಿಸ್ತಾನ್ ಅಂತ ಘೋಷಣೆ ಕೂಗಿದ್ದು, ಹುಬ್ಬಳ್ಳಿಯಲ್ಲಿ ದೇವಾಲಯದ ಮೇಲೆ ಕಲ್ಲೂತೂರಾಟ ನಡೆಸಿ ಹಲ್ಲೆ ನಡೆಸಿದ್ದೂ ಹಿಂದೂಗಳಲ್ಲ. ಹಿಂದೂಗಳಿಂದ ಯಾವುದೇ ತೊಂದರೆಯಾಗುತ್ತಿಲ್ಲ. ಆದರೆ ನೀವು ದೇಶದ್ರೋಹಿ, ಸಮಾಜ ಕಂಟಕ, ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುತ್ತಿದ್ದೀರಾ. ಹಾಗಾಗಿ ನೀವು ಮಾಡುತ್ತಿರುವ ಕುತಂತ್ರ, ಅಟ್ಟಹಾಸದಿಂದ ಹಿಂದೂಗಳು ಎಚ್ಚರಗೊಂಡು ಇದಕ್ಕೆ ಪ್ರತಿಕ್ರಿಯಿಸಬೇಕಾಗುತ್ತದೆ. ಇಲ್ಲಿಯವರೆಗೂ ಯಾವುದೇ ಹಿಂದೂ ಅಶಾಂತಿಯನ್ನು ಸೃಷ್ಟಿಸುವಂತಹ ಯಾವುದೇ ಕೆಲಸಗಳನ್ನು ಮಾಡಿಲ್ಲ, ಮಾಡುವುದು ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸಲು ಪೆಟ್ರೋಲ್ ಬಾಂಬ್ ಸಂಗ್ರಹಿಸಿದ್ದ ಮೂವರು ಅರೆಸ್ಟ್

    ಮದರಸಾಗಳಲ್ಲಿ ಅಪ್ರಾಪ್ತರಿಗೆ ಕೊಲೆಯ ತರಬೇತಿ ನೀಡಲಾಗುತ್ತಿದೆ. ಹಾಗಾಗಿ ಮೊದಲು ಕರ್ನಾಟಕ ಸರ್ಕಾರ ಮದರಸಾ ಬ್ಯಾನ್ ಮಾಡಿ. ಪಾಕಿಸ್ತಾನದಲ್ಲಿಯೇ ಮದರಸಾಗಳನ್ನು ಬ್ಯಾನ್ ಮಾಡಲಾಗಿದೆ. ಅಲ್ಲಿಯ ಉಪಟಳವನ್ನು ತಡೆಯಲಾಗದೇ ಪಾಕಿಸ್ತಾನದಲ್ಲಿಯೇ ಮದರಸಾಗಳನ್ನು ಬ್ಯಾನ್ ಮಾಡಬೇಕಾದರೆ, ನಮ್ಮ ದೇಶದಲ್ಲಿ ಕೂಡ ಮದರಸಾಗಳನ್ನು ಬ್ಯಾನ್ ಮಾಡಬೇಕೆಂದು ನಾನು ಕರ್ನಾಟಕದ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ. ಇದನ್ನೂ ಓದಿ: ಅಂಗವಿಕಲ ಮಗುವಿಗೆ ಬೋರ್ಡಿಂಗ್ ನಿರಾಕರಿಸಿದ ವಿಮಾನ ನಿಲ್ದಾಣ ಸಿಬ್ಬಂದಿ – ವೀಡಿಯೋ ವೈರಲ್‌

  • ಮದರಸಾಗಳಲ್ಲಿ ಶಿಕ್ಷಣ ಪದ್ಧತಿ ತರುವ ಪ್ರಯತ್ನ ಮಾಡ್ತೇವೆ: ಬಿ.ಸಿ ನಾಗೇಶ್

    ಮದರಸಾಗಳಲ್ಲಿ ಶಿಕ್ಷಣ ಪದ್ಧತಿ ತರುವ ಪ್ರಯತ್ನ ಮಾಡ್ತೇವೆ: ಬಿ.ಸಿ ನಾಗೇಶ್

    ಕಾರವಾರ: ಮದರಸಾಗಳನ್ನು ಶಿಕ್ಷಣ ಪದ್ಧತಿಯಲ್ಲಿ ತರುವ ಪ್ರಯತ್ನ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಉತ್ತರಕನ್ನಡ ಜಿಲ್ಲೆಯಲ್ಲಿ ಹೇಳಿದರು.

    ಕುಮಟಾ ತಾಲೂಕಿನ ಗೋಕರ್ಣದ ವಿಷ್ಣುಪೀಠ ವಿದ್ಯಾಲಯಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮದರಸಾ ಶಿಕ್ಷಣದಿಂದಾಗಿ ಅಲ್ಪಸಂಖ್ಯಾತ ಮಕ್ಕಳು ಶಿಕ್ಷಣ ಪದ್ಧತಿಯಿಂದ ದೂರ ಉಳಿಯಬಾರದು. ಅವರು ಸಹ ನಮ್ಮ ಎಲ್ಲಾ ಮಕ್ಕಳಂತೆ ಈ ಶಿಕ್ಷಣ ಪದ್ಧತಿಗೆ ಬರಬೇಕು ಎನ್ನುವ ಕಾರಣದಿಂದ ಮುಂದಿನ ದಿನದಲ್ಲಿ ಈ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ತಿಳಿಸಿದರು.

    ಈ ಬಗ್ಗೆ ಅಲ್ಪಸಂಖ್ಯಾತ ನಾಯಕರ ಗಮನಕ್ಕೂ ಬಂದಿದೆ. ಮದರಸಾಕ್ಕೆ ಸೇರುವವರ ಸಂಖ್ಯೆ ಕಡಿಮೆಯಾಗಿ ನಮ್ಮ ಶಾಲೆಗೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಇವತ್ತಿನ ಪ್ರಪಂಚದಲ್ಲಿ ಬದುಕುವುದಾದರೇ ಈ ಶಿಕ್ಷಣ ಪದ್ಧತಿ ಬೇಕು. ಅಲ್ಪಸಂಖ್ಯಾತರಿಗೆ ಈ ದೇಶದಲ್ಲಿ ಒಂದಷ್ಟು ಅವಕಾಶ ಮಾಡಿಕೊಟ್ಟಿದ್ದೇವೆ. ಆ ಪ್ರಕಾರವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ಬಸ್ ಅವಘಡದಲ್ಲಿ ಕೂಲಿನಾಲಿ ಮಾಡುವ ಜನರಿದ್ದರೆ ಹೆಚ್ಚಿನ ಪರಿಹಾರ ನೀಡಬೇಕು: ಹೆಚ್‍ಡಿಕೆ

    ಹಿಜಬ್ ತೀರ್ಪಿನಿಂದ ಶಾಲಾ ಕಾಲೇಜಿಗೆ ಬಾರದೇ ಇರುವವರ ಕುರಿತು ಮಾತನಾಡಿದ ಅವರು, ಶಾಲೆಗೆ ಬರಲೇಬೇಕು ಎಂದು ಒತ್ತಾಯಿಸಿ ಅವರ ಅಧಿಕಾರ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಶೇ.99.9ರಷ್ಟು ಆ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಒಂದು ಪರಸೆಂಟ್ ಮಾತ್ರ ಬರುತ್ತಿಲ್ಲ. ಅವರನ್ನು ಶಾಲೆಗೆ ಕರೆಸುವಂತಹ ಪ್ರಯತ್ನ ಮಾಡುತ್ತೇವೆ. ಆದರೆ ಎಳೆದುಕೊಂಡು ಬರುವ ಪ್ರಯತ್ನ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

    ಎನ್‍ಇಪಿ ಬಗ್ಗೆ ಪಾಲಕರಲ್ಲಿರುವ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗೊಂದಲ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. 20 ಸಾವಿರ ಶಾಲೆಯಲ್ಲಿ ಮಾತ್ರ ಪ್ರಾರಂಭ ಮಾಡುತ್ತಿದ್ದೇವೆ. ಮಿಕ್ಕ ಶಾಲೆಯಲ್ಲಿ ಈಗ ಹೇಗೆ ನಡೆಯುತ್ತದೆಯೋ ಹಾಗೆಯೇ ನಡಿಯುತ್ತದೆ. ಸಂಖ್ಯೆ ಮತ್ತು ಸಾಕ್ಷರತೆಗೆ ಹೆಚ್ಚು ಒತ್ತನ್ನು ಕೊಡುತ್ತಿದ್ದೇವೆ. ನಮ್ಮಲ್ಲಿ 48 ಸಾವಿರ ಶಾಲೆಗಳಿದ್ದರೂ ಮಕ್ಕಳ ಸಂಖ್ಯೆ ಕಡಿಮೆ ಇದೆ. ಎಲ್ಲಿ ಮಕ್ಕಳು ಹೆಚ್ಚು ಇರುತ್ತಾರೋ ಅಲ್ಲಿ ಪ್ರಾರಂಭ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಬಿಜೆಪಿ ಮಾದರಿಯಲ್ಲೇ ನಾವು ಮುಂದಿನ ಚುನಾವಣೆ ಎದುರಿಸುತ್ತೇವೆ. ಬಸವರಾಜ್ ಹೊರಟ್ಟಿಯವರು ಬಿಜೆಪಿ ವೈಚಾರಿಕ ಸಂಘಟನೆ ವಿಚಾರ ಒಪ್ಪಿಕೊಂಡು ಬಂದರೆ ಸ್ವಾಗತಿಸುತ್ತೇವೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಮುಸ್ಲಿಮರ ಮತಗಳು ಬೇಕಿದೆ – ನಾವು ಮೈತ್ರಿಗೆ ಸಿದ್ಧ ಎಂದ ಜಲೀಲ್

    ಭಗವದ್ಗೀತೆ ಪಠ್ಯ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಶಿಕ್ಷಣದಲ್ಲಿ ನೈತಿಕ ಶಿಕ್ಷಣದ ಕೊರತೆ ಇದೆ. ಇದು ಎಲ್ಲರಿಗೂ ಅರಿವಾಗಿದೆ. ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ನೈತಿಕ ಶಿಕ್ಷಣದ ತರಗತಿಯನ್ನು ಮಾಡುತ್ತೇವೆ. ನೈತಿಕ ಶಿಕ್ಷಣದಲ್ಲಿ ಏನೇನು ಇರಬೇಕು ಎಂದು ಶಿಕ್ಷಣ ತಜ್ಞರ ಸಲಹೆ ಪಡೆದು ಮಾಡುತ್ತೇವೆ. ಭಗವದ್ಗೀತೆ ಧಾರ್ಮಿಕ ಅಲ್ಲ ಎಂದು ಪ್ರತಿಕ್ರಿಯಿಸಿದರು.