Tag: ಮದರಸ

  • ರಾಜ್ಯದಲ್ಲಿ ಶುರುವಾಯ್ತು ಮತ್ತೊಂದು ಧರ್ಮ ದಂಗಲ್ – ಮದರಸಾ ಬ್ಯಾನ್‍ಗೆ ಹಿಂದೂ ಸಂಘಟನೆಗಳಿಂದ ಒತ್ತಾಯ

    ರಾಜ್ಯದಲ್ಲಿ ಶುರುವಾಯ್ತು ಮತ್ತೊಂದು ಧರ್ಮ ದಂಗಲ್ – ಮದರಸಾ ಬ್ಯಾನ್‍ಗೆ ಹಿಂದೂ ಸಂಘಟನೆಗಳಿಂದ ಒತ್ತಾಯ

    ಬೆಂಗಳೂರು: ಹಲಾಲ್ ಆಯ್ತು (Halal), ಹಿಜಬ್ ಆಯ್ತು (Hijab), ಆಜಾನ್ ಆಯ್ತು ಈಗ ಮತ್ತೊಂದು ಧರ್ಮ ದಂಗಲ್ ಆರಂಭಗೊಂಡಿದೆ. ದೇಶದಲ್ಲಿ ಪಿಎಫ್‍ಐ (PFI) ಬ್ಯಾನ್ ಬಳಿಕ ಮದರಸಾ (Madrasa) ಬ್ಯಾನ್ ಅಭಿಯಾನ ಶುರುವಾಗಿದೆ. ಮದರಸಾ ಬ್ಯಾನ್‍ಗೆ ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿವೆ.

    ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಧರ್ಮ ದಂಗಲ್‍ನಾ ಕಾವು ಹೆಚ್ಚಾಗ್ತಾನೆ ಇದೆ. ಹಲಾಲ್ ಕಟ್‍ನಿಂದ ಶುರುವಾದ ಅಭಿಯಾನ ಆಜಾನ್‌ವರೆಗೂ ಬಂದಿದ್ದು, ಈಗ ಮತ್ತೊಂದು ಅಭಿಯಾನವನ್ನು ಹಿಂದೂ ಸಂಘಟನೆಗಳು ಕೈಗೊಂಡಿವೆ. ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದಾರೆ ಅಂತಾ ದೇಶಾದ್ಯಂತ ಪಿಎಫ್‍ಐ ಬ್ಯಾನ್ ಆಗಿದೆ. ಪಿಎಫ್‍ಐ ಬ್ಯಾನ್ ಆದ ಬೆನ್ನಲ್ಲೇ ಮದರಸಾವನ್ನು ಬ್ಯಾನ್ ಮಾಡಬೇಕು ಎಂದು ಹಿಂದೂ ಸಂಘಟನೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದೆ. ಇದನ್ನೂ ಓದಿ: ಗಾಂಧಿ ಕೊಂದ ಗೋಡ್ಸೆ ಉತ್ಸವ ಮಾಡುವವರಿಂದ ಗಾಂಧೀಜಿ ಬಗ್ಗೆ ತಿಳಿದುಕೊಳ್ಳಬೇಕಾ – ಬೊಮ್ಮಾಯಿಗೆ ಸಿದ್ದು ತಿರುಗೇಟು

    ಉಗ್ರರ ಲಿಸ್ಟ್‌ನಲ್ಲಿ ಇರುವಂತಹವರು ಮತ್ತು ಪಿಎಫ್‍ಐ ಸಂಘಟನೆಯಲ್ಲಿ ಇದ್ದಂತಹವರು ಎಲ್ಲರೂ ಮದರಸಾದಿಂದ ಹೋಗಿರುವಂತಹವರು. ಮದರಸಾಗಳಿಗೆ ಪಿಎಫ್‍ಐ ಸಂಪರ್ಕ ಇದೆ. ಟೆರರಿಸ್ಟ್ ಚುಟವಟಿಕೆಯಲ್ಲಿ ಇರುವವರು ಮದರಸಾದಿಂದ ಹೋದವರೇ. ಮದರಸಾಗಳನ್ನು ಬ್ಯಾನ್ ಮಾಡುವಂತಹ ತೀರ್ಮಾನವನ್ನು ಸರ್ಕಾರಗಳು ಕೂಡಲೇ ಕೈಗೊಳ್ಳಬೇಕು. ಇಸ್ಲಾಂ ರಾಷ್ಟ್ರ ಪಾಕಿಸ್ತಾನದಲ್ಲೇ ಮದರಸಾ ಬ್ಯಾನ್ ಮಾಡಿದ್ದಾರೆ. ಹೀಗಿರುವಾಗ ದೇಶದಲ್ಲಿ ಏಕೆ ಮದರಸಾ ಅಂತಾ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ (Pramod Muthalik) ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅಸ್ಸಾಂ ಮತ್ತು ಉತ್ತರ ಪ್ರದೇಶದಲ್ಲಿ ಮದರಸಾಗಳ ಮೇಲೆ ಹದ್ದಿನ ಕಣ್ಣು ಇಟ್ಟಿರೋದು ಮತ್ತು ಬುಲ್ಡೋಜರ್ ಪ್ರಯೋಗ ಯೋಗ್ಯವಾಗಿದೆ ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ನಕಲಿ ಗಾಂಧಿ: ಬೊಮ್ಮಾಯಿ

    ಉತ್ತರ ಪ್ರದೇಶ ಮಾದರಿಯಲ್ಲೇ ಮದರಸಾಗಳ ಮೇಲೆ ಸರ್ಕಾರ ನಿಗಾ ಇಡಲು ಮತ್ತು ಮದರಸಾಗಳ ಶಿಕ್ಷಣ ಹೇಗಿದೆ ಅಂತಾ ಪರಿಶೀಲನೆ ಮಾಡಿ ರಿಪೋರ್ಟ್ ಕೊಡಲು ಈ ಹಿಂದೆ ಶಿಕ್ಷಣ ಸಚಿವರು ಸೂಚಿಸಿದ್ದರು. ಈಗ ಬ್ಯಾನ್‍ಗೆ ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿವೆ.

    Live Tv
    [brid partner=56869869 player=32851 video=960834 autoplay=true]

  • ಪ್ರಚೋದನಕಾರಿ ಪಾಠ ಮಾಡುವ ಮದರಸಾಗಳನ್ನು ಬಂದ್ ಮಾಡಿ: ರೇಣುಕಾಚಾರ್ಯ

    ಪ್ರಚೋದನಕಾರಿ ಪಾಠ ಮಾಡುವ ಮದರಸಾಗಳನ್ನು ಬಂದ್ ಮಾಡಿ: ರೇಣುಕಾಚಾರ್ಯ

    ದಾವಣಗೆರೆ: ಹುಬ್ಬಳ್ಳಿ ದಾಳಿಗೆ ಪ್ರಚೋದನೆ ಮಾಡಿದ ಮೌಲ್ವಿಗಳನ್ನು ಬಂಧಿಸಿ ಗಲ್ಲಿಗೇರಿಸಬೇಕು. ಹುಬ್ಬಳ್ಳಿ ಸೇರಿದಂತೆ ಎಲ್ಲಾ ಕಡೆ ಮೌಲ್ವಿಗಳ ಶೋಧ ಮಾಡಬೇಕು. ಮದರಸಾಗಳಲ್ಲಿ ಪ್ರಚೋದನಕಾರಿ ಪಾಠ ಮಾಡ್ತಾರೆ, ಮದರಸಾಗಳನ್ನು ಬಂದ್ ಮಾಡಿ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಮೌಲ್ವಿಗಳ ವಿರುದ್ಧ ಕಿಡಿಕಾರಿದ್ದಾರೆ.


    ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ದೇವಸ್ಥಾನದಲ್ಲಿ ತೀರ್ಥ ಪ್ರಸಾದ, ಆರತಿ ಬೆಳಗುತ್ತಾರೆ ಹಾಗೇ ಮಸೀದಿಗಳಲ್ಲಿ ಮದ್ದು ಗುಂಡುಗಳನ್ನು ಸಂಗ್ರಹಿಸಿಡುತ್ತಾರೆ ಎಂದು ಈ ಹಿಂದೆ ಹೇಳಿದ್ದೆ. ಆಗ ನನ್ನ ವಿರುದ್ಧ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡಿದ್ರು, ಈಗ ಅದು ನಿಜವಾಗಿದೆ. ಮದರಸಾಗಳಲ್ಲಿ ಒಳ್ಳೆ ಶಿಕ್ಷಣ ಕೊಡುವುದಿಲ್ಲ. ಮಕ್ಕಳಿಗೆ ಅಲ್ಲಿ ದೇಶದ್ರೋಹದ ಪಾಠವನ್ನು ಹೇಳುತ್ತಾರೆ. ಈ ಮದರಸಾಗಳನ್ನು ಬ್ಯಾನ್ ಮಾಡಿದರೆ ಈ ರೀತಿ ಘಟನೆ ನಡೆಯುವುದಿಲ್ಲ. ನಮ್ಮ ಶಾಲೆಗಳಲ್ಲಿ ದೇಶ ಪ್ರೇಮ ಅಖಂಡತೆಯ ಬಗ್ಗೆ ಬೋಧನೆ ಮಾಡುತ್ತಾರೆ. ಮದರಸಾಗಳಲ್ಲಿ ಪ್ರಚೋದನೆ ಸಾರುವ ಕೆಲಸ ಮಾಡುತ್ತಿದ್ದಾರೆ. ಭಾರತ್ ಮಾತಾಕಿ ಜೈ ಎನ್ನುವವರನ್ನು ಬಿಟ್ಟು ಉಳಿದ ಎಲ್ಲರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯಲ್ಲಿ ಕಾಣಿಸಿಕೊಂಡಿದ್ದ ಮೌಲ್ವಿಯ ಅಸಲಿ ರೂಪ ಬಯಲು

    ಕಾಂಗ್ರೆಸ್ ಶಾಸಕನ ಮನೆ ಮೇಲೆ ಕೂಡ ಬೆಂಕಿ ಹಾಕಿದ್ರು ಆಗ ಅದೇ ಅಲ್ಪಸಂಖ್ಯಾತರ ಪರವಾಗಿ ಇದೇ ಕಾಂಗ್ರೆಸ್ ನಾಯಕರು ನಿಂತರು. ಟಿಪ್ಪು ಜಯಂತಿ ಮಾಡಿ ಈ ದೇಶದ ಕಾನೂನು ಸುವ್ಯವಸ್ಥೆ ಹಾಳು ಮಾಡಿದರು. ಕಾಂಗ್ರೆಸ್‍ನವರು ಭಾರತದ ಪರನೋ, ಅಲ್ಪಸಂಖ್ಯಾತರ ಪರನೋ ಎಂದು ಹೇಳಲಿ. ಎಲ್ಲಾ ಅಲ್ಪಸಂಖ್ಯಾತರು ಕೂಡ ಭಯೋತ್ಪಾದಕರು ಎಂದು ಹೇಳುತ್ತಿಲ್ಲ. ವೋಟ್‍ಗಾಗಿ ಅಲ್ಪಸಂಖ್ಯಾತರನ್ನು ಭಯೋತ್ಪಾದಕರನ್ನಾಗಿ ಮಾಡ್ತಾರೆ. ಸಿದ್ದರಾಮಯ್ಯ ಗಲಭೆ ಮಾಡಿದವರನ್ನು ಅಮಾಯಕರು ಎಂದು ಹೇಳ್ತಾರೆ, ನಿಮ್ಮ ಪ್ರಚೋಧನೆ ಹೇಳಿಕೆಗಳಿಂದ ನಿಮಗೆ ನಾಚಿಕೆ ಆಗೋದಿಲ್ವಾ. ಯಾರು ಈ ರೀತಿಯಾಗಿ ಮಾಡ್ತಾರೋ ಅಂತವರ ಮತದಾನದ ಹಕ್ಕು ಮೊಟಕುಗೊಳಿಸಬೇಕು. ಅಲ್ಲದೆ ಅವರಿಗೆ ಸರ್ಕಾರದಿಂದ ಬರುವ ಸೌಲಭ್ಯಗಳ ಜೊತೆ ಬಿಪಿಎಲ್ ಕಾರ್ಡ್ ಕೂಡ ಮೊಟಕುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನುಗ್ಗಿಕೇರಿ ಕಲ್ಲಂಗಡಿ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್

    ಮಸೀದಿಗಳಲ್ಲಿ ಪ್ರಚೋಧನೆ ಮಾಡುತ್ತಾರೆ. ಹಿಂದೂ ಸ್ವಾಮೀಜಿಗಳು ಮಾನವೀಯ ಮೌಲ್ಯಗಳನ್ನು ಸಾರುತ್ತಾರೆ. ಕಳೆದ ನಾಲ್ಕು ದಿನಗಳ ಹಿಂದೆ ನಡೆದ ಹುಬ್ಬಳ್ಳಿ ಘಟನೆಗೆ ಕಾಂಗ್ರೆಸ್ ನೇರ ಹೊಣೆ. ಕಾಂಗ್ರೆಸ್ ಮುಖಂಡರು ಬೇಷರತ್ ಕ್ಷಮೆಯಾಚಿಸಬೇಕು. ಒಬ್ಬ ವಿದ್ಯಾರ್ಥಿ ಸ್ಟೇಟಸ್ ಹಾಕಿದ್ದನ್ನು ದೊಡ್ಡದು ಮಾಡಿ ಈ ಹಿಂಸಾಚಾರ ಮಾಡಿಸಿದ್ದಾರೆ. ಇದು ಪೂರ್ವ ನಿಯೋಜಿತ ಘಟನೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಇಲ್ಲಿ ಮಸೀದಿ, ಮಂದಿರಗಳೆಲ್ಲವೂ ನಮ್ಮ ದೇಹದಂತೆ ಒಟ್ಟಿಗೆ ಇರುತ್ತವೆ: ಮಮತಾ

  • ಪರೀಕ್ಷೆಗೆ ಗೈರಾದ್ರೆ ಅಲ್ಲಿಗೇ ಮುಗೀತು, ಅವಕಾಶ ನೀಡಲ್ಲ: ಬಿ.ಸಿ.ನಾಗೇಶ್

    ಪರೀಕ್ಷೆಗೆ ಗೈರಾದ್ರೆ ಅಲ್ಲಿಗೇ ಮುಗೀತು, ಅವಕಾಶ ನೀಡಲ್ಲ: ಬಿ.ಸಿ.ನಾಗೇಶ್

    ಬೆಂಗಳೂರು: ಹಿಜಬ್‍ನಿಂದ ಪರೀಕ್ಷೆ ಬರೆಯದೇ ಹೋದ್ರೆ ಅವರಿಗೆ ಮತ್ತೆ ಅವಕಾಶ ಕೊಡುವುದಿಲ್ಲ. ನಾವು ಹೈಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್‍ಗೆ ಹೋಗುವವರಿಗೆ ಇದೆಲ್ಲವೂ ಗೊತ್ತಾಗುವುದಿಲ್ಲವೇ? ಪರೀಕ್ಷೆಗೆ ಗೈರಾದರೆ ಅಲ್ಲಿಗೆ ಮುಗೀತು. ಮತ್ತೆ ಯಾರಿಗೂ ವಿಶೇಷ ಅವಕಾಶ ಕೊಡುವುದಿಲ್ಲ. ಅವರು ಪೂರಕ ಪರೀಕ್ಷೆಯಲ್ಲೇ ಬರೆಯಬೇಕಾಗುತ್ತದೆ ಎಂದು ಹೇಳಿದ್ದಾರೆ.

    ಮದರಸ ಬಯಸಿದ್ರೆ ಔಪಚಾರಿಕ ಶಿಕ್ಷಣ: ಇದೇ ವೇಳೆ ಮದರಸಗಳನ್ನು ಶಿಕ್ಷಣ ಇಲಾಖೆ ವ್ಯಾಪ್ತಿಗೆ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮದರಸಗಳಲ್ಲಿ ವೃತ್ತಿಪರ ಶಿಕ್ಷಣ ಸಿಗುತ್ತಿಲ್ಲ. ಹಾಗೆಂದು ಮದರಸ ಶಿಕ್ಷಣ ಇಲಾಖೆಯಿಂದ ನಡೆಸಲಾಗುವುದಿಲ್ಲ. ಮದರಸಗಳೇನಾದರೂ ನಮ್ಮನ್ನು ಕೇಳಿದರೆ ನಾವು ಔಪಚಾರಿಕ ಶಿಕ್ಷಣ ಕೊಡಲು ಸಿದ್ದ. ಏಕೆಂದರೆ ಏಕರೂಪದ ಶಿಕ್ಷಣ ನೀಡುವ ಆಸೆ ನಮಗೂ ಇದೆ. ಸದ್ಯಕ್ಕೆ ಸರ್ಕಾರದ ಮಟ್ಟದಲ್ಲಿ ಇನ್ನು ಚರ್ಚೆ ಆಗಿಲ್ಲ. ಚರ್ಚೆ ಬಳಿಕ ಅಂತಮ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ

    ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಬಿ.ಸಿ.ನಾಗೇಶ್, ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಚಾಲನೆ ನೀಡಲಾಗಿದೆ. ಮತ್ತೆ ಟಿಇಟಿ ಮಾಡಲು ಸಾಧ್ಯವಿಲ್ಲ. ಈಗ 15 ಸಾವಿರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ನಿಗದಿಯಂತೆ ನೇಮಕಾತಿ ನಡೆಯುತ್ತದೆ. ಮುಂದಿನ ಬಾರಿಯಿಂದ ವರ್ಷಕ್ಕೆ ಎರಡು ಟಿಇಟಿ, ಒಂದು ಸಿಇಟಿ ಮಾಡುತ್ತೇವೆಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸ್ಕೂಲ್ ಬಳಿ ಬಂದು ಸಮಸ್ಯೆ ಕ್ಲೀಯರ್ ಮಾಡಿ- ಠಾಣೆ ಮೆಟ್ಟಿಲೇರಿದ ಪುಟಾಣಿ

  • ಮದರಸಗಳಿಗೆ ತೆರಳಿ ಸಿಎಎ ಬಗ್ಗೆ ಮನವರಿಕೆ ಮಾಡಿಕೊಟ್ಟ ಸಿಲಿಕಾನ್ ಸಿಟಿ ಪೊಲೀಸ್ರು

    ಮದರಸಗಳಿಗೆ ತೆರಳಿ ಸಿಎಎ ಬಗ್ಗೆ ಮನವರಿಕೆ ಮಾಡಿಕೊಟ್ಟ ಸಿಲಿಕಾನ್ ಸಿಟಿ ಪೊಲೀಸ್ರು

    ಬೆಂಗಳೂರು: ಬೆಂಗಳೂರು ಪೊಲೀಸರು ಮದರಸಗಳಿಗೆ ಹೋಗಿ ಪೌರತ್ವ ವಿಧೇಯಕ ಕಾಯ್ದೆಯ ಬಗ್ಗೆ ಮುಸ್ಲಿಂರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

    ಸಿಎಎ ಕಾಯ್ದೆ ವಿರೋಧಿಸಿ ಗುರುವಾರ ಸಾಕಷ್ಟು ಜನ, ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆ ನಡೆಸಿದ್ರು. ಇವತ್ತು ಈ ಪ್ರತಿಭಟನೆಯ ಕಾವು ಮತ್ತಷ್ಟು ಹೆಚ್ಚಾಗಬಹುದು ಅನ್ನೊ ನಿರೀಕ್ಷೆಗಳು ಸುಳ್ಳಾಗಿವೆ. ಯಾಕಂದ್ರೆ ಶುಭ ಶುಕ್ರವಾರದ ದಿನ ಪೊಲೀಸ್ರು ಚಾಣಾಕ್ಷ ಕೆಲಸ ಮಾಡಿದ್ದಾರೆ. ಇವತ್ತು ಶುಕ್ರವಾರವಾಗಿದ್ದರಿಂದ ಮದರಸಾಗಳಿಗೆ ಮುಸ್ಲಿಂ ಬಾಂಧವರು ಪ್ರಾರ್ಥನೆಗೆ ಬಂದಿದ್ದರು.

    ಇದನ್ನೇ ಪಾಸಿಟಿವ್ ಆಗಿ ತೆಗೆದುಕೊಂಡ ಸಿಲಿಕಾನ್ ಸಿಟಿಯ ಪೊಲೀಸರು ಬಹುತೇಕ ಕಡೆ ಮದರಸಗಳಿಗೆ ಹೋಗಿ, ಮುಸ್ಲಿಂ ಬಾಂಧವರ ಜೊತೆ ಮಾತುಕತೆ ನಡೆಸಿದ್ದಾರೆ. ಎಚ್ ಎಸ್ ಆರ್ ಲೇಔಟ್ ಇನ್ಸ್ ಪೆಕ್ಟರ್ ರಾಘವೇಂದ್ರ ನಾವೆಲ್ಲಾ ಹಿಂದೂ ಮುಸ್ಲಿಂ ಕ್ರೈಸ್ತ ಅನ್ನೊದಕ್ಕಿಂತ ಮಿಗಿಲಾಗಿ ಭಾರತೀಯರು. ವದಂತಿಗಳಿಗೆ ಕಿವಿಗೊಡಬೇಡಿ. ಸುಭದ್ರ ಭಾರತಕ್ಕಾಗಿ ಸಿಎಎ ಜಾರಿಗೆ ತರಲಾಗಿದೆ. ಇದ್ರಿಂದ ಮುಸ್ಲಿಂರಿಗೆ ಭಯವಿಲ್ಲ. ನಿಮಗೇನಾದ್ರು ಡೌಟ್ ಇದ್ದಾರೆ ನಮ್ಮ ಬಳಿ ಕೇಳಿ ಎಂದು ಮನವೊಲಿಸುವ ವಿಡಿಯೋ ವೈರಲ್ ಆಗಿದೆ.

  • ಅತ್ಯಾಚಾರವೆಸಗಿ ಐರನ್ ಬಾಕ್ಸ್‌ನಿಂದ ಸುಟ್ಟು ವಿಕೃತಿ ಮೆರೆದ ಮೌಲ್ವಿ

    ಅತ್ಯಾಚಾರವೆಸಗಿ ಐರನ್ ಬಾಕ್ಸ್‌ನಿಂದ ಸುಟ್ಟು ವಿಕೃತಿ ಮೆರೆದ ಮೌಲ್ವಿ

    ಬೆಂಗಳೂರು: ಯುವತಿಗೆ ಕೆಲಸಕ್ಕೆಂದು ಕರೆ ತಂದು ಗೃಹಬಂಧನದಲ್ಲಿಟ್ಟು ಮೌಲ್ವಿಯೊಬ್ಬ ಅತ್ಯಾಚಾರವೆಸಗಿ ರಾಕ್ಷಕನ ರೀತಿಯಲ್ಲಿ ನಡೆದುಕೊಂಡಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.

    ಫರ್ವೆಜ್ ಯುವತಿಗೆ ಅಮಾನಿಯವಾಗಿ ನಡೆಸಿಕೊಂಡಿರುವ ಮೌಲ್ವಿ. ಆರೋಪಿ ಮೌಲ್ವಿ ಕೋರಮಂಗಲದ 8ನೇ ಕ್ರಾಸ್‍ನಲ್ಲಿ ಮದರಸ ಹಾಗೂ ಟ್ಯುಟೋರಿಯಲ್ ನಡೆಸುತ್ತಿದ್ದನು. ಅಲ್ಲದೆ ಮದರಸದಲ್ಲಿ ಕೆಲಸ ಮಾಡಲು ಬಿಹಾರದಿಂದ ಯುವತಿಯನ್ನು ಕರೆದು ತಂದು ಇರಿಸಿಕೊಂಡಿದ್ದಾನೆ.

    ಕಳೆದ ನಾಲ್ಕು ವರ್ಷದಿಂದ ಮೌಲ್ವಿ ಫರ್ವೇಜ್ ನ ಮದರಸದಲ್ಲಿ ಯುವತಿ ಕೆಲಸ ಮಾಡಿಕೊಂಡಿದ್ದಳು. ಈ ಸಂದರ್ಭದಲ್ಲಿ ಮೌಲ್ವಿ ಯುವತಿಗೆ ಅತ್ಯಾಚಾರವೆಸಗಿ ಐರನ್ ಬಾಕ್ಸ್‌ನಿಂದ ಸುಟ್ಟು ವಿಕೃತಿ ಮೆರೆದಿದ್ದಾನೆ ಎಂದು ಸಂತ್ರಸ್ತ ಯುವತಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

    ಪೊಲೀಸರು ಮೌಲ್ವಿಯನ್ನು ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ. ಈ ಘಟನೆ ಸಂಬಂದ ಆರೋಪಿ ಫರ್ವೇಜ್ ವಿರುದ್ಧ ಐಪಿಸಿ ಸೆಕ್ಷನ್ 344 (ಅಕ್ರಮ ಬಂಧನ), 376 (ಅತ್ಯಾಚಾರ), 307 (ಕೊಲೆ ಯತ್ನ), 506, 507 (ಬೈಗುಳ), (ಜೀವ ಬೆದರಿಕೆ) ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಮದರಸಕ್ಕೆ ಸಾಗಿಸುತ್ತಿದ್ದ 50ಕ್ಕೂ ಹೆಚ್ಚು ಮಕ್ಕಳು ವಶಕ್ಕೆ ಪಡೆದು ವಿಚಾರಣೆ

    ಮದರಸಕ್ಕೆ ಸಾಗಿಸುತ್ತಿದ್ದ 50ಕ್ಕೂ ಹೆಚ್ಚು ಮಕ್ಕಳು ವಶಕ್ಕೆ ಪಡೆದು ವಿಚಾರಣೆ

    ಕೋಲಾರ: ಅನುಮಾನಸ್ಪದವಾಗಿ 50ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮಕ್ಕಳನ್ನು ಸಾಗಾಟ ಮಾಡುತ್ತಿದ್ದ ಗುಂಪೊಂದನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ರೈಲ್ವೇ ನಿಲ್ದಾಣದ ಬಳಿ ವಶಕ್ಕೆ ಪಡೆದ ಪೊಲೀಸರು ಮಕ್ಕಳ ಸಂಪೂರ್ಣ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಇನ್ನೂ ಮಕ್ಕಳೆಲ್ಲರೂ ಬಿಹಾರದವರಾಗಿದ್ದು, ಬಿಹಾರದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಬಳಿ ಇರುವ ಮದರಸಕ್ಕೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾರೆ.

    ಪುಟ್ಟ ಮಕ್ಕಳನ್ನು ಯಾವ ಉದ್ದೇಶಕ್ಕಾಗಿ ಕರೆದುಕೊಂಡು ಹೋಗಲಾಗುತ್ತಿದೆ, ಗುಂಪು ಗುಂಪಾಗಿ ಮಕ್ಕಳನ್ನು ಹೀಗೆ ಕರೆದುಕೊಂಡು ಹೋಗುತ್ತಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲದೆ ಕಳೆದ 20 ದಿನಗಳ ಹಿಂದೆಯಷ್ಟೇ ಹೀಗೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವ ಮೂಲಕ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

    ಸದ್ಯ ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

  • 12ರ ಬಾಲಕನಿಗೆ ಮದರಸ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ

    12ರ ಬಾಲಕನಿಗೆ ಮದರಸ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ

    ಮಂಗಳೂರು: 12ರ ಹರೆಯದ ಬಾಲಕನಿಗೆ ಮದರಸ ಶಿಕ್ಷಕ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ಮಸೀದಿಯಲ್ಲಿ ನಡೆದಿದೆ.

    ಮಸೀದಿ ಉಸ್ತಾದ್ ಅನ್ವರ್ ಮೌಲ್ವಿ ಲೈಂಗಿಕ ದೌರ್ಜನ್ಯವೆಸಗಿದ ಮೌಲ್ವಿ. ಅನ್ವರ್ ಮದರಸಕ್ಕೆ ಹೋಗಿದ್ದಾಗ ಮೌಲ್ವಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ ಈ ವಿಷಯವನ್ನು ಯಾರಿಗಾದರೂ ಹೇಳಿದಲ್ಲಿ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾನಂತೆ.

    ಮೌಲ್ವಿಯ ಬೆದರಿಕೆಗೆ ಹೆದರಿ ಬಾಲಕ ಮದರಸ ಮತ್ತು ನಮಾಜ್‍ಗೂ ಹೋಗದೆ ಮನೆಯಲ್ಲೇ ಉಳಿದಿದ್ದನು. ಇದನ್ನು ಕಂಡ ಬಾಲಕನ ತಾಯಿ ಏನಾಯಿತು ಎಂದು ಪ್ರಶ್ನಿಸಿದ್ದಾರೆ. ಆಗ ಬಾಲಕ ನಡೆದ ವಿಷಯವನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾನೆ.

    ಸದ್ಯ ಈ ವಿಚಾರ ತಿಳಿದ ಬಾಲಕನ ತಾಯಿ, ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಮಸೀದಿ ಉಸ್ತಾದ್ ಅನ್ವರ್ ಮೌಲ್ವಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ರಾಷ್ಟ್ರಗೀತೆಗೆ ಅಡ್ಡಿ- ಮದರಸದ ಮಾನ್ಯತೆ ರದ್ದುಗೊಳಿಸಿದ ಯೋಗಿ ಸರ್ಕಾರ!

    ರಾಷ್ಟ್ರಗೀತೆಗೆ ಅಡ್ಡಿ- ಮದರಸದ ಮಾನ್ಯತೆ ರದ್ದುಗೊಳಿಸಿದ ಯೋಗಿ ಸರ್ಕಾರ!

    ಲಕ್ನೋ: ಸ್ವಾತಂತ್ರ್ಯ ದಿನಾಚರಣೆಯ ವೇಳೆ ಮಕ್ಕಳು ರಾಷ್ಟ್ರಗೀತೆ ಹಾಡುತ್ತಿರುವಾಗ ಅಡ್ಡಿಪಡಿಸಿದ ಕ್ರಮಕ್ಕೆ ಮದರಸದ ಮಾನ್ಯತೆಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.

    ಆಗಸ್ಟ್ 15ರಂದು ಉತ್ತರಪ್ರದೇಶದ ಮಹಾರಾಜಗಂಜ್ ಜಿಲ್ಲೆಯ ಮದರಸದಲ್ಲಿ ಪ್ರಾಂಶುಪಾಲರು ಹಾಗೂ ಮುಸ್ಲಿಂ ಧರ್ಮಗುರು ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣದ ನಂತರ ಮಕ್ಕಳು ಹಾಡುತ್ತಿದ್ದ ರಾಷ್ಟ್ರಗೀತೆಯನ್ನು ತಡೆದು, ಇದು ಇಸ್ಲಾಂಗೆ ವಿರೋಧವೆಂದು ಅಡ್ಡಿಪಡಿಸಿದ್ದರು. ಈ ಸುದ್ದಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

    ಈ ಹಿನ್ನೆಲೆಯಲ್ಲಿ ಮದರಸದ ಕ್ರಮವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ ಕೂಡಲೇ ಮದರಸದ ಮಾನ್ಯತೆಯನ್ನು ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದನ್ನೂ ಓದಿ: ಮಕ್ಕಳಿಗೆ ರಾಷ್ಟ್ರಗೀತೆ ಹಾಡದಂತೆ ತಡೆದಿದ್ದ ಧರ್ಮಗುರು ಬಂಧನ

    ಈ ಕುರಿತು ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿಯಾದ ಪ್ರಭತ್ ಕುಮಾರ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ವೇಳೆ ಮಕ್ಕಳಿಂದ ರಾಷ್ಟ್ರಗೀತೆಯನ್ನು ತಡೆದಿದ್ದು, ತನಿಖೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಮದರಸದ ಮಾನ್ಯತೆಯನ್ನು ರದ್ದುಗೊಳಿಸಿದ್ದೇವೆ. ಅಲ್ಲದೇ ಸರ್ಕಾರದಿಂದ ಮದರಸಕ್ಕೆ ನೀಡುತ್ತಿದ್ದ ಎಲ್ಲಾ ಹಣಕಾಸು ಹಾಗೂ ಇತರೆ ನೆರವುಗಳನ್ನು ತಕ್ಷಣದಿಂದ ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ರಾಷ್ಟ್ರಗೀತೆ ಹಾಡುವ ವೇಳೆ ಮದರಸಾದ ಪ್ರಾಂಶುಪಾಲ ಫೈಯಾಸ್ ರೆಹ್ಮಾನ್ ಹಾಗೂ ಧರ್ಮಗುರು ಜುನೈದ್ ಅನ್ಸಾರಿ ಅಡ್ಡಿಪಡಿಸಿದ್ದು ತನಿಖೆಯಲ್ಲಿ ದೃಢಪಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv