Tag: ಮದಗಜ

  • ಕನ್ನಡದ ಇಬ್ಬರು ಸೂಪರ್ ಸ್ಟಾರ್ ಚಿತ್ರಕ್ಕೆ `ಮದಗಜ’ ಮಹೇಶ್ ಆ್ಯಕ್ಷನ್ ಕಟ್ :ನಂತರ ಬಾಲಿವುಡ್ ಸಿನಿಮಾ

    ಕನ್ನಡದ ಇಬ್ಬರು ಸೂಪರ್ ಸ್ಟಾರ್ ಚಿತ್ರಕ್ಕೆ `ಮದಗಜ’ ಮಹೇಶ್ ಆ್ಯಕ್ಷನ್ ಕಟ್ :ನಂತರ ಬಾಲಿವುಡ್ ಸಿನಿಮಾ

    ಣ್ಣದ ಲೋಕನೇ ಹಾಗೆ, ಇಂದು ಕೆಳಗಿದ್ದವರು ನಾಳೆ ಏನಾಗುತ್ತಾರೆ ಅನ್ನುವುದನ್ನು ಊಹೆ ಮಾಡುವುದು ಅಸಾಧ್ಯ. ಕಲಾವಿದರಿಗೆ, ನಿರ್ದೇಶಕರಿಗೆ, ಕಲೆಗೆ ಭಾಷೆಯ ಬೇಲಿಯಿಲ್ಲ. ಜೀರೋ ಟು ಸ್ಟಾರ್ ಆಗೋದು ಅಷ್ಟು ಸುಲಭದ ಮಾತಲ್ಲ. ಪ್ರತಿಭೆ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಅನ್ನುವುದಕ್ಕೆ ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಮಹೇಶ್ ಕುಮಾರ್ ಅವರು ತಾಜಾ ಉದಾಹರಣೆ.

    `ಅಯೋಗ್ಯ’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಿತರಾದ ನಿರ್ದೇಶಕ ಮಹೇಶ್ ಕುಮಾರ್, ಮೊದಲ ಚಿತ್ರನೇ ಸೂಪರ್ ಡೂಪರ್ ಹಿಟ್, ಬಾಕ್ಸ್ ಆಫೀಸ್ ಲೂಟಿ ಮಾಡೋದರ ಜೊತೆಗೆ ಮೊದಲ ಚಿತ್ರದ ಹಾಡು, ಕಂಟೆAಟ್‌ನಿAದ ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಮೋಡಿ ಮಾಡಿತ್ತು.ನಂತರ ಶ್ರೀಮುರುಳಿ ನಟನೆಯ `ಮದಗಜ’ ಚಿತ್ರಕ್ಕೆ ನಿರ್ದೇಶನ ಮಾಡುವುದರ ಮೂಲಕ ಗಾಂಧಿನಗರದಲ್ಲಿ ತಾನೆಂತಹ ನಿರ್ದೇಶಕ ಅನ್ನುವುದನ್ನು ಪ್ರೂವ್ ಮಾಡಿದ್ರು. ಈಗ ಕನ್ನಡ ಇಂಡಸ್ಟಿçಯಲ್ಲಿ ಮಾತ್ರವಲ್ಲ ಪಕ್ಕದ ಇಂಡಸ್ಟಿçಯಲ್ಲೂ ಇವರದ್ದೇ ಸುದ್ದಿ. ಫಿಲಂ ನಗರಿಯಲ್ಲಿ ಸೆನ್ಸೆಷನಲ್ ಡೈರೆಕ್ಟರ್ ಆಗಿ ಮಿಂಚುತ್ತಿದ್ದಾರೆ.`ಅಯೋಗ್ಯ’ ಮತ್ತು `ಮದಗಜ’ ಸಿನಿಮಾ ನೋಡಿ ಖುಷಿಪಟ್ಟಿದ್ದ ತಮ್ಮ ಅಭಿಮಾನಿಗಳಿಗೆ ನಿರ್ದೇಶಕ ಮಹೇಶ್ ಕುಮಾರ್ ಡಬಲ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಒಂದ್ ಕಡೆ ಕನ್ನಡದ ಮಲ್ಟಿ ಸ್ಟಾರ್‌ಗೆ ಆಕ್ಷನ್ ಕಟ್ ಹೇಳುವುದಕ್ಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದರೆ, ಇನ್ನೊಂದ್ ಕಡೆ ಬಾಲಿವುಡ್ ನಿರ್ಮಾಪಕರಿಂದ ಮಹೇಶ್‌ಗೆ ಬುಲಾವ್ ಬಂದಿದೆ.

    `ಮದಗಜ’ ಚಿತ್ರವಾದ ಮೇಲೆ ಡೈರೆಕ್ಟರ್ ಮಹೇಶ್ ಅವರ ನಸೀಬ್‌ಯೇ ಚೇಂಚ್ ಆಗಿದೆ. ಪ್ರತಿಷ್ಠಿತ ಪ್ರೊಡಕ್ಷನ್ ಅಡಿಯಲ್ಲಿ ಮೂಡಿ ಬರಲಿರೋ ಮಲ್ಟಿಸ್ಟಾರ್‌ಗಳಿಗೆ ನಿರ್ದೇಶಕ ಮಹೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಹೇಶ್ ಮಾಡಿರೋ ಡಿಫರೆಂಟ್ ಕಥೆಗೆ ಕನ್ನಡದ ಇಬ್ಬರು ಸೂಪರ್ ಸ್ಟಾರ್‌ಗಳು ಜೀವ ತುಂಬುತ್ತಿದ್ದಾರೆ. ಇದೇ ಮೇ ೩೦ಕ್ಕೆ ಅಧಿಕೃತವಾಗಿ ಪೋಸ್ಟರ್ ರಿವೀಲ್ ಮಾಡುವುದರ ಮೂಲಕ ಆ ಸೂಪರ್ ಸ್ಟಾರ್‌ಗಳು ಯಾರು ಅನ್ನುವುದಕ್ಕೆ ಉತ್ತರ ಸಿಗಲಿದೆ.ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ಸಿದ್ದತೆ ನಡೆಯುತ್ತಿದೆ. ಇದನ್ನು ಓದಿ: ಪಾವನಾ ನಾಯಕಿಯಾಗಿ ನಟಿಸಿದ ‘ಇನ್’ ಚಿತ್ರದ ಟೀಸರ್ ರಿಲೀಸ್ ಮಾಡಿದ ಕಿಚ್ಚ

    ಮಲ್ಟಿ ಸ್ಟಾರ್‌ಗಳಿಗೆ ಆ್ಯಕ್ಷನ್ ಕಟ್ ಹೇಳ್ತಿರೋ ಬೆನ್ನಲ್ಲೆ ಮತ್ತೊಂದು ಬಿಗ್ ನ್ಯೂಸ್ ಕೊಟ್ಟಿದ್ದಾರೆ.ನಿರ್ದೇಶಕ ಮಹೇಶ್ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಇವರು ನಿರ್ದೇಶಿಸಿರೋ ಕನ್ನಡ ಚಿತ್ರಗಳನ್ನ ನೋಡಿಯೇ ಜೀಯೋ ಸಂಸ್ಥೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ..ಈಗಾಗಲೇ ಒಂದೊಳ್ಳೆ ಕಥೆಯನ್ನ ಸಿದ್ದಪಡಿಸಿಸೋ ಮಹೇಶ್, ಬಾಲಿವುಡ್ ಬಿಗ್‌ಸ್ಟಾರ್‌ಗೆ ಆ್ಯಕ್ಷನ್ ಕಟ್ ಹೇಳೋದಕ್ಕೆ ಸಜ್ಜಾಗಿದ್ದಾರೆ. ಬಿಗ್ ಬಜೆಟ್, ಬಿಗ್ ಸ್ಟಾರ್‌ಗಳಿರೋ ಈ ಚಿತ್ರ ಆಗಸ್ಟ್ನಿಂದ ಶೂಟಿಂಗ್ ಶುರುವಾಗಲಿದೆ..ಕನ್ನಡ ನಿರ್ದೇಶಕರೊಬ್ಬರಿಗೆ ಬಿಟೌನ್‌ನಲ್ಲಿ ಡಿಮ್ಯಾಂಡ್ ಸೃಷ್ಠಿಯಾಗಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

     

  • ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ರೆ ನಮಗೆ ಖುಷಿ: ಶ್ರೀಮುರಳಿ

    ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ರೆ ನಮಗೆ ಖುಷಿ: ಶ್ರೀಮುರಳಿ

    ಹಾಸನ: ಮದಗಜ ಚಿತ್ರವನ್ನು ಅಭಿಮಾನಿಗಳು ಸ್ವೀಕರಿಸಿರುವುದು ಸಂತೋಷ ತಂದಿದೆ. ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ರೆ ನಮಗೆ ಖುಷಿ ಎಂದು  ಸ್ಯಾಂಡಲ್‌ವುಡ್ ನಟ ಶ್ರೀಮುರಳಿ ಅಭಿಪ್ರಾಯಪಟ್ಟಿದ್ದಾರೆ.

    ಹಾಸನದಲ್ಲಿ ಮದಗಜ ಚಿತ್ರ ರಿಲೀಸ್ ಆಗಿರುವ ಚಿತ್ರಮಂದಿರಗಳಿಗೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿತ್ರಕ್ಕೆ ರಾಜ್ಯಾದ್ಯಂತ ಒಳ್ಳೇ ರೆಸ್ಪಾನ್ಸ್ ಸಿಕ್ಕಿದೆ. ಇಂದು ಅಭಿಮಾನಿಗಳ ದರ್ಶನಕ್ಕೆ ಹಾಸನಕ್ಕೆ ಬಂದಿದ್ದೇನೆ. ಜನರ ಪ್ರತಿಕ್ರಿಯೆ ಕಂಡು ತುಂಬಾ ಖುಷಿ ಆಗಿದೆ ಎಂದರು.

    OTTಯಲ್ಲಿ ಸಿನೆಮಾ ರಿಲೀಸ್ ವಿಚಾರವಾಗಿ ಪ್ರತಿಕ್ರಿಯಿಸಿ, OTT ಒಂದು ಡಿಜಿಟಲ್ ಫ್ಲಾಟ್‍ಫಾರ್ಮ್, OTTಯಲ್ಲಿ ಸಿನೆಮಾಗಳು ತಡವಾಗಿ ಬರಲು ತಯಾರಿ ಮಾಡ್ಕೋಬೇಕು. ಜನ ಥಿಯೇಟರ್‌ಗೆ ಬಂದು ಸಿನೆಮಾ ನೋಡಿದ್ರೆ ನಮಗೆ ಖುಷಿ. OTTಯಲ್ಲಿ ನಾವ್ಯಾರು ಸಿನೆಮಾವನ್ನು ಬೇಗ ರಿಲೀಸ್ ಮಾಡುತ್ತಿಲ್ಲ. ಹಿರಿಯರು, ತಿಳಿದವರು ಬುದ್ಧಿವಂತರು ಈ ಬಗ್ಗೆ ಏನಾದರೂ ಒಂದು ಮಾಡಬೇಕು. ಅವರು ಏನೇ ಹೇಳಿದ್ರು ನಾವು ಅವರ ಜೊತೆ ನಿಲ್ಲುತ್ತೇವೆ. ರಿಲೀಸ್ ಮಾಡಬೇಡಿ, ಚೇಂಜ್ ಮಾಡಿ ಎಂದು ಹೇಳುವಷ್ಟು ದೊಡ್ಡವರಲ್ಲ ನಾವು. ಅಭಿಮಾನಿಗಳು ಥಿಯೇಟರ್‌ಗೆ ಬಂದು ಸಿನೆಮಾ ನೋಡುವ ವಿಚಾರವಾಗಿ ನಾವೆಲ್ಲ ಒಟ್ಟಿಗೆ ಇರುತ್ತೇವೆ ಎಂದರು.

    ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಆಗಿ ರಿಲೀಸ್ ಆಗುವ ವಿಚಾರದ ಬಗ್ಗೆ ಮಾತನಾಡಿ, ಅದರ ಬಗ್ಗೆ ಏನು ಹೇಳಬೇಕು ತಿಳಿಯುತ್ತಿಲ್ಲ. ತುಂಬ ವರ್ಷದಿಂದ ಡಬ್ಬಿಂಗ್ ನಮ್ಮ ರಾಜ್ಯದಲ್ಲಿ ಇರಲಿಲ್ಲ. ಇತ್ತೀಚೆಗೆ ಡಬ್ಬಿಂಗ್ ಚಿತ್ರ ರಿಲೀಸ್ ಆಗುತ್ತಿದೆ. ಏನಾದರೂ ಅಭಿಮಾಮಾನಿಗಳು ಒಪ್ಪಬೇಕಲ್ವಾ, ಕರ್ನಾಟಕದಲ್ಲಿ ಅದು ಎಷ್ಟರ ಮಟ್ಟಿಗೆ ವರ್ಕ್ ಆಗುತ್ತಿದೆ ಗೊತ್ತಿಲ್ಲ. ಆದರೆ ಅದು ಡೇಂಜರ್. ನಾವು ಒಳ್ಳೊಳ್ಳೆ ಸಿನೆಮಾ ಮಾಡ್ಬೇಕು. ನಮ್ಮ ಅಡುಗೆ ಸರಿಯಾಗಿ ಇರಬೇಕು ಎಂದು ವ್ಯಂಗ್ಯವಾಡಿದರು.

  • ನನ್ನನ್ನು ಪ್ರೀತಿಸಿದ್ದಕ್ಕಾಗಿ ನನ್ನ ಎಲ್ಲಾ ಹುಡುಗರಿಗೆ ಥ್ಯಾಂಕ್ಸ್: ಆಶಿಕಾ ರಂಗನಾಥ್

    ನನ್ನನ್ನು ಪ್ರೀತಿಸಿದ್ದಕ್ಕಾಗಿ ನನ್ನ ಎಲ್ಲಾ ಹುಡುಗರಿಗೆ ಥ್ಯಾಂಕ್ಸ್: ಆಶಿಕಾ ರಂಗನಾಥ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಆಶಿಕಾ ರಂಗನಾಥ್ ನಟಿಸಿರುವ ಮದಗಜ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮದಗಜ ಸಿನಿಮಾಗಾಗಿ ತಾವು ಪಟ್ಟಿರುವ ಶ್ರಮದ ಕುರಿತಾಗಿ ಸೋಶಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಮದಗಜ ಸಿನಿಮಾದಲ್ಲಿ ಪಲ್ಲವಿಯಾಗಿ ನಟಿಸಿದ ನಿಜ ಜೀವನದ ಅನುಭವ, ಕೆಲವು ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಈ ಪಾತ್ರಕ್ಕೆ ಸಾಕಷ್ಟು ಪ್ರಯತ್ನಗಳು, ಕಠಿಣ ಪರಿಶ್ರಮ, ತಾಳ್ಮೆ ಮತ್ತು ಪ್ರೀತಿಯನ್ನು ಹಾಕಲಾಗಿದೆ. ಇಂದು ಕರ್ನಾಟಕದೆಲ್ಲೆಡೆಯಿಂದ ಎಲ್ಲರ ಪ್ರೀತಿಯನ್ನು ಸ್ವೀಕರಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ನನ್ನನ್ನು ಪ್ರೀತಿಸಿದ್ದಕ್ಕಾಗಿ ನನ್ನ ಎಲ್ಲಾ ಹುಡುಗರಿಗೆ ಧನ್ಯವಾದಗಳು. ಲವ್ ಯು ಡಾಲಿರ್ಂಗ್ಸ್ ಎಂದು ಬರೆದುಕೊಂಡು ಕೆಲವು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ಕೋವಿಡ್ ವ್ಯಾಕ್ಸಿನೇಷನ್

     

    View this post on Instagram

     

    A post shared by Ashika Ranganath (@ashika_rangnath)

    ಮದಗಜ ಸಿನಿಮಾದಲ್ಲಿ ಆಶಿಕಾ ಅವರನ್ನು ಹಳ್ಳಿ ಹುಡುಗಿಯ ಪಾತ್ರದಲ್ಲಿ ನೋಡಬಹುದಾಗಿದೆ. ಗದ್ದೆಯಲ್ಲಿ ಟ್ರ್ಯಾಕ್ಟರ್ ಓಡಿಸುವ ಸಮಯದಲ್ಲಿ ಅವರ ಬೆನ್ನಿಗೆ ಟ್ಯಾನ್ ಆಗಿದೆ. ಈ ಫೋಟೋವನ್ನು ಮತ್ತು ಸಿನಿಮಾದಲ್ಲಿ ಬರುವ ಕೆಲವು ಸೀನ್‍ಗಳ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ತಾವು ಈ ಸಿನಿಮಾಗಾಗಿ ಎಷ್ಟು ಕಷ್ಟ ಪಟ್ಟಿದ್ದಾರೆ ಎನ್ನುವುದನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಮದಗಜ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದನ್ನೂ ಓದಿ:  ಓಮಿಕ್ರಾನ್‌ನಿಂದ ಗುಣಮುಖರಾಗಿ ಡಿಸ್ಚಾರ್ಜ್‌ ಆದವರಿಗೆ ಹೊಸ ಗೈಡ್‌ಲೈನ್ಸ್‌

  • ಶೂಟಿಂಗ್ ವೇಳೆ ನಟ ಶ್ರೀಮುರುಳಿ ಕಾಲಿಗೆ ಭಾರೀ ಗಾಯ – ಬೆಡ್ ರೆಸ್ಟ್

    ಶೂಟಿಂಗ್ ವೇಳೆ ನಟ ಶ್ರೀಮುರುಳಿ ಕಾಲಿಗೆ ಭಾರೀ ಗಾಯ – ಬೆಡ್ ರೆಸ್ಟ್

    ಬೆಂಗಳೂರು: ಸ್ಯಾಂಡಲ್ ವುಡ್ ನಟ, ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಲಿಗೆ ಗಾಯವಾಗಿದೆ.

    ಮದಗಜ ಚಿತ್ರೀಕರಣದ ಸಾಹಸ ದೃಶ್ಯ ಶೂಟಿಂಗ್ ವೇಳೆ ಮೊಣಕಾಲಿಗೆ ಗಾಯಗಳಾಗಿದೆ. 15 ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದು, ಅವರ ಆರೋಗ್ಯ ಸುಧಾರಿಸುತ್ತಿದೆ.

    ಶ್ರೀಮುರುಳಿ ಹುಟ್ಟುಹಬ್ಬದಂದು ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿತ್ತು. ಆ ಬಳಿಕ ಟೀಸರ್ ಅಭಿಮಾನಿ ಬಳಗಕ್ಕೆ ಸಖತ್ ಕಿಕ್ ಕೊಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫಸ್ಟ್ ಲುಕ್ ಟೀಸರ್ ಧೂಳೆಬ್ಬಿಸಿದ್ದು, ಎರಡೇ ಗಂಟೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದುಕೊಂಡಿತ್ತು.

    ಪಕ್ಕಾ ಮಾಸ್ ಅಂಡ್ ಆಕ್ಷನ್ ಓರಿಯೆಂಟೆಡ್ ಮದಗಜ ಸಿನಿಮಾಕ್ಕೆ ಎಸ್. ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದು, ಉಮಾಪತಿ ಶ್ರೀನಿವಾಸ್ ಗೌಡ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರತಂಡ ವಾರಣಾಸಿ ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ಮುಗಿಸಿದೆ. ಚಿತ್ರದಲ್ಲಿ ರೋರಿಂಗ್ ಸ್ಟಾರ್ ಗೆ ಜೋಡಿಯಾಗಿ ಸ್ಯಾಂಡಲ್‍ವುಡ್ ಚೆಲುವೆ ಆಶಿಕಾ ರಂಗನಾಥ್ ನಟಿಸಿದ್ದು, ನವೀನ್ ಕುಮಾರ್ ಛಾಯಾಗ್ರಹಣ ‘ಮದಗಜ’ ಚಿತ್ರಕ್ಕಿದೆ.

  • ‘ಮದಗಜ’ ರೋರಿಂಗ್ ಫಸ್ಟ್ ಲುಕ್ ಟೀಸರ್ ಔಟ್

    ‘ಮದಗಜ’ ರೋರಿಂಗ್ ಫಸ್ಟ್ ಲುಕ್ ಟೀಸರ್ ಔಟ್

    – ಮುರಳಿ ಮಾಸ್ ಡೈಲಾಗ್ ಅಬ್ಬರ ಜೋರು

    ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಮದಗಜ’ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಸ್ಯಾಂಡಲ್‍ವುಡ್ ಮೋಸ್ಟ್ ಟ್ಯಾಲೆಂಡೆಡ್ ಡೈರೆಕ್ಟರ್ ಪ್ರಶಾಂತ್ ನೀಲ್ ‘ಮದಗಜ’ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

    ನಟ ಶ್ರೀಮುರುಳಿ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ಫಸ್ಟ್ ಲುಕ್ ಟೀಸರ್ ಅಬ್ಬರ ಜೋರಾಗಿದ್ದು, ಅಭಿಮಾನಿ ಬಳಗಕ್ಕೆ ಸಖತ್ ಕಿಕ್ ಕೊಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಫಸ್ಟ್ ಲುಕ್ ಟೀಸರ್ ಧೂಳೆಬ್ಬಿಸುತ್ತಿದ್ದು, ಎರಡೇ ಗಂಟೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ.

    ಟೀಸರ್‍ನಲ್ಲಿರುವ ಮಾಸ್ ಪಂಚಿಂಗ್ ಡೈಲಾಗ್ ಸಖತ್ ಕಿಕ್ ಕೊಡುತ್ತಿದ್ದು ರೋರಿಂಗ್ ಸ್ಟಾರ್ ಖಡಕ್ ಡೈಲಾಗ್ ಡೆಲಿವರಿಗೆ ಅಭಿಮಾನಿ ಬಳಗ ಫಿದಾ ಆಗಿದ್ದಾರೆ. ಶ್ರೀ ಮುರುಳಿ ಮಾಸ್ ಅವತಾರ ಕಮಾಲ್ ಮಾಡಿದ್ದು, ಡೈಲಾಗ್ ನಷ್ಟೇ ಕಿಕ್ ಕೊಡುತ್ತಿದೆ ಸಂಗೀತ ನಿರ್ದೇಶಕ ರವಿ ಬಸ್ರೂರು ಪವರ್ ಫುಲ್ ಹಿನ್ನೆಲ್ಲೆ ಸಂಗೀತ.

    ಪಕ್ಕಾ ಮಾಸ್ ಅಂಡ್ ಆಕ್ಷನ್ ಓರಿಯೆಂಟೆಡ್ ಮದಗಜ’ ಸಿನಿಮಾಕ್ಕೆ ಎಸ್. ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದು, ಉಮಾಪತಿ ಶ್ರೀನಿವಾಸ್ ಗೌಡ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಎರಡು ಹಂತದ ಶೂಟಿಂಗ್ ಕಂಪ್ಲೀಟ್ ಮಾಡಿರುವ ‘ಮದಗಜ’ ಚಿತ್ರತಂಡ ವಾರಣಾಸಿ ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ಮುಗಿಸಿದೆ. ಚಿತ್ರದಲ್ಲಿ ರೋರಿಂಗ್ ಸ್ಟಾರ್‍ಗೆ ಜೋಡಿಯಾಗಿ ಸ್ಯಾಂಡಲ್‍ವುಡ್ ಚೆಲುವೆ ಆಶಿಕಾ ರಂಗನಾಥ್ ನಟಿಸಿದ್ದು, ನವೀನ್ ಕುಮಾರ್ ಛಾಯಾಗ್ರಹಣ ‘ಮದಗಜ’ ಚಿತ್ರಕ್ಕಿದೆ.

  • ಅಮ್ಮನ ಹಳೆಯ ಫೋನ್ ನೋಡೋಕಾಗ್ದೆ ಗಿಫ್ಟ್ ನೀಡಿದ ಶ್ರೀಮುರುಳಿ

    ಅಮ್ಮನ ಹಳೆಯ ಫೋನ್ ನೋಡೋಕಾಗ್ದೆ ಗಿಫ್ಟ್ ನೀಡಿದ ಶ್ರೀಮುರುಳಿ

    ಬೆಂಗಳೂರು: ನಟ ಶ್ರೀ ಮುರಳಿ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು, ಸಿನಿಮಾ ಹಾಗೂ ವೈಯಕ್ತಿಕ ಜೀವನದ ಕುರಿತು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಮ್ಮನಿಗೆ ಗಿಫ್ಟ್ ನೀಡಿದ ವಿಚಾರವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.

    ಅಮ್ಮನಿಗೆ ಗಿಫ್ಟ್ ನೀಡಿರುವ ಕುರಿತು ಶ್ರೀ ಮುರುಳಿ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಸಣ್ಣ ಅಹಂ ಭಾವವಿತ್ತು. ಹೀಗಾಗಿ ಇದನ್ನು ಕ್ಲಿಯರ್ ಮಾಡುತ್ತಿದ್ದೇನೆ. ನಮ್ಮ ಅಮ್ಮ ಹೊಸ ಫೋನ್ ಕೇಳಿರಲಿಲ್ಲ. ಅವರು ದೊಡ್ಡ ಡಿಮ್ಯಾಂಡ್ ಇಟ್ಟಿದ್ದರಂತೆ. ಹೀಗಾಗಿ ಹಳೆ ಫೋನ್ ನೋಡಲು ಆಗದೆ ಅಮ್ಮನಿಗೆ ಫೋನ್ ಗಿಫ್ಟ್ ನೀಡಿದೆ. ಈಗ ಅವರ ಡಿಮ್ಯಾಂಡ್ ಕೇಳಿ ಆಶ್ಚರ್ಯವಾಯಿತು. ಸರಿ ಮಾ ಹೇಳಿದ್ದೀನಿ. ನಿಮ್ಮ ಅತ್ತೆಗೆ ಹೆಳ್ಬಿಡಮ್ಮ ಎಂದು ಅವರ ಪತ್ನಿ ವಿದ್ಯಾ ಶ್ರೀಮುರುಳಿಗೆ ಟ್ಯಾಗ್ ಮಾಡಿದ್ದಾರೆ. ಅಮ್ಮನಿಗೆ ಫೋನ್ ಕೊಡಿಸಿದ್ದಕ್ಕೆ ಅಭಿಮಾನಿಗಳು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ರೋರಿಂಗ್ ಸ್ಟಾರ್ ಶ್ರೀಮುರುಳಿ ಭರಾಟೆ ಸಿನಿಮಾ ಬಳಿಕ ಮದಗಜ ಚಿತ್ರದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. 2019ರ ಜನವರಿಯಲ್ಲೇ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಕುರಿತು ಅಧೀಕೃತವಾಗಿ ಘೋಷಣೆ ಮಾಡಿಲಾಗಿತ್ತು. ಬಳಿಕ ಸ್ವಲ್ಪ ದಿನಗಳ ಕಾಲ ಅಪ್‍ಡೇಟ್ ಸಿಕ್ಕಿರಲಿಲ್ಲ. ನಂತರ ಚಿತ್ರದ ನಾಯಕಿಯ ಅಯ್ಕೆಯ ಕುರಿತು ಮದಗಜ ಸದ್ದು ಮಾಡಿತ್ತು. ಆಶಿಕಾ ರಂಗನಾಥ್ ರೋರಿಂಗ್ ಸ್ಟಾರ್ ಶ್ರೀಮುರುಳಿ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬುದು ಇದೇ ವೇಳೆ ಬಹಿರಂಗವಾಯಿತು.

    ಹಿರೋಯಿನ್ ಆಯ್ಕೆಯಾಗುತ್ತಿದ್ದಂತೆ ಶೂಟಿಂಗ್‍ಗೆ ಸಿದ್ಧತೆ ಮಾಡಿಕೊಂಡಿದ್ದ ಮದಗಜ ಚಿತ್ರತಂಡ ಉತ್ತರ ಭಾರತದತ್ತ ತೆರಳಿತ್ತು. ಮೊದಲ ಹಂತದ ಚಿತ್ರೀಕರಣವನ್ನು ವಾರಣಾಸಿಯಲ್ಲಿ ಮಾಡಲಾಗಿತ್ತು. ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ಮರಳುತ್ತಿದ್ದಂತೆ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಚಿತ್ರೀಕರಣ ಅಲ್ಲಿಗೆ ನಿಂತಿದೆ. ಲಾಕ್‍ಡೌನ್ ವೇಳೆ ಶ್ರೀಮುರುಳಿ ಸಹ ಕುಟುಂಬದೊಂದಿಗೆ ಕಾಲ ಕಳೆದಿದ್ದಾರೆ.

    ಎರಡನೇ ಹಂತದ ಚಿತ್ರೀಕರಣವನ್ನು ಮೈಸೂರಿನಲ್ಲಿ ಮುಂದುವರಿಸಲು ನಿರ್ಧರಿಸಲಾಗಿತ್ತು. ಅರಮನೆ ನಗರಿಯಲ್ಲಿ ಇನ್ನೇನು ಚಿತ್ರಕರಣ ಆರಂಭಿಸುವಷ್ಟರಲ್ಲಿ ಲಾಕ್‍ಡೌನ್ ನಿಂದಾಗಿ ಸ್ಥಗಿತಗೊಂಡಿತು. ಬಳಿಕ ಇಡೀ ಸಿನಿಮಾ ರಂಗ ಸ್ತಬ್ಧವಾಗಿ ಎಲ್ಲರೂ ಮನೆಯಲ್ಲೇ ಕಾಲ ಕಳೆಯುವಂತಾಯಿತು. ಲಾಕ್‍ಡೌನ್ ಎಫೆಕ್ಟ್ ನಿಂದಾಗಿ ಮದಗಜ ಚಿತ್ರೀಕರಣ ಸಹ ಸ್ಥಗಿತಗೊಂಡಿತು. ಇದೀಗ ನಿಧಾನವಾಗಿ ಚಿತ್ರೀಕರಣ ಆರಂಭವಾಗಿದ್ದು, ಹಲವು ಸಿನಿಮಾಗಳ ಕಾರ್ಯ ಶುರುವಾಗಿದೆ. ಆದರೆ ಮದಗಜ ಚಿತ್ರದ ಶೂಟಿಂಗ್ ಆರಂಭಿಸುವ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ.

    ವಿಶೇಷ ಎಂಬಂತೆ ಚಿತ್ರದ ಸ್ಕ್ರಿಪ್ಟ್‍ನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಫೈನಲ್ ಮಾಡುತ್ತಿದ್ದರು. ಲಾಕ್‍ಡೌನ್ ಹಿನ್ನೆಲೆ ಕೆಜಿಎಫ್-2 ಸಿನಿಮಾ ಶೂಟಿಂಗ್ ಸಹ ಸ್ಥಗಿತಗೊಂಡಿತ್ತು. ಹೀಗಾಗಿ ಪ್ರಶಾಂತ್ ನೀಲ್ ಮದಗಜ ಸ್ಕ್ರಿಪ್ಟ್ ಫೈನಲ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಹೇಶ್ ಕುಮಾರ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಚಿತ್ರೀಕರಣವನ್ನಾಧರಿಸಿ ಕಥೆ ಹೆಣೆಯಲಾಗಿದೆ. ಈ ಸ್ಕ್ರಿಪ್ಟ್‍ನ್ನು ಪ್ರಶಾಂತ್ ನೀಲ್ ಅವರು ಫೈನಲ್ ಮಾಡಿದ್ದಾರೆ. ಹೆಚ್ಚು ಜನರನ್ನು ತಲುಪುವ ರೀತಿಯಲ್ಲಿ ಕಟ್ಟಿಕೊಡಲಿದ್ದಾರೆ ಎಂದು ನಿರ್ಮಾಪಕ ಉಮಾಪತಿ ಮಾಹಿತಿ ನೀಡಿದ್ದರು.

  • ಗಡಿ ಜಿಲ್ಲೆಯಲ್ಲಿ ಶ್ರೀಮುರಳಿಯ ಬೆನ್ನಟ್ಟಿದ ಎದುರಾಳಿಗಳು

    ಗಡಿ ಜಿಲ್ಲೆಯಲ್ಲಿ ಶ್ರೀಮುರಳಿಯ ಬೆನ್ನಟ್ಟಿದ ಎದುರಾಳಿಗಳು

    ಚಾಮರಾಜನಗರ: ನಟ ಶ್ರೀಮುರಳಿ ಅಭಿನಯದ ‘ಮದಗಜ’ ಸಿನಿಮಾದ ಚಿತ್ರೀಕರಣ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ.

    ಹಳ್ಳಿ ವಾತಾವರಣದ ಚಿತ್ರೀಕರಣಕ್ಕೆ ಪೂರಕವಾದ್ದರಿಂದ ಈ ಸ್ಥಳದಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ‘ಮದಗಜ’ ಚಿತ್ರದ ಶೇ.25ರಷ್ಟು ಶೂಟಿಂಗ್ ವಾರಣಾಸಿಯಲ್ಲಿ ಮುಗಿದಿದೆ. ಈಗ ಶ್ರೀಮುರಳಿ ಗ್ರಾಮದೊಳಗೆ ಬೈಕಿನಲ್ಲಿ ಸಂಚಾರ ಮಾಡುವ ಮತ್ತು ಎದುರಾಳಿಗಳು ನಟನನ್ನ ಹಿಂಬಾಲಿಸುವ ದೃಶ್ಯ ಹಂಗಳ ಗ್ರಾಮದಲ್ಲಿ ಚಿತ್ರೀಕರಣ ಮಾಡಲಾಯಿತು.

    ಈ ವೇಳೆ ಸಾಕಷ್ಟು ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ನಿಂತಿದ್ದು, ಎಲ್ಲರಿಗೂ ಶ್ರೀಮುರುಳಿ ವಿಶ್ ಮಾಡಿದರು. ‘ಮದಗಜ’ ಸಿನಿಮಾವನ್ನು ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಉಮಾಪತಿ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಈ ಸಿನಿಮಾದಲ್ಲಿ ಶ್ರೀಮುರಳಿಗೆ ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

    ಎರಡು ದಿನಗಳ ಹಿಂದೆಯಷ್ಟೆ ‘ಮದಗಜ’ ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿತ್ತು. ಈ ವೇಳೆ ಯಾರೊಬ್ಬರಿಗೂ ಸುಳಿವು ನೀಡದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಮದಗಜ’ ಶೂಟಿಂಗ್ ಸೆಟ್‍ಗೆ ಎಂಟ್ರಿ ಕೊಟ್ಟಿದ್ದರು. ಈ ಸಮಯ ಚಿತ್ರತಂಡದವರ ಜೊತೆ ದರ್ಶನ್ ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದರು.

    ದರ್ಶನ್ ಶೂಟಿಂಗ್ ಸೆಟ್‍ಗೆ ಭೇಟಿ ನೀಡಿದ್ದ ಬಗ್ಗೆ ನಟ ಶ್ರೀಮುರಳಿ ಸೋಶಿಯಲ್ ಮೀಡಿಯಾದಲ್ಲಿ ಹರ್ಷ ವ್ಯಕ್ತಪಡಿಸಿದ್ದರು. ‘ಸಖತ್ ಟೈಂ’ ಎಂದು ನಟ ಶ್ರೀಮುರಳಿ ಟ್ವೀಟ್ ಮಾಡಿದ್ದರು.

  • ನಿಜಕ್ಕೂ ಕನ್ನಡಕ್ಕೆ ಬರ್ತಾಳಾ ರೌಡಿ ಬೇಬಿ?

    ನಿಜಕ್ಕೂ ಕನ್ನಡಕ್ಕೆ ಬರ್ತಾಳಾ ರೌಡಿ ಬೇಬಿ?

    ಒಂದೆಡೆ ಪರಭಾಷಾ ನಟಿಯರಿಗೆ ಮಣೆ ಹಾಕೋದರ ವಿರುದ್ಧ ಕನ್ನಡಿಗರಿಂದ ಪ್ರತಿರೋಧ ವ್ಯಕ್ತವಾಗುತ್ತಾ ಬಂದಿದೆ. ಆದರೆ ಪರಭಾಷೆಗಳಲ್ಲಿ ಪ್ರಸಿದ್ಧಿ ಪಡೆದ ಕೆಲ ನಟಿಯರು ಕನ್ನಡ ಚಿತ್ರಗಳಲ್ಲಿ ನಟಿಸಬೇಕೆಂಬ ಇಂಗಿತವೂ ಕನ್ನಡದ ಪ್ರೇಕ್ಷಕರಲ್ಲಿಯೇ ಇರುತ್ತೆ. ಆಯಾ ಕಾಲ ಘಟ್ಟಕ್ಕೆ ಫೇಮಸ್ ಆದ ನಟಿಯರು ಇನ್ನೇನು ಕನ್ನಡಕ್ಕೆ ಬಂದೇ ಬಿಟ್ಟರು ಎಂಬಂತೆ ಸುದ್ದಿ ಹಬ್ಬಿಸೋದು ಮಾಮೂಲಿ. ಆದರೆ ಸಾಯಿಪಲ್ಲವಿಯ ಅಭಿಮಾನಿಗಳು ಮಾತ್ರ ಅವರು ಕನ್ನಡ ಚಿತ್ರವೊಂದರಲ್ಲಿ ನಟಿಸಲಿರೋದು ನಿಜ ಎಂದೇ ನಂಬಿ ಕೂತಿದ್ದಾರೆ.

    ಸಾಯಿಪಲ್ಲವಿ ಮಲೆಯಾಳದ ಪ್ರಸಿದ್ಧ ಚಿತ್ರ ಪ್ರೇಮಂ ಮೂಲಕ ಬೆಳಕಿಗೆ ಬಂದ ಪ್ರತಿಭಾನ್ವಿತ ನಟಿ. ಇದೊಂದು ಚಿತ್ರದ ನಂತರ ಈ ಹುಡುಗಿ ಇಡೀ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆ ಪಡೆದುಕೊಂಡ ರೀತಿ ಎಂಥವರೂ ಅಚ್ಚರಿಗೊಳ್ಳುವಂತಿದೆ. ಇಂಥಾ ಸಾಯಿಪಲ್ಲವಿಯನ್ನು ನಿರ್ದೇಶಕ ಮಹೇಶ್ ತಮ್ಮ ಮದಗಜ ಚಿತ್ರಕ್ಕೆ ನಾಯಕಿಯಾಗಿ ಕರೆತರುತ್ತಾರೆಂಬ ಮಾತು ಈಗೊಂದಷ್ಟು ದಿನಗಳಿಂದ ಕೇಳಿ ಬರುತ್ತಿದೆ.

    ಇದರೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ವಿಚಾರದಲ್ಲಿಯೂ ಸಾಯಿಪಲ್ಲವಿ ಹೆಸರು ಕೇಳಿ ಬರುತ್ತಿದೆ. ಆದರೆ ಇದುವರೆಗೂ ಕೂಡಾ ಚಿತ್ರತಂಡದ ಕಡೆಯಿಂದ ಯಾರೊಬ್ಬರೂ ಈ ಬಗ್ಗೆ ಸ್ಪಷ್ಟನೆ ಕೊಟ್ಟಿಲ್ಲ.

    ಆದರೆ ಸಾಯಿಪಲ್ಲವಿಯನ್ನು ಮನಸಾರೆ ಆರಾಧಿಸುವ ಒಂದಷ್ಟು ಕನ್ನಡದ ಅಭಿಮಾನಿಗಳು ಮಾತ್ರ ಆಕೆ ಬಂದೇ ಬರುತ್ತಾರೆಂಬ ನಂಬಿಕೆ ಹೊಂದಿದ್ದಾರೆ. ಇತ್ತೀಚೆಗಷ್ಟೇ ತೆರೆ ಕಂಡಿದ್ದ ತಮಿಳಿನ ಮಾರಿ ಚಿತ್ರದ ರೌಡಿ ಬೇಬಿ ಹಾಡಿನ ಮೂಲಕವೇ ಪಡ್ಡೆಗಳನ್ನು ಹುಚ್ಚೆಬ್ಬಿಸಿರೋ ಸಾಯಿಪಲ್ಲವಿ ಕನ್ನಡಕ್ಕೆ ನಿಜಕ್ಕೂ ಬರ್ತಾರಾ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿದೆಯಷ್ಟೇ.

  • ಭರಾಟೆಯೊಂದಿಗೇ ಮದಗಜ ಘೀಳಿಟ್ಟ ಸದ್ದು!

    ಭರಾಟೆಯೊಂದಿಗೇ ಮದಗಜ ಘೀಳಿಟ್ಟ ಸದ್ದು!

    ಶ್ರೀಮುರಳಿ ಇದೀಗ ಭರಾಟೆ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಭರ್ಜರಿ ಚೇತನ್ ನಿರ್ದೇಶನದ ಭರಾಟೆ ಚಿತ್ರದ ಬಹು ಭಾಗದ ಚಿತ್ರೀಕರಣ ರಾಜಸ್ಥಾನದಲ್ಲಿ ನಡೆದಿತ್ತು. ಇದೀಗ ಮಂಡ್ಯ ಸುತ್ತಮುತ್ತ ಇದರ ಚಿತ್ರೀಕರಣ ನಡೆಯುತ್ತಿದೆ. ಹೀಗೆ ಬಿಡುವಿರದೆ ಚಿತ್ರೀಕರಣ ನಡೆಯುತ್ತಿರೋ ಭರಾಟೆಯ ನಡುವೆಯೇ ಮದಗಜ ಘೀಳಿಟ್ಟ ಸದ್ದು ಕೇಳಿಸಿದೆ!

    ಶ್ರೀಮುರುಳಿ ಭರಾಟೆ ಚಿತ್ರದ ಚಿತ್ರೀಕರಣದ ನಡುವಲ್ಲಿಯೇ ಮತ್ತೊಂದು ಚಿತ್ರಕ್ಕೂ ತಯಾರಿ ಆರಂಭಿಸಿದ್ದಾರೆ. ಅದು ಮದಗಜ!

     

    ಯೋಗರಾಜ್ ಭಟ್ ಶಿಷ್ಯ ಮಹೇಶ್ ಅಯೋಗ್ಯ ಚಿತ್ರದ ಮೂಲಕ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮಹೇಶ್ ಶ್ರೀಮುರಳಿಯವರಿಗೆ ಚಿತ್ರವೊಂದನ್ನು ನಿರ್ದೇಶನ ಮಾಡಲಿರೋ ಬಗ್ಗೆ ಸುದ್ದಿಯಾಗಿತ್ತು. ನಂತರ ಅದಕ್ಕೆ ಮದಗಜ ಅಂತ ಟೈಟಲ್ ಫಿಕ್ಸಾಗಿದ್ದರೂ ಇದು ಮುಂದಿನ ವರ್ಷ ಶುರುವಾಗಲಿರೋ ಪ್ರಾಜೆಕ್ಟ್ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಮದಗಜ ಚಿತ್ರದ ಸ್ಕ್ರಿಪ್ಟ್ ಸೇರಿದಂತೆ ಎಲ್ಲ ಕೆಲಸ ಕಾರ್ಯಗಳೂ ಅಂತಿಮ ಹಂತ ತಲುಪಿವೆ.

    ಮದಗಜ ಚಿತ್ರಕ್ಕೂ ಮಂಜು ಮಾಸ್ತಿ ಅವರೇ ಸಂಭಾಷಣೆ ಬರೆಯಲಿದ್ದಾರಂತೆ. ಇನ್ನೇನು ಭರಾಟೆ ಮುಗಿಯೋ ಮುನ್ನವೇ ಈ ಕೆಲಸ ಪೂರ್ಣಗೊಳ್ಳುತ್ತದೆ. ಆ ಬಳಿಕ ಶ್ರೀ ಮುರಳಿ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv