Tag: ಮತ್ಸ್ಯಕನ್ಯೆ

  • ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್

    ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್

    ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ನಟನೆ ಮತ್ತು ಬೋಲ್ಡ್ ಹೇಳಿಕೆಗಳ ಮೂಲಕ ಬಿ’ಟೌನ್‍ನಲ್ಲಿ ಸದ್ದು ಮಾಡುತ್ತಿರುತ್ತಾರೆ. ಈ ನಟಿ ತಮ್ಮ ದೇಹಸೌಂದರ್ಯದ ಬಗ್ಗೆ ಹೇಳುವ ಎಷ್ಟೂ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‍ಗೆ ಗುರಿಯಾಗುತ್ತೆ. ಪ್ರಸ್ತುತ ಈ ನಟಿ ಮಾಲ್ಡೀವ್ಸ್‌ನಲ್ಲಿ ತನ್ನ ಸ್ನೇಹಿತರ ಜೊತೆ ಟೂರ್‌ಗೆ ಹೋಗಿದ್ದು, ಫುಲ್ ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಈ ನಟಿ ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಕಾಣಿಸುತ್ತಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಸೋನಾಕ್ಷಿ, ತಮ್ಮ ಅಪ್ಡೇಟ್‍ಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಮಾಲ್ಡೀವ್ಸ್‌ ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿರುವ ಈ ನಟಿ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಶೇರ್ ಮಾಡಿದ್ದು, ಈ ಫೋಟೋದಲ್ಲಿ ನಾನು ಮತ್ಸ್ಯಕನ್ಯೆಯಾಗಿ ಕಾಣುತ್ತಿದ್ದೇನೆ. ಮಾಲ್ಡೀವ್ಸ್‌ ನೊಂದಿಗಿನ ನನ್ನ ಪ್ರೇಮ ಸಂಬಂಧವು ಪ್ರತಿ ಪ್ರವಾಸದೊಂದಿಗೆ ಹೆಚ್ಚಾಗುತ್ತಿದೆ. ಆದರೆ ಈ ಬಾರಿ ಮಾಲ್ಡೀವ್ಸ್ ನನಗೆ ಇನ್ನಷ್ಟು ಅದ್ಭುತವಾಗಿದೆ. ಏಕೆಂದರೆ ಯಶ್ರಿಬ್ ಅಹಮದ್ ಈ ವೇಳೆ ನಮ್ಮ ಜೊತೆ ಇರುವುದರಿಂದ ನನ್ನ ಮಾಲ್ಡೀವ್ಸ್‌ ಟ್ರಿಪ್ ಅತ್ಯಂತ ಅದ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ ಒಂದನ್ನೇ ನೋಡಿಲ್ಲ ಎಂದ ಉರ್ಫಿ – ಯಶ್ ಫ್ಯಾನ್ಸ್ ಫುಲ್ ಗರಂ

     

    View this post on Instagram

     

    A post shared by Sonakshi Sinha (@aslisona)

    ಈ ಫೋಟೋದಲ್ಲಿ ಸೋನಾಕ್ಷಿ ಕ್ಯೂಟ್ ಅಂಡ್ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಇವರ ಫೋಟೋಗಳನ್ನು ಖ್ಯಾತ ಫೋಟೋಗ್ರಾಫರ್ ಮತ್ತು ವೀಡಿಯೋಗ್ರಾಫರ್ ಯಶ್ರಿಬ್ ಅಹಮದ್ ಕ್ಲಿಕ್ ಮಾಡಿದ್ದು, ಅವರ ವರ್ಕ್ ಫೋಟೋಗಳಲ್ಲಿ ನೋಡಬಹುದು. ಸೋನಾಕ್ಷಿ ಸಹ ಅವರ ವರ್ಕ್‍ಗೆ ಫಿದಾ ಆಗಿದ್ದಾರೆ.

    ಈ ವೇಳೆ ಇನ್‍ಸ್ಟಾ ಸ್ಟೋರಿಯಲ್ಲಿ ತಮ್ಮ ಜೊತೆ ಬಂದಿದ್ದ ಸ್ನೇಹಿತರನ್ನು ಪರಿಚಯ ಮಾಡಿಸಿದ ಈ ನಟಿ, ಮಾಲ್ಡೀವ್ಸ್‌ ನಲ್ಲಿ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ. ಈ ವೀಡಿಯೋಗಳಲ್ಲಿ ತಾವು ಉಳಿದುಕೊಂಡಿದ್ದ ರೂಂ ವ್ಯೂವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಾನು ನಿಮ್ಮವಳು, ಕೆಟ್ಟದ್ದಾಗಿ ಮಾತನಾಡಬೇಡಿ ಎಂದ ರಾಶಿ ಖನ್ನಾ

  • ಮಂಗಳೂರಲ್ಲಿ ಮತ್ಸ್ಯಕನ್ಯೆ ಪ್ರತ್ಯಕ್ಷ- ಪ್ರಿಯಾರ ಥೀಮ್ ಫ್ಯಾಂಟಸಿ ಮೇಕಪ್ ಕೈಚಳಕ

    ಮಂಗಳೂರಲ್ಲಿ ಮತ್ಸ್ಯಕನ್ಯೆ ಪ್ರತ್ಯಕ್ಷ- ಪ್ರಿಯಾರ ಥೀಮ್ ಫ್ಯಾಂಟಸಿ ಮೇಕಪ್ ಕೈಚಳಕ

    ಮಂಗಳೂರು: ಮುತ್ತಿನಂತೆ ಹೊಳೆಯುವ ಇವಳ ನೀಲಿಯ ಮೊಗ, ಸಮುದ್ರದ ಚಿಪ್ಪುಗಳಿಂದ ರಚಿಸಿದ ಕಿರೀಟ. ಮಾನಸ ಸರೋವರದಲ್ಲಿ ಈಜಾಡಬೇಕಿದ್ದ ಈಕೆ, ಒಂದೇ ಸಮನೆ ಕಳೆದ ವಾರದಿಂದ ಕರಾವಳಿ ಜನರ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದಾಳೆ.

    ಈಕೆ ನಿಜವಾದ ಮತ್ಸ್ಯ ಕನ್ಯೆ ಅಂದುಕೊಂಡಿರಾ, ಅಲ್ಲ, ಇದು ಮೇಕ್ ಓವರ್ ಮರ್ಮೈಡ್ ಪ್ರಿಯಾ ಪವನ್ ಬಾಳಿಗ ಅವರ ಮೇಕಪ್ ಕೈಚಳಕ. ಹೌದು, ಲಾಕ್‍ಡೌನ್ ಸಮಯದಲ್ಲಿ ಟೈಮ್ ಪಾಸ್‍ಗೆಂದು ಏನೇನೋ ಪ್ರಯೋಗ ಮಾಡುತ್ತಾರೆ. ಇನ್ನೂ ಹಲವರು ಕಾಲಹರಣ ಸಹ ಮಾಡುತ್ತಾರೆ. ಆದರೆ ಪ್ರಿಯಾ ಅವರು ಲಾಕ್‍ಡೌನ್ ಸಮಯವನ್ನು ಸೆಲ್ಪ್ ಮೇಕಪ್‍ನ ಥೀಮ್ ಫ್ಯಾಂಟಸಿ ಮೇಕಪ್ ಪ್ರಯೋಗದಲ್ಲಿ ಕಳೆದಿದ್ದಾರೆ.

    ಇದೀಗ ಪ್ರಿಯಾ ಅವರ ಸೆಲ್ಪ್ ಮೇಕಪ್‍ನ ಥೀಮ್ ಫ್ಯಾಂಟಸಿ ಮೇಕಪ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮತ್ಸ್ಯ ಕನ್ಯೆಯ ಕಲ್ಪನೆಯನ್ನೂ ಮೀರಿಸುವ ರೀತಿಯಲ್ಲಿ ಪ್ರಿಯಾ ಅವರು ಪೇಕಪ್ ಮೂಲಕ ತೋರಿಸಿದ್ದಾರೆ. ಇದನ್ನು ಕಂಡ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

    ತಮ್ಮ ಮೇಕ್ ಓವರ್ ಪರಿಶ್ರಮದ ಬಗ್ಗೆ ಸ್ವತಃ ಪ್ರಿಯಾ ಅವರು ಅನುಭವ ಹಂಚಿಕೊಂಡಿದ್ದಾರೆ. ಭಾರತೀಯರ ಮುಖದ ಚರ್ಮದ ವಿನ್ಯಾಸವು ತುಂಬಾ ಸವಾಲಿನದ್ದಾಗಿದ್ದು, ಈ ಮೇಕ್ ಓವರ್‍ನಲ್ಲಿ ಹಸಿರು, ನೀಲಿ, ನೇರಳೆ, ಗುಲಾಬಿ ಬಣ್ಣಗಳ ಸಂಯೋಜನೆಯು ತುಂಬಾ ಆಕರ್ಷಕ ಹಾಗೂ ಅದರೊಂದಿಗೆ ಸರಿಸಮಾನವಾದ ಗಾತ್ರ, ಆಕಾರ, ಬಣ್ಣ ಸಂಯೋಜಿತ ಚುಕ್ಕಿಗಳನ್ನು ಬಿಡಿಸುವುದು ದೊಡ್ಡ ಸವಾಲು ಎಂದಿದ್ದಾರೆ.

    ಈ ರೀತಿಯ ಮೇಕ್ ಓವರ್ ಗೆ ಒಪ್ಪುವಂತಹ ಬಟ್ಟೆ, ಕಿರೀಟ, ಆಭರಣಗಳಿಗಾಗಿ ಹಗಲಿರುಳು ದುಡಿದಿದ್ದು, ಈ ಮೇಕ್ ಓವರ್‍ಗೆ ಬಳಸಿದ ಕಿರೀಟವನ್ನು ಪತಿ ಹಾಗೂ ನಾನು ಸೇರಿ ಮಾಡಿದ್ದೇವೆ. ಈ ಕಿರೀಟವನ್ನು ತಯಾರಿಸಲು ತೆಗೆದುಕೊಂಡ ದಿನಗಳು ಹಲವು. ಕಿರೀಟಕ್ಕೆ ಬಳಸಿದ ಮುತ್ತು, ವೈವಿಧ್ಯ ರೀತಿಯ ಸಮುದ್ರ ಚಿಪ್ಪುಗಳನ್ನು ಸ್ವತಃ ನನ್ನ ಪತಿ ಪವನ್ ಬಾಳಿಗ ಅವರು ಸಸಿಹಿತ್ಲು ಮುಂಡಾ, ಕಾಪು, ಮುಲ್ಕಿ, ಪಡುಬಿದ್ರಿ ಸಮುದ್ರ ಕಿನಾರೆಗಳಿಂದ ಸಂಗ್ರಹಿಸಿ ಒಟ್ಟು 2 ಚೀಲದಷ್ಟು ತಂದಿದ್ದರು. ಈ ಕಿರೀಟದ ತೂಕ 528 ಗ್ರಾಂ.ಗಳು ಅಂದರೆ ಅರ್ಧ ಕೆಜಿಯಷ್ಟು ಎಂದು ವಿವರಿಸಿದರು.

    ಪ್ರಿಯಾ ಅವರ ಈ ಸಾಧನೆ ಹಾಗೂ ಪರಿಶ್ರಮದ ಹಿಂದಿರೋ ಬಲವಾದ ಶಕ್ತಿ ಪತಿ ಉದ್ಯಮಿ ಪವನ್ ಬಾಳಿಗ ಹಾಗೂ ಕುಟುಂಬ ಸದಸ್ಯರು. ಇದರ ಜೊತೆ ಕೈ ಜೋಡಿಸಿದ್ದು ಇವರ ತಾಯಿ ಜ್ಯೋತಿ ಭಟ್. ಪ್ರಿಯಾರ ಅವಳಿ ಮಕ್ಕಳನ್ನ ಸಂಭಾಳಿಸುತ್ತಾ ಪ್ರಿಯಾರಿಗೆ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರಸ್ತುತ ಮಂಗಳೂರಿನ ಬಹುಬೇಡಿಕೆಯುಳ್ಳ ಮೇಕಪ್ ಆರ್ಟಿಸ್ಟ್ ಲಿಸ್ಟ್‍ನಲ್ಲಿ ಪ್ರಿಯಾ ಇದ್ದಾರೆ. ಡಿಫರೆಂಟ್ ಆಗಿರೋ ಮೇಕಪ್ ವೀಡಿಯೋಗಳನ್ನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

    3 ವರ್ಷಗಳ ಹಿಂದೆ ಚೇತನಾ ಬ್ಯೂಟಿ ಲಾಂಜ್‍ನಲ್ಲಿ ಮೇಕಪ್ ಕೋರ್ಸ್ ಕಲಿಯುತ್ತಿರುವಾಗ ಸಂಸ್ಥೆಯ ಘಟಿಕೋತ್ಸವದಲ್ಲಿ ಏನಾದರೂ ಹೊಸತನವನ್ನು ಪ್ರಯತ್ನಿಸಬೇಕು ಎಂಬ ಕನಸನ್ನು ಇಟ್ಟುಕೊಂಡು ಫ್ಯಾಂಟಸಿ ಮೇಕಪ್ ಮಾಡಲು ಮುಂದಾದರು. ಫ್ಯಾಂಟಸಿ ಮೇಕಪ್ ಎಂಬ ವಿಭಾಗದಲ್ಲಿ ತನ್ವಿ ಶೆಟ್ಟಿ ಎಂಬ ರೂಪದರ್ಶಿಯ ಮೇಲೆ ಈ ಮತ್ಸ್ಯ ಕನ್ಯೆಯ ಮೇಕ್ ಓವರ್ ಮಾಡಿದ್ದರು. ಈ ರೀತಿಯ ಮೇಕಪ್ ಮಾಡಲು ನನ್ನನ್ನು ಪ್ರೋತ್ಸಾಹಿಸಿದ್ದು, ನನ್ನ ಗುರುಗಳಾದ ಚೇತನಾ ಮೇಡಂ ಎಂದು ಪ್ರಿಯಾ ಪವನ್ ಬಾಳಿಗ ಹೇಳಿದ್ದಾರೆ.

  • ಗದಗದಲ್ಲಿ ಮತ್ಸ್ಯ ರೂಪದ ಮಗು ಜನನ!

    ಗದಗದಲ್ಲಿ ಮತ್ಸ್ಯ ರೂಪದ ಮಗು ಜನನ!

    ಗದಗ: ಮತ್ಸ್ಯ ರೂಪದ ಅಪರೂಪದ ಮಗುವೊಂದು ಗದಗ ಜಿಲ್ಲೆ ರೋಣ ತಾಲೂಕಿನ ಬೆಳವಣಿಕಿ ಆಸ್ಪತ್ರೆಯಲ್ಲಿ ಜನನವಾಗಿದೆ. ಆದರೆ ಈ ಮಗು ಜನಿಸಿದ ಮೂರು ಗಂಟೆಯೊಳಗೆ ಮೃತಪಟ್ಟಿದೆ. ಈ ಮಗುವನ್ನು ಕಂಡು ಆಸ್ಪತ್ರೆ ಸಿಬ್ಬಂದಿ ಹಾಗೂ ಪೋಷಕರು ಕಂಡು ದಿಗ್ಭ್ರಮೆಗೊಂಡಿದ್ದಾರೆ.

    ವೈಜ್ಞಾನಿಕವಾಗಿ ಈ ರೀತಿಯ ಮಗುವನ್ನು ಸಿರೆನೋಮೆಲಿಯಾ ಅಥವಾ ಮತ್ಸ್ಯಕನ್ಯೆ ಎಂದು ಕರೆಯುತ್ತಾರೆ. ಪ್ರಪಂಚದಲ್ಲಿ ತೀರಾ ಅಪರೂಪವಾಗಿ ಈ ರೀತಿಯ ಮಗು ಜನನವಾಗುತ್ತೆ ಎಂದು ಹೇಳಲಾಗುತ್ತದೆ.

    ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮತ್ಸ್ಯಕನ್ಯೆಯ ರೀತಿಯಲ್ಲೇ ಎರಡೂ ಕಾಲುಗಳು ಒಟ್ಟಿಗೆ ಜೋಡಿಕೊಂಡಿರುವ ಶಿಶುವಿಗೆ 23 ವರ್ಷದ ಮಹಿಳೆಯೊಬ್ಬರು ಕೋಲ್ಕತ್ತಾದಲ್ಲಿ ಜನ್ಮ ನೀಡಿದ್ದರು.

    ಮುಸ್ಕರಾ ಬಿಬಿ(23) ಎಂಬ ಮಹಿಳೆ ಮತ್ಸ್ಯಕನ್ಯೆ ಅಥವಾ ಸಿರೆನೋಮೆಲಿಯಾ ಮಗುವನ್ನು ಚಿತ್ತರಂಜನ್ ದೇವ ಸದನ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು. ಆದರೆ ಹುಟ್ಟಿದ ನಾಲ್ಕು ಗಂಟೆಯಲ್ಲಿ ಈ ಮಗು ಸಾವನ್ನಪ್ಪಿತ್ತು. ಮಗುವಿನ ಅರ್ಧ ದೇಹ ಸರಿಯಾಗಿ ಬೆಳೆಯದ ಕಾರಣ ಮಗುವಿನ ಲಿಂಗ ಯಾವುದು ಎಂದು ಕಂಡು ಹಿಡಿಯುವುದು ಕಷ್ಟವಾಯಿತು ಎಂದು ವೈದ್ಯರು ತಿಳಿಸಿದ್ದರು.

    ಭಾರತದಲ್ಲಿ 2ನೇ ಮತ್ಸ್ಯಕನ್ಯೆಯಾಗಿ ಜನಿಸಿದ ಮಗು ಇದಾಗಿತ್ತು. ಹುಟ್ಟು ಪ್ರತಿ 1 ಲಕ್ಷ ಮಗುವಿನಲ್ಲಿ ಒಂದು ಮಗುವಿನ ದೇಹ ಈ ರೀತಿಯಾಗಿ ಬೆಳವಣಿಗೆಯಾಗುತ್ತದೆ. 2016 ರಲ್ಲಿ ಉತ್ತರ ಪ್ರದೇಶದಲ್ಲಿ ಈ ರೀತಿ ಮಗುವಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋಲ್ಕತ್ತಾದಲ್ಲಿ ಮತ್ಸ್ಯಕನ್ಯೆ ರೀತಿಯ ಮಗು ಜನನ!

    ಕೋಲ್ಕತ್ತಾದಲ್ಲಿ ಮತ್ಸ್ಯಕನ್ಯೆ ರೀತಿಯ ಮಗು ಜನನ!

    ಕೋಲ್ಕತ್ತಾ: ಮತ್ಸ್ಯಕನ್ಯೆಯ ರೀತಿಯಲ್ಲೇ ಎರಡೂ ಕಾಲುಗಳು ಒಟ್ಟಿಗೆ ಜೋಡಿಕೊಂಡಿರುವ ಶಿಶುವಿಗೆ 23 ವರ್ಷದ ಮಹಿಳೆಯೊಬ್ಬರು ಕೋಲ್ಕತ್ತಾದಲ್ಲಿ ಜನ್ಮ ನೀಡಿದ್ದಾರೆ.

    ಮುಸ್ಕರಾ ಬಿಬಿ(23) ಎಂಬ ಮಹಿಳೆ ಮತ್ಸ್ಯಕನ್ಯೆ ಅಥವಾ ಸಿರೆನೋಮೆಲಿಯಾ ಮಗುವನ್ನು ಚಿತ್ತರಂಜನ್ ದೇವ ಸದನ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ಆದರೆ ಹುಟ್ಟಿದ ನಾಲ್ಕು ಗಂಟೆಯಲ್ಲಿ ಈ ಮಗು ಸಾವನ್ನಪ್ಪಿದೆ. ಮಗುವಿನ ಅರ್ಧ ದೇಹ ಸರಿಯಾಗಿ ಬೆಳೆಯದ ಕಾರಣ ಮಗುವಿನ ಲಿಂಗ ಯಾವುದು ಎಂದು ಕಂಡು ಹಿಡಿಯುವುದು ಕಷ್ಟವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

    ಆರ್ಥಿಕತೆಯ ಸಮಸ್ಯೆಯಿಂದಾಗಿ ಮುಸ್ಕರಾ ಅಲ್ಟ್ರಾ ಸೋನೊಗ್ರಾಫಿ ಮಾಡಿಸದ ಕಾರಣ ಮಗುವಿನ ಸ್ಥಿತಿ ಗೊತ್ತಾಗಲಿಲ್ಲ. ಮಗುವಿನ ಪೋಷಕರು ಇಬ್ಬರು ಕೂಲಿ ಕಾರ್ಮಿಕರು ಹಾಗೂ ಮುಸ್ಕಾರಾ ಗರ್ಭಿಣಿ ಆದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆಯದ ಕಾರಣ ಈ ರೀತಿಯ ಮಗು ಹುಟ್ಟಿದೆ ಎಂದು ಮಕ್ಕಳ ತಜ್ಞ ಡಾ. ಸುದೀಪ್ ಸಹಾ ಹೇಳಿದ್ದಾರೆ.

    ಭಾರತದಲ್ಲಿ 2ನೇ ಮತ್ಸ್ಯಕನ್ಯೆಯಾಗಿ ಜನಿಸಿದ ಮಗು ಇದಾಗಿದೆ. ಹುಟ್ಟು ಪ್ರತಿ 1 ಲಕ್ಷ ಮಗುವಿನಲ್ಲಿ ಒಂದು ಮಗುವಿನ ದೇಹ ಈ ರೀತಿಯಾಗಿ ಬೆಳವಣಿಗೆಯಾಗುತ್ತದೆ. 2016 ರಲ್ಲಿ ಉತ್ತರ ಪ್ರದೇಶದಲ್ಲಿ ಈ ರೀತಿ ಮಗುವಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದರು.

  • ಮತ್ಸ್ಯ ಕನ್ಯೆ ವೇಷ ಧರಿಸಿ ನಟಿ ಸೋನು ಗೌಡ ಬೆಂಗ್ಳೂರಲ್ಲಿ ವಿಶಿಷ್ಟ ಪ್ರತಿಭಟನೆ

    ಮತ್ಸ್ಯ ಕನ್ಯೆ ವೇಷ ಧರಿಸಿ ನಟಿ ಸೋನು ಗೌಡ ಬೆಂಗ್ಳೂರಲ್ಲಿ ವಿಶಿಷ್ಟ ಪ್ರತಿಭಟನೆ

    ಬೆಂಗಳೂರು: ನಗರದಲ್ಲಿನ ರಸ್ತೆ ಗುಂಡಿಗಳ ವಿರುದ್ಧ ಮತ್ಸ್ಯ ಕನ್ಯೆ ವೇಷ ಧರಿಸಿ ಪ್ರತಿಭಟನೆ ನಡೆಸಲಾಯಿತು. ನಟಿ ಸೋನು ಗೌಡ ಮತ್ಸ್ಯ ಕನ್ಯೆಯ ವೇಷ ಧರಿಸಿ ಈ ವಿಚಿತ್ರ ಪ್ರತಿಭಟನೆಗೆ ಸಾಕ್ಷಿಯಾದ್ರು.

    ಕಲಾವಿದ ಬಾದಲ್ ನಂಜುಂಡಸ್ವಾಮಿ ಮತ್ತು ತಂಡದಿಂದ ಈ ವಿಶಿಷ್ಟ ರೀತಿಯ ಪ್ರತಿಭಟನೆ ನಡೆಯಿತು. ಗುಂಡಿಗಳಲ್ಲಿ ನಿಂತ ನೀರಿನಲ್ಲಿ ಸ್ವಿಮ್ಮಿಂಗ್ ಪೂಲ್ ರೀತಿ ಮಾಡಿ ಪ್ರತಿಭಟನೆ ಮಾಡುವ ಮೂಲಕ ಸಂಬಂಧಪಟ್ಟವರಿಗೆ ಎಚ್ಚರಿಕೆ ನಿಡಲಾಯಿತು.

    ಈ ಬಗ್ಗೆ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಗರದ ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ಕೆಲದಿನಗಳಿಂದ ಸಾವು-ನೋವುಗಳು ಸಂಭವಿಸುತ್ತಿವೆ. ಹೀಗಾಗಿ ಈ ಎಲ್ಲಾ ವಿಚಾರಗಳು ಹಾಗೂ ರಸ್ತೆಗುಂಡಿಗಳನ್ನು ನೋಡಿದಾಗ ಸಮಸ್ಯೆಯನ್ನು ಸರ್ಕರಕ್ಕೆ ಮುಟ್ಟಿಸುವ ಸಲುವಾಗಿ ವಿಚಿತ್ರವಾಗಿ ಪ್ರತಿಭಟನೆ ಮಾಡಬೇಕೆಂದು ತೀರ್ಮಾನಿಸಿದೆ ಅಂದ್ರು.

    ಹಳ್ಳ, ನೀರು ಈ ವಿಚಾರವನ್ನು ತಲೆಯಲ್ಲಿಟ್ಟುಕೊಂಡು ಈ ಪ್ರತಿಭಟನೆ ಮಾಡಲು ಉಪಾಯ ಮಾಡಿದೆ. ಹೀಗಾಗಿ ಸೋನು ಅವರ ಬಳಿ ಈ ಬಗ್ಗೆ ಮಾತನಾಡಿ ಅವರನ್ನು ಮತ್ಸ್ಯ ಕನ್ಯೆ ವೇಷ ಧರಿಸುವಂತೆ ಕೇಳಿಕೊಂಡೆ ಅಂತ ಅವರು ತಿಳಿಸಿದ್ರು.