Tag: ಮತಾಂತರ ತಡೆ ವಿಧೇಯಕ

  • ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅಂಗೀಕಾರ

    ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅಂಗೀಕಾರ

    ಬೆಳಗಾವಿ: ವಿಪಕ್ಷಗಳ ತೀವ್ರ ವಿರೋಧದ ನಡುವೆ ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅಂಗೀಕಾರಗೊಂಡಿದೆ.

    ಬಿಜೆಪಿ ಮತಾಂತರ ತಡೆ ವಿಧೇಯಕ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು. ಬಳಿಕ ಧ್ವನಿ ಮತದ ಮೂಲಕ ಬಿಲ್ ಅಂಗೀಕಾರ ಪಡಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧೇಯಕ ಪಾಸ್ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು. ಆದರೆ ಕಾಂಗ್ರೆಸ್ ಸದನದಲ್ಲಿ ಗದ್ದಲ ನಡೆಸಿತು. ಈ ನಡುವೆಯೇ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021 ಅಂಗೀಕಾರಗೊಂಡಿತು. ಇದನ್ನೂ ಓದಿ: ಮತಾಂತರ ತಡೆ ಮಸೂದೆಯಲ್ಲಿರುವ ಪ್ರಮುಖ ಅಂಶಗಳು ಏನು? 

    ಸದನದಲ್ಲಿ ಗದ್ದಲ, ಮಾತಿನ ಚಕಮಕಿ
    ಕಾಂಗ್ರೆಸ್‍ನವರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇದು ಸಮಾಜದ ಪರ ಇರುವ ಮಸೂದೆ ಎಂದ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. ದ್ವಿಮುಖ ನೀತಿ ಕಾಂಗ್ರೆಸ್‍ನದ್ದು, ಈ ಹಿಂದೆ 2014ರಿಂದ 2016ರ ಅವಧಿಯಲ್ಲಿ ಕಾಂಗ್ರೆಸ್ ಮತಾಂತರ ಬಿಲ್ ಮಂಡಿಸಲು ಮುಂದಾಗಿತ್ತು. ನಿಮ್ಮ ಕಾನೂನು ಸಚಿವರು ಪರಿಶೀಲನೆಗೆ ಒಪ್ಪಿ ಸಹಿ ಹಾಕಿದ್ದಾರೆ. ಆರ್‌ಎಸ್‌ಎಸ್‌ ಕಾನೂನು ಪರ ಇದೆ, ಇದು ಓಪನ್ ಸೀಕ್ರೆಟ್. ಆರ್‌ಎಸ್‌ಎಸ್‌ ನೀತಿಯನ್ನು ಏಕೆ ಒಪ್ಪಿ ನೀವು ಬಿಲ್ ಪರಿಶೀಲನೆ ಮಾಡಿದ್ರಿ ಎಂದು ಸಿದ್ದರಾಮಯ್ಯಗೆ ಬೊಮ್ಮಾಯಿ ತಿರುಗೇಟು ನೀಡಿದರು. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ