Tag: ಮತದಾರ

  • ಮದ್ಯಪ್ರಿಯರ ಕನಸನ್ನ ಭಗ್ನಗೊಳಿಸಿದ ಚುನಾವಣಾ ಆಯೋಗ!

    ಮದ್ಯಪ್ರಿಯರ ಕನಸನ್ನ ಭಗ್ನಗೊಳಿಸಿದ ಚುನಾವಣಾ ಆಯೋಗ!

    ಬೆಂಗಳೂರು: ಚುನಾವಣಾ ದಿನಾಂಕ ಘೋಷಣೆ ಆಗುತ್ತಿದಂತೆ ಮುಂದಿನ ಕೆಲವು ದಿನ ಪುಕ್ಕಟ್ಟೆಯಾಗಿ ಸಾರಾಯಿ ಸಿಗುತ್ತೆ ಅಂತಾ ಖುಷಿಯಲ್ಲಿದ್ದ ಮದ್ಯ ಪ್ರಿಯರ ಕನಸನ್ನು ಚುನಾವಣಾ ಆಯೋಗ ಭಗ್ನಗೊಳಿಸಿದೆ.

    ಚುನಾವಣೆ ಸಮಯದಲ್ಲಿ ಮತದಾರರನ್ನು ಸೆಳೆಯಲು ಕೆಲ ರಾಜಕಾರಣಿಗಳು ಮದ್ಯ ಹಂಚಲು ಮುಂದಾಗುತ್ತಾರೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಆದಾಗಿನಿಂದ ಪ್ರತಿನಿತ್ಯ ರಾಜ್ಯಾದ್ಯಂತ ಅಧಿಕಾರಿಗಳು ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಅಕ್ರಮ ಮದ್ಯ ಸಾಗಾಟ ನಿಯಂತ್ರಿಸಲು ಚುನಾವಣಾ ಅಧಿಕಾರಿಗಳು ಬೆಂಗಳೂರು ಸೇರಿದಂತೆ ಅಕ್ರಮ ಬಾರ್ ಗಳಿಗೆ ಬೀಗ ಹಾಕಿದ್ದಾರೆ.

    ಪರವಾನಿಗೆಯನ್ನು ನವೀಕರಣ ಮಾಡಿಕೊಳ್ಳದ ಬಾರ್‍ಗಳನ್ನು ಸಹ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಟೋಕನ್ ಗಳ ಮೂಲಕ ಮತದಾರರಿಗೆ ಮದ್ಯ ಹಂಚಲಾಗುತ್ತಿದೆ ಎಂಬ ಮಾತುಗಳು ಕೇಳಿಬರತೊಡಗಿದ್ದವು. ಈ ಹಿನ್ನೆಲೆಯಲ್ಲಿ ಲೈಸನ್ಸ್ ಪಡೆಯದೇ ತೆರೆದಿರುವ ಬಾರ್‍ಗಳನ್ನು ಗುರುತಿಸಿ, ಅವುಗಳಿಗೆ ಬೀಗ ಹಾಕಲಾಗಿದೆ.

    ಕರ್ನಾಟಕದಾದ್ಯಂತ ಒಟ್ಟು 508 ಅಕ್ರಮ ಬಾರ್ ಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 245 ಬೆಂಗಳೂರು ನಗರದಲ್ಲಿವೆ. ಮತದಾರರಿಗೆ ಮದ್ಯ ಹಂಚುವ ಮೂಲಕ ವೋಟ್ ಪಡೆಯಲು ಮುಂದಾಗಿದ್ದವರಿಗೆ ಚುನಾವಣಾ ಆಯೋಗ ಸರಿಯಾಗಿಯೇ ಬಿಸಿ ಮುಟ್ಟಿಸಿದೆ.

    ಬೆಂಗಳೂರು ನಗರದಲ್ಲಿ ಮುಚ್ಚಲ್ಪಟ್ಟ ಬಾರ್ ಗಳ ಪಟ್ಟಿ ಹೀಗಿದೆ:
    ಬೆಂಗಳೂರು ಪೂರ್ವ ವಿಭಾಗ- 123
    ಬೆಂಗಳೂರು ದಕ್ಷಿಣ ವಿಭಾಗ- 62
    ಬೆಂಗಳೂರು ಪೂರ್ವ ವಿಭಾಗ- 56
    ಬೆಂಗಳೂರು ಪಶ್ಚಿಮ ವಿಭಾಗ- 4

     

  • ನಿಮ್ಮ ಆಶ್ವಾಸನೆ ಭರವಸೆ ಕೇಳಿ ಕೇಳಿ ಸಾಕಾಗಿ ಹೋಗಿದೆ ಶಾಸಕ ಆನಂದ್ ಸಿಂಗ್‍ಗೆ ಮತದಾರನಿಂದ ತರಾಟೆ!

    ನಿಮ್ಮ ಆಶ್ವಾಸನೆ ಭರವಸೆ ಕೇಳಿ ಕೇಳಿ ಸಾಕಾಗಿ ಹೋಗಿದೆ ಶಾಸಕ ಆನಂದ್ ಸಿಂಗ್‍ಗೆ ಮತದಾರನಿಂದ ತರಾಟೆ!

    ಬಳ್ಳಾರಿ: ಕಮಲ ಬಿಟ್ಟು ಹಸ್ತಲಾಘವ ಮಾಡಿ ಮತ್ತೆ ಜನರ ಮುಂದೆ ಹೋಗಿರೋ ಶಾಸಕ ಆನಂದ್‍ಸಿಂಗ್ ಅವರಿಗೆ ಆರಂಭದಲ್ಲೇ ಶಾಕ್ ತಗುಲಿದೆ.

    ನೀವು ಹತ್ತು ವರ್ಷ ಶಾಸಕರಾಗಿದ್ದೀರಿ. ಜನರಿಗೆ ಎನು ಮಾಡಿದ್ದೀರಿ. ನಿಮ್ಮಗ್ಯಾಕೆ ವೋಟ್ ಹಾಕಬೇಕು. ನಿಮ್ಮ ಆಶ್ವಾಸನೆ ಭರವಸೆ ಕೇಳಿ ಕೇಳಿ ಸಾಕಾಗಿ ಹೋಗಿದೆ ಎಂದು ಮತದಾರನೊಬ್ಬ ಸಾರ್ವಜನಿಕವಾಗಿ ಆನಂದಸಿಂಗ್‍ಗೆ ತರಾಟೆಗೆ ತಗೆದುಕೊಂಡಿದ್ದಾರೆ.

    ಮಂಗಳವಾರ ರಾತ್ರಿ ವಿಜಯನಗರದ ಹೊಸ ಮಲ್ಲಪ್ಪಗುಡಿ ಗ್ರಾಮದಲ್ಲಿ ಭಾಷಣ ಮಾಡುತ್ತಿದ್ದ ಆನಂದಸಿಂಗ್‍ಗೆ ಮತದಾರ ಫುಲ್ ಕ್ಲಾಸ್ ತಗೊಂಡಿದ್ದಾರೆ. ಇದರಿಂದ ಮುಜಗರಕ್ಕೊಳಗಾದ ಆನಂದ್ ಸಿಂಗ್, ಆತನನ್ನ ಸಮಧಾನಪಡಿಸಲು ಹರಸಾಹಸ ಮಾಡಿದ್ದರು. ಇದನ್ನೂ ಓದಿ: 10 ವರ್ಷ ಆಯ್ತು, ಗ್ರಾಮದಲ್ಲಿ ಏನೂ ಆಗಿಲ್ಲ- ಪ್ರಚಾರಕ್ಕೆ ಬಂದ ಸಚಿವರನ್ನ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಕೊನೆಗೆ ನನ್ನ ಸ್ವಂತ ಜಾಗದಲ್ಲಿ ಮನೆ ಕಟ್ಟಿಸಿಕೊಡೋದಾಗಿ ಆಮಿಷ ಕೂಡ ಒಡ್ಡಿ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಇದನ್ನು ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮದವರಿಗೂ ಇದನ್ನು ರೆಕಾರ್ಡ್ ಮಾಡಬೇಡಿ ಬಂದ್ ಮಾಡಿ ಎಂದು ಎಚ್ಚರಿಕೆ ಕೂಡ ನೀಡಿದ್ದರು. ಇದನ್ನೂ ಓದಿ: ಪ್ರಚಾರ ಮಾಡಲು ಹೋದ ಬಿಜೆಪಿ ಶಾಸಕರ ಪುತ್ರಿಗೆ ಗ್ರಾಮಸ್ಥರಿಂದ ತರಾಟೆ!

  • ಸ್ವಕ್ಷೇತ್ರದಲ್ಲಿ ಕಾರ್ಯಕರ್ತರ ಬೈಕಿನಲ್ಲೇ ಸುತ್ತಾಡಿದ ಪರಮೇಶ್ವರ್

    ಸ್ವಕ್ಷೇತ್ರದಲ್ಲಿ ಕಾರ್ಯಕರ್ತರ ಬೈಕಿನಲ್ಲೇ ಸುತ್ತಾಡಿದ ಪರಮೇಶ್ವರ್

    ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಚುನಾವಣೆಗೆ 6 ತಿಂಗಳು ಇರುವಾಗಲೇ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಕಳೆದ ಬಾರಿ ಸೋಲಿನ ರುಚಿ ಕಂಡ ಕೊರಟಗೆರೆ ಕ್ಷೇತ್ರದಲ್ಲಿ ಕಾರ್ಯಕರ್ತರ ಬೈಕಲ್ಲಿ ಸುತ್ತಾಡುವ ಮೂಲಕ ತಮ್ಮನ್ನು ಬೆಂಬಲಿಸುಂತೆ ಕೇಳಿಕೊಂಡಿದ್ದಾರೆ.

    ತಮ್ಮ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಜನರೊಟ್ಟಿಗೆ ಬೆರೆಯುತಿಲ್ಲ ಎನ್ನುವ ದೂರು ಜೋರಾಗಿಯೇ ಕೇಳಿಬಂದಿತ್ತು. ಆದರೆ ಪರಮೇಶ್ವರ್ ಸಾಹೇಬರು ಮಾತ್ರ ಇದೆಲ್ಲಾ ಸುಳ್ಳು ಎನ್ನುವ ಹಾಗೆ ಕಾರ್ಯಕರ್ತರ ಬೈಕ್ ನಲ್ಲೇ ಕುಳಿತು ಸವಾರಿ ನಡೆಸಿ ಭಾನುವಾರ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    ತಾಲೂಕಿನ ದೊಡ್ಡಪಾಲನಹಳ್ಳಿ ಸೇರಿ ಐದಾರು ಹಳ್ಳಿಗಳಿಗೆ ಭೇಟಿ ನೀಡಿದ್ದ ಪರಂ, ಕಾರ್ಯಕರ್ತರ ಬೈಕ್ ಗಳಲ್ಲೇ ಸಂಚರಿಸಿ ಜನರೊಂದಿಗೆ ಕಾಲ ಕಳೆದಿದ್ದಾರೆ. ನಮ್ ಬೈಕ್ ನಲ್ಲಿ ಹತ್ತಿ ನಮ್ ಬೈಕ್ ನಲ್ಲಿ ಹತ್ತಿ ಎಂದು ಹತ್ತಾರು ಮಂದಿ ಪರಮೇಶ್ವರ್ ಗೆ ದುಂಬಾಲು ಬಿದ್ದಿದ್ದರು.

    ಯಾರಿಗೂ ನಿರಾಸೆ ಆಗಬಾರದು ಎಂದು ಪರಮೇಶ್ವರ್ ಅವರು ಎಲ್ಲರ ಬೈಕ್ ಏರಿ ಹಳ್ಳಿ ಹಳ್ಳಿಯಲ್ಲಿ ಜಾಲಿಯಾಗಿ ಸುತ್ತಾಡಿದ್ದಾರೆ. ಯಾವಾಗಲೂ ಸೆಕ್ಯೂರಿಟಿ, ಎಸ್ಕಾರ್ಟ್ ಎಂದು ಪರಮೇಶ್ವರ್ ಅವರ ಸುತ್ತಲೂ ಪೊಲೀಸರೇ ಇರುತ್ತಿದ್ದರು. ಆದರೆ ನಿನ್ನೆ ಮಾತ್ರ ಎಲ್ಲರನ್ನು ದೂರ ಕಳಿಸಿ ಜನರೊಂದಿಗೆನೇ ಪರಮೇಶ್ವರ್ ಅವರು ಸುಮಾರು ಹತ್ತು ಬೈಕ್‍ ನಲ್ಲೇ ಸುತ್ತಾಡಿ ಕ್ಷೇತ್ರದ ಜನರಿಗೆ ಹತ್ತಿರವಾಗಿದ್ದಾರೆ.

  • ಬಿಜೆಪಿಗೆ ಲೀಡ್ ಬಂದ ಮತದಾರ ಪಟ್ಟಿಯಲ್ಲಿ ಗೋಲ್ ಮಾಲ್: ರಾಮದಾಸ್ ದಾಖಲೆ ಬಿಡುಗಡೆ

    ಬಿಜೆಪಿಗೆ ಲೀಡ್ ಬಂದ ಮತದಾರ ಪಟ್ಟಿಯಲ್ಲಿ ಗೋಲ್ ಮಾಲ್: ರಾಮದಾಸ್ ದಾಖಲೆ ಬಿಡುಗಡೆ

    ಮೈಸೂರು: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮೈಸೂರಿನಲ್ಲಿ ಮತದಾರ ಪಟ್ಟಿಯಲ್ಲಿ ಅಧಿಕಾರಿಗಳು ಗೋಲ್ ಮಾಲ್ ಮಾಡಿದ್ದಾರೆಂದು ಮಾಜಿ ಸಚಿವ ಎಸ್‍ಎ ರಾಮದಾಸ್ ಆರೋಪಿಸಿದ್ದಾರೆ.

    ಮೈಸೂರಿನ ಕೆಆರ್ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಬಂದ ಬೂತ್‍ನಲ್ಲಿ 4,794 ಮತದಾರರ ಹೆಸರು ನಾಪತ್ತೆಯಾಗಿದೆ. ಮತದಾರರು ಬದುಕಿದ್ದರೂ, ಸತ್ತು ಹೋಗಿದ್ದಾರೆಂದು ಮತದಾರ ಪಟ್ಟಿಯಿಂದ ಹೆಸರು ತೆಗೆದು ಹಾಕಲಾಗಿದೆ ಎಂದು ಎಸ್‍ಎ ರಾಮದಾಸ್ ಅಧಿಕಾರಿಗಳ ಈ ಕೃತ್ಯದ ಬಗ್ಗೆ ದಾಖಲೆ ಬಿಡುಗಡೆ ಮಾಡಿದರು.

    ಮೂರೇ ದಿನದಲ್ಲಿ 30 ಅಧಿಕಾರಿಗಳಿಂದ ಈ ಕೆಲಸ ನಡೆದಿದ್ದು, ಎನ್‍ಆರ್ ಕ್ಷೇತ್ರದಲ್ಲಿ 5642 ಮತದಾರರ ಹೆಸರು ಹಾಗೂ ಚಾಮರಾಜ ಕ್ಷೇತ್ರದಲ್ಲಿ 3416 ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಮನೆಯಲ್ಲಿ ಇದ್ದವರನ್ನು ಊರು ಬಿಟ್ಟಿದ್ದಾರೆಂದು ಮಾಹಿತಿ ನೀಡಲಾಗಿದೆ. ಬರೋಬ್ಬರಿ 4 ಸಾವಿರ ಅರ್ಜಿಗಳು ಒಂದೇ ಮಾದರಿಯಲ್ಲಿ ಭರ್ತಿಯಾಗಿದ್ದು ಒಬ್ಬರ ಕೈಯಲ್ಲೇ ಅರ್ಜಿಗಳನ್ನ ತುಂಬಿಸಲಾಗಿದ್ದು, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ಶಾಸಕ ಸೋಮಶೇಖರ್ ನೇತೃತ್ವದಲ್ಲಿ ಈ ಹಗರಣ ನಡೆದಿದೆ ಎಂದು ಆರೋಪಿಸಿದರು.

    ನಿಜವಾಗಿ ಸತ್ತವರ ಹೆಸರನ್ನು ಅಧಿಕಾರಿಗಳು ಡಿಲೀಟ್ ಮಾಡಿಲ್ಲ. ಕೆಆರ್ ಕ್ಷೇತ್ರದ 12 ಬೂತ್ ಗಳಲ್ಲಿ 52 ಮಂದಿ ಸತ್ತಿದ್ದಾರೆ. ಆದರೆ ಮತದಾರರ ಪಟ್ಟಿಯಲ್ಲಿ ಇನ್ನೂ ಅವರ ಹೆಸರುಗಳಿವೆ.

    ಇವತ್ತು ಸುದ್ದಿಗೋಷ್ಠಿಯಲ್ಲಿ ಮತದಾರ ಪಟ್ಟಿಯಲ್ಲಿ ಸತ್ತಿದ್ದಾರೆ ಎಂದು ನಮೂದಿಸಿರುವ ವ್ಯಕ್ತಿಗಳು ಸಹ ತಮಗೆ ಆದ ಅನ್ಯಾಯದ ಬಗ್ಗೆ ಹೇಳಿಕೊಂಡರು.

  • ಮಾನ ಮರ್ಯಾದೆ ಇದ್ರೆ ಕ್ಷೇತ್ರ ಬಿಟ್ಟು ತೊಲಗು- ಶಾಸಕ ಸಿ.ಟಿ. ರವಿ ವಿರುದ್ಧ ತಿರುಗಿಬಿದ್ದ ರೈತರು

    ಮಾನ ಮರ್ಯಾದೆ ಇದ್ರೆ ಕ್ಷೇತ್ರ ಬಿಟ್ಟು ತೊಲಗು- ಶಾಸಕ ಸಿ.ಟಿ. ರವಿ ವಿರುದ್ಧ ತಿರುಗಿಬಿದ್ದ ರೈತರು

    ಚಿಕ್ಕಮಗಳೂರು: `ಮೂರು ಬಾರಿ ಶಾಸಕ, ಒಮ್ಮೆ ಮಂತ್ರಿಯಾಗಿದ್ದೀಯಾ. ಆದ್ರೂ ನಿನ್ನ ಕೊಡುಗೆ ಶೂನ್ಯ. ಚಿಕ್ಕ ಚಿಕ್ಕ ಯೋಜನೆಗಳನ್ನೂ ಮುಗಿಸಿಲ್ಲ. ಚುನಾವಣೆ ಸಂದರ್ಭ ಗ್ರಾಮವಾಸ್ತವ್ಯ, ಕಬ್ಬಡಿ, ಡ್ಯಾನ್ಸ್ ಮಾಡೋ ಗಿಮಿಕ್ ಮಾಡೋದ್ರಲ್ಲಿ ನೀನು ನಿಸ್ಸೀಮ. ನಿನ್ನ ಕೈಲಿ ಆಗದಿದ್ರೆ ಕ್ಷೇತ್ರ ಬಿಟ್ಟು ಹೋಗು’ ಅಂತ ಶಾಸಕ ಸಿಟಿ ರವಿಯವರನ್ನು ಚಿಕ್ಕಮಗಳೂರಿನ ಮತದಾರರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದಕ್ಕೆ ಕಾರಣ ಬೆಳವಾಡಿ, ಕಳಸಾಪುರ, ಲಕ್ಯಾ, ದೇವನೂರು ಭಾಗದ 60-70 ಹಳ್ಳಿಗಳಿಗೆ ನೀರು ಒದಗಿಸುವ ಉದ್ದೇಶದಿಂದ ಕರಗಡ ಯೋಜನೆ ಪ್ರಾರಂಭಿಸಲಾಗಿತ್ತು. ಆದ್ರೆ ಇದನ್ನ ಮುಗಿಸದ ಕಾರಣ ಶಾಸಕ ರವಿಯನ್ನ ಮುಂದಿನ ಎಲೆಕ್ಷನ್‍ನಲ್ಲಿ ಸೋಲಿಸಬೇಕು ಅಂತಾ ಮತದಾರರು ಪಣ ತೊಟ್ಟಿರುವುದಾಗಿ ಕರಗಡ ನೀರಾವರಿ ಹೋರಾಟ ಸಮಿತಿ ಸಂಚಾಲಕ ರವೀಶ್ ಕ್ಯಾತನಬೀಡು ಹೇಳಿದ್ದಾರೆ.

    ಇದನ್ನೂ ಓದಿ: ಶಾಸಕ ಸಿ.ಟಿ ರವಿಯಿಂದ ಕಬಡ್ಡಿ, ವಾಲಿಬಾಲ್ ಮೋಡಿ!

    `ಶಾಸಕ ಸಿ.ಟಿ. ರವಿಯನ್ನ ಸೋಲಿಸಿ’ ಎಂಬ ಸ್ಲೋಗನ್ ಅಡಿ ಊರೂರು ಪ್ರಚಾರ ಮಾಡೋಕೆ ರೈತರು, ಕರಗಡ ಹೋರಾಟ ಸಮಿತಿ ಸದಸ್ಯರು ನಿರ್ಧರಿಸಿದ್ದಾರೆ. ಈಗಾಗಲೇ ಐದಾರು ಗ್ರಾಮಗಳಲ್ಲಿ ಗ್ರಾಮವಾಸ್ತವ್ಯ ಮಾಡಿದ್ದ ಶಾಸಕ ಸಿ.ಟಿ. ರವಿ ಈ ಹಿಂದೆ ಕರಗಡ ಯೋಜನೆ ಶೀಘ್ರದಲ್ಲೇ ಮುಗಿಸ್ತೀವಿ ಅಂತಾ ಹೇಳಿ ಮಣ್ಣು ಅಗೆಯೋ ಕೆಲಸ ಮಾಡಿದ್ರು. ಆದ್ರೆ ಇದು ಬರೀ ಪೋಸ್ ಕೊಡಲಷ್ಟೇ ಅನ್ನೋದು ರೈತರ ಆರೋಪ.

    ಒಟ್ಟಿನಲ್ಲಿ ಕರಗಡ ನೀರಾವರಿ ಹೋರಾಟ ಸಮಿತಿ ಸಿಟಿ ರವಿ ವಿರುದ್ಧ ತಾಲೂಕಿನಾದ್ಯಂತ ಜನಜಾಗೃತಿ ಮೂಡಿಸಲು ಮುಂದಾಗಿದೆ.

    ಇದನ್ನೂ ಓದಿ: ವಿಡಿಯೋ: ಗ್ರಾಮಸ್ಥರೊಂದಿಗೆ ವೇದಿಕೆಯೇರಿ ಸಖತ್ ಸ್ಟೆಪ್ ಹಾಕಿದ ಶಾಸಕ ಸಿ.ಟಿ ರವಿ!