Tag: ಮತದಾರ

  • ನನಗೆ ಮತದಾರರೇ ಹೈಕಮಾಂಡ್, ಅವ್ರ ಬಳಿ ಚರ್ಚಿಸಿ ನಿರ್ಧಾರ ಕೈಗೊಳ್ತೀನಿ: ಬಿಸಿ ಪಾಟೀಲ್

    ನನಗೆ ಮತದಾರರೇ ಹೈಕಮಾಂಡ್, ಅವ್ರ ಬಳಿ ಚರ್ಚಿಸಿ ನಿರ್ಧಾರ ಕೈಗೊಳ್ತೀನಿ: ಬಿಸಿ ಪಾಟೀಲ್

    ಹಾವೇರಿ: ಮತದಾರರೇ ನನ್ನ ಹೈಕಮಾಂಡ್. ಅವರು ಯಾವ ರೀತಿ ಸೂಚಿಸುತ್ತಾರೆ ಆ ರೀತಿ ಕ್ರಮ ಕೈಗೊಳ್ಳುತ್ತೇನೆ ಎಂದು ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿಸಿ ಪಾಟೀಲ್ ಹೇಳಿದ್ದಾರೆ.

    ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಕಾರ್ಯಕರ್ತರ ಜೊತೆ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಮಂತ್ರಿ ಸ್ಥಾನಕ್ಕಾಗಿ ಯಾರ ಬಳಿಯೂ ಮಂಡಿಯೂರಿ ಕುಳಿತುಕೊಳ್ಳುವ ಸ್ವಭಾವ ನನ್ನದಲ್ಲ. ಸಚಿವ ಸ್ಥಾನ ಕೇಳುವ ಹಕ್ಕು ನನಗಿದೆ ಎಂದು ಖಡಕ್ ಆಗಿ ತಿಳಿಸಿದ್ದಾರೆ.

    ಬೇರೆ ಯಾವುದೇ ಪಕ್ಷ ಸೇರುವ ಯೋಚನೆಯೇ ಇಲ್ಲ, ಯಾವುದೇ ಪಕ್ಷಗಳು ನನ್ನನ್ನು ಸಂಪರ್ಕ ಮಾಡಿಲ್ಲ. ನನ್ನ ಈ ನಿರ್ಧಾರದಿಂದ ಕರೆ ಮಾಡಲು ಭಯ ಪಡುತ್ತಿದ್ದಾರೆ. ಮುಖಂಡರು ಭರವಸೆ ನೀಡಿದ್ದು, ಕಾದು ನೋಡೋಣ ಮುಂದಿನ ದಿನಗಳಲ್ಲಿ ಒಳ್ಳೆಯ ಟೈಂ ಬರುತ್ತದೆ ಎಂದು ಹೇಳಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಪರಮೇಶ್ವರ್ ರವರು ಸಂಪರ್ಕ ಮಾಡಿ ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡಿಕೊಂಡಿದ್ದಾರೆ. ನಾವು ಎಲ್ಲಾ ಜನಾಂಗ, ಪ್ರಾಂತ್ಯಗಳನ್ನು ಪರಿಗಣನೆಗೆ ತೆಗೆದುಕೊಂಡು ಸಚಿವ ಸ್ಥಾನ ಹಂಚಿಕೆ ಮಾಡಿದ್ದರಿಂದ ಸಚಿವ ಸ್ಥಾನ ಕೈ ತಪ್ಪಿದೆ. ಮುಂದಿನ ದಿನಗಳಲ್ಲಿ  ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

    ನಾನು ಪಕ್ಷದ ವಿರೋಧಿಯಲ್ಲ ಹಾಗೂ ಶಾಸಕ ಎಂ ಬಿ ಪಾಟೀಲ್‍ರ ತಂಡದಲ್ಲಿ ಗುರುತಿಸಿಕೊಂಡಿಲ್ಲ. ಪಕ್ಷದ ವಿರುದ್ಧ ಯಾವುದೇ ಗುಂಪುಗಾರಿಕೆ ನಡೆಸಿಲ್ಲ. ಸಚಿನ ಸ್ಥಾನದ ಆಕಾಂಕ್ಷಿಯಾದ ನನಗೆ ಕಾಂಗ್ರೆಸ್‍ನ ಶಾಸಕರು ಬೆಂಬಲ ನೀಡಿದ್ದರು. ಇದಕ್ಕೆ ಯಾರೂ ಕೂಡ ವಿರೋಧ ವ್ಯಕ್ತಪಡಿಸಿರಲಿಲ್ಲ. ಹೀಗಾಗಿ ಸಚಿನ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಸಚಿವ ಸಂಪುಟ ಪಟ್ಟಿಯಿಂದ ಕೈ ಬಿಟ್ಟಿದ್ದು ಬೇಸರವುಂಟಾಗಿದೆ ಎಂದು ನೋವು ತೋಡಿಕೊಂಡರು.

    ಉತ್ತರ ಕರ್ನಾಟಕದ ಜಿಲ್ಲೆಗಳಾದ ಹಾವೇರಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿನ ಯಾವೊಬ್ಬ ಶಾಸಕರಿಗೂ ಮಂತ್ರಿಸ್ಥಾನ ನೀಡಿಲ್ಲ. ಮುಂದಿನ ದಿನಗಳಲ್ಲಿ ಬರುವ ಲೋಕಸಭಾ ಚುನಾವಣೆಯನ್ನು ಪರಿಗಣಿಸಿ ಒಂದು ಸಚಿವ ಸ್ಥಾನವನ್ನಾದರೂ ನೀಡಬಹುದಿತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

    ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರು ಕ್ಷೇತ್ರಕ್ಕೆ ವಾಪಾಸ್ಸಾಗಿದ್ದರು. ಈ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

  • ಇಂದಿನ ರಾಜಕೀಯ ಪರಿಸ್ಥಿತಿಗೆ ಮತದಾರರೇ ಮೂಲ ಕಾರಣ – ಸಂತೋಷ್ ಹೆಗ್ಡೆ

    ಇಂದಿನ ರಾಜಕೀಯ ಪರಿಸ್ಥಿತಿಗೆ ಮತದಾರರೇ ಮೂಲ ಕಾರಣ – ಸಂತೋಷ್ ಹೆಗ್ಡೆ

    ಮೈಸೂರು: ರಾಜ್ಯಪಾಲರು ಕಾನೂನಾತ್ಮಕವಾಗಿನಡೆದುಕೊಂಡಿದ್ದಾರೆ. ಶಾಸಕರ ರೆಸಾರ್ಟ್ ರಾಜಕೀಯ ಮಾಡಿದರೆ ಮಾಡಲಿ. ರೆಸಾರ್ಟ್ ನವರಿಗೆ ಒಂದಷ್ಟು ದುಡ್ಡಾದರು ಆಗುತ್ತೆ ಅಂತ ನಿವೃತ್ತ ಲೋಕಯುಕ್ತ ಸಂತೋಷ್ ಹೆಗ್ಡೆ ಹೇಳಿದ್ದಾರೆ.

    ರಾಜ್ಯ ರಾಜಕಾರಣದ ಬೆಳವಣಿಗೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯೇ ಬಿಜೆಪಿಯವರು ಬಹುಮತ ಸಾಬೀತು ಮಾಡಬೇಕು ಎಂಬ ಸುಪ್ರಿಂ ಆದೇಶ ಸ್ವಾಗಾತಾರ್ಹವಾಗಿದೆ. ಕುದುರೆ ವ್ಯಾಪಾರವನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಅಂದ್ರು.

    ರಾಜ್ಯಪಾಲರು ಬಿಜೆಪಿಯನ್ನು ಮೊದಲು ಸರ್ಕಾರ ರಚನೆಗೆ ಆಹ್ವಾನ ಮಾಡಿದ್ದು ಸರಿ. ಇದರಲ್ಲಿ ಯಾವ ತಪ್ಪಿಲ್ಲ. ಆದರೆ ಬಹುಮತ ಸಾಬೀತಿಗೆ 15 ದಿನ ಕಾಲಾವಕಾಶ ನೀಡಿದ್ದು ತಪ್ಪು. ಇದನ್ನು ಸುಪ್ರಿಂ ಕೋರ್ಟ್ ಸರಿಪಡಿಸಿದೆ. ರಾಜ್ಯಪಾಲರ ನಡೆಯನ್ನು ರಾಜಕೀಯವಾಗಿ ಟೀಕೆ ಮಾಡುವುದು ಸುಲಭ. ರಾಜ್ಯಪಾಲರು ಕಾನೂನಾತ್ಮಕವಾಗಿ ನಡೆದುಕೊಂಡಿದ್ದಾರೆ ಅಂತ ಅವರು ಹೇಳಿದ್ರು.

    ಇವತ್ತಿನ ರಾಜ್ಯದ ರಾಜಕೀಯ ಪರಿಸ್ಥಿತಿಗೆ ಮತದಾರರೆ ಮೂಲ ಕಾರಣ. ಜಾತಿಗಾಗಿ, ಹಣಕ್ಕಾಗಿ ಮತಹಾಕಿರುವ ಪರಿಣಾಮ ಈ ರೀತಿ ಅಂತ್ರತರ ಸೃಷ್ಟಿಯಾಗಿದೆ ಇದು ಬೇಸರದ ಸಂಗತಿಯಾಗಿದೆ ಅಂತ ಹೆಗ್ಡೆ ಹೇಳಿದೆ.

  • ಬಸ್‍ಗಳಿಲ್ಲದೆ ಟಾಪ್ ನಲ್ಲೇ ಕುಳಿತು ಪ್ರಯಾಣಿಸ್ತಿರೋ ಮತದಾರರು!

    ಬಸ್‍ಗಳಿಲ್ಲದೆ ಟಾಪ್ ನಲ್ಲೇ ಕುಳಿತು ಪ್ರಯಾಣಿಸ್ತಿರೋ ಮತದಾರರು!

    ಬೆಂಗಳೂರು: ಇಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಆರಂಭವಾಗಿದೆ. ನಗರದಲ್ಲಿ ನೆಲೆಸಿರುವ ಮತದಾರರು, ಮತದಾನ ಮಾಡುವುದಕ್ಕೆ ಊರಿಗೆ ತೆರಳಲು ಬಸ್ ಇಲ್ಲದೆ ಪರದಾಡುತ್ತಿದ್ದಾರೆ.

    ಸಾರಿಗೆ ಬಸ್‍ಗಳನ್ನು ಚುನಾವಣೆ ಕೆಲಸಕ್ಕಾಗಿ ಬಳಸಿಕೊಳ್ಳಲಾಗಿದೆ. ಹೀಗಾಗಿ ಸಾರಿಗೆ ಬಸ್‍ಗಳಿಲ್ಲದ ಮತದಾರರು ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆಯಿಂದಲೇ ನೆಲಮಂಗಲದ ಟೋಲ್ ಗೇಟ್ ಬಳಿ ಸಖತ್ ಟ್ರಾಫಿಕ್ ಜಾಮ್ ಉಂಟಾಗಿದೆ. ಕ್ಕಿಕಿರಿದು ತುಂಬಿರುವ ಬಸ್‍ಗಳಲ್ಲಿ ಪ್ರಯಾಣಿಸಲು ಸಾಧ್ಯವಾಗದೇ ಮಹಿಳೆಯರು, ವೃದ್ಧರು ಪರದಾಡುತ್ತಿದ್ದಾರೆ.

    ರಾತ್ರಿಯಿಂದಲೇ ಊರಿಗೆ ತೆರಳಲು ಸಜ್ಜಾಗಿದ್ದ ಪ್ರಯಾಣಿಕರು ಸಂಜೆಯಿಂದ ಕಾದು ಕುಳಿತ್ರೂ, ಬಸ್ ವ್ಯವಸ್ಥೆ ಇಲ್ಲ ಪರಿಣಾಮವಾಗಿ ಪ್ರಯಾಣಿಕರು ಮೆಜೆಸ್ಟಿಕ್‍ನ ಡಿಪೋದ ಮುಂದೆ ಸರ್ಕಾರಕ್ಕೆ ಧಿಕ್ಕಾರ ಕೂಗಿದ್ದಾರೆ.

    ಅಷ್ಟೇ ಅಲ್ಲದೇ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಂಚರಿಸುತ್ತಿದ್ದ ಬಸ್‍ಗಳನ್ನ ತಡೆಯಲು ಮುಂದಾಗಿದ್ದಾರೆ. ಒಂದು ತಿಂಗಳು ಮುಂಚಿತವಾಗಿ ಬಸ್‍ಗಾಗಿ ಟಿಕೆಟ್ ಬುಕ್ ಮಾಡಿದರೂ ಬಸ್ ವ್ಯವಸ್ಥೆ ಇರಲಿಲ್ಲ. ಸರ್ಕಾರ ರಚನೆ ಮಾಡುವುದಕ್ಕೆ ನಮ್ಮ ವೋಟ್ ಬೇಕು. ಜನರ ಸಮಸ್ಯೆ ಪರಿಹರಿಸುವುದಕ್ಕೆ ಯಾವ ಅಧಿಕಾರಿಯೂ ಬರಲ್ಲ. ಇಂತಹವರಿಗೆ ನಾವು ಮತದಾನ ಮಾಡಬೇಕು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಆನಂದ್‍ಸಿಂಗ್ ಮತಯಾಚನೆ ವೇಳೆ ಮೋದಿ ಘೋಷಣೆ- ಸಿಎಂ ಸಂಸದೀಯ ಕಾರ್ಯದರ್ಶಿಗೆ ಪೊರಕೆ ತೋರಿಸಿದ ಮಹಿಳೆಯರು

    ಆನಂದ್‍ಸಿಂಗ್ ಮತಯಾಚನೆ ವೇಳೆ ಮೋದಿ ಘೋಷಣೆ- ಸಿಎಂ ಸಂಸದೀಯ ಕಾರ್ಯದರ್ಶಿಗೆ ಪೊರಕೆ ತೋರಿಸಿದ ಮಹಿಳೆಯರು

    ಬಳ್ಳಾರಿ: ಕ್ಷೇತ್ರದಲ್ಲಿ ಮತದಾರರ ಆಕ್ರೋಶ ಭುಗಿಲೆದ್ದಿದ್ದು, ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಇಬ್ಬರು ಶಾಸಕರಿಗೆ ಮತದಾರರು ಇಂದು ತರಾಟೆಗೆ ತೆಗೆದುಕೊಂಡು ಬಿಸಿ ಮುಟ್ಟಿಸಿದ್ದಾರೆ.

    ಹೊಸಪೇಟೆಯ ಕೌಲಪೇಟೆ ಯಲ್ಲಿ ಮತಯಾಚನೆಗೆ ತೆರಳಿದ ಕಾಂಗ್ರೆಸ್ ಅಭ್ಯರ್ಥಿ ಆನಂದ್‍ಸಿಂಗ್ ಅವರಿಗೆ ಮತಯಾಚನೆಗೂ ಅವಕಾಶ ಕೊಡದೇ ಮರಳಿ ಕಳಿಸಿದರು. ಇನ್ನೂ ಚಿಕ್ಕಾಅಂತಾಪುರರಲ್ಲಿ ಪ್ರಚಾರಕ್ಕೆ ತೆರಳಿದ ಸಂಡೂರು ಶಾಸಕ, ಸಿಎಂ ಸಂಸದೀಯ ಕಾರ್ಯದರ್ಶಿ ತುಕಾರಾಂ ಅವರಿಗೆ ಮಹಿಳೆಯರು ಪೊರಕೆ ತೋರಿಸಿ ಪ್ರಚಾರಕ್ಕೆ ಅಡ್ಡಿಪಡಿಸುವ ಮೂಲಕ ಬಿಸಿ ಮುಟ್ಟಿಸಿದರು.

    ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಆನಂದ್‍ಸಿಂಗ್ ಅವರು ಕ್ಷೇತ್ರದ ಕೌಲಪೇಟೆಯ ಕುರುಬರ ಓಣಿಯಲ್ಲಿ ಮತಯಾಚನೆಗೆ ತೆರಳಿದ್ದ ವೇಳೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ನಿಮ್ಮ ಹತ್ತು ವರ್ಷಗಳ ಅಧಿಕಾರ ಅವಧಿಯಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ ಎಂದರು ಪ್ರಶ್ನಿಸಿದರು. ಅಲ್ಲದೇ ಆನಂದಸಿಂಗ್ ಗೋ ಬ್ಯಾಕ್ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದರು. ಇದರಿಂದ ಮುಜಗರಕ್ಕೆ ಒಳಗಾದ ಆನಂದ್‍ಸಿಂಗ್ ವಾಪಸ್ ಮರಳಿದರು.

    ಸಂಡೂರಿನ ಚಿಕ್ಕಅಂತಾಪುರದಲ್ಲಿ ಕಾರ್ಮಿಕನೊಬ್ಬನ ಸಾವಿನ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರನ್ನು ಪೊಲೀಸರು ಬಲವಂತವಾಗಿ ಬಂಧಿಸಿ ಕೇಸ್ ದಾಖಲಿಸಿದ ವೇಳೆ ಪ್ರಶ್ನೆ ಮಾಡದ ಶಾಸಕರು ಇದೀಗ ಮತ ಕೇಳಲು ಬಂದಿದ್ದೀರಾ ಎಂದು ಸ್ಥಳೀಯರು ತರಾಟೆಗೆ ತೆಗೆದುಕೊಂಡರು, ಅಲ್ಲದೇ ಕೆಲ ಮಹಿಳೆಯರು ಪೊರಕೆ ಪ್ರದರ್ಶನ ಮಾಡಿದರು. ಈ ವೇಳೆ ಗ್ರಾಮಸ್ಥರು ಹಾಗೂ ಶಾಸಕರ ಬೆಂಬಲಿಗರ ಮಧ್ಯೆ ಜಟಾಪಟಿ ಸಹ ನಡೆಯಿತು.

  • ಚುನಾವಣಾಧಿಕಾರಿಗಳಿಂದ ಮತದಾರರಿಗೆ ಹಂಚುತ್ತಿದ್ದ ಕೋಳಿಗಳು ವಶ!

    ಚುನಾವಣಾಧಿಕಾರಿಗಳಿಂದ ಮತದಾರರಿಗೆ ಹಂಚುತ್ತಿದ್ದ ಕೋಳಿಗಳು ವಶ!

    ಮಂಡ್ಯ: ಮತದಾರರಿಗೆ ಹಂಚುತ್ತಿದ್ದ ಕೋಳಿಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಮಲ್ಲೇಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಲಗೇಜ್ ಆಟೋದಲ್ಲಿ ಕೋಳಿ ತಂದು ಮನೆ ಮನೆಗೆ ಹಂಚಲಾಗುತ್ತಿತ್ತು. ಇದನ್ನು ತಿಳಿದು ಸ್ಥಳೀಯರಲ್ಲೇ ಒಬ್ಬರು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷ್ಯ ತಿಳಿದು ಸ್ಥಳಕ್ಕೆ ಆಗಮಿಸಿದ ಚುನಾವಣಾ ಅಧಿಕಾರಿಗಳು ಲಗೇಜ್ ಆಟೋ ಸಹಿತ ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಿದ್ದ ಗೃಹೋಪಯೋಗಿ ವಸ್ತುಗಳು ವಶ

    ಅಷ್ಟೇ ಅಲ್ಲದೆ ಈಗಾಗಲೇ ಕೋಳಿಗಳನ್ನು ಪಡೆದಿದ್ದವರಿಂದಲೂ ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇನ್ನು ಕೋಳಿ ಹಂಚಲು ಹೇಳಿದ್ದು ಯಾರು.? ಯಾವ ಪಕ್ಷದ ಅಭ್ಯರ್ಥಿ ಕೋಳಿ ಹಂಚಲು ಸೂಚಿಸಿದ್ದು ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

  • ನಡುರಸ್ತೆಯಲ್ಲೇ ಸಚಿವ ತನ್ವೀರ್ ಸೇಠ್ ಗೆ ಫುಲ್ ಕ್ಲಾಸ್- ತಡೆಯಲು ಬಂದ ಆಪ್ತನಿಗೆ ಅವಾಜ್ ಹಾಕಿದ ಮತದಾರ

    ನಡುರಸ್ತೆಯಲ್ಲೇ ಸಚಿವ ತನ್ವೀರ್ ಸೇಠ್ ಗೆ ಫುಲ್ ಕ್ಲಾಸ್- ತಡೆಯಲು ಬಂದ ಆಪ್ತನಿಗೆ ಅವಾಜ್ ಹಾಕಿದ ಮತದಾರ

    ಮೈಸೂರು: ಮತ ಕೇಳಲು ಬಂದ ಸಚಿವರಿಗೆ ಮತದಾರ ಕ್ಲಾಸ್ ತೆಗೆದುಕೊಂಡ ಘಟನೆ ಮೈಸೂರಿನ ಎನ್ ಆರ್ ಕ್ಷೇತ್ರದಲ್ಲಿ ನಡೆದಿದೆ.

    ಮೈಸೂರಿನ ಎನ್ ಆರ್ ಕ್ಷೇತ್ರದ ಶಾಸಕ ಹಾಗೂ ಸಚಿವ ತನ್ವೀರ್ ಸೇಠ್ ಮತದಾರನಿಂದ ತರಾಟೆಗೆ ಒಳಗಾಗಿದ್ದಾರೆ. ಮತದಾರ ರಸ್ತೆಯಲ್ಲಿ ಏಕಾಂಗಿಯಾಗಿ ನಿಂತು ಸಚಿವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಇದನ್ನು ತಡೆಯಲು ಬಂದ ಸಚಿವರ ಆಪ್ತ ಕಾರ್ಯದರ್ಶಿಯನ್ನು ಲೆಕ್ಕಿಸದೆ ಅವಾಜ್ ಹಾಕಿದ್ದಾರೆ.

    ಮೈಸೂರಿನ ಕನ್ನಡಪರ ಹೋರಾಟಗಾರ ಪರಮೇಶ್, ತನ್ವೀರ್ ಸೇಠ್ ಗೆ ಕ್ಲಾಸ್ ತೆಗೆದುಕೊಂಡ ವ್ಯಕ್ತಿ. ಎನ್.ಆರ್. ಕ್ಷೇತ್ರದ ರಾಘವೇಂದ್ರ ನಗರದಲ್ಲಿ ಮತಯಾಚನೆಗಾಗಿ ತನ್ವೀರ್ ಸೇಠ್ ಪಾದಯಾತ್ರೆ ನಡೆಸುತ್ತಿದ್ದರು. ಈ ವೇಳೆ ಎದುರಾದ ಮತದಾರ ಪರಮೇಶ್, ತನ್ವೀರ್ ಸೇಠ್‍ಗೆ ಹಲವು ನಿಮಿಷಗಳ ಕಾಲ ಪ್ರಶ್ನೆಗಳ ಸುರಿಮಳೆಗೈದರು.

    ರಸ್ತೆ ರೀಪೇರಿ ಮಾಡಿಸಿಲ್ಲ. ನಾನು ಅಂದಿನಿಂದಲೂ ನಿಮಗೆ ನಿಮ್ಮ ತಂದೆ ಹಾಗೂ ನಿಮಗೆ ಮತ ಹಾಕ್ತಿದ್ದೀವಿ. ಆದ್ರೆ ಮನೆ ಬಳಿ ಕೆಲಸ ಮಾಡಿಕೊಡಿ ಅಂತ ಬಂದ್ರೆ ಕ್ಯಾರೇ ಅನ್ನೊಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

  • ಆಗಿರೋದನ್ನ ಕೇಳಮ್ಮ ಆಗದೇ ಇರೋದನ್ನೆಲ್ಲ ಕೇಳ್ಬೇಡ-ನಾನ್ ಹೇಳೊದನ್ನ ಮೊದಲು ಕಿವಿಗೆ ಹಾಕ್ಕೊಳ್ಳಿ: ಸಚಿವ ಕೃಷ್ಣಬೈರೇಗೌಡ

    ಆಗಿರೋದನ್ನ ಕೇಳಮ್ಮ ಆಗದೇ ಇರೋದನ್ನೆಲ್ಲ ಕೇಳ್ಬೇಡ-ನಾನ್ ಹೇಳೊದನ್ನ ಮೊದಲು ಕಿವಿಗೆ ಹಾಕ್ಕೊಳ್ಳಿ: ಸಚಿವ ಕೃಷ್ಣಬೈರೇಗೌಡ

    ಬೆಂಗಳೂರು: ಆಗಿರೋದನ್ನು ಕೇಳಮ್ಮ, ಆಗದೇ ಇರೋದನೆಲ್ಲಾ ಕೇಳಬೇಡ. ಆಗಬೇಕಾಗಿರುವ ಕೆಲಸಗಳ ಬಗ್ಗೆ ಮುಂದೆ ಮಾತನಾಡೋಣ ನಾನ್ ಹೇಳದನ್ನ ಮೊದಲು ಕಿವಿಗೆ ಹಾಕ್ಕೊಳಿ ಅಂತಾ ಚುನಾವಣಾ ಪ್ರಚಾರದಲ್ಲಿ ಪ್ರಶ್ನಿಸಿದ ಮಹಿಳೆಗೆ ಸಚಿವ ಕೃಷ್ಣ ಬೈರೇಗೌಡ ಹೇಳಿದ ಮಾತಿದು.

    ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಕೃಷ್ಣ ಬೈರೇಗೌಡ್ರು ಚುನಾವಣಾ ಪ್ರಚಾರದಲ್ಲಿ ಮಾತನಾಡುವಾಗ, ಮತದಾರರು ಕ್ಷೇತ್ರದಲ್ಲಿರುವ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಏರಿಯಾದಲ್ಲಿ ಬಸ್ ಬರೋದಿಲ್ಲ ಸಾಹೇಬ್ರೆ ಅಂತ ಪ್ರಶ್ನಿಸಿದ್ದಕ್ಕೆ ಗರಂ ಅದ ಸಚಿವರು, ಆಗಿರೋದನ್ನ ಕೇಳಮ್ಮ ಆಗದೇ ಇರೋದನ್ನೆಲ್ಲ ಕೇಳ ಬೀಡ ನೀನು ಎಂದು ಏರು ಧ್ವನಿಯಲ್ಲಿ ಮಾತನಾಡಿ ಮಹಿಳೆಯ ಬಾಯಿ ಮುಚ್ಚಿಸಿದ್ದಾರೆ.

    ಪತಿ ಕೃಷ್ಣ ಬೈರೇಗೌಡ ಪರ ಮತಯಾಚನೆ ಮಾಡಲು ಹೋದ ಸಚಿವರ ಪತ್ನಿ ಮೀನಾಕ್ಷಿ ಕೃಷ್ಣ ಬೈರೇಗೌಡ ಮತದಾರರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಮತದಾರರ ಪ್ರಶ್ನೆಯಿಂದ ಕೆರಳಿದ ಮೀನಾಕ್ಷಿ ಕೃಷ್ಣ ಭೈರೇಗೌಡ ಯು ನೋ ರಿಯಾಲಿಟಿ..? ಗೊತ್ತಿಲ್ಲದೆ ಮಾತನಾಡ ಬೇಡಿ ಅಂತ ಗದರಿಸಿ ಮೀನಾಕ್ಷಿ ಕೃಷ್ಣ ಬೈರೇಗೌಡ ಕೋಪಗೊಂಡು ಹೊರ ಬಂದಿದ್ದಾರೆ.

  • ಬಿಜೆಪಿ ಅಭ್ಯರ್ಥಿಗೆ ಹಣ, ಭತ್ತ ನೀಡಿದ ಮತದಾರರು!

    ಬಿಜೆಪಿ ಅಭ್ಯರ್ಥಿಗೆ ಹಣ, ಭತ್ತ ನೀಡಿದ ಮತದಾರರು!

    ಕೊಪ್ಪಳ: ಚುನಾವಣೆಯಲ್ಲಿ ಮತದಾರರಿಗೆ ಹಣ ಹೆಂಡದ ಹೊಳೆಯನ್ನೇ ಅಭ್ಯರ್ಥಿಗಳು ಹರಿಸೋದು ಸಾಮಾನ್ಯ. ಆದ್ರೆ ಇಲ್ಲೊಬ್ಬ ಅಭ್ಯರ್ಥಿಗೆ ಮತದಾರರೆ ಹಣ ಭತ್ತವನ್ನು ಕೊಟ್ಟು ಚುನಾವಣೆಗೆ ಸಹಾಯ ಮಾಡುತ್ತಿರುವ ಘಟನೆ ಕೊಪ್ಪಳದಲ್ಲಿ ನೆಡದಿದೆ.

    ಕೊಪ್ಪಳದ ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಬಸವರಾಜ ದಡೆಸುಗುರುಗೆ ಮತದಾರರೇ ಹಣ ಮತ್ತು ಭತ್ತವನ್ನು ನೀಡುತ್ತಿದ್ದಾರೆ.

    ಇಂದಿನ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಮತದಾರರಿಗೆ ಹಣವನ್ನು ನೀಡುತ್ತಾರೆ. ಆದ್ರೆ ಇಲ್ಲಿ ಉಲ್ಟಾ ಆಗಿದ್ದು, ಅಭ್ಯರ್ಥಿಗೆ ಮತದಾರರೆ ಹಣ ಮತ್ತು ಭತ್ತವನ್ನು ಕೊಡುತ್ತಿದ್ದಾರೆ. ಅದರಂತೆ ಇಂದು ಕ್ಷೇತ್ರದ ಸಿದ್ದಾಪುರ ಗ್ರಾಮದ ರೈತರೊಬ್ಬರು 101 ಚೀಲ ಭತ್ತವನ್ನು ನೀಡುವ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಸಹಾಯವನ್ನು ಮಾಡಿದ್ದಾರೆ.

  • ಮತದಾರರನ್ನು ಸೆಳೆಯಲು ಮತ್ತೆ ಟೀ ಮಾರಾಟ- 339 ಕೋಟಿ ರೂ. ಆಸ್ತಿ ಘೋಷಿಸಿದ ಅಭ್ಯರ್ಥಿಯಿಂದ ಪ್ರಚಾರ

    ಮತದಾರರನ್ನು ಸೆಳೆಯಲು ಮತ್ತೆ ಟೀ ಮಾರಾಟ- 339 ಕೋಟಿ ರೂ. ಆಸ್ತಿ ಘೋಷಿಸಿದ ಅಭ್ಯರ್ಥಿಯಿಂದ ಪ್ರಚಾರ

    ಬೆಂಗಳೂರು: ಆರಂಭದಲ್ಲಿ ಟೀ ಮಾರಾಟ ಮಾಡಿ ನಂತರ ವಿವಿಧ ಉದ್ಯಮಗಳನ್ನು ನಡೆಸಿ ಈಗ ಕೋಟಿ ರೂ. ಒಡೆಯನಾಗಿರುವ ಪಕ್ಷೇತರ ಅಭ್ಯರ್ಥಿಯೊಬ್ಬರು ತಮ್ಮ ಹಳೆ ಕಸುಬಿನ ಮೂಲಕ ಮತದಾರರ ಮನಗೆಲ್ಲಲು ಮುಂದಾಗಿದ್ದಾರೆ.

    ಹೌದು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಗಳಲ್ಲೇ ಅತಿ ಹೆಚ್ಚು ಶ್ರೀಮಂತನಾಗಿರುವ ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಪಿ.ಅನಿಲ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳಿದ್ದರು. ಆದರೆ ಕೈ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ನಿಂತಿದ್ದಾರೆ. ಇದನ್ನೂ ಓದಿ: 3ನೇ ಕ್ಲಾಸ್ ಓದಿ ಟೀ ಮಾರಾಟ ಮಾಡುತ್ತಿದ್ದವನ ಆಸ್ತಿ 339 ಕೋಟಿ ರೂ- ಪಕ್ಷೇತರ ಅಭ್ಯರ್ಥಿಯಿಂದ ಆಸ್ತಿ ಘೋಷಣೆ

    ಚುನಾವಣಾ ಆಯೋಗಕ್ಕೆ 339 ಕೋಟಿ ರೂ. ಆಸ್ತಿ ಘೋಷಣೆ ಮಾಡಿರುವ ಅನಿಲ್ ಕುಮಾರ್, ವಿಭಿನ್ನವಾಗಿ ಮತದಾರರ ಮತಗೆಲ್ಲಲು ತಮ್ಮ ಹಳೆಯ ವೃತ್ತಿಯಾದ ಟೀ ವ್ಯಾಪಾರ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.

    ಬೊಮ್ಮನಹಳ್ಳಿಯ ಪ್ರಮುಖ ಪ್ರದೇಶಗಳಲ್ಲಿ ಸೈಕಲ್ ನಲ್ಲಿ ಟೀ ಪಾತ್ರೆ ಇಟ್ಟುಕೊಂಡು ಮತದಾರರಿಗೆ ಟೀ ನೀಡಿ ತನಗೆ ಮತವನ್ನು ಹಾಕುವಂತೆ ವಿನಂತಿಸಿಕೊಳ್ಳುತ್ತಿದ್ದು, ಈ ಮೂಲಕ ಬೊಮ್ಮನಹಳ್ಳಿಯ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಸವಾಲೊಡ್ಡಿದ್ದಾರೆ.

  • ಆ ಒಂದು ಕೆಲಸ ಮಾಡಲು ನನಗೆ ಕಷ್ಟ ಎಂದ ಯಶ್

    ಆ ಒಂದು ಕೆಲಸ ಮಾಡಲು ನನಗೆ ಕಷ್ಟ ಎಂದ ಯಶ್

    ಬೆಂಗಳೂರು: ನುಗ್ಗೋ ಬುಲೆಟ್ ಎದ್ರುಗಡೆ ಯಾವನಿದ್ರೇನು ನುಗ್ತಾ ಇರೋದೇ ಎದೆ ಸೀಳ್ತಾ ಇರೋದೇ ಎಂದು ಹೇಳುವ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಆ್ಯಂಕರಿಂಗ್ ಮಾಡೋದು ಸ್ವಲ್ಪ ಕಷ್ಟ ಎಂದು ತಿಳಿಸಿದ್ದಾರೆ.

    ಆರ್.ಜೆ ರೋಹಿತ್ ಅವರನ್ನು ರಾಕಿಂಗ್ ಸ್ಟಾರ್ ಇಂಟರ್ ವ್ಯೂ ಮಾಡಿದ್ದಾರೆ. ರೋಹಿತ್ ಅಭಿನಯದ ‘ಬಕಾಸುರ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ರಾಕ್‍ಸ್ಟಾರ್ ಗೆ ಪ್ರಶ್ನೆಗಳನ್ನ ಹಾಕಿದ್ದರು. ಇಂಟ್ರೆಸ್ಟಿಂಗ್ ಎಂದರೆ ಫಸ್ಟ್ ಟೈಮ್ ನಿರೂಪಣೆ ಮಾಡಿದರಿಂದ ಯಶ್ ಕೊಂಚ ಎಗ್ಸೈಟ್ ಆಗಿದ್ದರು.

    ಆ್ಯಂಕರಿಂಗ್ ತುಂಬಾ ಕಷ್ಟದ ಕೆಲಸ. ಏನು ಪ್ರಶ್ನೆ ಕೇಳಬೇಕು ಎಂದು ತಿಳಿಯುವುದಿಲ್ಲ. ಮಾತನಾಡುವುದು ಸುಲಭ ಆದರೆ ಅದಕ್ಕೆ ಒಂದು ನಿರ್ದಿಷ್ಟ ಪ್ರಶ್ನೆಯಿರುತ್ತದೆ. ಆ ಪ್ರಶ್ನೆಗೆ ನನ್ನ ಅಭಿಪ್ರಾಯ ಏನು ಎಂದು ಸುಲಭವಾಗಿ ಹೇಳಬಹುದು. ಆದರೆ ಒಂದು ಪ್ರಶ್ನೆಯನ್ನು ಹುಡುಕಿ ಅದನ್ನು ಕೇಳಬೇಕು ಎಂದರೆ ಕಷ್ಟದ ಕೆಲಸ. ಈಗ ಆ್ಯಂಕರಿಂಗ್ ಮಾಡುವವರ ಕಷ್ಟ ನನಗೆ ಗೊತ್ತಾಯಿತು ಎಂದು ಯಶ್ ತಿಳಿಸಿದ್ದಾರೆ.

    ಆ್ಯಂಕರಿಂಗ್ ಮಾಡುವಾಗ ಮನೋರಂಜನೆ ಹಾಗೂ ಸಿನಿಮಾಗೆ ಸಂಬಂಧಪಟ್ಟ ಪ್ರಶ್ನೆಗಳನ್ನೇ ಕೇಳಬೇಕು. ಅವರ ಮನಸಿನಲ್ಲಿ ಇರುವ ಯೋಚನೆಗಳು ಹೊರಬರುವಂತೆ ಪ್ರಶ್ನೆಗಳನ್ನು ಕೇಳಬೇಕು. ಹಾಗಾಗಿ ಇದು ಕಷ್ಟದ ಕೆಲಸ. ಆದರೆ ಸಿನಿಮಾಗಾಗಿ ಹಾಗೂ ಅವರ ಮೇಲೆ ಇರುವ ಪ್ರೀತಿಗಾಗಿ ನಾನು ಈ ಕೆಲಸವನ್ನು ಮಾಡಿದೆ ಎಂದು ಯಶ್ ಹೇಳಿದ್ದಾರೆ.

    ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವವರು ಹೇಗಿರಬೇಕು? ತಾನು ಯಾವುದಾದರೂ ಪಕ್ಷದ ಪ್ರಚಾರ ಮಾಡಬೇಕು ಎಂದರೆ ರಾಜಕೀಯ ನಾಯಕರು ಏನೆಲ್ಲಾ ಕೆಲಸಗಳನ್ನು ಮಾಡಬೇಕಾಗುತ್ತದೆ ಎನ್ನುವುದು ಯಶ್ ಸಾಕಷ್ಟು ಬಾರಿ ಹೇಳಿಕೊಂಡಿದ್ದರು.

    ಇದೀಗ ಮತದಾರರಿಗೆ ನೀವು ಆಯ್ಕೆ ಮಾಡುವ ಪ್ರತಿನಿಧಿ ಹೇಗಿರಬೇಕು ಎನ್ನುವುದನ್ನು ಹೇಳಿದ್ದಾರೆ. ನಾಟಕದ ಮಾತುಗಳಿಗೆ ನಂಬಬೇಡಿ, ನಿಮ್ಮ ಊರು, ನಿಮ್ಮ ಏರಿಯಾದ ಸಮಸ್ಯೆಯನ್ನು ಅರಿತು ಕೆಲಸ ಮಾಡುವ ಪ್ರತಿನಿಧಿಯನ್ನು ಆಯ್ಕೆ ಮಾಡಿ. ಭಂಡ ನ್ಯಾಯದಲ್ಲಿ ಗೆಲ್ಲುತ್ತೀನಿ ಎನ್ನುವರಿಗೆ ನೀವು ಬೆಂಬಲ ಕೊಡಬೇಡಿ ಎಂದು ಯಶ್ ತಿಳಿಸಿದ್ದಾರೆ.

    ಸದ್ಯ ಯಶ್ ಕೆಜಿಎಫ್ ಸಿನಿಮಾದಲ್ಲಿ ಬ್ಯೂಸಿಯಾಗಿದ್ದು, ಸ್ಟಾರ್ ಡೈರೆಕ್ಟರ್ ಅವರ ಕಾಲ್‍ಶೀಟ್‍ಗಾಗಿ ಕಾಯುತ್ತಿದ್ದಾರೆ.