Tag: ಮತದಾನ

  • 60 ಸಾವಿರ ಚದರಡಿಯಲ್ಲಿ ಮೂಡಿತು ಮಾನವ ಸರಪಳಿ ಭಾರತ ನಕಾಶೆ

    60 ಸಾವಿರ ಚದರಡಿಯಲ್ಲಿ ಮೂಡಿತು ಮಾನವ ಸರಪಳಿ ಭಾರತ ನಕಾಶೆ

    ಕೊಪ್ಪಳ: ವಿಧಾನಸಭೆ ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗಲೇ, ರಾಜ್ಯದ ಪ್ರಮುಖ ಮೂರು ಪಕ್ಷಗಳು ಈಗಾಗಲೇ ಚುನಾವಣಾ ರಣಕಹಳೆ ಮೊಳಗಿಸಿವೆ. ಮೂರು ಪಕ್ಷದ ನಾಯಕರು ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

    ಇದನ್ನೆಲ್ಲ ನೋಡಿದ ಕೊಪ್ಪಳದ ಜಿಲ್ಲಾ ಪಂಚಾಯತ್ ಸಿಇಒ ಮತ್ತು ಡಿಸಿ ನಾವೇನು ಕಮ್ಮಿ ಎಂದು ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಹೌದು. ಜಿಲ್ಲಾಧಿಕಾರಿಗಳೂ ಚುನಾವಣೆ ಪ್ರಚಾರ ಮಾಡುತ್ತಿದ್ದು, ಸಾರ್ವಜನಿಕರಲ್ಲಿ ಮತದಾನದ ಕುರಿತ ಜಾಗೃತಿ ಮೂಡಿಸಲು ವಿಶೇಷವಾದ ಕಾರ್ಯಕ್ಕೆ ಮುಂದಾಗಿದ್ದಾರೆ.

    ಜಾಗೃತಿ ಹೇಗೆ?: ವಿದ್ಯಾರ್ಥಿಗಳಿಂದ ಭಾರತರ ನಕಾಶೆ ಮಾದರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಅದರಲ್ಲಿ ಮನಸ್ಸಿಗೆ ಮುದ ನೀಡುವ ಕರ್ನಾಟಕ ನಕಾಶೆಯ ದೃಶ್ಯವನ್ನು ನಿರ್ಮಿಸಿದ್ದರು. ಕೊಪ್ಪಳದ ಗವಿಮಠದ ಆವರಣದಲ್ಲಿ ನಡೆದ ಮತದಾನದ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ಸುಮಾರು 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಭಾರತ ನಕಾಶೆ ಜೊತೆಗೆ ಕನ್ನಡದಲ್ಲಿ ನಮ್ಮ ಮತ, ನಮ್ಮ ಹಕ್ಕು ಎಂದು ಹಾಗೂ ಇಂಗ್ಲೀಷ್ ನಲ್ಲಿ ಮೈ ವೋಟ್, ಮೈ ರೈಟ್ಸ್ ಎಂಬ ಘೋಷ ವಾಕ್ಯ ಬರೆದು ಅದರಲ್ಲೂ ಮಾನವ ಸರಪಳಿ ಮಾಡಲಾಗಿತ್ತು.

    ಮುಂಬಾರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಚುನಾವಣಾ ಆಯೋಗ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶವನ್ನು ಈ ಕಾರ್ಯ ಹೊಂದಿದೆ. ಈ ಮೂಲಕ ಮತದಾನದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸುವ ಕಾರ್ಯವನ್ನು ಪ್ರತಿ ಜಿಲ್ಲೆಯ ಜಿಪಂ ಸಿಇಒಗೆ ಚುನಾವಣಾ ಆಯೋಗ ಜವಾಬ್ದಾರಿ ವಹಿಸಿದೆ. ಈ ಹಿನ್ನೆಲೆಯಲ್ಲಿ ಮತದಾರರನ್ನು ಮತಗಟ್ಟೆಗೆ ಕರೆತರುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ವಿಭಿನ್ನ ಮಾದರಿಯಲ್ಲಿ ಮತದಾನ ಜಾಗೃತಿ ಆರಂಭವಾಗಲಿದ್ದು, ಕೊಪ್ಪಳ ಜಿಲ್ಲಾಡಳಿತ ತುಸು ಮುಂಚಿತವಾಗಿಯೇ ಈ ಕಾರ್ಯಕ್ಕೆ ಚಾಲನೆ ನೀಡಿದೆ.

    ಕಾರ್ಯಕ್ರಮದ ವೇಳೆ ಮಾತನಾಡಿದ ಕೊಪ್ಪಳ ಡಿಸಿ, ಮತದಾನದ ಹಕ್ಕನ್ನು ನಾವು ಚಲಾಯಿಸದಿದ್ದಲ್ಲಿ, ನಮಗೆ ನಾವು ವಂಚನೆ ಮಾಡಿಕೊಂಡಂತಾಗುತ್ತದೆ ಅಂದ್ರು. ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸವುಳ್ಳ ನಾವು, ಯಾವುದೇ ಪ್ರೇರಣೆ ಮತ್ತು ದಾಕ್ಷಿಣ್ಯಕ್ಕೆ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆ ಎಂಬ ಪ್ರತಿಜ್ಞಾವಿಧಿ ಭೋದಿಸಿದರು. ಈ ಬಾರಿ ಎಲ್ಲ ಪ್ರಜ್ಞಾವಂತರು ಮತಗಟ್ಟೆಗೆ ಬಂದು ಮತ ಚಲಾಯಿಸಲು. ಶೇ. 100 ರಷ್ಟು ಮತದಾನವಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

  • ಮತದಾರರ ಪಟ್ಟಿಯಲ್ಲಿ ಗೋಲ್ಮಾಲ್- 3, 4ನೇ ಕ್ಲಾಸ್‍ವರೆಗೆ ಓದಿದವರನ್ನ ಪದವೀಧರ ಮತದಾರರ ಪಟ್ಟಿಗೆ ಸೇರಿಸೋ ಯತ್ನ

    ಮತದಾರರ ಪಟ್ಟಿಯಲ್ಲಿ ಗೋಲ್ಮಾಲ್- 3, 4ನೇ ಕ್ಲಾಸ್‍ವರೆಗೆ ಓದಿದವರನ್ನ ಪದವೀಧರ ಮತದಾರರ ಪಟ್ಟಿಗೆ ಸೇರಿಸೋ ಯತ್ನ

    ಬೆಂಗಳೂರು: ಮುಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಪದವೀಧರ ಕ್ಷೇತ್ರದ 7 ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣಾ ಆಯೋಗ ಹೊಸ ಪದವೀಧರರನ್ನ ಮತದಾರರ ಪಟ್ಟಿಯಲ್ಲಿ ಸೇರಿಸಲು ಅರ್ಜಿಗಳನ್ನ ಹಾಕಲು ಸೂಚಿಸಿದ್ದು, ಈಗಾಗಲೇ ಅರ್ಜಿಗಳನ್ನ ಸ್ವೀಕರಿಸಿ ವೇರಿಫಿಕೇಶನ್ ಮಾಡಲಾಗುತ್ತಿದೆ.

    ಪದವೀಧರ ಮತದಾರರು ಬುದ್ಧಿವಂತರಾಗಿದ್ದು, ಅಭ್ಯರ್ಥಿಗಳ ಅಮಿಷಗಳಿಗೆ ಒಳಗಾಗೋದಿಲ್ಲ ಎಂಬುವುದು ಸಾಮಾನ್ಯರ ಅಭಿಪ್ರಾಯ. ಆದ್ರೆ ಅವಿದ್ಯಾವಂತರನ್ನ ಪದವೀಧರ ಮತದಾರರ ಪಟ್ಟಿಗೆ ಸೇರಿಸಿ ಅವರಿಂದ ಮತಗಳನ್ನ ಪಡೆಯಲು ಕಾಣದ ಕೈಗಳು ಕೆಲಸ ಮಾಡಿವೆ. ಬೆಂಗಳೂರಿನ ವಾರ್ಡ್ ನಂ12 ಶೆಟ್ಟಿಹಳ್ಳಿಯ ಕಮ್ಮಗೊಂಡನಹಳ್ಳಿಯಲ್ಲಿ ಕೆಲವರು ಬ್ಯಾಂಕ್ ಲೋನ್‍ಗೆ ಅಂತಾ ಕೊಟ್ಟಿದ್ದ ದಾಖಲೆಗಳನ್ನ ಬಳಸಿ ನಕಲಿ ಪದವಿಪತ್ರವನ್ನ ಸೃಷ್ಟಿಸಿ ಪದವೀಧರ ಮತದಾರರ ಪಟ್ಟಿಗೆ ಸೇರಿಸೋ ಪ್ರಯತ್ನ ನಡೆದಿದೆ. ಅಬ್ಬಿಗೆರೆ ಬಿಬಿಎಂಪಿ ಕಚೇರಿಗೆ 160ಕ್ಕೂ ಹೆಚ್ಚು ಅರ್ಜಿಗಳು ವೇರಿಫಿಕೇಶನ್ ಗೆ ಬಂದಿದೆ.

    ಅರ್ಜಿ ನೋಡಿದ ವ್ಯಕ್ತಿಗಳು ಫುಲ್ ಶಾಕ್ ಆಗಿದ್ದು, ನಾವ್ಯಾರೂ ಡಿಗ್ರಿ ಮಾಡಿಲ್ಲ. ನಾವು ಓದಿರೋದೇ 3, 4ನೇ ಕ್ಲಾಸ್‍ವರೆಗೆ. ನಮಗೆ ಬೇರೆ ಬೇರೆ ವಿಶ್ವವಿದ್ಯಾಲಯದ ಪದವಿ ಪತ್ರಗಳನ್ನ ಯಾರು ನೀಡಿದ್ದಾರೋ ಗೊತ್ತಿಲ್ಲ ಅಂತಾ ಸ್ಥಳೀಯ ನಿವಾಸಿಗಳು ಹೇಳುತ್ತಾರೆ. ಕಮ್ಮಗೊಂಡನಹಳ್ಳಿಯ ನಿವಾಸಿಗಳ ದಾಖಲೆಗಳು ಹೇಗೆ ಪದವೀಧರರ ಪಟ್ಟಿಗೆ ಸೇರ್ಪಡೆಯಾದವು ಎಂಬುದನ್ನು ಬೆನ್ನತ್ತಿದ್ದಾಗ ಸ್ಫೋಟಕ ಗೋಲ್ಮಾಲ್ ಬೆಳಕಿಗೆ ಬಂದಿದೆ.

    ಏನದು ಗೋಲ್ಮಾಲ್?: ಬ್ಯಾಂಕ್ ಲೋನ್‍ಗೆ ಅಂತಾ ವೆಳ್ಳೀಯಮ್ಮ ಅನ್ನೋ ಸಮಾಜ ಸೇವಕಿಗೆ ಕಮ್ಮಗೊಂಡನಹಳ್ಳಿಯ ನಿವಾಸಿಗಳು ದಾಖಲೆ ಪತ್ರಗಳು ಮತ್ತು 4 ಫೋಟೋ ಕೊಟ್ಟಿದ್ದರು. ವೆಳ್ಳೀಯಮ್ಮ ಮಹಿಳಾ ಸಂಘಟನೆಯೊಂದರ ಕಾರ್ಯಕರ್ತೆ ವಿಜಯನಗರದ ಕಸ್ತೂರಿಗೆ ದಾಖಲೆಗಳನ್ನ ಕೊಟ್ಟಿದ್ದಾರೆ. ಕಸ್ತೂರಿ ನಾನ್ಯಾರಿಗೂ ನಿಮ್ಮ ದಾಖಲೆಗಳನ್ನ ನೀಡಿಲ್ಲ, ನನ್ನ ಬಳಿಯೇ ಇದೆ. ಬೇಕಾದ್ರೇ ಕೊಡ್ತೀನಿ ಅಂತಾರೆ. ದಾಖಲೆಗಳನ್ನ ವಾಪಸ್ ಪಡೆಯಲು ಹೋದರೆ, ದಾಖಲೆ ಪತ್ರಗಳನ್ನು ಸರಿಯಾಗಿ ತೋರಿಸಿದ್ದು, ನೀಡಿರುವ 4 ಫೋಟೊಗಳಲ್ಲಿ 1 ಫೋಟೋ ಮಾತ್ರ ಕೊಟ್ಟಿದ್ದಾರೆ.

    ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿರುವ ಅಂಶವೆಂದರೆ ದಾಖಲೆಗಳ ಪತ್ರಗಳನ್ನ ಜೆರಾಕ್ಸ್ ಮಾಡಿ ಅದಕ್ಕೆ ನಕಲಿ ಪದವಿ ಪತ್ರವನ್ನ ಸೃಷ್ಠಿಸಿ ಮತದಾರರ ಪಟ್ಟಿಯಲ್ಲಿ ಸೇರಿಸಲು ಯಾರೋ ಪ್ರಯತ್ನಪಟ್ಟಿದ್ದಾರೆ. ಕೇವಲ ಒಂದು ವಾರ್ಡ್ ನಲ್ಲಿ ಹೀಗಾದರೆ ಇಡೀ ರಾಜ್ಯದಲ್ಲಿ ಎಷ್ಟು ಗೋಲ್ಮಾಲ್ ನಡೆದಿದೆ ಎಂಬ ಅನುಮಾನ ಹುಟ್ಟಿಕೊಂಡಿದೆ.

  • ಹಸೆಮಣೆ ಏರೋ ಮುನ್ನ ಮತದಾನ ಮಾಡಿದ ವಧು-ವರ

    ಹಸೆಮಣೆ ಏರೋ ಮುನ್ನ ಮತದಾನ ಮಾಡಿದ ವಧು-ವರ

    ಭರೂಚ್: ಇಂದು ಗುಜರಾತಿನಲ್ಲಿ ವಿಧಾನಸಭೆಗೆ ಮೊದಲ ಹಂತದ ಮತದಾನ ಭರದಿಂದ ಸಾಗುತ್ತದೆ. ಆದರೆ ವಿಶೇಷ ಎಂದರೆ ಇಂದು ಮದುವೆಯಾಗಬೇಕಿದ್ದ ನವ ಜೋಡಿಗಳು ಮದುವೆಗೂ ಮುಂಚೆ ಮತಗಟ್ಟೆಗೆ ಆಗಮಿಸಿ ತಮ್ಮ ಮತದಾನದ ಹಕ್ಕನ್ನ ಚಲಾಯಿಸುವುದರ ಮೂಲಕ ಸುದ್ದಿಯಾಗಿದ್ದಾರೆ.

    ಮತದಾನ ಮಾಡಲು ಹಿಂದೇಟು ಹಾಕುವವರಿಗೆ ಈ ವಧು-ವರ ಮಾದರಿಯಾಗಿದ್ದಾರೆ. ಗುಜರಾತಿನ ಭರೂಚ್ ಜಿಲ್ಲೆಯಲ್ಲಿ ಇಂದು ಈ ಜೋಡಿಯ ಮದುವೆ ನಿಶ್ಚಯವಾಗಿತ್ತು. ಆದ್ರೆ ಮದುವೆಗೂ ಮುನ್ನ ವಧು ವರ ಬಹುಮಲಿ ಕಟ್ಟಡದಲ್ಲಿನ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಇನ್ನೂ ವಿಶೇಷವೆಂದರೆ ವಧು-ವರರು ಮದುವೆಯ ಬಟ್ಟೆಯಲ್ಲೇ, ಕೈ ಕೈ ಹಿಡಿದು ಜೊತೆಯಾಗಿ ಬಂದು ಮತ ಚಲಾಯಿಸಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.

    ಈ ಜೋಡಿ ಮತದಾನ ಮಾಡಿ ಬಳಿಕ ಮಾತನಾಡಿದ್ದು, “ಇಂದು ನಾನು ಮದುವೆಯಾಗುತ್ತಿದ್ದೇನೆ. ಆದರೆ ಇದು ದೊಡ್ಡ ಚುನಾವಣೆಯಾಗಿರುವುದರಿಂದ, ನಾನು ಇಲ್ಲಿಗೆ ಬಂದು ಮತ ಚಲಾಯಿಸಿದ್ದೇನೆ. ಭಾರತದ ಪ್ರಜೆಯಾಗಿ ಮತ ಚಲಾಯಿಸುವುದು ನನ್ನ ಕರ್ತವ್ಯ ಮತ್ತು ಜವಾಬ್ದಾರಿ” ಎಂದು ವರ ಹೇಳಿದರು.

    ನನ್ನ ಮದುವೆ ದಿನವೇ ಮತ ಚಲಾಯಿಸಿರುವುದು ಸಂತೋಷವಾಗಿದೆ. ಇದರಿಂದ ನಮ್ಮ ಮದುವೆಯ ದಿನ ಮತ್ತಷ್ಟು ವಿಶೇಷ ಎನಿಸಿದೆ ಎಂದು ವಧು ಖುಷಿಯನ್ನು ಹಂಚಿಕೊಂಡರು.

    ಗುಜರಾತ್‍ನ ಒಟ್ಟು 182 ಕ್ಷೇತ್ರಗಳಲ್ಲಿ ದಕ್ಷಿಣ ಗುಜರಾತ್, ಕಚ್ ಹಾಗೂ ಸೌರಾಷ್ಟ್ರದಲ್ಲಿ 89 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ರಾಜ್ಯದ ಉಳಿದ ಭಾಗಗಳಲ್ಲಿ 93 ಸ್ಥಾನಗಳಿಗೆ ಡಿಸೆಂಬರ್ 14 ರಂದು ಮತದಾನ ನಡೆಯಲಿದೆ. ಡಿಸೆಂಬರ್ 18 ರಂದು ಮತ ಎಣಿಕೆ ನಡೆಯಲಿದೆ.

  • ಗುಜರಾತ್ ವಿಧಾನಸಭಾ ಚುನಾವಣೆ – ಇಂದು ಮೊದಲ ಹಂತದ ಮತದಾನ

    ಗುಜರಾತ್ ವಿಧಾನಸಭಾ ಚುನಾವಣೆ – ಇಂದು ಮೊದಲ ಹಂತದ ಮತದಾನ

    ಅಹಮದಾಬಾದ್: ಗುಜರಾತ್ ವಿಧಾನ ಸಭಾ ಚುನಾವಣೆಗೆ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಮತದಾನ ಶುರುವಾಗಿದೆ.

    ಒಟ್ಟು 182 ಕ್ಷೇತ್ರಗಳಲ್ಲಿ ದಕ್ಷಿಣ ಗುಜರಾತ್, ಕಚ್ ಹಾಗೂ ಸೌರಾಷ್ಟ್ರದಲ್ಲಿ 89 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ರಾಜ್ಯದ ಉಳಿದ ಭಾಗಗಳಲ್ಲಿ 93 ಸ್ಥಾನಗಳಿಗೆ ಡಿಸೆಂಬರ್ 14ರಂದು ಮತದಾನ ನಡೆಯಲಿದೆ. ಡಿಸೆಂಬರ್ 18 ರಂದು ಮತ ಎಣಿಕೆ ನಡೆಯಲಿದೆ.

    ಇದನ್ನೂ ಓದಿ: ಗುಜರಾತ್ ನಲ್ಲಿ ಮೋದಿ ಸೋತರೆ ಉದ್ಯಮಗಳ ಮೇಲೆ ಆಗೋ ಪರಿಣಾಮಗಳೇನು?

    ಮೊದಲ ಹಂತದ ಮತದಾನದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರೋ ಪ್ರಧಾನಿ ಮೋದಿ, ದಾಖಲೆ ಸಂಖ್ಯೆಯಲ್ಲಿ ಜನರು ಬಂದು ಮತದಾನದಲ್ಲಿ ಭಾಗವಹಿಸಬೇಕು. ಅದರಲ್ಲೂ ಯುವ ಜನಾಂಗ ತಮ್ಮ ಮತದಾನದ ಹಕ್ಕು ಚಲಾಯಿಸಬೇಕೆಂದು ಕೇಳುತ್ತೇನೆ ಎಂದಿದ್ದಾರೆ.

    ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಈ ಹಬ್ಬವನ್ನು ಯಶಸ್ವಿಗೊಳಿಸುವಂತೆ ಗುಜರಾತ್ ಜನತೆಗೆ ಕೇಳಿಕೊಳ್ಳುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

    ಸಿಎಂ ವಿಜಯ್ ರೂಪಾನಿ ರಾಜ್‍ಕೋಟ್‍ನಲ್ಲಿ ಮತದಾನ ಮಾಡಿದ್ದಾರೆ. ಪಶ್ಚಿಮ ರಾಜ್‍ಕೋಟ್‍ನಿಂದ ಕಾಂಗ್ರೆಸ್‍ನ ಇಂದ್ರಾಣಿಲ್ ರಾಜ್ಯಗುರು ವಿರುದ್ಧ ವಿಜಯ್ ರೂಪಾನಿ ಸ್ಪರ್ಧಿಸುತ್ತಿದ್ದಾರೆ.

    ಇದನ್ನೂ ಓದಿ: ಮತ್ತೆ ಗುಜರಾತ್‍ನಲ್ಲಿ ಕಮಲ ಅರಳೋದು ಖಚಿತ! ಯಾವ ಸಮೀಕ್ಷೆ ಏನು ಹೇಳಿದೆ?

    ಇದನ್ನೂ ಓದಿ: ಸಮೀಕ್ಷೆಗಳು ಏನೇ ಹೇಳಲಿ ಗುಜರಾತ್‍ನಲ್ಲಿ ಗೆಲ್ಲೋದು ನಾವೇ: ಕೈ ಆತ್ಮವಿಶ್ವಾಸಕ್ಕೆ ಕಾರಣ ಏನು?

    ಮೋದಿ ತವರಿನಲ್ಲಿ 22 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದ್ದು, ಈ ಬಾರಿಯ ಚುನಾವನೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ವ್ಯಾಪಕ ಪ್ರಚಾರ ನಡೆಸಿದೆ. ಇದರಿಂದ ಎರಡೂ ಪಕ್ಷಗಳಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ.

  • ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪರಿಂದ ಎರಡೆರಡು ಕಡೆ ಮತದಾನ- ಪದ್ಮನಾಭ ರೆಡ್ಡಿ ಆರೋಪ

    ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪರಿಂದ ಎರಡೆರಡು ಕಡೆ ಮತದಾನ- ಪದ್ಮನಾಭ ರೆಡ್ಡಿ ಆರೋಪ

    ಬೆಂಗಳೂರು: ಬಳ್ಳಾರಿ ಪಾಲಿಕೆ ಮೇಯರ್-ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ಅಕ್ರಮ ಮತದಾನ ಮಾಡಿದ್ದಾರೆ ಅನ್ನೋದಾಗಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ.

    ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ ಅವರು ಕಳೆದ ಸೆಪ್ಟೆಂಬರ್‍ನಲ್ಲಿ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್- ಉಪಮೇಯರ್ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಬೆಂಗಳೂರಿನ ವಿಳಾಸಕ್ಕೆ ವರ್ಗಹಿಸಿಕೊಂಡಿದ್ರು. ಮಾತ್ರವಲ್ಲ ಬಿಬಿಎಂಪಿ ಮೇಯರ್- ಉಪಮೇಯರ್ ಚುನಾವಣೆಯಲ್ಲಿ ಮತದಾನ ಸಹ ಮಾಡಿದ್ರು.

    ಇದೀಗ ಬಳ್ಳಾರಿ ಪಾಲಿಕೆಯಲ್ಲಿಯೂ ಮೇಯರ್-ಉಪಮೇಯರ್ ಆಯ್ಕೆಗೆ ಮತದಾನ ಮಾಡಿದ್ದಾರೆ. ಈ ಮೂಲಕ ಜನ ಪ್ರತಿನಿಧಿಯಾದವರು ಎರಡೆರೆಡು ಕಡೆ ಅಕ್ರಮ ಮತದಾನ ಮಾಡಿದ್ದು, ಚುನವಣಾ ಆಯೋಗ ಅಲ್ಲಂ ಪ್ರಭು ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಪದ್ಮನಾಭ ರೆಡ್ಡಿ ಆಗ್ರಹಿಸಿದ್ರು.

     

  • ರಷ್ಯಾದ 2018ರ ಅಧ್ಯಕ್ಷೀಯ ಚುನಾವಣೆಗೆ ಭಾರತದ ಇವಿಎಂ ತಂತ್ರಜ್ಞಾನ ಬೇಕಂತೆ

    ರಷ್ಯಾದ 2018ರ ಅಧ್ಯಕ್ಷೀಯ ಚುನಾವಣೆಗೆ ಭಾರತದ ಇವಿಎಂ ತಂತ್ರಜ್ಞಾನ ಬೇಕಂತೆ

    ನವದೆಹಲಿ: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾದ ಎಲೆಕ್ಟ್ರಾನಿಕ್ ಓಟಿಂಗ್ ಮಷೀನ್(ಇವಿಎಂ)ಗಳಲ್ಲಿ ಲೋಪವಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಹೊತ್ತಲ್ಲೇ ರಷ್ಯಾ ಭಾರತದ ಇವಿಎಂ ತಂತ್ರಜ್ಞಾನವನ್ನ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಸಲು ಇಚ್ಛಿಸಿದೆ.

    2018ರ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ರಷ್ಯಾ, ಇವಿಎಂಗಳ ಮೂಲಕ ಚುನಾವಣೆಯನ್ನು ಅನಾಯಾಸವಾಗಿ ನಡೆಸುವ ಭಾರತದ ಅನುಭವದಿಂದ ಕಲಿಯಲು ಆಸಕ್ತಿ ತೋರಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

    ರಷ್ಯಾದ ಚುನಾವಣಾ ಆಯೋಗದ ಉಪಾಧ್ಯಕ್ಷರಾದ ನಿಕೋಲೈ ಲೆವಿಚೆವ್ ಇವಿಎಂ ಮೂಲಕ ಓಟಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತೆ ಅನ್ನೋದನ್ನ ಅರ್ಥಮಾಡಿಕೊಳ್ಳಲು ಫೆಬ್ರವರಿಯಲ್ಲಿ ಉತ್ತರಾಖಂಡ್‍ಗೆ ಭೇಟಿ ನೀಡಿದ್ದರು. ಅಲ್ಲದೆ ಉತ್ತರಪ್ರದೇಶ, ಪಂಜಾಬ್, ಮಣಿಪುರ ಮತ್ತು ಗೋವಾದಲ್ಲೂ ಚುನಾವಣಾಯನ್ನ ವೀಕ್ಷಿಸಿದ್ದು, ಇವಿಎಂ ವ್ಯವಸ್ಥೆಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಮಾನವನ ಪಾತ್ರ ಕಡಿಮೆ ಇರೋದನ್ನ ನೋಡಿ ಪ್ರಭಾವಿತರಾಗಿದ್ದಾರೆ ಎಂದು ವರದಿಯಾಗಿದೆ.

    ಲೆವಿಚೆವ್ ಅವರು ದೆಹಲಿಯಲ್ಲಿ ಹಿರಿಯ ಅಧಿಕಾರಿಗಳನ್ನ ಭೇಟಿ ಮಾಡಿ, ಇವಿಎಂ ತಂತ್ರಜ್ಞಾನ ಹಾಗೂ ಅದರ ಬಳಕೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದಕ್ಕೆ ಪ್ರತಿಯಾಗಿ ರಷ್ಯಾ ಮತ ಎಣಿಕೆಗೆ ಆಧುನಿಕ ಟ್ಯಾಬುಲೇಷನ್ ಪದ್ಧತಿಯನ್ನ ಅಭಿವೃದ್ಧಿಪಡಿಸಲು ಭಾರತಕ್ಕೆ ನೆರವಾಗಲಿದೆ ಎಂದು ವರದಿಯಾಗಿದೆ.

    ಮಿತ್ರರಾಷ್ಟ್ರಗಳು ಭಾರತದ ಚುನಾವಣಾ ಆಯೋಗದ ನೆರವು ಕೇಳ್ತಿರೋದು ಇದೇ ಮೊದಲೇನಲ್ಲ. 2014ರಲ್ಲಿ ಅಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣಾ ಸಂದರ್ಭದಲ್ಲಿ ಮತದಾರರ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ ಬ್ಯಾಲೆಟ್ ಪೇಪರ್ ಕೊರತೆ ಉಂಟಾಗಿತ್ತು. ಆಗ ಭಾರತ ಹೆಚ್ಚುವರಿ ಬ್ಯಾಲೆಟ್ ಪೇಪರನ್ನ ಕಾಬುಲ್‍ಗೆ ಪೂರೈಕೆ ಮಾಡಿತ್ತು. ಭಾರತದಲ್ಲಿ 1999ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಎವಿಎಂ ಬಳಕೆ ಮಾಡಲಾಯ್ತು.

    ಮಧ್ಯಪ್ರದೇಶದ ಇವಿಎಂನಲ್ಲಿ ಲೋಪವಾಗಿದೆ ಎಂದು ತೋರಿಸಿ ದೇಶದೆಲ್ಲಡೆ ಸಂಚಲನಕ್ಕೆ ಕಾರಣವಾದ ವಿಡಿಯೋವೊಂದು ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ  ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ನಡೆಯಲಿರುವ ಎರಡು ಉಪಚುನಾವಣೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ) ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಈ ವ್ಯವಸ್ಥೆಯಲ್ಲಿ ವೋಟ್ ಹಾಕಿದ 7 ಸೆಕೆಂಡ್ ಬಳಿಕ ಮತದಾರರ ಕೈಗೆ ಒಂದು ಪೇಪರ್ ಬರುತ್ತೆ. ಇದರಲ್ಲಿ ವೋಟ್ ಯಾರಿಗೆ ಬಿದ್ದಿದೆ ಎನ್ನುವುದನ್ನು ನೋಡಿಕೊಳ್ಳಬಹುದು. ಆದರೆ ಈ ಪೇಪರನ್ನು ಬೂತ್‍ನಿಂದ ಹೊರಗಡೆ ತೆಗೆದುಕೊಂಡು ಹೋಗುವಂತಿಲ್ಲ. ನಾನು ಹಾಕಿರುವ ಅಭ್ಯರ್ಥಿಗೆ ಮತ ಬಿದ್ದಿದೆಯೋ ಇಲ್ಲವೋ ಎನ್ನುವುದನ್ನು ಖಚಿತ ಪಡಿಸಿ ಅಲ್ಲೇ ಇರುವ ಪೆಟ್ಟಿಗೆಯ ಒಳಗಡೆ ಚೀಟಿಯನ್ನು ಹಾಕಬೇಕಾಗುತ್ತದೆ. ಇವಿಎಂ ಬಗ್ಗೆ ಹಲವು ಮಂದಿ ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು ಅಳವಡಿಸುವಂತೆ ಚುನವಣಾ ಆಯೋಗಕ್ಕೆ ಕಳೆದ ವರ್ಷ ಸಲಹೆ ನೀಡಿತ್ತು.

    ಇದನ್ನೂ ಓದಿ: ಇವಿಎಂ ಪರೀಕ್ಷೆ ವೇಳೆ ಎಸ್‍ಪಿಗೆ ಹಾಕಿದ ಮತ ಬಿಜೆಪಿಗೆ: ಕಾಂಗ್ರೆಸ್ ಗಂಭೀರ ಆರೋಪ

  • ಉತ್ತರಪ್ರದೇಶದಲ್ಲಿ ಇಂದು ಮೊದಲ ಹಂತದ ಮತದಾನ

    ಲಕ್ನೋ: ಉತ್ತರ ಪ್ರದೇಶದಲ್ಲಿ 7 ಹಂತಗಳ ಚುನಾವಣೆ ಇಂದಿನಿಂದ ಶುರುವಾಗ್ತಿದೆ.

    ಮೊದಲ ಹಂತದ ಮತದಾನದಲ್ಲಿ ಇಂದು 73 ವಿಧಾನಸಭಾ ಕ್ಷೇತ್ರಗಳಲ್ಲಿ 2.6ಕೋಟಿಗೂ ಹೆಚ್ಚು ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಶಾಮ್ಲಿ, ಮುಝಾಫರ್‍ನಗರ್, ಭಾಗ್‍ಪತ್, ಮೀರತ್, ಘಜಿಯಾಬಾದ್, ಗೌತಮ್ ಬುದ್ಧ ನಗರ್, ಹಾಪುರ್, ಬುಲಂದ್‍ಶಹರ್, ಆಲಿಘರ್, ಮಥುರಾ, ಹತ್ರಾಸ್, ಆಗ್ರಾ, ಫಿರೋಝಾಬಾದ್, ಇಟಾ ಹಾಗೂ ಕಾಸ್‍ಗಂಜ್ ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ.

    ಈ ಬಾರಿ ಬಿಜೆಪಿ, ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೃತ್ರಿ ಹಾಗೂ ಬಿಎಸ್‍ಪಿ ನಡುವೆ ನೇರ ಹಣಾಹಣಿ ಇರಲಿದೆ ಎಂದು ಹೇಳಲಾಗಿದೆ. ಇನ್ನು ಇದೇ ಮೊದಲ ಬಾರಿ ಚುನಾವಣಾ ಪ್ರಚಾರ ಅಖಾಡಕ್ಕೆ ಧುಮಕಲಿರುವ ಪ್ರಿಯಾಂಕಾ ಗಾಂಧಿ, ಫೆಬ್ರವರಿ 13ರಿಂದ ಅಮೇಥಿ ಹಾಗೂ ರಾಯ್ ಬರೇಲಿಯಲ್ಲಿ ಸಹೋದರ ರಾಹುಲ್ ಜೊತೆ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

    ಮುಂದಿನ 6 ಹಂತದ ಮತದಾನ ಫೆಬ್ರವರಿ 15, 19,23 ಹಾಗೂ 27 ಮತ್ತು ಮಾರ್ಚ್ 4 ಹಾಗೂ 8ರಂದು ನಡೆಯಲಿದೆ