Tag: ಮತದಾನ

  • ಹೆಲ್ಮೆಟ್ ಹಾಕಿದ್ರೆ ತಲೆ ಉಳಿಯುತ್ತೆ, ಮತ ಹಾಕಿದ್ರೆ ದೇಶ ಉಳಿಯುತ್ತೆ- ಸಿದ್ದಗಂಗಾ ಕಿರಿಯ ಶ್ರೀಗಳಿಂದ ಮತದಾನದ ಜಾಗೃತಿ

    ಹೆಲ್ಮೆಟ್ ಹಾಕಿದ್ರೆ ತಲೆ ಉಳಿಯುತ್ತೆ, ಮತ ಹಾಕಿದ್ರೆ ದೇಶ ಉಳಿಯುತ್ತೆ- ಸಿದ್ದಗಂಗಾ ಕಿರಿಯ ಶ್ರೀಗಳಿಂದ ಮತದಾನದ ಜಾಗೃತಿ

    ತುಮಕೂರು: ಮತದಾನ ನಮ್ಮ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕು. ಅದನ್ನು ಯಾವುದೇ ಕಾರಣದಿಂದ ಕಳೆದುಕೊಳ್ಳಬಾರದು. ಮತದ ಪಾವಿತ್ರತೆಯನ್ನು ಕಾಪಾಡಿಕೊಳ್ಳಿ ಎಂದು ಸಿದ್ದಗಂಗಾ ಕಿರಿಯ ಶ್ರೀಗಳು ಸಾರ್ವಜನಿಕರಲ್ಲಿ ಮನವಿ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

    ಕುಣಿಗಲ್ ನ ಕೆಂಪನಹಳ್ಳಿಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ದಯವಿಟ್ಟು ಯಾರೂ ಮನೆಯಲ್ಲಿ ಕೂರದೇ ಕಡ್ಡಾಯವಾಗಿ ಮತಗಟ್ಟೆಗೆ ಹೋಗಿ ತಮಗೆ ಇಚ್ಛೆ ಬಂದ ಅಭ್ಯರ್ಥಿಗೆ ಮತದಾನ ಮಾಡಿ. ಉತ್ತಮ ನಾಯಕನನ್ನು ಆಯ್ಕೆ ಮಾಡುವುದು ಪ್ರಜೆಗಳಾಗಿ ನಮ್ಮ ಮೇಲೆ ಇರುವ ಜವಾಬ್ದಾರಿ ಎಂದು ಭಕ್ತರಲ್ಲಿ ವಿನಂತಿ ಮಾಡಿಕೊಂಡರು.

    ಹೆಲ್ಮೆಟ್ ಹಾಕಿದರೆ ತಲೆ ಉಳಿಯುತ್ತೆ ಮತ ಹಾಕಿದರೆ ದೇಶ ಉಳಿಯುತ್ತೆ ಎಂದು ಹೇಳುತ್ತಾರೆ. ಉತ್ತಮ ನಾಯಕನನ್ನು ಆಯ್ಕೆ ಮಾಡುವುದು ಪ್ರಜೆಗಳಾದ ನಮ್ಮ ಮೇಲೆ ಇರುವ ಜವಾಬ್ದಾರಿ. ಮತದಾನ ಮಾಡುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿ ಎಂದು ಹೇಳಿದರು.

    ತಾನೂ ಪ್ರತೀ ನಿತ್ಯ ಬಾಗಿಯಾಗುವ ಎಲ್ಲಾ ವೇದಿಕೆಯಲ್ಲಿ ಸಿದ್ದಲಿಂಗಸ್ವಾಮಿಗಳು ಮತದಾನದ ಮಹತ್ವದ ಕುರಿತು ಅರಿವು ಮೂಡಿಸುತಿದ್ದಾರೆ.

  • ಅಮಿತ್ ಶಾ ಅರಮನೆ ಭೇಟಿ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ: ಯದುವೀರ್ ಒಡೆಯರ್

    ಅಮಿತ್ ಶಾ ಅರಮನೆ ಭೇಟಿ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ: ಯದುವೀರ್ ಒಡೆಯರ್

    ಬೆಂಗಳೂರು: ಮೇ 12ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಿ ಎಂದು ಮೈಸೂರಿನ ಒಡೆಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತದಾರರಲ್ಲಿ ಮನವಿ ಮಾಡಿದ್ದಾರೆ.

    ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅರಮನೆ ಭೇಟಿ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ. ಎಲ್ಲಾ ಪಕ್ಷದವರೊಂದಿಗೆ ನಮಗೆ ಉತ್ತಮ ಭಾಂದವ್ಯ ಇದೆ. ರಾಜಕೀಯ ನಾಯಕರು ಅರಮನೆಗೆ ಭೇಟಿ ನೀಡಿದ್ದರು. ಅದು ವೈಯಕ್ತಿಕ ವಿಚಾರ ಎಂದು ತಿಳಿಸಿದರು.

    ಇನ್ನೂ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ ಅವರು, ನನಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಇಲ್ಲ. ನಾನು ಚುನಾವಣೆಯಿಂದ ದೂರ ಇರುತ್ತೇನೆ ಎಂದು ತಿಳಿಸಿದರು.

  • ಗಮನಿಸಿ, ಮತದಾನದ ಅವಧಿ 1 ಗಂಟೆ ವಿಸ್ತರಣೆ

    ಗಮನಿಸಿ, ಮತದಾನದ ಅವಧಿ 1 ಗಂಟೆ ವಿಸ್ತರಣೆ

    ಬೆಂಗಳೂರು: ಮೇ 12 ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಸಂಜೆ 6 ಘಂಟೆವರೆಗೂ ಮತದಾನಕ್ಕೆ ಅವಕಾಶ ಇರಲಿದೆ ಎಂದು ಸುದ್ದಿಗೋಷ್ಠಿ ನಡೆಸಿದ ರಾಜ್ಯ ಚುನಾವಣಾ ಆಯುಕ್ತ ಸಂಜೀವ್‍ಕುಮಾರ್ ಹೇಳಿದ್ದಾರೆ.

    ಬೆಳಗ್ಗೆ 7 ಘಂಟೆಯಿಂದ ಸಂಜೆ 6 ಘಂಟೆವರೆಗೂ ಮತದಾನಕ್ಕೆ ಅವಕಾಶ ಇರಲಿದೆ. ಈ ಹಿಂದಿನ ಚುನಾವಣೆಗಳಲ್ಲಿ ಸಂಜೆ 5 ಘಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯವಾಗುತಿತ್ತು ಎಂದು ತಿಳಿಸಿದರು.

    ಮತದಾನದ ಜಾಗೃತಿಗೆ ಸಾಹಿತಿ ಚಂದ್ರಶೇಖರ ಕಂಬಾರ, ನಟ ಪುನೀತ್, ನಟಿ ಪ್ರಣಿತ ಅವರನ್ನ ಚುನಾವಣಾ ರಾಯಭಾರಿಯಾಗಿ ಆಯ್ಕೆ ಮಾಡಿರೋದಾಗಿ ತಿಳಿಸಿದರು.

    ಇದುವರೆಗೆ 155 ನಾಮಪತ್ರ ಸಲ್ಲಿಕೆಯಾಗಿದೆ. ರಾಜ್ಯದ ವಿವಿಧೆಡೆ 34 ಕೋಟಿ ರೂ. ಹಣವನ್ನು ಸೀಜ್ ಮಾಡಲಾಗಿದೆ. ಇವತ್ತು ದೇವನಹಳ್ಳಿಯಲ್ಲಿ 52 ಲಕ್ಷ, ಹೂವಿನಹಡಗಲಿ ಬಳಿ 10 ಲಕ್ಷ ಮೌಲ್ಯದ ಬಂಗಾರ ಹಾಗೂ 1.58 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದ್ದಾರೆ.

  • ಮತ ಹಾಕಿದ್ರೆ 5 ವರ್ಷ ಡಿಸ್ಕೌಂಟ್ – ಗ್ರಾಹಕರಿಗೆ ಮೆಡಿಕಲ್ ಶಾಪ್ ಓನರ್ ಆಫರ್

    ಮತ ಹಾಕಿದ್ರೆ 5 ವರ್ಷ ಡಿಸ್ಕೌಂಟ್ – ಗ್ರಾಹಕರಿಗೆ ಮೆಡಿಕಲ್ ಶಾಪ್ ಓನರ್ ಆಫರ್

    ಬೆಂಗಳೂರು: ರಾಜ್ಯದಲ್ಲಿ ಚುನಾವಣೆಯ ರಂಗು ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಕಡೆ ಚುನಾವಣಾ ಆಯೋಗ ಶೇ.100 ರಷ್ಟು ಮತದಾನಕ್ಕೆ ನಾನಾ ರೀತಿಯ ಕಸರತ್ತು ಮಾಡುತ್ತಿದೆ. ಆದ್ರೆ ಮೆಡಿಕಲ್ ಶಾಪ್ ಮಾಲೀಕರೊಬ್ಬರು ಮತದಾನ ಹೆಚ್ಚಿಸಲು ತಮ್ಮದೇ ಆದ ರೀತಿಯಲ್ಲಿ ಪ್ರಚಾರ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

    ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಬಳಿಯ ಮೆಡಿಕಲ್ ಶಾಪ್ ಮಾಲೀಕ ಪ್ರಸಾದ್ ಮತದಾನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 15 ವರ್ಷಗಳಿಂದ ಮೆಡಿಕಲ್ ಶಾಪ್ ನಡೆಸುತ್ತಿರುವ ಪ್ರಸಾದ್ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಡಿಸ್ಕೌಂಟ್‍ನಲ್ಲಿ ಔಷಧಿ ನೀಡಲು ಹೊಸ ಐಡಿಯಾವನ್ನ ಮಾಡಿದ್ದಾರೆ. ರಾಜ್ಯ ಚುನಾವಣಾ ಅಧಿಕಾರಿಗಳು ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ, ಮತದಾನ ಮಾಡಿದವರಿಗೆ ಕೆಲ ಮಾಲ್‍ಗಳ ಜೊತೆ ಮಾತಾಡಿ ಶೇ.10 ಡಿಸ್ಕೌಂಟ್ ಕೊಡಿಸ್ತೀವಿ ಅಂತ ಹೇಳಿದ್ರು. ಈ ಸುದ್ದಿಯನ್ನು ಪೇಪರ್‍ನಲ್ಲಿ ಓದಿದ ಪ್ರಸಾದ್ ಕೂಡಲೇ ಮತದಾನ ಮಾಡಿ ಬರುವ ಪ್ರತಿ ಗ್ರಾಹಕರಿಗೆ ಶೇ.10 ಡಿಸ್ಕೌಂಟ್ ಘೋಷಣೆ ಮಾಡಿದ್ದಾರೆ.

    ಕೇವಲ ಡಿಸ್ಕೌಂಟ್ ಘೋಷಣೆ ಮಾಡಿ ಸುಮ್ಮನೆ ಆಗದ ಪ್ರಸಾದ್ ತಮ್ಮ ಮೆಡಿಕಲ್ ಶಾಪ್‍ಗೆ ಬರುವ ಪ್ರತಿ ಗ್ರಾಹಕರಿಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ನೀವು ಯಾರಿಗಾದ್ರು ಮತದಾನ ಮಾಡಿ. ಆದ್ರೆ ಕಡ್ಡಾಯವಾಗಿ ಮತದಾನ ಮಾಡಿ. ಅಷ್ಟೇ ಅಲ್ಲದೆ ಮತದಾನ ಮಾಡಿದ್ರೆ ಮುಂದಿನ 5 ವರ್ಷಗಳವರೆಗೆ ನಮ್ಮ ಶಾಪ್ ನಲ್ಲಿ ಶೇ.10 ಡಿಸ್ಕೌಂಟ್ ನೀಡ್ತೀನಿ ಅಂತ ತಮ್ಮ ಮೆಡಿಕಲ್ ಶಾಪ್‍ಗೆ ಬರುವ ಪ್ರತಿ ಗ್ರಾಹಕರಿಗೂ ಹೊಸ ಆಫರ್ ನೀಡುತ್ತಿದ್ದಾರೆ.

    ಒಟ್ಟಿನಲ್ಲಿ ಮತದಾನ ಮಾಡೋದಕ್ಕೆ ಹಿಂಜರಿಯುತ್ತಿರೋ ಇಂದಿನ ಜನರ ಮಧ್ಯೆ ಮತದಾನಕ್ಕಾಗಿ 10 ಪರ್ಸೆಂಟ್ ಡಿಸ್ಕೌಂಟ್ ನೀಡುತ್ತಿರುವ ಪ್ರಸಾದ್ ಉಳಿದವರಿಗೆ ಮಾದರಿಯಾಗಿದ್ದಾರೆ.

     

  • 224 ಕ್ಷೇತ್ರದ ಹೆಸರನ್ನು ತಪ್ಪಿಲ್ಲದಂತೆ ಹೇಳ್ತಾನೆ 6ರ ಪೋರ- ವಿಡಿಯೋ ನೋಡಿ

    224 ಕ್ಷೇತ್ರದ ಹೆಸರನ್ನು ತಪ್ಪಿಲ್ಲದಂತೆ ಹೇಳ್ತಾನೆ 6ರ ಪೋರ- ವಿಡಿಯೋ ನೋಡಿ

    ಶಿವಮೊಗ್ಗ: ಒಂದು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಹೇಳಲು ಬಹುತೇಕ ಮಂದಿ ಕಷ್ಟ ಪಡುತ್ತಾರೆ. ಆದ್ರೆ ಶಿವಮೊಗ್ಗದ ವಿನೋಬ ನಗರದ 6 ವರ್ಷದ ಇಂದ್ರಜಿತ್ ಒಂದೇ ಉಸಿರಿನಲ್ಲಿ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಕ್ರಮಬದ್ಧವಾಗಿ ಹೇಳುತ್ತಾನೆ.

    ವಿಧಾನಸಭಾ ಕ್ಷೇತ್ರ ಸಂಖ್ಯೆ ಒಂದು ನಿಪ್ಪಾಣಿಯಿಂದ ಆರಂಭಿಸಿ 224 ನೇ ಕ್ಷೇತ್ರವಾದ ಗುಂಡ್ಲುಪೇಟೆವರೆಗೆ ತಪ್ಪಿಲ್ಲದಂತೆ ಹೇಳುವ ಈ ಬಾಲಕ ಅದರೊಂದಿಗೆ ಎಲ್ಲರೂ ಮೇ 12ರಂದು ನಡೆಯುವ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುವಂತೆ ಮನವಿಯನ್ನೂ ಮಾಡಿದ್ದಾನೆ.

    ಶಿವಮೊಗ್ಗದ ರಾಯಲ್ ಡೈಮಂಡ್ ಶಾಲೆಯ ಒಂದನೇ ತರಗತಿ ಓದುತ್ತಿರುವ ಇಂದ್ರಜಿತ್ ನನ್ನು ಜಿಲ್ಲಾಧಿಕಾರಿ ಎಂ.ಲೋಕೇಶ್ ಅವರು ಜಿಲ್ಲೆಯ ಚುನಾವಣಾ ಜಾಗೃತಿ ಅಭಿಯಾನದ ಐಕಾನ್ ಆಗಿ ಈ ಪುಟ್ಟ ಪೋರ ಇಂದ್ರಜಿತ್ ನನ್ನು ಘೋಷಿಸಿದ್ದಾರೆ.

  • ಕರ್ನಾಟಕದಲ್ಲಿರುವ ತೆಲುಗು ಪ್ರಜೆಗಳು ಮೋದಿ ಪಕ್ಷಕ್ಕೆ ಮತ ಹಾಕ್ಬೇಡಿ: ಆಂಧ್ರ ಡಿಸಿಎಂ

    ಕರ್ನಾಟಕದಲ್ಲಿರುವ ತೆಲುಗು ಪ್ರಜೆಗಳು ಮೋದಿ ಪಕ್ಷಕ್ಕೆ ಮತ ಹಾಕ್ಬೇಡಿ: ಆಂಧ್ರ ಡಿಸಿಎಂ

    ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ಏರತೊಡಗಿದ್ದು, ಮೋದಿ ಪಕ್ಷಕ್ಕೆ ಮತ ಹಾಕಬೇಡಿ ಎಂದು ಆಂಧ್ರದ ಉಪ ಮುಖ್ಯಮಂತ್ರಿ ಬಹಿರಂಗವಾಗಿಯೇ ಕರೆ ನೀಡಿದ್ದಾರೆ.

    ಭಾನುವಾರವಷ್ಟೇ ತಮಿಳುನಾಡಿನ ನಾನ್ ತಮಿಳಿಯನ್ ಸಂಘಟನೆ ರಾಜ್ಯದಲ್ಲಿರುವ ತಮಿಳುಗರಿಗೆ ಬಿಜೆಪಿಗೆ ಮತ ನೀಡದಂತೆ ಕರೆ ನೀಡಿತ್ತು. ಇದರ ಬೆನ್ನಲ್ಲೇ ಇಂದು ಆಂಧ್ರ ಉಪ ಮುಖ್ಯಮಂತ್ರಿ ಕೆ.ಇ.ಕೃಷ್ಣಮೂರ್ತಿ ಯವರು ಮೋದಿ ವಿರುದ್ಧ ಮಾತನಾಡಿ, ಮೋದಿ ಪಕ್ಷವಾದ ಬಿಜೆಪಿಗೆ ಮತ ನೀಡಬೇಡಿ ಎಂದು ಕರ್ನಾಟಕದಲ್ಲಿ ನೆಲೆಸಿರುವ ತೆಲುಗು ಪ್ರಜೆಗಳಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಹಣಿಯಲು ರಾಜ್ಯ ಕಾಂಗ್ರೆಸ್‍ಗೆ `ಚಂದ್ರ’ದೆಸೆ!

    ಧಾರ್ಮಿಕ ಕಾರ್ಯನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಅವರು ವೈಟ್‍ಫೀಲ್ಡ್ ನ ಖಾಸಗಿ ಹೋಟೆಲ್‍ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ನಿರ್ಮಾಣ ಫಂಡ್, ಕಡಪ ಸ್ಟೀಲ್ ಬ್ರಿಡ್ಜ್, ವೈಜಾಕ್ ರೈಲ್ವೇ ಜೋನ್ ಯೋಜನೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ನೆರವೇರಿಸುವುದಾಗಿ ತಿರುಪತಿ ತಿಮ್ಮಪ್ಪನ ಸನ್ನಿದಾನದಲ್ಲಿ ತಿಳಿಸಿದ್ದರು. ಆದರೆ ಅವರು ನೀಡಿದ್ದ ಯಾವುದೇ ಭರವಸೆ ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿ ಹಣಿಯಲು ರಾಜ್ಯ ಕಾಂಗ್ರೆಸ್‍ಗೆ `ಚಂದ್ರ’ದೆಸೆ!

    ಯಾವುದೇ ಭರವಸೆಯನ್ನು ಈಡೇರಿಸದ ಕಾರಣ ಬಿಜೆಪಿ ಜೊತೆ ಸಮಿಶ್ರ ಮಾಡಿಕೊಂಡಿದ್ದ ತೆಲುಗು ದೇಶಂ ಪಾರ್ಟಿ ಎನ್‍ಡಿಎ ಒಕ್ಕೂಟದಿಂದ ಹೊರ ಬಂದಿದೆ. ಬಿಜೆಪಿ ಪಕ್ಷವನ್ನು ನಂಬಿ ತಾವು ಮೋಸ ಹೋದಂತೆ ಮತ್ತೆ ಯಾರೂ ಮೋಸ ಹೋಗಬಾರದೆಂದು ಹರಿಹಾಯ್ದಿದ್ದಾರೆ.

  • ಮತದಾನ ಜಾಗೃತಿ ಮೂಡಿಸುವ ಫಲಕದಲ್ಲಿ ಚುನಾವಣಾ ಅಧಿಕಾರಿಗಳಿಂದ ಎಡವಟ್ಟು

    ಮತದಾನ ಜಾಗೃತಿ ಮೂಡಿಸುವ ಫಲಕದಲ್ಲಿ ಚುನಾವಣಾ ಅಧಿಕಾರಿಗಳಿಂದ ಎಡವಟ್ಟು

    ಚಾಮರಾಜನಗರ: ಜನರಲ್ಲಿ ವಿಧಾನಸಭಾ ಚುನಾವಣೆಯ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಅಧಿಕಾರಿಗಳು ಚಾಮರಾಜನಗರದಲ್ಲಿ ಎಡವಟ್ಟೊಂದು ಮಾಡಿದ್ದಾರೆ.

    ಚಾಮರಾಜನಗರದಲ್ಲಿ 2014 ನೇ ಸಾಲಿನಲ್ಲಿ ನಡೆದ ಲೋಕಸಭಾ ಚುನಾವಣೆಯ ಪೋಸ್ಟರ್‍ಗಳನ್ನು ಬಳಸಿ ಕಡ್ಡಾಯ ಮತದಾನ ಮಾಡಿ ಎಂದು ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಅಬ್ದುಲ್ ಕಲಾಂ ಅವರು ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಆ ವೇಳೆ ಅಬ್ದುಲ್ ಕಲಾಂರ ಭಾವಚಿತ್ರದೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಭಾಗಿ ಆಗುವಂತೆ ಕೋರಲಾಗಿದ್ದ ಪೋಸ್ಟರ್ ಗಳು ಚಾಮರಾಜನಗರದಲ್ಲಿ ರಾರಾಜಿಸುತ್ತಿವೆ.

    ಈ ಬಾರಿಯ ವಿಧಾನಸಭಾ ಚುನಾವಣೆಯ ಬಗ್ಗೆ ಜನರಲ್ಲಿ ಮತದಾನ ಜಾಗೃತಿ ಮೂಡಿಸಲು ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ನೇಮಕ ಮಾಡಿಕೊಂಡಿದೆ. ಹೀಗಾಗಿ ಎಲ್ಲಾ ಜಿಲ್ಲೆಗಳಲ್ಲೂ ದ್ರಾವಿಡ್ ಅವರ ಭಾವ ಚಿತ್ರವನ್ನು ಹಾಕಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ಚುನಾವಣಾ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.

  • ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಇರುವ ಒಂದು ಲಾರಿ ಕುಕ್ಕರ್ ವಶಕ್ಕೆ!

    ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಇರುವ ಒಂದು ಲಾರಿ ಕುಕ್ಕರ್ ವಶಕ್ಕೆ!

    ಬೆಳಗಾವಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಅಮಿಷಗಳ ಸುರಿಮಳೆಯಾಗುತ್ತಿದೆ. ಮತದಾರರಿಗೆ ಹಂಚಲು ಲಾರಿಯಲ್ಲಿ ಸಾಗಿಸುತ್ತಿದ್ದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಇರುವ ಕುಕ್ಕರ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಮತದಾರರಿಗೆ ನೀಡಲು ಸಾಗಾಟ ಮಾಡುತ್ತಿದ್ದ ಕುಕ್ಕರ್ ಗಳ ಬಗ್ಗೆ ಬಿಜೆಪಿ ಮುಖಂಡ ಅನಿಲ್ ಬೆನಕೆ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಲಾರಿ ಸಮೇತ ಕುಕ್ಕರ್ ಗಳನ್ನು ವಶಕ್ಕೆ ಪಡೆದಿದ್ದಾರೆ.

    ಬೆಳಗಾವಿ ಜಿಲ್ಲಾಧಿಕಾರಿ ಮನೆ ಮುಂಭಾಗದಲ್ಲಿ ನಡೆದ ಘಟನೆ ವೇಳೆ ಬಿಜೆಪಿ ಮುಖಂಡ ಅನಿಲ್ ಬೆನಕೆ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನಾರಾಜ್ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಲಾರಿಯನ್ನು ತಡೆದು ವಶಕ್ಕೆ ಪಡೆದಿದ್ದಾರೆ.

    https://twitter.com/ShobhaBJP/status/980035106738880512

  • ಇವಿಎಂ ಬಗ್ಗೆ ಅಪಪ್ರಚಾರ, ಸುಳ್ಳು ಆರೋಪ ಮಾಡಿದ್ರೆ ಮಾನನಷ್ಟ ಕೇಸ್- ಚುನಾವಣಾ ಆಯೋಗ ಎಚ್ಚರಿಕೆ

    ಇವಿಎಂ ಬಗ್ಗೆ ಅಪಪ್ರಚಾರ, ಸುಳ್ಳು ಆರೋಪ ಮಾಡಿದ್ರೆ ಮಾನನಷ್ಟ ಕೇಸ್- ಚುನಾವಣಾ ಆಯೋಗ ಎಚ್ಚರಿಕೆ

    ಬೆಂಗಳೂರು: ಮಾಧ್ಯಮದಲ್ಲಿ ಸುಮ್ಮನೆ ಇವಿಎಮ್ ಮತ್ತು ವಿವಿಪ್ಯಾಟ್ ಬಗ್ಗೆ ಅಪಪ್ರಚಾರ ಮತ್ತು ಸುಖಾ ಸುಮ್ಮನೆ ಚರ್ಚೆ ಮಾಡಲಾಗುತ್ತಿದೆ. ಈ ರೀತಿಯಾಗಿ ಮಾಧ್ಯಮದಲ್ಲಿ ಚರ್ಚೆ ಮಾಡಿದ್ರೆ, ಸುಳ್ಳು ಆರೋಪ ಮಾಡಿದ್ರೆ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

    ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್, ಐದು ರಾಜ್ಯಗಳಿಂದ ಕರ್ನಾಟಕಕ್ಕೆ ಇವಿಎಂ ಯಂತ್ರಗಳು ಬಂದಿವೆ. ಗುಜರಾತ್, ಉತ್ತರಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ ದಿಂದ ಸುಮಾರು 85,600 ಇವಿಎಂಗಳು ಬಂದಿವೆ. ಅಲ್ಲಿ ಬಳಸಲಾಗಿರುವ ಇವಿಎಂ ಯಂತ್ರಗಳೇ ಇಲ್ಲಿಗೆ ಬಂದಿವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಬಳಸಿರುವ ಇವಿಎಂ ಗಳು ಕರ್ನಾಟಕಕ್ಕೆ ಬಂದಿವೆ ಎಂಬ ಅನುಮಾನದ ಗ್ರಹಿಕೆ ಬೇಡ. ಇದರ ಬಗ್ಗೆ ತಪ್ಪು ಮಾಹಿತಿ ಹರಡಿದ್ರೆ ಕ್ರಿಮಿನಲ್ ಸ್ವರೂಪದ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಹೇಳಿದ್ರು.

    ಕರ್ನಾಟಕಕ್ಕೆ ಯಾವುದೋ ಒಂದು ರಾಜ್ಯದಿಂದ ಇವಿಎಂ ಯಂತ್ರ ಬಂದಿಲ್ಲ. ಐದು ರಾಜ್ಯಗಳಿಂದ ಇವಿಎಂ ಯಂತ್ರ ಗಳು ಬಂದಿವೆ. ಈ ರೀತಿ ಬಿಂಬಿಸುವುದು ಬೇಡ ಅಂತಾ ಚುನಾವಣಾ ಆಯೋಗ ಮನವಿ ಮಾಡಿದೆ. ಬೆಂಗಳೂರು ಸೇರಿದಂತೆ ಹಲವು ಕಡೆ ಹೊಸ ಇವಿಎಂ ಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಸಂಜೀವ್ ಕುಮಾರ್ ತಿಳಿಸಿದ್ದಾರೆ.

    ರಾಜ್ಯ ಚುನಾವಣೆಗಾಗಿ ಈ ಬಾರಿ ಒಟ್ಟು 73,850 ವಿವಿಪ್ಯಾಟ್ ಗಳನ್ನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲಿ 56,290 ಹೊಸ ವಿವಿಪ್ಯಾಟ್ ಗಳನ್ನ ಬಿಇಎಲ್ ನಿಂದ ಈಗಾಗಲೇ ತರಲಾಗಿದೆ. ಇನ್ನುಳಿದ 17,560 ವಿವಿಪ್ಯಾಟ್ ಗಳನ್ನ ಬಿಇಎಲ್ ಮತ್ತು ಗುಜರಾತ್ ನಿಂದ ತರಿಸಲಾಗುತ್ತದೆ. 13,000 ಗುಜರಾತ್ ನಿಂದ ಮತ್ತು 4 ಸಾವಿರ ಬಿಇಎಲ್ ನಿಂದ ತರಲಾಗುತ್ತದೆ. ಚುನಾವಣೆಗೆ 85,170 ಬಿಯು(ಬ್ಯಾಲೆಟ್ ಯುನಿಟ್) ಬೇಕಿದ್ದು, 70,190 ಬಿಯು ರಾಜ್ಯಕ್ಕೆ ಬಂದಿದೆ. ಸಿಯು(ಕಂಟ್ರೋಲ್ ಯುನಿಟ್) 70990 ಬೇಕಿದ್ದು, ಅದರಲ್ಲಿ 52110 ಸಿಯು ರಾಜ್ಯಕ್ಕೆ ಬಂದಿದೆ. ಒಟ್ಟು 5 ರಾಜ್ಯದಿಂದ ಮೆಷೀನ್ ಗಳು ಬರುತ್ತಿವೆ ಎಂದು ತಿಳಿಸಿದ್ರು.

    ಮಾಧ್ಯಮದಲ್ಲಿ ಸುಮ್ಮನೆ ಇವಿಎಮ್ ಮತ್ತು ವಿವಿಪ್ಯಾಟ್ ಬಗ್ಗೆ ಅಪಪ್ರಚಾರ ಮತ್ತು ಸುಖಾ ಸುಮ್ಮನೆ ಚರ್ಚೆ ಮಾಡಲಾಗುತ್ತಿದೆ. ಈ ರೀತಿಯಾಗಿ ಮಾಧ್ಯಮದಲ್ಲಿ ಚರ್ಚೆ ಮಾಡಿದ್ರೆ, ಸುಳ್ಳು ಆರೋಪ ಮಾಡಿದ್ರೆ ಮಾನನಷ್ಟ ಕೇಸ್ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ರು.

    ಈವರೆಗೆ 30 ಕೋಟಿ ರೂ. ಹಣ ಖರ್ಚು: ಈ ಬಾರಿ ವಿವಿಪ್ಯಾಟ್ ಗಳನ್ನ ಬಳಕೆ ಮಾಡುತ್ತಿರುವುದರಿಂದ ಮ್ಯಾನ್ ಪವರ್ ಹೆಚ್ಚು ಬೇಕು. 25% ಹೆಚ್ಚಿನ ಸಿಬ್ಬಂದಿ ಬೇಕಾಗುತ್ತದೆ. ಕಳೆದ ಬಾರಿ ಪೋಲಿಸರನ್ನ ಹೊರತುಪಡಿಸಿ 2.75 ಲಕ್ಷ ಸಿಬ್ಬಂದಿಯನ್ನ ಬಳಸಲಾಗಿತ್ತು. ಆದ್ರೆ ಈ ಬಾರಿ 3.25 ಲಕ್ಷ ಸಿಬ್ಬಂದಿಯನ್ನ ಬಳಸಲಾಗುತ್ತದೆ. ಇಲ್ಲಿಯವರೆಗೆ 30 ಕೋಟಿ ಹಣವನ್ನ ಖರ್ಚು ಮಾಡಲಾಗಿದೆ. ಒಂದು ಕ್ಷೇತ್ರಕ್ಕೆ 1.14 ಕೋಟಿ ಹಣದಂತೆ 224 ಕ್ಷೇತ್ರಕ್ಕೆ ಖರ್ಚಾಗಬಹುದು ಎಂದು ಸಂಜೀವ್ ಕುಮಾರ್ ಹೇಳಿದ್ರು.

    ತಪ್ಪು ಆಕ್ಷೇಪಣೆ ಸಲ್ಲಿಸಿದ್ರೆ ಕ್ರಮ: ಮತ ಚಲಾಯಿಸುವುದರ ಬಗ್ಗೆ ಅನುಮಾನ ವಿಚಾರವಾಗಿ ಮಾತನಾಡಿದ ಅವರು, ಮತ ಚಲಾಯಿಸಿದ ಮೇಲೆ ಮತ ಬೇರೆಯವರಿಗೆ ಹೋಗಿದೆ ಎಂದು ಅನುಮಾನ ಬಂದ್ರೆ ಆ ಮತದಾರ ಆಕ್ಷೇಪಣೆ ಸಲ್ಲಿಸಬಹುದು. ಆಕ್ಷೇಪಣೆಯಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಿಲ್ಲ ಅಂದ್ರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮತದಾನ ಮಾಡಿದ ನಂತರ ಮತದಾರ ಪರಿಶೀಲನೆ ಮಾಡಬಹುದು. ಯಾರಿಗೆ ಮತ ಚಲಾಯಿಸಿದ್ದೇವೆಂದು 7 ಸೆಕೆಂಡ್‍ಗಳ ಕಾಲ ವೀಕ್ಷಿಸಬಹುದು ಎಂದು ಹೇಳಿದ್ರು.

    ರಾಜ್ಯದಲ್ಲಿ ಒಟ್ಟು 4,96,56,059 ಮತದಾರರಿದ್ದಾರೆ. 4,552 ತೃತೀಯಲಿಂಗಿಗಳು, 2,51,79,219 ಪುರುಷರು ಹಾಗೂ 2,44,72,288 ಮಹಿಳಾ ಮತದಾರರಿದ್ದಾರೆ. 15.42 ಲಕ್ಷ ಹೊಸ ಮತದಾರರ ಸೇರ್ಪಡೆಯಾಗಿದೆ. ಶೃಂಗೇರಿ ಅತ್ಯಂತ ಕಡಿಮೆ ಮತದಾರರು ಹೊಂದಿರುವ ವಿಧಾನಸಭಾ ಕ್ಷೇತ್ರವಾಗಿದ್ದು, 1,62,108 ಮತದಾರರು ಇದ್ದಾರೆ. ಬೆಂಗಳೂರು ದಕ್ಷಿಣ ಅತೀ ಹೆಚ್ಚು ಮತದಾರರು ಹೊಂದಿರುವ ವಿಧಾನಸಭಾ ಕ್ಷೇತ್ರವಾಗಿದ್ದು, 5,81,408 ಮತದಾರರಿದ್ದಾರೆ. ಹಾಗೂ ಬೆಂಗಳೂರು ದಕ್ಷಿಣ ಅತೀ ಹೆಚ್ಚು ಮಹಿಳಾ ಮತದಾರರು ಹೊಂದಿರುವ ಕ್ಷೇತ್ರವಾಗಿದ್ದು, 2,69,878 ಮಹಿಳಾ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಫೆಬ್ರವರಿ 28ರಿಂದ ಪುನಃ ಮತದಾರರ ತಿದ್ದುಪಡಿ/ಸೇರ್ಪಡೆ ಮತ್ತು ತೆಗೆದುಹಾಕುವಿಕೆಗೆ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ರು.

  • ಕೋಲಾರದ ಈ ಗ್ರಾಮಸ್ಥರಿಗೆ ಬೇಕಿದೆ ಮತದಾನದ ಭಾಗ್ಯ

    ಕೋಲಾರದ ಈ ಗ್ರಾಮಸ್ಥರಿಗೆ ಬೇಕಿದೆ ಮತದಾನದ ಭಾಗ್ಯ

    ಕೋಲಾರ: ಪ್ರತಿಯೊಬ್ಬ ಭಾರತೀಯ ಪ್ರಜೆ 18 ವರ್ಷ ತುಂಬಿದ ನಂತರ ಮತದಾನದ ಹಕ್ಕನ್ನ ಪಡೆಯುತ್ತಾರೆ. ಅದಕ್ಕಾಗಿ ಚುನಾವಣಾ ಆಯೋಗ ಕೋಟ್ಯಾಂತರ ರೂಪಾಯಿ ವ್ಯಯ ಮಾಡುತ್ತಿದೆ. ಆದ್ರೆ ಕೋಲಾರದ ಆ ಹಳ್ಳಿಯಲ್ಲಿ ಆಧಾರ್, ಪಡಿತರ, ಜಮೀನು, ಬಂಧು ಬಳಗ ಎಲ್ಲಾ ಇದ್ರು ಮತದಾರರ ಪಟ್ಟಿಗೆ ಸೇರಿಸಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ರಾಜ್ಯದಲ್ಲಿ 2018 ರ ವಿಧಾನಸಭೆ ಚುನಾವಣೆ ಕಾವು ಸಮೀಪಿಸುತ್ತಿದ್ದು, ಚುನಾವಣಾ ಆಯೋಗ ಕೂಡ ಸಾಕಷ್ಟು ತಯಾರಿಗಳನ್ನ ಮಾಡಿಕೊಳ್ಳುತ್ತಿದೆ. ಮತದಾನ ಪಟ್ಟಿಯಿಂದ ಹಿಡಿದು ಸಾರ್ವತ್ರಿಕ ಚುನಾವಣೆ ಸಿದ್ದತೆಯಲ್ಲಿದೆ. ಆದ್ರೆ ಕೋಲಾರ ತಾಲೂಕಿನ ಮಂಜಿಲಿ ಗ್ರಾಮದಲ್ಲಿ ಬಹುತೇಕರಿಗೆ ಮತದಾನ ಪಟ್ಟಿಗೆ ಸೇರುವ ಅರ್ಹತೆ, ಅದಕ್ಕೆ ಬೇಕಾದ ಪೂರಕ ದಾಖಲೆಗಳಿದ್ರು ಮತದಾರನ ಪಟ್ಟಿಗೆ ಮಾತ್ರ ಸೇರಿಸಲಾಗುತ್ತಿಲ್ಲ. ಸ್ಥಳೀಯ ಚುನಾವಣೆ ಅಧಿಕಾರಿಯಾಗಿ ನೇಮಿಸಿರುವ ವೆಂಕಟೇಶ್ ಎಂಬ ಶಿಕ್ಷಕನ ಕುತಂತ್ರ ಹಾಗೂ ಗ್ರಾಮದಲ್ಲಿನ ದ್ವೇಷದ, ರಾಜಕೀಯದಿಂದ ಇಷ್ಟೆಲ್ಲಾ ಬೇಜವಬ್ದಾರಿಯಿಂದ ನಡೆದುಕೊಳ್ಳಲಾಗುತ್ತಿದೆ ಅಂತಾ ಗ್ರಾಮದ ಯುವಕ ಮನೋಹರ್ ಹೇಳುತ್ತಾರೆ.

    ಗ್ರಾಮದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಾಗೂ ಬಿಎಲ್‍ಓ ಅವರ ಧೊರಣೆ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಚುನಾವಣೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮದ ಅದೆಷ್ಟೋ ಜನರನ್ನ ಗ್ರಾಮದಲ್ಲಿ ಮತ ಪಟ್ಟಿಗೆ ಸೇರಿಸಿಲ್ಲ, ಇನ್ನೂ ಕೆಲವರನ್ನ ತೆಗೆಯಲಾಗಿದೆ. ವಿಶೇಷತೆ ಎಂದ್ರೆ ಕಳೆದ ಬಾರಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ 2 ಮತಗಳ ಅಂತರದಿಂದ ಗ್ರಾಮದ ರಘುಪತಿ ಎಂಬವರು ಪಂಚಾಯತ್ ಸದಸ್ಯರಾಗಿ ವಿಜಯ ಶಾಲಿಯಾಗಿದ್ದಾರೆ. ಇಲ್ಲಿ ಒಂದೆರೆಡು ಮತಗಳೆ ನಿರ್ಣಾಯಕವಾಗಿದೆ, ಇದೆಲ್ಲಾ ರಾಜಕೀಯ ಹಾಗೂ ದ್ವೇಷದಿಂದ ಬಿಎಲ್‍ಓ ವೆಂಕಟೇಶ್ ಮತದಾರರ ಪಟ್ಟಯಿಂದ ಕೈ ಬಿಡುವ ಹಾಗೂ ಸೇರಿಸಿಕೊಳ್ಳುವಲ್ಲಿ ಹಿಟ್ಲರ್ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

     

    https://youtu.be/YEll1DdE79k