Tag: ಮತಗಟ್ಟೆ

  • ವಿಧಾನಪರಿಷತ್ ಚುನಾವಣೆ ಮತದಾನಕ್ಕೆ ಅಂತಿಮ ಸಿದ್ಧತೆ- ಮತಗಟ್ಟೆ ಬಳಿ ಬಿಗಿ ಭದ್ರತೆ

    ವಿಧಾನಪರಿಷತ್ ಚುನಾವಣೆ ಮತದಾನಕ್ಕೆ ಅಂತಿಮ ಸಿದ್ಧತೆ- ಮತಗಟ್ಟೆ ಬಳಿ ಬಿಗಿ ಭದ್ರತೆ

    ರಾಯಚೂರು: ಸೋಮವಾರ ನಡೆಯಲಿರುವ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ರಾಯಚೂರು (Raichur) ಜಿಲ್ಲಾಡಳಿತ ಅಂತಿಮ ಸಿದ್ದತೆ ನಡೆಸಿದೆ. ಈಗಾಗಲೇ ಚುನಾವಣಾ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದ್ದು, ಮತದಾನ ಸಲಕರಣೆಗಳನ್ನ ಸಿಬ್ಬಂದಿಗೆ ವಿತರಿಸಲಾಗಿದೆ.

    ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ರಾಯಚೂರು ಜಿಲ್ಲೆಯಾದ್ಯಂತ 30 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಸಿಂಧನೂರಿನಲ್ಲಿ ಒಂದು ಹೆಚ್ಚುವರಿ ಆಕ್ಸಿಲರಿ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. 30 ಮತಗಟ್ಟೆಗಳ ಪೈಕಿ 23 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ 7 ಮತಗಟ್ಟೆಗಳಲ್ಲಿ ವೀಡಿಯೋಗ್ರಫಿ ವ್ಯವಸ್ಥೆ ಮಾಡಲಾಗಿದೆ. ಮತದಾನಕ್ಕಾಗಿ 41ಪಿಆರ್ ಒ, 41 ಎಆರ್ ಒ ಹಾಗೂ 82 ಪಿಒ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

    ಜಿಲ್ಲೆಯಾದ್ಯಂತ ಒಟ್ಟು 20 ಸಾವಿರದ 317 ಮತದಾರರು ನೋಂದಣಿ ಮಾಡಿಕೊಂಡಿದ್ದು, ನಾಳೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಭದ್ರತೆಗೆ 645 ಪೊಲೀಸ್ ಸಿಬ್ಬಂದಿ, 3 ಕೆಎಸ್‌ಆರ್‌ಪಿ ತುಕಡಿ, 1 ಸಿಎಪಿಎಫ್ ತುಕಡಿ, 10 ಡಿಎಆರ್ ತುಕಡಿ ಸೇರಿದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದನ್ನೂ ಓದಿ: ಇದು ಎಕ್ಸಿಟ್‌ ಪೋಲ್‌ ಅಲ್ಲ, ಮೋದಿ ಫ್ಯಾಂಟಸಿ ಪೋಲ್‌ – ʻಇಂಡಿಯಾʼ ಒಕ್ಕೂಟಕ್ಕೆ 295 ಸೀಟ್‌ ಪಕ್ಕಾ: ರಾಗಾ ವಿಶ್ವಾಸ

  • ರಾಹುಲ್ ದ್ರಾವಿಡ್ ಸ್ವಾಗತ ಕಮಾನು – ಯಂಗ್ ವೋಟರ್ಸ್ ಸೆಳೆಯಲು ಯುವ ಮತಗಟ್ಟೆ

    ರಾಹುಲ್ ದ್ರಾವಿಡ್ ಸ್ವಾಗತ ಕಮಾನು – ಯಂಗ್ ವೋಟರ್ಸ್ ಸೆಳೆಯಲು ಯುವ ಮತಗಟ್ಟೆ

    ಉಡುಪಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಕ್ಷಣಗಣನೆ ಶುರುವಾಗಿದೆ. ಮತದಾನಕ್ಕೆ ಉಡುಪಿ ಸಜ್ಜಾಗಿದ್ದು, ಮತಗಟ್ಟೆಗಳು, ಸಖಿ ಭೂತ್‌ಗಳು ಸಿದ್ಧಗೊಂಡಿವೆ. ಹೀಗಾಗಿ ಮತದಾರರಿಗೆ (Voters) ಜಾಗೃತಿ ಮೂಡಿಸುವ ಕೆಲಸಗಳು ಆಗ್ತಿವೆ

    ಉಡುಪಿಯಲ್ಲಿ (Udupi) ಈ ಬಾರಿ 18 ಸಾವಿರ ಯಂಗ್ ವೋಟರ್ಸ್ ಹಕ್ಕು ಚಲಾಯಿಸುತ್ತಿದ್ದಾರೆ. ಯುವ ಮತದಾರರನ್ನು ಸೆಳೆಯಲು ವೀಪ್ ಸಂಸ್ಥೆ ಜಿಲ್ಲೆಯ ಅಲ್ಲಲ್ಲಿ ಯುವ ಮತಗಟ್ಟೆಗಳನ್ನ ಸಿದ್ಧ ಮಾಡಿದೆ. ಕ್ರಿಕೆಟ್ ಪೋಸ್ಟರ್ಸ್‌ (Cricket Posters), ಕ್ರಿಕೆಟ್ ಆರ್ಟ್ ಮಾಡಿ ಯುವಕರನ್ನು ಸೆಳೆಯುವ ಸಿದ್ಧತೆ ಮಾಡಿಕೊಂಡಿದೆ.

    ರಾಜ್ಯಾದ್ಯಂತ ವಿವಿಧ ರೀತಿ ವಿಷಯಾಧಾರಿತ ಮತಗಟ್ಟೆಗಳನ್ನ ಸಿದ್ಧಪಡಿಸಿ ಗಮನ ಸೆಳೆಯಲಾಗುತ್ತಿದೆ. ಹಾಗೆಯೇ ಉಡುಪಿ ಜಿಲ್ಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಮತದಾನ ಜಾಗೃತಿ ಮೂಡಿಸಲು ಒಳ್ಳೆ ಪ್ಲಾನ್ ಮಾಡಿದ್ದು, ರಾಹುಲ್ ದ್ರಾವಿಡ್ ಸ್ವಾಗತ ಕಮಾನುಗಳನ್ನು (Rahul Dravid Welcome Arch) ನಿರ್ಮಿಸಲಾಗಿದೆ. ಇದನ್ನೂ ಓದಿ: ನಿರ್ಣಾಯಕ ಪಂದ್ಯಕ್ಕೂ ಮುನ್ನವೇ ಮುಂಬೈಗೆ ಆಘಾತ – IPLನಿಂದ ವೇಗಿ ಜೋಫ್ರಾ ಆರ್ಚರ್‌ ಔಟ್‌

    ಉಡುಪಿಯಲ್ಲಿ 18 ಸಾವಿರ ಯುವ ಮತದಾರರಿದ್ದು, ಅವರ ಗಮನ ಸೆಳೆಯಲು ಉಡುಪಿಯ ನಿಟ್ಟೂರು ಮತಗಟ್ಟೆಯಲ್ಲಿ ವಿಶೇಷ ಕಮಾನುಗಳನ್ನು ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: Asia Cup: ಪಾಕ್‌ಗೆ ಕೈತಪ್ಪಿದ ಏಷ್ಯಾಕಪ್‌ ಆತಿಥ್ಯ – ಲಂಕಾದಲ್ಲಿ ಟೂರ್ನಿ ನಡೆಯುವ ಸಾಧ್ಯತೆ

  • ನಿಮ್ಮ ಮತಗಟ್ಟೆ ಯಾವುದು? – ಮೊಬೈಲ್‌ನಲ್ಲೇ ಚೆಕ್‌ ಮಾಡಿ

    ನಿಮ್ಮ ಮತಗಟ್ಟೆ ಯಾವುದು? – ಮೊಬೈಲ್‌ನಲ್ಲೇ ಚೆಕ್‌ ಮಾಡಿ

    ಬೆಂಗಳೂರು: ಈ ಬಾರಿ ಮತ ಹಾಕಬೇಕು. ಆದರೆ ಮತಗಟ್ಟೆ (Polling Booth) ಯಾವುದು ಅಂತ ತಿಳಿಯುತ್ತಿಲ್ಲ ಎಂಬ ಚಿಂತೆಯಲ್ಲಿ ನೀವಿದ್ದೀರಾ? ಹಾಗಾದ್ರೆ ನೀವು ಚಿಂತೆ ಮಾಡುವ ಅಗತ್ಯವೇ ಇಲ್ಲ. ನೀವು ಮನಸ್ಸು ಮಾಡಿದರೆ ಕೆಲ ನಿಮಿಷದಲ್ಲೇ ನಿಮ್ಮ ಮೊಬೈಲ್‌ನಲ್ಲೇ ಮತಗಟ್ಟೆಯ ವಿವರವನ್ನು ತಿಳಿಯಬಹುದು.

    ಮತದಾರರು ಮೂರು ರೀತಿಯಲ್ಲಿ ಮತಗಟ್ಟೆಯನ್ನು ವಿವರವನ್ನು ಪಡೆದುಕೊಳ್ಳಬಹುದು. ಒಂದನೇಯದು ಮೊಬೈಲ್‌ ಅಪ್ಲಿಕೇಶನ್‌, ಎರಡನೇಯದ್ದು ವೆಬ್‌ಸೈಟ್‌, ಮೂರನೇಯದ್ದು ಕಾಲ್‌ ಸೆಂಟರ್‌ಗೆ ಕರೆ ಮಾಡುವ ಮೂಲಕ ಮತಗಟ್ಟೆಯ ವಿವರವನ್ನು ತಿಳಿದುಕೊಳ್ಳಬಹುದು.

    1. ಚುನಾವಣಾ ಅಪ್ಲಿಕೇಶನ್‌
    ಚುನಾವಣಾ ಆಯೋಗ ʼಚುನಾವಣಾʼ ಹೆಸರಿನಲ್ಲಿ ಆಂಡ್ರಾಯ್ಡ್‌ ಮತ್ತು ಐಒಎಸ್‌ ಅಪ್ಲಿಕೇಶನ್‌ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ ಓಪನ್‌ ಮಾಡಿದಾಗ Search by Epic No ಅಥವಾ Search by Name ಎಂಬ ಎರಡು ಆಯ್ಕೆ ಸಿಗುತ್ತದೆ.

    Search by Epic No ಆಯ್ಕೆ ಮಾಡಿದರೆ ವೋಟರ್‌ ಐಡಿ ನಂಬರ್‌ ಹಾಕಿದರೆ ಸಾಕಾಗುತ್ತದೆ. Search by Name ಆಯ್ಕೆ ಆರಿಸಿದರೆ ಹೆಸರು, ಜಿಲ್ಲೆ, ವಿಧಾನಸಭಾ ಕ್ಷೇತ್ರ, ಸಂಬಂಧಿಯ ಹೆಸರು, ಲಿಂಗ ಆಯ್ಕೆ ಮಾಡಿ ಹುಡುಕಬಹುದು. ಇಷ್ಟೇ ಅಲ್ಲದೇ ಜಿಪಿಎಸ್‌ ಆನ್‌ ಮಾಡಿ ಲೊಕೇಶನ್‌ ಮೂಲಕವೂ ಮತಗಟ್ಟೆಯನ್ನು ಹುಡುಕಬಹುದು.

    ಆಂಡ್ರಾಯ್ಡ್‌ ಆಪ್‌ ಡೌನ್‌ಲೋಡ್‌ ಮಾಡಿChunavana
    ಐಒಎಸ್‌ ಆಪ್‌ ಡೌನ್‌ಲೋಡ್‌ ಮಾಡಿChunavana

    2. ವೆಬ್‌ಸೈಟ್‌
    ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಸಾಧ್ಯವಾಗದವರು ವೆಬ್‌ಸೈಟ್‌ ಮೂಲಕ ಮತಗಟ್ಟೆಯನ್ನು ಹುಡುಕಬಹುದು. ಆಪ್‌ನಲ್ಲಿ ಹೇಗೆ ವೈಯಕ್ತಿಕ ಡೇಟಾ ಎಂಟ್ರಿ ಮಾಡುತ್ತಿರೋ ಅದೇ ರೀತಿಯ ವಿವರಗಳನ್ನು ಸಲ್ಲಿಸಿ ಮತಗಟ್ಟೆಯ ಮಾಹಿತಿಯನ್ನು ಪಡೆಯಬಹುದು.

     ಚುನಾವಣಾ ಆಯೋಗದ ವೆಬ್‌ಸೈಟ್‌ ಕ್ಲಿಕ್‌ ಮಾಡಿ: www.kgis.ksrsac.in

    3. ದೂರವಾಣಿ
    ಆಪ್‌ ಮತ್ತು ವೆಬ್‌ಸೈಟ್‌ ಮೂಲಕ ಮತಗಟ್ಟೆಯ ಮಾಹಿತಿ ಪಡೆಯಲು ಸಾಧ್ಯವಾಗದವರು 1950 ಅಥವಾ 180042 551950 ನಂಬರ್‌ಗೆ ಕರೆ ಮಾಡಿ ಮತಗಟ್ಟೆಯ ವಿವರ ತಿಳಿದುಕೊಳ್ಳಬಹುದು. ಇದನ್ನೂ ಓದಿ: ನನಗೆ ಗಗನಯಾತ್ರಿ ಆಗಬೇಕೆಂಬ ಆಸೆ: SSLC ಫಸ್ಟ್ ರ‍್ಯಾಂಕ್ ವಿದ್ಯಾರ್ಥಿನಿ

    ಮೊಬೈಲ್‌ ಅಪ್ಲಿಕೇಶನ್‌ ಮತ್ತು ವೆಬ್‌ಸೈಟ್‌ನಲ್ಲಿ ನಿಮ್ಮ ಕ್ಷೇತ್ರದ ಅಭ್ಯರ್ಥಿಯ ವಿವರ, ಪಾರ್ಕಿಂಗ್‌ ಸ್ಥಳ, ಗಾಲಿ ಕುರ್ಚಿ ನೋಂದಣಿ, ಸಮೀಪದ ಮತದಾನ ಕೇಂದ್ರಗಳು, ಆರೋಗ್ಯ ಸೌಲಭ್ಯಗಳನ್ನು ಸುಲಭವಾಗಿ ತಿಳಿಯಬಹುದು.

    ವೋಟರ್‌ ಐಡಿ ಇಲ್ಲದಿದ್ದರೆ ಏನು?
    ಚುನಾವಣೆ ಸಮಯದಲ್ಲಿ ಬಳಕೆಯಾಗುವ ಮತದಾರರ ಗುರುತಿನ ಚೀಟಿ ಅತ್ಯಂತ ಪ್ರಮುಖವಾದ ದಾಖಲೆ. ಒಂದು ವೇಳೆ ವೋಟರ್‌ ಐಡಿ ಇಲ್ಲದೇ ಇದ್ದರೂ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್‌, ಸರ್ಕಾರಿ ನೌಕರರ ಗುರುತಿನ ಚೀಟಿ, ಫೋಟೋ ಸಹಿತ ಇರುವ ಪಾಸ್‌ಬುಕ್, ಪಾನ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಸ್ಮಾರ್ಟ್‌ ಕಾರ್ಡ್, ಕಾರ್ಮಿಕ ಇಲಾಖೆ ಆರೋಗ್ಯ ವಿಮೆ ಕಾರ್ಡ್, ಪಿಂಚಣಿ ದಾಖಲೆ,ಆಧಾರ್ ಕಾರ್ಡ್‌ ಬಳಕೆ ಮಾಡಿಯೂ ಮತ ಹಾಕಬಹುದು.

    ಪ್ರತಿ ಚುನಾವಣೆಯಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮತದಾನ ನಡೆದರೆ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆ ಇರುತ್ತದೆ. ಈ ಕಾರಣಕ್ಕೆ ಚುನಾವಣಾ ಆಯೋಗ ಮತದಾರರಿಗೆ ಸುಲಭವಾಗಿ ಮತಗಟ್ಟೆಯ ವಿವರ ತಿಳಿದುಕೊಳ್ಳಲು ಉತ್ತಮ ವ್ಯವಸ್ಥೆ ಮಾಡಿದೆ.

  • ಮತದಾನ ಚಲಾಯಿಸಿ ಹೊರ ಬರುತ್ತಿದ್ದಂತೆಯೇ ವೃದ್ಧ ಸಾವು – ಕಾರಣವೇನು ಗೊತ್ತಾ?

    ಮತದಾನ ಚಲಾಯಿಸಿ ಹೊರ ಬರುತ್ತಿದ್ದಂತೆಯೇ ವೃದ್ಧ ಸಾವು – ಕಾರಣವೇನು ಗೊತ್ತಾ?

    ಲಕ್ನೋ: ಉತ್ತರ ಪ್ರದೇಶದ 71 ವರ್ಷದ ವೃದ್ಧರೊಬ್ಬರು ಮತಗಟ್ಟೆಯಲ್ಲಿ ಮತ ಚಲಾಯಿಸಿದ ಕೆಲವೇ ಹೊತ್ತಿನಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಮಥುರಾ ಜಿಲ್ಲೆಯ ಬಲ್ದೇವ್ ವಿಧಾನಸಭಾ ಕ್ಷೇತ್ರದ ಮಹಾವನ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ನಾತಿ ಲಾಲ್ ಬಘೇಲ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಜನರನ್ನು ತಣ್ಣಗಾಗಿಸುವ ಬದಲು ಉದ್ಯೋಗವಕಾಶ ಹೆಚ್ಚಿಸಿ: ಯೋಗಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

    ನಾಗ್ಲಾ ಪಿಪ್ರಿ ನಿವಾಸಿಯಾಗಿರುವ ನಾತಿ ಲಾಲ್ ಬಘೇಲ್ ಅವರು ತಮ್ಮ ಸೋದರಳಿಯನೊಂದಿಗೆ ಮತದಾನ ಮಾಡಲು ಗ್ರಾಮದ ಬಳಿಯ ಶಹಪುರ ಮತಗಟ್ಟೆಗೆ ತೆರಳಿದ್ದರು. ಮತದಾನ ಮಾಡಿ ಬಾಗಿಲಿನಿಂದ ಹೊರ ಬಂದ ನಂತರ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಹೀಗಾಗಿ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟೋತ್ತಿಗೆ ವ್ಯಕ್ತಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ವೈದ್ಯರು ಇದನ್ನು ಸಹಜ ಸಾವು ಎಂದು ದೃಢಪಡಿಸಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆಯನ್ನು ನಡೆಸಲು ಮುಂದಾದರು, ಆದರೆ ಮೃತ ವ್ಯಕ್ತಿಯ ಕುಟುಂಬಸ್ಥರು ಇದನ್ನು ತಿರಸ್ಕರಿಸಿದ ಕಾರಣ ಶವವನ್ನು ಅವರಿಗೆ ಹಸ್ತಾಂತರಿಸಲಾಯಿತು ಎಂದು ಮಹಾವನ್ ಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಯೋಗಿ ವೇಷ ತೊಟ್ಟು ಮತಗಟ್ಟೆಗೆ ಬಂದ ವ್ಯಕ್ತಿ – ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದ ಜನ

  • ಮತಗಟ್ಟೆಯಲ್ಲಿ ನಿಂಬೆಹಣ್ಣು ಅವಿತಿಟ್ಟು ವಾಮಾಚಾರ – ಮತದಾನಕ್ಕೆ ಬರಲ್ಲ ಎಂದ ಗ್ರಾಮಸ್ಥರು

    ಮತಗಟ್ಟೆಯಲ್ಲಿ ನಿಂಬೆಹಣ್ಣು ಅವಿತಿಟ್ಟು ವಾಮಾಚಾರ – ಮತದಾನಕ್ಕೆ ಬರಲ್ಲ ಎಂದ ಗ್ರಾಮಸ್ಥರು

    – ಮತಗಟ್ಟೆ ಸುತ್ತ ನಿಂಬೆಹಣ್ಣು ಕಂಡು ಗ್ರಾಮಸ್ಥರಿಗೆ ಭಯ
    – ಮತ ಸೆಳೆಯೋಕೆ ವಾಮಾಚಾರ

    ಚಿಕ್ಕಬಳ್ಳಾಪುರ: ಮತಗಟ್ಟೆ ಸುತ್ತ ಮಣ್ಣಲ್ಲಿ ನಿಂಬೆಹಣ್ಣನ್ನು ಇಟ್ಟಿದ್ದಕ್ಕೆ ಭಯಗೊಂಡು ನಾಳೆ ಮತದಾನ ಮಾಡದೇ ಇರಲು ಚಿಕ್ಕಬಳ್ಳಾಪುರದ ಕೆಲ ಗ್ರಾಮಸ್ಥರು ನಿರ್ಧರಿಸಿದ್ದಾರೆ.

    ನಾಳೆ ರಾಜ್ಯದ್ಯಾಂತ ಮೊದಲನೇ ಹಂತದ ಗ್ರಾಮಪಂಚಾಯತಿ ಚುನಾವಣೆಗೆ ಮತದಾನ ನಡೆಯಲಿದೆ. ಚುನಾವಣಾಧಿಕಾರಿಗಳು ಚುನಾವಣೆಗೆ ಸಕಲ ಸಿದ್ದತೆಗಳನ್ನ ಮಾಡಿಕೊಂಡಿದ್ದಾರೆ. ಆದರೆ ಜನ ನಾಳೆ ನಾವು ಮತಕೇಂದ್ರದ ಬಳಿ ಕಾಲೇ ಇಡಲ ಅಂತಿದ್ದಾರೆ. ಅಂದಹಾಗೆ ಬಶೆಟ್ಟಿಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಕಂಬಾಲಹಳಿ ಗ್ರಾಮದ ಮತಕೇಂದ್ರ 112 ರಲ್ಲಿ ಮತಕೇಂದ್ರದ ಪ್ರವೇಶ ದ್ವಾರ ಸೇರಿದಂತೆ ಶಾಲಾ ಕಟ್ಟಡದ ಸುತ್ತಲೂ ಗುಣಿ ಅಗೆದು ನಿಂಬೆಹಣ್ಣುಗಳನ್ನು ಇಡಲಾಗಿದೆ.

    ಕಂಬಾಲಹಳ್ಳಿ ಗ್ರಾಮದ ಮತ ಕೇಂದ್ರದಲ್ಲಿ ಕಂಬಾಲಹಳ್ಳಿ, ಮಾರಗಾನಪರ್ತಿ, ಸೇರಿದಂತೆ ದೊಡ್ಡಗುಮ್ಮನಹಳ್ಳಿಯ ಗ್ರಾಮಸ್ಥರು ಮತದಾನ ಮಾಡ್ತಾರೆ. ಆದರೆ ಈಗ ಈ ಮೂರು ಗ್ರಾಮದ ಗ್ರಾಮಸ್ಥರು ಜಪ್ಪಯ್ಯ ಎಂದರೂ ನಾವ್ ನಾಳೆ ಮತದಾನ ಮಾಡಲ್ಲ. ನಮಗೆ ವಾಮಾಚಾರದ ಭೀತಿ ಶುರುವಾಗಿದೆ ಎಂದು ಹೇಳುತ್ತಿದ್ದಾರೆ.

    ಇದೆಲ್ಲವೂ ಚುನಾವಣೆಗೆ ಸ್ಪರ್ಧಿಸಿರುವ ದಾಸಮ್ಮನವರ ಮಗ ರಾಮಾಂಜಿ ಹಾಗೂ ಆಕೆಯ ಗಂಡ ವೆಂಕಟಪ್ಪನ ಕೃತ್ಯ, ಅಮ್ಮನ ಪರ ಮತಗಳನ್ನ ಸೆಳೆಯೋಕೆ ಮಗ ಈ ರೀತಿ ನಿಂಬೆಹಣ್ಣುಗಳಿಗೆ ವಾಮಾಚಾರ ಮಾಡಿಸಿ ತಂದಿಟ್ಟಿದ್ದಾನೆ ಎಂದು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿದೆ.

    
    

  • ಮಗನಿಗೆ ಮತಗಟ್ಟೆ ತೋರಿಸಿ ಬರ್ತ್ ಡೇ ಗಿಫ್ಟ್ ಕೊಟ್ಟ ಪೋಷಕರು

    ಮಗನಿಗೆ ಮತಗಟ್ಟೆ ತೋರಿಸಿ ಬರ್ತ್ ಡೇ ಗಿಫ್ಟ್ ಕೊಟ್ಟ ಪೋಷಕರು

    ಬೆಂಗಳೂರು: ಮಗನ ಹುಟ್ಟುಹಬ್ಬಕ್ಕೆ ಮತಗಟ್ಟೆ ತೋರಿಸಿ ಗಿಫ್ಟ್ ನೀಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಮತಗಟ್ಟೆಯಲ್ಲಿ ಕಿರಣ್ ಇಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.

    ಮಗನ ಹುಟ್ಟುಹಬ್ಬದ ದಿನವೇ ಚುನಾವಣೆ ಇರೋದರಿಂದ ಪುತ್ರನನ್ನು ತಮ್ಮ ಜೊತೆಗೆ ಪೋಷಕರು ಕರೆದುಕೊಂಡು ಬಂದಿದ್ದರು. ಪುತ್ರನಿಗೆ ಮತದಾನ, ಮತಗಟ್ಟೆಯನ್ನು ಕಿರಣ್ ನಿಗೆ ಪರಿಚಯಿಸಲಾಯ್ತು. ಪಂಚೆ ತೊಟ್ಟು ಬಂದಿದ್ದ ಕಿರಣ್ ಮತಗಟ್ಟೆ ತುಂಬಾ ಓಡಾಡಿದ್ದಾನೆ. ಬರ್ತ್ ಡೇ ದಿನ ಅವನಿಗೆ ಮತಗಟ್ಟೆ ತೋರಿಸಿದ್ದೇವೆ. ಮಗ ಒಳ್ಳೆಯ ಪ್ರಜೆಯಾಗಬೇಕು. ಅದಕ್ಕಾಗಿ ಹುಟ್ಟಿದ ಹಬ್ಬವನ್ನು ಈ ರೀತಿ ಸ್ಪೆಷಲ್ ಆಚರಣೆ ಮಾಡುತ್ತಿದ್ದೇವೆ ಅಂತಾ ಪೋಷಕರ ಹೇಳಿದ್ದಾರೆ.

    15 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದ್ದು, ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಕ್ಷೇತ್ರದ ಮತದಾರರು ಸಹ ಹುಮ್ಮಸ್ಸಿನಿಂದ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ನಿಮ್ಮ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದ್ದರೆ, ತಪ್ಪದೇ ವೋಟ್ ಮಾಡಿ.

  • 10 ರೂ. ಕೊಟ್ಟು ತಿಂಡಿ ತಾ ಎಂದು ಹೇಳಿ ಅತ್ಯಾಚಾರವೆಸಗಿದ!

    10 ರೂ. ಕೊಟ್ಟು ತಿಂಡಿ ತಾ ಎಂದು ಹೇಳಿ ಅತ್ಯಾಚಾರವೆಸಗಿದ!

    ಶಿಮ್ಲಾ: ತಿಂಡಿ ತಗೊಂಡು ಬಾ ಎಂದು 9 ವರ್ಷದ ಬಾಲಕಿ ಕೈಯಲ್ಲಿ 10 ರೂ ಕೊಟ್ಟು, ಆಕೆ ಅಂಗಡಿಗೆ ಹೋಗುತ್ತಿದ್ದಂತೆಯೇ ಆಕೆಯನ್ನು ದೂಡಿ ಅತ್ಯಾಚಾರವೆಸಗಿದ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಕುಲು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಮತದಾನ ಕೇಂದ್ರದ ಬಳಿಯೇ ಭಾನುವಾರ ನಡೆದಿದೆ. ಘಟನೆ ಸಂಬಂಧ ಬಾಲಕಿಯ ತಾಯಿ ನೀಡಿದ ದೂರಿನಂತೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಆರೋಪಿಯನ್ನು ದೇವೇಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಭರೇಶ್ ಗ್ರಾಮದವನು ಎನ್ನಲಾಗಿದೆ. ಜಿಲ್ಲೆಯ ಅನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮತದಾನ ಕೇಂದ್ರದ ಬಳಿಯ ಶಾಲಾ ಮೈದಾನದಲ್ಲಿ ಬಾಲಕಿ ಆಟವಾಡುತ್ತಿದ್ದಳು. ಈ ವೇಳೆ ಆಕೆಯನ್ನು ಕರೆದ ಆರೋಪಿ ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ.

    ಆರೋಪಿ ಬಾಲಕಿಗೆ 10 ರೂ. ಕೊಟ್ಟು ತಿಂಡಿ ತರುವಂತೆ ಕಳುಹಿಸಿದ್ದಾನೆ. ಹೀಗಾಗಿ ಬಾಲಕಿ ಹಣ ಹಿಡಿದುಕೊಂಡು ಅಂಗಡಿಯತ್ತ ತೆರಳುತ್ತಿದ್ದಳು. ಈ ವೇಳೆ ಆರೋಪಿ ಆಕೆಯನ್ನು ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದೊಳಗೆ ಎಳೆದುಕೊಂಡು ಆಕೆಯನ್ನು ರೇಪ್ ಮಾಡುವ ಮೂಲಕ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ.

    ಸಂತ್ರಸ್ತೆಯ ತಾಯಿ ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಬಾಲಕಿ ಆರೋಪಿಯ ಮನೆಗೆ ಆಟವಾಡಲು ತೆರಳಿರಬಹುದೆಂದು ನಂಬಿದ್ದರು. ಆದರೆ ಆತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ತಾಯಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಸ್‍ಪಿ ತೇಜಿಂದ್ರ ವರ್ಮಾ ತಿಳಿಸಿದ್ದಾರೆ.

  • ಮತಗಟ್ಟೆಯ ಬಾಗಿಲಿಗೆ ಅರಿಸಿನ, ಕುಂಕುಮ ಹಚ್ಚಿ ಪೂಜೆ ಮಾಡಿದ ಬಿಜೆಪಿ ಕಾರ್ಯಕರ್ತರು!

    ಮತಗಟ್ಟೆಯ ಬಾಗಿಲಿಗೆ ಅರಿಸಿನ, ಕುಂಕುಮ ಹಚ್ಚಿ ಪೂಜೆ ಮಾಡಿದ ಬಿಜೆಪಿ ಕಾರ್ಯಕರ್ತರು!

    ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆ ಮತದಾನ ಇಂದು ನಡೆಯುತ್ತಿದ್ದು, ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿ ಎಂದು ಬಿಜೆಪಿ ಕಾರ್ಯಕರ್ತರು ಮತಗಟ್ಟೆಗೆ ಪೂಜೆ ಸಲ್ಲಿಸಿದ್ದಾರೆ.

    ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ್ ಪರವಾಗಿ ಪೂಜೆ ಸಲ್ಲಿಸಿದ್ದಾರೆ. ಅದರಗುಂಚಿ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 65ಕ್ಕೆ ಪೂಜೆ ಮಾಡಿ ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿ ಎಂದು ಆಶಿಸಿದ್ದಾರೆ. ಮತಗಟ್ಟೆಯ ಬಾಗಿಲಿಗೆ ಅರಿಸಿನ, ಕುಂಕುಮ ಹಚ್ಚಿ, ತೋರಣದ ರೀತಿಯಲ್ಲಿ ಹೂವಿನ ಮಾಲೆ ಹಾಕಿ, ಬಳಿಕ ಹೊಸಲಿನ ಬಳಿ ತೆಂಗಿನಕಾಯಿ ಒಡೆದು ಪೂಜೆ ಮಾಡಲಾಗಿದೆ. ಅಲ್ಲದೆ ಮತಗಟ್ಟೆಯಲ್ಲಿದ್ದ ಮತ ಯಂತ್ರಕ್ಕೂ ಕೂಡ ಆರತಿ ಬೆಳಗಿ ಕಾರ್ಯಕರ್ತರು ಪೂಜೆ ಮಾಡಿದ್ದಾರೆ.

    ಇಂದು ಲೋಕಸಭಾ ಚುನಾವಣೆಯ ಅಂತಿಮ ಹಂತದ ಚುನಾವಣೆ ಜೊತೆಗೆ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆಯ ಮತದಾನ ನಡೆಯುತ್ತಿದೆ. ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾದ ಕುಂದಗೋಳ, ಉಮೇಶ್ ಜಾಧವ್ ರಾಜೀನಾಮೆಯಿಂದ ಖಾಲಿಯಾದ ಚಿಂಚೋಳಿ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ, ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ್ ಸೇರಿದಂತೆ 8 ಜನ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. 214 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ ಸೂಕ್ಷ್ಮ 33 ಹಾಗೂ ಅತಿ ಸೂಕ್ಷ್ಮ 38 ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ.

    ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್, ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಸೇರಿದಂತೆ ಒಟ್ಟು 17 ಜನ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 241 ಮತಗಟ್ಟೆಗಳಿದ್ದು, ಅವುಗಳಲ್ಲಿ 60 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 181 ಸಾಮಾನ್ಯ ಮತಗಟ್ಟೆಗಳಿವೆ.

  • ಧರಿಸುವ ಬಟ್ಟೆಯಿಂದ ಮಹಿಳೆಯನ್ನು ವ್ಯಾಖ್ಯಾನಿಸಬಾರದು- ಇವಿಎಂ ಹಿಡಿದ ಅಧಿಕಾರಿ ಮಾತು

    ಧರಿಸುವ ಬಟ್ಟೆಯಿಂದ ಮಹಿಳೆಯನ್ನು ವ್ಯಾಖ್ಯಾನಿಸಬಾರದು- ಇವಿಎಂ ಹಿಡಿದ ಅಧಿಕಾರಿ ಮಾತು

    ಭೋಪಾಲ್: ದೇಶದಲ್ಲಿ ಲೋಕಸಭಾ ಚುನಾವಣೆಯ ಬ್ಯುಸಿ ಮಧ್ಯೆಯೂ ಹಳದಿ ಬಣ್ಣದ ಸಾರಿ ಹಾಗೂ ನೀಲಿ ಬಣ್ಣದ ಗೌನ್ ಧರಿಸಿ ಇವಿಎಂ ಮೆಷಿನ್ ಹಿಡಿದುಕೊಂಡು ಹೋಗುತ್ತಿದ್ದ ಮಹಿಳೆಯರಿಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    ಒಬ್ಬರು ನೀಲಿ ಬಣ್ಣದ ಗೌನ್ ಧರಿಸಿದರೆ, ಮತ್ತೊಬ್ಬರು ಹಳದಿ ಬಣ್ಣದ ಸೀರೆ ಉಟ್ಟು, ಕೂಲಿಂಗ್ ಗ್ಲಾಸ್ ಹಾಕಿಕೊಂಡು ತಮ್ಮ ಎರಡೂ ಕೈಗಳಲ್ಲೂ ಇವಿಎಂ ಹಿಡಿದುಕೊಂಡ ಇಬ್ಬರು ಮಹಿಳೆಯರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ನೀಲಿ ಬಣ್ಣದ ಗೌನ್ ಧರಿಸಿರುವ ಮಹಿಳೆಯೇ ಪ್ರತಿಕ್ರಿಯಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

    ಹೌದು. ಗೌನ್ ಧರಿಸಿದವರ ಹೆಸರು ಯೋಗೇಶ್ವರಿ ಗೋಹೈಟ್ ಆದರೆ, ಮತ್ತೊಬ್ಬರ ಹೆಸರು ರೀನಾ ದ್ವಿವೇದಿ ಎಂಬುದಾಗಿದೆ. ಯೋಗೇಶ್ವರಿಯವರು ಬ್ಯಾಂಕ್ ಅಧಿಕಾರಿಯಾಗಿದ್ದಾರೆ. ಇವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಫೇಸ್ ಬುಕ್ ನಲ್ಲಿ ಸಾವಿರಾರು ಮಂದಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲು ಆರಂಭಿಸಿದ್ದಾರಂತೆ. ಹೀಗಾಗಿ ಅವರು ತನ್ನ ಖಾತೆಯನ್ನು ಮರೆಮಾಚಲು ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ.

    ಗೋಹೈಟ್ ಅವರು ಕೆನರಾ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದು, ಭಾನುವಾರ ನಡೆದ ಚುನಾವಣಾ ಸಮಯದಲ್ಲಿ ಅವರನ್ನು ಭೋಪಾಲ್ ನ ಗೋವಿಂದಪುರ ಕ್ಷೇತ್ರದಲ್ಲಿ ಮತಗಟ್ಟೆಯ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಹಾಗೆಯೇ ಅವರು ಮತಗಟ್ಟೆಗೆ ಬರುತ್ತಿದ್ದಂತೆಯೇ ಫೋಟೋಗ್ರಾಫರ್ ಗಳು ಝೂಮ್ ಮಾಡಿ ಫೋಟೋ ತೆಗೆಯಲು ಆರಂಭಿಸಿದ್ದಾರೆ. ಅಧಿಕಾರಿ ನೀಲಿ ಬಣ್ಣದ ಗೌನ್ ಧರಿಸಿ, ಒಂದು ಕೈನಲ್ಲಿ ಟ್ರೆಂಡಿ ಬ್ಯಾಗ್ ಹಾಗೂ ಇನ್ನೊಂದು ಕೈಯಲ್ಲಿ ಬ್ಯಾಲೆಟ್ ಪೇಪರ್ ಹಿಡಿದುಕೊಂಡು ಹೋಗುತ್ತಿದ್ದಾಗ ಸುತ್ತಮುತ್ತ ಇದ್ದವರೆಲ್ಲ ಒಂದು ಬಾರಿ ಕತ್ತೆತ್ತಿ ನೋಡಿದ್ದಾರೆ. ಇದೇ ವೇಳೆ ಫೋಟೋಗ್ರಾಫರ್ ಗಳು ಮುಗಿಬಿದ್ದು ಫೋಟೋ ತೆಗೆಯಲು ಆರಂಭಿಸಿದರು. ಇದನ್ನು ಗಮನಿಸಿದ ಅಧಿಕಾರಿಗೆ ಇರುಸುಮುರುಸು ಉಂಟಾಗಿದ್ದು, ಆದರೂ ಕ್ಯಾಮೆರಾಗಳಿಗೆ ಒಂದು ಸಣ್ಣ ನಗೆ ಬೀರಿ ಅಲ್ಲಿಂದ ಮುಂದೆ ಹೋಗಿದ್ದಾರೆ.

    ಆದರೆ ಮಧ್ಯಾಹ್ನದ ಬಳಿಕ ಅಧಿಕಾರಿ ಫೋಟೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಮಹಿಳೆಯನ್ನು ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಆದರೆ ಕರ್ತವ್ಯದಲ್ಲಿದ್ದ ಕಾರಣ ಅವರು ಮಾತನಾಡಲು ನಿರಾಕರಿಸಿದ್ದಾರೆ.  ಕರ್ತವ್ಯ ಮಗಿದ ಬಳಿಕವೂ ಅಧಿಕಾರಿ ಪತ್ರಕರ್ತರ ಜೊತೆ ಮಾತನಾಡಲು ನಿರಾಕರಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಮತದಾನದ ಮರುದಿನ ಅಂದರೆ ಸೋಮವಾರ ಮಾಧ್ಯಮದ ಜೊತೆ ಮಾತನಾಡಿದ ಅಧಿಕಾರಿ, ಎಲ್ಲರೂ ನನ್ನ ಕಡೆಯೇ ಗಮನ ಹರಿಸಿದ್ದನ್ನು ಕಂಡು ನಿಜಕ್ಕೂ ನನಗೆ ಅಚ್ಚರಿಯಾಯ್ತು. ನನ್ನಷ್ಟದಂತೆ ನಾನು ಡ್ರೆಸ್ ಮಾಡಿಕೊಂಡಿದ್ದೇನೆ. ನಾನು ಯಾವುದೇ ಮಾಡೆಲ್ ಅಲ್ಲ. ಅಲ್ಲದೆ ಯಾವುದೇ ಫ್ಯಾಶನ್ ಮಾಡಿಕೊಂಡು ಮತಗಟ್ಟೆಗೆ ಬಂದಿಲ್ಲ. ಹೀಗಾಗಿ ನಾವು ಧರಿಸುವ ಬಟ್ಟೆಯಿಂದ ನಮ್ಮನ್ನು ವ್ಯಾಖ್ಯಾನ ಮಾಡಬೇಡಿ. ಇದು ನಮ್ಮ ವೃತ್ತಿಯಾಗಿದೆ. ಇಲ್ಲಿನ ನೀತಿ ನಿಯಮಗಳಷ್ಟೇ ನಮಗೆ ಮುಖ್ಯವಾಗುತ್ತದೆ ಎಂದು ಖಾರವಾಗಿಯೇ ಪ್ರತಿಕ್ರಿಯಸಿದ್ದಾರೆ.

    ಅಧಿಕಾರಿ ಸೋಮವಾರ ಕರ್ತವ್ಯದಿಂದ ತೆರಳಿದ್ದಾರೆ. ಆ ಬಳಿಕ ಮಾಧ್ಯಮದವರು ಭೋಪಾಲ್ ನಲ್ಲಿರುವ ಅವರ ಮನೆ ವಿಳಾಸವನ್ನು ಕಂಡು ಹಿಡಿದು ಅಲ್ಲಿಗೆ ದೌಡಾಯಿಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರೂ ಮಹಿಳಾ ಅಧಿಕಾರಿಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

    2011ರ ಜವರಿಯಲ್ಲಿ ಗೋಹೈಟ್ ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ಸೇರಿಕೊಂಡಿದ್ದಾರೆ. 7 ವರ್ಷದ ಹಿಂದೆ ದೆವೆನ್ ಓಂಕಾರ್ ಎಂಬವರನ್ನು ವರಿಸಿರುವ ಅಧಿಕಾರಿ, ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ನನ್ನದು ಒಂದು ಪುಟ್ಟ ಪಾತ್ರವಿರುವುದು ನನಗೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

  • ಮಗನನ್ನು ಮತಗಟ್ಟೆಗೆ ಕರೆದೊಯ್ದ ಸತ್ಯ ಬಿಚ್ಚಿಟ್ಟ ಶಾರೂಕ್ ಖಾನ್!

    ಮಗನನ್ನು ಮತಗಟ್ಟೆಗೆ ಕರೆದೊಯ್ದ ಸತ್ಯ ಬಿಚ್ಚಿಟ್ಟ ಶಾರೂಕ್ ಖಾನ್!

    ಮುಂಬೈ: ಮತದಾನದ ವೇಳೆ ಬಾಲಿವುಡ್ ಕಿಂಗ್ ಖಾನ್ ತಮ್ಮ ಮಗನನ್ನು ಮತಗಟ್ಟೆಯೊಳಗೆ ಕರೆದುಕೊಂಡು ಹೋಗಿದ್ದರು. ಇದೀಗ ಸ್ವತಃ ಶಾರೂಕ್ ಅವರೇ ಮಗನನ್ನು ಕರೆದೊಯ್ದ ಸತ್ಯ ಬಿಚ್ಚಿಟ್ಟಿದ್ದಾರೆ.

    ಹೌದು. ಸೋಮವಾರ ಲೋಕಸಭಾ ಚುನಾವಣೆ 2019ರ ನಾಲ್ಕನೇ ಹಂತದ ಮತದಾನ ನಡೆದಿತ್ತು. ಈ ವೇಳೆ ಸೆಲೆಬ್ರಿಟಿಗಳೆಲ್ಲರೂ ಸದೃಢ ಭಾರತಕ್ಕಾಗಿ ತಮ್ಮ ಹಕ್ಕು ಚಲಾಯಿಸಿದ್ದರು. ಸಾಮಾನ್ಯವಾಗಿ ಮತಗಟ್ಟೆಯೊಳಗೆ ಮಕ್ಕಳನ್ನು ಬಿಡುವುದಿಲ್ಲ. ಆದರೆ ಶಾರೂಕ್ ತಮ್ಮ ಕಿರಿಯ ಮಗ ಅಬ್ರಾಂನನ್ನು ಬಾಂದ್ರಾ ಮತಗಟ್ಟೆಯೊಳಗೆ ಕರೆದುಕೊಂಡು ಹೋಗಿದ್ದರು.

    ಪತ್ನಿ ಗೌರಿಯವರು ಕಿರಿಯ ಮಗ ಅಬ್ರಾಂನನ್ನು ಬಾಂದ್ರಾ ಮತದಾನ ಕೇಂದ್ರದೊಳಗೆ ಕರೆದುಕೊಂಡು ಹೋಗಿದ್ದಾರೆ. ಯಾಕಂದ್ರೆ ಅವನಿಗೆ `ಬೋಟಿಂಗ್’ ಹಾಗೂ `ವೋಟಿಂಗ್’ ಬಗ್ಗೆ ಭಾರೀ ಗೊಂದಲವಿತ್ತು. ಈ ಗೊಂದಲವನ್ನು ಕ್ಲೀಯರ್ ಮಾಡಲು ಆತನನ್ನು ಮತಗಟ್ಟೆಯೊಳಗೆ ಕರೆದುಕೊಂಡು ಹೋಗಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

    ಈ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ಶಾರೂಕ್, ಪುಟ್ಟ ಮಗನಿಗೆ ಬೋಟಿಂಗ್ ಮತ್ತು ವೋಟಿಂಗ್ ಮಧ್ಯೆ ಸಾಕಷ್ಟು ಕನ್‍ಫ್ಯೂಶನ್ ಇತ್ತು. ಈ ಗೊಂದಲವನ್ನು ನಿವಾರಿಸಲು ಆತನನ್ನು ಕೂಡ ಮತಗಟ್ಟೆಯೊಳಗೆ ಕರೆದುಕೊಂಡು ಹೋಗುವ ಮೂಲಕ ಮತದಾನದ ಬಗ್ಗೆ ಮತದಾನದ ಬಗ್ಗೆ ವಿವರಿಸಲಾಯಿತು ಎಂದು ಮೂವರ ಫೋಟೋ ಹಾಕಿ ಬರೆದುಕೊಂಡಿದ್ದಾರೆ.

    ಬಾಕ್ಸ್ ಆಫೀಸಿನಲ್ಲಿ ಝೀರೋ ಚಿತ್ರ ಪ್ಲಾಪ್ ಆಗಿದ್ದು, ಆ ಬಳಿಕ ಶಾರೂಕ್ ಅವರು ಯಾವುದೇ ಚಿತ್ರಕ್ಕೆ ಸಹಿ ಹಾಕಿಲ್ಲ. ಅಲ್ಲದೆ ತಮ್ಮ ಹೊಸ ಪ್ರಾಜೆಕ್ಟ್ ಬಗ್ಗೆ ಶೀಘ್ರವೇ ತಿಳಿಸಲಿದ್ದಾರೆ.

    https://www.instagram.com/p/Bw1uXvgALLB/?utm_source=ig_embed