Tag: ಮಣ್ಣಿನ ಮಡಿಕೆ

  • ರಾಯಚೂರಿನಲ್ಲಿ ದಾಖಲೆಯ ಬಿಸಿಲು – ಮಣ್ಣಿನ ಮಡಿಕೆಗೆ ಹೆಚ್ಚಾದ ಡಿಮ್ಯಾಂಡ್

    ರಾಯಚೂರಿನಲ್ಲಿ ದಾಖಲೆಯ ಬಿಸಿಲು – ಮಣ್ಣಿನ ಮಡಿಕೆಗೆ ಹೆಚ್ಚಾದ ಡಿಮ್ಯಾಂಡ್

    ರಾಯಚೂರು: ಜಿಲ್ಲೆಯಲ್ಲಿ ದಿನೇ ದಿನೇ ಬಿಸಿಲು ಹೆಚ್ಚಾಗುತ್ತಿದ್ದು, ದಾಖಲೆ ಬರೆಯುತ್ತಿದೆ. ಇದರಿಂದ ಜನರು ತತ್ತರಿಸಿ ಹೋಗಿದ್ದು, ಮಡಿಕೆ, ಹಣ್ಣುಗಳು ಸೇರಿದಂತೆ ಇನ್ನಿತರ ವ್ಯಾಪಾರದ ಬೇಡಿಕೆ ಹೆಚ್ಚಾಗುತ್ತಿದೆ.

    ಹೌದು, ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ ತಾಪಮಾನ ದಾಖಲೆಯ ಮಟ್ಟಕ್ಕೆ ತಲುಪಿದ್ದು, ಮಾರ್ಚ್ ತಿಂಗಳಲ್ಲೇ 41.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಪ್ರತಿದಿನ ಸರಾಸರಿ 38-40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವುದು ಸಾಮಾನ್ಯವಾಗಿದೆ.ಇದನ್ನೂ ಓದಿ: ರಾಯಚೂರಿನಲ್ಲಿ ಖೋಟಾ ನೋಟು ಜಾಲ ಪತ್ತೆ – ಎಎಸ್‌ಐ ಸೇರಿ ನಾಲ್ವರು ಅರೆಸ್ಟ್‌

    ಜಿಲ್ಲೆಯಲ್ಲಿ ಮಧ್ಯಾಹ್ನವಾದರೆ ಸಾಕು ಹೊರಗೆ ಓಡಾಡುತ್ತಿರುವ ಜನರು ಕಣ್ಣಿಗೆ ಬೀಳುವುದೇ ಇಲ್ಲ. ಆರಾಮಾಗಿ ಮನೆಯಲ್ಲಿ ಕುಳಿತುಕೊಳ್ಳುವುದೇ ಒಳಿತು ಎನ್ನುವಂತಾಗಿದೆ. ಬೇಸಿಗೆಯ ಬಿಸಿಲಿಗೆ ಜನರು ಕಂಗಾಲಾಗಿದ್ದು, ಇತ್ತ ಸೀಸನ್ ವ್ಯಾಪಾರಗಳು ಜೋರಾಗಿ ನಡೆಯುತ್ತಿವೆ. ಹಿಂದೆಂದೂ ಕಾಣದ ಪೈಪೋಟಿ ವ್ಯಾಪಾರಿಗಳಲ್ಲಿ ಕಾಣುತ್ತಿದೆ.

    ರಾಜಸ್ಥಾನದ ಮಣ್ಣಿನ ಗಡಿಗೆ, ಮಡಿಕೆ, ಬಾಟಲ್‌ಗಳ ಮಾರಾಟಕ್ಕೆ ನಗರದಲ್ಲಿ ತೀವ್ರ ಪೈಪೋಟಿಯಿದೆ. ಯಾವುದೇ ರಸ್ತೆಯಲ್ಲಿ ಹೋದರೂ ಕೂಡ ಮಡಿಕೆಗಳು ಕಾಣಸಿಗುತ್ತಿವೆ. 50-800 ರೂ.ವರೆಗೆ ಮಣ್ಣಿನ ಮಡಿಕೆ, ಬಾಟಲ್‌ಗಳು ಮಾರಾಟವಾಗುತ್ತಿದೆ. ಆದರೆ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿದ್ದಕ್ಕೆ ಕೆಲವರು ದೂರದಿಂದ ತಂದ ವಸ್ತುಗಳು ಮಾರಾಟವಾಗದೇ ನಷ್ಟವನ್ನೂ ಅನುಭವಿಸುತ್ತಿದ್ದಾರೆ.

    ಮಣ್ಣಿನ ಮಡಿಕೆ ವ್ಯಾಪಾರದ ಜೊತೆ ಕಲ್ಲಂಗಡಿ, ಕರಬೂಜ ಸೇರಿ ವಿವಿಧ ಹಣ್ಣುಗಳು, ತೆಂಗಿನಕಾಯಿ, ಎಳನೀರು ವ್ಯಾಪಾರದಲ್ಲೂ ಪೈಪೋಟಿ ಜೋರಾಗಿದೆ. ಮಂಡ್ಯ, ಮದ್ದೂರು, ಮೈಸೂರಿನಿಂದ ಬರುವ ಎಳೆನೀರಿನ ಬೆಲೆ ದುಬಾರಿಯಾಗಿದ್ದು, ಒಂದಕ್ಕೆ 60 ರೂ.ಯಂತೆ ಮಾರಾಟವಾಗುತ್ತಿದೆ. ಹೀಗಾಗಿ ಗ್ರಾಹಕರಿಗೆ ಬೇಸಿಗೆಯ ಬಿಸಿಲಿನ ಜೊತೆಗೆ ಬೆಲೆ ಏರಿಕೆಯ ಬಿಸಿಯೂ ತಟ್ಟುತ್ತಿದೆ.

    ಒಟ್ಟಿನಲ್ಲಿ ಬಿಸಿಲನಾಡು ರಾಯಚೂರಿನಲ್ಲಿ ಈ ಬಾರಿ ಬೇಸಿಗೆ ಆರಂಭದಿಂದಲೇ ರಣಬಿಸಿಲು ಅಬ್ಬರಿಸುತ್ತಿದೆ. ಬಿಸಿಲನ್ನು ಬಂಡವಾಳ ಮಾಡಿಕೊಂಡ ವ್ಯಾಪಾರಿಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದರೂ, ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ.ಇದನ್ನೂ ಓದಿ: ಅಪ್ಪು ಕೇವಲ ಹೆಸರಲ್ಲ, ಕನ್ನಡಿಗರಿಗೆ ಅದೊಂದು ಭಾವನೆ: ಶ್ರೀದೇವಿ ಭೈರಪ್ಪ

     

  • ಕುಂಬಾರಿಕೆಗೆ ಆಧುನಿಕ ಟಚ್- ಗ್ರಾಹಕರನ್ನು ಸೆಳೀತಿವೆ ಮಡ್ ಮೇಡ್ ಐಟಮ್ಸ್

    ಕುಂಬಾರಿಕೆಗೆ ಆಧುನಿಕ ಟಚ್- ಗ್ರಾಹಕರನ್ನು ಸೆಳೀತಿವೆ ಮಡ್ ಮೇಡ್ ಐಟಮ್ಸ್

    ಕೊಪ್ಪಳ: ಮಣ್ಣಿನ ಮಡಿಕೆಯಲ್ಲಿ ಮಾಡಿದ ಅಡುಗೆ ಊಟ ಮಾಡಿದ್ರೆ ಅದರ ರುಚಿ ಹೆಚ್ಚು ಅನ್ನೋ ಮಾತನ್ನ ನಾವು ಕೇಳಿದ್ದೇವೆ. ಆಧುನೀಕರಣ ಹೆಚ್ಚಾದಂತೆ ಮಣ್ಣಿನ ವಸ್ತುಗಳ ಬಳಕೆ ಕಡಿಮೆಯಾಗಿತ್ತು. ಆದರೆ ಜನ ನಿಧಾನಗತಿಯಲ್ಲಿ ಮತ್ತೆ ಇದೀಗ ಮಣ್ಣಿನ ವಸ್ತುಗಳತ್ತ ಮುಖ ಮಾಡುತ್ತಿದ್ದಾರೆ.

    ಹೌದು. ಓಲ್ಡ್ ಈಸ್ ಗೋಲ್ಡ್ ಪದೇ ಪದೇ ಪ್ರೂವ್ ಆಗ್ತಾನೆ ಇರುತ್ತೆ. ಈಗ ಕೊಪ್ಪಳದಲ್ಲೂ ಮತ್ತೆ ಆ ಮಾತು ಸತ್ಯವಾಗಿದೆ. ಮಣ್ಣಿನಿಂದ ತಯಾರಾಗಿರುವ ಕುಕ್ಕರ್, ಇಡ್ಲಿ ಪಾತ್ರೆ, ನೀರಿನ ಜಗ್ ಹೀಗೆ ಹಲವು ವಸ್ತುಗಳು ಕೊಪ್ಪಳ ನಗರದಲ್ಲಿರೋ ಮಣ್ಣಿನ ಗೃಹೋಪಯೋಗಿ ವಸ್ತುಗಳ ಅಂಗಡಿಯಲ್ಲಿ ಕಂಡುಬಂದವು. ಮಣ್ಣಿನಿಂದ ತಯಾರಿಸಿರುವ ಈ ವಸ್ತುಗಳು ಈಗ ಹೊಸ ಟ್ರೆಂಡ್ ಅನ್ನೇ ಸೃಷ್ಠಿಸಿವೆ.

    ಇಷ್ಟು ದಿನ ಸ್ಟೀಲ್, ಅಲ್ಯೂಮೀನಿಯಂ ವಸ್ತುಗಳನ್ನು ಬಳಸುತ್ತಿದ್ದ ಜನ ಈಗ ಮಣ್ಣಿನಿಂದ ಮಾಡಿದ ವಸ್ತುಗಳಿಗೆ ಮಾರು ಹೋಗುತ್ತಿದ್ದಾರೆ. ಈ ಶಾಪ್‍ನ ಮಾಲೀಕರಾದ ನಾಗರಾಜ್ ಮೂಲತಃ ಕುಂಬಾರಿಕೆ ಮಾಡ್ತಿದ್ದವರು, ಇಷ್ಟು ದಿನ ಮಡಿಕೆ, ಹಣತೆ ಮಾರಾಟ ಮಾಡುತ್ತಿದ್ದರು. ಆದರೆ ಕಾಲ ಬದಲಾದಂತೆ ಮಣ್ಣಿನ ವಸ್ತುಗಳಿಗೆ ಬೇಡಿಕೆ ಬಂದಂತೆ, ಗೃಹ ಉಪಯೋಗಿ ವಸ್ತುಗಳ ಅಂಗಡಿ ತೆರೆದಿದ್ದಾರೆ.

    ಹಿಂದಿನ ಕಾಲದಲ್ಲಿ ಹಿರಿಯರು ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದ್ರೆ, ಆರೋಗ್ಯ ಚೆನ್ನಾಗಿರುತ್ತೆ ಎಂದು ಹೇಳುತ್ತಿದ್ದರು. ಅದೇ ಕಾರಣಕ್ಕೆ ಗ್ರಾಹಕರು ಮಣ್ಣಿನ ಪರಿಕರ ಕೊಂಡುಕೊಳ್ಳಲು ಬರ್ತಿದ್ದಾರೆ. ಇಲ್ಲಿ ಮಣ್ಣಿನಿಂದ ಮಾಡಿದ ಕುಕ್ಕರ್, ಇಡ್ಲಿ ಪಾತ್ರೆ, ಪಡ್ಡಿಣ ಮಣೆ, ರೊಟ್ಟಿ ತವಾ, ನೀರಿನ ಜಗ್ ವಾಟರ್ ಬಾಟಲ್, ಚಹಾ ಕಪ್, ಊಟದ ತಟ್ಟೆ, ವೈನ್ ಗ್ಲಾಸ್ ಹೀಗೆ ತರಹೇವಾರಿ ಐಟಮ್‍ಗಳು ಲಭ್ಯವಿದೆ.

    ಗೃಹ ಉಪಯೋಗಿ ವಸ್ತುಗಳಲ್ಲದೆ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿ, ಗಂಟೆಗಳು ನೋಡುಗರನ್ನ ಸೆಳೆಯುತ್ತಿವೆ. ಸದ್ಯ ಭಾರತೀಯ ರೈಲ್ವೇ ಇಲಾಖೆಯೂ ಪ್ರತೀ ರೈಲ್ವೇ ನಿಲ್ದಾಣಗಳಲ್ಲಿ ಮಣ್ಣಿನಿಂದ ಮಾಡಿದ ಕಪ್‍ಗಳನ್ನು ಬಳಸುವಂತೆ ಸೂಚನೆ ನೀಡಿರುವುದೂ ಹೊಸ ಟ್ರೆಂಡ್‍ಗೆ ನಾಂದಿ ಹಾಡಿದಂತಾಗಿದೆ.